ಹುಡುಕಾಟ ಇನ್‌ಪುಟ್‌ನಲ್ಲಿ ಟೈಪ್ ಮಾಡಿದ ನಂತರ ಸಲಹೆಗಳು ಕಾಣಿಸಿಕೊಳ್ಳುತ್ತವೆ. ವಿಮರ್ಶಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಬಾಣಗುರುತುಗಳನ್ನು ಬಳಸಿ. ಆಯ್ಕೆ ಮಾಡಲು ಎಂಟರ್ ಬಳಸಿ. ಆಯ್ಕೆ ಒಂದು ನುಡಿಗಟ್ಟು ಆಗಿದ್ದರೆ, ಆ ನುಡಿಗಟ್ಟನ್ನು ಹುಡುಕಾಟಕ್ಕೆ ಸಲ್ಲಿಸಲಾಗುತ್ತದೆ. ಸಲಹೆಯು ಒಂದು ಲಿಂಕ್ ಆಗಿದ್ದರೆ, ಬ್ರೌಸರ್ ಆ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.
ಹುಡುಕಾಟ ಇನ್‌ಪುಟ್‌ನಲ್ಲಿ ಟೈಪ್ ಮಾಡಿದ ನಂತರ ಸಲಹೆಗಳು ಕಾಣಿಸಿಕೊಳ್ಳುತ್ತವೆ. ವಿಮರ್ಶಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಬಾಣಗುರುತುಗಳನ್ನು ಬಳಸಿ. ಆಯ್ಕೆ ಮಾಡಲು ಎಂಟರ್ ಬಳಸಿ. ಆಯ್ಕೆ ಒಂದು ನುಡಿಗಟ್ಟು ಆಗಿದ್ದರೆ, ಆ ನುಡಿಗಟ್ಟನ್ನು ಹುಡುಕಾಟಕ್ಕೆ ಸಲ್ಲಿಸಲಾಗುತ್ತದೆ. ಸಲಹೆಯು ಒಂದು ಲಿಂಕ್ ಆಗಿದ್ದರೆ, ಬ್ರೌಸರ್ ಆ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.

Airbnb ಗೆಸ್ಟ್‌ಗಳಿಗಾಗಿ ಪ್ರಯಾಣ ವಿಮೆಯನ್ನು ಅರ್ಥಮಾಡಿಕೊಳ್ಳುವುದು

UK ಮತ್ತು ಯುರೋಪಿನ ಕೆಲವು ಭಾಗಗಳ ನಿವಾಸಿಗಳು Airbnb ಯಲ್ಲಿ ಬುಕಿಂಗ್ ಮಾಡುವಾಗ ಪಾಲಿಸಿಗಳನ್ನು ಖರೀದಿಸಬಹುದು.
Airbnb ಅವರಿಂದ ಜೂನ್ 1, 2022ರಂದು
ಜುಲೈ 29, 2024 ನವೀಕರಿಸಲಾಗಿದೆ

ತುರ್ತುಸ್ಥಿತಿಗಳು ಮತ್ತು ಅನಿರೀಕ್ಷಿತ ಟ್ರಿಪ್ ಅಡಚಣೆಗಳು ಸಂಭವಿಸುತ್ತವೆ ಮತ್ತು ಮರುಪಾವತಿಗಾಗಿ ಗೆಸ್ಟ್‌ನ ವಿನಂತಿಯನ್ನು ತಿರಸ್ಕರಿಸುವುದು ಕಠಿಣವಾಗಬಹುದು. ಹೋಸ್ಟ್ ಆಗಿ, ನೀವು ಸಹಾನುಭೂತಿಯಿಂದಿರಲು ಬಯಸುತ್ತೀರಿ, ಆದರೆ ನೀವು ಆದಾಯವನ್ನು ಗಳಿಸಬೇಕು ಮತ್ತು ಕೆಟ್ಟ ವಿಮರ್ಶೆಗಳನ್ನು ತಪ್ಪಿಸಬೇಕು.

ಗೆಸ್ಟ್‌ಗಳು ಮತ್ತು ಹೋಸ್ಟ್‌ಗಳನ್ನು ಉತ್ತಮವಾಗಿ ಬೆಂಬಲಿಸಲು, ಗೆಸ್ಟ್‌ಗಳಿಗೆ ಪ್ರಯಾಣ ವಿಮೆಯನ್ನು ಪರಿಚಯಿಸಲು ನಾವು AON ಮತ್ತು ಯುರೋಪ್ ಅಸಿಸ್ಟೆನ್ಸ್ ಗ್ರೂಪ್ ಮತ್ತು ಅದರ ಯುಎಸ್ ಅಂಗಸಂಸ್ಥೆಯಾದ ಜನರಲ್ ಗ್ಲೋಬಲ್ ಅಸಿಸ್ಟೆನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. ಬುಕಿಂಗ್ ಪ್ರಕ್ರಿಯೆಯ ಸಮಯದಲ್ಲಿ ಕೆಲವು ಅಪಾಯಗಳ ವಿರುದ್ಧ ತಮ್ಮ Airbnb ರಿಸರ್ವೇಶನ್‌ಗಳನ್ನು ವಿಮೆ ಮಾಡುವ ಆಯ್ಕೆಯನ್ನು ನಾವು 10 ದೇಶಗಳಲ್ಲಿ ಗೆಸ್ಟ್‌ಗಳಿಗೆ ನೀಡುತ್ತಿದ್ದೇವೆ.

ಪಾಲಿಸಿಯನ್ನು ಖರೀದಿಸುವ ಗೆಸ್ಟ್‌ಗಳು ಒಳಗೊಳ್ಳಲಾದ ಕಾರಣಕ್ಕಾಗಿ ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸಿದಾಗ, ತಮ್ಮ ಮರುಪಾವತಿಸದ Airbnb ಬುಕಿಂಗ್ ವೆಚ್ಚದ 100% ವರೆಗೆ ವೆಚ್ಚ ವಾಪಸಾತಿ ಪಡೆಯಲು ಕ್ಲೈಮ್ ಸಲ್ಲಿಸಲು ಅವರಿಗೆ ಸಾಧ್ಯವಾಗುತ್ತದೆ. ಇದು ಗೆಸ್ಟ್‌ಗಳು ತಮ್ಮ ಹೋಸ್ಟ್‌ಗಳ ರದ್ದತಿ ನೀತಿಗಳ ನಿಯಮಗಳಾಚೆ ಮರುಪಾವತಿಗಾಗಿ ಹೋಸ್ಟ್‌ಗಳನ್ನು ಕೇಳುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

ಪ್ರಯಾಣ ವಿಮೆ ಹೇಗೆ ಕೆಲಸ ಮಾಡುತ್ತದೆ

ಯುಎಸ್,* ಯುಕೆ* * ಮತ್ತು ಯುರೋಪ್ * * (ಫ್ರಾನ್ಸ್, ಜರ್ಮನಿ, ಸ್ಪೇನ್, ಇಟಲಿ, ಐರ್ಲೆಂಡ್, ನೆದರ್‌ಲ್ಯಾಂಡ್ಸ್, ಆಸ್ಟ್ರಿಯಾ ಮತ್ತು ಪೋರ್ಚುಗಲ್) ನಲ್ಲಿನ ಗೆಸ್ಟ್‌ಗಳು Airbnb ನಲ್ಲಿ ಟ್ರಿಪ್ ಬುಕಿಂಗ್ ಮಾಡುವಾಗ ಪ್ರಯಾಣ ವಿಮೆಯನ್ನು ಖರೀದಿಸಬಹುದು. ಭವಿಷ್ಯದಲ್ಲಿ ಇತರ ದೇಶಗಳಲ್ಲಿನ ಗೆಸ್ಟ್‌ಗಳಿಗೆ ಪ್ರಯಾಣ ವಿಮೆಯನ್ನು ಲಭ್ಯವಾಗುವಂತೆ ಮಾಡಲು ನಾವು ಯೋಜಿಸಿದ್ದೇವೆ.

ನಾವು ಬುಕಿಂಗ್ ಪ್ರಕ್ರಿಯೆಯಲ್ಲಿ ಪ್ರಯಾಣ ವಿಮೆಯನ್ನು ಖರೀದಿಸುವ ಆಯ್ಕೆಯನ್ನು ರೂಪಿಸಿದ್ದೇವೆ, ಇದು ಸ್ಥಳವನ್ನು ಅವಲಂಬಿಸಿ ಸ್ವಲ್ಪ ಬದಲಾಗುತ್ತದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇಲ್ಲಿದೆ:

  • ಬುಕಿಂಗ್ ಸಮಯದಲ್ಲಿ, ಗೆಸ್ಟ್‌ಗಳಿಗೆ ಪ್ರಯಾಣ ವಿಮೆಯನ್ನು ಸೇರಿಸುವ ಆಯ್ಕೆಯನ್ನು ನೀಡಲಾಗುತ್ತದೆ.
  • ಮೀಸಲಾದ ಸ್ಕ್ರೀನ್‌ಗಳು ಪಾಲಿಸಿಯು ಏನನ್ನು ಒಳಗೊಳ್ಳುತ್ತದೆಂದು ಮತ್ತು ಪ್ರಮುಖ ಹೊರಗಿಡುವಿಕೆಗಳ ಕುರಿತು ವಿವರಗಳನ್ನು ಒದಗಿಸುತ್ತವೆ.
  • ಗೆಸ್ಟ್‌ಗಳು ಆಸಕ್ತಿ ಹೊಂದಿದ್ದರೆ, ಅವರು ತಮ್ಮ ಬುಕಿಂಗ್‌ಗೆ ಪ್ರಯಾಣ ವಿಮೆಯನ್ನು ಸೇರಿಸುತ್ತಾರೆ ಮತ್ತು ಚೆಕ್‌ಔಟ್ ಮಾಡುತ್ತಾರೆ.

ಗೆಸ್ಟ್‌‌ನ ಪ್ರಯಾಣ ವಿಮಾ ಪ್ರೀಮಿಯಂ ಅವರ ಒಟ್ಟು ಟ್ರಿಪ್ ವೆಚ್ಚದ ಶೇಕಡಾವಾರು ಆಗಿರುತ್ತದೆ ಮತ್ತು ಅದು ಚೆಕ್‌ಔಟ್‌ನಲ್ಲಿ ಲೈನ್ ಐಟಂ ಆಗಿ ಗೋಚರಿಸುತ್ತದೆ.

ಗೆಸ್ಟ್‌ಗಳ ಸ್ಥಳವನ್ನು ಅವಲಂಬಿಸಿ, ಪಾಲಿಸಿಗಳನ್ನು ಮುಂಚೂಣಿ ಬಹುರಾಷ್ಟ್ರೀಯ ವಿಮಾದಾರ ಸಂಸ್ಥೆ Generali Group ನ ಅಂಗಸಂಸ್ಥೆಗಳಾದ Europ Assistance S.A. ಅಥವಾ Generali US Branch ನೀಡುತ್ತವೆ. ತಮ್ಮ ರಿಸರ್ವೇಶನ್ ಅನ್ನು ಪೂರ್ಣಗೊಳಿಸಿದ ನಂತರ, ಪ್ರಯಾಣ ವಿಮೆಯನ್ನು ಸೇರಿಸಿದ ಗೆಸ್ಟ್‌ಗಳು ತಮ್ಮ ಪಾಲಿಸಿಯ ವಿವರಗಳು ಮತ್ತು ಕ್ಲೈಮ್ ಅನ್ನು ಹೇಗೆ ಸಲ್ಲಿಸಬೇಕು ಎಂಬ ಮಾಹಿತಿಯೊಂದಿಗೆ ಇಮೇಲ್ ದೃಢೀಕರಣವನ್ನು ಸ್ವೀಕರಿಸುತ್ತಾರೆ.

‌"ಕಟ್ಟುನಿಟ್ಟಾದ ರದ್ದತಿ ನೀತಿಯನ್ನು ಹೊಂದಿರುವ ನನ್ನಂತಹ ಹೋಸ್ಟ್‌ಗೆ ಪ್ರಯಾಣ ವಿಮೆಯನ್ನು ಖರೀದಿಸುವ ಗೆಸ್ಟ್‌ನ ಆಯ್ಕೆಯು ತುಂಬಾ ಸ್ವಾಗತಾರ್ಹ ಸುದ್ದಿಯಾಗಿದೆ" ಎಂದು ಷಿಕಾಗೋದ ಸೂಪರ್‌ಹೋಸ್ಟ್‌ ಅಲೆಕ್ಸಾಂಡ್ರಾ ಹೇಳುತ್ತಾರೆ.

ಪ್ರಯಾಣ ವಿಮೆಯು ಏನನ್ನು ಒಳಗೊಂಡಿದೆ

ಗೆಸ್ಟ್‌ಗಳಿಗಾಗಿ

AirCover ‌ಲಿಸ್ಟಿಂಗ್ ದೋಷಗಳು ಮತ್ತು ಇಲ್ಲದಿರುವ ಪ್ರಮುಖ ಸೌಲಭ್ಯಗಳಂತಹ ಅನಿರೀಕ್ಷಿತ ಸಮಸ್ಯೆಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.

ಕೆಟ್ಟ ಹವಾಮಾನ, ಕದ್ದುಹೋದ ಪ್ರಯಾಣ ದಾಖಲೆಗಳು ಅಥವಾ ಗಂಭೀರ ಅನಾರೋಗ್ಯದಂತಹ ನಿರ್ದಿಷ್ಟ ಘಟನೆಗಳಿಂದ ತಮ್ಮ ಟ್ರಿಪ್‌ಗೆ ಪರಿಣಾಮ ಬೀರಿದರೆ ತಮ್ಮ ಮರುಪಾವತಿಸದ Airbnb ರಿಸರ್ವೇಶನ್ ವೆಚ್ಚಗಳ 100% ವರೆಗೆ ಪಾವತಿ ಸೇರಿದಂತೆ ಪ್ರಯಾಣ ವಿಮೆಯು ಗೆಸ್ಟ್‌ಗೆ ವಿಮಾ ಕವರೇಜ್ ಅನ್ನು ಸೇರಿಸುತ್ತದೆ.

ಉದಾಹರಣೆಗೆ, ಹೋಸ್ಟ್ ತಮ್ಮ ರದ್ದತಿ ನೀತಿಯ ಆಧಾರದ ಮೇಲೆ Airbnb ರಿಸರ್ವೇಶನ್ ವೆಚ್ಚದ 50% ಅನ್ನು ಮರುಪಾವತಿಸಿದರೆ, ಗೆಸ್ಟ್ ಕವರ್ ಮಾಡಿದ ಕಾರಣಕ್ಕಾಗಿ ರದ್ದುಗೊಳಿಸಿದರೆ ಪ್ರಯಾಣ ವಿಮೆಯು ಉಳಿದ 50% ವರೆಗೆ ಮರುಪಾವತಿ ಮಾಡಬಹುದು. ಗೆಸ್ಟ್ ‌ಪ್ರಯಾಣ ವಿಮೆ ಕ್ಲೇಮ್ ‌ಮಾಡಿದರೆ ವಿಮಾ ಪೂರೈಕೆದಾರರು ಹೋಸ್ಟ್‌ನಿಂದ ಯಾವುದೇ ಹಣವನ್ನು ವಸೂಲಿ ಮಾಡಲು ಪ್ರಯತ್ನಿಸುವುದಿಲ್ಲ.

ನಾವು ಇತ್ತೀಚೆಗೆ ಗೆಸ್ಟ್‌ಗಳಿಗಾಗಿ AirCover ‌ಅನ್ನು ಪರಿಚಯಿಸಿದ್ದು, ಅದು ಲಿಸ್ಟಿಂಗ್ ದೋಷಗಳು ಮತ್ತು ಇಲ್ಲದಿರುವ ಪ್ರಮುಖ ಸೌಲಭ್ಯಗಳಂತಹ ಅನಿರೀಕ್ಷಿತ ಸಮಸ್ಯೆಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.

ಕೆಟ್ಟ ಹವಾಮಾನ, ಕದ್ದುಹೋದ ಪ್ರಯಾಣ ದಾಖಲೆಗಳು ಅಥವಾ ಗಂಭೀರ ಅನಾರೋಗ್ಯದಂತಹ ನಿರ್ದಿಷ್ಟ ಘಟನೆಗಳಿಂದ ತಮ್ಮ ಟ್ರಿಪ್‌ಗೆ ಪರಿಣಾಮ ಬೀರಿದರೆ ತಮ್ಮ ಮರುಪಾವತಿಸದ Airbnb ರಿಸರ್ವೇಶನ್ ವೆಚ್ಚಗಳ 100% ವರೆಗೆ ಪಾವತಿ ಸೇರಿದಂತೆ ಪ್ರಯಾಣ ವಿಮೆಯು ಗೆಸ್ಟ್‌ಗೆ ವಿಮಾ ಕವರೇಜ್ ಅನ್ನು ಸೇರಿಸುತ್ತದೆ.

ಉದಾಹರಣೆಗೆ, ಹೋಸ್ಟ್ ತಮ್ಮ ರದ್ದತಿ ನೀತಿಯ ಆಧಾರದ ಮೇಲೆ Airbnb ರಿಸರ್ವೇಶನ್ ವೆಚ್ಚದ 50% ಅನ್ನು ಮರುಪಾವತಿಸಿದರೆ, ಗೆಸ್ಟ್ ಕವರ್ ಮಾಡಿದ ಕಾರಣಕ್ಕಾಗಿ ರದ್ದುಗೊಳಿಸಿದರೆ ಪ್ರಯಾಣ ವಿಮೆಯು ಉಳಿದ 50% ವರೆಗೆ ಮರುಪಾವತಿ ಮಾಡಬಹುದು. ಗೆಸ್ಟ್ ‌ ಪ್ರಯಾಣ ವಿಮೆ ಕ್ಲೇಮ್ ‌ಮಾಡಿದರೆ ವಿಮಾ ಪೂರೈಕೆದಾರರು ಹೋಸ್ಟ್‌ನಿಂದ ಯಾವುದೇ ಹಣವನ್ನು ವಸೂಲಿ ಮಾಡಲು ಪ್ರಯತ್ನಿಸುವುದಿಲ್ಲ.

ಮೇ 31, 2022ರಂದು ಅಥವಾ ನಂತರ ಮಾಡಿದ ಬುಕಿಂಗ್‌ಗಳಿಗೆ, COVID-19 ಅನ್ನು ಆಕಸ್ಮಿಕ ಎಂದು ಪರಿಗಣಿಸಲಾಗುವುದಿಲ್ಲ. (ದಕ್ಷಿಣ ಕೊರಿಯಾ ಮತ್ತು ಲಕ್ಸ್ ರಿಸರ್ವೇನ್‌ಗಳಲ್ಲಿ ದೇಶೀಯ ರಿಸರ್ವೇಶನ್‌ಗಳಿಗಾಗಿ ವಿಭಿನ್ನ ನೀತಿಗಳು ಅನ್ವಯಿಸುತ್ತವೆ.) COVID-19ನಿಂದ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಗೆಸ್ಟ್ ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸಿದರೆ, ಹೋಸ್ಟ್‌ನ ರದ್ದತಿ ನೀತಿಯು ಅನ್ವಯಿಸುತ್ತದೆ.

ಪ್ರಯಾಣ ವಿಮೆಯನ್ನು ಖರೀದಿಸುವ ಗೆಸ್ಟ್‌ಗಳು COVID-19 ನಿಂದ ಅನಾರೋಗ್ಯಕ್ಕೆ ಒಳಗಾದರೆ (ಪರವಾನಗಿ ಪಡೆದ ವೈದ್ಯರು ರೋಗನಿರ್ಣಯ ಮಾಡಿದ ಪ್ರಕಾರ) ಮತ್ತು ಇತರ ಪಾಲಿಸಿ ನಿಯಮಗಳನ್ನು ಪೂರೈಸಿದರೆ ಅವರು ಕವರ್ ಆಗಬಹುದು.
Airbnb
ಜೂನ್ 1, 2022
ಇದು ಸಹಾಯಕವಾಗಿದೆಯೇ?