ಪ್ರತಿ ಗೆಸ್ಟ್‌ನೊಂದಿಗೆ ಸ್ಪಷ್ಟ ನಿರೀಕ್ಷೆಗಳನ್ನು ಹೊಂದಿಸುವುದು
ಹೋಸ್ಟ್‌ಗಳು ಪಾಲಿಸಬೇಕಾದ ನಿಯಮಗಳ ಭಾಗವಾಗಿ, ನಿಮ್ಮ ಲಿಸ್ಟಿಂಗ್ ಪುಟವು ನಿಮ್ಮ ಸ್ಥಳದ ಕುರಿತು ನಿಖರವಾಗಿ ವಿವರಿಸಬೇಕು, ಚೆಕ್-ಇನ್‌ನಿಂದ ಚೆಕ್‌ಔಟ್‌ವರೆಗೆ ಲಭ್ಯವಿರುವ ಫೀಚರ್‌ಗಳು ಮತ್ತು ಸೌಲಭ್ಯಗಳನ್ನು ಪ್ರತಿಬಿಂಬಿಸಬೇಕು. ನಿಮ್ಮ ಗೆಸ್ಟ್‌ಗಳ ಅನುಭವವು ನಿಮ್ಮ ಸ್ಥಳದ ಕುರಿತು ನೀವು ವಿವರಿಸಿದ್ದ ವಿಷಯಗಳಿಗೆ ಹೊಂದಾಣಿಕೆಯಾಗದಿದ್ದರೆ, ಅವರು ನಿರಾಶೆಗೊಳ್ಳುತ್ತಾರೆ.
ಸಾಧ್ಯವಾಗುವ ನಿರೀಕ್ಷೆಗಳನ್ನು ಸ್ಥಾಪಿಸುವುದು
ನಿಮ್ಮ ಸ್ಥಳವನ್ನು ಅತಿಯಾಗಿ ಮಾರಾಟ ಮಾಡಬೇಡಿ ಅಥವಾ ಗಮನಾರ್ಹವಾದ ಯಾವುದನ್ನಾದರೂ ಬಿಡಬೇಡಿ. ನಿಮ್ಮ ಸ್ಥಳ ಮತ್ತು ನಿಮ್ಮ ನೆರೆಹೊರೆಯ ಸಂಭವನೀಯ ನ್ಯೂನತೆಗಳ ಬಗ್ಗೆ ಸ್ಪಷ್ಟವಾಗಿ ಹೇಳುವುದು ಉತ್ತಮ, ಉದಾಹರಣೆಗೆ ನಿಮ್ಮ ಪರದೆಗಳಿಂದ ಸಾಕಷ್ಟು ಸೂರ್ಯನ ಬೆಳಕು ಹಾದು ಒಳಬರುತ್ತಿದ್ದರೆ ಅಥವಾ ನಿಮ್ಮ ಸ್ಥಳವು ನಿರ್ಮಾಣ ವಲಯದ ಸಮೀಪದಲ್ಲಿದ್ದರೆ.
ಈ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ನಿರೀಕ್ಷೆಗಳನ್ನು ಸರಿಯಾಗಿ ಹೊಂದಿಸಿಕೊಳ್ಳಿ:
- ನಿಮ್ಮ ಲಿಸ್ಟಿಂಗ್ ವಿವರಣೆಯಲ್ಲಿಗೆಸ್ಟ್‌ಗಳು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನಿಖರವಾಗಿ ತಿಳಿಸಿ ಮತ್ತು ಶೀರ್ಷಿಕೆಗಳಿರುವ ಫೋಟೋಗಳನ್ನು ಸೇರಿಸಿ. ಪ್ರಾಪರ್ಟಿಯಲ್ಲಿ ನಾಯಿ ಇದ್ದರೆ ಅಥವಾ ಅಥವಾ ಮೆಟ್ಟಿಲುಗಳು ಕೀರಲು ಶಬ್ದ ಮಾಡುತ್ತಿದ್ದರೆ, ಅದರ ಕುರಿತು ಗೆಸ್ಟ್‌ಗಳಿಗೆ ತಿಳಿಸಿ.
- ರೂಮ್‌ಗಳು ಮತ್ತು ಸ್ನಾನಗೃಹಗಳ ನಿಖರವಾದ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಲಿಸ್ಟಿಂಗ್ ಪ್ರಕಾರವು ನಿಮ್ಮ ನಿಜವಾದ ಸ್ಥಳವನ್ನು ಪ್ರತಿಬಿಂಬಿಸಬೇಕು—ಅದು ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿದ್ದರೆ, ಅದನ್ನು ಗ್ರಾಮೀಣ ಮನೆ ಎಂದು ವಿವರಿಸಬೇಡಿ.
- ನಿಮ್ಮ ಸೌಲಭ್ಯಗಳ ಕುರಿತು ಉತ್ಪ್ರೇಕ್ಷೆ ಮಾಡಬೇಡಿ. ನೀವು ಜನಪ್ರಿಯ ಆಕರ್ಷಣೀಯ ಸ್ಥಳದಿಂದ ಒಂದು ಗಂಟೆ ದೂರದಲ್ಲಿದ್ದರೆ, ನೀವು ಹತ್ತಿರದಲ್ಲಿದ್ದೀರಿ ಎಂದು ಹೇಳಬೇಡಿ—ನೀವು ಎಷ್ಟು ದೂರದಲ್ಲಿದ್ದೀರಿ ಎಂಬುದರ ಕುರಿತು ನಿರ್ದಿಷ್ಟವಾಗಿ ತಿಳಿಸಿ. ನಿಮ್ಮ ಪೂಲ್ ಅಥವಾ ಹಾಟ್ ಟಬ್ ಬಳಕೆಯ ಕಾಲೋಚಿತ ತೆರೆಯುವ ಅಥವಾ ಮುಚ್ಚುವ ಸಮಯವನ್ನು ನಿಗದಿಪಡಿಸಿದ್ದರೆ, ಅದರ ಮಾಹಿತಿಯನ್ನು ನಿಮ್ಮ ಲಿಂಸ್ಟಿಂಗ್‌ನಲ್ಲಿ ಸೇರಿಸಿ.
ನಿಮ್ಮ ಗೆಸ್ಟ್‌ಗಳನ್ನು ಸಂತೋಷಪಡಿಸುವುದು
ಯಶಸ್ವಿ ಹೋಸ್ಟ್‌ಗಳು ಕಡಿಮೆ ಭರವಸೆ ನೀಡುತ್ತಾರೆ ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಾರೆ. ಇದರರ್ಥ, ಅವರು ಲಿಸ್ಟಿಂಗ್ ವಿವರಗಳನ್ನು ಉತ್ಪ್ರೇಕ್ಷೆ ಮಾಡುವುದಿಲ್ಲ, ಅದರ ಬದಲಿಗೆ ಅತ್ಯುತ್ತಮ ಆತಿಥ್ಯ ಸೇವೆಯನ್ನು ಒದಗಿಸಲು ತಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಾರೆ.
ಚೆಕ್-ಇನ್ ಸಮಯದಲ್ಲಿ ನಿಮ್ಮ ಗೆಸ್ಟ್‌ಗಳನ್ನು ಬೆರಗುಗೊಳಿಸಲು ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಿ:
- ನೈಜವಾಗಿರುವಂತೆ ಕಾಣುವ ಫೋಟೋಗಳನ್ನು ಒದಗಿಸಿ. ಅಲ್ಟ್ರಾ-ವೈಡ್ ಆ್ಯಂಗಲ್‌ನಿಂದ ತೆಗೆದ ಹಾಗೂ ಅತಿಯಾಗಿ-ಎಡಿಟ್ ಮಾಡಿದ ಫೋಟೋಗಳನ್ನು ಸೇರಿಸಬೇಡಿ, ಇದು ಸ್ಥಳವನ್ನು ನೈಜವಾಗಿರುವುದಕ್ಕಿಂತ ದೊಡ್ಡದಾಗಿ ಅಥವಾ ಪ್ರಕಾಶಮಾನವಾಗಿ ಕಾಣುವಂತೆ ಮಾಡಬಹುದು. ಕೆಲವು ಸ್ಥಳಗಳಲ್ಲಿ, ನೀವು Airbnb ನಿಂದ ವೃತ್ತಿಪರ ಫೋಟೋಗ್ರಾಫರ್ ಅನ್ನು ನೇಮಿಸಿಕೊಳ್ಳಬಹುದು.
- ದಿನನಿತ್ಯದ ನಿರ್ವಹಣೆ ಮಾಡುವುದನ್ನು ಅಳವಡಿಸಿಕೊಳ್ಳಿ. ಲಿಸ್ಟ್ ಮಾಡಲಾದ ಎಲ್ಲವೂ ಲಭ್ಯವಿದೆಯೇ ಮತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ದೃಢೀಕರಿಸಿಕೊಳ್ಳಲು ನಿಮ್ಮ ಸ್ಥಳವನ್ನು ಆಗಾಗ್ಗೆ ಪರಿಶೀಲಿಸಿ. ನಿಮ್ಮಲ್ಲಿ ಹಾಟ್ ಟಬ್, ಈಜುಕೊಳ, ಡಿಶ್‌ವಾಶರ್ ಹಾಗೂ ಮುಂತಾದವುಗಳು ಇದ್ದರೆ, ಗೆಸ್ಟ್‌ಗಳು ಆಗಮಿಸುವ ಮೊದಲು ಅವು ನಿರ್ಮಲವಾಗಿ ಸ್ವಚ್ಛವಾಗಿವೆ ಹಾಗೂ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ದೃಢೀಕರಿಸಿಕೊಳ್ಳಿ.
- ನಿಮ್ಮ ಗೆಸ್ಟ್‌ಗಳಿಗೆ ಮೆಚ್ಚುಗೆಯನ್ನು ತೋರಿಸಲುಹೆಚ್ಚುವರಿಯಾಗಿ ಏನನ್ನಾದರೂ ನೀಡಿ . ಇದು ಕೈಬರಹದ ವೆಲ್‌ಕಮ್ ನೋಟ್ ಅಥವಾ ಕುಕೀಗಳ ಬಾಕ್ಸ್‌ನಂತಿರುವ ಚಿಕ್ಕ ವಸ್ತುವಾಗಿರಬಹುದು.