ಹುಡುಕಾಟ ಇನ್‌ಪುಟ್‌ನಲ್ಲಿ ಟೈಪ್ ಮಾಡಿದ ನಂತರ ಸಲಹೆಗಳು ಕಾಣಿಸಿಕೊಳ್ಳುತ್ತವೆ. ವಿಮರ್ಶಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಬಾಣಗುರುತುಗಳನ್ನು ಬಳಸಿ. ಆಯ್ಕೆ ಮಾಡಲು ಎಂಟರ್ ಬಳಸಿ. ಆಯ್ಕೆ ಒಂದು ನುಡಿಗಟ್ಟು ಆಗಿದ್ದರೆ, ಆ ನುಡಿಗಟ್ಟನ್ನು ಹುಡುಕಾಟಕ್ಕೆ ಸಲ್ಲಿಸಲಾಗುತ್ತದೆ. ಸಲಹೆಯು ಒಂದು ಲಿಂಕ್ ಆಗಿದ್ದರೆ, ಬ್ರೌಸರ್ ಆ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.
ಹುಡುಕಾಟ ಇನ್‌ಪುಟ್‌ನಲ್ಲಿ ಟೈಪ್ ಮಾಡಿದ ನಂತರ ಸಲಹೆಗಳು ಕಾಣಿಸಿಕೊಳ್ಳುತ್ತವೆ. ವಿಮರ್ಶಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಬಾಣಗುರುತುಗಳನ್ನು ಬಳಸಿ. ಆಯ್ಕೆ ಮಾಡಲು ಎಂಟರ್ ಬಳಸಿ. ಆಯ್ಕೆ ಒಂದು ನುಡಿಗಟ್ಟು ಆಗಿದ್ದರೆ, ಆ ನುಡಿಗಟ್ಟನ್ನು ಹುಡುಕಾಟಕ್ಕೆ ಸಲ್ಲಿಸಲಾಗುತ್ತದೆ. ಸಲಹೆಯು ಒಂದು ಲಿಂಕ್ ಆಗಿದ್ದರೆ, ಬ್ರೌಸರ್ ಆ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.

ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳನ್ನು ಅರ್ಥಮಾಡಿಕೊಳ್ಳುವುದು

ರೇಟಿಂಗ್‌ಗಳು, ವಿಮರ್ಶೆಗಳು ಮತ್ತು ವಿಶ್ವಾಸಾರ್ಹತೆಯ ಆಧಾರದ ಮೇಲೆ ಲಿಸ್ಟಿಂಗ್‌ಗಳು ಎದ್ದು ಕಾಣುವಂತೆ ಮಾಡಲು ಇದು ಒಂದು ಮಾರ್ಗವಾಗಿದೆ.
Airbnb ಅವರಿಂದ ಸೆಪ್ಟೆಂ 17, 2025ರಂದು

Airbnb ಪ್ರಪಂಚದಾದ್ಯಂತ 8 ದಶಲಕ್ಷಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಪ್ರತಿಯೊಂದು ಮನೆಯೂ ಅನನ್ಯವಾಗಿದೆ ಮತ್ತು ಈ ಅನನ್ಯತೆಯೇ Airbnb ಯನ್ನು ವಿಶಿಷ್ಟವಾಗಿಸುತ್ತದೆ.

ಉಳಿಯಲು ಒಳ್ಳೆಯ ಸ್ಥಳವನ್ನು ಕಂಡುಕೊಳ್ಳುವ ಉತ್ತಮ ಮಾರ್ಗವೆಂದರೆ, ಗೆಸ್ಟ್‌ಗಳು ಯಾವ ಮನೆಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ತಿಳಿಯುವುದು. ಅದಕ್ಕಾಗಿಯೇ ನಾವು ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳನ್ನು ರಚಿಸಿದ್ದೇವೆ.

ಗೆಸ್ಟ್ ‌ಅಚ್ಚುಮೆಚ್ಚಿನವುಗಳು ಎಂದರೇನು?

ಗೆಸ್ಟ್‌ಗಳ ಪ್ರಕಾರ, Airbnb ಯಲ್ಲಿ ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳು ಅವರಿಗೆ ಅತ್ಯಂತ ಇಷ್ಟವಾದ ಮನೆಗಳ ಸಂಗ್ರಹವಾಗಿವೆ. ಅವು ಐವತ್ತು ಕೋಟಿಗೂ ಅಧಿಕ ಟ್ರಿಪ್‌ಗಳಿಂದ ರೇಟಿಂಗ್‌ಗಳು, ವಿಮರ್ಶೆಗಳು ಮತ್ತು ವಿಶ್ವಾಸಾರ್ಹತೆಯ ಡೇಟಾವನ್ನು ಆಧರಿಸಿವೆ. ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳನ್ನು ಪ್ರತಿದಿನ ನವೀಕರಿಸಲಾಗುತ್ತದೆ, ಹಾಗಾಗಿ ನಿಮ್ಮ ಲಿಸ್ಟಿಂಗ್ ಅನ್ನು ಈಗ ಸೇರಿಸಿರದಿದ್ದರೆ, ಶೀಘ್ರದಲ್ಲೇ ಸೇರಿಸಲ್ಪಡಬಹುದು.

ವಿವಿಧ ಅಂಶಗಳು ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳನ್ನು ಗುರುತಿಸಲು ಸಹಾಯ ಮಾಡುತ್ತವೆ, ಅವುಗಳೆಂದರೆ:

  • ಕಳೆದ 4 ವರ್ಷಗಳಲ್ಲಿ ಗೆಸ್ಟ್‌ಗಳಿಂದ ಕನಿಷ್ಠ 5 ವಿಮರ್ಶೆಗಳು, ಜೊತೆಗೆ ಕಳೆದ 2 ವರ್ಷಗಳಲ್ಲಿ ಕನಿಷ್ಠ 1 ವಿಮರ್ಶೆ
  • ಸರಾಸರಿ 4.9 ಸ್ಟಾರ್‌ಗಳಿಗಿಂತ ಹೆಚ್ಚಿರುವ ಅತ್ಯುತ್ತಮ ವಿಮರ್ಶೆಗಳು ಮತ್ತು ರೇಟಿಂಗ್‍‍‍ಗಳು
  • ಚೆಕ್-ಇನ್, ಸ್ವಚ್ಛತೆ, ನಿಖರತೆ, ಹೋಸ್ಟ್ ಸಂವಹನ, ಸ್ಥಳ ಮತ್ತು ಮೌಲ್ಯಕ್ಕಾಗಿ ಉನ್ನತ ರೇಟಿಂಗ್‌ಗಳು
  • ಹೋಸ್ಟ್ ರದ್ದತಿ ಮತ್ತು ಗುಣಮಟ್ಟ-ಸಂಬಂಧಿತ ಗ್ರಾಹಕ ಸೇವಾ ಸಮಸ್ಯೆಗಳು ಸರಾಸರಿ 1% ಗಿಂತ ಕಡಿಮೆ ಇರುವಂತಹ ವಿಶ್ವಾಸಾರ್ಹತೆಯ ಅತ್ಯುತ್ತಮ ದಾಖಲೆ

ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳನ್ನು ಹೇಗೆ ಹುಡುಕುವುದು

ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳು ಪ್ರಪಂಚದಾದ್ಯಂತ ಲಭ್ಯವಿವೆ ಮತ್ತು Airbnb ಯಲ್ಲಿ ಅವುಗಳನ್ನು ಹುಡುಕುವುದು ಸರಳವಾಗಿದೆ.

ಗೆಸ್ಟ್‌ಗಳ ಅಚ್ಚುಮೆಚ್ಚಿನ ಲಿಸ್ಟಿಂಗ್‍‍ಗಳು ಹುಡುಕಾಟ ಫಲಿತಾಂಶಗಳಲ್ಲಿ ಮತ್ತು ಲಿಸ್ಟಿಂಗ್ ಪುಟದಲ್ಲಿ ಒಂದು ಬ್ಯಾಡ್ಜ್ ಅನ್ನು ಹೊಂದಿರುತ್ತವೆ. ಪ್ರಯಾಣಿಕರಿಗೆ ಅಚ್ಚುಮೆಚ್ಚಿನವುಗಳನ್ನು ಹುಡುಕಲು ಫಿಲ್ಟರ್ ಅನುವು ಮಾಡಿಕೊಡುತ್ತದೆ.

ಗೆಸ್ಟ್ ‌ಅಚ್ಚುಮೆಚ್ಚಿನವುಗಳು ಮತ್ತು ಸೂಪರ್‌ಹೋಸ್ಟ್‌ಗಳು

ಅತ್ಯುತ್ತಮ ಆತಿಥ್ಯ ನೀಡಿದ ಸಾಧನೆಗಾಗಿ ಸೂಪರ್‌ಹೋಸ್ಟ್‌ಗಳಿಗೆ ಮಾನ್ಯತೆ ನೀಡಲಾಗುತ್ತದೆ. Airbnb ನ ಸೂಪರ್‌ಹೋಸ್ಟ್ ಪ್ರೋಗ್ರಾಂ ಬದಲಾಗುತ್ತಿಲ್ಲ. ಸೂಪರ್‌ಹೋಸ್ಟ್ ಮಾನದಂಡಗಳು ಹಾಗೇ ಇರುತ್ತವೆ ಮತ್ತು ನಾವು ಪ್ರತೀ ತ್ರೈಮಾಸಿಕದಲ್ಲಿ ಸೂಪರ್‌ಹೋಸ್ಟ್ ಕಾರ್ಯಕ್ಷಮತೆಯನ್ನು ಪರಿಶೀಲಿಸುವುದನ್ನು ಮುಂದುವರಿಸುತ್ತೇವೆ.

ನೀವು ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳಲ್ಲಿ ಸೇರಿಸಲಾದ ಲಿಸ್ಟಿಂಗ್ ಅನ್ನು ಹೊಂದಿರುವ ಸೂಪರ್‌ಹೋಸ್ಟ್ ಆಗಿದ್ದರೆ, ಎರಡನ್ನೂ ನಿಮ್ಮ ಲಿಸ್ಟಿಂಗ್ ಪುಟದಲ್ಲಿ ಹೈಲೈಟ್ ಮಾಡಲಾಗುತ್ತದೆ ಮತ್ತು ನಿಮ್ಮ ಲಿಸ್ಟಿಂಗ್ ಹುಡುಕಾಟ ಫಲಿತಾಂಶಗಳಲ್ಲಿ ಗೆಸ್ಟ್‌ಗಳ ಅಚ್ಚುಮೆಚ್ಚಿನ ಬ್ಯಾಡ್ಜ್ ಅನ್ನು ಹೊಂದಿರುತ್ತದೆ. ನೀವು ಇನ್ನೂ ಗೆಸ್ಟ್‌ಗಳ ಅಚ್ಚುಮೆಚ್ಚಿನದ್ದೆಂದು ಅರ್ಹತೆ ಪಡೆಯದ ಲಿಸ್ಟಿಂಗ್ ‌ ಹೊಂದಿರುವ ಸೂಪರ್‌ಹೋಸ್ಟ್ ಆಗಿದ್ದರೆ, ನಿಮ್ಮ ಲಿಸ್ಟಿಂಗ್ ಪುಟದಲ್ಲಿ ಮತ್ತು ಹುಡುಕಾಟ ಫಲಿತಾಂಶಗಳಲ್ಲಿ, ಎರಡರಲ್ಲೂ ನಿಮ್ಮನ್ನು ಈಗಲೂ ಸೂಪರ್‌ಹೋಸ್ಟ್ ಬ್ಯಾಡ್ಜ್‌ನೊಂದಿಗೆ ಗುರುತಿಸಲಾಗುತ್ತದೆ.

ಗೆಸ್ಟ್‌ಗಳ ಅಚ್ಚುಮೆಚ್ಚಿನ ಬ್ಯಾಡ್ಜ್‌ಗೆ ಅರ್ಹತೆಯನ್ನು ನಿರ್ಧರಿಸುವಾಗ ನಿಮ್ಮ ಪ್ರತಿಯೊಂದು ಲಿಸ್ಟಿಂಗ್‍‍ಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ.

ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

Airbnb
ಸೆಪ್ಟೆಂ 17, 2025
ಇದು ಸಹಾಯಕವಾಗಿದೆಯೇ?