ಮೊಬೈಲ್ನಲ್ಲಿ ನಿಮ್ಮ ಕ್ಯಾಲೆಂಡರ್ ನಿರ್ವಹಣೆಯನ್ನು ಅಪ್ಗ್ರೇಡ್ಗಳು ಸುಲಭಗೊಳಿಸುತ್ತವೆ
ಸಂಪಾದಕರ ಟಿಪ್ಪಣಿ: ಈ ಲೇಖನವನ್ನು Airbnb 2023 ಬೇಸಿಗೆಯ ರಿಲೀಸ್ ಭಾಗವಾಗಿ ಪ್ರಕಟಿಸಲಾಗಿದೆ. ಅದರ ಪ್ರಕಟಣೆಯ ನಂತರ ಮಾಹಿತಿಯು ಬದಲಾಗಿರಬಹುದು. ನಮ್ಮ ಇತ್ತೀಚಿನ ಉತ್ಪನ್ನ ಬಿಡುಗಡೆಯ ಬಗ್ಗೆ ಇನ್ನಷ್ಟು ತಿಳಿಯಿರಿ.
ಹೋಸ್ಟ್ನ ಕ್ಯಾಲೆಂಡರ್ Airbnb ಆ್ಯಪ್ನ ಆಗಾಗ್ಗೆ ಹೆಚ್ಚಾಗಿ ಬಳಸುವ ಭಾಗಗಳಲ್ಲಿ ಒಂದಾಗಿದೆ. ಸರಳ ಕಾರ್ಯಗಳನ್ನು ಮಾಡುವುದೂ ಕೂಡ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ನಮಗೆ ತಿಳಿಸಿದ್ದೀರಿ. ಉದಾಹರಣೆಗೆ, ಬಹು ವಾರಗಳನ್ನು ಆಯ್ಕೆ ಮಾಡಲು ಪ್ರತಿಯೊಂದು ದಿನಾಂಕಗಳ ಮೇಲೆ ಒತ್ತಬೇಕಾಗುವುದು.
ನಿಮ್ಮ ಕ್ಯಾಲೆಂಡರ್ ಅನ್ನು ಮೊಬೈಲ್ನಲ್ಲಿ ಸುಲಭವಾಗಿ ನಿರ್ವಹಿಸಲು ನಾವು ಎರಡು ಅಪ್ಗ್ರೇಡ್ಗಳನ್ನು ಪರಿಚಯಿಸುತ್ತಿದ್ದೇವೆ.
ದಿನಾಂಕಗಳನ್ನು ಆಯ್ಕೆ ಮಾಡಲು ಸ್ವೈಪ್ ಮಾಡಿ: ಮೊದಲನೆಯದನ್ನು ತಡೆಹಿಡಿಯುವ (ಪಾಝ್ ಮಾಡುವ) ಮೂಲಕ ದಿನಾಂಕಗಳ ಶ್ರೇಣಿಯನ್ನು ಆಯ್ಕೆಮಾಡಿ, ನಂತರ ಉಳಿದವನ್ನು ಸೇರಿಸಲು ಅಡ್ಡಲಾಗಿ ಮತ್ತು ಕೆಳಕ್ಕೆ ಸ್ವೈಪ್ ಮಾಡಿ. ಉದಾಹರಣೆಗೆ, ಮುಂದಿನ ವಾರ ಇನ್ನೂ ಲಭ್ಯವಿದೆಯೇ? ನಿಮ್ಮ ಕ್ಯಾಲೆಂಡರ್ಅನ್ನು ಮುಚ್ಚದೆ ಅಥವಾ ಸ್ಕ್ರೀನ್ಗಳನ್ನು ಬದಲಿಸದೆ ಆ ದಿನಾಂಕಗಳಿಗೆ ನಿಮ್ಮ ದರವನ್ನು ನೀವು ಬದಲಾಯಿಸಬಹುದು.
ವಾರ್ಷಿಕ ವೀಕ್ಷಣೆ: ಜೂನ್ನಿಂದ ಪ್ರಾರಂಭಿಸಿ, ನೀವು ಇಡೀ ವರ್ಷಕ್ಕೆ ನಿಮ್ಮ ಲಭ್ಯತೆಯನ್ನು ಮತ್ತು ಪ್ರತಿ ತಿಂಗಳ ದರವನ್ನು ಒಂದು ಸ್ಕ್ರೀನ್ನಲ್ಲಿ ತೋರಿಸಲು ಸಾಧ್ಯವಾಗುತ್ತದೆ. ಎಲ್ಲಾ 12 ತಿಂಗಳುಗಳನ್ನು ಏಕಕಾಲದಲ್ಲಿ ತೋರಿಸಲು ನಿಮ್ಮ ಕ್ಯಾಲೆಂಡರ್ನ ಮೇಲ್ಭಾಗದಲ್ಲಿರುವ ಡ್ರಾಪ್-ಡೌನ್ ಮೆನುವಿನಲ್ಲಿ "ವರ್ಷ" ಆಯ್ಕೆಮಾಡಿ. ಪ್ರಸ್ತುತದ, ಭವಿಷ್ಯದ, ಮತ್ತು ಬಾಕಿ ಇರುವ ರಿಸರ್ವೇಶನ್ಗಳ ದಿನಾಂಕಗಳನ್ನು ಮಾಸಿಕ ವೀಕ್ಷಣೆಯಲ್ಲಿರುವಂತೆ ಅದೇ ಬಣ್ಣಗಳಲ್ಲಿ ವಿಶೇಷ ಆಕರ್ಷಣೆಗೊಳಿಸಲಾಗುತ್ತದೆ. ಆ ಇಡೀ ತಿಂಗಳಿಗೆ ನಿಮ್ಮ ಪ್ರತಿ ರಾತ್ರಿಯ ದರವನ್ನು ಎಡಿಟ್ ಮಾಡಲು ಯಾವುದೇ ತಿಂಗಳನ್ನು ಒತ್ತಿ.
ನಿಮ್ಮ ಎಲ್ಲಾ ದರ ನಿಗದಿ ಟೂಲ್ಗಳನ್ನು ನಿಮ್ಮ ಕ್ಯಾಲೆಂಡರ್ ನಲ್ಲಿ ಒಂದು ಅನುಕೂಲಕರ ಸ್ಥಳಕ್ಕೆ ನಾವು ಸ್ಥಳಾಂತರಿಸಿದ್ದೇವೆ. ಸ್ಕ್ರೀನ್ನ ಮೇಲಿನ ಬಲಭಾಗದಲ್ಲಿರುವ ಸೆಟ್ಟಿಂಗ್ಸ್ ಚಿಹ್ನೆಯನ್ನು ಒತ್ತಿ. ಹತ್ತಿರದಲ್ಲಿ ಬುಕ್ ಮಾಡಲಾದ ಇದೇ ರೀತಿಯ ಲಿಸ್ಟಿಂಗ್ಗಳ ಸರಾಸರಿ ದರಗಳನ್ನು ಹೋಲಿಸಲು ಅಥವಾ ಗೆಸ್ಟ್ ಪಾವತಿಸುವ ಮತ್ತು ನೀವು ಗಳಿಸುವುದರ ವಿಭಜನೆಯ ವಿವರಗಳನ್ನು ಪಡೆಯಲು ನಿಮ್ಮ ದರದ ಕೆಳಗಿನ ಬಟನ್ಗಳನ್ನು ಸಹ ನೀವು ಬಳಸಬಹುದು.
ಈ ನವೀಕರಣಗಳು ಹೋಸ್ಟ್ಗಳಿಗಾಗಿ 25 ಅಪ್ಗ್ರೇಡ್ಗಳನ್ನು ಒಳಗೊಂಡಿರುವ Airbnb 2023 ಬೇಸಿಗೆಯ ರಿಲೀಸ್ನ ಭಾಗವಾಗಿವೆ. ಇಂದು ಈ ಹೊಸ ಸಾಧನಗಳನ್ನು ಬಳಸುವುದನ್ನು ಪ್ರಾರಂಭಿಸಲು ಆರಂಭಿಕ ಪ್ರವೇಶದ ಈ ಆಫರ್ ಅನ್ನು ಆಯ್ಕೆ ಮಾಡಿ.