Airbnb ಯ 5-ಹಂತದ ಸ್ವಚ್ಛತೆ ಪ್ರಕ್ರಿಯೆಯನ್ನು ಹೇಗೆ ಕಾರ್ಯರೂಪಕ್ಕೆ ತರುವುದು

5-ಹಂತದ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಮಾರ್ಗದರ್ಶನ ಪಡೆಯಿರಿ.
Airbnb ಅವರಿಂದ ಜೂನ್ 4, 2020ರಂದು
5 ನಿಮಿಷ ಓದಲು
ಜೂನ್ 4, 2020 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

ಶುಚಿತ್ವವು ಎಂದಿಗಿಂತಲೂ ಹೆಚ್ಚು ಮಹತ್ವದ್ದಾಗಿರುವುದರಿಂದ, ವಸತಿ ಸೌಕರ್ಯಗಳ ಹೋಸ್ಟ್‌ಗಳು Airbnb ಯ 5-ಹಂತದ ವರ್ಧಿತ ಶುಚಿಗೊಳಿಸುವ ಪ್ರಕ್ರಿಯೆಗೆ ಬದ್ಧರಾಗಿರಬೇಕು ಮತ್ತು ಪ್ರಕ್ರಿಯೆಯನ್ನು ಕಾರ್ಯರೂಪಕ್ಕೆ ತರಲು ನಿಮಗೆ ಸಹಾಯ ಮಾಡಲು ನಾವು ಸಿದ್ಧವಿದ್ದೇವೆ. ಸ್ಥಿರವಾದ ಶುಚಿಗೊಳಿಸುವ ಮಾನದಂಡವನ್ನು ಪಾಲಿಸಲು ನಿಮಗೆ ಸಹಾಯ ಮಾಡಲು ಈ ಲೇಖನವು 5 ಹಂತಗಳು, ಜೊತೆಗೆ ಹೆಚ್ಚುವರಿ ಮಾರ್ಗದರ್ಶನ, ಸಲಹೆಗಳು ಮತ್ತು ಉತ್ತಮ ಅಭ್ಯಾಸಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತದೆ. ಈ ಉತ್ತಮ ಅಭ್ಯಾಸಗಳು ನಿಮ್ಮ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಮತ್ತು ಆತಿಥ್ಯ ತಜ್ಞರೊಂದಿಗೆ ಅಭಿವೃದ್ಧಿಪಡಿಸಿದ ವರ್ಧಿತ ಶುಚಿಗೊಳಿಸುವಿಕೆ ಕೈಪಿಡಿಯನ್ನು ಆಧರಿಸಿವೆ.

ಶುಚಿಗೊಳಿಸುವ ಮೊದಲು, ನೀವು ಅಥವಾ ನಿಮ್ಮ ವೃತ್ತಿಪರ ಕ್ಲೀನರ್‌ಗಳು ಸ್ಥಳವನ್ನು ಪ್ರವೇಶಿಸುವ ಮೊದಲು ಕಾಯಬೇಕಾದ ಸೂಕ್ತ ಸಮಯದ ಮಾರ್ಗಸೂಚಿಗಳಿಗಾಗಿ ನಿಮ್ಮ ಸ್ಥಳೀಯ ಪ್ರಾಧಿಕಾರವನ್ನು ಸಂಪರ್ಕಿಸುವುದು ಮುಖ್ಯವಾಗಿದೆ. ಉದಾಹರಣೆಗೆ, ಗೆಸ್ಟ್ ಹೊರಟುಹೋದ ನಂತರ, ಸ್ಥಳಕ್ಕೆ ಪ್ರವೇಶಿಸುವ ಮೊದಲು ಸಾಧ್ಯವಾದಷ್ಟು ಕಾಲ (ಕನಿಷ್ಠ ಹಲವು ಗಂಟೆಗಳವರೆಗೆ) ಕಾಯುವಂತೆ US ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ಸೂಚಿಸುತ್ತದೆ. ಏಕೆಂದರೆ, ಇದು ನೀವು ರೋಗಾಣುಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಚಿಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯವನ್ನು ಬಿಡಲು, ಸಿದ್ಧತೆ ಸಮಯಕ್ಕಾಗಿ ನಿಮ್ಮ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡುವ ಮೂಲಕ ರಿಸರ್ವೇಶನ್‌ಗಳ ನಡುವೆ ಬುಕಿಂಗ್ ಬಫರ್ ಅನ್ನು ಸೇರಿಸುವುದನ್ನು ಸಹ ನೀವು ಪರಿಗಣಿಸಬಹುದು.

ನೀವು ಪ್ರಾರಂಭಿಸಲು ಸಹಾಯ ಮಾಡಲು, ಶುಚಿಗೊಳಿಸುವ ಪ್ರಕ್ರಿಯೆಯ 5 ಹಂತಗಳ ಕುರಿತ ಉತ್ತಮ ಅಭ್ಯಾಸಗಳನ್ನು ನಾವು ಹಂಚಿಕೊಳ್ಳುತ್ತಿದ್ದೇವೆ. ಅವುಗಳೆಂದರೆ: ತಯಾರಿಸಿ, ಸ್ವಚ್ಛಗೊಳಿಸಿ, ಸ್ಯಾನಿಟೈಜ್ ಮಾಡಿ, ಪರಿಶೀಲಿಸಿ ಮತ್ತು ರಿಸೆಟ್ ಮಾಡಿ.

ಹಂತ 1: ಹೆಚ್ಚಿನ ಸುರಕ್ಷಿತ ಸ್ವಚ್ಛತೆಗಾಗಿ ಸಿದ್ಧತೆ ಮಾಡಿ

  • ನೀವು ಸ್ವಚ್ಛಗೊಳಿಸುವ ಮೊದಲು ಮತ್ತು ಸ್ವಚ್ಛಗೊಳಿಸುವಾಗ ಕೊಠಡಿಗಳನ್ನು ವೆಂಟಿಲೇಟ್ ಮಾಡಿ.  ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು US ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ನಂತಹ ನಿಯಂತ್ರಕ ಪ್ರಾಧಿಕಾರಗಳು ಹೊರಗಿನ ಬಾಗಿಲುಗಳು ಮತ್ತು ಕಿಟಕಿಗಳನ್ನು ತೆರೆಯುವುದನ್ನು ಮತ್ತು ಸ್ವಚ್ಛಗೊಳಿಸಲು ಮತ್ತು ಸ್ಯಾನಿಟೈಸ್ ಪ್ರಾರಂಭಿಸುವ ಮೊದಲು ಸ್ಥಳದಲ್ಲಿ ಗಾಳಿಯ ಪ್ರಸರಣವನ್ನು ಹೆಚ್ಚಿಸಲು ವಾತಾಯನ ಫ್ಯಾನ್‌ಗಳನ್ನು ಬಳಸುವುದನ್ನು ಶಿಫಾರಸು ಮಾಡುತ್ತವೆ. ಶುಚಿಗೊಳಿಸುವ ಮೊದಲು ಮತ್ತು ಶುಚಿಗೊಳಿಸುವ ಸಮಯದಲ್ಲಿ ಸಾಧ್ಯವಾದಷ್ಟು ಕಾಲ ಸ್ಥಳವನ್ನು ವಾತಾಯನಗೊಳಿಸಿ.
  • ಸರಿಯಾದ ಶುಚಿಗೊಳಿಸುವ ಸರಬರಾಜುಗಳನ್ನುಇಟ್ಟುಕೊಳ್ಳಿ. ನಿಮ್ಮ ಸಂಬಂಧಿತ ಸರ್ಕಾರಿ ಏಜೆನ್ಸಿಯಲ್ಲಿ (ಉದಾ. ಯುರೋಪಿಯನ್ ಕೆಮಿಕಲ್ಸ್ ಏಜೆನ್ಸಿ ಅಥವಾ ಯುಎಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ) ನೋಂದಾಯಿಸಲಾದ ಸೋಂಕುನಿವಾರಕ ಮತ್ತು ಸ್ಯಾನಿಟೈಜರ್ ಪರಿಹಾರಗಳನ್ನು ಮಾತ್ರ ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ.
  • ನಿಮ್ಮ ರಾಸಾಯನಿಕಗಳಿಗಾಗಿ ಸುರಕ್ಷತಾ ಮಾರ್ಗಸೂಚಿಗಳನ್ನು ಪರಿಶೀಲಿಸಿ. ನಿಮ್ಮ ಉತ್ಪನ್ನಗಳ ಸಕ್ರಿಯ ಪದಾರ್ಥಗಳು ಮತ್ತು ಅವುಗಳನ್ನು ಸರಿಯಾಗಿ ಹೇಗೆ ಬಳಸುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಯಾವಾಗಲೂ ಅವುಗಳ ಲೇಬಲ್‍‍ಗಳನ್ನು ಓದಿ.
  • ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ. ಅದು ಸಾಧ್ಯವಾಗದಿದ್ದರೆ, ಕನಿಷ್ಠ 60% ಆಲ್ಕೋಹಾಲ್ ಹೊಂದಿರುವ ಹ್ಯಾಂಡ್ ಸ್ಯಾನಿಟೈಜರ್ ಬಳಸಿ ಮತ್ತು ಇತ್ತೀಚಿನ ಮಾರ್ಗಸೂಚಿಗಳಿಗಾಗಿ ನಿಮ್ಮ ಸ್ಥಳೀಯ ಸರ್ಕಾರಿ ಏಜೆನ್ಸಿಯನ್ನು ಸಂಪರ್ಕಿಸಿ.
  • ರಕ್ಷಣಾತ್ಮಕ ಸಲಕರಣೆಗಳನ್ನು ಧರಿಸಿ. ನೀವು ಸ್ಥಳವನ್ನು ಪ್ರವೇಶಿಸುವ ಮೊದಲು, ಬಿಸಾಡಬಹುದಾದ ಕೈಗವಸುಗಳು ಮತ್ತು ಮಾಸ್ಕ್‌ಗಳು ಅಥವಾ ಬಟ್ಟೆಯ ಮುಖದ ಹೊದಿಕೆಗಳಂತಹ ರಕ್ಷಣಾತ್ಮಕ ಸಲಕರಣೆಗಳನ್ನು ಧರಿಸುವುದನ್ನು ಪರಿಗಣಿಸಿ.
ಎಲ್ಲಾ ಕಸವನ್ನು
  • ಹೊರತೆಗೆಯಿರಿ. ಈ ಹಂತದಿಂದ ಪ್ರಾರಂಭಿಸುವುದರಿಂದ ಕೊಳಕು ಕಸವನ್ನು ಸ್ವಚ್ಛಗೊಳಿಸಿದ ನಂತರ ಅದನ್ನು ಕಲುಷಿತಗೊಳಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ. ಎಲ್ಲಾ ಕಸದ ಕ್ಯಾನ್‌ಗಳಲ್ಲಿ ತಾಜಾ ಚೀಲಗಳನ್ನು ಇಡುವುದನ್ನು ಖಚಿತಪಡಿಸಿಕೊಳ್ಳಿ, ಇದು ಟಿಶ್ಯೂಗಳು ಮತ್ತು ಇತರ ತ್ಯಾಜ್ಯಗಳನ್ನು ಎಸೆಯುವುದನ್ನು ಸುಲಭವಾಗಿಸುತ್ತದೆ.
  • ಸ್ಥಳದಲ್ಲಿ ಎಲ್ಲ ಕೊಳಕು ಲಿನೆನ್‌ಗಳನ್ನು ಸಂಗ್ರಹಿಸಿ. ಟರ್ನ್‌ಓವರ್‌ಗಳ ನಡುವೆ ಲಾಂಡ್ರಿ ಹೆಚ್ಚು ಸಮಯ ತೆಗೆದುಕೊಳ್ಳುವ ಚಟುವಟಿಕೆಗಳಲ್ಲಿ ಒಂದಾಗಿದೆ ಎಂದು ನಾವು ಹೋಸ್ಟ್‌ಗಳಿಂದ ಕೇಳಿದ್ದೇವೆ. ನೀವು ಸ್ಥಳಕ್ಕೆ ಬಂದ ಕೂಡಲೇ ಕೊಳಕು ವಸ್ತ್ರಗಳನ್ನು ಸಂಗ್ರಹಿಸಿ, ಅವುಗಳನ್ನು ಅಲುಗಾಡಿಸಬೇಡಿ, ಇದು ರೋಗಾಣುಗಳ ಹರಡುವಿಕೆಯನ್ನು ಹೆಚ್ಚಿಸಬಹುದು.
  • ಶುಚಿಗೊಳಿಸುವ ಮೊದಲು ಅನ್‌ಪ್ಲಗ್ ಮಾಡಿ. ನಿಮ್ಮ ಸುರಕ್ಷತೆಗಾಗಿ ಮತ್ತು ಉಪಕರಣಗಳನ್ನು ರಕ್ಷಿಸಲು, ಶುಚಿಗೊಳಿಸುವ ಮೊದಲು ಉಪಕರಣಗಳನ್ನು ಅನ್‌ಪ್ಲಗ್ ಮಾಡಲು ಮರೆಯದಿರಿ. "ಆಫ್" ಮಾಡಲಾದ ಪ್ಲಗ್ ಮಾಡಿರುವ ಉಪಕರಣಗಳು ಅವುಗಳನ್ನು ಅನ್‍‍ಪ್ಲಗ್ ಮಾಡುವವರೆಗೂ ವಿದ್ಯುತ್‍‍ಗೆ ಸಂಪರ್ಕ ಹೊಂದಿರುತ್ತವೆ. ನೀವು ಬ್ರೇಕರ್‌ನಲ್ಲೂ ವಿದ್ಯುತ್ ಅನ್ನು ಸ್ಥಗಿತಗೊಳಿಸಬಹುದು.

ಸುರಕ್ಷತಾ ಜ್ಞಾಪನೆ: ನೀವು ಸ್ಥಳವನ್ನು ಪ್ರವೇಶಿಸುವ ಮೊದಲು ಸ್ವಚ್ಛವಾದ ರಕ್ಷಣಾ ಸಾಧನಗಳ ಧರಿಸುವಿಕೆಯನ್ನು ಪರಿಗಣಿಸಿ. ಎಲ್ಲ ಸುರಕ್ಷತಾ ಲೇಬಲ್‌ಗಳನ್ನು ನೋಡಿದಾಗ ಶುಚಿಗೊಳಿಸುವ ರಾಸಾಯನಿಕಗಳನ್ನು ಸರಿಯಾಗಿ ಹೇಗೆ ಬಳಸುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹ ನಿಮಗೆ ಸಹಾಯ ಮಾಡುತ್ತದೆ.

ಹಂತ 2: ಧೂಳು ಮತ್ತು ಅವಶೇಷಗಳನ್ನು ಸ್ವಚ್ಛಗೊಳಿಸಿ

ಸ್ವಚ್ಛಗೊಳಿಸುವುದು ಎಂದರೆ ನೀವು ಮೇಲ್ಮೈಗಳಿಂದ ಸೂಕ್ಷ್ಮಾಣುಗಳು ಮತ್ತು ಕೊಳೆಯನ್ನು ತೆಗೆದುಹಾಕಿದಾಗ, ಉದಾಹರಣೆಗೆ, ಅಡುಗೆಮನೆ ಕೌಂಟರ್ ಅಥವಾ ಸ್ಟೌವ್‌ಟಾಪ್ ಅನ್ನು ಒರೆಸಲು ಸೋಪ್ ಹಾಕಿರುವ ಬಟ್ಟೆಯನ್ನು ಬಳಸುವುದು. ನಿಮ್ಮ ಸ್ಥಳವನ್ನು ಸ್ಯಾನಿಟೈಸ್ ಮಾಡುವ ಮೊದಲು ಈ ಹಂತವನ್ನು ಪೂರ್ಣಗೊಳಿಸುವುದು ಮುಖ್ಯವಾಗಿದೆ.

  • ತಯಾರಕರು ಶಿಫಾರಸು ಮಾಡಿದ ಅತ್ಯಧಿಕ ಶಾಖದ ಸೆಟ್ಟಿಂಗ್‌ನಲ್ಲಿ ಲಿನೆನ್‌ಗಳನ್ನು ತೊಳೆಯಿರಿ.ನೀವು ಯಾವುದೇ ಸ್ವಚ್ಛ ಲಿನೆನ್‌ಗಳನ್ನು ನಿರ್ವಹಿಸುವ ಮೊದಲು ನಿಮ್ಮ ಕೈಗಳನ್ನು ತೊಳೆಯಲು ಮರೆಯದಿರಿ.
  • ಎಲ್ಲ ಪಾತ್ರೆಗಳನ್ನು ತೊಳೆಯಿರಿ ಮತ್ತು ಡಿಶ್ ‌ವಾಶರ್ ಅನ್ನು ಖಾಲಿ ಮಾಡಿ.   ನೈರ್ಮಲ್ಯದ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ಗೆಸ್ಟ್‌ಗಳು ಬಳಸಿದ ಪಾತ್ರೆಗಳನ್ನು ತೊಳೆಯುವುದು ಮುಖ್ಯವಾಗಿದೆ. ನಿಮ್ಮ ಬಳಿ ಡಿಶ್‌ವಾಶರ್ ಇಲ್ಲದಿದ್ದರೆ, ಬಿಸಿ ನೀರು ಮತ್ತು ಬ್ಯಾಕ್ಟೀರಿಯಾ ನಿರೋಧಕ ಡಿಶ್ ಸೋಪ್ ಬಳಸಿ ಪಾತ್ರೆಗಳನ್ನು ತೊಳೆಯಿರಿ. ಮಾಲಿನ್ಯವನ್ನು ತಪ್ಪಿಸಲು, ನಿಮ್ಮ ಸ್ಥಳದಲ್ಲಿ ನಡೆದಾಡಿ, ಪ್ರತಿ ಕೋಣೆಯಿಂದ ಪಾತ್ರೆಗಳನ್ನು ಸಂಗ್ರಹಿಸುವ ಮೂಲಕ ಪ್ರಾರಂಭಿಸಿ.
  • ಸ್ಥಳದ ಧೂಳು ಹೊಡೆಯಿರಿ, ನೆಲವನ್ನು ಗುಡಿಸಿ ಅಥವಾ ವ್ಯಾಕ್ಯೂಮ್ ಕ್ಲೀನರ್‌ನಲ್ಲಿ ಸ್ವಚ್ಛಗೊಳಿಸಿ. ಧೂಳು ಹೊಡೆಯುವಾಗ, ಯಾವುದೇ ಗೋಚರ ಚಿಹ್ನೆಗಳು ಉಳಿದಿಲ್ಲವೆಂದು ಖಚಿತಪಡಿಸಿಕೊಳ್ಳಲು ಮೇಲಿನಿಂದ ಕೆಳಗಿನವರೆಗೆ ಧೂಳು ಹೊಡೆಯಿರಿ. ಎಲ್ಲ ಗಟ್ಟಿಯಾದ ಮೇಲ್ಮೈ ಫ್ಲೋರ್‌ಗಳನ್ನು ಒರೆಸಿ ಮತ್ತು ಕಾರ್ಪೆಟ್ ಅನ್ನು ವ್ಯಾಕ್ಯೂಮ್ ಕ್ಲೀನರ್‌ನಲ್ಲಿ ಸ್ವಚ್ಛಗೊಳಿಸಿ.
  • ಸಾಬೂನು ಮತ್ತು ನೀರನ್ನು ಬಳಸಿ ಗಟ್ಟಿಯಾದ ಮೇಲ್ಮೈಗಳನ್ನು ಸ್ವಚ್ಛಗೊಳಿಸಿ. ಕೊಳಕು, ಜಿಡ್ಡು, ಧೂಳು ಮತ್ತು ರೋಗಾಣುಗಳನ್ನು ತೆಗೆದುಹಾಕಲು ಪ್ರತಿ ಮೇಲ್ಮೈಯನ್ನು ಒರೆಸಿ. ಗಟ್ಟಿಯಾದ ಮೇಲ್ಮೈಗಳು ಕೌಂಟರ್‌ಟಾಪ್‍‍ಗಳು, ಟೇಬಲ್‍‍ಗಳು, ಸಿಂಕ್‍‍ಗಳು, ಕ್ಯಾಬಿನೆಟ್‍‍ಗಳು ಮತ್ತು ನೆಲಗಳನ್ನು ಒಳಗೊಂಡಿರುತ್ತವೆ. ಮಾಪಿಂಗ್ ಮಾಡುವಾಗ, ಕೋಣೆಯ ಹಿಂಭಾಗದ ಮೂಲೆಯಿಂದ ಮುಂಭಾಗದವರೆಗೆ ಬರುವಂತೆ ಕೆಲಸ ಮಾಡಿ ಮತ್ತು ಇನ್ನೂ ಸ್ವಚ್ಛಗೊಳಿಸದ ಸಿಂಕ್‍‍ನಲ್ಲಿ ನೀರನ್ನು ವರ್ಜಿಸಿ.

  • ತಯಾರಕರ ಸೂಚನೆಗಳನ್ನು ಆಧರಿಸಿ ಮೃದುವಾದ ಮೇಲ್ಮೈಗಳನ್ನು ಸ್ವಚ್ಛಗೊಳಿಸಿ. ಮೃದುವಾದ ಮೇಲ್ಮೈಗಳು ಕಾರ್ಪೆಟ್, ಬೆಡ್ಡಿಂಗ್ ಮತ್ತು ಅಪ್‌ಹೋಲ್‌ಸ್ಟರಿಗಳನ್ನು ಒಳಗೊಂಡಿರುತ್ತವೆ. ಮಣ್ಣಾಗಿದ್ದರೆ, ಯಾವುದೇ ಎದ್ದು ಕಾಣುವ ಕೊಳಕು ಅಥವಾ ಕಸವನ್ನು ಎಚ್ಚರಿಕೆಯಿಂದ ತೆಗೆದುಹಾಕಿ, ನಂತರ ಸೂಕ್ತವಾದ ಸ್ವಚ್ಛಕಾರಕಗಳನ್ನು ‌ಬಳಸಿ ಸ್ವಚ್ಛಗೊಳಿಸಿ. ಸಾಧ್ಯವಾದರೆ, ತಯಾರಕರ ಸೂಚನೆಗಳ ಪ್ರಕಾರ ವಸ್ತುಗಳನ್ನು ಯಂತ್ರದಿಂದ ತೊಳೆಯಿರಿ.

ಸುರಕ್ಷತಾ ಜ್ಞಾಪನೆ: ರೋಗಾಣುಗಳು ಹರಡುವುದನ್ನು ತಡೆಗಟ್ಟಲು, ನೀವು ಸ್ವಚ್ಛಗೊಳಿಸುವಾಗ ನಿಮ್ಮ ಮುಖವನ್ನು ಮುಟ್ಟಿಕೊಳ್ಳಬೇಡಿ.

ಹಂತ 3: ಸೋಂಕುನಿವಾರಕದೊಂದಿಗೆ ಸ್ಯಾನಿಟೈಜ್ ಮಾಡಿ

ಸ್ಯಾನಿಟೈಜ್ ಮಾಡುವುದು ಎಂದರೆ, ರೋಗಾಣುಗಳು ಮತ್ತು ಬ್ಯಾಕ್ಟೀರಿಯಾದ ಸಂಖ್ಯೆಯನ್ನು ಕಡಿಮೆ ಮಾಡಲು ನೀವು ರಾಸಾಯನಿಕಗಳನ್ನು ಬಳಸುವುದಾಗಿದೆ. ಈ ಹಂತದಲ್ಲಿ, ಹೆಚ್ಚು ಸ್ಪರ್ಶಗೊಳ್ಳುವ ಎಲ್ಲ ಪ್ರದೇಶಗಳನ್ನು ಸ್ಯಾನಿಟೈಸ್ ಮಾಡಲು ಹೋಸ್ಟ್‌ಗಳ ಅಗತ್ಯವಿದೆ. ಉದಾಹರಣೆಗೆ, ರಾಸಾಯನಿಕ ಸೋಂಕುನಿವಾರಕದೊಂದಿಗೆ ಈ ಮೇಲ್ಮೈಗಳನ್ನು ಸಿಂಪಡಿಸುವ ಮೂಲಕ ಹೋಸ್ಟ್‌ಗಳು ಬಾಗಿಲಿನ ನಾಬ್‌ಗಳು, ಲೈಟ್ ಸ್ವಿಚ್‌ಗಳು ಮತ್ತು ಕ್ಯಾಬಿನೆಟ್‌ಗಳನ್ನು ಸ್ವಚ್ಛಗೊಳಿಸಬಹುದು.

  • ಗಟ್ಟಿಯಾದ ಮೇಲ್ಮೈ ಸ್ವಚ್ಛವಾದ ನಂತರ, ಅದರ ಮೇಲೆ ಸೋಂಕುನಿವಾರಕವನ್ನು ಸಿಂಪಡಿಸಿ.  ಆಗಾಗ್ಗೆ ಸ್ಪರ್ಶವಾಗುತ್ತಿರುವ ಎಲ್ಲ ಮೇಲ್ಮೈಗಳನ್ನು (ಡೋರ್‌ನಾಬ್‌ಗಳು ಮತ್ತು ಲೈಟ್ ಸ್ವಿಚ್‌ಗಳಂತಹವು) ಸ್ಯಾನಿಟೈಸ್ ಮಾಡುವತ್ತ ಗಮನಹರಿಸಿ. ತಯಾರಕರ ಸ್ವಚ್ಛಗೊಳಿಸುವ ನಿರ್ದೇಶನಗಳ ಆಧಾರದ ಮೇಲೆ ಎಲೆಕ್ಟ್ರಾನಿಕ್ಸ್ ಅನ್ನು ಸ್ಯಾನಿಟೈಸ್ ಮಾಡಲು ಮರೆಯದಿರಿ.
  • ಸೋಂಕುನಿವಾರಕವು ನಿಗದಿತ ಸಮಯದವರೆಗೆ ತೇವವಾಗಿರಲಿ. ಉತ್ಪನ್ನದ ಲೇಬಲ್ ರಾಸಾಯನಿಕಗಳು ಮೇಲ್ಮೈಯನ್ನು ಪರಿಣಾಮಕಾರಿಯಾಗಿ ಸ್ಯಾನಿಟೈಸ್ ಮಾಡಲು ಬೇಕಾದ ಒದ್ದೆ ಸಂಪರ್ಕದ ಸಮಯವನ್ನು ನಿರ್ದಿಷ್ಟಪಡಿಸುತ್ತದೆ. ಇದು ರಾಸಾಯನಿಕಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಸೂಕ್ಷ್ಮಾಣುಗಳನ್ನು ಸಾಯಿಸಲು ಅನುವು ಮಾಡಿಕೊಡುತ್ತದೆ.
  •  ಮೇಲ್ಮೈಗಳನ್ನು ಗಾಳಿಯಲ್ಲಿ ಒಣಗಲು ಬಿಡಿ. ಮೇಲ್ಮೈ ಆರ್ದ್ರ ಸಂಪರ್ಕದ ಸಮಯಕ್ಕೆ ಮುಂಚಿತವಾಗಿ ಒಣಗಿದರೆ, ಲೇಬಲ್‌ನಲ್ಲಿ ಹೇಳಲಾದ ರೋಗಕಾರಕಗಳು ನಿರ್ಮೂಲನೆಯಾಗಿವೆ ಎಂಬುದಕ್ಕೆ ಯಾವುದೇ ಭರವಸೆ ಇರುವುದಿಲ್ಲ.

ಸುರಕ್ಷತಾ ಜ್ಞಾಪನೆ: ಎಲ್ಲ ಸುರಕ್ಷತಾ ಲೇಬಲ್‌ಗಳನ್ನು ನೋಡಿದಾಗ ನೀವು ಶುಚಿಗೊಳಿಸುವ ರಾಸಾಯನಿಕಗಳನ್ನು ಸರಿಯಾಗಿ ಬಳಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.


ಹಂತ 4: ನಿಮ್ಮ ಪ್ರತಿಯೊಂದು ರೂಮ್‌ನ ಚೆಕ್‌ಲಿಸ್ಟ್‌ ಅನ್ನು ಪರಿಶೀಲಿಸಿ

ನಿಮ್ಮ ಲಿಸ್ಟಿಂಗ್ ವಿವರಗಳ ಆಧಾರದ ಮೇಲೆ ಕಸ್ಟಮ್ ಶುಚಿಗೊಳಿಸುವಿಕೆಯ ಚೆಕ್‌ಲಿಸ್ಟ್‌ಗಳಿಗೆ ನೀವು ಪ್ರವೇಶ ಹೊಂದಿರುತ್ತೀರಿ. ಪ್ರತಿ ರೂಮ್‍‍ನಲ್ಲಿನ ಚೆಕ್‍‍ಲಿಸ್ಟ್‌ನಲ್ಲಿ ಉತ್ತಮ ಪದ್ಧತಿಗಳನ್ನು ಗಮನಿಸಿ ಮತ್ತು ಅವುಗಳನ್ನು ನಿಮ್ಮ ಹೋಸ್ಟಿಂಗ್ ತಂಡ ಅಥವಾ ಶುಚಿಗೊಳಿಸುವ ವೃತ್ತಿಪರರೊಂದಿಗೆ ಹಂಚಿಕೊಳ್ಳಿ.

  • ಎಲ್ಲ ಹೆಚ್ಚು ಸ್ಪರ್ಶವಾಗುವ ಮೇಲ್ಮೈಗಳನ್ನು ಸ್ಯಾನಿಟೈಸ್ ಮಾಡಲಾಗಿದೆಯೇ ಎಂದು ಎರಡೆರಡು ಬಾರಿ ಪರಿಶೀಲಿಸಿ. ಯಾವುದಾದರೂ ತಪ್ಪಿಹೋಗಿದ್ದರೆ ಅದನ್ನು ಸರಿಪಡಿಸಿ.
  • ಯಾವುದೇ ನಿರ್ವಹಣೆಯ ಸಮಸ್ಯೆಗಳು ಅಥವಾ ಕಾಣೆಯಾದ ವಸ್ತುಗಳನ್ನು ಬರೆದುಕೊಳ್ಳಿ. ನೀವು ಎಲ್ಲವೂ ಪೂರ್ಣಗೊಂಡಿದೆಯೇ ಎಂದು ಪರಿಶೀಲಿಸುತ್ತಿರುವಾಗ, ಯಾವುದೇ ಐಟಂಗಳನ್ನು ಬದಲಾಯಿಸಬೇಕಾಗಿದೆಯೇ, ಮರುಭರ್ತಿ ಮಾಡಬೇಕಾಗಿದೆಯೇ ಅಥವಾ ಮತ್ತೆ ಸಂಗ್ರಹಿಸಬೇಕಾಗಿದೆಯೇ ಎಂದು ಬರೆದಿಟ್ಟುಕೊಳ್ಳಿ.

ಹಂತ 5: ರೂಮ್‌ ಅನ್ನು ಮರುಹೊಂದಿಸಿ

ಅಡ್ಡ-ಮಾಲಿನ್ಯವನ್ನು ತಪ್ಪಿಸಲು, ಮುಂದಿನ ಗೆಸ್ಟ್‌ಗಾಗಿ ರೂಮ್ ಅನ್ನು ರಿಸೆಟ್ ಮಾಡುವ ಮೊದಲು ಅದನ್ನು ಯಾವಾಗಲೂ ಸ್ವಚ್ಛಗೊಳಿಸಿ ಮತ್ತು ಸ್ಯಾನಿಟೈಜ್ ಮಾಡಿ.

  • ನಿಮ್ಮ ಶುಚಿಗೊಳಿಸುವ ಸರಬರಾಜುಗಳನ್ನು ವಿಲೇವಾರಿ ಮಾಡಿ ಮತ್ತು ತೊಳೆಯಿರಿ. ಸೋಂಕುನಿವಾರಕ ವೈಪ್‌ಗಳಂತಹ ಬಿಸಾಡಬಹುದಾದ ಉತ್ಪನ್ನಗಳನ್ನು ಎಸೆಯಿರಿ. ಬಳಸಿದ ಯಾವುದೇ ಇತರ ಉಪಕರಣಗಳನ್ನು ಸಹ ಸ್ವಚ್ಛಗೊಳಿಸಲು ಮರೆಯದಿರಿ. ಯಾವುದೇ ಶುಚಿಗೊಳಿಸುವ ಬಟ್ಟೆಗಳನ್ನು ಆಯಾ ವಸ್ತುವಿಗೆ ಸೂಕ್ತವಾದ ಅತ್ಯಂತ ಹೆಚ್ಚಿನ ಶಾಖದ ಸೆಟ್ಟಿಂಗ್‍‍ನಲ್ಲಿ ತೊಳೆಯಿರಿ.
  • ನೀವು ಸ್ವಚ್ಛಗೊಳಿಸಿದ ನಂತರ ಯಾವುದೇ ಸ್ವಚ್ಛಗೊಳಿಸುವ ಸಾಧನಗಳನ್ನು ಸುರಕ್ಷಿತವಾಗಿ ತೆಗೆದುಹಾಕಿ. ಯಾವುದೇ ರಕ್ಷಣಾತ್ಮಕ ಸಾಧನಗಳನ್ನು ಅವುಗಳ ಬಳಕೆಯ ಮಾರ್ಗಸೂಚಿಗಳ ಪ್ರಕಾರ ವಿಲೇವಾರಿ ಮಾಡಿ ಅಥವಾ ತೊಳೆಯಿರಿ. 
  • ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ. ಅದು ಸಾಧ್ಯವಾಗದಿದ್ದರೆ, ಕನಿಷ್ಠ 60% ಆಲ್ಕೋಹಾಲ್ ಹೊಂದಿರುವ ಹ್ಯಾಂಡ್ ಸ್ಯಾನಿಟೈಜರ್ ಬಳಸಿ ಮತ್ತು ಇತ್ತೀಚಿನ ಮಾರ್ಗಸೂಚಿಗಳಿಗಾಗಿ ನಿಮ್ಮ ಸ್ಥಳೀಯ ಸರ್ಕಾರಿ ಏಜೆನ್ಸಿಯನ್ನು ಸಂಪರ್ಕಿಸಿ.
  • ಮುಂದಿನ ಗೆಸ್ಟ್‌ಗಾಗಿ ಎಲ್ಲವೂ ಸಿದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ರೂಮ್ ಅನ್ನು ಸರಿಯಾಗಿ ನೋಡಿ. ನೀವೇ ಮೊದಲ ಬಾರಿಗೆ ಈ ಸ್ಥಳಕ್ಕೆ ಬರುತ್ತಿರುವ ಗೆಸ್ಟ್ ಎಂದು ಕಲ್ಪಿಸಿಕೊಳ್ಳಿ.
  • ‌ನಿಮ್ಮ ಗೆಸ್ಟ್‌ಗಳಿಗೆ ಶುಚಿಗೊಳಿಸುವ ಸರಬರಾಜುಗಳನ್ನು ನೀಡಿ. ನಿಮ್ಮ ಸ್ಥಳದಲ್ಲಿರುವಾಗ ಅದನ್ನು ತಾವೇ ಶುಚಿಗೊಳಿಸುವ ಸಾಮರ್ಥ್ಯವನ್ನು ಅವರು ಬಯಸುತ್ತಾರೆ ಎಂದು ನಾವು ಗೆಸ್ಟ್‌ಗಳಿಂದ ಕೇಳಿದ್ದೇವೆ. ಹ್ಯಾಂಡ್ ಸ್ಯಾನಿಟೈಜರ್, ಬಿಸಾಡಬಹುದಾದ ಪೇಪರ್ ಟವೆಲ್‍‍ಗಳು, ಸೋಂಕುನಿವಾರಕ ಸ್ಪ್ರೇ ಅಥವಾ ವೈಪ್‍‍ಗಳು ಮತ್ತು ಹೆಚ್ಚುವರಿ ಹ್ಯಾಂಡ್ ಸೋಪ್‍‍ನಂತಹ ಸ್ವಚ್ಛಗೊಳಿಸುವ ಸರಬರಾಜುಗಳನ್ನು ಸಿದ್ಧಪಡಿಸಿಡುವ ಮೂಲಕ ನಿಮ್ಮ ಅತಿಥಿಗಳನ್ನು ಸಬಲೀಕರಿಸಿ.
  • ನಿಮ್ಮ ಶುಚಿಗೊಳಿಸುವ ಸರಬರಾಜುಗಳನ್ನು ಮರುಭರ್ತಿ ಮಾಡಿ. ನೀವು ಮುಂದಿನ ಟರ್ನ್‌ಓವರ್‌ಗೆ ಸಿದ್ಧವಾಗುತ್ತಿರುವಾಗ ಗಡುವು ಮೀರುವ ದಿನಾಂಕಗಳನ್ನು ಪರೀಕ್ಷಿಸಿ ಮತ್ತು ನೀವು ಬಳಸಿದ ಯಾವುದೇ ಸರಬರಾಜುಗಳನ್ನು ಮರುಭರ್ತಿ ಮಾಡಲು ಮರೆಯದಿರಿ.

ಸುರಕ್ಷತಾ ಜ್ಞಾಪನೆ: ರಾಸಾಯನಿಕ ಉತ್ಪನ್ನಗಳನ್ನು ಯಾವಾಗಲೂ ಮಕ್ಕಳ ಕೈಗೆ ಸಿಗದಂತೆ ಇಡಿ.

ಸ್ವಚ್ಛತೆಗಾಗಿ ಉನ್ನತ ಮಾನದಂಡಗಳಿಗೆ ಬದ್ಧರಾಗಿರಿ

ಈಗ ನೀವು 5-ಹಂತದ ಶುಚಿಗೊಳಿಸುವ ಪ್ರಕ್ರಿಯೆಯನ್ನು ತಿಳಿದಿರುವಿರಿ. ಇದು ನಿಮ್ಮ ಪ್ರಸ್ತುತ ದಿನಚರಿಯನ್ನು ನವೀಕರಿಸುವ ಸಮಯ ಮತ್ತು ನಿಮ್ಮ ಸ್ಥಳದಲ್ಲಿನ ಪ್ರತಿಯೊಂದು ಕೋಣೆಗೆ ಈ ತಂತ್ರಗಳನ್ನು ಅನ್ವಯಿಸುವ ಸಮಯ. ಹೊಸ ಶುಚಿಗೊಳಿಸುವ ದಿನಚರಿಯನ್ನು ಅಳವಡಿಸಿಕೊಳ್ಳುವುದು ಕಷ್ಟ ಎಂದು ನಮಗೆ ತಿಳಿದಿದೆ. ಆದ್ದರಿಂದ, Airbnb ನ 5-ಹಂತದ ವರ್ಧಿತ ಶುಚಿಗೊಳಿಸುವ ಪ್ರಕ್ರಿಯೆಯನ್ನು ಆಚರಣೆಗೆ ತರಲು ನಿಮಗೆ ಸಹಾಯ ಮಾಡಲು ತಜ್ಞರ ಬೆಂಬಲಿತ ಮಾರ್ಗದರ್ಶನ, ಸುರಕ್ಷತಾ ಸಲಹೆಗಳು ಮತ್ತು ಚೆಕ್‌ಲಿಸ್ಟ್‌ಗಳನ್ನು ಒಳಗೊಂಡಿರುವ ಸಮಗ್ರ ಶುಚಿಗೊಳಿಸುವ ಕೈಪಿಡಿಯನ್ನು ನಾವು ಒಟ್ಟುಗೂಡಿಸಿದ್ದೇವೆ. ಪ್ರತಿ ವಾಸ್ತವ್ಯದ ನಡುವೆ Airbnb ಯ 5-ಹಂತದ ವರ್ಧಿತ ಶುಚಿಗೊಳಿಸುವ ಪ್ರಕ್ರಿಯೆಯನ್ನು ವಾಸ್ತವ್ಯಗಳ ಹೋಸ್ಟ್‌ಗಳು ಅನುಸರಿಸುವುದು ನಮಗೆ ಅಗತ್ಯವಿದೆ.

ಹೋಸ್ಟ್‌ಗಳು 5-ಹಂತದ ಶುಚಿಗೊಳಿಸುವ ಪ್ರಕ್ರಿಯೆಯನ್ನು ಅನುಸರಿಸಲು ಬದ್ಧರಾದ ನಂತರ, ಸ್ಥಿರವಾದ ಶುಚಿಗೊಳಿಸುವ ಮಾನದಂಡವನ್ನು ಅನುಸರಿಸಲು ಅವರು ಒಪ್ಪಿಕೊಂಡಿದ್ದಾರೆ ಎಂದು ಗೆಸ್ಟ್‌ಗಳಿಗೆ ತಿಳಿಸಲು, ವರ್ಧಿತ ಶುಚಿಗೊಳಿಸುವಿಕೆಗೆ ಅವರ ಬದ್ಧತೆಯನ್ನು ಅವರ ಲಿಸ್ಟಿಂಗ್ ಪುಟದಲ್ಲಿ ತೋರಿಸಲಾಗುತ್ತದೆ.

ತಜ್ಞರ ಮಾರ್ಗದರ್ಶನಗಳು ಬದಲಾದಂತೆ ಶುಚಿಗೊಳಿಸುವ ಅವಶ್ಯಕತೆಗಳು ಕಾಲಾನಂತರದಲ್ಲಿ ನವೀಕರಣವಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ವಿಕಸಿಸುತ್ತಿರುವ ವಿಜ್ಞಾನದ ಆಧಾರದಲ್ಲಿ, Airbnb ಯ 5-ಹಂತದ ವರ್ಧಿತ ಶುಚಿಗೊಳಿಸುವ ಪ್ರಕ್ರಿಯೆ ಮತ್ತು ವಿವರವಾದ ಶುಚಿಗೊಳಿಸುವ ಕೈಪಿಡಿಯು ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಗುರಿಯನ್ನು ಹೊಂದಿದೆ.

ನಿಮ್ಮ ದಿನಚರಿಯಲ್ಲಿ ಹೊಸ ಪ್ರಕ್ರಿಯೆಯನ್ನು ಪರಿಚಯಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ನಮಗೆ ತಿಳಿದಿದೆ. ಆದ್ದರಿಂದ, ಈ ಶುಚಿಗೊಳಿಸುವ ಮಾನದಂಡಗಳನ್ನು ಪರಿಣಾಮಕಾರಿಯಾಗಿ ಮತ್ತು ನಿಖರವಾಗಿ ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡಲು ನಾವು ಶಿಕ್ಷಣ ಮತ್ತು ಉತ್ಪನ್ನ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಶಿಕ್ಷಣ, ಸಲಹೆಗಳು, ಮತ್ತು ಕಸ್ಟಮ್ ಚೆಕ್‌ಲಿಸ್ಟ್‌ಗಳಿಗಾಗಿ ನಿಮ್ಮ ಒಳನೋಟಗಳ ಟ್ಯಾಬ್‌ನ ಸ್ವಚ್ಛಗೊಳಿಸುವ ವಿಭಾಗವನ್ನು ಪರಿಶೀಲಿಸಿ. ವಿವರವಾದ ಮಾರ್ಗದರ್ಶನಕ್ಕಾಗಿ, ನೀವು ಶುಚಿಗೊಳಿಸುವ ಕೈಪಿಡಿಯನ್ನು ಸಹ ಡೌನ್‌ಲೋಡ್ ಮಾಡಬಹುದು.
ಈ ಲೇಖನ ಒಳಗೊಂಡಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು. 5-ಹಂತದ ವರ್ಧಿತ ಸ್ವಚ್ಛಗೊಳಿಸುವಿಕೆ ಪ್ರಕ್ರಿಯೆಯು ನಿಮ್ಮ ಲಿಸ್ಟಿಂಗ್ ಅನ್ನು ಸ್ವಚ್ಛಗೊಳಿಸಲು ಸರಳವಾದ ಅವಶ್ಯಕತೆಗಳನ್ನು ಒದಗಿಸುತ್ತದೆ. ಈ ಹಂತಗಳನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪೂರ್ಣ Airbnb ಸ್ವಚ್ಛಗೊಳಿಸುವ ಕೈಪಿಡಿಯನ್ನುನೋಡಿ. ಹೋಸ್ಟ್‌ ಆಗಿ, ನಿಮ್ಮನ್ನು, ನಿಮ್ಮ ತಂಡಗಳನ್ನು ಮತ್ತು ನಿಮ್ಮ ಗೆಸ್ಟ್‌ಗಳನ್ನು ರಕ್ಷಿಸಲು ನೀವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು ಮತ್ತು ನೀವು ಯಾವಾಗಲೂ ಯಾವುದೇ ಸಂಬಂಧಿತ ಸ್ಥಳೀಯ ಕಾನೂನುಗಳು ಅಥವಾ ಮಾರ್ಗಸೂಚಿಗಳನ್ನು ಸಂಪರ್ಕಿಸಬೇಕು ಮತ್ತು ಅನುಸರಿಸಬೇಕು. ಈ ಶುಚಿಗೊಳಿಸುವ ಪ್ರಕ್ರಿಯೆಯನ್ನು ಅನುಸರಿಸುವುದರಿಂದ ಉಂಟಾಗುವ ಯಾವುದೇ ಗಾಯಗಳು ಅಥವಾ ಕಾಯಿಲೆಗಳಿಗೆ Airbnb ಜವಾಬ್ದಾರಿಯಾಗಿರುವುದಿಲ್ಲ. ನಿಮ್ಮ ಸ್ಥಳವನ್ನು ನೀವು ಹೋಸ್ಟ್ ಮಾಡುವ ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ನಿಯಮಗಳಿಗಾಗಿ, ದಯವಿಟ್ಟು ಈ ಸಹಾಯ ಕೇಂದ್ರದ ಲೇಖನವನ್ನು.ಬುಕ್‌ಮಾರ್ಕ್ ‌ಮಾಡಿಕೊಳ್ಳಿ.

ವಿಶೇಷ ಆಕರ್ಷಣೆಗಳು

Airbnb
ಜೂನ್ 4, 2020
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ