ಪ್ರಬಲ ಸ್ಥಳೀಯ ಉಪಸ್ಥಿತಿಯನ್ನು ನಿರ್ಮಿಸಿ

ನಿಮನ್ನು ನೀವೇ ಪ್ರಚಾರ ಮಾಡಿಕೊಳ್ಳುವುದು ಹೇಗೆ ಮತ್ತು ರೆಫರಲ್‌ಗಳನ್ನು ಕಳುಹಿಸುವುದು ಹೇಗೆಂದು ತಿಳಿಯಿರಿ.
Airbnb ಅವರಿಂದ ಅಕ್ಟೋ 16, 2024ರಂದು
2 ನಿಮಿಷ ಓದಲು
ಮಾರ್ಚ್ 3, 2025 ನವೀಕರಿಸಲಾಗಿದೆ
ಪ್ರಬಲ ಸ್ಥಳೀಯ ಉಪಸ್ಥಿತಿಯನ್ನು ನಿರ್ಮಿಸಿ
ಯಶಸ್ಸನ್ನು ಕಂಡುಕೊಳ್ಳುವುದು
ಪ್ರಬಲ ಸ್ಥಳೀಯ ಉಪಸ್ಥಿತಿಯನ್ನು ನಿರ್ಮಿಸಿ

ಸಹ-ಹೋಸ್ಟ್ ನೆಟ್‌ವರ್ಕ್‌ನ ಹೊರಗಿನ ಜನರೊಂದಿಗೆ ಸಂಪರ್ಕ ಸಾಧಿಸುವುದು ನಿಮ್ಮ ಸಹ-ಹೋಸ್ಟಿಂಗ್ ವ್ಯವಹಾರವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ನಿಮ್ಮೊಂದಿಗೆ ಕೆಲಸ ಮಾಡಲು ನೀವು ಹೋಸ್ಟ್‌ಗಳನ್ನು ಆಹ್ವಾನಿಸಿದಾಗ ನೀವು ರೆಫರಲ್ ರಿವಾರ್ಡ್‌ಗಳನ್ನು ಗಳಿಸಲು ಅರ್ಹರಾಗಬಹುದು.

ನಿಮ್ಮನ್ನು ನೀವೇ ಪ್ರಚಾರ ಮಾಡಿಕೊಳ್ಳುವುದು

ಪ್ರಬಲ ಸ್ಥಳೀಯ ಉಪಸ್ಥಿತಿಯನ್ನು ನಿರ್ಮಿಸಲು ಆನ್‌ಲೈನ್ ಮತ್ತು ವ್ಯಕ್ತಿಗತ ಮಾರ್ಕೆಟಿಂಗ್‌ನ ಸಮ್ಮಿಶ್ರವನ್ನು ಪರಿಗಣಿಸಿ. ನೀವು ಪ್ರಾರಂಭಿಸಲು ಕೆಲವು ಐಡಿಯಾಗಳು:

  • ನೀವು ಲಭ್ಯರಿದ್ದೀರಿ ಎಂದು ನಿಮ್ಮ ನೆಟ್‌ವರ್ಕ್‌ಗೆ ತಿಳಿಸಿ. ನಿಮ್ಮ ಪ್ರೊಫೈಲ್ ಅನ್ನು ಸ್ನೇಹಿತರು, ಕುಟುಂಬ, ನೆರೆಹೊರೆಯವರು ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಿ. Airbnb ಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ನೀವು ಭಾವಿಸುವ ಪ್ರಾಪರ್ಟಿಯನ್ನು ಲಿಸ್ಟ್‌ ಮಾಡಲು ಮತ್ತು ಹೋಸ್ಟ್ ಮಾಡಲು ಅವರಿಗೆ ಸಹಾಯ ಮಾಡಿ.
  • ನಿಮ್ಮ ಗುತ್ತಿಗೆದಾರರೊಂದಿಗೆ ಸಹಕರಿಸಿ. ಸಹಾಯಕ್ಕಾಗಿ ಹುಡುಕುತ್ತಿರುವ ಹೋಸ್ಟ್‌ಗಳೊಂದಿಗೆ ಕೆಲಸ ಮಾಡುತ್ತಿದ್ದಾರೆಯೇ ಎಂದು ನಿಮ್ಮ ಶುಚಿಗೊಳಿಸುವ ಸಿಬ್ಬಂದಿ, ಲ್ಯಾಂಡ್‌ಸ್ಕೇಪ್‌ ಸಿಬ್ಬಂದಿ ಮತ್ತು ನಿರ್ವಹಣಾ ಕೆಲಸಗಾರರನ್ನು ಕೇಳಿ.
  • ಸಮುದಾಯ ಮತ್ತು ವರ್ಚುವಲ್ ಈವೆಂಟ್‌ಗಳಲ್ಲಿ ಪಾಲ್ಗೊಳ್ಳಿ. ಮನೆಮಾಲೀಕರು, ಸಣ್ಣ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖರಿಗೆ ನಿಮ್ಮನ್ನು ಪರಿಚಯಿಸುವ ಮೂಲಕ ನಿಮ್ಮ ನೆಟ್‌ವರ್ಕ್ ಅನ್ನು ವಿಸ್ತರಿಸಿ. ಕೆಲವು ವಾಕ್ಯಗಳಲ್ಲಿ ನಿಮ್ಮ ಸೇವೆಗಳನ್ನು ವಿವರಿಸಲು ಸಿದ್ಧರಾಗಿರಿ.

ಕ್ಯಾಲಿಫೋರ್ನಿಯಾದ ಪಾಮ್ ಸ್ಪ್ರಿಂಗ್ಸ್‌ನಲ್ಲಿ ಅನುಭವಿ ಸಹ-ಹೋಸ್ಟ್ ಆಗಿರುವ ಜಿಮ್ಮಿ ಅವರು "ಮುಖ್ಯವಾಗಿ ನನ್ನ ಸ್ಥಳೀಯ ಪ್ರದೇಶದಲ್ಲೇ ಬಾಯಿ ಮಾತಿನಿಂದ ಗೆಸ್ಟ್‌ಗಳನ್ನು ಕಂಡುಕೊಂಡಿದ್ದೇನೆ," ಎಂದು ಹೇಳುತ್ತಾರೆ. ಉದಾಹರಣೆಗೆ, ಅವರು ತಮ್ಮ ಪೂಲ್ ಶುಚಿಗೊಳಿಸುವ ಸಿಬ್ಬಂದಿ ಮೂಲಕ ಹೋಸ್ಟ್ ಮಾಡಲು ಎರಡು ಹೊಸ ಪ್ರಾಪರ್ಟಿಗಳನ್ನು ಕಂಡುಕೊಂಡರು.

ಇತರರ ನಡುವೆ ಎದ್ದುಕಾಣುವಂತೆ ಮಾಡುವುದು

ಇತರ ಸಹ-ಹೋಸ್ಟ್‌ಗಳು ಕೈಗೆತ್ತಿಕೊಳ್ಳಲು ಬಯಸದ ಕೆಲಸಗಳನ್ನು ನಿಭಾಯಿಸುವುದನ್ನು ಪರಿಗಣಿಸಿ. ನೀವು ಪ್ರಾರಂಭಿಸಲು ಕೆಲವು ಐಡಿಯಾಗಳು:

  • ಹೊಸ ಹೋಸ್ಟ್‌ಗಳಿಗೆ ಚೆಕ್‌ಲಿಸ್ಟ್‌ ಒದಗಿಸಿ. ಸೌಕರ್ಯಗಳು, ಶುಚಿಗೊಳಿಸುವಿಕೆ ಸಲಹೆಗಳು ಮತ್ತು ದಾಸ್ತಾನು ಇರಿಸಿಕೊಳ್ಳಬೇಕಾದ ಪ್ರಮುಖ ವಸ್ತುಗಳ ಕುರಿತು ಹೋಸ್ಟ್‌ಗಳಿಗೆ ಮಾರ್ಗದರ್ಶನ ನೀಡಿ.
  • ನಿಮ್ಮ ರಿಯಾಯಿತಿಗಳನ್ನು ಹೋಸ್ಟ್‌ ಜೊತೆ ಹಂಚಿಕೊಳ್ಳಿ. ಸೇವಾ ಪೂರೈಕೆದಾರರೊಂದಿಗಿನ ನಿಮ್ಮ ಸಂಬಂಧಗಳು, ನಿರ್ವಹಣೆ, ಲ್ಯಾಂಡ್‌ಸ್ಕೇಪಿಂಗ್, ಕಲೆ ಅಥವಾ ಮನೆ ಪೀಠೋಪಕರಣಗಳಂತಹ ಸವಲತ್ತುಗಳನ್ನು ಸೇರಿಸುವಾಗ ಹೋಸ್ಟ್‌ಗಳಿಗೆ ಹಣ ಉಳಿಸಲು ಸಹಾಯ ಮಾಡಬಹುದಾದರೆ ಅಂತಹ ಪೂರೈಕೆದಾರರನ್ನು ಪರಿಚಯಿಸಲು ಮುಂದೆ ಬನ್ನಿ.
  • ಗೆಸ್ಟ್‌ಗಳಿಗೆ ಸ್ವಾಗತ ಕಿಟ್‌ ಸಿದ್ಧಪಡಿಸಿ. ಕೈಬರಹದ ಟಿಪ್ಪಣಿ, ಗುಡಿ ಬಾಸ್ಕೆಟ್ ಮತ್ತು ಮುದ್ರಿತ ಮನೆ ಕೈಪಿಡಿಯನ್ನು ನೀವು ಸೇರಿಸಿಕೊಳ್ಳಬಹುದು.
  • ‌ಗೆಸ್ಟ್‌ಗಳಿಗಾಗಿ ಮಾರ್ಗದರ್ಶಿ ಪುಸ್ತಕವನ್ನು ರಚಿಸಿ. ಊಟ ಮಾಡಲು, ಶಾಪಿಂಗ್‌ಗೆ ಹೋಗಲು, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಮತ್ತು ಹೊರಾಂಗಣವನ್ನು ಆನಂದಿಸಲು ಹತ್ತಿರದ ಸ್ಥಳಗಳನ್ನು ಶಿಫಾರಸು ಮಾಡಲು ಹೋಸ್ಟ್‌ಗಳಿಗೆ ಸಹಾಯ ಮಾಡಲು ನಿಮ್ಮ ಸ್ಥಳೀಯ ಜ್ಞಾನವನ್ನು ಬಳಸಿ. ಅದನ್ನು ಅವರ ಲಿಸ್ಟಿಂಗ್‌ಗೆ ಸೇರಿಸಿ ಮತ್ತು ಅದನ್ನು ನಿಯಮಿತವಾಗಿ ಅಪ್‌ಡೇಟ್ ಮಾಡಿ.

ರೆಫರಲ್‌ಗಳನ್ನು ಕಳುಹಿಸುವುದು ಮತ್ತು ಪುರಸ್ಕಾರಗಳನ್ನು ಗಳಿಸುವುದು

ರೆಫರಲ್ ಲಿಂಕ್ ಕಳುಹಿಸುವ ಮೂಲಕ ನಿಮ್ಮೊಂದಿಗೆ ಪಾಲುದಾರರಾಗಲು ನೀವು ಹೋಸ್ಟ್‌ಗಳನ್ನು ಆಹ್ವಾನಿಸಬಹುದು.

  • ನಿಮ್ಮ ರೆಫರಲ್‌ಗಳ ಪುಟಕ್ಕೆ ಹೋಗಲು ಕೆಳಗಿನ ಬಟನ್‌ ಒತ್ತಿ.ನಿಮ್ಮ ಅನನ್ಯ ಲಿಂಕ್ ಅನ್ನು ಹೋಸ್ಟ್‌ಗಳೊಂದಿಗೆ ಹಂಚಿಕೊಳ್ಳಿ, ಮತ್ತು ಅವರನ್ನು ನಿಮ್ಮ ಸಹ-ಹೋಸ್ಟ್ ಪ್ರೊಫೈಲ್‌ಗೆ ನಿರ್ದೇಶಿಸಿ.
  • ನಿಮ್ಮ ಪ್ರೊಫೈಲ್‌ನಿಂದ ನಿಮಗೆ ಸಂದೇಶ ಕಳುಹಿಸಲು ಹೋಸ್ಟ್‌ಗಳನ್ನು ಕೇಳಿ.ಅವರು ಹಾಗೆ ಮಾಡಿದ ನಂತರ, ನಿಮಗೆ ಸಂಪರ್ಕಗೊಳ್ಳಲು ಮತ್ತು ಪ್ರಾರಂಭಿಸಲು ಸಾಧ್ಯವಾಗುತ್ತದೆ.
  • ಹೋಸ್ಟ್‌ಗಳೊಂದಿಗೆ ಫಾಲೋ-ಅಪ್‌ ಮಾಡಿ. ನಿಮ್ಮ ಡ್ಯಾಶ್‌ಬೋರ್ಡ್‌ನ ವಿನಂತಿಗಳ ಟ್ಯಾಬ್‌ನಲ್ಲಿ ಅವರ‌ ಸ್ಟೇಟಸ್‌ ಅನ್ನು ಟ್ರ್ಯಾಕ್ ಮಾಡಿ.

‌ಹೋಸ್ಟ್‌ಗಳು ತಮ್ಮ ಮೊದಲ ಅರ್ಹ ವಾಸ್ತವ್ಯವನ್ನು ಪೂರ್ಣಗೊಳಿಸಿದ ನಂತರ ನೀವು ರೆಫರಲ್ ಪುರಸ್ಕಾರವನ್ನು ಸ್ವೀಕರಿಸಲು ಅರ್ಹರಾಗಬಹುದು. ಯಾವ ಹೋಸ್ಟ್‌ಗಳು ಅರ್ಹರಾಗುತ್ತಾರೆ ಎಂಬುದನ್ನು ನಿಮ್ಮ ರೆಫರಲ್‌ಗಳ ಪುಟದಲ್ಲಿ ಕಂಡುಕೊಳ್ಳಿ.

ಸಹ-ಹೋಸ್ಟ್ ನೆಟ್‌ವರ್ಕ್ ಪ್ರಸ್ತುತ ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಮೆಕ್ಸಿಕೊ, ದಕ್ಷಿಣ ಕೊರಿಯಾ, ಸ್ಪೇನ್ ಮತ್ತು ಯುನೈಟೆಡ್ ಕಿಂಗ್‌ಡಮ್ (Airbnb Global Services ನಿಂದ ಸಂಚಾಲಿತ); ಕೆನಡಾ, ಯುನೈಟೆಡ್ ಸ್ಟೇಟ್ಸ್ (Airbnb Living LLC ನಿಂದ ಸಂಚಾಲಿತ) ಮತ್ತು ಬ್ರೆಜಿಲ್‌ನಲ್ಲಿ (Airbnb Plataforma Digital Ltda ನಿಂದ ಸಂಚಾಲಿತ) ಲಭ್ಯವಿದೆ.

ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

ಪ್ರಬಲ ಸ್ಥಳೀಯ ಉಪಸ್ಥಿತಿಯನ್ನು ನಿರ್ಮಿಸಿ
ಯಶಸ್ಸನ್ನು ಕಂಡುಕೊಳ್ಳುವುದು
ಪ್ರಬಲ ಸ್ಥಳೀಯ ಉಪಸ್ಥಿತಿಯನ್ನು ನಿರ್ಮಿಸಿ
Airbnb
ಅಕ್ಟೋ 16, 2024
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ