ದೀರ್ಘಾವಧಿಯ ವಾಸ್ತವ್ಯಗಳಿಗೆ ಬೆಲೆಯನ್ನು ನಿಗದಿಪಡಿಸುವುದು
Airbnb ಯಲ್ಲಿ ಬುಕ್ ಮಾಡಿರುವ ಸುಮಾರು ಐದರಲ್ಲಿ ಒಂದು ರಾತ್ರಿಗಳು 28 ರಾತ್ರಿಗಳು ಅಥವಾ ಹೆಚ್ಚಿನ ವಾಸ್ತವ್ಯದ ಭಾಗವಾಗಿವೆ.* ಸಾಪ್ತಾಹಿಕ ಮತ್ತು ಮಾಸಿಕ ವಾಸ್ತವ್ಯಗಳನ್ನು ಹೋಸ್ಟಿಂಗ್ ಮಾಡುವುದು ಹೆಚ್ಚಾಗಿ ಈ ರೀತಿಯ ಲಾಭಗಳಿಗೆ ಕಾರಣವಾಗುತ್ತದೆ:
ಕಡಿಮೆ ವಹಿವಾಟಿನ ಜೊತೆಹೆಚ್ಚಿನ ಆಕ್ಯುಪೆನ್ಸಿ ರೇಟ್
ಗೆಸ್ಟ್ ಸಂದೇಶಗಳು ಮತ್ತು ಅವುಗಳ ನಿರ್ವಹಣೆ ಮಾಡುವ ಆವಶ್ಯಕತೆ ಕಡಿಮೆ
ಅಲ್ಪಾವಧಿ ವಾಸ್ತವ್ಯಗಳಿಗೆ ಹೋಲಿಸಿದರೆಸ್ಥಿರ ಆದಾಯ
ದೀರ್ಘಾವಧಿಯ ವಾಸ್ತವ್ಯದಲ್ಲಿ ಆಸಕ್ತಿ ಹೊಂದಿರುವ ಗೆಸ್ಟ್‌ಗಳು ರಿಯಾಯಿತಿಗಳನ್ನು ಹೊಂದಿರುವ ಸ್ಥಳಗಳನ್ನು ಹುಡುಕಲು ಒಲವು ತೋರುತ್ತಾರೆ. ಏಳು ರಾತ್ರಿಗಳು ಅಥವಾ ಹೆಚ್ಚಿನ ಅವಧಿಯ ಬುಕಿಂಗ್‌ಗಳಿಗೆ ಸಾಪ್ತಾಹಿಕ ರಿಯಾಯಿತಿ, ಅಥವಾ 28 ರಾತ್ರಿಗಳು ಅಥವಾ ಹೆಚ್ಚಿನ ಅವಧಿಯ ಬುಕಿಂಗ್‌ಗಳಿಗೆ ಮಾಸಿಕ ರಿಯಾಯಿತಿಯನ್ನು ಹೋಸ್ಟ್‌ಗಳು ಸೇರಿಸಬಹುದು.
ಈ ರಿಯಾಯಿತಿಗಳನ್ನು ಸೇರಿಸುವುದು ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಲಿಸ್ಟಿಂಗ್‌ನ ಶ್ರೇಯಾಂಕವನ್ನು ಸುಧಾರಿಸಲು ಸಹಾಯ ಮಾಡಬಹುದು, ಅಲ್ಲಿ ನಿಮ್ಮ ಮೂಲ ದರದ ಪಕ್ಕದಲ್ಲಿ ಸಾಪ್ತಾಹಿಕ ಅಥವಾ ಮಾಸಿಕ ರಿಯಾಯಿತಿಯನ್ನು ವಿಶೇಷ ಆಕರ್ಷಣೆ ಆಗಿ ತೋರಿಸಲಾಗುತ್ತದೆ.
ಸ್ಥಳೀಯ ಬೇಡಿಕೆ ಮತ್ತು ನಿಮ್ಮ ವೆಚ್ಚಗಳನ್ನು ಪರಿಗಣಿಸುವುದು
ರಿಯಾಯಿತಿಯನ್ನು ನಿಗದಿಪಡಿಸುವ ಮೊದಲು, ನೀವು ಸ್ಥಳೀಯ ಬೇಡಿಕೆಯ ಪ್ರಮಾಣವನ್ನು ತಿಳಿಯಬಯಸಬಹುದು. ನೀವು ಕಾಲಾನುಕೂಲಕ್ಕೆ ತಕ್ಕಂತೆ ಜನಸಂದಣಿ ಆಕರ್ಷಿಸುವ ಪ್ರದೇಶದಲ್ಲಿ ಹೋಸ್ಟಿಂಗ್ ಮಾಡುತ್ತಿದ್ದರೆ, ಕೆಲವು ತಿಂಗಳುಗಳಲ್ಲಿ ನಿಮ್ಮ ಬೆಲೆಯನ್ನು ಬದಲಾಯಿಸುವುದು, ನಿಮ್ಮ ಬೆಲೆ ನಿಗದಿ ತಂತ್ರವನ್ನು ಇನ್ನಷ್ಟು ಚೆನ್ನಾಗಿ ಬೆಂಬಲಿಸಬಹುದೇ ಎಂದು ಯೋಚಿಸಿ.
ನೀವು ಈ ರೀತಿಯ ದಿನನಿತ್ಯದ ವೆಚ್ಚಗಳನ್ನು ಕೂಡ ಪರಿಗಣಿಸ ಬಯಸಬಹುದು:
ಅಡಮಾನ ಅಥವಾ ಬಾಡಿಗೆ. ನಿಮ್ಮ ಸಾಪ್ತಾಹಿಕ ಅಥವಾ ಮಾಸಿಕ ರಿಯಾಯಿತಿಯನ್ನು ಹೊಂದಿಸಲು ಈ ಮೊತ್ತವು ಒಂದು ಆರಂಭವನ್ನು ಒದಗಿಸಬಹುದು.
ಮನೆವಾರ್ತೆಯ ವೆಚ್ಚಗಳು. ನೀವು ದಿನಬಳಕೆಯ ಖರ್ಚುಗಳಿಗೆ (ನೀರು, ಅನಿಲ, ವಿದ್ಯುತ್), ನಿಯಮಿತವಾಗಿ ನಿಗದಿತ ಸೇವೆಗಳಾದ ಶುಚಿಗೊಳಿಸುವಿಕೆ ಮತ್ತು ಕೈತೋಟದ ನಿರ್ವಹಣೆಗೆ ಹಾಗೂ ಗೆಸ್ಟ್‌ಗಳಿಗೆ ಒದಗಿಸಲೆಂದು ನೀವು ಆಯ್ಕೆಮಾಡುವ (ಹೆಚ್ಚುವರಿ ಸಾಬೂನು, ಮೂಲಭೂತ ಅಡುಗೆ ಸರಬರಾಜುಗಳು, ಇತ್ಯಾದಿ) ವಸ್ತುಗಳನ್ನು ನಿಮ್ಮ ಬೆಲೆಯೊಳಗೆ ಸೇರಿಸಿಕೊಳ್ಳಬಹುದು.
ನಿರ್ವಹಣೆ. ನವೀಕರಣಗಳಿಂದ ರಿಪೇರಿಗಳ ತನಕ ಗೆಸ್ಟ್‌ಗಳಿಗೆ ಹೆಚ್ಚು ಆರಾಮ ಒದಗಿಸಲು ನೀವು ನಿಮ್ಮ ಜಾಗದಲ್ಲಿ ಮಾಡುವ ಹೂಡಿಕೆಯು ನಿಮ್ಮ ಬೆಲೆಯ ಭಾಗವಾಗಬಹುದು.
"ನಿಮ್ಮ ತಿಂಗಳ ಗಳಿಕೆಯನ್ನು ಕೂಡ ಗೆಸ್ಟ್‌ಗಳು ಪಾವತಿಸುವ ರಾತ್ರಿಯ ಬೆಲೆಗೆ ಸೇರಿಸಿಕೊಳ್ಳುವುದು ಒಳ್ಳೆಯ ಐಡಿಯಾ" ಎನ್ನುತ್ತಾರೆ, ನ್ಯೂಯಾರ್ಕ್ ನಗರದಲ್ಲಿರುವ ಒಬ್ಬರು ಹೋಸ್ಟ್ ಆಲಿವರ್. "ಆಗ ನಿಮ್ಮ ಮಾಸಿಕ ರಿಯಾಯಿತಿಯನ್ನು ಆ ಮೊತ್ತಕ್ಕೆ ಸರಿಹೊಂದುವಂತೆ ಹೊಂದಾಣಿಕೆ ಮಾಡಿಕೊಳ್ಳಬಹುದು, ಇದು ನಿಮ್ಮ ಆದಾಯವನ್ನು ಹೆಚ್ಚು ವಿಶ್ವಾಸಾರ್ಹವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ."
ಸಾಪ್ತಾಹಿಕ ಅಥವಾ ಮಾಸಿಕ ರಿಯಾಯಿತಿಯನ್ನು ಹೊಂದಿಸುವುದು
ನಿಮ್ಮ ಕ್ಯಾಲೆಂಡರ್‌ನಲ್ಲಿರುವ ದರ ನಿಗದಿ ಟೂಲ್‌ಗಳನ್ನು ಬಳಸಿಕೊಂಡು ನೀವು ರಿಯಾಯಿತಿಗಳನ್ನು ಸೇರಿಸಬಹುದು. ಮೇಲಿನ ಬಲಭಾಗದಲ್ಲಿರುವ ಸೆಟ್ಟಿಂಗ್ಸ್ ಚಿಹ್ನೆ ಆಯ್ಕೆಮಾಡಿ. ದರ ನಿಗದಿ ಟ್ಯಾಬ್‌ನಲ್ಲಿ, ರಿಯಾಯಿತಿಗಳಿರುವಲ್ಲಿಗೆ ಸ್ಕ್ರಾಲ್ ಮಾಡಿ ಮತ್ತು ಸಾಪ್ತಾಹಿಕ ಅಥವಾ ಮಾಸಿಕ ಆಯ್ಕೆಮಾಡಿ.
ನಿಮ್ಮ ಲಿಸ್ಟಿಂಗ್ ಮತ್ತು ನಿಮ್ಮ ಪ್ರದೇಶದಲ್ಲಿರುವ ಇದೇ ರೀತಿಯ ಲಿಸ್ಟಿಂಗ್‌ಗಳಿಗಿರುವ ಬೇಡಿಕೆಯ ಆಧಾರದ ಮೇಲೆ ಸೂಚಿಸಲಾಗಿರುವ ರಿಯಾಯಿತಿಯನ್ನು ನೀವು ಕಾಣುತ್ತೀರಿ. ರಿಯಾಯಿತಿಯನ್ನು ಸರಿಹೊಂದಿಸಲು ಸ್ಲೈಡರ್ ಅನ್ನು 0 ಮತ್ತು 99%ರ ನಡುವೆ ಸರಿಸಿ ಮತ್ತು ಅದು ನಿಮ್ಮ ಸರಾಸರಿ ಸಾಪ್ತಾಹಿಕ ಅಥವಾ ಮಾಸಿಕ ಬೆಲೆಯಲ್ಲಿ ಹೇಗೆ ಬದಲಾವಣೆ ತರುತ್ತದೆ ಎಂಬುದನ್ನು ಟ್ರ್ಯಾಕ್ ಮಾಡಿ. ಶೇಕಡಾ ಚಿಹ್ನೆಯ ಪಕ್ಕದಲ್ಲಿ ನೀವು ಸಂಖ್ಯೆಯನ್ನು ಕೈಯಾರೆಯಾಗಿ ಕೂಡ ನಮೂದಿಸಬಹುದು. ನೀವು ಕೆಲಸ ಪೂರ್ಣಗೊಳಿಸಿದ ಬಳಿಕ, ನೀವು ಬಯಸುವ ರಿಯಾಯಿತಿಯನ್ನು ಅಂತಿಮಗೊಳಿಸಲು ಸೇವ್‌ಮಾಡಿ ಅನ್ನು ಒತ್ತಿ ಅಥವಾ ಕ್ಲಿಕ್ ಮಾಡಿ.
ರಿಯಾಯಿತಿಯು ನಿಮ್ಮ ಗಳಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಶೀಲಿಸಲು, ನಿಮ್ಮ ಸಾಪ್ತಾಹಿಕ ಅಥವಾ ಮಾಸಿಕ ಬೆಲೆಯ ಕೆಳಗೆ "ಗೆಸ್ಟ್ ಬೆಲೆ" ಎಂಬ ಪದಗಳನ್ನು ಆಯ್ಕೆಮಾಡಿ. ನೀವು ಬೆಲೆ ವಿಭಜನೆ ವಿವರಗಳನ್ನು ಪಡೆಯುತ್ತೀರಿ, ಇದು ರಾತ್ರಿಯ ಬೆಲೆ, ಶುಲ್ಕಗಳು, ಯಾವುದೇ ರಿಯಾಯಿತಿಗಳು ಅಥವಾ ಪ್ರಮೋಷನ್‌ಗಳು, ತೆರಿಗೆಗಳು ಮತ್ತು ನಿಮ್ಮ ಗಳಿಕೆಗಳನ್ನು ಪಟ್ಟಿ ಮಾಡುತ್ತದೆ.
ತಮ್ಮ ಆಗಮನದ ದಿನಾಂಕಗಳಿಗೆ ಬಹಳ ಮುಂಚಿತವಾಗಿ ಅಥವಾ ಸಮೀಪದಲ್ಲಿ ಬುಕ್ ಮಾಡುವ ಗೆಸ್ಟ್‌ಗಳಿಗೆ ಕೂಡ ನೀವು ರಿಯಾಯಿತಿಗಳನ್ನು ನೀಡಬಹುದು. ದರ ನಿಗದಿ ಟ್ಯಾಬ್‌ನಲ್ಲಿ "ಇನ್ನಷ್ಟು ರಿಯಾಯಿತಿಗಳು" ಎಂದು ಹೆಸರಿಸಲಾಗಿರುವ ವಿಭಾಗಕ್ಕೆ ಹೋಗಿ. ಬಹು ಮುಂಚಿತವಾಗಿ ಬುಕ್‌ಮಾಡುವವರಿಗೆ ತಿಂಗಳುಗಳ ಸಂಖ್ಯೆ ಅಥವಾ ಕೊನೆಯ ನಿಮಿಷದ ಪ್ರಯಾಣಿಕರಿಗೆ ದಿನಗಳ ಸಂಖ್ಯೆಯನ್ನು ಸೇರಿಸಿ ಮತ್ತು ಆ ಬುಕಿಂಗ್‌ಗಳಿಗೆ ನೀವು ನೀಡಬಯಸುವ ರಿಯಾಯಿತಿಯ ಶೇಕಡಾವಾರು ಪ್ರಮಾಣವನ್ನು ಸೇರಿಸಿ.
* ಆಂತರಿಕವಾದ Airbnb ಜಾಗತಿಕ ಡೇಟಾದ ಅನುಸಾರ, 2022ರಲ್ಲಿ ಬುಕ್ ಮಾಡಲಾದ 21% ರಾತ್ರಿಗಳು ಮತ್ತು 2023ರ ಮೊದಲ ಮೂರು ತಿಂಗಳುಗಳಲ್ಲಿ ಬುಕ್ ಮಾಡಲಾದ 18% ರಾತ್ರಿಗಳು 28 ದಿನಗಳ ವಾಸ್ತವ್ಯದವಾಗಿದ್ದವು.
ಈ ಲೇಖನದ ಪ್ರಕಟಣೆಯ ನಂತರ, ಅದು ಒಳಗೊಂಡಿರುವ ಮಾಹಿತಿಯು ಬದಲಾಗಿರಬಹುದು.