ನಿಮ್ಮ ಪಾಲುದಾರಿಕೆಯನ್ನು ಸ್ಥಾಪಿಸಿ

ಪ್ರತಿ ಹೋಸ್ಟ್‌ನ ಅಗತ್ಯಗಳು ಮತ್ತು ನೀವು ಹೇಗೆ ಸಹಕರಿಸುತ್ತೀರಿ ಎಂಬುದರ ಕುರಿತು ಚರ್ಚಿಸಿ.
Airbnb ಅವರಿಂದ ಅಕ್ಟೋ 16, 2024ರಂದು
2 ನಿಮಿಷ ಓದಲು
ಮಾರ್ಚ್ 3, 2025 ನವೀಕರಿಸಲಾಗಿದೆ
ನಿಮ್ಮ ಪಾಲುದಾರಿಕೆಯನ್ನು ಸ್ಥಾಪಿಸಿ
ಹೋಸ್ಟ್‌ಗಳೊಂದಿಗೆ ಸಂಪರ್ಕ ಸಾಧಿಸುವುದು
ನಿಮ್ಮ ಪಾಲುದಾರಿಕೆಯನ್ನು ಸ್ಥಾಪಿಸಿ

ಸಹ-ಹೋಸ್ಟ್ ನೆಟ್‌ವರ್ಕ್ ಮೂಲಕ ನೀವು ವಿನಂತಿಗಳನ್ನು ಸ್ವೀಕರಿಸಿದಾಗ, ಹೋಸ್ಟ್‌ ಜೊತೆಗೆ ನಿಮ್ಮ ಆರಂಭಿಕ ಸಂಭಾಷಣೆಗಳಲ್ಲಿ ನೀವು ಏನನ್ನು ಒಳಗೊಳ್ಳಲು ಬಯಸುತ್ತೀರಿ ಎಂಬುದರ ಕುರಿತು ಯೋಚಿಸಿ. ನಿರೀಕ್ಷೆಗಳನ್ನು ಮುಂಚಿತವಾಗಿ ಹೊಂದಿಸುವುದು ನಿಮಗೆ ಒಟ್ಟಿಗೆ ಕೆಲಸ ಮಾಡುವುದರ ಕುರಿತಂತೆ ನಿರ್ಧರಿಸಲು ಸಹಾಯ ಮಾಡುತ್ತದೆ ಮತ್ತು ಯಶಸ್ವಿ ಪಾಲುದಾರಿಕೆಗೆ ಅಡಿಪಾಯ ಹಾಕುತ್ತದೆ.

ಮೂಲಭೂತ ಅಂಶಗಳನ್ನು ತಿಳಿಸುವುದು

ಹೋಸ್ಟ್ ಮತ್ತು ಅವರ ಸ್ಥಳವನ್ನು ತಿಳಿದುಕೊಳ್ಳುವ ಮೂಲಕ ಪ್ರಾರಂಭಿಸಿ. ನೀವು ಈ ವಿಚಾರಗಳನ್ನು ಚರ್ಚಿಸಬಹುದು:

  • ಹೋಸ್ಟ್‌ನ ಅಗತ್ಯಗಳೇನು ಮತ್ತು ನೀವು ಹೇಗೆ ಸಹಾಯ ಮಾಡಬಹುದು
  • ನೀವು ಎಷ್ಟು ಶುಲ್ಕ ವಿಧಿಸುತ್ತೀರಿ ಮತ್ತು ನಿಮಗೆ ಹೇಗೆ ಪಾವತಿಸಬೇಕೆಂದು ನೀವು ಬಯಸುತ್ತೀರಿ
  • ಹೋಸ್ಟ್ ಎಷ್ಟು ಗಳಿಸಬಹುದೆಂದು ನಿರೀಕ್ಷಿಸುತ್ತಾರೆ
  • ನೀವು ಹೇಗೆ ಸಂವಹನ ನಡೆಸಲು ಬಯಸುತ್ತೀರಿ

ನಿಮ್ಮ ದೃಷ್ಟಿಕೋನವು ಹೋಸ್ಟ್‌ ಅವರದ್ದಕ್ಕೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, ಅರಿಜೋನಾದ ಸ್ಕಾಟ್ಸ್‌ಡೇಲ್‌ನಲ್ಲಿ ಸಹ-ಹೋಸ್ಟ್ ಆಗಿರುವ ಜಾನ್, ಪೀಠೋಪಕರಣಗಳು, ಲಿನೆನ್‌ಗಳು ಮತ್ತು ಸರಬರಾಜುಗಳಿಗಾಗಿ ಸಂಭಾವ್ಯ ಪಾಲುದಾರರಿಗೆ ಪ್ರತಿ ರೂಮ್‌ಗಾಗಿ ಚೆಕ್‌ಲಿಸ್ಟ್‌ ಕಳುಹಿಸುತ್ತಾರೆ.

ಗೆಸ್ಟ್‌ಗಳೊಂದಿಗೆ ಸಂವಹನ ನಡೆಸುವುದು

ಗೆಸ್ಟ್‌ಗಳು ಮತ್ತು ಇತರರೊಂದಿಗೆ ಸಕಾಲಿಕ, ಸ್ಪಷ್ಟವಾದ ಸಂಭಾಷಣೆಯು ನಿಮ್ಮ ಪಾಲುದಾರಿಕೆಯ ಪ್ರಮುಖ ಆಯಾಮವಾಗಿದೆ. ಇದಕ್ಕೆ ಯಾರು ಜವಾಬ್ದಾರರು ಎಂಬುದನ್ನು ಚರ್ಚಿಸಿ:

  • ಒಂದು ಲಿಸ್ಟಿಂಗ್ ತ್ವರಿತ ಬುಕಿಂಗ್ ಅನ್ನು ಬಳಸದಿದ್ದರೆ ಬುಕಿಂಗ್ ವಿನಂತಿಗಳಿಗೆ ಪ್ರತಿಕ್ರಿಯಿಸುವುದು
  • ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಗೆಸ್ಟ್‌ಗಳನ್ನು ಬೆಂಬಲಿಸುವುದು ಸೇರಿದಂತೆ ದೈನಂದಿನ ಮೆಸೇಜಿಂಗ್
  • ಸ್ವಚ್ಛಗೊಳಿಸುವವರು, ನಿರ್ವಹಣಾ ಕೆಲಸಗಾರರು ಮತ್ತು ಇತರ ಸಹ-ಹೋಸ್ಟ್‌ಗಳನ್ನು ನಿರ್ವಹಿಸುವುದು
  • ಪರಿಹಾರ ಪಾವತಿ ವಿನಂತಿಗಳನ್ನು ಸಲ್ಲಿಸುವುದು
  • ಸಹಾಯಕ್ಕಾಗಿ Airbnb ಬೆಂಬಲವನ್ನು ಸಂಪರ್ಕಿಸುವುದು

ಮುಂದಕ್ಕೆ ಚಲಿಸುವುದು

ಒಮ್ಮೆ ನೀವು ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿದರೆ, ನಿಮ್ಮ ಪಾಲುದಾರಿಕೆಯ ವಿವರಗಳನ್ನು ಅಧಿಕೃತ ಒಪ್ಪಂದದಲ್ಲಿ ನಮೂದಿಸುವುದನ್ನು ಪರಿಗಣಿಸಿ.

ನೀವು Airbnb ಯಲ್ಲಿ ಸಹಭಾಗಿತ್ವ ಹೊಂದುವಂತಾಗಲು ಹೋಸ್ಟ್ ನಿಮ್ಮನ್ನು ಲಿಸ್ಟಿಂಗ್‌ನಲ್ಲಿ ಸಹ-ಹೋಸ್ಟ್ ಆಗಲು ಆಹ್ವಾನಿಸಬಹುದು ಮತ್ತು ನಿಮ್ಮ ಅನುಮತಿಗಳನ್ನು ಹೊಂದಿಸಬಹುದು. ನೀವು ಆಹ್ವಾನವನ್ನು ಇಮೇಲ್ ಅಥವಾ SMS ನಲ್ಲಿ ಪಡೆಯುತ್ತೀರಿ. ಸ್ವೀಕರಿಸಲು ಅಥವಾ ನಿರಾಕರಿಸಲು ನಿಮಗೆ 14 ದಿನಗಳ ಕಾಲಾವಕಾಶವಿದೆ.

ನೀವು ಆಹ್ವಾನವನ್ನು ಸ್ವೀಕರಿಸಿದ ನಂತರ, Airbnb ಮೂಲಕ ಮಾಡುವ ಪ್ರತಿ ಬುಕಿಂಗ್‌ಗೆ ಹೋಸ್ಟ್ ತಮ್ಮ ಹೊರಪಾವತಿಯ ಭಾಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಆಯ್ಕೆ ಮಾಡಬಹುದು.* ಈ ಸಹಾಯ ಕೇಂದ್ರದ ಲೇಖನಗಳು ಸಹ-ಹೋಸ್ಟಿಂಗ್ ಟೂಲ್‌ಗಳು ಮತ್ತು ಅನುಮತಿಗಳನ್ನು ವಿವರಿಸುತ್ತವೆ:

*ಕೆಲವು ನಿರ್ಬಂಧಗಳು ಅನ್ವಯಿಸುತ್ತವೆ, ಇವು ಹೋಸ್ಟ್‌, ಸಹ-ಹೋಸ್ಟ್‌ ಮತ್ತು ಲಿಸ್ಟಿಂಗ್‌ನ ಸ್ಥಳವನ್ನು ಅವಲಂಬಿಸಿರುತ್ತವೆ.

ಸಹ-ಹೋಸ್ಟ್ ನೆಟ್‌ವರ್ಕ್ ಪ್ರಸ್ತುತ ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಮೆಕ್ಸಿಕೊ, ದಕ್ಷಿಣ ಕೊರಿಯಾ, ಸ್ಪೇನ್ ಮತ್ತು ಯುನೈಟೆಡ್ ಕಿಂಗ್‌ಡಮ್ (Airbnb Global Services ನಿಂದ ಸಂಚಾಲಿತ); ಕೆನಡಾ, ಯುನೈಟೆಡ್ ಸ್ಟೇಟ್ಸ್ (Airbnb Living LLC ನಿಂದ ಸಂಚಾಲಿತ); ಮತ್ತು ಬ್ರೆಜಿಲ್‌ನಲ್ಲಿ (Airbnb Plataforma Digital Ltda ನಿಂದ ಸಂಚಾಲಿತ) ಲಭ್ಯವಿದೆ.

ಪೂರ್ಣ ಪ್ರವೇಶ ಹೊಂದಿರುವ ಯಾವುದೇ ಸಹ-ಹೋಸ್ಟ್ ಹಾನಿಗೊಳಗಾದ ಅಥವಾ ಕಾಣೆಯಾದ ಐಟಂಗಳ ಕುರಿತು ವಿನಂತಿಗಳನ್ನು ಪರಿಹಾರ ಕೇಂದ್ರದಲ್ಲಿ ಪ್ರಾರಂಭಿಸಬಹುದು, ನಿರ್ವಹಿಸಬಹುದು ಅಥವಾ ಪರಿಹರಿಸಬಹುದು ಅಥವಾ ಹಣ ಮರುಪಾವತಿ ವಿನಂತಿಗಳನ್ನು ಹೋಸ್ಟ್‌ ಹಾನಿ ರಕ್ಷಣೆ ಅಡಿಯಲ್ಲಿ ಹೋಸ್ಟ್‌ಗಳ ಪರವಾಗಿ ಮಾಡಬಹುದು.

ಹೋಸ್ಟ್ ಹಾನಿ ರಕ್ಷಣೆ ವಿಮಾ ಪಾಲಿಸಿಯಲ್ಲ. ಜಪಾನ್‌ ಹೋಸ್ಟ್‌ ವಿಮೆ ಅನ್ವಯಿಸುವ ಜಪಾನ್‌ನಲ್ಲಿ ವಾಸ್ತವ್ಯಗಳನ್ನು ಒದಗಿಸುವ ಹೋಸ್ಟ್‌ಗಳನ್ನು ಇದು ರಕ್ಷಿಸುವುದಿಲ್ಲ. ಎಲ್ಲಾ ಕವರೇಜ್‌ ಮಿತಿಗಳನ್ನು USD ಯಲ್ಲಿ ತೋರಿಸಲಾಗಿದೆ ಎಂಬುದನ್ನು ನೆನಪಿನಲ್ಲಿಡಿ.

ವಾಷಿಂಗ್ಟನ್ ರಾಜ್ಯದಲ್ಲಿನ ಲಿಸ್ಟಿಂಗ್‌ಗಳಿಗೆ, ಹೋಸ್ಟ್ ಹಾನಿ ರಕ್ಷಣೆಯ ಅಡಿಯಲ್ಲಿ Airbnb ಯ ಒಪ್ಪಂದದ ಬಾಧ್ಯತೆಗಳನ್ನು Airbnb ಖರೀದಿಸಿದ ವಿಮಾ ಪಾಲಿಸಿಯು ಒಳಗೊಂಡಿದೆ.

ಆಸ್ಟ್ರೇಲಿಯಾವು ವಾಸ್ತವ್ಯದ ದೇಶ ಅಥವಾ ಲಿಸ್ಟಿಂಗ್‌ ಹೊಂದಿರುವ ದೇಶವಾಗಿರುವ ಹೋಸ್ಟ್‌ಗಳನ್ನು ಹೊರತುಪಡಿಸಿ

ಹೋಸ್ಟ್ ಹಾನಿ ರಕ್ಷಣೆಯು ನಿಯಮಗಳು, ಷರತ್ತುಗಳು ಮತ್ತು ಮಿತಿಗಳಿಗೆ ಒಳಪಟ್ಟಿರುತ್ತದೆ . ಅಂತಹ ಹೋಸ್ಟ್‌ಗಳಿಗೆ, ಹೋಸ್ಟ್ ಹಾನಿ ರಕ್ಷಣೆಯು ಈ ನಿಯಮಗಳು, ಷರತ್ತುಗಳು ಮತ್ತು ಮಿತಿಗಳಿಗೆಒಳಪಟ್ಟಿರುತ್ತದೆ.

ಈ ಲೇಖನದ ಪ್ರಕಟಣೆಯ ನಂತರ, ಅದರಲ್ಲಿ ಒಳಗೊಂಡಿರುವ ಮಾಹಿತಿಯು ಬದಲಾಗಿರಬಹುದು.

ನಿಮ್ಮ ಪಾಲುದಾರಿಕೆಯನ್ನು ಸ್ಥಾಪಿಸಿ
ಹೋಸ್ಟ್‌ಗಳೊಂದಿಗೆ ಸಂಪರ್ಕ ಸಾಧಿಸುವುದು
ನಿಮ್ಮ ಪಾಲುದಾರಿಕೆಯನ್ನು ಸ್ಥಾಪಿಸಿ
Airbnb
ಅಕ್ಟೋ 16, 2024
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ