Airbnb ನಗರ ಪೋರ್ಟಲ್‌ಗೆ ಸ್ವಾಗತ

Airbnb ಯೊಂದಿಗೆ ಪಾಲುದಾರಿಕೆ ಹೊಂದಿರುವ ನಗರಗಳಿಗೆ ಇದು ಹೊಸ ರೀತಿಯ ಪರಿಹಾರವಾಗಿದೆ.

ಸ್ಥಳೀಯ ಪ್ರವಾಸದ ಟ್ರೆಂಡ್‌ಗಳ ಕುರಿತ ಒಳನೋಟಗಳು ಮತ್ತು ಅಲ್ಪಾವಧಿ ಬಾಡಿಗೆ ನಿಯಮಗಳನ್ನು ಅಭಿವೃದ್ಧಿಪಡಿಸಲು ಮತ್ತು ಜಾರಿಗೊಳಿಸಲು ಸಹಾಯವಾಗುವ ಸಾಧನಗಳೊಂದಿಗೆ, ಸಿಟಿ ಪೋರ್ಟಲ್ ಪ್ರವಾಸೋದ್ಯಮ ಮತ್ತು ಮನೆ ಹಂಚಿಕೊಳ್ಳುವಿಕೆಯ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಸಮುದಾಯಗಳಿಗೆ ನೆರವಾಗುತ್ತದೆ.

ನೀವು Airbnbಯೊಂದಿಗೆ ಪಾಲುದಾರರಾಗಲು ಬಯಸುವ ಸರ್ಕಾರಿ ಅಧಿಕಾರಿ ಅಥವಾ ಪ್ರವಾಸೋದ್ಯಮ ಸಂಸ್ಥೆಯೇ? ಕೆಳಗಿನ ಲಿಂಕ್ ಬಳಸಿ ನಿಮ್ಮ ಸ್ವಂತ ಸಿಟಿ ಪೋರ್ಟಲ್‌ಗಾಗಿ ವಿನಂತಿಸಿ.

ಸಿಟಿ ಪೋರ್ಟಲ್ ಒಳಗೆ


ಮನೆ ಹಂಚಿಕೊಳ್ಳುವಿಕೆ ನಿಮ್ಮ ಸಮುದಾಯವನ್ನು ಬಲಪಡಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಡೇಟಾ-ಚಾಲಿತ ಒಳನೋಟಗಳು ಮತ್ತು ಸಂಪನ್ಮೂಲಗಳನ್ನು ಹುಡುಕಿ.

ಸ್ಥಳೀಯ ಡೇಟಾ ಮತ್ತು ಒಳನೋಟಗಳು

ನಿಮ್ಮ ಸಮುದಾಯದಲ್ಲಿ Airbnbಯ ಆರ್ಥಿಕ ಪ್ರಭಾವ, ಸ್ಥಳೀಯ ಪ್ರವಾಸದ ಟ್ರೆಂಡ್‌ಗಳು ಮತ್ತು ಇನ್ನೂ ಹಲವು ವಿಷಯಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಬೇಕಾದ ಡೇಟಾ ಸಿಗುತ್ತದೆ.

ನಂಬಿಕೆ ಮತ್ತು ಸಹಯೋಗಕ್ಕಾಗಿ ಉಪಕರಣಗಳು

ನ್ಯಾಯೋಚಿತ, ಸಮತೋಲಿತ ಅಲ್ಪಾವಧಿ ಬಾಡಿಗೆ ನೀತಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಜಾರಿಗೊಳಿಸಲು ಸಹಾಯ ಮಾಡಲು ಉದ್ಯಮದಲ್ಲೇ ಮೊದಲ ಬಾರಿಗೆ ಪರಿಚಯಿಸಲಾದ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ಬಳಸಿ.

ಬೆಂಬಲ ಮತ್ತು ಸಂವಹನ

ನಿಮ್ಮ ಸಮುದಾಯದಲ್ಲಿನ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು Airbnb ತಂಡದಿಂದ ನೇರ ಬೆಂಬಲದಿಂದ ಪ್ರಯೋಜನ ಪಡೆಯಿರಿ.

ನಮ್ಮ ಪಾರ್ಟ್‌ನರ್‌‌ಗಳಿಂದ


ಸಿಟಿ ಪೋರ್ಟಲ್ ಬಳಸುವ ಬಗ್ಗೆ ನಮ್ಮ ಕೆಲವು ಪಾಲುದಾರರು ಏನು ಇಷ್ಟಪಡುತ್ತಾರೆ ಎಂಬುದನ್ನು ಕೇಳಿ.

ನಮ್ಮ ಅಲ್ಪಾವಧಿ ಬಾಡಿಗೆ ಕಾನೂನುಗಳನ್ನು ಉತ್ತಮವಾಗಿ ಜಾರಿಗೊಳಿಸಲು ಸಹಾಯವಾಗುವಂತಹ ಸಾಧನವನ್ನು ರಚಿಸುವಲ್ಲಿ Airbnb ನೀಡಿದ ಸಹಯೋಗ ಮತ್ತು ಅವರ ಕ್ರಿಯಾಶೀಲತೆಗಾಗಿ ನಾವು ಕೃತಜ್ಞರಾಗಿದ್ದೇವೆ.
Darrell Steinberg
ಸ್ಯಾಕ್ರಮೆಂಟೊದ ಮೇಯರ್
ಪ್ರವಾಸಿಗರ ವರ್ತನೆಯ ಟ್ರೆಂಡ್‌ ಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುವ ಸಿಟಿ ಪೋರ್ಟಲ್, ಅಮೂಲ್ಯವಾದ ಸಾಧನವಾಗಿದೆ...ಪರಿಣಾಮಕಾರಿ ಸಾರ್ವಜನಿಕ ನೀತಿಗಳು ಮತ್ತು ಪರಿಣಾಮಕಾರಿ ಪ್ರಚಾರ ಅಭಿಯಾನಗಳನ್ನು ವಿನ್ಯಾಸಗೊಳಿಸುವಲ್ಲಿ ಈ ಮಾಹಿತಿ ಸಂಪತ್ತು ಪ್ರಮುಖ ಪಾತ್ರ ವಹಿಸುತ್ತದೆ.
Mauricio Arceo
ಪ್ರವಾಸೋದ್ಯಮ ಕಾರ್ಯದರ್ಶಿ · ಕ್ಯಾಂಪೆಶೆ ಮೆಕ್ಸಿಕೊ
ಸಿಟಿ ಪೋರ್ಟಲ್‌ನ ಸಾಧನಗಳು ನಗರದ ನಿಯಮಗಳನ್ನು ನಿರ್ವಹಿಸಲು ಸಹಾಯ ಮಾಡುತ್ತವೆ. ಇದು ದೈನಂದಿನ ಕಾರ್ಯಾಚರಣೆಗಳಿಗೆ ಅತ್ಯಗತ್ಯವಾಗಿದೆ.
Alicia Fong
ವಸತಿ ಸಂರಕ್ಷಣಾ ವ್ಯವಸ್ಥಾಪಕ · ಇಂಗಲ್‌ವುಡ್, CA

ನಮ್ಮ ಕೆಲಸದ ಬಗ್ಗೆ ಇನ್ನಷ್ಟು


ವಿಶ್ವದಾದ್ಯಂತದ ಸರ್ಕಾರಗಳೊಂದಿಗೆ ಕೆಲಸ ಮಾಡುವ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಬೆಂಬಲಿಸುವ ನಮ್ಮ ಪ್ರಯತ್ನಗಳ ಕುರಿತು ಇತ್ತೀಚಿನ ಅಪ್‌ಡೇಟ್‌ಗಳನ್ನು ನೋಡಿ.

ನಿಮ್ಮ ಪ್ರಶ್ನೆಗಳನ್ನು ಉತ್ತರಿಸಲಾಗಿದೆ


ಸಿಟಿ ಪೋರ್ಟಲ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ತ್ವರಿತವಾಗಿ ಉತ್ತರಗಳನ್ನು ಕಂಡುಕೊಳ್ಳಿ.

Airbnb ಸಿಟಿ ಪೋರ್ಟಲ್ ಅನ್ನು 2020ರಲ್ಲಿ ಪ್ರಾರಂಭಿಸಲಾಯಿತು. ಇದು ವಿಶ್ವದಾದ್ಯಂತದ ಸರ್ಕಾರಗಳೊಂದಿಗೆ ವರ್ಷಗಳ ಕೆಲಸ ಮಾಡಿರುವುದರಿಂದ ದೊರೆತಿರುವ ಮಾಹಿತಿಯನ್ನು ಆಧರಿಸಿದ, ಸ್ಥಳೀಯ ಸರ್ಕಾರಗಳು ಮತ್ತು ಪ್ರವಾಸೋದ್ಯಮ ಸಂಸ್ಥೆಗಳಿಗೆ ಬೇಕಾದ ಅನನ್ಯ ರೀತಿಯ ಸಂಪನ್ಮೂಲವಾಗಿದೆ. ಮನೆ ಹಂಚಿಕೊಳ್ಳುವ ಸೇವೆಗಳು ತಮ್ಮ ಸಮುದಾಯಗಳನ್ನು ಉತ್ತಮಗೊಳಿಸುವಂತೆ ಮತ್ತು ಬಲಪಡಿಸುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರಗಳೊಂದಿಗೆ ಕೆಲಸ ಮಾಡುವುದು, 100,000ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ಹೋಸ್ಟ್‌ಗಳಿರುವ Airbnbಯ ಆದ್ಯತೆಗಳಲ್ಲಿ ಒಂದಾಗಿದೆ. ಈ ಬದ್ಧತೆಯ ಅಂಗವಾಗಿ, ಸ್ಥಳೀಯ ಸರ್ಕಾರಗಳು ಮತ್ತು ಪ್ರವಾಸೋದ್ಯಮ ಸಂಸ್ಥೆಗಳಿಗೆ ತಮ್ಮ ಸಮುದಾಯದಲ್ಲಿನ Airbnb ಲ್ಯಾಂಡ್‌ಸ್ಕೇಪ್ ‌ ಮತ್ತು ಪ್ರವಾಸೋದ್ಯಮ ಟ್ರೆಂಡ್ ‌ಅನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಮತ್ತು ಅವರ ಅಲ್ಪಾವಧಿ ಬಾಡಿಗೆ ಕಾನೂನುಗಳನ್ನು ಜಾರಿಗೊಳಿಸಲು ಸಹಾಯವಾಗುವಂತಹ ಸಾಧನಗಳನ್ನು ಒದಗಿಸಲು ನಾವು ಸಿಟಿ ಪೋರ್ಟಲ್ ಅನ್ನು ರಚಿಸಿದ್ದೇವೆ.
ತಮ್ಮ ಸಮುದಾಯದಲ್ಲಿನ Airbnb ಲ್ಯಾಂಡ್‌ಸ್ಕೇಪ್‌ ಮತ್ತು ಪ್ರವಾಸದ ಟ್ರೆಂಡ್‌ ಅನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಅಲ್ಪಾವಧಿ ಬಾಡಿಗೆ ಕಾನೂನುಗಳನ್ನು ಅಭಿವೃದ್ಧಿಪಡಿಸಲು ಮತ್ತು ಜಾರಿಗೊಳಿಸಲು ಸಹಾಯವಾಗುವಂತೆ, ನೂರಾರು ಸ್ಥಳೀಯ ಸರ್ಕಾರಗಳು ಮತ್ತು ಪ್ರವಾಸೋದ್ಯಮ ಸಂಸ್ಥೆಗಳು ಸಿಟಿ ಪೋರ್ಟಲ್ ಅನ್ನು ಬಳಸುತ್ತವೆ.
ಸಿಟಿ ಪೋರ್ಟಲ್ ಅನ್ನು ಪ್ರವೇಶಿಸಲು ನೀವು ಸರ್ಕಾರಿ ಅಧಿಕಾರಿಯಾಗಿರಬೇಕು ಅಥವಾ ಪ್ರವಾಸೋದ್ಯಮ ಸಂಸ್ಥೆಯೊಂದಿಗೆ ಕೆಲಸ ಮಾಡಬೇಕು. ನಿಮ್ಮ ವ್ಯಾಪ್ತಿಗಾಗಿ ಸಿಟಿ ಪೋರ್ಟಲ್ ಬೇಕು ಎಂದು ವಿನಂತಿಸಲು ನೀವು ಬಯಸಿದಲ್ಲಿ, ಕೆಳಗಿನ "ಪ್ರಾರಂಭಿಸಿ" ಬಟನ್ ಅನ್ನು ಅನುಸರಿಸಿ. ನಿಮ್ಮ ಸರ್ಕಾರ ಅಥವಾ ಸಂಸ್ಥೆ ಈಗಾಗಲೇ ತನ್ನದೇ ಆದ ಸಿಟಿ ಪೋರ್ಟಲ್ ಅನ್ನು ಹೊಂದಿದೆಯೆಂದು ನೀವು ಭಾವಿಸಿದ್ದರೆ ಮತ್ತು ಅದಕ್ಕೆ ಪ್ರವೇಶ ಬೇಕೆಂದು ಬಯಸಿದರೆ, ದಯವಿಟ್ಟು cityportal-support@airbnb.comಗೆ ಇಮೇಲ್ ಕಳುಹಿಸಿ.
ಇಲ್ಲ! ಸಿಟಿ ಪೋರ್ಟಲ್ ಮೂಲಕ ವಿಶ್ವದಾದ್ಯಂತ ನೂರಾರು ಸರ್ಕಾರಿ ಮತ್ತು ಪ್ರವಾಸೋದ್ಯಮ ಸಂಸ್ಥೆಗಳು Airbnbಯೊಂದಿಗೆ ಪಾಲುದಾರರಾಗಿವೆ.

ಮುಂದಿನ ಹಂತವನ್ನು ತೆಗೆದುಕೊಳ್ಳಿ

ನಿಮ್ಮ ಸ್ಥಳೀಯ ಸಮುದಾಯಕ್ಕೆ ಉತ್ತಮ ಪರಿಹಾರಗಳನ್ನು ಕಂಡುಹಿಡಿಯಲು Airbnb ತಜ್ಞರೊಂದಿಗೆ ಮಾತನಾಡಿ.

ಸಂಪರ್ಕಿಸಿ