ತುರ್ತು ಪರಿಸ್ಥಿತಿಗಳಿಗಾಗಿ ನಿಮ್ಮ ಸ್ಥಳ ಮತ್ತು ನಿಮ್ಮ ಗೆಸ್ಟ್‌ಗಳನ್ನು ಸಿದ್ಧಪಡಿಸುವುದು
ವಿಶೇಷ ಆಕರ್ಷಣೆಗಳು
ಈ ಸಲಹೆಗಳೊಂದಿಗೆ ನಿಮ್ಮ ಸ್ಥಳವನ್ನು ಮತ್ತು ನಿಮ್ಮ ಗೆಸ್ಟ್‌ಗಳನ್ನು ತುರ್ತು ಪರಿಸ್ಥಿತಿಗಳಿಗೆ ಹೇಗೆ ಸಿದ್ಧಪಡಿಸುವುದು ಎಂದು ತಿಳಿಯಿರಿ
ಹೊಗೆ ಮತ್ತು ಕಾರ್ಬನ್ ಮಾನಾಕ್ಸೈಡ್ ಅಲಾರಂಗಳನ್ನು ಸ್ಥಾಪಿಸಿ ಮತ್ತು CO ವಿಷದ ಚಿಹ್ನೆಗಳನ್ನು ತಿಳಿಯಿರಿ
ಮನೆ ನಿರ್ವಹಣಾ ವೇಳಾಪಟ್ಟಿಯನ್ನು ಯೋಜಿಸಿ ಮತ್ತು ಗೆಸ್ಟ್‌ಗಳಿಗೆ ತುರ್ತು ಸರಬರಾಜುಗಳನ್ನು ಒದಗಿಸಿ
ಹೋಸ್ಟ್ ಆಗಿ, ನೀವು ನೆನಪಿಟ್ಟುಕೊಳ್ಳಲು ಸಾಕಷ್ಟು ಸಂಗತಿಗಳಿವೆ ಮತ್ತು ನೀವು ಮನೆಯ ಸುರಕ್ಷತೆಯ ಕಡೆಗೆ ಗಮನಹರಿಸಲು ಪ್ರಯತ್ನಿಸದ ಹೊರತು, ವಿಷಯಗಳು ನಿರ್ಲಕ್ಷ್ಯಕ್ಕೊಳಗಾಗಬಹುದು. ಬ್ಯಾಟರಿಗಳನ್ನು ಬದಲಿಸುವಂತಹ ಮೂಲಭೂತ ಕಾರ್ಯಗಳನ್ನು ಮಾಡುವುದರಿಂದ ಆರಂಭಿಸಿ ಗೆಸ್ಟ್‌ಗಳೊಂದಿಗೆ ಸ್ಥಳಾಂತರ ಯೋಜನೆಯನ್ನು ಹಂಚಿಕೊಳ್ಳುವ ತನಕ, ಬೆಂಕಿ ಅವಘಡ, ನೈಸರ್ಗಿಕ ವಿಪತ್ತು ಅಥವಾ ಬೇರೆ ಯಾವುದಾದರೂ ತುರ್ತು ಸ್ಥಿತಿಯನ್ನು ಎದುರಿಸಲು ನೀವು ಸಿದ್ಧರಾಗಿರುವುದು ಎಷ್ಟು ಮುಖ್ಯ ಎಂಬುದು ನಮಗೆ ತಿಳಿದಿದೆ. ನಾವು ಜಾಗತಿಕ ವಿಪತ್ತು ಸಿದ್ಧತೆ ಕೇಂದ್ರ, ಅಮೆರಿಕನ್ ರೆಡ್ ಕ್ರಾಸ್ ಮತ್ತು ಇತರ ಆರೋಗ್ಯ ಮತ್ತು ಸುರಕ್ಷತಾ ಸಂಸ್ಥೆಗಳಿಂದ ಕೆಲವು ಸಲಹೆಗಳನ್ನು ಒಟ್ಟುಗೂಡಿಸಿದ್ದೇವೆ, ಆದರೆ ನಿಮ್ಮ ಪ್ರದೇಶಕ್ಕೆ ನಿರ್ದಿಷ್ಟವಾದ ಯಾವುದೇ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ನಿಮಗೆ ತಿಳಿದಿರುವುದು ಒಳ್ಳೆಯದು.
ಹೊಗೆ ಮತ್ತು ಕಾರ್ಬನ್ ಮಾನಾಕ್ಸೈಡ್ ಅಲಾರ್ಮ್‌ಗಳನ್ನು ಸ್ಥಾಪಿಸಿ
ಬೆಂಕಿಯ ಅಪಾಯಗಳ ಬಗ್ಗೆ ನಿಮಗೆ ಈಗಾಗಲೇ ತಿಳಿದಿರಬಹುದು, ಆದರೆ ಕಾರ್ಬನ್ ಮಾನಾಕ್ಸೈಡ್ (CO) ಅಪಾಯದ ಬಗ್ಗೆ ನಿಮಗೆ ಗೊತ್ತೇ? ಗ್ಯಾಸ್ ಸ್ಟೌವ್‌ಗಳು, ವಾಟರ್ ಹೀಟರ್‌ಗಳು, ಓವನ್‌ಗಳು, ಫರ್ನೇಸ್‌ಗಳು ಮತ್ತು ಚಾರ್ಕೋಲ್ ಗ್ರಿಲ್‌ಗಳಂತಹ ಅನೇಕ ಸಾಮಾನ್ಯ ಗೃಹೋಪಯೋಗಿ ವಸ್ತುಗಳು CO ಅನ್ನು ಹೊರಸೂಸುತ್ತವೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರಕಾರ, ಅಗೋಚರ, ವಾಸನೆರಹಿತ, ಬಣ್ಣರಹಿತ ಅನಿಲವು ಅಪಾಯಕಾರಿ ಮತ್ತು ಮಾರಕವೂ ಆಗಿರಬಹುದು. ಸರಿಯಾದ ತಪಾಸಣೆ ಮತ್ತು ವಾತಾಯನವಿಲ್ಲದೆ, ಈ ಉಪಕರಣಗಳು ಅಪಾಯಕಾರಿ ಅನಿಲ ಸಂಗ್ರಹಣೆಗೆ ಕಾರಣವಾಗಬಹುದು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಹಾಗೂ ಸಾವಿಗೆ ಸಹ ಕಾರಣವಾಗಬಹುದು.
CDC ಸೂಚಿಸಿದಂತೆ, ಪ್ರತಿ ನಿದ್ರಿಸುವ ಪ್ರದೇಶದ ಬಳಿ ಅಲಾರ್ಮ್‌ಗಳನ್ನು ಸ್ಥಾಪಿಸುವ ಮೂಲಕ CO ವಿಷವನ್ನು ತಡೆಗಟ್ಟಲು ಸಹಾಯ ಮಾಡಿ. ಅಮೆರಿಕನ್ ರೆಡ್ ಕ್ರಾಸ್ ಪ್ರಕಾರ, ನಿಮ್ಮ ಸ್ಥಳದ ಪ್ರತಿಯೊಂದು ಹಂತದಲ್ಲೂ ಮತ್ತು ಪ್ರತಿ ಮಲಗುವ ಪ್ರದೇಶದ ಹೊರಗೆ ಕನಿಷ್ಠ ಹೊಗೆ ಅಲಾರ್ಮ್‌ಗಳನ್ನು ಸ್ಥಾಪಿಸುವ ಮೂಲಕ ನೀವು ಬೆಂಕಿಯನ್ನು ತಡೆಗಟ್ಟಲು ಸಹಾಯ ಮಾಡಬಹುದು. ಹೊಗೆ ಮತ್ತು CO ಎಚ್ಚರಿಕೆ ನೀಡುವ ಸಂಯೋಜಿತ ಅಲಾರ್ಮ್‌ಗಳನ್ನು ಸಹ ನೀವು ಖರೀದಿಸಬಹುದು. ಸಂಭಾವ್ಯ ಗೆಸ್ಟ್‌ಗಳಿಗೆ ಅವರ ಸುರಕ್ಷತೆಯನ್ನು ಗಮನದಲ್ಲಿರಿಸಿ ನೀವು ಈ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ತಿಳಿಸಲು ನಿಮ್ಮ ಲಿಸ್ಟಿಂಗ್ ವಿವರಣೆಯ ಸೌಕರ್ಯಗಳ ವಿಭಾಗವನ್ನು ನವೀಕರಿಸುವುದನ್ನು ಖಚಿತಪಡಿಸಿಕೊಳ್ಳಿ.
CO ವಿಷದ ಅಪಾಯವನ್ನು ಅರ್ಥಮಾಡಿಕೊಳ್ಳಲು ನಿಮ್ಮ ಗೆಸ್ಟ್‌ಗಳಿಗೆ ಸಹಾಯ ಮಾಡಿ
ನೀವು ಕಾರ್ಬನ್ ಮಾನಾಕ್ಸೈಡ್ ಅಲಾರ್ಮ್‌ಗಳನ್ನು ಸ್ಥಾಪಿಸಿದ ನಂತರ, ಕಾರ್ಬನ್ ಮಾನಾಕ್ಸೈಡ್‌ನ ಸಾಮಾನ್ಯ ಮೂಲಗಳು ಮತ್ತು CO ವಿಷದ ಚಿಹ್ನೆಗಳ ಬಗ್ಗೆ ನಿಮಗೆ ತಿಳಿದಿರುವುದು ಒಳ್ಳೆಯದು:
- ಕಾರ್ಬನ್ ಮಾನಾಕ್ಸೈಡ್ ವಿಷ ದೇಹದಲ್ಲಿ ಸೇರಿಕೊಂಡಾಗ ಕಾಣಿಸಿಕೊಳ್ಳುವ ಚಿಹ್ನೆಗಳಲ್ಲಿ ತಲೆನೋವು, ದೌರ್ಬಲ್ಯ, ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿ ಸೇರಿವೆ. ನೀವು ಅಥವಾ ನಿಮ್ಮ ಗೆಸ್ಟ್‌ಗಳು ಇವುಗಳನ್ನು ಅನುಭವಿಸಿದರೆ ಮತ್ತು ನೀವು CO ವಿಷ ದೇಹದಲ್ಲಿ ಸೇರಿಕೊಂಡಿರುವುದನ್ನು ಶಂಕಿಸಿದರೆ, ನೀವು ತಕ್ಷಣ ಕಟ್ಟಡದಿಂದ ನಿರ್ಗಮಿಸಲು ಮತ್ತು 911 ಗೆ ಕರೆ ಮಾಡಲು CDC ಶಿಫಾರಸು ಮಾಡುತ್ತದೆ.
- ಗ್ಯಾರೇಜುಗಳು ಮತ್ತು ನೆಲಮಾಳಿಗೆಗಳು ಸೇರಿದಂತೆ ಒಳಾಂಗಣಗಳಲ್ಲಿ ಗೆಸ್ಟ್‌ಗಳು ಗ್ರಿಲ್ ಅಥವಾ ಕ್ಯಾಂಪ್ ಸ್ಟೌವ್ ಅನ್ನು ಏಕೆ ಎಂದಿಗೂ ಬಳಸಬಾರದು ಎಂಬುದರ ಕುರಿತು ತಿಳಿದುಕೊಳ್ಳಲು ನಿಮ್ಮ ಮನೆಯ ಕೈಪಿಡಿ ಒಂದು ಉತ್ತಮ ಸಾಧನವಾಗಿದೆ. ಬೆಚ್ಚಗಿನ ಅನುಭವಕ್ಕಾಗಿ ಸ್ಟೌವ್‌ಗಳು ಅಥವಾ ಒವನ್‌ಗಳನ್ನು ಬಳಸಲು ನಿಮ್ಮ ಗೆಸ್ಟ್‌ಗಳನ್ನು ಪ್ರಚೋದಿಸಬಹುದಾದ ಹವಾಮಾನಗಳ ಸ್ಥಳಗಳಲ್ಲಿ ಈ ಜ್ಞಾಪನೆಯು ವಿಶೇಷವಾಗಿ ಮುಖ್ಯವಾಗಿದೆ. ನೀವು CO ನ ಅಪಾಯಗಳನ್ನು ವಿವರಿಸಬಹುದು ಮತ್ತು ವಿಶ್ವಾಸಾರ್ಹ ಶಾಖದ ಮೂಲಗಳನ್ನು ಒದಗಿಸಲು ಮರೆಯದಿರಿ.
- CO ಅಲಾರ್ಮ್ ಶಬ್ದ ಮಾಡಿದರೆ, ಗೆಸ್ಟ್‌ಗಳು ತಕ್ಷಣವೇ ಹೊರಾಂಗಣಕ್ಕೆ ಹೋಗುವುದು ಅಥವಾ ಹೊರಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ ತೆರೆದ ಕಿಟಕಿ ಅಥವಾ ಬಾಗಿಲಿನ ಬಳಿ ಸರಿಯುವುದು ಮುಂತಾದ ಸುರಕ್ಷತಾ ಪ್ರೊಟೋಕಾಲ್ ಅನ್ನು ಅನುಸರಿಸಬೇಕೆಂದು ನೀವು ನಿಮ್ಮ ಮನೆ ಕೈಪಿಡಿ ಮೂಲಕ ತಿಳಿಸಬಹುದು.
- ಗಮನಿಸಿ: ಯಾವುದೇ ಇಂಧನ-ಸುಡುವ ಉಪಕರಣಗಳನ್ನು ಹೊಂದಿರದ ಕೆಲವು ಮನೆಗಳಿಗೆ (ಅಂದರೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಉಪಕರಣಗಳನ್ನು ಹೊಂದಿದ ಮನೆಗಳಿಗೆ) CO ಅಲಾರ್ಮ್‌ಗಳ ಅಗತ್ಯವಿಲ್ಲದಿರಬಹುದು, ಆದರೆ ದೃಢೀಕರಿಸಲು ನಿಮ್ಮ ಸ್ಥಳೀಯ ಅಗ್ನಿಶಾಮಕ ಇಲಾಖೆಯ ತುರ್ತು ಅಲ್ಲದ ಸಂಖ್ಯೆಯನ್ನು ಸಂಪರ್ಕಿಸುವುದು ಒಳ್ಳೆಯದು.
ನಿಮ್ಮ ಹೋಸ್ಟಿಂಗ್ ದಿನಚರಿಯಲ್ಲಿ ನಿರ್ವಹಣಾ ವೇಳಾಪಟ್ಟಿಯನ್ನು ನಿರ್ಮಿಸಿ
ನಿಮ್ಮ ಹೊಗೆ ಮತ್ತು ಕಾರ್ಬನ್ ಮೊನಾಕ್ಸೈಡ್ ಅಲಾರ್ಮ್‌ಗಳನ್ನು ನಿಯಮಿತವಾಗಿ ಪರೀಕ್ಷಿಸಿ. ಪ್ರತಿ ವಸಂತ ಮತ್ತು ಶರತ್ಕಾಲದಲ್ಲಿ ನಿಮ್ಮ ಗಡಿಯಾರಗಳಲ್ಲಿ ಸಮಯವನ್ನು ಹೊಂದಿಸುವಾಗ ಬ್ಯಾಟರಿಗಳನ್ನು ಪರಿಶೀಲಿಸಲು ಅಥವಾ ಬದಲಾಯಿಸಲು CDC ಶಿಫಾರಸು ಮಾಡುತ್ತದೆ. ಹೆಚ್ಚಿನ ಅಲಾರಾಂಗಳನ್ನು ಪ್ರತಿ ಐದು ರಿಂದ 10 ವರ್ಷಗಳಿಗೊಮ್ಮೆ ಬದಲಾಯಿಸಬೇಕು, ಆದರೆ ತಯಾರಕರ ಸೂಚನೆಗಳನ್ನು ಪರಿಶೀಲಿಸಿ; ಅನೇಕ ಘಟಕಗಳ ಹಿಂದೆ ಅವುಗಳ ಮುಕ್ತಾಯ ದಿನಾಂಕವನ್ನು ಸೂಚಿಸುವ ಟ್ಯಾಗ್ ಅಥವಾ ದಿನಾಂಕದ ಸ್ಟಾಂಪ್ ಅನ್ನು ಹೊಂದಿರುತ್ತವೆ. ಮರ ಮತ್ತು ಕಲ್ಲಿದ್ದಲು ಒಲೆಗಳು, ಅಗ್ನಿಶಾಮಕಗಳು, ಚಿಮಣಿಗಳು ಮತ್ತು ಕುಲುಮೆಗಳನ್ನು ವರ್ಷಕ್ಕೊಮ್ಮೆ ವೃತ್ತಿಪರವಾಗಿ ತಪಾಸಣೆ ಮಾಡಿ ಸ್ವಚ್ಛಗೊಳಿಸಲು ಶಿಫಾರಸು ಮಾಡುತ್ತೇವೆ. ವಾಟರ್ ಹೀಟರ್‌ಗಳನ್ನು ಕನಿಷ್ಠ ವರ್ಷಕ್ಕೊಮ್ಮೆ ಸರ್ವೀಸ್ ಮಾಡಬೇಕು.
ಅಗ್ನಿ ಆಕಸ್ಮಿಕಗಳಿಂದ ನಿಮ್ಮ ಸ್ಥಳ ಮತ್ತು ಗೆಸ್ಟ್‌ಗಳನ್ನು ರಕ್ಷಿಸಿ
ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಸ್ಥಳವನ್ನು ಹೊಂದಿಸಿ ಮತ್ತು ಬೆಂಕಿಯ ಸಂದರ್ಭದಲ್ಲಿ ಏನು ಮಾಡಬೇಕೆಂದು ನಿಮ್ಮ ಗೆಸ್ಟ್‌ಗಳಿಗೆ ತಿಳಿಸಿ:
- ಸಾಧ್ಯವಾದರೆ ಅಡುಗೆಮನೆ, ಗ್ಯಾರೇಜ್ ಮತ್ತು ಪ್ರತಿ ಮಹಡಿಯಲ್ಲಿ ಅಗ್ನಿಶಾಮಕ ಸಾಧನಗಳನ್ನು ಸ್ಥಾಪಿಸಿ. ಅಮೇರಿಕನ್ ರೆಡ್ ಕ್ರಾಸ್ ಪ್ರಕಾರ, ಶಾಖವು ಅವುಗಳನ್ನು ಕಡಿಮೆ ಪರಿಣಾಮಕಾರಿ ಮಾಡುವ ಕಾರಣ ಅವುಗಳನ್ನು ಶಾಖ ಮೂಲಗಳಿಂದ (ಉದಾ: ಒವನ್) ದೂರವಿಡಿ. ಅವು ಇರುವ ಜಾಗದ ಬಗ್ಗೆ ಬಾಗಿಲುಗಳು ಮತ್ತು ಕ್ಯಾಬಿನೆಟ್‌ಗಳಲ್ಲಿ ಸ್ಟಿಕ್ಕರ್‌ಗಳನ್ನು ಹಾಕುವ ಮೂಲಕ ಮತ್ತು ನಿಮ್ಮ ಮನೆಯ ಕೈಪಿಡಿಯಲ್ಲಿ ಅವುಗಳ ಸ್ಥಳವನ್ನು ಸೇರಿಸುವ ಮೂಲಕ ಅವುಗಳನ್ನು ಸುಲಭವಾಗಿ ಕಂಡುಹಿಡಿಯಲು ಅನುವು ಮಾಡಿಕೊಡಿ.
- ಸ್ಥಳಾಂತರಿಸುವ ಯೋಜನೆಯನ್ನು ರಚಿಸಿ ಅದರಲ್ಲಿ ಪ್ರತಿ ಕೊಠಡಿಯಿಂದ ನಿರ್ಗಮಿಸಲು ಇರುವ ಎರಡು ದಾರಿಗಳನ್ನು ಸೇರಿಸಿ ಮತ್ತು ಹೊರಗೆ ಸೇರಲು ಮೊದಲೇ ಗುರುತಿಸಲಾದ ಸ್ಥಳವನ್ನು ತಿಳಿಸಿ ಮತ್ತು ಅದನ್ನು ನಿಮ್ಮ ಮನೆಯ ಕೈಪಿಡಿಯಲ್ಲಿಯೂ ಸೇರಿಸಿ.
- ನಿಮ್ಮ ಸ್ಟೌವ್ ಪ್ರದೇಶವನ್ನು ಸ್ವಚ್ಛವಾಗಿರಿಸಿ ಮತ್ತು ಬೆಂಕಿ ಹತ್ತಿಕೊಳ್ಳುವ ಯಾವುದೇ ವಸ್ತುವನ್ನು ತೆಗೆದುಹಾಕಿ.
- ನೀವು ಸ್ಪೇಸ್ ಹೀಟರ್ ಅನ್ನು ಖರೀದಿಸಿದರೆ, ಅದು ಬಿದ್ದರೆ ಕೆಲಸ ಮಾಡುವುದನ್ನು ನಿಲ್ಲಿಸುವ ಮಾಡಲ್ ಅನ್ನು ಆಯ್ಕೆಮಾಡಿ.
- ಬಳಕೆಯಲ್ಲಿಲ್ಲದಿದ್ದಾಗ ಪೋರ್ಟಬಲ್ ಹೀಟರ್‌ಗಳನ್ನು ಆಫ್ ಮಾಡಲು ಗೆಸ್ಟ್‌ಗಳಿಗೆ ನೆನಪಿಸಿ, ಒಳಗೆ ಧೂಮಪಾನ ಮಾಡುವುದನ್ನು ತಪ್ಪಿಸಿ ಮತ್ತು ಮೇಣದಬತ್ತಿಗಳನ್ನು ನಿಗಾ ವಹಿಸಿ.
ನೈಸರ್ಗಿಕ ವಿಪತ್ತುಗಳಿಗೆ ಮುಂಚಿತವಾಗಿ ಯೋಜಿಸಿ
ಭೂಕಂಪ ಮತ್ತು ಚಂಡಮಾರುತಗಳಿಂದ ತೂಫಾನು ಮತ್ತು ಚಳಿಗಾಲದ ತೀವ್ರ ಬಿರುಗಾಳಿಯವರೆಗೆ, ನೈಸರ್ಗಿಕ ವಿಪತ್ತುಗಳಿಗೆ ನೀವು ಸಿದ್ಧತೆ ನಡೆಸಬಹುದು. ಹೋಸ್ಟ್ ಆಗಿ ನೀವು ಹೇಗೆ ಸಿದ್ಧರಾಗಬಹುದು ಎನ್ನುವ ಕುರಿತು ಕೆಲವು ಸಲಹೆಗಳು ಇಲ್ಲಿವೆ:
- ಎಚ್ಚರಿಕೆಗಳಿಗಾಗಿ ಸೈನ್ ಅಪ್ ಮಾಡಿ: ಜಾಗತಿಕ ವಿಪತ್ತು ಸಿದ್ಧತಾ ಕೇಂದ್ರವು ತನ್ನತುರ್ತುಸ್ಥಿತಿ ಆ್ಯಪ್‌ಗಳ ಮೂಲಕ ನೈಜ-ಸಮಯದ ತುರ್ತುಸ್ಥಿತಿ ಎಚ್ಚರಿಕೆಗಳು ಮತ್ತು ಇತರ ಅಧಿಸೂಚನೆಗಳನ್ನು ಒದಗಿಸುತ್ತದೆ.
- ಗೆಸ್ಟ್‌ಗಳು ಮಾಹಿತಿ ಹೊಂದಿರಲು ಸಹಾಯ ಮಾಡುವುದಕ್ಕಾಗಿ ಅವರಿಗೆ ಸ್ಥಳೀಯ ಟಿವಿ ಮತ್ತು ರೇಡಿಯೊ ಸ್ಟೇಷನ್‌ಗಳ ಮಾಹಿತಿಯನ್ನು ಒದಗಿಸಿ.
- ಅವರ ಫೋನ್‌ಗಳನ್ನು ಪೂರ್ಣ ಚಾರ್ಜ್ ಮಾಡಿ ಇರಿಸಿಕೊಳ್ಳುವಂತೆ, ಹೆಚ್ಚುವರಿ ಹಣವನ್ನು ಕೊಂಡೊಯ್ಯುವಂತೆ ಮತ್ತು ಅವರಲ್ಲಿ ಕಾರ್ ಇದ್ದರೆ ಇಂಧನ ತುಂಬಿಸಿಕೊಳ್ಳುವಂತೆ ಅವರಿಗೆ ಜ್ಞಾಪಿಸಿ.
ಪ್ರಥಮ ಚಿಕಿತ್ಸಾ ಕಿಟ್‌ಗಳು ಮತ್ತು ಇತರ ತುರ್ತು ಸರಬರಾಜುಗಳನ್ನು ಒದಗಿಸಿ
ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಗೆಸ್ಟ್‌ಗಳಿಗೆ ಅಗತ್ಯವಿರುವ ಸರಬರಾಜುಗಳೊಂದಿಗೆ ನಿಮ್ಮ ಲಿಸ್ಟಿಂಗ್ ಅನ್ನು ಸಜ್ಜುಗೊಳಿಸಿ:
- ಸರ್ವೈವಲ್ ಕಿಟ್ ತಯಾರಿಸಿ ಅಥವಾ ಖರೀದಿಸಿ ಮತ್ತು ನೀರು, ನಾಶವಾಗದ ಆಹಾರ, ಫ್ಲ್ಯಾಷ್‌ಲೈಟ್ ಮತ್ತು ಹೆಚ್ಚುವರಿ ಬ್ಯಾಟರಿಗಳಂತಹ ಅಗತ್ಯ ವಸ್ತುಗಳನ್ನು ಸೇರಿಸಿ.
- ನಿಮ್ಮ ಪ್ರದೇಶದಲ್ಲಿನ ಅಪಾಯಗಳಿಗೆ ಸಂಬಂಧಿಸಿದ ಪ್ರಥಮ ಚಿಕಿತ್ಸಾ ಕಿಟ್ ಮತ್ತು ಇತರ ವಸ್ತುಗಳನ್ನು ಸೇರಿಸಿ-ಉದಾಹರಣೆಗೆ, ನಿಮ್ಮ ಸ್ಥಳವು ಪ್ರವಾಹ ವಲಯದಲ್ಲಿದ್ದರೆ ಲೈಫ್ ಜಾಕೆಟ್‌ಗಳು ಅಥವಾ ಹಿಮಪಾತದಿಂದ ಪ್ರಭಾವಿತವಾಗಬಹುದಾದ ಪ್ರದೇಶವಾಗಿದ್ದರೆ ಬೆಚ್ಚಗಿನ ಕಂಬಳಿಗಳನ್ನು ಸೇರಿಸಿ. ಸ್ಥಳಾಂತರಿಸುವ ಸಂದರ್ಭದಲ್ಲಿ ಸರಬರಾಜುಗಳನ್ನು ಸುಲಭವಾಗಿ ಸಾಗಿಸುವ ಬ್ಯಾಗ್‌ನಲ್ಲಿ ಇರಿಸಿ.
ತುರ್ತು ಮಾಹಿತಿಯನ್ನು ಕೈಗೆಟುಕುವಂತೆ ಇರಿಸಿ
Airbnb ಯ ನವೀಕರಿಸಿದ ತುರ್ತು ಮಾರ್ಗದರ್ಶಿಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಪಡೆಯುವುದು ಹೇಗೆ ಎಂದು ನಿಮ್ಮ ಗೆಸ್ಟ್‌ಗಳಿಗೆ ತಿಳಿಸಿ. ನಿಮ್ಮ ಸ್ಥಳೀಯ ಪೊಲೀಸ್ ಠಾಣೆ, ಆಸ್ಪತ್ರೆ ಮತ್ತು ಅಗ್ನಿಶಾಮಕ ಇಲಾಖೆಯ ಫೋನ್ ಮತ್ತು ವಿಳಾಸ ಮಾಹಿತಿ; ನಿಮ್ಮ ಅಗ್ನಿಶಾಮಕ, ಪ್ರಥಮ ಚಿಕಿತ್ಸಾ ಕಿಟ್ ಮತ್ತು ಅನಿಲ ಸ್ಥಗಿತ ಕವಾಟದಂತಹ ಸುರಕ್ಷತಾ ಸೌಲಭ್ಯಗಳ ಸ್ಥಳ; ಮತ್ತು ನಿಮ್ಮ ತುರ್ತು ಸ್ಥಳಾಂತರಿಸುವ ಯೋಜನೆಯನ್ನು ಭರ್ತಿ ಮಾಡಲು ಮಾರ್ಗದರ್ಶಿ ನಿಮ್ಮನ್ನು ಕೇಳುತ್ತದೆ. ಮಾರ್ಗದರ್ಶಿಯ ಕನಿಷ್ಠ ಎರಡು ಆವೃತ್ತಿಗಳನ್ನು ಭರ್ತಿ ಮಾಡಲು ನಾವು ಶಿಫಾರಸು ಮಾಡುತ್ತೇವೆ: ಒಂದು ಇಂಗ್ಲಿಷ್‌ನಲ್ಲಿ ಮತ್ತು ಇನ್ನೊಂದು ನಿಮ್ಮ ಸ್ಥಳೀಯ ಭಾಷೆಯಲ್ಲಿ. ಅಡಿಗೆ ಅಥವಾ ಪ್ರವೇಶದ್ವಾರದಂತಹ ಸಾಮಾನ್ಯ ಪ್ರದೇಶದಲ್ಲಿ ಮಾರ್ಗದರ್ಶಿಯನ್ನು ಇರಿಸಿ ಮತ್ತು ಅದನ್ನು ನಿಮ್ಮ ಮನೆಯ ಕೈಪಿಡಿಯಲ್ಲಿ ಸೇರಿಸಿ.
ನಿಮ್ಮ ಮನೆ ಕೈಪಿಡಿಯಲ್ಲಿ ನಿಮ್ಮ ಪ್ರಾಪರ್ಟಿಗೆ ಸ್ಪಷ್ಟ ದಾರಿ ನಿರ್ದೇಶನಗಳನ್ನು ಸೇರಿಸುವುದು ಮತ್ತು ನಿಮ್ಮ ಗೆಸ್ಟ್‌ಗಳು ಸುರಕ್ಷಿತವಾಗಿ ಪ್ರಯಾಣಿಸಲು ಸಹಾಯ ಮಾಡುವುದಕ್ಕಾಗಿ, ಚೆಕ್-ಇನ್ ಮಾಡುವ ಮೊದಲು ಅವರಿಗೆ ಆ ಕೈಪಿಡಿಯನ್ನು ಕಳುಹಿಸುವುದು ಸಹ ಉತ್ತಮ ಯೋಚನೆಯಾಗಿದೆ. ಅವರು ಕತ್ತಲೆಯ ನಂತರ ಆಗಮಿಸಲಿದ್ದರೆ, ನೀವು ಅವರಿಗೆ ಜಾಗದ ಮುಖಮಂಟಪದ ಮತ್ತು ಒಳಾಂಗಣದ ಬೆಳಕನ್ನು ಆನ್ ಇರಿಸುವುದನ್ನು ಪರಿಗಣಿಸಬಹುದು, ಮತ್ತು ಅವರು ಕೀಲಿ ಬಾಕ್ಸ್ ಅನ್ನು ಕಂಡುಹಿಡಿಯಲು ಅಥವಾ ಒಳಗೆ ಪ್ರವೇಶಿಸಲು ಅಗತ್ಯವಿರುವ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಒದಗಿಸಬಹುದು.
ಎಲ್ಲ ಸಂಗತಿಗಳು ನಿಮ್ಮ ನಿಯಂತ್ರಣದಲ್ಲಿ ಇರುವುದಕ್ಕಾಗಿ ನಿಮಗೆ ಸಹಾಯ ಮಾಡಲು, ನಿಮ್ಮ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಅಪ್‌ಡೇಟ್ ಮಾಡಿಡುವುದು ಮತ್ತು ನಿಮ್ಮ ಸ್ಮೋಕ್ ಅಲಾರ್ಮ್‍ಗಳನ್ನು ಪರಿಶೀಲಿಸುವುದು ಸೇರಿದಂತೆ, ನಿಮ್ಮ ಹೋಸ್ಟಿಂಗ್ ದಿನಚರಿಯ ಭಾಗವಾಗಿ ನೀವು ಮುದ್ರಿಸಿಡಬಹುದಾದ, ಪೋಸ್ಟ್ ಮಾಡಬಹುದಾದ ಮತ್ತು ಪರಿಶೀಲಿಸಬಹುದಾದ ಒಂದು ಸುರಕ್ಷತಾ ಚೆಕ್‌ಲಿಸ್ಟ್ ಅನ್ನು ಸಹ ನಾವು ರಚಿಸಿದ್ದೇವೆ. ನಿಮ್ಮ ಸ್ಥಳವನ್ನು—ಮತ್ತು ನಿಮ್ಮ ಗೆಸ್ಟ್‌ಗಳನ್ನು—ಸುರಕ್ಷಿತವಾಗಿಡುವಲ್ಲಿ ನಿಮ್ಮ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಧನ್ಯವಾದಗಳು.
ನಿಮ್ಮ ಮನೆಯನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳುವುದು ಎಂಬುದರ ಕುರಿತು ಹೆಚ್ಚಿನ ಸಲಹೆಗಳಿಗೆ Centers for Disease Control and Prevention, Global Disaster Preparedness Center, ಮತ್ತು American Red Crossಗಳಿಗೆ ಭೇಟಿ ಕೊಡಿ. Centers for Disease Control and Prevention, Global Disaster Preparedness Center, ಮತ್ತು American Red Cross ಈ ಕಂಟೆಂಟನ್ನಾಗಲೀ ಅಥವಾ Airbnb ಯನ್ನಾಗಲೀ ಅನುಮೋದಿಸುವುದಿಲ್ಲ.
ವಿಶೇಷ ಆಕರ್ಷಣೆಗಳು
ಈ ಸಲಹೆಗಳೊಂದಿಗೆ ನಿಮ್ಮ ಸ್ಥಳವನ್ನು ಮತ್ತು ನಿಮ್ಮ ಗೆಸ್ಟ್‌ಗಳನ್ನು ತುರ್ತು ಪರಿಸ್ಥಿತಿಗಳಿಗೆ ಹೇಗೆ ಸಿದ್ಧಪಡಿಸುವುದು ಎಂದು ತಿಳಿಯಿರಿ
ಹೊಗೆ ಮತ್ತು ಕಾರ್ಬನ್ ಮಾನಾಕ್ಸೈಡ್ ಅಲಾರಂಗಳನ್ನು ಸ್ಥಾಪಿಸಿ ಮತ್ತು CO ವಿಷದ ಚಿಹ್ನೆಗಳನ್ನು ತಿಳಿಯಿರಿ
ಮನೆ ನಿರ್ವಹಣಾ ವೇಳಾಪಟ್ಟಿಯನ್ನು ಯೋಜಿಸಿ ಮತ್ತು ಗೆಸ್ಟ್‌ಗಳಿಗೆ ತುರ್ತು ಸರಬರಾಜುಗಳನ್ನು ಒದಗಿಸಿ