ಸ್ಮಾರ್ಟ್ ಪ್ರೈಸಿಂಗ್ ಎಂದರೇನು?

ಈ ಟೂಲ್‌ ಬೇಡಿಕೆಯ ಆಧಾರದ ಮೇಲೆ ನಿಮ್ಮ ರಾತ್ರಿಯ ದರವನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ.
Airbnb ಅವರಿಂದ ಮೇ 3, 2023ರಂದು
2 ನಿಮಿಷ ಓದಲು
ಅಕ್ಟೋ 12, 2023 ನವೀಕರಿಸಲಾಗಿದೆ

ಸಮಯ ಸರಿದಂತೆ ನಿಮ್ಮ ಬೆಲೆಯನ್ನು ಬದಲಾಯಿಸಿಕೊಳ್ಳುವುದು ನಿಮ್ಮ ಪ್ರದೇಶದಲ್ಲಿನ ಪ್ರಯಾಣದ ಟ್ರೆಂಡ್‌ಗಳಿಗೆ ಪ್ರತಿಕ್ರಿಯಿಸಲು ನಿಮಗೆ ಸಹಾಯ ಮಾಡುತ್ತದೆ. ಇದನ್ನು ಸಾಧಿಸಲು ಒಂದು ಮಾರ್ಗವೆಂದರೆ ಸ್ಮಾರ್ಟ್ ದರವನ್ನು ಆನ್ ಮಾಡುವುದು. ಈ ಟೂಲ್‌ನಲ್ಲಿ, ನಿಮ್ಮ ಪ್ರತಿ ರಾತ್ರಿಯ ದರವು ಬೇಡಿಕೆಯ ಆಧಾರದ ಮೇಲೆ ಸ್ವಯಂಚಾಲಿತವಾಗಿ ಸರಿಹೊಂದಿಕೆಯಾಗುತ್ತದೆ.

ನಿರಂತರವಾಗಿ ಮೇಲ್ವಿಚಾರಣೆ ಮಾಡದೆ ನಿಮ್ಮ ಬೆಲೆಯನ್ನು ಆಪ್ಟಿಮೈಸ್ ಮಾಡಿಕೊಳ್ಳುವುದನ್ನು ನೀವು ಮುಂದುವರಿಸಬಯಸಿದರೆ, ಈ ಸಾಧನವು ವಿಶೇಷವಾಗಿ ಉಪಯುಕ್ತ.

ಸ್ಮಾರ್ಟ್ ದರ ಹೇಗೆ ಕಾರ್ಯನಿರ್ವಹಿಸುತ್ತದೆ

ಸ್ಮಾರ್ಟ್ ದರವು ನಿಮ್ಮ ರಾತ್ರಿ ವಾಸ್ತವ್ಯದ ದರವನ್ನು ಲೆಕ್ಕಾಚಾರ ಮತ್ತು ಹೊಂದಾಣಿಕೆ ಮಾಡಲು, ನಿಮ್ಮ ಲಿಸ್ಟಿಂಗ್, ನಿಮ್ಮ ಪ್ರದೇಶ ಮತ್ತು ಗೆಸ್ಟ್ ನಡವಳಿಕೆಗಳ ಕುರಿತು ನೂರಾರು ಅಂಶಗಳನ್ನು ಬಳಸುತ್ತದೆ. ಅದು ಇವುಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ:

  • ನಿಮ್ಮ ಲಿಸ್ಟಿಂಗ್ ಕುರಿತ ವಿವರಗಳು ಉದಾಹರಣೆಗೆ ಪ್ರಾಪರ್ಟಿಯ ಪ್ರಕಾರ, ಸ್ಥಳ, ಸೌಲಭ್ಯಗಳು ಮತ್ತು ವಿಮರ್ಶೆಗಳು

  • ನಿರ್ದಿಷ್ಟ ದಿನಾಂಕಗಳಂದು ಎಷ್ಟು ಜನರು ಹುಡುಕುತ್ತಿದ್ದಾರೆ ಎನ್ನುವುದು ಸೇರಿದಂತೆ, ನಿಮ್ಮ ಪ್ರದೇಶದಲ್ಲಿ ಚಟುವಟಿಕೆಯನ್ನು ಹುಡುಕಿ

  • ಇದೇ ರೀತಿಯ ಪ್ರಾಪರ್ಟಿಯ ಪ್ರಕಾರಗಳು ಮತ್ತು ಸೌಲಭ್ಯಗಳು ಇರುವವು ಸೇರಿದಂತೆ,ನಿಮ್ಮ ಪ್ರದೇಶದಲ್ಲಿನ ಬುಕಿಂಗ್‌ಗಳು

ಸ್ಮಾರ್ಟ್ ದರವು ನಿಯಮಿತ ಆಧಾರದಲ್ಲಿ ಈ ಲೆಕ್ಕಾಚಾರಗಳನ್ನು ಮಾಡುತ್ತದೆ ಮತ್ತು ಈ ಲೆಕ್ಕಾಚಾರಗಳು ಹಾಗೂ ನಿಮ್ಮ ಸ್ವಂತ ದರ ನಿಯಂತ್ರಣಗಳನ್ನು ಬಳಸಿಕೊಂಡು ನಿಮ್ಮ ರಾತ್ರಿ ವಾಸ್ತವ್ಯದ ದರವನ್ನು ಸ್ವಯಂಚಾಲಿತವಾಗಿ ನವೀಕರಿಸುತ್ತದೆ.

ಸ್ಮಾರ್ಟ್ ದರವನ್ನು ಹೇಗೆ ಬಳಸುವುದು

ಸ್ಮಾರ್ಟ್ ದರವನ್ನು ಆನ್ ಮಾಡಿರುವಾಗ ಸೇರಿದಂತೆ, ನೀವು ಯಾವಾಗಲೂ ನಿಮ್ಮ ದರವನ್ನು ನಿಯಂತ್ರಿಸುತ್ತೀರಿ. ಈ ಟೂಲ್ ಅನ್ನು ಬಳಸಬೇಕೆ, ಯಾವಾಗ ಮತ್ತು ಹೇಗೆ ಬಳಸಬೇಕೆಂದು ನೀವು ನಿರ್ಧರಿಸುತ್ತೀರಿ. ನೀವು ಹೀಗೆ ಮಾಡಬಹುದು:

  • ಯಾವುದೇ ಸಮಯದಲ್ಲಿ ಅದನ್ನು ಆಫ್ ಮಾಡಿ. ಇದು ತಕ್ಷಣ ಅನ್ವಯಿಸುತ್ತದೆ, ಆದರೆ ಈಗಾಗಲೇ ಬುಕ್ ಮಾಡಿರುವ ಗೆಸ್ಟ್‌ಗಳು ಏನು ಪಾವತಿಸಿದ್ದಾರೋ ಅದನ್ನು ಬದಲಾಯಿಸುವುದಿಲ್ಲ.

  • ಯಾವುದೇ ದಿನಾಂಕದಂದು ಅದನ್ನು ನಿರ್ಲಕ್ಷಿಸಿ. ಇದನ್ನು ಮಾಡಲು, ನಿಮ್ಮ ಕ್ಯಾಲೆಂಡರ್‌ನಲ್ಲಿ ಬುಕ್ ಆಗಿರದ ನಿರ್ದಿಷ್ಟ ದಿನಾಂಕಗಳನ್ನು ಆಯ್ಕೆಮಾಡಿ ಮತ್ತು ಆ ದಿನಾಂಕಗಳಿಗೆ ಸ್ಮಾರ್ಟ್ ದರವನ್ನು ಆಫ್ ಮಾಡಿ.

  • ದರ ಶ್ರೇಣಿಯನ್ನು ಹೊಂದಿಸಿ. ನಿಮ್ಮ ಲಿಸ್ಟಿಂಗ್ ಯಾವ ದರಕ್ಕಿಂತ ಮೇಲೆ ಅಥವಾ ಕೆಳಗೆ ಹೋಗಬಾರದೋ (ನೀವು ರಿಯಾಯಿತಿಗಳು ಅಥವಾ ಪ್ರಮೋಷನ್‌ಗಳನ್ನು ಕೂಡ ಹೊಂದಿಸಿರದ ಹೊರತು), ಆ ಪ್ರತಿರಾತ್ರಿಯ ಕನಿಷ್ಠ ಮತ್ತು ಗರಿಷ್ಠ ದರಗಳನ್ನು ಆರಿಸಿ .

ಕಾಲ ಸರಿದಂತೆ ನಿಮ್ಮ ಸ್ಮಾರ್ಟ್ ದರ ತಂತ್ರವನ್ನು ನೀವು ಅಭಿವೃದ್ಧಿಪಡಿಸಬಹುದು ಮತ್ತು ವಿಕಸಿಸಬಹುದು. ಇದರಲ್ಲಿ ಕನಿಷ್ಠ ಮತ್ತು ಗರಿಷ್ಠ ದರಗಳನ್ನು ಸರಿಹೊಂದಿಸುವುದರ ಜೊತೆಗೆ ಸ್ಮಾರ್ಟ್ ದರವನ್ನು ನಿರ್ಲಕ್ಷಿಸಲು ನೀವು ಆಯ್ಕೆ ಮಾಡಿರುವ ದಿನಾಂಕಗಳಿಗೆ ಕಸ್ಟಮ್ ದರಗಳು, ಪ್ರಮೋಷನ್‌ಗಳು ಮತ್ತು ರಿಯಾಯಿತಿಗಳನ್ನು ಹೊಂದಿಸುವುದು ಸೇರಿವೆ.

ಸ್ಮಾರ್ಟ್ ದರವನ್ನು ಯಾವಾಗ ಬಳಸುವುದು

ನಿಮ್ಮ ಲಿಸ್ಟಿಂಗ್ ಮತ್ತು ಸನ್ನಿವೇಶಕ್ಕೆ ಸ್ಮಾರ್ಟ್ ದರ ಅರ್ಥಪೂರ್ಣವೇ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮನ್ನು ನೀವೇ ಕೇಳಿಕೊಳ್ಳಿ:

  • ನೀವು ಇದೇ ರೀತಿಯ ಲಿಸ್ಟಿಂಗ್‌ಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದೀರಾ? ಇಲ್ಲದಿದ್ದರೆ, ಸ್ಮಾರ್ಟ್ ದರ ನಿಮಗೆ ಹೊಂದಿಕೆಯಾಗಬಹುದು—ಮತ್ತು ನೀವು ಬಯಸಿದರೆ ಆಗಲೂ ಅದೇ ರೀತಿಯ ಲಿಸ್ಟಿಂಗ್‌ಗಳ ಬೆಲೆಗಳನ್ನು ನೀವು ಹೋಲಿಸಿ ನೋಡಬಹುದು.

  • ನಿಮ್ಮ ದರವನ್ನು ನೀವು ನಿಯಮಿತವಾಗಿ ನವೀಕರಿಸುತ್ತೀರಾ? ಇಲ್ಲದಿದ್ದರೆ, ಅಥವಾ ನೀವು ಹಾಗೆ ಮಾಡುವುದನ್ನು ಬಯಸದಿದ್ದರೆ, ಸ್ಮಾರ್ಟ್ ದರವನ್ನು ನೀವು ಪ್ರಯತ್ನಿಸಿ ನೋಡಬಹುದು.

ನಿಮ್ಮ ಸ್ಥಳೀಯ ಹೋಸ್ಟ್ ಕ್ಲಬ್‌ಸೇರುವ ಮೂಲಕ ನೀವು ಇತರ ಹೋಸ್ಟ್‌ಗಳು ಸ್ಮಾರ್ಟ್ ದರವನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಕಲಿಯಬಹುದು.

ನಿಮ್ಮ ವೈಯಕ್ತಿಕ ಬೆಲೆ ನಿಗದಿ ತಂತ್ರದ ಬೇರೆಲ್ಲ ಅಂಶಗಳ ರೀತಿಯಲ್ಲೇ, ಸ್ಮಾರ್ಟ್ ದರವನ್ನು ಬಳಸುವುದು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು. ಅದು ನಿಮಗೆ ಅನುಕೂಲವಾಗುವಂತೆ ಮಾಡಲು ನೀವು ಸೆಟ್ಟಿಂಗ್‌ಗಳೊಂದಿಗೆ ಆಡಬಹುದು ಎಂಬುದನ್ನು ನೆನಪಿನಲ್ಲಿಡಿ.

ಪ್ರಕಟಣೆಯ ನಂತರ ಈ ಲೇಖನದಲ್ಲಿರುವ ಮಾಹಿತಿಯು ಬದಲಾಗಿರಬಹುದು.

Airbnb
ಮೇ 3, 2023
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ