ಸಹ-ಹೋಸ್ಟ್ ನೆಟ್‌ವರ್ಕ್‌ಗೆ ಸೇರಿ
ಅನೇಕ ಹೋಸ್ಟ್‌ಗಳು ಅವರಿಗೆ ಹೋಸ್ಟಿಂಗ್‌ನಲ್ಲಿ ಸಹಾಯ ಮಾಡಲು ಉತ್ತಮ ಗುಣಮಟ್ಟದ*, ಸ್ಥಳೀಯ ಪಾಲುದಾರರನ್ನು ಬಯಸುತ್ತಾರೆ. ಲಿಸ್ಟಿಂಗ್ ರಚನೆಯಿಂದ ಗೆಸ್ಟ್ ಬೆಂಬಲದವರೆಗೆ, ನೀವು ಯಾವ ಸೇವೆಗಳನ್ನು ನೀಡುತ್ತೀರಿ ಎಂಬುದನ್ನು ಆಯ್ಕೆ ಮಾಡಬಹುದು ಮತ್ತು ಇತರರಿಗೆ ಹೋಸ್ಟ್ ಮಾಡಲು ಸಹಾಯ ಮಾಡುವ ಮೂಲಕ ಹಣ ಸಂಪಾದಿಸಬಹುದು.
ಈಗಲೇ ಸೇರಿಕೊಳ್ಳಿ

ಸಹ‑ಹೋಸ್ಟ್ ನೆಟ್‌ವರ್ಕ್ ಅನ್ನು ಪರಿಚಯಿಸಲಾಗುತ್ತಿದೆ
ಈಗ ನೀವು ಸಹ-ಹೋಸ್ಟ್ ನೆಟ್‌ವರ್ಕ್ ಮೂಲಕ ನಿಮ್ಮ ಪ್ರದೇಶದಲ್ಲಿ ಲಿಸ್ಟಿಂಗ್‌ಗಳನ್ನು ಹೊಂದಿರುವ ಹೋಸ್ಟ್‌ಗಳಿಗೆ ವೈಯಕ್ತೀಕರಿಸಿದ ಬೆಂಬಲವನ್ನು ನೀಡಬಹುದು.
- ನಿಮ್ಮ ಸೇವೆಗಳು ಮತ್ತು ಬೆಲೆಗಳನ್ನು ಪ್ರಚಾರ ಮಾಡಲು ನೆಟ್‌ವರ್ಕ್‌ಗೆ ಸೇರುವುದು ಒಂದು ಉತ್ತಮ ಮಾರ್ಗವಾಗಿದೆ
- ಸಂಭಾವ್ಯ ಪಾಲುದಾರರೊಂದಿಗೆ ಸಂಪರ್ಕ ಸಾಧಿಸಿ
- ನಿಮ್ಮದೇ ಆದ ಗತಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡಿ

ಸಹ-ಹೋಸ್ಟ್ ನೆಟ್‌ವರ್ಕ್ ಹೇಗೆ ಕಾರ್ಯನಿರ್ವಹಿಸುತ್ತದೆ

ನೀವು ಒದಗಿಸಬಹುದಾದ ಸೇವೆಗಳು
ನಿಮ್ಮ ಸಹ-ಹೋಸ್ಟ್ ಪ್ರೊಫೈಲ್‌ನಲ್ಲಿ ನೀವು ನಿಮ್ಮ ಕೌಶಲಗಳನ್ನು ಪ್ರಚಾರ ಮಾಡುತ್ತೀರಿ ಮತ್ತು ನೀವು ಒದಗಿಸುವ ಸೇವೆಗಳ ಬಗ್ಗೆ ವಿವರಗಳನ್ನು ಸೇರಿಸುತ್ತೀರಿ. ಸಹ-ಹೋಸ್ಟಿಂಗ್ ಸೇವೆಗಳ ಪಟ್ಟಿಯಿಂದ ಆಯ್ಕೆಮಾಡಿ:
- ಲಿಸ್ಟಿಂಗ್ ರಚನೆ
- ಬೆಲೆಗಳು ಮತ್ತು ಲಭ್ಯತೆಯನ್ನು ಹೊಂದಿಸುವುದು
- ಬುಕಿಂಗ್ ವಿನಂತಿ ನಿರ್ವಹಣೆ
- ಗೆಸ್ಟ್ ಸಂದೇಶ ಕಳುಹಿಸುವಿಕೆ
- ಗೆಸ್ಟ್‌ಗಳಿಗೆ ವಾಸ್ತವ್ಯದಲ್ಲಿ ಬೆಂಬಲ ಒದಗಿಸುವುದು
- ಶುಚಿಗೊಳಿಸುವಿಕೆ ಮತ್ತು ನಿರ್ವಹಣೆ
- ಲಿಸ್ಟಿಂಗ್ ಛಾಯಾಗ್ರಹಣ
- ಒಳಾಂಗಣ ವಿನ್ಯಾಸ ಮತ್ತು ಸ್ಟೈಲಿಂಗ್
- ಪರವಾನಗಿ ಮತ್ತು ಹೋಸ್ಟಿಂಗ್ ಅನುಮತಿಗಳು
ಸಹ-ಹೋಸ್ಟ್ ನೆಟ್‌ವರ್ಕ್‌ಗೆ ಸೇರುವುದಕ್ಕೆ ಅರ್ಹರಾಗಲು ನೀವು ನಿರ್ದಿಷ್ಟ ಆವಶ್ಯಕತೆಗಳನ್ನು ಪೂರೈಸಬೇಕು.
ಇನ್ನಷ್ಟು ತಿಳಿಯಿರಿಮೈಕೆಲ್, ಪ್ಯಾರಿಸ್‌ನಲ್ಲಿ ಸಹ‑ಹೋಸ್ಟ್
"ನಾನು ಸಹ-ಹೋಸ್ಟ್ ಆದಂದಿನಿಂದ, ನನ್ನ ಕೆಲಸದಲ್ಲಿ ನಾನು ಏಕಾಂಗಿ ಎಂದು ನನಗೆ ಅನಿಸುವುದಿಲ್ಲ. ನನ್ನ ವ್ಯವಹಾರವನ್ನು ಬೆಳೆಸಲು ಮತ್ತು ನನ್ನ ಆರಾಮ ವಲಯದಿಂದ ಹೊರಬರಲು ನನಗೆ ಅಗತ್ಯವಿರುವ ಬೆಂಬಲ ಮತ್ತು ಪ್ರೋತ್ಸಾಹವಿದೆ ಎಂದು ನಾನು ಭಾವಿಸುತ್ತೇನೆ."
ಯಶಸ್ವಿಯಾಗುವುದಕ್ಕೆ ನಿಮಗೆ ಸಹಾಯ ಮಾಡಲು ಬೆಂಬಲ
ವಿಶೇಷ ಟೂಲ್‌ಗಳು
ನಿಮ್ಮ ವ್ಯವಹಾರವನ್ನು ನಿಮಗೆ ಬೇಕಿದ್ದ ಹಾಗೆ ನಿರ್ವಹಿಸಿ. ಹೋಸ್ಟ್‌ಗಳೊಂದಿಗೆ ಯಶಸ್ವಿ ಸಂಬಂಧಗಳನ್ನು ಸ್ಥಾಪಿಸಲು ಮತ್ತು ನಿಮ್ಮ ಸಹ-ಹೋಸ್ಟಿಂಗ್ ವ್ಯವಹಾರವನ್ನು ಬೆಳೆಸುವಾಗ ನಿಮ್ಮನ್ನು ಬೆಂಬಲಿಸಲು ಸಾಧನಗಳನ್ನು ನೆಟ್‌ವರ್ಕ್ ನಿಮಗೆ ನೀಡುತ್ತದೆ.
ಸಂಪನ್ಮೂಲಗಳು ಮತ್ತು ಸಮುದಾಯ
ನೀವು ಬಳಸಬಹುದಾದ ಸಾಧನಗಳ ಕುರಿತು ಶೈಕ್ಷಣಿಕ ಸಂಪನ್ಮೂಲಗಳ ಸರಣಿಯನ್ನು ಅನ್ವೇಷಿಸಿ ಮತ್ತು ನಿಮಗೆ ಪ್ರಾರಂಭಿಸಲು ಸಹಾಯ ಮಾಡುವ ಸಕ್ರಿಯ ಸಹ-ಹೋಸ್ಟ್‌ಗಳ ಸಮುದಾಯದೊಂದಿಗೆ ಸಂಪರ್ಕ ಸಾಧಿಸಿ.

Michael
ಫ್ರಾನ್ಸ್ (ಪ್ಯಾರಿಸ್)

Guillermo
ಸ್ಪೇನ್ (ಗ್ರಾನಡಾ)

Julie
ಫ್ರಾನ್ಸ್ (ಲೆ ಟೌಕ್ವೆಟ್)

Anne-Lie
ಸ್ಪೇನ್ (ಟೆನೆರೈಫ್)

Clarysse & Arthur
ಫ್ರಾನ್ಸ್ (ಪ್ಯಾರಿಸ್)

Ousmane
ಫ್ರಾನ್ಸ್ (ನಾಂಟೆರೆ)

Gabriel
ಸ್ಪೇನ್ (ಮಾರ್ಬೆಲ್ಲಾ)

ನೀವು ಸಹ-ಹೋಸ್ಟ್ ಅನ್ನು ಹುಡುಕುತ್ತಿದ್ದೀರಾ?
ನಿಮ್ಮ ಮನೆ ಮತ್ತು ಗೆಸ್ಟ್‌ಗಳನ್ನು ನೋಡಿಕೊಳ್ಳಬಹುದಾದ ಉತ್ತಮ ಗುಣಮಟ್ಟದ, ಸ್ಥಳೀಯ ಹೋಸ್ಟ್ ಅನ್ನು ಸಹ-ಹೋಸ್ಟ್ ನೆಟ್‌ವರ್ಕ್‌ನಲ್ಲಿಹುಡುಕಿ. ಸಹ-ಹೋಸ್ಟ್ ನೆಟ್‌ವರ್ಕ್‌ನಲ್ಲಿರುವ ಹೋಸ್ಟ್‌ಗಳು ಸಾಮಾನ್ಯವಾಗಿ ಉನ್ನತ ರೇಟಿಂಗ್‌ಗಳು, ಕಡಿಮೆ ರದ್ದತಿ ಪ್ರಮಾಣ ಮತ್ತು ಉತ್ತಮವಾದ Airbnb ಹೋಸ್ಟಿಂಗ್ ಅನುಭವವನ್ನು ಹೊಂದಿರುತ್ತಾರೆ. ರೇಟಿಂಗ್‌ಗಳು ಅವರು ಹೋಸ್ಟ್ ಮಾಡುವ ಅಥವಾ ಸಹ‑ಹೋಸ್ಟ್ ಮಾಡುವ ಲಿಸ್ಟಿಂಗ್‌ಗಳ ಗೆಸ್ಟ್ ವಿಮರ್ಶೆಗಳನ್ನು ಆಧರಿಸಿವೆ ಮತ್ತು ಅವು ಸಹ‑ಹೋಸ್ಟ್‌ನ ಅನನ್ಯ ಸೇವೆಗಳನ್ನು ಪ್ರತಿನಿಧಿಸದಿರಬಹುದು.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಸಹ-ಹೋಸ್ಟ್ ಆಗಲು ಯಾವ ಅವಶ್ಯಕತೆಗಳಿವೆ?
ಸಹ‑ಹೋಸ್ಟ್ ನೆಟ್‌ವರ್ಕ್ ಸೇರಲು ಇರುವ ಅವಶ್ಯಕತೆಗಳು ಇಂತಿವೆ:
- ನೀವು ಹೋಸ್ಟ್ ಆಗಿ ಸಕ್ರಿಯ ಲಿಸ್ಟಿಂಗ್ ಹೊಂದಿದ್ದೀರಿ ಅಥವಾ ಸಹ-ಹೋಸ್ಟ್ ಆಗಿ ಕ್ಯಾಲೆಂಡರ್ ಮತ್ತು ಮೆಸೇಜಿಂಗ್ಗೆ ಪೂರ್ಣ ಪ್ರವೇಶವನ್ನು ಹೊಂದಿದ್ದೀರಿ.
- ನೀವು ಕಳೆದ 12 ತಿಂಗಳುಗಳಲ್ಲಿ Airbnb ಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚಿನ ವಾಸ್ತವ್ಯಗಳನ್ನು—ಅಥವಾ ಒಟ್ಟು ಕನಿಷ್ಠ 100 ರಾತ್ರಿಗಳಿಗೆ ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಾಸ್ತವ್ಯಗಳನ್ನು ಹೋಸ್ಟ್ ಅಥವಾ ಸಹ‑ಹೋಸ್ಟ್ ಮಾಡಿದ್ದೀರಿ .
- ನೀವು ಹೋಸ್ಟ್ ಆಗಿ ಅಥವಾ ಕ್ಯಾಲೆಂಡರ್ ಮತ್ತು ಮೆಸೇಜಿಂಗ್ಗೆ ಪೂರ್ಣ ಪ್ರವೇಶ ಹೊಂದಿದ ಸಹ‑ಹೋಸ್ಟ್ ಆಗಿ ಕಳೆದ 12 ತಿಂಗಳುಗಳಲ್ಲಿ ಗೆಸ್ಟ್ಗಳಿಂದ ಸರಾಸರಿ 4.8 ಸ್ಟಾರ್ಗಳು ಅಥವಾ ಹೆಚ್ಚಿನ ರೇಟಿಂಗ್ ಅನ್ನು ಕಾಯ್ದುಕೊಂಡಿದ್ದೀರಿ.
- ನಿಮ್ಮ ನಿಯಂತ್ರಣವನ್ನು ಮೀರಿದ ಕೆಲವು ಮಾನ್ಯವಾದ ಕಾರಣಗಳಿಗಾಗಿ ನೀಡಿದ ವಿನಾಯಿತಿಗಳನ್ನು ಹೊರತುಪಡಿಸಿ, ನೀವು 3% ಗಿಂತ ಕಡಿಮೆ ರದ್ದತಿ ದರವನ್ನು ಹೊಂದಿದ್ದೀರಿ.
- ನಿಮ್ಮ Airbnb ಖಾತೆಯು ಉತ್ತಮ ಸ್ಥಿತಿಯಲ್ಲಿದೆ. ನಿಮ್ಮ ಗುರುತನ್ನು ಪರಿಶೀಲಿಸಿ ದೃಢೀಕರಿಸಿರಬೇಕು ಮತ್ತು ನೆಟ್‌ವರ್ಕ್‌ನಲ್ಲಿ ಪ್ರದರ್ಶಿಸಲು ನಿಮ್ಮ ಪ್ರೊಫೈಲ್ ಫೋಟೋ ನಮ್ಮ ಫೋಟೋ ಅವಶ್ಯಕತೆಗಳನ್ನು ಪೂರೈಸಬೇಕು.
ಸಹ‑ಹೋಸ್ಟ್ ನೆಟ್‌ವರ್ಕ್ ಎಲ್ಲಿ ಲಭ್ಯವಿರುತ್ತದೆ?
ಸಹ‑ಹೋಸ್ಟ್ ನೆಟ್‌ವರ್ಕ್ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಮೆಕ್ಸಿಕೊ, ದಕ್ಷಿಣ ಕೊರಿಯಾ, ಸ್ಪೇನ್, UK ಮತ್ತು US ಸೇರಿದಂತೆ 12 ದೇಶಗಳಲ್ಲಿ ಲಭ್ಯವಿದೆ. ನೆಟ್‌ವರ್ಕ್ ವಿಸ್ತರಿಸುವಾಗ ಸೇರ್ಪಡೆಯಾಗುವ ಇನ್ನಷ್ಟು ದೇಶಗಳ ಬಗ್ಗೆ ಮಾಹಿತಿ ಪಡೆಯಲು ಸಂಪರ್ಕದಲ್ಲಿರಿ.
ಯಾವುದೇ ಕಾನೂನು ಅವಶ್ಯಕತೆಗಳು ಇವೆಯೇ?
ನೀವು ಮತ್ತು ನಿಮ್ಮೊಂದಿಗೆ ಅಥವಾ ನಿಮ್ಮ ಪರವಾಗಿ ಕೆಲಸ ಮಾಡುವ ಯಾವುದೇ ಉದ್ಯೋಗಿಗಳು ಅಥವಾ ಏಜೆಂಟರನ್ನು ನೀವು ಪ್ರತಿನಿಧಿಸುತ್ತೀರಿ ಮತ್ತು—ನಿಮ್ಮ ಸೇವೆಗಳಿಗೆ ಅಗತ್ಯವಿರುವ ಎಲ್ಲ ಅನುಮತಿಗಳು, ಲೈಸೆನ್ಸ್ಗಳು, ವಿಮೆ ಮತ್ತು/ಅಥವಾ ಅರ್ಹತೆಗಳನ್ನು ನೀವು ಹೊಂದಿರುವಿರಿ ಎಂದು, ಸಹ-ಹೋಸ್ಟ್ ಆಗಿ ನೀವು ಖಾತರಿಪಡಿಸುತ್ತೀರಿ. ಉದಾಹರಣೆಗೆ, ಪ್ರಾಪರ್ಟಿ ನಿರ್ವಹಣಾ ಸೇವೆಗಳನ್ನು ಒದಗಿಸಲು ನೀವು ಲೈಸೆನ್ಸ್ ಪಡೆದ ರಿಯಲ್ ಎಸ್ಟೇಟ್ ಬ್ರೋಕರ್ ಆಗಿರಬೇಕು ಮತ್ತು ಲೈಸೆನ್ಸ್ ಇಲ್ಲದೆ ಕಾರ್ಯನಿರ್ವಹಿಸುವುದು ನಿಮಗೆ ಮತ್ತು/ಅಥವಾ ನಿಮ್ಮೊಂದಿಗೆ ಕೆಲಸ ಮಾಡುವ ಹೋಸ್ಟ್‌ಗಳಿಗೆ ಸೂಕ್ತ ದಂಡ ವಿಧಿಸುವಿಕೆಗೆ ಕಾರಣವಾಗಬಹುದು. ಸ್ಥಳೀಯ ಕಾನೂನುಗಳು ಹೇಗೆ ಅನ್ವಯವಾಗುತ್ತವೆ ಎಂಬ ಕುರಿತು ನೀವು ಪ್ರಶ್ನೆಗಳನ್ನು ಹೊಂದಿದ್ದರೆ, ಫಾರ್ಮ್ ಭರ್ತಿ ಮಾಡುವ ಮೊದಲು ನೀವು ಯಾವಾಗಲೂ ಕಾನೂನು ಸಲಹೆಯನ್ನು ಪಡೆಯಬೇಕು.
ನಾನು ಎಷ್ಟು ಗಳಿಕೆಯನ್ನು ನಿರೀಕ್ಷಿಸಬಹುದು?
ನೀವು ಪ್ರಾರಂಭಿಸುವ ಮೊದಲು, ನಿಮ್ಮ ಸೇವೆಗಳ ಬೆಲೆಯ ಕುರಿತು ನೀವು ಹಾಗೂ ನಿಮ್ಮ ಹೋಸ್ಟ್ ಸಹಮತ ಹೊಂದಬೇಕು. ಅನೇಕ ಸಹ‑ಹೋಸ್ಟ್‌ಗಳು ಪ್ರತಿ ಬುಕಿಂಗ್ಗೆ ಶೇಕಡಾವಾರು ಅಥವಾ ನಿಗದಿತ ಮೊತ್ತವನ್ನು ಪಡೆಯುವುದನ್ನು ಆಯ್ಕೆ ಮಾಡುತ್ತಾರೆ.**
ನಾನು ಹೊಸ ಹೋಸ್ಟ್‌ಗಳೊಂದಿಗೆ ಹೇಗೆ ಸಂಪರ್ಕ ಸಾಧಿಸಬಹುದು?
ನಿಮ್ಮ Airbnb ಇನ್ಬಾಕ್ಸ್ನಲ್ಲಿ ನೀವು ಹೋಸ್ಟ್ಗಳಿಂದ ಸಂದೇಶಗಳನ್ನು ಸ್ವೀಕರಿಸುತ್ತೀರಿ. ನಿಮ್ಮ ಸಹಯೋಗದ ನಿಯಮಗಳನ್ನು ಚರ್ಚಿಸಲು, ಪ್ರತಿ ಬುಕಿಂಗ್ಗೆ ಬೆಲೆ ಕುರಿತು ಸಹಮತಕ್ಕೆ ಬರಲು ಮತ್ತು ನಿಮ್ಮ ಒಪ್ಪಂದವನ್ನು ಒಟ್ಟಿಗೆ ಅಂತಿಮಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ನೀವು ಯಾವ ಲಿಸ್ಟಿಂಗ್‌ಗಳನ್ನು ನಿರ್ವಹಿಸಲು ಬಯಸುತ್ತೀರಿ ಮತ್ತು ಯಾವ ಹೋಸ್ಟ್‌ಗಳೊಂದಿಗೆ ಕೆಲಸ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಲು ನಿಮಗೆ ಸ್ವಾತಂತ್ರ್ಯವಿದೆ.
ಹೇಗೆ ಪ್ರಾರಂಭಿಸುವುದು?
ನೀವು ಮೊದಲು ಫಾರ್ಮ್ ಅನ್ನು ಭರ್ತಿ ಮಾಡುತ್ತೀರಿ. ನೀವು ಅರ್ಹರಾಗಿದ್ದರೆ, ನಿಮ್ಮ ನೋಂದಣಿಯನ್ನು ಪೂರ್ಣಗೊಳಿಸಲು, ನಿಮ್ಮ ಪ್ರೊಫೈಲ್ ಅನ್ನು ಭರ್ತಿ ಮಾಡಲು ಮತ್ತು ನಿಮ್ಮ ಪ್ರಸ್ತಾವಿತ ಬೆಲೆಯನ್ನು ಹೊಂದಿಸಲು ನೀವು ಆಹ್ವಾನವನ್ನು ಸ್ವೀಕರಿಸುತ್ತೀರಿ. ಆ ಬಳಿಕ, ನಿಮ್ಮ ಪ್ರದೇಶದಲ್ಲಿ ಬೆಂಬಲವನ್ನು ಬಯಸುವ ಹೋಸ್ಟ್‌ಗಳು ನಿಮ್ಮನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಸಹ-ಹೋಸ್ಟ್ ನೆಟ್‌ವರ್ಕ್ ಪ್ರಸ್ತುತ ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಮೆಕ್ಸಿಕೊ, ದಕ್ಷಿಣ ಕೊರಿಯಾ, ಸ್ಪೇನ್, ಮತ್ತು ಯುನೈಟೆಡ್ ಕಿಂಗ್‌ಡಮ್ (Airbnb Global Services ನಿಂದ ನಡೆಸಲ್ಪಡುತ್ತಿದೆ); ಕೆನಡಾ, ಯುನೈಟೆಡ್‌ಸ್ಟೇಟ್ಸ್ (Airbnb Living LLC ನಿಂದ ನಡೆಸಲ್ಪಡುತ್ತಿದೆ); ಮತ್ತು ಬ್ರೆಜಿಲ್ (Airbnb Plataforma Digital Ltda ನಿಂದ ನಡೆಸಲ್ಪಡುತ್ತಿದೆ).ಇನ್ನಷ್ಟು ತಿಳಿಯಿರಿ.
*ಸಹ-ಹೋಸ್ಟ್ ನೆಟ್‌ವರ್ಕ್‌ನಲ್ಲಿರುವ ಹೋಸ್ಟ್‌ಗಳು ಸಾಮಾನ್ಯವಾಗಿ ಉನ್ನತ ರೇಟಿಂಗ್‌ಗಳು, ಕಡಿಮೆ ರದ್ದತಿ ಪ್ರಮಾಣಗಳು ಮತ್ತು ಉತ್ತಮ Airbnb ಹೋಸ್ಟಿಂಗ್ ಅನುಭವವನ್ನು ಹೊಂದಿರುತ್ತಾರೆ. ರೇಟಿಂಗ್‌ಗಳು ಅವರು ಹೋಸ್ಟ್ ಅಥವಾ ಸಹ-ಹೋಸ್ಟ್ ಮಾಡುವ ಲಿಸ್ಟಿಂಗ್‌ಗಳ ಗೆಸ್ಟ್ ವಿಮರ್ಶೆಗಳನ್ನು ಆಧರಿಸಿರುತ್ತವೆ ಮತ್ತು ಸಹ-ಹೋಸ್ಟ್‌ನ ಅನನ್ಯ ಸೇವೆಗಳನ್ನು ಪ್ರತಿನಿಧಿಸದಿರಬಹುದು. ** ಅನೇಕ ದೇಶಗಳಲ್ಲಿ, ಪ್ರತಿ ಬುಕಿಂಗ್‌ನ ಹೊರಪಾವತಿಯ ಒಂದು ಭಾಗವನ್ನು ನೀವು Airbnb ಮೂಲಕ ನಿಮ್ಮ ಸಹ-ಹೋಸ್ಟ್‌ನೊಂದಿಗೆ ಹಂಚಿಕೊಳ್ಳಬಹುದು. ನಿಮ್ಮ ಮತ್ತು ನಿಮ್ಮ ಸಹ-ಹೋಸ್ಟ್‌ರವರ ಸ್ಥಳ ಅಥವಾ ನಿಮ್ಮ ಲಿಸ್ಟಿಂಗ್ ಎಲ್ಲಿದೆ ಎಂಬುದನ್ನು ಅವಲಂಬಿಸಿ ಕೆಲವು ಮಿತಿಗಳಿವೆ.