ಪ್ರವೇಶಾವಕಾಶದ ಅಗತ್ಯಗಳಿರುವ ಗೆಸ್ಟ್‌ಗಳನ್ನು ಹೋಸ್ಟ್ ಮಾಡಲು ಸಲಹೆಗಳು
ಬುಕ್ ಮಾಡುವ ಮೊದಲು ಸ್ಥಳವು ಅವರಿಗೆ ಎಷ್ಟು ಚೆನ್ನಾಗಿ ಸ್ಥಳಾವಕಾಶ ಕಲ್ಪಿಸುತ್ತದೆ ಎಂಬುದನ್ನು ಪ್ರವೇಶಾವಕಾಶವಿರುವ ಗೆಸ್ಟ್‌ಗಳು ತಿಳಿದುಕೊಳ್ಳಲು ಬಯಸುತ್ತಾರೆ. ಮೆಟ್ಟಿಲು-ಮುಕ್ತ ಪ್ರವೇಶ ಮತ್ತು ಅಂಗವಿಕಲರ ಪಾರ್ಕಿಂಗ್ ಸ್ಥಳದಂತಹ ನಿರ್ದಿಷ್ಟ ವೈಶಿಷ್ಟ್ಯಗಳಿಗಾಗಿ ಅವರು Airbnb ಹುಡುಕಾಟ ಫಲಿತಾಂಶಗಳನ್ನು ಫಿಲ್ಟರ್ ಮಾಡಬಹುದು.
ವೀಲ್‌ಚೇರ್ ಬಳಕೆದಾರರಿಗೆ ಸೂಕ್ತವೆಂದು ದೃಢಪಡಿಸಿದ ಮನೆಗಳನ್ನು ಅಳವಡಿಸಿದ ವರ್ಗದಲ್ಲಿಯೂ ಹೈಲೈಟ್ ಮಾಡಲಾಗಿದೆ. ಅರ್ಹತೆ ಪಡೆಯಲು, ನಿಮ್ಮ ಸ್ಥಳವು ಪ್ರವೇಶಕ್ಕೆ ಮೆಟ್ಟಿಲು-ಮುಕ್ತ ಪ್ರವೇಶ, ಕನಿಷ್ಠ ಒಂದು ಬೆಡ್‌ರೂಮ್ ಮತ್ತು ಬಾತ್‌ರೂಮ್, ಗ್ರ್ಯಾಬ್ ಬಾರ್‌ಗಳು ಅಥವಾ ಶವರ್ ಸೀಟ್‌ನಂತಹ ಮಾರ್ಪಾಡುಗಳೊಂದಿಗೆ ಇರಬೇಕು.
ನಿಮ್ಮ ಮನೆಯ ಬಗ್ಗೆ ಸ್ಪಷ್ಟ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸುವುದು ಅತ್ಯಗತ್ಯ. ಪ್ರವೇಶಾವಕಾಶದ ಅಗತ್ಯವಿರುವ ಗೆಸ್ಟ್‌ಗಳು ಆತ್ಮವಿಶ್ವಾಸದಿಂದ ಬುಕ್ ಮಾಡಬಹುದಾದ ಆಹ್ವಾನಿಸುವ ಸ್ಥಳವನ್ನು ರಚಿಸಲು ಕೆಲವು ಮಾರ್ಗಸೂಚಿಗಳು ಇಲ್ಲಿವೆ.
ನಿಮ್ಮ ಲಿಸ್ಟಿಂಗ್‌ಗೆ ಪ್ರವೇಶಾವಕಾಶವಿರುವ ವೈಶಿಷ್ಟ್ಯಗಳನ್ನು ಸೇರಿಸಿ
ಗೆಸ್ಟ್‌ಗಳಿಗೆ ನಿಮ್ಮ ಸ್ಥಳವು ಎದ್ದುಕಾಣುವಂತೆ ಮಾಡಲು ಸಹಾಯ ಮಾಡುವ ವೈಶಿಷ್ಟ್ಯಗಳಲ್ಲಿ ಇವು ಸೇರಿವೆ:
- ಅಂಗವಿಕಲರಿಗೆ ಪಾರ್ಕಿಂಗ್ ಸ್ಥಳ
- ಗೆಸ್ಟ್ ಪ್ರವೇಶಕ್ಕೆ ಬೆಳಕಿನ ಮಾರ್ಗ
- ಗೆಸ್ಟ್ ಪ್ರವೇಶಕ್ಕೆ ಮೆಟ್ಟಿಲು-ಮುಕ್ತ ಮಾರ್ಗ
- ರೂಮ್‌ಗಳಿಗೆ ಮೆಟ್ಟಿಲು-ಮುಕ್ತ ಪ್ರವೇಶ
- 32 ಇಂಚುಗಳು (81 ಸೆಂಟಿಮೀಟರ್) ಗಿಂತಲೂ ವಿಶಾಲವಾದ ಪ್ರವೇಶದ್ವಾರಗಳು
- ಮೆಟ್ಟಿಲು-ಮುಕ್ತ ಶವರ್
- ಟಾಯ್ಲೆಟ್ ಮತ್ತು/ಅಥವಾ ಶವರ್ ಗ್ರ್ಯಾಬ್ ಬಾರ್‌ಗಳು
- ಶವರ್ ಅಥವಾ ಸ್ನಾನದ ಕುರ್ಚಿ
- ಸೀಲಿಂಗ್ ಅಥವಾ ಮೊಬೈಲ್ ಹೋಯಿಸ್ಟ್
- ಸ್ವಿಮ್ಮಿಂಗ್ ಪೂಲ್ ಅಥವಾ ಹಾಟ್ ಟಬ್ ಹೋಯಿಸ್ಟ್
ಎಲ್ಲಾ ಪ್ರವೇಶಾವಕಾಶವಿರುವ ವೈಶಿಷ್ಟ್ಯಗಳನ್ನು ನಿಮ್ಮ ಲಿಸ್ಟಿಂಗ್‌ನಲ್ಲಿ ಪ್ರಕಟಿಸುವ ಮೊದಲು Airbnb ನ ಪ್ರವೇಶಾವಕಾಶ ಮಾರ್ಗಸೂಚಿಗಳ ಪ್ರಕಾರ ಪರಿಶೀಲಿಸಲಾಗುತ್ತದೆ. ಒಂದು ವೈಶಿಷ್ಟ್ಯವು ಮಾರ್ಗಸೂಚಿಗಳನ್ನು ಪೂರೈಸದಿದ್ದರೆ ಅಥವಾ ಫೋಟೋದಲ್ಲಿ ಸ್ಪಷ್ಟವಾಗಿ ತೋರಿಸದಿದ್ದರೆ, ಬೇರೆ ಫೋಟೋವನ್ನು ಅಪ್‌ಲೋಡ್ ಮಾಡಲು ಅಥವಾ ನಿಮ್ಮ ಲಿಸ್ಟಿಂಗ್‌ನಿಂದ ವೈಶಿಷ್ಟ್ಯವನ್ನು ತೆಗೆದುಹಾಕಲು ನಾವು ಕೇಳಬಹುದು.
ಪ್ರತಿ ರೂಮ್‌ನ ಅನೇಕ ಫೋಟೋಗಳನ್ನು ಹಂಚಿಕೊಳ್ಳುವುದು ನಿಮ್ಮ ಮನೆ ಅವರ ಅಗತ್ಯಗಳನ್ನು ಪೂರೈಸುತ್ತದೆಯೇ ಎಂದು ನಿರ್ಧರಿಸಲು ಗೆಸ್ಟ್‌ಗಳಿಗೆ ಸಹಾಯ ಮಾಡುತ್ತದೆ.
ಪ್ರತಿ ಚಿತ್ರಕ್ಕೆ ವಿವರಣಾತ್ಮಕ ಶೀರ್ಷಿಕೆಯನ್ನು ಬರೆಯಿರಿ. ಉದಾಹರಣೆಗೆ, ಬಾತ್‌ರೂಮ್‌ನ ಫೋಟೋಗೆ ಶೀರ್ಷಿಕೆಯು ವಿವರಗಳನ್ನು ಸೇರಿಸಬಹುದು: "ಇದು ಮೆಟ್ಟಿಲು-ಮುಕ್ತ ಪ್ರವೇಶವನ್ನು ಹೊಂದಿರುವ ಮನೆಯಲ್ಲಿರುವ ಏಕೈಕ ಬಾತ್‌ರೂಮ್ ಆಗಿದೆ. ಟಾಯ್ಲೆಟ್ ಮತ್ತು ಶವರ್ ಸ್ಥಿರ ಗ್ರ್ಯಾಬ್ ಬಾರ್‌ಗಳನ್ನು ಹೊಂದಿವೆ."
ಬಹು ಕೋನಗಳಿಂದ ಚಿತ್ರಗಳನ್ನು ತೆಗೆದುಕೊಳ್ಳಿ. ಉದಾಹರಣೆಗೆ, ಬಾತ್‌ರೂಮ್‌ನ ಫೋಟೋಗಳು ಪ್ರತಿ ಗ್ರ್ಯಾಬ್ ಬಾರ್‌ನ ಸ್ಥಳ ,ಮತ್ತು ಟಾಯ್ಲೆಟ್ ಮತ್ತು ಶವರ್‌ಗೆ ತಲುಪಲು ನೆಲದಾದ್ಯಂತದ ವಿಶಾಲ, ಸಮತಟ್ಟಾದ ಮಾರ್ಗವನ್ನು ತೋರಿಸಬಹುದು.
ಪ್ರವೇಶಾವಕಾಶವಿರುವ ವೈಶಿಷ್ಟ್ಯಗಳನ್ನು ಛಾಯಾಚಿತ್ರ ಮಾಡುವ ಬಗ್ಗೆ ಇನ್ನಷ್ಟು ತಿಳಿಯಿರಿ
ಗೆಸ್ಟ್‌ಗಳಿಗೆ ಆರಾಮದಾಯಕ ಅನುಭವ ಒದಗಿಸಲು ಸಹಾಯಿಸಿ
ನಿಮ್ಮ ಮನೆಯ ಪ್ರವೇಶಾವಕಾಶವಿರುವ ವೈಶಿಷ್ಟ್ಯಗಳ ಬಗ್ಗೆ ಗೆಸ್ಟ್‌ಗಳು ನಿಮಗೆ ಸಂದೇಶ ಕಳುಹಿಸಿದಾಗ ಅವರೊಂದಿಗೆ ಸಂವಹನ ನಡೆಸಿ. ಕೆಲವು ಪ್ರಶ್ನೆಗಳು ಕೇಳುವುದು—ಮತ್ತು ಅವುಗಳಿಗೆ ಉತ್ತರ ನೀಡುವುದು—ದೊಡ್ಡ ವ್ಯತ್ಯಾಸವನ್ನುಂಟು ಮಾಡಬಹುದು.
ಆರಂಭಿಕ ಉಪಯುಕ್ತ ಸಂಭಾಷಣೆಯ ಉದಾಹರಣೆಗಳು:
- ಮನೆಯ ಬಗ್ಗೆ ನೀವು ಯಾವ ನಿರ್ದಿಷ್ಟ ಪ್ರಶ್ನೆಗಳನ್ನು ಹೊಂದಿದ್ದೀರಿ?
- ನಿಮ್ಮ ವಾಸ್ತವ್ಯವನ್ನು ಹೆಚ್ಚು ಆರಾಮದಾಯಕವಾಗಿಸಲು ನಾನು ಏನು ಮಾಡಬಹುದು?
ನಿಮ್ಮ ಸ್ಥಳವನ್ನು ಸುಲಭವಾಗಿ ಸಂಚರಿಸಲು ಮಾಡುವುದು ಹಾಗು ಸಮಂಜಸವಾದ ವಿನಂತಿಗಳನ್ನು ಪೂರೈಸುವಂತೆ ಹೊಂದಿಕೊಳ್ಳುವುದು ನಿಮ್ಮ ಉತ್ತಮ ಪ್ರಯತ್ನವಾಗಿರಲಿ. ಗೆಸ್ಟ್‌ಗಳನ್ನು ಸ್ವಾಗತಿಸಲು ಸಣ್ಣ ಬದಲಾವಣೆಗಳು ಸಹಾಯ ಮಾಡಬಹುದೇ ಎಂಬುದನ್ನು ಪರಿಗಣಿಸಿ. ಕೆಲವು ಪರಿಕಲ್ಪನೆಗಳು:
- ರೂಮ್‌ಗಳು ಮತ್ತು ಸ್ಥಳಗಳ ಮಧ್ಯೆ ವಿಶಾಲ ಮಾರ್ಗಗಳಿಗಾಗಿ ಫರ್ನಿಚರ್‌ಗಳನ್ನು ಸರಿಸಿ.
- ಟವೆಲ್‌ಗಳು ಮತ್ತು ಭಕ್ಷ್ಯಗಳಂತಹ ಮನೆಯ ವಸ್ತುಗಳನ್ನು ಸುಲಭವಾಗಿ ತಲುಪುವ ಸ್ಥಳಗಳಲ್ಲಿ ಇರಿಸಿ.
- ಪವರ್ ಔಟ್‌ಲೆಟ್‌ಗಳಿಗೆ ಇರುವ ಅಡೆತಡೆಗಳನ್ನು ತೆಗೆದುಹಾಕಿ.
ಎಲ್ಲಾ ಗೆಸ್ಟ್‌ಗಳಿಗೆ ಪ್ರವೇಶ ಸಾಧ್ಯತೆಯ ಅವಶ್ಯಕತೆ ಇರಲಿ ಅಥವಾ ಇಲ್ಲದೇ ಇರಲಿ, ಎಲ್ಲಾ ಗೆಸ್ಟ್‌ಗಳಿಗೆ ಎಲ್ಲಾ ಸ್ಥಳಗಳು ಸೂಕ್ತವಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಆದಾಗ್ಯೂ, ನಮ್ಮ ತಾರತಮ್ಯ ವಿರೋಧಿ ನೀತಿಯಲ್ಲಿನಿರ್ದಿಷ್ಟಪಡಿಸಿದಂತೆ, ವ್ಯಕ್ತಿಯೊಬ್ಬರು ಅಂಗವೈಕಲ್ಯವನ್ನು ಹೊಂದಿರುವುದರಿಂದ ನೀವು ರಿಸರ್ವೇಶನ್ ಅನ್ನು ನಿರಾಕರಿಸಲು ಸಾಧ್ಯವಿಲ್ಲ. ಸಾಕುಪ್ರಾಣಿಗಳೆಂದು ಪರಿಗಣಿಸದ ಸಹಾಯಕ ಸಾಕುಪ್ರಾಣಿಗಳಿಗೆ ನೀವು ಸಾಕುಪ್ರಾಣಿಗಳಶುಲ್ಕವನ್ನು ವಿಧಿಸಲು ಸಾಧ್ಯವಿಲ್ಲ.
ಒಂದು ಒಳಗೊಳ್ಳುವಿಕೆಯ ಮಾರ್ಗದರ್ಶಿ ಪುಸ್ತಕವನ್ನು ರಚಿಸಿ
ಸ್ಥಳೀಯ ಸಲಹೆಗಳನ್ನು ಹಂಚಿಕೊಳ್ಳುವ ಮೂಲಕ ನಿಮ್ಮ ಆತಿಥ್ಯ ಮತ್ತು ನಿಮ್ಮ ನಗರವನ್ನು ಪ್ರದರ್ಶಿಸಲು ನಿಮ್ಮ ಮಾರ್ಗದರ್ಶಿ ಪುಸ್ತಕವು ಒಂದು ಅವಕಾಶವಾಗಿದೆ. ನೀವು ಆಹಾರ ಸೇವನೆ, ದೃಶ್ಯವೀಕ್ಷಣೆ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಶಿಫಾರಸುಗಳನ್ನು ಸೇರಿಸಬಹುದು.
ನಿಮ್ಮ ಮಾರ್ಗದರ್ಶಿ ಪುಸ್ತಕವನ್ನು ರಚಿಸುವಾಗ, ಪ್ರವೇಶಾವಕಾಶದ ಅಗತ್ಯಗಳನ್ನು ಹೊಂದಿರುವ ಪ್ರಯಾಣಿಕರು ಏನನ್ನು ಹುಡುಕಬಹುದು ಎಂಬುದನ್ನು ಪರಿಗಣಿಸಿ. ಉದಾಹರಣೆಗೆ, ನೀವು ರಾಂಪ್‌ಗಳು, ಸುಸಜ್ಜಿತ ಮಾರ್ಗಗಳೊಂದಿಗೆ ವಾಕಿಂಗ್ ಟ್ರೇಲ್‌ಗಳು ಮತ್ತು ಪ್ರವೇಶಿಸಬಹುದಾದ ಆಸನದೊಂದಿಗೆ ಆಕರ್ಷಣೆಗಳನ್ನು ಹೊಂದಿರುವ ರೆಸ್ಟೋರೆಂಟ್‌ಗಳನ್ನು ಗುರುತಿಸಬಹುದು. ನೀವು ಸಾರ್ವಜನಿಕ ಸಾರಿಗೆಯ ಬಗ್ಗೆಯೂ ಮಾಹಿತಿಯನ್ನು ಹಂಚಿಕೊಳ್ಳಬಹುದು.
ಪ್ರಕಟಣೆಯ ನಂತರ ಈ ಲೇಖನದಲ್ಲಿರುವ ಮಾಹಿತಿಯು ಬದಲಾಗಿರಬಹುದು.