ನಿಮ್ಮ ಮುಂದಿನ ಗೆಟ್ ಅವೇ ಇಂದ ನೀವು ಕೇವಲ 3 ಹೆಜ್ಜೆ ದೂರದಲ್ಲಿದ್ದೀರಿ
ನಿಮ್ಮ ಮುಂದಿನ ಗೆಟ್ ಅವೇ ಇಂದ
ನೀವು ಕೇವಲ 3 ಹೆಜ್ಜೆ ದೂರದಲ್ಲಿದ್ದೀರಿ1. ಬ್ರೌಸ್ ಮಾಡಿ
ವಾಸ್ತವ್ಯಗಳು ಅಥವಾ ಅನುಭವಗಳನ್ನು ಅನ್ವೇಷಿಸುವ ಮೂಲಕ ಪ್ರಾರಂಭಿಸಿ. ನಿಮ್ಮ ಆಯ್ಕೆಗಳನ್ನು ಕಿರಿದಾಗಿಸಲು ಸಂಪೂರ್ಣ ಮನೆಗಳು, ಸ್ವಯಂ ಚೆಕ್-ಇನ್ ಅಥವಾ ಸಾಕುಪ್ರಾಣಿಗಳ ಅನುಮತಿಯಂಥಹ ಫಿಲ್ಟರ್‌ಗಳನ್ನು ಅನ್ವಯಿಸಿ. ನೀವು ವಿಶ್‌ಲಿಸ್ಟ್‌ಗೆ ಮೆಚ್ಚಿನವುಗಳನ್ನು ಸಹ ಉಳಿಸಬಹುದು.
2. ಬುಕ್ ಮಾಡಿ
ನೀವು ಹುಡುಕುತ್ತಿರುವುದನ್ನು ನೀವು ಕಂಡುಕೊಂಡ ನಂತರ, ನಿಮ್ಮ ಹೋಸ್ಟ್ ಬಗ್ಗೆ ತಿಳಿದುಕೊಳ್ಳಿ, ಹಿಂದಿನ ಗೆಸ್ಟ್ ವಿಮರ್ಶೆಗಳನ್ನು ಓದಿ ಮತ್ತು ರದ್ದತಿ ಆಯ್ಕೆಗಳ ವಿವರಗಳನ್ನು ಪಡೆಯಿರಿ—ನಂತರ ಕೆಲವೇ ಕ್ಲಿಕ್‍ಗಳಲ್ಲಿ ಬುಕ್ ಮಾಡಿ.
3. ಹೋಗಿ
ನೀವು ಸಿದ್ಧರಾಗಿದ್ದೀರಿ! ಸ್ಥಳೀಯ ಸಲಹೆಗಳು, ಪ್ರಶ್ನೆಗಳು ಅಥವಾ ಸಲಹೆಗಾಗಿ ಆ್ಯಪ್ ಮೂಲಕ ನಿಮ್ಮ ಹೋಸ್ಟ್ ಜೊತೆಗೆ ಸಂಪರ್ಕ ಸಾಧಿಸಿ. ಹೆಚ್ಚುವರಿ ಬೆಂಬಲಕ್ಕಾಗಿ ನೀವು ಯಾವುದೇ ಸಮಯದಲ್ಲಿ Airbnb ಅನ್ನು ಸಂಪರ್ಕಿಸಬಹುದು.
Wherever you go, we’re here to help
ನೀವು ಎಲ್ಲಿಗೆ ಹೋದರೂ,
ನಾವು ನಿಮಗೆ ಸಹಾಯ ಮಾಡುತ್ತೇವೆ
ಆರೋಗ್ಯ ಮತ್ತು ಸುರಕ್ಷತೆಯು ಆದ್ಯತೆಯಾಗಿದೆ
ಹೋಸ್ಟ್‌ಗಳು ವರ್ಧಿತ ಕೋವಿಡ್-19 ಕ್ಲೀನಿಂಗ್ ಪ್ರೋಟೋಕಾಲ್‌ಗಳಿಗೆ ಬದ್ಧರಾಗಿದ್ದಾರೆ ಮತ್ತು ಸ್ವಚ್ಛತೆಗಾಗಿ ಲಿಸ್ಟಿಂಗ್‍ಗಳನ್ನು ರೇಟ್ ಮಾಡಲಾಗುತ್ತದೆ.

ಅಧಿಕ ರದ್ದತಿ ಆಯ್ಕೆಗಳು
ಹೋಸ್ಟ್‌ಗಳು ಬುಕಿಂಗ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾದ ಹೊಂದಿಕೊಳ್ಳುವ ರದ್ದತಿ ಆಯ್ಕೆಗಳ ಶ್ರೇಣಿಯನ್ನು ನೀಡಬಹುದು.

ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಬೆಂಬಲ
24/7 ಜಾಗತಿಕ ಗ್ರಾಹಕ ಬೆಂಬಲದೊಂದಿಗೆ, ನಿಮಗೆ ಸಹಾಯದ ಅಗತ್ಯವಿದ್ದಾಗಲೆಲ್ಲಾ ನಾವು ನಿಮ್ಮೊಂದಿಗೆ ಇರುತ್ತೇವೆ.
ಇನ್ನೂ ಪ್ರಶ್ನೆಗಳನ್ನು ಹೊಂದಿದ್ದೀರಾ?
ನನ್ನ ಹೋಸ್ಟ್ ಅನ್ನು ನಾನು ಭೇಟಿ ಮಾಡಬೇಕೇ?
ಸ್ವತಃ ಚೆಕ್-ಇನ್ ಅಥವಾ ಸಂಪೂರ್ಣ ಮನೆಯನ್ನು ಬುಕಿಂಗ್ ಮಾಡುವಂತಹ ಆಯ್ಕೆಗಳು ನಿಮ್ಮ ಹೋಸ್ಟ್ನೊಂದಿಗೆ ಮುಖ್ಯವಾಗಿ ಅಪ್ಲಿಕೇಶನ್ ಒಳಗಿನ ಸಂದೇಶಗಳ ಮೂಲಕ ಸಂವಹನ ನಡೆಸಲು ಅನುಮತಿಸುತ್ತದೆ - ಏನಾದರೂ ಸಮಸ್ಯೆ ಉದ್ಭವಿಸಿದರೆ ಯಾವಾಗ ಬೇಕಾದರೂ ಅವರಿಗೆ ಸಂದೇಶ ಕಳುಹಿಸಬಹುದು.
COVID-19 ನ ಬಗ್ಗೆ Airbnb ಏನು ಮಾಡುತ್ತಿದೆ?
ನೀತಿ ನವೀಕರಣಗಳು, ಪ್ರಯಾಣ ನಿರ್ಬಂಧಗಳು, ಹೊಂದಿಕೊಳ್ಳುವ ಪ್ರಯಾಣದ ಆಯ್ಕೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಗೆಸ್ಟ್ಗಳಿಗಾಗಿ ನಮ್ಮ COVID-19 ಪ್ರತಿಕ್ರಿಯೆ ಮತ್ತು ಸಂಪನ್ಮೂಲಗಳ ಕುರಿತು ಇತ್ತೀಚಿನ ಮಾಹಿತಿಯನ್ನು ಪಡೆಯಿರಿ.
ಲಿಸ್ಟಿಂಗ್ ಅಥವಾ ಹೋಸ್ಟ್ ಅವರ ಯಾವುದೇ ಸಮಸ್ಯೆಯ ಕಾರಣದಿಂದ ನಾನು ರದ್ದುಗೊಳಿಸಬೇಕಾದರೆ ಏನು ಮಾಡಬೇಕು?
ಹೋಸ್ಟ್ನೊಂದಿಗೆ ಸಂದೇಶಗಳ ಮೂಲಕ ಹೆಚ್ಚಿನ ಸಂದರ್ಭಗಳಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ನೇರವಾಗಿ ಪರಿಹರಿಸಿಕೊಳ್ಳಬಹುದು. ಅವರಿಗೆ ಸಹಾಯ ಮಾಡಲಾಗದಿದ್ದರೆ, ಸಮಸ್ಯೆಯನ್ನು ಕಂಡುಹಿಡಿದ 24 ಗಂಟೆಗಳ ಒಳಗೆ Airbnb ಅನ್ನು ಸಂಪರ್ಕಿಸಿ.
ರಿಸರ್ವೇಶನ್ಗಾಗಿ ನನಗೆ ಯಾವಾಗ ಶುಲ್ಕ ವಿಧಿಸಲಾಗುತ್ತದೆ?
ನಿಮ್ಮ ರಿಸರ್ವೇಶನ್ ದೃಢೀಕರಿಸಿದ ಕೂಡಲೇ ನಿಮಗೆ ಶುಲ್ಕ ವಿಧಿಸಲಾಗುತ್ತದೆ, ಆದರೆ ಚೆಕ್-ಇನ್ ಮಾಡಿದ ನಂತರ 24 ಗಂಟೆಗಳವರೆಗೆ ನಾವು ನಿಮ್ಮ ಹೋಸ್ಟ್ ಪಾವತಿಯನ್ನು ತಡೆಹಿಡಿಯುತ್ತೇವೆ ಮತ್ತು ಎಲ್ಲವೂ ನಿರೀಕ್ಷೆಯಂತೆ ಇದೆ ಎಂದು ಖಚಿತಪಡಿಸಿಕೊಳ್ಳಲು ನಿಮಗೆ ಸಮಯವನ್ನು ನೀಡುತ್ತೇವೆ.
ಹೊಸ್ಟ್ ಕೇಂದ್ರ
ಬಹುತೇಕ ಯಾರಾದರೂ ವಾಸ್ತವ್ಯ ಅಥವಾ ಅನುಭವದ ಹೋಸ್ಟ್ ಆಗಿರಬಹುದು. ಸೈನ್ ಅಪ್ ಮಾಡಲು ಮತ್ತು ನಿಮ್ಮ ಸ್ಥಳ ಅಥವಾ ನಿಮ್ಮ ಕೌಶಲ್ಯಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಇದು ಉಚಿತವಾಗಿದೆ. ಪ್ರಾರಂಭಿಸಲು, ನಮ್ಮ ಹೋಸ್ಟ್ ಕೇಂದ್ರಕ್ಕೆ ಭೇಟಿ ನೀಡಿ.
ಹೆಚ್ಚಿನ ಮಾಹಿತಿ ಬೇಕೇ?
ನಿಮ್ಮ ಪ್ರಶ್ನೆಗಳಿಗೆ ಹೆಚ್ಚಿನ ಉತ್ತರಗಳನ್ನು ಪಡೆಯಲು ನಮ್ಮ ಸಹಾಯ ಕೇಂದ್ರವನ್ನು ಸಂದರ್ಶಿಸಿ.