ಹೋಸ್ಟ್‌ಗಳಿಗಾಗಿ AirCover ಹೇಗೆ ಕಾರ್ಯನಿರ್ವಹಿಸುತ್ತದೆ
ಹೋಸ್ಟ್‌ಗಳಿಗಾಗಿ AirCover ನೀವು ಪ್ರತಿ ಬಾರಿ ಗೆಸ್ಟ್‌ಗಳನ್ನು ಸ್ವಾಗತಿಸಿದಾಗಲೂ ರಕ್ಷಣೆಯನ್ನು ಒದಗಿಸುತ್ತದೆ. ಗೆಸ್ಟ್ ಗುರುತು ದೃಢೀಕರಣ, ರಿಸರ್ವೇಶನ್ ತಪಾಸಣೆ, $1 ದಶಲಕ್ಷ USD ಹೋಸ್ಟ್ ಹೊಣೆಗಾರಿಕೆ ವಿಮೆ ಮತ್ತು $3 ದಶಲಕ್ಷ USD ಹೊಸ್ಟ್ ಹಾನಿ ರಕ್ಷಣೆ, ನಿಮ್ಮ ಬೆಲೆಬಾಳುವ ವಸ್ತುಗಳು, ನಿಲುಗಡೆ ಮಾಡಿದ ಕಾರುಗಳು ಮತ್ತು ನಿಮ್ಮ ಪ್ರಾಪರ್ಟಿಯಲ್ಲಿನ ದೋಣಿಗಳಿಗೆ ರಕ್ಷಣೆಯನ್ನು ಇದು ಒಳಗೊಂಡಿದೆ.
ಗೆಸ್ಟ್ ಗುರುತಿನ ಪರಿಶೀಲನೆ
ನಮ್ಮ ಸಮುದಾಯವು ನಂಬಿಕೆಯಲ್ಲಿ ಬೇರೂರಿದೆ. ಅದಕ್ಕಾಗಿಯೇ ಎಲ್ಲಾ ಬುಕಿಂಗ್ ಗೆಸ್ಟ್‌ಗಳು ನಮ್ಮ ಗುರುತಿನ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನಾವು ಗೆಸ್ಟ್‌ನ ಗುರುತನ್ನು ಪರಿಶೀಲಿಸಿದಾಗ, ಅವರ ಕಾನೂನುಬದ್ಧ ಹೆಸರು, ವಿಳಾಸ, ಫೋನ್ ಸಂಖ್ಯೆ ಅಥವಾ ಇತರ ಸಂಪರ್ಕ ವಿವರಗಳಂತಹ ಕೆಲವು ವೈಯಕ್ತಿಕ ಮಾಹಿತಿಯನ್ನು ನಾವು ಪರಿಶೀಲಿಸುತ್ತೇವೆ.
ಗೆಸ್ಟ್ ಅನ್ನು ಪರಿಶೀಲಿಸಿದ ನಂತರ, ಅವರು ಗುರುತಿನ ದೃಢೀಕರಿಸಿದ ಬ್ಯಾಡ್ಜ್ ಅನ್ನು ಪಡೆಯುತ್ತಾರೆ. ಇದನ್ನು ಅವರ ಪ್ರೊಫೈಲ್ ಫೋಟೋದ ಪಕ್ಕದಲ್ಲಿ ಚೆಕ್‌ಮಾರ್ಕ್‌ನೊಂದಿಗೆ ಕೆಂಪು ಬ್ಯಾಡ್ಜ್ ಆಗಿ ತೋರಿಸಲಾಗುತ್ತದೆ. ಇದರ ಜೊತೆಗೆ, ನಾವು US ಮೂಲದ ಗೆಸ್ಟ್‌ಗಳ ಮೇಲೆ ಹಿನ್ನೆಲೆ ಪರಿಶೀಲನೆಗಳನ್ನು ನಡೆಸಬಹುದು.
ಗೆಸ್ಟ್ ಗುರುತಿನ ಪರಿಶೀಲನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಿರಿ.
ರಿಸರ್ವೇಶನ್ ತಪಾಸಣೆ ತಂತ್ರಜ್ಞಾನ
ನಮ್ಮ ಸಮುದಾಯ ಅಡಚಣೆ ನೀತಿಯು ಅನಧಿಕೃತ ಮತ್ತು ಅಡ್ಡಿಪಡಿಸುವ ಪಾರ್ಟಿಗಳನ್ನು ನಿಷೇಧಿಸುತ್ತದೆ. ಆ ನೀತಿಯನ್ನು ಜಾರಿಗೊಳಿಸಲು ಮತ್ತು ಅಡ್ಡಿಪಡಿಸುವ ಪಾರ್ಟಿಗಳ ಸಾಧ್ಯತೆಯನ್ನು ಕಡಿಮೆ ಮಾಡಲು ನಾವು ಸ್ವಾಮ್ಯದ ರಿಸರ್ವೇಶನ್ ತಪಾಸಣಾ ತಂತ್ರಜ್ಞಾನವನ್ನು ಬಳಸುತ್ತೇವೆ.
ಬುಕಿಂಗ್ ಅನ್ನು ನಿರ್ಬಂಧಿಸಬೇಕೆ ಎಂದು ನಿರ್ಧರಿಸಲು ಸಿಸ್ಟಮ್ ಹಲವಾರು ಅಂಶಗಳನ್ನು ನೋಡುತ್ತದೆ. ಇವುಗಳಲ್ಲಿ ಬುಕ್ ಮಾಡಲಾಗುತ್ತಿರುವ ಲಿಸ್ಟಿಂಗ್ ಪ್ರಕಾರ, ವಾಸ್ತವ್ಯದ ಅವಧಿ, ಗೆಸ್ಟ್‌ಗಳ ಸ್ಥಳದಿಂದ ಲಿಸ್ಟಿಂಗ್‌ಗೆ ಇರುವ ದೂರ ಮತ್ತು ಬುಕಿಂಗ್ ಕೊನೆಯ ನಿಮಿಷದಲ್ಲಿ ಆಗಿದೆಯೇ ಎಂಬುದು ಮತ್ತು ಇನ್ನೂ ಅನೇಕ ಸೂಚನೆಗಳು ಸೇರಿವೆ.
ರಿಸರ್ವೇಶನ್ ತಪಾಸಣಾ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಿರಿ.
ಹೋಸ್ಟ್ ಹಾನಿ ರಕ್ಷಣೆ
ಹೋಸ್ಟ್ ಹಾನಿ ರಕ್ಷಣೆ, ಹೋಸ್ಟ್‌ಗಳಿಗಾಗಿ AirCover ನ ಭಾಗವಾಗಿದ್ದು, ಗೆಸ್ಟ್ ನಿಮ್ಮ ಸ್ಥಳದಲ್ಲಿ ತಂಗುವಾಗ ನಿಮ್ಮ ಮನೆ ಅಥವಾ ವಸ್ತುಗಳಿಗೆ ಉಂಟಾಗುವ ಹಾನಿಗೆ ಪಾವತಿಸದಿದ್ದರೆ ಈ ರಕ್ಷಣೆಗಳನ್ನು ಒಳಗೊಂಡಿರುತ್ತದೆ.
- $3 ದಶಲಕ್ಷ USD ಹಾನಿ ರಕ್ಷಣೆ: ಇದು ನಿಮ್ಮ ಮನೆ ಮತ್ತು ಅದರ ವಸ್ತುಗಳು ಎರಡನ್ನೂ ಒಳಗೊಂಡಿರುತ್ತದೆ.
- ಕಲೆ ಮತ್ತು ಬೆಲೆಬಾಳುವ ವಸ್ತುಗಳ ರಕ್ಷಣೆ: ನಾವು ಲಲಿತಕಲೆಗಳು, ಆಭರಣಗಳು ಮತ್ತು ಸಂಗ್ರಹಣೆಗಳನ್ನು ರಕ್ಷಿಸುತ್ತೇವೆ, ಅದು ಹಾನಿಗೊಳಗಾದರೆ ಮರುಪಾವತಿ ಮಾಡಬಹುದು.
- ವಾಹನಗಳು ಮತ್ತು ದೋಣಿ ರಕ್ಷಣೆ: ನಿಮ್ಮ ಪ್ರಾಪರ್ಟಿಯಲ್ಲಿ ನೀವು ಪಾರ್ಕ್ ಮಾಡಿದ ಅಥವಾ ಸಂಗ್ರಹಿಸಿದ ಕಾರುಗಳು, ದೋಣಿಗಳು ಮತ್ತು ಇತರ ಜಲನೌಕೆಗಳಿಗೆ ನಾವು ಹಾನಿ ರಕ್ಷಣೆಯನ್ನು ಒದಗಿಸುತ್ತೇವೆ.
- ಸಾಕುಪ್ರಾಣಿ ಹಾನಿ ರಕ್ಷಣೆ: ನಾಲ್ಕು ಕಾಲಿನ ಅತಿಥಿಗಳು ಮಾಡಿದ ಹಾನಿಗೆ ನಾವು ಪಾವತಿಸುತ್ತೇವೆ.
- ಆಳವಾದ ಸ್ವಚ್ಛಗೊಳಿಸುವಿಕೆ: ಕಲೆಗಳನ್ನು ಮತ್ತು ಹೊಗೆ ವಾಸನೆಯನ್ನು ತೆಗೆದುಹಾಕಲು ಅಗತ್ಯವಿರುವ ಹೆಚ್ಚುವರಿ ಶುಚಿಗೊಳಿಸುವ ಸೇವೆಗಳಿಗೆ ನಾವು ಮರುಪಾವತಿ ಮಾಡುತ್ತೇವೆ.
- ಆದಾಯ ನಷ್ಟ ರಕ್ಷಣೆ: ಗೆಸ್ಟ್‌ಗಳಿಂದ ಉಂಟಾದ ಹಾನಿಯಿಂದಾಗಿ ನೀವು ದೃಢೀಕರಿಸಿದ Airbnb ಬುಕಿಂಗ್‌ಗಳನ್ನು ರದ್ದುಗೊಳಿಸಿದರೆ ನಷ್ಟವಾದ ಆದಾಯಕ್ಕಾಗಿ ನಾವು ನಿಮಗೆ ಮರುಪಾವತಿಸುತ್ತೇವೆ.
ಹೋಸ್ಟ್ ಹಾನಿ ರಕ್ಷಣೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಿರಿ.
ಸರಳ ಹಣ ಮರುಪಾವತಿ
ಗೆಸ್ಟ್ ನಿಮ್ಮ ಸ್ಥಳ ಅಥವಾ ವಸ್ತುಗಳನ್ನು ಹಾನಿಗೊಳಿಸಿದರೆ, ನೀವು (ಅಥವಾ ನಿಮ್ಮ ಪರವಾಗಿ ಕಾರ್ಯನಿರ್ವಹಿಸುವ ಪೂರ್ಣ ಪ್ರವೇಶ ಅನುಮತಿಗಳನ್ನು ಹೊಂದಿರುವ ಸಹ-ಹೋಸ್ಟ್) ಹಣ ಮರುಪಾವತಿ ವಿನಂತಿಯನ್ನು ಸಲ್ಲಿಸಲು ಮತ್ತು ಸಲ್ಲಿಸಿದ ಕ್ಷಣದಿಂದ ಹೊರಪಾವತಿ ಆಗುವವರೆಗೆ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಲು ನಮ್ಮ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಬಹುದು.
ನಿಮ್ಮ ವಿನಂತಿಯನ್ನು ಮೊದಲು ಗೆಸ್ಟ್‌ಗೆ ಕಳುಹಿಸಲಾಗುತ್ತದೆ. ಗೆಸ್ಟ್ ಪ್ರತಿಕ್ರಿಯಿಸದಿದ್ದರೆ ಅಥವಾ 24 ಗಂಟೆಗಳ ಒಳಗೆ ಪಾವತಿಸದಿದ್ದರೆ, ನೀವು Airbnb ಅನ್ನು ಸೇರಿಸಿಕೊಳ್ಳಬಹುದು.
ಹೋಸ್ಟ್ ಹೊಣೆಗಾರಿಕೆ ವಿಮೆ
ಹೋಸ್ಟ್ ಹೊಣೆಗಾರಿಕೆ ವಿಮೆ, ಹೋಸ್ಟ್‌ಗಳಿಗಾಗಿ AirCover ನ ಭಾಗವಾಗಿದ್ದು, ನಿಮ್ಮ ಸ್ಥಳದಲ್ಲಿ ತಂಗುವಾಗ ಗೆಸ್ಟ್ ಗಾಯಗೊಂಡ ಅಥವಾ ಅವರ ವಸ್ತುಗಳು ಹಾನಿಗೊಳಗಾದ ಅಥವಾ ಕಳುವಾಗಿರುವ ಅಪರೂಪದ ಸಂದರ್ಭದಲ್ಲಿ ಹೋಸ್ಟ್‌ಗಳಿಗೆ $1 ದಶಲಕ್ಷ USD ವರೆಗೆ ಕವರೇಜ್ ಅನ್ನು ಒದಗಿಸುತ್ತದೆ. ಹೋಸ್ಟ್ ಮಾಡಲು ನಿಮಗೆ ಸಹಾಯ ಮಾಡುವ, ಸಹ-ಹೋಸ್ಟ್‌ಗಳು ಮತ್ತು ಸ್ವಚ್ಛತಾ ಸಿಬ್ಬಂದಿಗಳಂತಹ ಜನರನ್ನು ಈ ವ್ಯಾಪ್ತಿಯಲ್ಲಿ ಒಳಗೊಳ್ಳಲಾಗಿದೆ.
ನೀವು ಈ ಕೆಳಗಿನವುಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗಿರುವುದು ಕಂಡುಬಂದಲ್ಲಿ ಹೋಸ್ಟ್ ಹೊಣೆಗಾರಿಕೆ ವಿಮೆ ನಿಮಗೆ ವ್ಯಾಪ್ತಿ ಒದಗಿಸುತ್ತದೆ:
- ಗೆಸ್ಟ್‌ಗೆ (ಅಥವಾ ಇತರರಿಗೆ) ದೈಹಿಕ ಗಾಯ.
- ಗೆಸ್ಟ್‌ಗೆ (ಅಥವಾ ಇತರರಿಗೆ) ಸೇರಿದ ಆಸ್ತಿಯ ಹಾನಿ ಅಥವಾ ಕಳ್ಳತನ.
- ಕಟ್ಟಡದ ಲಾಬಿಗಳು ಮತ್ತು ಹತ್ತಿರದ ಪ್ರಾಪರ್ಟಿಗಳಂತಹ ಸಾಮಾನ್ಯ ಪ್ರದೇಶಗಳಿಗೆ ಗೆಸ್ಟ್ (ಅಥವಾ ಇತರರು) ಉಂಟುಮಾಡಿದ ಹಾನಿ.
ಕ್ಲೈಮ್ ಸಲ್ಲಿಸಲು ನಮ್ಮ ಹೊಣೆಗಾರಿಕೆ ವಿಮಾ ಇನ್‌ಟೇಕ್ ಫಾರ್ಮ್ ಅನ್ನು ಬಳಸಿ. ನೀವು ಒದಗಿಸುವ ಮಾಹಿತಿಯನ್ನು ನಾವು ನಮ್ಮ ವಿಶ್ವಾಸಾರ್ಹ ಥರ್ಡ್ ಪಾರ್ಟಿ ವಿಮಾದಾರರಿಗೆ ಕಳುಹಿಸುತ್ತೇವೆ, ಅವರು ನಿಮ್ಮ ಕ್ಲೈಮ್ ಅನ್ನು ಪ್ರತಿನಿಧಿಗೆ ನಿಯೋಜಿಸುತ್ತಾರೆ. ವಿಮಾ ಪಾಲಿಸಿಯ ನಿಯಮಗಳ ಪ್ರಕಾರ ಅವರು ನಿಮ್ಮ ಕ್ಲೈಮ್ ಅನ್ನು ಪರಿಹರಿಸುತ್ತಾರೆ.
ಹೋಸ್ಟ್ ಹೊಣೆಗಾರಿಕೆ ವಿಮೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಿರಿ.
ನಿಮ್ಮ ಮನೆಯಲ್ಲಿ Airbnb ಸೇವೆಗಳು
ಹೋಸ್ಟ್‌ಗಳಿಗಾಗಿ AirCover ಮೂಲಕ ನೀವು ಹೋಸ್ಟ್ ಹೊಣೆಗಾರಿಕೆಯ ವಿಮೆಯ ವ್ಯಾಪ್ತಿಯಲ್ಲಿ ಬರುವ ರೀತಿಯಲ್ಲೇ, ಸೇವೆಯ ಹೋಸ್ಟ್‌ಗಳು Airbnb ಯ ಅನುಭವಗಳು ಮತ್ತು ಸೇವೆಗಳ ಹೊಣೆಗಾರಿಕೆಯ ವಿಮೆಯ ವ್ಯಾಪ್ತಿಯಲ್ಲಿ ಬರುತ್ತಾರೆ. ಸೇವೆಯನ್ನು ಒದಗಿಸುವಾಗ ಎಲ್ಲಾ ಸೇವಾ ಹೋಸ್ಟ್‌ಗಳು ತಮ್ಮ ವ್ಯವಹಾರಕ್ಕೆ ಸೂಕ್ತವಾದ ಹೊಣೆಗಾರಿಕೆಯ ವಿಮೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ.
ನಿಮ್ಮ ಮನೆಯಲ್ಲಿ Airbnb ಸೇವೆಯು ನಡೆದಾಗ, ನಿಮ್ಮ ಮನೆ ಅಥವಾ ವಸ್ತುಗಳನ್ನು ಹಾನಿಗೊಳಿಸುವುದಕ್ಕೆ ಸೇವೆಯ ಹೋಸ್ಟ್ ಜವಾಬ್ದಾರರಾಗಿದ್ದರೆ ಅನುಭವಗಳು ಮತ್ತು ಸೇವೆಗಳ ಹೊಣೆಗಾರಿಕೆ ವಿಮೆ ಅನ್ವಯಿಸುತ್ತದೆ.
ಅನುಭವಗಳು ಮತ್ತು ಸೇವೆಗಳ ಹೊಣೆಗಾರಿಕೆ ವಿಮೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಿರಿ.
ಹೋಸ್ಟ್‌ಗಳಿಗಾಗಿ AirCover ಹೋಸ್ಟ್ ಹಾನಿ ರಕ್ಷಣೆ, ಹೋಸ್ಟ್ ಹೊಣೆಗಾರಿಕೆ ವಿಮೆ ಮತ್ತು ಅನುಭವಗಳು ಮತ್ತು ಸೇವೆಗಳ ಹೊಣೆಗಾರಿಕೆ ವಿಮೆ ಜಪಾನ್‌ನಲ್ಲಿ ವಾಸ್ತವ್ಯಗಳನ್ನು ಅಥವಾ ಅನುಭವಗಳನ್ನು ನೀಡುವ ಹೋಸ್ಟ್‌ಗಳನ್ನು ಒಳಗೊಂಡಿರುವುದಿಲ್ಲ. ಅಲ್ಲಿ ಜಪಾನ್ ಹೋಸ್ಟ್ ವಿಮೆ ಮತ್ತು ಜಪಾನ್ ಅನುಭವ ರಕ್ಷಣೆ ವಿಮೆ ಅನ್ವಯವಾಗುತ್ತದೆ, ಅಥವಾ Airbnb Travel LLC ಮೂಲಕ ವಾಸ್ತವ್ಯಗಳನ್ನು ಒದಗಿಸುವ ಹೋಸ್ಟ್‌ಗಳನ್ನು ಒಳಗೊಂಡಿರುವುದಿಲ್ಲ. ಎಲ್ಲಾ ಕವರೇಜ್ ಮಿತಿಗಳನ್ನು USD ಯಲ್ಲಿ ತೋರಿಸಲಾಗಿದೆ.
ಹೋಸ್ಟ್ ಹೊಣೆಗಾರಿಕೆ ವಿಮೆ ಮತ್ತು ಅನುಭವಗಳು ಮತ್ತು ಸೇವೆಗಳ ಹೊಣೆಗಾರಿಕೆ ವಿಮೆಯನ್ನು ಥರ್ಡ್ ಪಾರ್ಟಿ ವಿಮಾದಾರರು ಅಂಡರ್‌ರೈಟ್ ಮಾಡುತ್ತಾರೆ.
ನೀವು UK ಯಲ್ಲಿ ಮನೆಗಳು, ಅನುಭವಗಳು ಅಥವಾ ಸೇವೆಗಳನ್ನು ಹೋಸ್ಟ್ ಮಾಡುತ್ತಿದ್ದರೆ, ಹೋಸ್ಟ್ ಹೊಣೆಗಾರಿಕೆ ಮತ್ತು ಅನುಭವಗಳು ಮತ್ತು ಸೇವೆಗಳ ಹೊಣೆಗಾರಿಕೆ ವಿಮೆ ಪಾಲಿಸಿಗಳು Zurich Insurance Company Ltd. ಮೂಲಕ ಅಂಡರ್‌ರೈಟ್ ಮಾಡಲ್ಪಡುತ್ತವೆ ಮತ್ತು Financial Conduct Authority ಇಂದ ಅಧಿಕೃತ ಮತ್ತು ನಿಯಂತ್ರಿಸಲ್ಪಡುವ Aon UK Limited ನ ನಿಯೋಜಿತ ಪ್ರತಿನಿಧಿಯಾದ Airbnb UK Services Limited ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ UK ಯ ಹೋಸ್ಟ್‌ಗಳಿಗೆ ವ್ಯವಸ್ಥೆ ಮಾಡಲ್ಪಡುತ್ತವೆ ಮತ್ತು ತೀರ್ಮಾನಿಲ್ಪಡುತ್ತವೆ. Aon ನ FCA ನೋಂದಣಿ ಸಂಖ್ಯೆ 310451 ಆಗಿದೆ. ನೀವು Financial Services Register ಗೆ ಭೇಟಿ ನೀಡುವ ಮೂಲಕ ಅಥವಾ FCA ಅನ್ನು 0800 111 6768 ಸಂಖ್ಯೆಯಲ್ಲಿ ಸಂಪರ್ಕಿಸುವ ಮೂಲಕ ಇದನ್ನು ಪರಿಶೀಲಿಸಬಹುದು. ಹೋಸ್ಟ್‌ಗಳಿಗಾಗಿ AirCover ನ ಅಡಿಯಲ್ಲಿ ಹೋಸ್ಟ್ ಹೊಣೆಗಾರಿಕೆ ಮತ್ತು ಅನುಭವಗಳ ಮತ್ತು ಸೇವೆಗಳ ಹೊಣೆಗಾರಿಕೆ ಪಾಲಿಸಿಗಳನ್ನು Financial Conduct Authority ನಿಯಂತ್ರಿಸುತ್ತದೆ. ಉಳಿದ ಉತ್ಪನ್ನಗಳು ಮತ್ತು ಸೇವೆಗಳು Airbnb UK Services Limited, FPAFF609LC ಏರ್ಪಡಿಸಿದ ನಿಯಂತ್ರಿತ ಉತ್ಪನ್ನಗಳಾಗಿರುವುದಿಲ್ಲ.
ನೀವು ಯುರೋಪಿಯನ್ ಆರ್ಥಿಕ ಪ್ರದೇಶದಲ್ಲಿ (EEA) ಮನೆಗಳು, ಅನುಭವಗಳು ಅಥವಾ ಸೇವೆಗಳನ್ನು ಹೋಸ್ಟ್ ಮಾಡುತ್ತಿದ್ದರೆ, ಹೋಸ್ಟ್ ಹೊಣೆಗಾರಿಕೆ ಮತ್ತು ಅನುಭವ ಮತ್ತು ಸೇವೆಗಳ ಹೊಣೆಗಾರಿಕೆ ವಿಮಾ ಪಾಲಿಸಿಗಳನ್ನು ಸ್ಪೇನ್‌ನಲ್ಲಿರುವ Zurich Insurance Europe AG ಶಾಖೆಯು ಅಂಡರ್‌ರೈಟ್ ಮಾಡುತ್ತದೆ ಮತ್ತು EEA ಯಲ್ಲಿನ Airbnb Spain Insurance Agency S.L.U. (ASIASL) ಹೋಸ್ಟ್‌ಗಳ ಅನುಕೂಲಕ್ಕಾಗಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವ್ಯವಸ್ಥೆಗೊಳಿಸುತ್ತದೆ ಮತ್ತು ಮುಕ್ತಾಯಗೊಳಿಸುತ್ತದೆ. ಇದು ವಿಮಾ ಪಿಂಚಣಿ ಮತ್ತು ನಿಧಿಗಳ ಡೈರೆಕ್ಟರೇಟ್ ಜನರಲ್ (DGSFP) ನಿಂದ ಮೇಲ್ವಿಚಾರಣೆ ಮಾಡಲ್ಪಡುವ ಮತ್ತು DGSFP ಯ ವಿಮಾ ವಿತರಕರ ರಿಜಿಸ್ಟ್ರಿಯಲ್ಲಿ AJ0364 ಸಂಖ್ಯೆಯೊಂದಿಗೆ ಸ್ಪೇನ್‌ನಲ್ಲಿ ನೋಂದಾಯಿಸಲ್ಪಟ್ಟಿರುವ ಸ್ವತಂತ್ರ ವಿಮಾ ಏಜೆನ್ಸಿಯಾಗಿದೆ. ನೀವು DGSFP ವಿಮಾ ವಿತರಕರ ನೋಂದಣಿಗೆ ಭೇಟಿ ನೀಡುವ ಮೂಲಕ ಈ ನೋಂದಣಿಯನ್ನು ಪರಿಶೀಲಿಸಬಹುದು ಮತ್ತು ನೀವು ASIASL ನ ಸಂಪೂರ್ಣ ವಿವರಗಳನ್ನು ಇಲ್ಲಿ ಪ್ರವೇಶಿಸಬಹುದು.
ಹೋಸ್ಟ್ ಹಾನಿ ರಕ್ಷಣೆಯು ವಿಮೆಯಲ್ಲ ಮತ್ತು ಹೋಸ್ಟ್ ಹೊಣೆಗಾರಿಕೆ ವಿಮೆಗೆ ಸಂಬಂಧ ಹೊಂದಿಲ್ಲ. ವಾಷಿಂಗ್ಟನ್ ಸ್ಟೇಟ್‌ನಲ್ಲಿನ ಲಿಸ್ಟಿಂಗ್‌ಗಳಿಗೆ, ಹೋಸ್ಟ್ ಹಾನಿ ರಕ್ಷಣೆಯ ಅಡಿಯಲ್ಲಿ Airbnb ಯ ಒಪ್ಪಂದದ ಬಾಧ್ಯತೆಗಳನ್ನು Airbnb ಖರೀದಿಸಿದ ವಿಮಾ ಪಾಲಿಸಿಯು ಒಳಗೊಂಡಿದೆ. ಹೋಸ್ಟ್‌ಗಳ ವಾಸ ಅಥವಾ ವ್ಯವಹಾರವು ಆಸ್ಟ್ರೇಲಿಯಾದ ಹೊರಗೆ ಇದ್ದರೆ, ಈ ಹೋಸ್ಟ್ ಹಾನಿ ರಕ್ಷಣೆ ನಿಯಮಗಳು ಅನ್ವಯವಾಗುತ್ತವೆ. ಹೊಸ್ಟ್‌ಗಳ ವಾಸ ಅಥವಾ ವ್ಯವಹಾರವು ಆಸ್ಟ್ರೇಲಿಯಾದೊಳಗೆ ಇದ್ದರೆ, ಹೋಸ್ಟ್ ಹಾನಿ ರಕ್ಷಣೆಯು ಆಸ್ಟ್ರೇಲಿಯನ್ ಬಳಕೆದಾರರಿಗಾಗಿ ಹೋಸ್ಟ್ ಹಾನಿ ರಕ್ಷಣೆಯ ನಿಯಮಗಳಿಗೆಒಳಪಟ್ಟಿರುತ್ತದೆ.
ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.
