5-ಸ್ಟಾರ್ ವಸತಿಯನ್ನು ಒದಗಿಸುವುದು

ನಿಮ್ಮ ಹೋಸ್ಟಿಂಗ್ ದಿನಚರಿಯನ್ನು ಸುಧಾರಿಸಲು ಈ ಸಲಹೆಗಳನ್ನು ಪ್ರಯತ್ನಿಸಿ.
Airbnb ಅವರಿಂದ ಫೆಬ್ರ 17, 2023ರಂದು
2 ನಿಮಿಷ ಓದಲು
ಫೆಬ್ರ 17, 2023 ನವೀಕರಿಸಲಾಗಿದೆ
ಗೆಸ್ಟ್‌ಗಳು ಉತ್ತಮ ವಿಮರ್ಶೆಗಳನ್ನು ಹೊಂದಿರುವ ಸ್ಥಳಗಳನ್ನು ಬುಕ್ ಮಾಡುವ ಸಾಧ್ಯತೆ ಹೆಚ್ಚು. ನೀವು ಕಡಿಮೆ ರೇಟಿಂಗ್‌ಗಳನ್ನು ಪಡೆಯುತ್ತಿದ್ದರೆ, ನಿಮ್ಮ ಗೆಸ್ಟ್‌ಗಳ ಅನುಭವಗಳನ್ನು ಸುಧಾರಿಸಲು ಮತ್ತು ಆ ಐದು-ಸ್ಟಾರ್ ವಿಮರ್ಶೆಗಳನ್ನು ಗಳಿಸಲು ನೀವು ಮಾಡಬಹುದಾದ ಕೆಲವು ವಿಷಯಗಳಿವೆ.

ನಿರೀಕ್ಷೆಗಳನ್ನು ಹೊಂದಿಸುವುದು

ನಿಮ್ಮ ಲಿಸ್ಟಿಂಗ್ ವಿವರಣೆಯು ನಿಮ್ಮ ಸ್ಥಳದ ಕುರಿತು ಸಂಪೂರ್ಣವಾಗಿ ಮತ್ತು ನಿಖರವಾಗಿ ವಿವರಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

  • ಅತಿಯಾಗಿ ಮಾರಾಟ ಮಾಡಬೇಡಿ. ಹಾಟ್ ಟಬ್ ಅಥವಾ ಫೈರ್‌ಪ್ಲೇಸ್‌ನಿಂದ ಹಿಡಿದು ಶಬ್ದ ಮಾಡುವ ಫ್ಲೋರ್‌ಬೋರ್ಡ್‌ಗಳು ಅಥವಾ ಬೀದಿಯಿಂದ ಬರುವ ಶಬ್ದದವರೆಗಿನ ಹೈಲೈಟ್‌ಗಳು ಮತ್ತು ಕ್ವಿರ್ಕ್‌ಗಳನ್ನು ಹಂಚಿಕೊಳ್ಳಿ.

  • ಉತ್ಕೃಷ್ಟ ಗುಣಮಟ್ಟದ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಹಾಗೂ ಫೋಟೋ ಶೀರ್ಷಿಕೆಗಳಲ್ಲಿನ ಲಿಸ್ಟಿಂಗ್ ವಿವರಣೆಯಲ್ಲಿ ಯಾವುದೇ ಸಂಭಾವ್ಯ ಸಮಸ್ಯೆಗಳಿದ್ದರೆ ಸೂಚಿಸಿ. ಎಲ್ಲಾ ಉನ್ನತ ಸೌಕರ್ಯಗಳನ್ನು ಒಳಗೊಂಡಂತೆ ಪ್ರತಿ ರೂಮ್ ಅಥವಾ ಪ್ರದೇಶದ ಎರಡರಿಂದ ಮೂರು ಫೋಟೋಗಳನ್ನು ತೆಗೆದುಕೊಳ್ಳಿ. 

  • ಅಲ್ಟ್ರಾ-ವೈಡ್ ಆ್ಯಂಗಲ್‌ಗಳಿಂದ ಫೋಟೋ ತೆಗೆಯಬೇಡಿ ಅಥವಾ ನಿಮ್ಮ ಫೋಟೋಗಳನ್ನು ಅತಿಯಾಗಿ ಎಡಿಟ್ ಮಾಡಬೇಡಿ. ಇದು ರೂಮ್‌ಗಳು ಇರುವುದಕ್ಕಿಂತ ದೊಡ್ಡದಾಗಿ ಅಥವಾ ಪ್ರಕಾಶಮಾನವಾಗಿ ಕಾಣುವಂತೆ ಮಾಡಬಹುದು.

ಸಫಲವಾಗಿ ಸಂವಹನ ನಡೆಸುವುದು

ನಿಮ್ಮ ಸ್ಥಳದಲ್ಲಿ ವಾಸ್ತವ್ಯ ಹೂಡುವ ಗೆಸ್ಟ್‌ಗಳಿಗೆ ನೀವು ಮಾತ್ರವೇ ಸಂಪರ್ಕಿಸಬೇಕಾದ ವ್ಯಕ್ತಿಯಾಗಿರುತ್ತೀರಿ ಎಂಬುದನ್ನು ನೆನಪಿಡಿ. 

  • ಕ್ರಿಯಾಶೀಲರಾಗಿರಿ ಹಾಗೂ ಚೆಕ್-ಇನ್ ಮಾಡುವ ಮೊದಲು ಗೆಸ್ಟ್‌ಗಳು ತಮ್ಮ ರೂಮ್‌ಗೆ ಪ್ರವೇಶಿಸುವ ನಿರ್ದೇಶನಗಳು ಮತ್ತು ಸೂಚನೆಗಳಂತಹ ಅಗತ್ಯವಿರುವ ಎಲ್ಲವನ್ನೂ ಅವರು ಹೊಂದಿದ್ದಾರೆ ಎಂದು ದೃಢೀಕರಿಸಿಕೊಳ್ಳಿ.  

  • ಗೆಸ್ಟ್‌ಗಳ ಸಂದೇಶಗಳಿಗೆಸಾಧ್ಯವಾದಷ್ಟು ಬೇಗ ಪ್ರತಿಕ್ರಿಯೆ ನೀಡಿ.

  • ಗೆಸ್ಟ್‌ಗಳನ್ನು ಸ್ವಾಗತಿಸಲು ನಿಮ್ಮ ಸಂದೇಶಗಳಲ್ಲಿಒಳಗೊಳ್ಳುವಿಕೆಯ ಭಾಷೆಯನ್ನು ಬಳಸುವುದು ಮುಖ್ಯವಾಗಿದೆ. 

  • ಸಂವಹನವನ್ನು ಸುಲಭಗೊಳಿಸಲುAirbnb ಆ್ಯಪ್‌ ಬಳಸಿ ಹಾಗೂ ತ್ವರಿತ ಪ್ರತಿಕ್ರಿಯೆಗಳು ಮತ್ತು ಶೆಡ್ಯೂಲ್ ಮಾಡಿರುವ ಸಂದೇಶಗಳಂತಹ ಸಾಧನಗಳನ್ನು ಬಳಸಿ. 

  • ಕನಿಷ್ಠ 24 ಗಂಟೆಗಳ ಮುಂಚಿತವಾಗಿಚೆಕ್-ಇನ್ ಸೂಚನೆಗಳನ್ನು ಕಳುಹಿಸಿ. ಇದರಿಂದ ಗೆಸ್ಟ್‌ಗಳಿಗೆ ಸೂಚನೆಗಳನ್ನು ಓದಲು ಹಾಗೂ ಪ್ರಶ್ನೆಗಳಿದ್ದರೆ ಕೇಳಲು ಸಮಯ ದೊರಕುತ್ತದೆ. ನಿಲುಕುವಿಕೆಯ ಅಗತ್ಯತೆಗಳನ್ನು ಹೊಂದಿರುವ ಗೆಸ್ಟ್‌ಗಳಿಗೆ ಇದು ವಿಶೇಷವಾಗಿ ಮುಖ್ಯವಾಗಿದೆ. 

ಗೆಸ್ಟ್‌ಗಳನ್ನು ಸ್ವಾಗತಿಸುವುದು

ಕೆಲವೊಮ್ಮೆ ನಾಲ್ಕು-ಸ್ಟಾರ್ ಮತ್ತು ಐದು-ಸ್ಟಾರ್ ವಿಮರ್ಶೆಯ ನಡುವಿನ ವ್ಯತ್ಯಾಸವು ವಿವರಗಳಿಗೆ ಗಮನ ಕೊಡುವಷ್ಟು ಸರಳವಾಗಿದೆ.

  • ಸ್ವಚ್ಛತೆಯೇ ಮುಖ್ಯವಾಗಿದೆ. ಎಲ್ಲಾ ನೆಲದ ಮೇಲ್ಮೈಗಳು, ಮಹಡಿಗಳು ಮತ್ತು ಬಟ್ಟೆಗಳು ಸ್ವಚ್ಛವಾಗಿವೆ ಮತ್ತು ಧೂಳು-ಮುಕ್ತವಾಗಿವೆ ಎಂದು ಖಚಿತಪಡಿಸಿಕೊಳ್ಳಿ. ಸ್ವಚ್ಛಗೊಳಿಸಿದ ನಂತರ, ಕೂದಲು ಅಥವಾ ಕೊಳಕು ಅಥವಾ ಧೂಳಿನ ಕಣಗಳ ಯಾವುದೇ ಕುರುಹುಗಳಿವೆಯಾ ಎಂದು ಪರಿಶೀಲಿಸಿ. ನಿಮ್ಮ ಸ್ಥಳವು ಅದ್ಭುತ ಆಗಿದ್ದರೂ ಸಹ, ಐದು-ಸ್ಟಾರ್ ವಿಮರ್ಶೆಗಳನ್ನು ಪಡೆಯಲು ಅದು ನಿರ್ಮಲವಾಗಿರಬೇಕು. 

  • ವೆಲ್‌ಕಮ್ ನೋಟ್ ಅಥವಾ ಆ್ಯಪ್‌ನಲ್ಲಿ ವೆಲ್‌ಕಮ್ ಮೆಸೇಜ್ ಕಳುಹಿಸುವ ಮೂಲಕಹೃತ್ಪೂರ್ವಕವಾಗಿ ಅವರನ್ನು ಸ್ವಾಗತಿಸಿ.

  • ನಿಮ್ಮ ಸ್ಥಳವು ಮನೆಯಂತೆಯೇ ಭಾಸವಾಗವಂತೆ ಮಾಡಿ. ಉದಾಹರಣೆಗೆ, ನಿಮ್ಮಲ್ಲಿ ಅಡುಗೆಮನೆ ಇದ್ದರೆ, ಪಾತ್ರೆಗಳು ಮತ್ತು ಪ್ಯಾನ್‌ಗಳು, ಬಡಿಸುವ ಸ್ಪೂನ್‌ಗಳು, ಮತ್ತು ಮೂಲಭೂತ ಅಡುಗೆಗೆ ಬೇಕಾದ ಅಗತ್ಯಗಳನ್ನು ಸೇರಿಸುವುದನ್ನು ಪರಿಗಣಿಸಿ.

  • ಸಣ್ಣ ಪ್ರಯತ್ನಗಳು ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತವೆ, ಉದಾಹರಣೆಗೆ ಸೋಫಾದ ಬಳಿ ಕಂಬಳಿ ಇಡುವುದು ಅಥವಾ ಕಾಫಿ ಅಥವಾ ಚಹಾವನ್ನು ಹಂಚಿಕೊಳ್ಳುವುದು. 

ರಿಸರ್ವೇಶನ್‌ಗಳ ಕುರಿತು ಬದ್ಧರಾಗುವುದು

ಹೋಸ್ಟ್‌ಗಳ ಮೂಲ ನಿಯಮಗಳ ಭಾಗವಾಗಿ, ನೀವು ದೃಢೀಕೃತ ರಿಸರ್ವೇಶನ್‌ಗಳನ್ನು ರದ್ದುಗೊಳಿಸಬಾರದು. ರದ್ದತಿಯು ಅನಿವಾರ್ಯವಾಗಿದ್ದರೆ, ಸಾಧ್ಯವಾದಷ್ಟು ಸಮಯ ಉಳಿದಿರುವಾಗ ರದ್ದುಗೊಳಿಸಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ನಿಮಗೆ ಸಹಾಯದ ಅಗತ್ಯವಿದ್ದರೆ Airbnb ಅನ್ನು ಸಂಪರ್ಕಿಸಿ. 

Airbnb
ಫೆಬ್ರ 17, 2023
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ