ಹವಾಮಾನ ತುರ್ತುಸ್ಥಿತಿಗಳಿಗಾಗಿ ಮುಂಚಿತವಾಗಿ ಯೋಜಿಸಿ
ತೀವ್ರ ಹವಾಮಾನಕ್ಕೆ ಸಿದ್ಧರಾಗಿರುವುದು ನಿಮ್ಮನ್ನು, ನಿಮ್ಮ ಗೆಸ್ಟ್‌ಗಳನ್ನು ಮತ್ತು ನಿಮ್ಮ ಆಸ್ತಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಆರೋಗ್ಯ-ಕೇಂದ್ರಿತ ಪರಿಹಾರ ಮತ್ತು ಅಭಿವೃದ್ಧಿ ಸಂಸ್ಥೆ ಅಮೆರಿಕೇರ್ಸ್ ಗೆಸ್ಟ್‌ಗಳನ್ನು ಬೆಂಬಲಿಸಲು ಮತ್ತು ಚಂಡಮಾರುತಗಳು, ಸುಂಟರಗಾಳಿಗಳು ಮತ್ತು ಶಾಖ ತರಂಗಗಳ ಸಮಯದಲ್ಲಿ ಆಸ್ತಿ ಹಾನಿಯನ್ನು ಕಡಿಮೆ ಮಾಡಲು ಈ ಸಲಹೆಗಳನ್ನು ನೀಡುತ್ತದೆ.
ಬೆಂಬಲಿಸುವ ಗೆಸ್ಟ್‌ಗಳು
ಸ್ಥಳೀಯ ಹವಾಮಾನದ ಬಗ್ಗೆ ಮತ್ತು ಹವಾಮಾನ ತುರ್ತು ಪರಿಸ್ಥಿತಿಯಲ್ಲಿ ಏನು ಮಾಡಬೇಕೆನ್ನುವುದರ ಬಗ್ಗೆ ಗೆಸ್ಟ್‌ಗಳಿಗೆ ತಿಳಿದಿಲ್ಲದಿರಬಹುದು. ಅಮೆರಿಕೇರ್ಸ್ ಪ್ರಕಾರ, ಅವರನ್ನು ಬೆಂಬಲಿಸಲು ಕೆಲವು ಮಾರ್ಗಗಳು ಇಲ್ಲಿವೆ.
ಪ್ರಮುಖ ಮಾಹಿತಿಯನ್ನು ಬರೆಯಿರಿ ಅಥವಾ ಮುದ್ರಿಸಿ ಮತ್ತು ಅದನ್ನು ಪ್ರಮುಖ ಸ್ಥಳದಲ್ಲಿ ಇಡಿ.
ತುರ್ತು ಸಂಪರ್ಕಗಳು: ರಾಷ್ಟ್ರೀಯ ತುರ್ತು ಸಹಾಯವಾಣಿ (911, 999, ಅಥವಾ 112) ಜೊತೆಗೆ ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳ ಫೋನ್ ಸಂಖ್ಯೆಗಳನ್ನು ಲಿಸ್ಟ್ ಮಾಡಿ.
ಪ್ರಾಪರ್ಟಿ ವಿಳಾಸ: ನಿಮ್ಮ ಸ್ಥಳದ ಸಂಪೂರ್ಣ ಬೀದಿ ವಿಳಾಸ, ಪ್ರಮುಖ ಅಡ್ಡ ಬೀದಿಗಳು ಅಥವಾ ಲ್ಯಾಂಡ್‌ಮಾರ್ಕ್‌ಗಳು ಮತ್ತು ನೆರೆಹೊರೆಯ, ಜಿಲ್ಲೆ ಅಥವಾ ವಲಯದ ಹೆಸರನ್ನು ಒದಗಿಸಿ.
ಬಿರುಗಾಳಿ ಆಶ್ರಯ: ಸುಂಟರಗಾಳಿ ಅಥವಾ ಚಂಡಮಾರುತದ ಸಮಯದಲ್ಲಿ, ನೆಲಮಾಳಿಗೆ ಅಥವಾ ಕಿಟಕಿಗಳು ಅಥವಾ ಸ್ಕೈಲೈಟ್‌ಗಳಿಲ್ಲದ ಆಂತರಿಕ ಕೋಣೆಯಂತಹ ಸ್ಥಳದಲ್ಲಿ ಎಲ್ಲಿ ಆಶ್ರಯ ಪಡೆಯಬೇಕು ಎಂಬುದನ್ನು ಗಮನಿಸಿ.
ಪ್ರದೇಶದ ನಕ್ಷೆ: ಸಂಭಾವ್ಯ ಸ್ಥಳಾಂತರಿಸುವ ಮಾರ್ಗಗಳು, ಸಮುದಾಯವನ್ನು ಸ್ಥಳಾಂತರಿಸುವ ಆಶ್ರಯಗಳು ಮತ್ತು ಕೂಲಿಂಗ್ ಕೇಂದ್ರಗಳನ್ನು ಗುರುತಿಸಿ. ಯಾವ ಸ್ಥಳಗಳು ಸಾಕುಪ್ರಾಣಿಗಳನ್ನು ಅನುಮತಿಸುತ್ತವೆ ಎಂಬುದನ್ನು ಗಮನಿಸಿ.
ನಿಮ್ಮ ಲಿಸ್ಟಿಂಗ್, ಸಂದೇಶಗಳು ಮತ್ತು ರದ್ದತಿ ನೀತಿಯನ್ನು ರಚಿಸುವಾಗ ಋತುಮಾನದ ಹವಾಮಾನವನ್ನು ಪರಿಗಣಿಸಿ.
ಮನೆ ನಿಯಮಗಳು: ಋತುಮಾನದ ಹವಾಮಾನದ ಬಗ್ಗೆ ಮೂಲಭೂತ ವಿವರಗಳನ್ನುಸೇರಿಸಿ. ಉದಾಹರಣೆಗೆ, "ಚಂಡಮಾರುತದ ಸೀಸನ್ ಸಾಮಾನ್ಯವಾಗಿ ಜೂನ್‌ನಿಂದ ನವೆಂಬರ್‌ವರೆಗೆ ಇರುತ್ತದೆ."
ರದ್ದತಿ ನೀತಿ: ತೀವ್ರವಾದ ಹವಾಮಾನವು ಹವಾನಿಯಂತ್ರಣವಿಲ್ಲದ ಸ್ಥಳಗಳಿಗೆ ಅಲ್ಲದೆ ಕ್ಯಾಂಪರ್‌ಗಳು, ಟೆಂಟ್‌ಗಳು ಮತ್ತು ಟ್ರೀಹೌಸ್‌ಗಳಂತಹ ವಿಶಿಷ್ಟ ವಾಸ್ತವ್ಯಗಳಿಗೆ ಹೆಚ್ಚಿನ ಅಪಾಯಗಳನ್ನು ಉಂಟುಮಾಡಬಹುದು. ಹೊಂದಿಕೊಳ್ಳುವ ರದ್ದತಿ ನೀತಿಯನ್ನು ನೀಡುವುದು ಮುನ್ಸೂಚನೆಗಳನ್ನು ಆಧರಿಸಿ ಯೋಜನೆಗಳನ್ನು ರೂಪಿಸಲು ಗೆಸ್ಟ್‌ಗಳಿಗೆ ಹೆಚ್ಚು ಅವಕಾಶ ನೀಡುತ್ತದೆ.
- ತ್ವರಿತ ಪ್ರತಿಕ್ರಿಯೆಗಳು ಮತ್ತು ಶೆಡ್ಯೂಲ್ ಮಾಡಿರುವ ಮೆಸೇಜ್‌ಗಳು: ತೀವ್ರ ಹವಾಮಾನ ಮುನ್ಸೂಚನೆ ಇದ್ದಾಗ ನೀವು ಹಂಚಿಕೊಳ್ಳಬಹುದಾದ ಸಲಹೆಗಳನ್ನು ಸೇವ್ ಮಾಡಲು ನಿಮ್ಮ ಮೆಸೇಜ್‌ಗಳ ಟ್ಯಾಬ್‌ನಲ್ಲಿರುವ ಟೂಲ್‌ಗಳನ್ನು ಬಳಸಿ. ಉದಾಹರಣೆಗೆ, ಹೀಟ್ ವೇವ್ ಸಮಯದಲ್ಲಿ ತಣ್ಣಗಿರಲು ಎಲ್ಲಿಗೆ ಹೋಗಬೇಕು ಎಂದು ಸೂಚಿಸುವ ತ್ವರಿತ ಪ್ರತಿಕ್ರಿಯೆಯನ್ನು ನೀವು ರಚಿಸಬಹುದು.
ಗೆಸ್ಟ್‌ಗಳೊಂದಿಗೆ ಸಂವಹನ ನಡೆಸುವುದು
ಹವಾಮಾನ ಸಲಹೆಗಳ ಬಗ್ಗೆ ನಿಮ್ಮ ಗೆಸ್ಟ್‌ಗಳಿಗೆ ಸಂದೇಶ ಕಳುಹಿಸುವಂತೆ ಅಮೆರಿಕೇರ್ಸ್ ಸೂಚನೆ ನೀಡುತ್ತದೆ. ನೀವು ಅವರಿಗೆ ಸ್ಥಳೀಯ ಸಂಪನ್ಮೂಲಗಳ ಬಗ್ಗೆ ನೆನಪಿಸಬಹುದು ಮತ್ತು ಅವರ ವಾಸ್ತವ್ಯದ ಅವಧಿಯಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೇಕಾದ ಸಲಹೆಗಳನ್ನು ಹಂಚಿಕೊಳ್ಳಬಹುದು.
ಆಸ್ತಿ ಹಾನಿಯನ್ನು ಕಡಿಮೆ ಮಾಡುವುದು
ಹವಾಮಾನ-ನಿರೋಧಕ ಸುಧಾರಣೆಗಳು ಚಂಡಮಾರುತ ಅಥವಾ ಸುಂಟರಗಾಳಿಯಿಂದ ಆಸ್ತಿ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು ಮತ್ತು ಶಾಖದ ತರಂಗದ ಸಮಯದಲ್ಲಿ ನಿಮ್ಮ ಸ್ಥಳವನ್ನು ಹೆಚ್ಚು ಆರಾಮದಾಯಕವಾಗಿಸಲು ನೆರವಾಗಬಹುದು. ನಿಮ್ಮ ಸ್ಥಳವನ್ನು ಕಾಪಾಡಿಕೊಳ್ಳಲು ಮತ್ತು ಸುರಕ್ಷಿತವಾಗಿಡಲು ಅಮೆರಿಕೇರ್ಸ್ ಈ ಮುಂದಿನ ಹಂತಗಳನ್ನು ಪಾಲಿಸುವಂತೆ ಶಿಫಾರಸು ಮಾಡುತ್ತದೆ.
ಈ ಲೇಖನದಲ್ಲಿ ಇರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.