ನಿಮ್ಮ ವೃತ್ತಿಪರ ಹೋಸ್ಟಿಂಗ್ ತ್ವರಿತ-ಪ್ರಾರಂಭದ ಚೆಕ್‌ಲಿಸ್ಟ್

ನಮ್ಮ ಟೂಲ್‌ಗಳು ಮತ್ತು ಫೀಚರ್‌ಗಳು ಲಿಸ್ಟಿಂಗ್‌ಗಳು ಮತ್ತು ಬುಕಿಂಗ್‌ಗಳನ್ನು ನಿರ್ವಹಿಸುವುದನ್ನು ಹಿಂದೆಂದಿಗಿಂತಲೂ ಸುಲಭವಾಗಿಸಿದೆ.
Airbnb ಅವರಿಂದ ಸೆಪ್ಟೆಂ 24, 2019ರಂದು
2 ನಿಮಿಷ ಓದಲು
ಮಾರ್ಚ್ 3, 2025 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • Airbnb ಯಲ್ಲಿ ಅನೇಕ ಲಿಸ್ಟಿಂಗ್‌ಗಳನ್ನು ನಿರ್ವಹಿಸುವುದನ್ನು ನಾವು ಸುಲಭಗೊಳಿಸುತ್ತಿದ್ದೇವೆ

  • ನೀವು ನಮ್ಮ ಬಳಕೆದಾರ ಸ್ನೇಹಿ ಇಂಟರ್‌ಫೇಸ್ ಅನ್ನು ಬಳಸಬಹುದು ಅಥವಾ ಸಂಯೋಜಿತ ಸಾಫ್ಟ್‌ವೇರ್ ಬಳಸಿ Airbnb ಗೆ ಸಂಪರ್ಕ ಸಾಧಿಸಬಹುದು

  • ನೀವು ಪ್ರೊ ಮಾರ್ಕೆಟಿಂಗ್ ಪೇಜ್‌ ಅನ್ನು ಸಹ ರಚಿಸಬಹುದು, ನಿಮ್ಮ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಬಹುದು ಮತ್ತು ನಿಮ್ಮ ತಂಡವನ್ನು ನಿರ್ಮಿಸಬಹುದು

ಹೆಚ್ಚುತ್ತಿರುವ ಪ್ರಾಪರ್ಟಿ ವ್ಯವಸ್ಥಾಪಕರು, ಹೋಟಲಿಯರ್‌ಗಳು ಮತ್ತು ಇತರ ಆತಿಥ್ಯ ಉದ್ಯಮಿಗಳು ತಮ್ಮ ವ್ಯವಹಾರಗಳನ್ನು Airbnb ಯಲ್ಲಿ ನಿರ್ಮಿಸುತ್ತಿದ್ದಾರೆ ಅಥವಾ ವಿಸ್ತರಿಸುತ್ತಿದ್ದಾರೆ. ನಮ್ಮ ಟೂಲ್‌ಗಳು ಮತ್ತು ಫೀಚರ್‌ಗಳು ನಮ್ಮ ಸರಳ ಇಂಟರ್‌ಫೇಸ್‌ನಲ್ಲಿ ಅಥವಾ ಇಂಟಿಗ್ರೇಟೆಡ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಲಿಸ್ಟಿಂಗ್‌ಗಳು ಮತ್ತು ರಿಸರ್ವೇಶನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ವಹಿಸುವುದನ್ನು ಹಿಂದೆಂದಿಗಿಂತಲೂ ಸುಲಭವಾಗಿಸಿದೆ.

ವೃತ್ತಿಪರ ಹೋಸ್ಟಿಂಗ್ ಅನ್ನು ಪ್ರಾರಂಭಿಸಲು ಸಿದ್ಧರಿದ್ದೀರಾ? ಪಯಣದ ಪ್ರತಿ ಹೆಜ್ಜೆಯಲ್ಲೂ ಸಹಾಯ ಮಾಡಲು Airbnb ಸಿದ್ಧವಿದೆ. ನೀವು ನಿಮ್ಮ ಪಯಣವನ್ನು ಶುರುಮಾಡುವಾಗ ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಈ ಸರಳ ಚೆಕ್‌ಲಿಸ್ಟ್ ಬಳಸಿ.

ಪ್ರಾರಂಭಿಸಲಾಗುತ್ತಿದೆ

ಹೊಸ Airbnb ಖಾತೆಗೆ ಸೈನ್ ಅಪ್ ಮಾಡಿ. ಗೆಸ್ಟ್‌ಗಳು ನಿಮ್ಮನ್ನು ಸಂಪರ್ಕಿಸಲು ಬಳಸಬಹುದಾದ ವೃತ್ತಿಪರ ಇಮೇಲ್ ವಿಳಾಸವನ್ನು ಬಳಸಿ  Airbnb   ಯಲ್ಲಿ ಬ್ಯುಸಿನೆಸ್ ಖಾತೆ ಅನ್ನು ರಚಿಸಿ.

ನಿಮ್ಮ ಬ್ರ್ಯಾಂಡ್‌ಗೆ ಹೊಂದಿಕೊಳ್ಳವ ಬ್ಯುಸಿನೆಸ್ ಪ್ರೊಫೈಲ್ ಅನ್ನು ಹೊಂದಿಸಿ. ನಿಮ್ಮ ಕಂಪನಿಯ ಹೆಸರು ಅಥವಾ ಮುಖ್ಯ ಖಾತೆ ಮಾಲೀಕರ ಹೆಸರನ್ನು ಬಳಸಿ. ಪ್ರೊಫೈಲ್ ಫೋಟೋಗಾಗಿ, ಕಂಪನಿಯ ಲೋಗೋ ಅಥವಾ ತಂಡ ಅಥವಾ ವೈಯಕ್ತಿಕ ಫೋಟೋವನ್ನು ಅಪ್‌ಲೋಡ್ ಮಾಡಿ.

ನಿಮ್ಮ ವ್ಯವಹಾರವನ್ನು ವಿವರಿಸಿ. ನಿಮ್ಮ ವ್ಯವಹಾರದ ಬಗ್ಗೆ Airbnb ಗೆಸ್ಟ್‌ಗಳಿಗೆ ಹೇಳಲು ನೀವೇ ವಿವರಿಸಿ ಕ್ಷೇತ್ರವನ್ನು ಬಳಸಿ. ಈ ವಿವರಣೆಯು ಎಲ್ಲಾ ಲಿಸ್ಟಿಂಗ್‌ಗಳಲ್ಲಿ ಗೋಚರಿಸುತ್ತದೆ.

ಅಗತ್ಯವಿರುವ ಮಾಹಿತಿಯನ್ನು ಸೇರಿಸುವುದು

ನಿಮ್ಮ ಖಾತೆಯನ್ನು ವ್ಯವಹಾರ ಖಾತೆಯೆಂದು ದೃಢೀಕರಿಸಿ. ಮನಿ ಲಾಂಡರಿಂಗ್ ವಿರೋಧಿ ನಿಯಮಗಳನ್ನು ಅನುಸರಿಸಲು, ನಾವು ಕೆಲವು ರೀತಿಯ ಹೋಸ್ಟ್ ಮಾಹಿತಿಯನ್ನು ಸಂಗ್ರಹಿಸಬೇಕು ಮತ್ತು ಪರಿಶೀಲಿಸಬೇಕು.

ಹೊರಪಾವತಿ ವಿಧಾನವನ್ನು ಸೇರಿಸಿ. ನಾವು ನಿಮಗೆ ಪಾವತಿಸಲು ನಿಮ್ಮ ಆದ್ಯತೆಯ ವಿಧಾನವನ್ನು ಸೇರಿಸಿ. ಇನ್ನಷ್ಟು ತಿಳಿಯಿರಿ

ನಿಮ್ಮ ತೆರಿಗೆದಾರರ ಮಾಹಿತಿಯನ್ನು ಸೇರಿಸಿ. ನೀವು US ಮೂಲದ ಆದಾಯವನ್ನು ಹೊಂದಿರುವಂತೆ ಕಂಡುಬಂದರೆ ಅಥವಾ ಇತರ ಕೆಲವು ಸಂದರ್ಭಗಳಲ್ಲಿ, ನಾವು ನಿಮ್ಮಿಂದ ಕೆಲವು ತೆರಿಗೆದಾರರ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ. ಇನ್ನಷ್ಟು ತಿಳಿಯಿರಿ

ಲಿಸ್ಟಿಂಗ್‌ಗಳನ್ನು ರಚಿಸುವುದು

ನಿಮ್ಮ API-ಸಂಪರ್ಕಿತ ಸಾಫ್ಟ್‌ವೇರ್ ಅನ್ನು ಹೊಂದಿಸಿ. ನಿಮ್ಮ Airbnb ಖಾತೆಯನ್ನು ನಿರ್ವಹಿಸಲು ನಿಮ್ಮ ಪ್ರಾಪರ್ಟಿ ನಿರ್ವಹಣಾ ವ್ಯವಸ್ಥೆ ಅಥವಾ ಚಾನೆಲ್ ಮ್ಯಾನೇಜರ್ ಅನುಮತಿಯನ್ನು ನೀಡಿ. ನೀವು API- ಸಂಪರ್ಕಿತ ಸಾಫ್ಟ್‌ವೇರ್ ಅನ್ನು ಬಳಸದಿದ್ದರೆ, ಮುಂದಿನ ಹಂತಕ್ಕೆ ಹೋಗಿ. ಇನ್ನಷ್ಟು ತಿಳಿಯಿರಿ

ನಿಮ್ಮ ಲಿಸ್ಟಿಂಗ್‌ಗಳನ್ನು ಪ್ರಕಟಿಸಿ. ನಿಮ್ಮ ಸಂಪರ್ಕಿತ ಸಾಫ್ಟ್‌ವೇರ್‌‌ನಲ್ಲಿ, 30 ಲಿಸ್ಟಿಂಗ್‌ಗಳನ್ನು ಆಯ್ಕೆಮಾಡಿ ಮತ್ತು ಅವು ಸ್ವಯಂಚಾಲಿತವಾಗಿ Airbnb ಯಲ್ಲಿ ಗೋಚರಿಸುತ್ತವೆ. ಪ್ರತಿಯೊಂದೂ ಮುಂದಿನ 3 ತಿಂಗಳಲ್ಲಿ 20+ ರಾತ್ರಿಗಳಿಗೆ ಲಭ್ಯವಿರಬೇಕು. ಇನ್ನಷ್ಟು ತಿಳಿಯಿರಿ

ಯಶಸ್ಸಿಗಾಗಿ ನಿಮ್ಮ ಲಿಸ್ಟಿಂಗ್‌ಗಳನ್ನು ಹೊಂದಿಸಿ. ಪ್ರತಿ ಸ್ಥಳವನ್ನು ಪ್ರತ್ಯೇಕಿಸುವ ಲಿಸ್ಟಿಂಗ್ ಶೀರ್ಷಿಕೆಗಳನ್ನು ಬರೆಯಿರಿ, ಎಲ್ಲಾ ಸೌಲಭ್ಯಗಳನ್ನು ಲಿಸ್ಟ್‌ ಮಾಡಿ ಮತ್ತು ಉನ್ನತ-ಗುಣಮಟ್ಟದ ಫೋಟೋಗಳನ್ನು ಅಪ್‌ಲೋಡ್ ಮಾಡಿ. ಇನ್ನಷ್ಟು ತಿಳಿಯಿರಿ

ಸ್ಪಷ್ಟ, ಸಂಕ್ಷಿಪ್ತ ಮನೆಯ ನಿಯಮಗಳನ್ನು ಸೇರಿಸಿ. ಬುಕಿಂಗ್ ಪೂರ್ಣಗೊಳಿಸಲು ಗೆಸ್ಟ್‌ಗಳು ನಿಮ್ಮ ಮನೆಯ ನಿಯಮಗಳನ್ನು ಒಪ್ಪಿಕೊಳ್ಳಬೇಕು. ಇನ್ನಷ್ಟು ತಿಳಿಯಿರಿ

ರದ್ದತಿ ನೀತಿಯನ್ನು ಆರಿಸಿಕೊಳ್ಳಿ. ಹೊಂದಿಕೊಳ್ಳುವಂತೆು ಅಥವಾ ಅತಿರೇಕವಾಗಿಲ್ಲದಿರುವಂತೆ ನಾವು ಶಿಫಾರಸು ಮಾಡುತ್ತೇವೆ. ಇನ್ನಷ್ಟು ತಿಳಿಯಿರಿ

ಶುಲ್ಕ ಆಯ್ಕೆಯನ್ನು ಆರಿಸಿ. ನಮ್ಮ ಹೋಸ್ಟ್-ಮಾತ್ರ ಶುಲ್ಕ ಆಯ್ಕೆಯು ಗೆಸ್ಟ್‌ಗಳಿಗೆ ಊಹಿಸಬಹುದಾದ, ಸ್ಪರ್ಧಾತ್ಮಕ ಬೆಲೆಗಳನ್ನು ನೀಡಲು ನಿಮಗೆ ಸಹಾಯ ಮಾಡುತ್ತದೆ. ಇನ್ನಷ್ಟು ತಿಳಿಯಿರಿ

ಬುಕಿಂಗ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು

ಗೆಸ್ಟ್‌ಗಳು ನಿಯಮಗಳನ್ನು ಸ್ವೀಕರಿಸುತ್ತಾರೆ. ಬುಕ್ ಮಾಡಲು, ಗೆಸ್ಟ್ Airbnb ಯ ಸೇವಾ ನಿಯಮಗಳು ಮತ್ತು ನಿಮ್ಮ ಮನೆಯ ನಿಯಮಗಳನ್ನು ಒಪ್ಪಿಕೊಳ್ಳಬೇಕು ಮತ್ತು ಗೆಸ್ಟ್‌ಗಳ ಸಂಖ್ಯೆಯನ್ನು ಸೂಚಿಸಬೇಕು.

ಗೆಸ್ಟ್‌ಗಳು ನಿಮ್ಮ ಪ್ರಾಪರ್ಟಿಯನ್ನು ಬುಕ್ ಮಾಡುತ್ತಾರೆ. Airbnb ಗೆಸ್ಟ್‌ಗಳಿಂದ ಹಣಪಾವತಿಯನ್ನು ಸ್ವೀಕರಿಸುತ್ತದೆ ಮತ್ತು ನಿಮಗೆ ಇಮೇಲ್ ಅಧಿಸೂಚನೆಯನ್ನು ಕಳುಹಿಸುತ್ತದೆ. ಲಿಸ್ಟಿಂಗ್ ಅನ್ನು ನಿಮ್ಮ ಸಾಫ್ಟ್‌ವೇರ್‌ನಲ್ಲಿ ಅಪ್‌ಡೇಟ್ ಮಾಡಲಾಗಿದೆ. ರಿಸರ್ವೇಶನ್ ನಿಮ್ಮ Airbnb ರಿಸರ್ವೇಶನ್‌ಗಳ ಪುಟದಲ್ಲಿ ಗೋಚರಿಸುತ್ತದೆ.

Airbnb ನಿಮಗೆ ಪಾವತಿಸುತ್ತದೆ. ಹೊರಪಾವತಿಯ ದಿನಾಂಕದಂದು (ಸಾಮಾನ್ಯವಾಗಿ ಗೆಸ್ಟ್‌ಗಳು ಆಗಮಿಸಿದ 24 ಗಂಟೆಗಳ ಒಳಗೆ), Airbnb ಹೋಸ್ಟ್ ಸೇವಾ ಶುಲ್ಕವನ್ನು ಕಳೆದು ರಿಸರ್ವೇಶನ್ ಫಂಡ್‌ಗಳನ್ನು ನಿಮಗೆ ಪಾವತಿಸುತ್ತದೆ. ನೀವು ಯಾವಾಗಲೂ ವಹಿವಾಟಿನ ಸ್ಥಿತಿಯನ್ನು ಇಲ್ಲಿ ಪರಿಶೀಲಿಸಬಹುದು. ಇನ್ನಷ್ಟು ತಿಳಿಯಿರಿ

ಬದಲಾವಣೆಗಳು, ರದ್ದತಿಗಳು ಮತ್ತು ಕ್ಲೈಮ್‌ಗಳ ಬಗ್ಗೆ ತಿಳಿದುಕೊಳ್ಳುವುದು

ರಿಸರ್ವೇಶನ್ ಬದಲಾವಣೆಗಳ ಕುರಿತು ಇನ್ನಷ್ಟು: ರಿಸರ್ವೇಶನ್ ಬದಲಾವಣೆಯನ್ನು ದೃಢೀಕರಿಸಲು, ಹೋಸ್ಟ್ ಮತ್ತು ಗೆಸ್ಟ್ ಇಬ್ಬರೂ ಅದನ್ನು Airbnb ಯಲ್ಲಿ ಅನುಮೋದಿಸಬೇಕು. ಇನ್ನಷ್ಟು ತಿಳಿಯಿರಿ

ಹೋಸ್ಟ್ ರದ್ದತಿಗಳ ಕುರಿತು ಇನ್ನಷ್ಟು: ಹೋಸ್ಟ್ ರದ್ದತಿಗಳು ನಿರ್ಬಂಧಿತ ಕ್ಯಾಲೆಂಡರ್ ದಿನಾಂಕಗಳು, ಶುಲ್ಕಗಳು ಮತ್ತು ಇತರ ಪರಿಣಾಮಗಳನ್ನು ಉಂಟುಮಾಡಬಹುದು. ಇನ್ನಷ್ಟು ತಿಳಿಯಿರಿ

ಸೆಕ್ಯುರಿಟಿ ಡಿಪಾಸಿಟ್ ಕ್ಲೇಮ್‌ಗಳು: ಸೆಕ್ಯುರಿಟಿ ಡಿಪಾಸಿಟ್ ಕ್ಲೇಮ್‌ಗಳನ್ನು ನಮ್ಮ ಪರಿಹಾರ ಕೇಂದ್ರದ ಮೂಲಕ ತಕ್ಷಣವೇ ಆರಂಭಿಸಬೇಕು. ಇನ್ನಷ್ಟು ತಿಳಿದುಕೊಳ್ಳಿ

ವೃತ್ತಿಪರ ಪರಿಕರಗಳು ಮತ್ತು ವಿಧಾನಗಳನ್ನು ಬಳಸುವುದು

ಕಾರ್ಯನಿರ್ವಹಣೆಯನ್ನು ಟ್ರ್ಯಾಕ್ ಮಾಡಿ. ಬ್ಯುಸಿನೆಸ್ ಮೆಟ್ರಿಕ್‌ಗಳಾದ್ಯಂತ ನಿಮ್ಮ ಲಿಸ್ಟಿಂಗ್‌ಗಳ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಲು ಮತ್ತು ಹೋಲಿಸಲು ನಿಮ್ಮ ಕಾರ್ಯನಿರ್ವಹಣೆ ಡ್ಯಾಶ್‌ಬೋರ್ಡ್ ಬಳಸಿ. ಇನ್ನಷ್ಟು ತಿಳಿಯಿರಿ

ನಿಮ್ಮ ತಂಡವನ್ನು ನಿರ್ಮಿಸಿ. ಒಂದೇ ಖಾತೆ ಅಥವಾ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳದೆ ನೀವು ಇತರ ತಂಡದ ಸದಸ್ಯರೊಂದಿಗೆ ಲಿಸ್ಟಿಂಗ್‌ಗಳನ್ನು ಹೋಸ್ಟ್ ಮಾಡಬಹುದು. ಇನ್ನಷ್ಟು ತಿಳಿಯಿರಿ

Airbnb ಯಲ್ಲಿ ವೃತ್ತಿಪರ ಹೋಸ್ಟಿಂಗ್‌ ಮಾಡಲು ಆಸಕ್ತಿ ಇದೆಯೇ?
ಇನ್ನಷ್ಟು ತಿಳಿಯಿರಿ

ಈ ಲೇಖನದಲ್ಲಿ ಇರುವ ಮಾಹಿತಿಯು ಪ್ರಕಟಣೆಯ ಬಳಿಕ ಬದಲಾಗಿರಬಹುದು.

ವಿಶೇಷ ಆಕರ್ಷಣೆಗಳು

  • Airbnb ಯಲ್ಲಿ ಅನೇಕ ಲಿಸ್ಟಿಂಗ್‌ಗಳನ್ನು ನಿರ್ವಹಿಸುವುದನ್ನು ನಾವು ಸುಲಭಗೊಳಿಸುತ್ತಿದ್ದೇವೆ

  • ನೀವು ನಮ್ಮ ಬಳಕೆದಾರ ಸ್ನೇಹಿ ಇಂಟರ್‌ಫೇಸ್ ಅನ್ನು ಬಳಸಬಹುದು ಅಥವಾ ಸಂಯೋಜಿತ ಸಾಫ್ಟ್‌ವೇರ್ ಬಳಸಿ Airbnb ಗೆ ಸಂಪರ್ಕ ಸಾಧಿಸಬಹುದು

  • ನೀವು ಪ್ರೊ ಮಾರ್ಕೆಟಿಂಗ್ ಪೇಜ್‌ ಅನ್ನು ಸಹ ರಚಿಸಬಹುದು, ನಿಮ್ಮ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಬಹುದು ಮತ್ತು ನಿಮ್ಮ ತಂಡವನ್ನು ನಿರ್ಮಿಸಬಹುದು

Airbnb
ಸೆಪ್ಟೆಂ 24, 2019
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ