ತ್ವರಿತ ಬುಕಿಂಗ್ ಕುರಿತು ಅರ್ಥಮಾಡಿಕೊಳ್ಳುವುದು
ಲಭ್ಯವಿರುವ ದಿನಾಂಕಗಳಿಗಾಗಿ ನಿಮ್ಮ ಮನೆಯನ್ನು ತಕ್ಷಣವೇ ಬುಕ್ ಮಾಡಲು ತ್ವರಿತ ಬುಕಿಂಗ್ ಗೆಸ್ಟ್‌ಗಳಿಗೆ ಅನುವು ಮಾಡುತ್ತದೆ. ನೀವು ಪ್ರತಿ ಬುಕಿಂಗ್ ವಿನಂತಿಯನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಮತ್ತು ಸ್ವೀಕರಿಸುವ ಅಗತ್ಯವಿಲ್ಲ. ಇದರಿಂದ ಸಮಯ ಉಳಿತಾಯವಾಗುತ್ತದೆ. ಅನೇಕ ಗೆಸ್ಟ್‌ಗಳೂ ಕೂಡಾ ತ್ವರಿತ ಬುಕಿಂಗ್ ಒದಗಿಸುವ ಅನುಕೂಲತೆಯನ್ನು ಇಷ್ಟಪಡುತ್ತಾರೆ.
ತ್ವರಿತ ಬುಕಿಂಗ್ ಹೇಗೆ ಕಾರ್ಯನಿರ್ವಹಿಸುತ್ತದೆ
ನೀವು ಯಾವುದೇ ಸಮಯದಲ್ಲಿ ತ್ವರಿತ ಬುಕಿಂಗ್ಅನ್ನು ಆನ್ ಅಥವಾ ಆಫ್ ಮಾಡಬಹುದು. ಲಿಸ್ಟಿಂಗ್‌ಗಳ ಟ್ಯಾಬ್‌ನಲ್ಲಿ ನಿಮ್ಮ ಬುಕಿಂಗ್ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡಿ.
ತ್ವರಿತ ಬುಕಿಂಗ್ ಬಳಸುವಾಗ, ಎಲ್ಲ ಬುಕಿಂಗ್ ಗೆಸ್ಟ್‌ಗಳು Airbnb ಯ ಗುರುತಿನ ಪರಿಶೀಲನೆ ಪ್ರಕ್ರಿಯೆಯನ್ನು ಅನುಸರಿಸಬೇಕು, ನಿಮ್ಮ ಮನೆಯ ನಿಯಮಗಳನ್ನು ಒಪ್ಪಿಕೊಳ್ಳಬೇಕು ಮತ್ತು ನಿಮ್ಮ ಗೆಸ್ಟ್ ಅವಶ್ಯಕತೆಗಳನ್ನು ಪೂರೈಸಬೇಕು.
ಸಕಾರಾತ್ಮಕ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಗೆಸ್ಟ್‌ಗಳಿಗೆ ಮಾತ್ರ ತ್ವರಿತ ಬುಕಿಂಗ್ ನೀಡಲುನೀವು ನಿಮ್ಮ ಅವಶ್ಯಕತೆಗಳನ್ನು ಹೊಂದಿಸಬಹುದು. ಅಂದರೆ ಅವರು ಕನಿಷ್ಠ ಒಂದು ವಾಸ್ತವ್ಯವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಯಾವುದೇ ನಕಾರಾತ್ಮಕ ವಿಮರ್ಶೆಗಳನ್ನು ಸ್ವೀಕರಿಸಿಲ್ಲ.
ವೈಯಕ್ತಿಕ ಚೆಕ್-ಇನ್ ಸಮಯದಲ್ಲಿ ನಿಮಗೆ ಸರ್ಕಾರಿ ID ಅಗತ್ಯವಿದ್ದರೆ ಅಥವಾ ಅದು ನಿಮ್ಮ ಪ್ರಾಪರ್ಟಿ ಇರುವ ಸ್ಥಳದ ಅವಶ್ಯಕತೆಯಾಗಿದ್ದರೆ, ನಿಮ್ಮ ಸಂದೇಶಗಳ ಟ್ಯಾಬ್ ಮೂಲಕ ಗೆಸ್ಟ್‌ಗಳಿಗೆ ಸಂದೇಶ ಕಳುಹಿಸುವ ಮೂಲಕ ನೀವು ಇದನ್ನು ವಿನಂತಿಸಬಹುದು.
ತ್ವರಿತ ಬುಕಿಂಗ್ ಬಳಸುವಾಗ ನಿಮ್ಮ ಕ್ಯಾಲೆಂಡರ್ ಅನ್ನು ನೀವು ಅಪ್ ಟು ಡೇಟ್ ಆಗಿ ಇರಿಸಿಕೊಳ್ಳಬೇಕು. ನೀವು ಬಳಸುವ ಯಾವುದೇ ಇತರ ಕ್ಯಾಲೆಂಡರ್‌ಗಳೊಂದಿಗೆ ನಿಮ್ಮ Airbnb ಕ್ಯಾಲೆಂಡರ್ ಅನ್ನು ಸಿಂಕ್ ಮಾಡುವುದನ್ನು ಪರಿಗಣಿಸಿ. ಇದು ನಿಮಗೆ ಅನಿರೀಕ್ಷಿತ ಬುಕಿಂಗ್‌ಗಳನ್ನು ಪಡೆಯುವುದನ್ನು ತಪ್ಪಿಸಲು ಅಥವಾ ವೇಳಾಪಟ್ಟಿ ದೋಷದಿಂದಾಗಿ ರಿಸರ್ವೇಶನ್ ಅನ್ನು ರದ್ದುಗೊಳಿಸುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದರಿಂದ ರದ್ದತಿ ಶುಲ್ಕಗಳು ಮತ್ತು ಇತರ ಪರಿಣಾಮಗಳಿಗೆ ಕಾರಣವಾಗಬಹುದು.
ನಿಮ್ಮ ಮನೆಯ ಒಂದು ನಿಯಮವನ್ನು ಮುರಿಯುವ ಸಾಧ್ಯತೆಯಿದೆ ಎಂದು ಗೆಸ್ಟ್‌ಗೆ ಸ್ಪಷ್ಟಪಡಿಸುವಂತಹ ಮಾನ್ಯ ಕಾರಣಗಳಿಗಾಗಿ ನೀವು ಬುಕಿಂಗ್ ಅನ್ನು ರದ್ದುಗೊಳಿಸಬಹುದು. Airbnb ಯ ತಾರತಮ್ಯ ವಿರೋಧಿ ನೀತಿಯನ್ನು
ಉಲ್ಲಂಘಿಸುವ ಯಾವುದೇ ಕಾರಣಕ್ಕಾಗಿ ನೀವು ಎಂದಿಗೂ ರದ್ದುಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ.ನೀವು ಇನ್ನೂ ಬುಕಿಂಗ್ ವಿನಂತಿಗಳನ್ನು ಏಕೆ ಪಡೆಯಬಹುದು
ತ್ವರಿತ ಬುಕಿಂಗ್ ಬಳಸುವಾಗಲೂ ನೀವು ಬುಕಿಂಗ್ ವಿನಂತಿಗಳನ್ನು ಪಡೆಯುವ ಕೆಲವು ಸನ್ನಿವೇಶಗಳಿವೆ:
- ನಿಮ್ಮ ಕ್ಯಾಲೆಂಡರ್ ಹಳೆಯದಾಗಿದೆ.
- ನೀವು ಇತ್ತೀಚೆಗೆ ರಿಸರ್ವೇಶನ್ ಅನ್ನು ರದ್ದುಗೊಳಿಸಿದ್ದೀರಿ.
- ನಿಮ್ಮ ಅವಶ್ಯಕತೆಗಳನ್ನು ಪೂರೈಸದ ಗೆಸ್ಟ್ ರಿಸರ್ವೇಶನ್ ವಿನಂತಿಯನ್ನು ಕಳುಹಿಸಬಹುದು.
ನೀವು 24 ಗಂಟೆಗಳ ಒಳಗೆ ರಿಸರ್ವೇಶನ್ ಅನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಮೂಲಕ ಅಥವಾ ನಿಮ್ಮ ನಿರೀಕ್ಷಿತ ಗೆಸ್ಟ್‌ಗಳಿಗೆ ಸಂದೇಶ ಕಳುಹಿಸುವ ಮೂಲಕ ಪ್ರತಿಕ್ರಿಯಿಸಬೇಕಾಗುತ್ತದೆ.
ನಿಮಗೆ ಸೂಕ್ತವಾದ ಬುಕಿಂಗ್ ಸೆಟ್ಟಿಂಗ್ ಅನ್ನು ಆರಿಸಿ
ಗೆಸ್ಟ್‌ಗಳು ನಿಮ್ಮ ಸ್ಥಳವನ್ನು ಯಾವಾಗ ಮತ್ತು ಹೇಗೆ ಬುಕ್ ಮಾಡುತ್ತಾರೆ ಎಂಬುದನ್ನು ನೀವು ನಿಯಂತ್ರಿಸುತ್ತೀರಿ. ತ್ವರಿತ ಬುಕಿಂಗ್ ದಕ್ಷತೆ ಮತ್ತು ಅನುಕೂಲತೆಯನ್ನು ನೀಡುತ್ತದೆಯಾದರೂ, ಕೆಲವು ಹೋಸ್ಟ್‌ಗಳಿಗೆಬುಕಿಂಗ್ ವಿನಂತಿಗಳು ತಮಗೆ ಸೂಕ್ತವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಕಂಡುಕೊಳ್ಳಬಹುದು.
ತಡೆಗಟ್ಟಬಹುದಾದ ಕಾರಣಗಳಿಗಾಗಿ ಗೆಸ್ಟ್‌ಗಳು ರದ್ದು ಮಾಡುವುದನ್ನು ತಪ್ಪಿಸಲು ನಿಮಗೆ ಸಹಾಯ ಮಾಡುವ ವಿಧಾನವನ್ನು ಆರಿಸಿ.