ಹುಡುಕಾಟ ಇನ್‌ಪುಟ್‌ನಲ್ಲಿ ಟೈಪ್ ಮಾಡಿದ ನಂತರ ಸಲಹೆಗಳು ಕಾಣಿಸಿಕೊಳ್ಳುತ್ತವೆ. ವಿಮರ್ಶಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಬಾಣಗುರುತುಗಳನ್ನು ಬಳಸಿ. ಆಯ್ಕೆ ಮಾಡಲು ಎಂಟರ್ ಬಳಸಿ. ಆಯ್ಕೆ ಒಂದು ನುಡಿಗಟ್ಟು ಆಗಿದ್ದರೆ, ಆ ನುಡಿಗಟ್ಟನ್ನು ಹುಡುಕಾಟಕ್ಕೆ ಸಲ್ಲಿಸಲಾಗುತ್ತದೆ. ಸಲಹೆಯು ಒಂದು ಲಿಂಕ್ ಆಗಿದ್ದರೆ, ಬ್ರೌಸರ್ ಆ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.
ಹುಡುಕಾಟ ಇನ್‌ಪುಟ್‌ನಲ್ಲಿ ಟೈಪ್ ಮಾಡಿದ ನಂತರ ಸಲಹೆಗಳು ಕಾಣಿಸಿಕೊಳ್ಳುತ್ತವೆ. ವಿಮರ್ಶಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಬಾಣಗುರುತುಗಳನ್ನು ಬಳಸಿ. ಆಯ್ಕೆ ಮಾಡಲು ಎಂಟರ್ ಬಳಸಿ. ಆಯ್ಕೆ ಒಂದು ನುಡಿಗಟ್ಟು ಆಗಿದ್ದರೆ, ಆ ನುಡಿಗಟ್ಟನ್ನು ಹುಡುಕಾಟಕ್ಕೆ ಸಲ್ಲಿಸಲಾಗುತ್ತದೆ. ಸಲಹೆಯು ಒಂದು ಲಿಂಕ್ ಆಗಿದ್ದರೆ, ಬ್ರೌಸರ್ ಆ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.

ಸಹ-ಹೋಸ್ಟ್ ಡ್ಯಾಶ್‌ಬೋರ್ಡ್ ಅನ್ನು ಅನ್ವೇಷಿಸಿ

ನಿಮ್ಮ ಅಂಕಿಅಂಶಗಳನ್ನು ಟ್ರ್ಯಾಕ್ ಮಾಡಿ ಮತ್ತು ಹೋಸ್ಟ್‌ಗಳಿಗೆ ಪ್ರತಿಕ್ರಿಯಿಸಿ.
Airbnb ಅವರಿಂದ ಅಕ್ಟೋ 16, 2024ರಂದು
ಜೂನ್ 5, 2025 ನವೀಕರಿಸಲಾಗಿದೆ
ಸಹ-ಹೋಸ್ಟ್ ಡ್ಯಾಶ್‌ಬೋರ್ಡ್ ಅನ್ನು ಅನ್ವೇಷಿಸಿ
ಹೋಸ್ಟ್‌ಗಳೊಂದಿಗೆ ಸಂಪರ್ಕ ಸಾಧಿಸುವುದು
ಸಹ-ಹೋಸ್ಟ್ ಡ್ಯಾಶ್‌ಬೋರ್ಡ್ ಅನ್ನು ಅನ್ವೇಷಿಸಿ

ನಿಮ್ಮ ಡ್ಯಾಶ್‌ಬೋರ್ಡ್‌ ಸಹ-ಹೋಸ್ಟ್‌ ನೆಟ್‌ವರ್ಕ್‌ನಲ್ಲಿ ನಿಮ್ಮ ಯಶಸ್ಸಿನ ಕೀಲಿ ಕೈ ಆಗಿದೆ. ಅಲ್ಲಿ ನೀವು ಹೋಸ್ಟ್‌ಗಳೊಂದಿಗೆ ಸಂಪರ್ಕ ಸಾಧಿಸುತ್ತೀರಿ ಮತ್ತು ನಿಮ್ಮ ಗುರಿಗಳ ಕಡೆಗಿನ ಪ್ರಗತಿಯನ್ನು ಟ್ರ್ಯಾಕ್ ಮಾಡುತ್ತೀರಿ.

ನಿಮ್ಮ ಅಂಕಿಅಂಶಗಳನ್ನು ಅರ್ಥಮಾಡಿಕೊಳ್ಳುವುದು

ಈ ಅಂಕಿಅಂಶಗಳನ್ನು ನಿಮ್ಮ ಡ್ಯಾಶ್‌ಬೋರ್ಡ್‌ನ ವಿನಂತಿಗಳ ಟ್ಯಾಬ್‌ನಲ್ಲಿ ನೀವು ಕಾಣುತ್ತೀರಿ.

  • ಸರಾಸರಿ ರೇಟಿಂಗ್: ಹುಡುಕಾಟ ಫಲಿತಾಂಶಗಳಲ್ಲಿ ಗೋಚರಿಸಲು ನೀವು 4.7 ಅಥವಾ ಅದಕ್ಕಿಂತ ಹೆಚ್ಚಿನ ರೇಟಿಂಗ್ ಅನ್ನು ಕಾಯ್ದುಕೊಳ್ಳಬೇಕು. ನಿಮ್ಮ ರೇಟಿಂಗ್‌, ಕ್ಯಾಲೆಂಡರ್-ಮಾತ್ರ ಪ್ರವೇಶದೊಂದಿಗೆ ನೀವು ಸಹ-ಹೋಸ್ಟ್ ಮಾಡುವವುಗಳನ್ನು ಹೊರತುಪಡಿಸಿ, ನೀವು ಬೆಂಬಲಿಸುವ ಎಲ್ಲಾ ಲಿಸ್ಟಿಂಗ್‌ಗಳಿಗೆ ಕಳೆದ 12 ತಿಂಗಳುಗಳಲ್ಲಿ ಗೆಸ್ಟ್‌ಗಳ ಸರಾಸರಿ ಸ್ಟಾರ್ ರೇಟಿಂಗ್ ಆಗಿದೆ.
  • ಪ್ರತಿಕ್ರಿಯೆ ದರ: ನಿಮ್ಮ ಪ್ರತಿಕ್ರಿಯೆ ದರವು 90% ಕ್ಕಿಂತ ಕಡಿಮೆಯಾದರೆ ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಸಹ-ಹೋಸ್ಟ್ ಪ್ರೊಫೈಲ್ ಗೋಚರಿಸದೇ ಇರಬಹುದು. ನಿಮ್ಮ ಪ್ರತಿಕ್ರಿಯೆ ದರವು ನೀವು 24 ಗಂಟೆಗಳ ಒಳಗೆ ಉತ್ತರಿಸಿದ ಹೋಸ್ಟ್‌ಗಳಿಂದ ಬಂದ ಹೊಸ ವಿನಂತಿಗಳ ಶೇಕಡಾವಾರು ಪ್ರಮಾಣವಾಗಿದೆ. ಕಳೆದ 90 ದಿನಗಳ ಅವಧಿಗೆ ಇದನ್ನು ಲೆಕ್ಕಹಾಕಲಾಗುತ್ತದೆ.
  • ವೀಕ್ಷಿಸಿದ ಸಂದರ್ಶಕರು: ಕಳೆದ 90 ದಿನಗಳಲ್ಲಿ ನಿಮ್ಮ ಸಹ-ಹೋಸ್ಟ್ ಪ್ರೊಫೈಲ್‌ಗೆ ಭೇಟಿ ನೀಡಿದ ಅನನ್ಯ ಸಂದರ್ಶಕರ ಸಂಖ್ಯೆ ಇದಾಗಿದೆ.
  • ಸಂದರ್ಶಕರ ಪರಿವರ್ತನೆ: ಕಳೆದ 90 ದಿನಗಳಲ್ಲಿ ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಪ್ರೊಫೈಲ್ ಅನ್ನು ನೋಡಿದವರಲ್ಲಿ ನಿಮ್ಮನ್ನು ಸಂಪರ್ಕಿಸಿದ ಹೋಸ್ಟ್‌ಗಳ ಶೇಕಡಾವಾರು ಇದಾಗಿದೆ.

ಹೋಸ್ಟ್‌ಗಳಿಗೆ ಪ್ರತಿಕ್ರಿಯಿಸುವುದು

ನಿಮ್ಮ ವಿನಂತಿಗಳ ಟ್ಯಾಬ್‌ನಲ್ಲಿ ಮತ್ತು ನಿಮ್ಮ ಸಂದೇಶಗಳ ಟ್ಯಾಬ್‌ನಲ್ಲಿ ಹೋಸ್ಟ್‌ಗಳ ವಿನಂತಿಗಳು ಗೋಚರಿಸುತ್ತವೆ. ಅಧಿಸೂಚನೆಗಳನ್ನು ಆನ್ ಮಾಡಿ ಇದರಿಂದ ನೀವು ಎಂದಿಗೂ ವಿನಂತಿಯನ್ನು ಕಳೆದುಕೊಳ್ಳುವುದಿಲ್ಲ ಮತ್ತು ತ್ವರಿತವಾಗಿ ಪ್ರತಿಕ್ರಿಯಿಸಬಹುದು.

ನಿಮ್ಮ ವಿನಂತಿಗಳಲ್ಲಿ, ನೀವು ಇವುಗಳನ್ನು ಪ್ರವೇಶಿಸಬಹುದು:

  • ಹೋಸ್ಟ್‌‌ ಅವರ ಹೆಸರು
  • ಹೋ‌ಸ್ಟ್‌ ಅವರ ಲಿಸ್ಟಿಂಗ್ ವಿಳಾಸ
  • ಹೋಸ್ಟ್‌ ಅವರ ಸಂಪರ್ಕ ಮಾಹಿತಿ
  • ವಿನಂತಿಯ ದಿನಾಂಕ
  • ವಿನಂತಿಯ ಸ್ಟೇಟಸ್

ನೀವು ಈಗಾಗಲೇ ಸಹ-ಹೋಸ್ಟ್‌ ಮಾಡುತ್ತಿದ್ದರೆ, ಸಂಭಾವ್ಯ ಪಾಲುದಾರರಿಗೆ ಉಲ್ಲೇಖಗಳನ್ನು ಒದಗಿಸುವುದನ್ನು ಪರಿಗಣಿಸಿ. ನೀವು ಸಂದೇಶದಲ್ಲಿ, ಅಥವಾ ಹೋಸ್ಟ್‌ಗೆ ಬೇಕಿದ್ದ ರೀತಿಯಲ್ಲಿ ಉಲ್ಲೇಖಗಳನ್ನು ಹಂಚಿಕೊಳ್ಳಬಹುದು.

ಉಲ್ಲೇಖಗಳು ಯಶಸ್ವಿ ಪಾಲುದಾರಿಕೆಯ ಸಾಧ್ಯತೆಗಳನ್ನು ತಮಗೆ ಹೆಚ್ಚಿಸುತ್ತವೆ ಎಂದು ಫ್ರಾನ್ಸ್‌ನ ಕಾಂಬ್ಸ್-ಲಾ-ವಿಲ್ಲೆಯಲ್ಲಿ ಸಹ-ಹೋಸ್ಟ್ ಆಗಿರುವ ಜಿಮ್ಮಿ ಹೇಳುತ್ತಾರೆ. "ಹೋಸ್ಟ್‌ಗೆ, ನಮ್ಮ ಅಸ್ತಿತ್ವದಲ್ಲಿರುವ ಕ್ಲೈಂಟ್‌ಗಳಲ್ಲಿ ಒಬ್ಬರಿಂದ ದೊರೆಯುವ ಪ್ರೋತ್ಸಾಹಕ್ಕಿಂತ ಹೆಚ್ಚಿನದು ಯಾವುದೂ ಇಲ್ಲ," ಎಂದು ಅವರು ಹೇಳುತ್ತಾರೆ.

ಸಹ-ಹೋಸ್ಟ್ ನೆಟ್‌ವರ್ಕ್ ಪ್ರಸ್ತುತ ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಮೆಕ್ಸಿಕೊ, ಪ್ಯೂರ್ಟೋ ರಿಕೊ, ದಕ್ಷಿಣ ಕೊರಿಯಾ, ಸ್ಪೇನ್ ಮತ್ತು ಯುನೈಟೆಡ್ ಕಿಂಗ್‌ಡಮ್ (Airbnb Global Services ನಿಂದ ಸಂಚಾಲಿತ); ಕೆನಡಾ, ಯುನೈಟೆಡ್ ಸ್ಟೇಟ್ಸ್ (Airbnb Living LLC ನಿಂದ ಸಂಚಾಲಿತ) ಮತ್ತು ಬ್ರೆಜಿಲ್‌ನಲ್ಲಿ (Airbnb Plataforma Digital Ltda ನಿಂದ ಸಂಚಾಲಿತ) ಲಭ್ಯವಿದೆ.

ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

ಸಹ-ಹೋಸ್ಟ್ ಡ್ಯಾಶ್‌ಬೋರ್ಡ್ ಅನ್ನು ಅನ್ವೇಷಿಸಿ
ಹೋಸ್ಟ್‌ಗಳೊಂದಿಗೆ ಸಂಪರ್ಕ ಸಾಧಿಸುವುದು
ಸಹ-ಹೋಸ್ಟ್ ಡ್ಯಾಶ್‌ಬೋರ್ಡ್ ಅನ್ನು ಅನ್ವೇಷಿಸಿ
Airbnb
ಅಕ್ಟೋ 16, 2024
ಇದು ಸಹಾಯಕವಾಗಿದೆಯೇ?