ವಿಮರ್ಶೆಗಳು ಏಕೆ ಮುಖ್ಯ
ಗೆಸ್ಟ್‌ಗಳಿಗೆ ತಮ್ಮ ಪ್ರವಾಸವನ್ನು ಯೋಜಿಸಿಕೊಳ್ಳಲು ವಿಮರ್ಶೆಗಳು ಮತ್ತು ರೇಟಿಂಗ್‌ಗಳು ಸಹಾಯ ಮಾಡುತ್ತವೆ. ಗೆಸ್ಟ್‌ಗಳು ಸ್ಟಾರ್ ರೇಟಿಂಗ್ ಹೆಚ್ಚಿರುವ ಸ್ಥಳವನ್ನು ಬುಕ್ ಮಾಡುವ ಸಾಧ್ಯತೆಗಳು ಹೆಚ್ಚು ಎಂದು Airbnb ಡೇಟಾ ಸೂಚಿಸುತ್ತದೆ.*
ವಿಮರ್ಶೆಗಳು ಹೇಗೆ ಕೆಲಸ ಮಾಡುತ್ತವೆ
ಪ್ರತಿ ಚೆಕ್‌ಔಟ್ ನಂತರ, ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳು ಪರಸ್ಪರ ವಿಮರ್ಶಿಸಲು ಅವಕಾಶವನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರು ವಿಮರ್ಶೆಯನ್ನು ಬರೆಯಲು14 ದಿನಗಳ ಸಮಯ ಹೊಂದಿದ್ದಾರೆ, ಇದು ಅವರ ವಿಮರ್ಶೆಗಳನ್ನು ಸಲ್ಲಿಸುವವರೆಗೆ ಅಥವಾ 14 ದಿನಗಳ ವಿಮರ್ಶೆ ಅವಧಿ ಮುಗಿಯುವವರೆಗೆ ಮರೆಮಾಚಲ್ಪಟ್ಟಿರುತ್ತದೆ. ಆ ನಂತರ, ವಿಮರ್ಶೆಗಳನ್ನು ಗೆಸ್ಟ್‌ಗಳ ಪ್ರೊಫೈಲ್ ಮತ್ತು ಹೋಸ್ಟ್‌ಗಳ ಲಿಸ್ಟ್ ಮತ್ತು ಪ್ರೊಫೈಲ್ ಪುಟಗಳಲ್ಲಿ ಪ್ರಕಟಿಸಲಾಗುತ್ತದೆ.
ಸಮಗ್ರ ಸ್ಟಾರ್ ರೇಟಿಂಗ್‌ಗಳು
ವಿಮರ್ಶೆಯನ್ನು ಬರೆಯುವುದರ ಜೊತೆಗೆ, ಗೆಸ್ಟ್‌ಗಳು ತಮ್ಮ ಒಟ್ಟಾರೆ ಅನುಭವವನ್ನು ಒಂದರಿಂದ ಐದು ಸ್ಟಾರ್‌ಗಳೊಂದಿಗೆ ರೇಟ್ ಮಾಡಬಹುದು. ಪ್ರತಿ ವಿಮರ್ಶೆಯ ಪಕ್ಕದಲ್ಲಿ ಸ್ಟಾರ್ ರೇಟಿಂಗ್ ಕಾಣಿಸಿಕೊಳ್ಳುತ್ತದೆ, ಗೆಸ್ಟ್‌ಗಳ ಪ್ರತಿಕ್ರಿಯೆಯನ್ನು ಉತ್ತಮ ಸನ್ನಿವೇಶಕ್ಕೆ ತರುತ್ತದೆ. ಮೂವರು ಗೆಸ್ಟ್‌ಗಳು ವಿಮರ್ಶೆಗಳನ್ನು ಪೋಸ್ಟ್ ಮಾಡಿದ ನಂತರ ನಿಮ್ಮ ಒಟ್ಟಾರೆ ರೇಟಿಂಗ್ ನಿಮ್ಮ ಲಿಸ್ಟಿಂಗ್‌ನಲ್ಲಿ ಕಾಣಿಸುತ್ತದೆ.
ಸ್ಟಾರ್ ರೇಟಿಂಗ್‌ಗಳು ಪ್ರಮುಖ ಅಂಶವಾಗುವುದು ಸೂಪರ್‌ಹೋಸ್ಟ್ ಸ್ಟೇಟಸ್ಗಳಿಸುವಲ್ಲಿ. ಸೂಪರ್‌ಹೋಸ್ಟ್‌ಗಳು ಕನಿಷ್ಠ 10 ಟ್ರಿಪ್‌ಗಳು ಅಥವಾ ಕನಿಷ್ಠ 100 ರಾತ್ರಿಗಳ ಒಟ್ಟು ಮೂರು ರಿಸರ್ವೇಶನ್‌ಗಳಲ್ಲಿ ಕನಿಷ್ಠ 4.8 ಸ್ಟಾರ್‌ಗಳ ಸರಾಸರಿ ರೇಟಿಂಗ್ ಅನ್ನು ಹೊಂದಿರಬೇಕು.
ನಿಮ್ಮ ರೇಟಿಂಗ್‌ಗಳು ಮತ್ತು ವಿಮರ್ಶೆಗಳು ಸಹ ಗೆಸ್ಟ್‌ಗಳ ಅಚ್ಚುಮೆಚ್ಚಿನಗಳನ್ನುಸೇರಿಸಲು ಮುಖ್ಯವಾಗಿವೆ, ಅವುಗಳನ್ನು ಪ್ರತಿದಿನ ನವೀಕರಣ ಮಾಡಲಾಗುತ್ತದೆ.
ನಿರ್ದಿಷ್ಟ ವರ್ಗಗಳಲ್ಲಿ ಸ್ಟಾರ್ ರೇಟಿಂಗ್ ಅನ್ನು ನೀಡಲು ಮತ್ತು ಯಾವುದು ಉತ್ತಮವಾಗಿ ನಡೆಯಿತು ಅಥವಾ ಯಾವುದು ಉತ್ತಮವಾಗಿರಬಹುದಾಗಿತ್ತು ಎನ್ನುವುದನ್ನು ನಿರ್ದಿಷ್ಟಪಡಿಸಲು ಗೆಸ್ಟ್‌ಗಳನ್ನು ಕೇಳಲಾಗುತ್ತದೆ. ಉದಾಹರಣೆಗೆ, ನಿಮ್ಮ ಸ್ಥಳವು ಸೂಪರ್ ಕ್ಲೀನ್ ಆಗಿದ್ದರೆ, ಗೆಸ್ಟ್ ಫೈವ್ ಸ್ಟಾರ್‌ಗಳನ್ನು ಆಯ್ಕೆ ಮಾಡಬಹುದು ಮತ್ತು "ಸ್ಕ್ವೀಕಿ-ಕ್ಲೀನ್ ಬಾತ್ರೂಮ್" ಅನ್ನು ಆಯ್ಕೆ ಮಾಡಬಹುದು. ಅಥವಾ ನಿಮ್ಮ ಚೆಕ್‌ಔಟ್ ಸೂಚನೆಗಳು ವಿಪರೀತವಾಗಿವೆ ಎಂದು ಗೆಸ್ಟ್ ಭಾವಿಸಿದರೆ ನೀವು ಸಂವಹನದಲ್ಲಿ ಕಡಿಮೆ ಸ್ಟಾರ್‌ಗಳನ್ನು ಪಡೆಯಬಹುದು.
ವರ್ಗ ಸ್ಟಾರ್ ರೇಟಿಂಗ್‌ಗಳು ಸೂಪರ್ ಹೋಸ್ಟ್ ಸ್ಟೇಟಸ್ ಅಥವಾ ನಿಮ್ಮ ಒಟ್ಟಾರೆ ರೇಟಿಂಗ್ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ಅವು ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳ ಮೇಲೆ ಪರಿಣಾಮ ಬೀರುತ್ತವೆ. ಈ ವರ್ಗಗಳು ಹೀಗಿವೆ:
ಚೆಕ್-ಇನ್: ನೀವು ಸ್ಪಷ್ಟವಾದ ಮತ್ತು ಸುಲಭವಾದ ಚೆಕ್-ಇನ್ ಪ್ರಕ್ರಿಯೆಯನ್ನುಒದಗಿಸಿದ್ದೀರಾ ಎಂದು ಗೆಸ್ಟ್‌ಗಳು ರೇಟ್ ಮಾಡುತ್ತಾರೆ. ಇದು ಸಕಾರಾತ್ಮಕ ಗೆಸ್ಟ್ ಅನುಭವಕ್ಕೆ ಅತ್ಯಗತ್ಯವಾಗಿದೆ.
ಸ್ವಚ್ಛತೆ: ಗೆಸ್ಟ್‌ಗಳು ನಿಮ್ಮ ಲಿಸ್ಟಿಂಗ್ ಫೋಟೋಗಳಲ್ಲಿ ನೋಡಿದ ಸ್ವಚ್ಛ ಮತ್ತು ಅಚ್ಚುಕಟ್ಟಾದ ಸ್ಥಳವನ್ನು ನಿರೀಕ್ಷಿಸುತ್ತಾರೆ.
ನಿಖರತೆ: ಅಪ್-ಟು-ಡೇಟ್ ಸೌಲಭ್ಯಗಳು ಸೇರಿದಂತೆ ನೀವು ನಿಖರವಾದ ಲಿಸ್ಟಿಂಗ್ ವಿವರಗಳನ್ನುಒದಗಿಸಿದ್ದೀರಾ ಎಂಬುದನ್ನು ಗೆಸ್ಟ್‌ಗಳು ಅಳೆಯಬಹುದು.
ಸಂವಹನ: ಚೆಕ್‌ಔಟ್ ಕಾರ್ಯಗಳು ಸ್ಪಷ್ಟ ಮತ್ತು ಸುಲಭವಾಗಿತ್ತೆ ಎನ್ನುವುದೂ ಸೇರಿದಂತೆ ,ಗೆಸ್ಟ್‌ಗಳು ಹೋಸ್ಟ್‌ಗಳ ಜೊತೆ ಸಂದೇಶ ಕಳುಹಿಸುವಿಕೆಯೊಂದಿಗೆತಮ್ಮ ಅನುಭವವನ್ನು ರೇಟ್ ಮಾಡುತ್ತಾರೆ.
ಸ್ಥಳ: ನಿಮ್ಮ ಲಿಸ್ಟಿಂಗ್‌ನಲ್ಲಿ ನಿಮ್ಮ ಸ್ಥಳವನ್ನು ನಿಖರವಾಗಿ ಚಿತ್ರಿಸಲಾಗಿದೆಯೇ ಎಂಬ ಕುರಿತು ಗೆಸ್ಟ್‌ಗಳು ಪ್ರತಿಕ್ರಿಯೆಯನ್ನು ಒದಗಿಸಬಹುದು.
ಮೌಲ್ಯ: ಗೆಸ್ಟ್‌ಗಳು ನಿಮ್ಮ ದರ ನಿಗದಿ ನಿಮ್ಮ ಕೊಡುಗೆಯ ನ್ಯಾಯಯುತ ಪ್ರತಿಬಿಂಬವಾಗಿದೆಯೇ ಎಂಬ ಗ್ರಹಿಕೆಯ ಮೇಲೆ ನಿಮ್ಮ ಸ್ಥಳವನ್ನು ರೇಟ್ ಮಾಡುತ್ತಾರೆ.
ಖಾಸಗಿ ಪ್ರತಿಕ್ರಿಯೆ
ಗೆಸ್ಟ್‌ಗಳು ತಮ್ಮ ಪ್ರತಿಕ್ರಿಯೆಯ ಭಾಗವಾಗಿ ನಿಮಗೆ ಖಾಸಗಿ ಟಿಪ್ಪಣಿಯನ್ನು ಕಳುಹಿಸಬಹುದು. ಈ ಮಾಹಿತಿಯನ್ನು ನಿಮ್ಮೊಂದಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ಗೆಸ್ಟ್‌ಗಳು ನಿಮ್ಮ ರೇಟಿಂಗ್ ಅಥವಾ ನಿಮ್ಮ ವಿಮರ್ಶೆಯ ಮೇಲೆ ಪರಿಣಾಮ ಬೀರದಂತೆ ನಿಮಗೆ ವಿಷಯಗಳನ್ನು ಹೇಳಲು ಇದು ಒಂದು ಅವಕಾಶವಾಗಿದೆ. ನೀವು ನಿಮ್ಮ ಗೆಸ್ಟ್‌ಗಳಿಗೆ ಖಾಸಗಿ ಟಿಪ್ಪಣಿಯನ್ನು ಸಹ ಕಳುಹಿಸಬಹುದು.
ನಿಮ್ಮ ಪರಿಗಣನೆಗೆ ಬರದಿರುವ ದೃಷ್ಟಿಕೋನಗಳನ್ನುಗೆಸ್ಟ್‌ಗಳು ಒದಗಿಸಬಹುದು. ಋಣಾತ್ಮಕ ವಿಮರ್ಶೆಗಳು ಬಂದಾಗ ಅವು ನಿಮ್ಮ ಸ್ಥಳ ಅಥವಾ ನಿಮ್ಮ ಆತಿಥ್ಯದಲ್ಲಿ ಸುಧಾರಣೆಗಳನ್ನು ಮಾಡಿಕೊಳ್ಳಲು ಅವಕಾಶಗಳೆಂದು ಪರಿಗಣಿಸಿಕೊಳ್ಳಲು ಪ್ರಯತ್ನಿಸಿ.
ನಿಮ್ಮ ಲಿಸ್ಟಿಂಗ್‌ನಲ್ಲಿ ಬಂದಿರುವ ವಿಮರ್ಶೆಗಳಿಗೆ ಸಾರ್ವಜನಿಕವಾಗಿ ಪ್ರತ್ಯುತ್ತರಿಸುವ ಆಯ್ಕೆಯನ್ನು ನೀವು ಯಾವಾಗಲೂ ಹೊಂದಿರುತ್ತೀರಿ. ನೀವು ರಚನಾತ್ಮಕವಾಗಿ ಪ್ರತಿಕ್ರಿಯಿಸಿದಾಗ, ಗೆಸ್ಟ್‌ಗಳ ಪ್ರತಿಕ್ರಿಯೆ ಮತ್ತು ಸಂತೃಪ್ತಿಯನ್ನು ನೀವು ಗಂಭೀರವಾಗಿ ಪರಿಗಣಿಸುತ್ತಿದ್ದೀರಿ ಎಂದು ತೋರಿಸಿದಂತೆ.