ನಿಮ್ಮ ಲಿಸ್ಟಿಂಗ್‌ಗೆ ಉತ್ತಮ ಫೋಟೋಗಳನ್ನು ತೆಗೆದುಕೊಳ್ಳುವುದು ಹೇಗೆ

ನಿಮ್ಮ ಸ್ಥಳವನ್ನು ಸಿದ್ಧಪಡಿಸಿ, ನಿಮ್ಮ ಫೋನ್ ಅನ್ನು ಕ್ಯಾಮರಾವಾಗಿ ಬಳಸಿ ಮತ್ತು ವಿವರಗಳು ಹಾಗೂ ಶೀರ್ಷಿಕೆಗಳನ್ನು ಸೇರಿಸಿ.
Airbnb ಅವರಿಂದ ಜೂನ್ 20, 2024ರಂದು
3 ನಿಮಿಷ ಓದಲು
ನವೆಂ 8, 2024 ನವೀಕರಿಸಲಾಗಿದೆ

ಉತ್ತಮ ಲಿಸ್ಟಿಂಗ್ ಫೋಟೋಗಳು ಗಮನವನ್ನು ಸೆಳೆಯುತ್ತವೆ, ಸ್ಪಷ್ಟ ನಿರೀಕ್ಷೆಗಳನ್ನು ನೀಡುತ್ತವೆ ಮತ್ತು ಗೆಸ್ಟ್‌ಗಳಿಗೆ ಬುಕ್ ಮಾಡಲು ಭರವಸೆಯನ್ನು ನೀಡುತ್ತವೆ. ನಿಮ್ಮ ಸ್ಥಳದ ಉತ್ತಮ-ಗುಣಮಟ್ಟದ ಫೋಟೋಗಳನ್ನು ತೆಗೆಯಲು ಈ ಸಲಹೆಗಳನ್ನು ಪ್ರಯತ್ನಿಸಿ.

ಫೋಟೋಗಳನ್ನು ತೆಗೆದುಕೊಳ್ಳಲು ಸಿದ್ಧವಾಗುತ್ತಿದೆ

ವಿವರವಾದ ಫೋಟೋಗಳು ನಿಮ್ಮ ಲಿಸ್ಟಿಂಗ್ ತಮ್ಮ ಅಗತ್ಯಗಳನ್ನು ಪೂರೈಸುತ್ತದೆಯೇ ಎಂದು ನಿರ್ಧರಿಸಲು ಗೆಸ್ಟ್‌ಗಳಿಗೆ ಸಹಾಯ ಮಾಡುತ್ತವೆ. ನೀವು ಫೋಟೊ ತೆಗೆಯುವುದನ್ನು ಪ್ರಾರಂಭಿಸುವ ಮುಂಚೆ ನಿಮ್ಮ ಸ್ಥಳವನ್ನು ಅಚ್ಚುಕಟ್ಟಾಗಿ ಇಡಿ ಮತ್ತು ನಿಮ್ಮ ಸೆಷನ್ ಅನ್ನು ಯೋಜಿಸಿ.

  • ಶುಚಿಗೊಳಿಸಿ ಮತ್ತು ಕಸವಿಲೇವಾರಿ ಮಾಡಿ. ಗೆಸ್ಟ್‌ಗಳು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನಿಖರವಾಗಿ ತೋರಿಸಿ. "ಫೋಟೋಗಳನ್ನು ತೆಗೆಯುವ ಮುಂಚೆ ತಮ್ಮ ಸ್ಥಳಗಳಲ್ಲಿ ಅಲ್ಲಲ್ಲೇ ಬಿದ್ದಿರುವ ವಸ್ತುಗಳನ್ನು ತೆಗೆಯಲು ತುಂಬಾ ಜನರು ಮರೆಯುತ್ತಾರೆ" ಎಂದು ಕ್ಯಾಲಿಫೋರ್ನಿಯಾದ ಜೋಶುವಾ ಟ್ರೀನಲ್ಲಿ ಛಾಯಾಗ್ರಾಹಕ ಮತ್ತು ಸೂಪರ್‌ಹೋಸ್ಟ್ ಆಗಿರುವ ಜೆಫ್ ಹೇಳುತ್ತಾರೆ.
  • ಹೈಲೈಟ್ ಮಾಡಲು ಬಯಸುವ ವೈಶಿಷ್ಟ್ಯಗಳನ್ನು ಆಯ್ಕೆಮಾಡಿ. ನಿಮ್ಮ ಸ್ಥಳದಲ್ಲಿರುವ ಯಾವುದನ್ನು ಗೆಸ್ಟ್‌ಗಳು ಇಷ್ಟಪಡುತ್ತಾರೆ? ಅವರು ಆಶ್ಚರ್ಯ ಪಡುವುದನ್ನು ತಪ್ಪಿಸಲು ಯಾವ ಮಾಹಿತಿಯನ್ನು ಸೇರಿಸಬೇಕು? ವಿಶಿಷ್ಟ ವಿವರಗಳು, ಜನಪ್ರಿಯ ಸೌಲಭ್ಯಗಳು ಮತ್ತು ಪ್ರವೇಶಾವಕಾಶವಿರುವ ವೈಶಿಷ್ಟ್ಯಗಳನ್ನುಫೋಟೋ ಮೂಲಕ ತೋರಿಸಿ.
  • ಪಟ್ಟಿಯನ್ನು ಮಾಡಿ. ಗೆಸ್ಟ್‌ಗಳು ವಿವಿಧ ದೃಷ್ಟಿಕೋನಗಳಿಂದ ಬಳಸಬಹುದಾದ ಪ್ರತಿ ಕೊಠಡಿ ಮತ್ತು ಪ್ರದೇಶವನ್ನು ಸೆರೆಹಿಡಿಯಲು ಯೋಜಿಸಿ. ಉದಾಹರಣೆಗೆ, ಹಿಂಭಾಗದ ಫೋಟೋಗಳು ಸಂಪೂರ್ಣ ಅಂಗಳ, ಪೂಲ್, ಸನ್ ಲಾಂಜರ್‌ಗಳನ್ನು ಹೊಂದಿರುವ ಒಳಾಂಗಣ ಮತ್ತು ಗೇಟ್‌ನ ಬೀಗದ ಮೇಲೆ ಕೇಂದ್ರೀಕರಿಸಬಹುದು.
  • ಉತ್ತಮ ಬೆಳಕಿರಲಿ. ಕೋಮಲವಾದ, ನೈಸರ್ಗಿಕ ಬೆಳಕಿನಲ್ಲಿ ತೆಗೆಯುವ ಫೋಟೋಗಳು ಆಕರ್ಷಕವಾಗಿ ಮತ್ತು ಕಣ್ಮನ ಸೆಳೆಯುವ ರೀತಿಯಲ್ಲಿ ಇರುತ್ತವೆ. ನಿಮ್ಮ ಕೊಠಡಿಗಳಿಗೆ ಹೆಚ್ಚು ಹಗಲು ಬೆಳಕು ಬೀಳುವಾಗ ಒಳಾಂಗಣ ಫೋಟೋಗಳನ್ನು ತೆಗೆಯಲು ಯೋಜಿಸಿ. ಸೂರ್ಯೋದಯದ 60 ನಿಮಿಷಗಳ ನಂತರ ಮತ್ತು ಸೂರ್ಯಾಸ್ತದ ಮುಂಚೆ ಅಂದರೆ "ಗೋಲ್ಡನ್ ಅವರ್ಸ್" ಸಮಯದಲ್ಲಿ ಹೊರಾಂಗಣ ಫೋಟೋಗಳನ್ನು ತೆಗೆಯಿರಿ.
  • ಪರಿಣತರನ್ನು ನೇಮಿಸಿಕೊಳ್ಳುವುದನ್ನು ಪರಿಗಣಿಸಿ. ವೃತ್ತಿಪರ ಫೋಟೋಗ್ರಾಫಿಗಳುವಿಶ್ವಾದ್ಯಂತ ಆಯ್ದ ನಗರಗಳಲ್ಲಿ Airbnb ಮೂಲಕ ಲಭ್ಯವಿವೆ.

ಉತ್ತಮ-ಗುಣಮಟ್ಟದ ಫೋಟೋಗಳನ್ನು ತೆಗೆದುಕೊಳ್ಳುವುದು

ಆಕರ್ಷಕ ಲಿಸ್ಟಿಂಗ್ ಫೋಟೋಗಳನ್ನು ಸೆರೆಹಿಡಿಯಲು ಹೆಚ್ಚಿನ ಕ್ಯಾಮೆರಾಗಳನ್ನು ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಕ್ಯಾಮರಾಗಳನ್ನೂ ಉಪಯೋಗಿಸಬಹುದು. ನಿಮ್ಮ ಫೋಟೋಗಳು Airbnb ಯಲ್ಲಿ ಉತ್ತಮವಾಗಿ ಕಾಣುವಂತೆ

ಮಾಡಲು ನೆರವು ನೀಡುವ ಮಾಹಿತಿ ಇಲ್ಲಿದೆ.
  • ಫ್ಲ್ಯಾಶ್ ಆಫ್ ಮಾಡಿ. ಕಿಟಕಿ ತೆರೆಯಿರಿ, ಸನ್ ಶೇಡ್ ಮತ್ತು ಪರದೆಗಳನ್ನು ತೆರೆಯಿರಿ. ನೈಸರ್ಗಿಕ ಬೆಳಕು ಹೆಚ್ಚು ಒಳಬರುವಂತೆ ಮಾಡಿಯೂ ನಿಮ್ಮ ಫೋಟೋಗಳು ಕಪ್ಪಗೆ ಬೀಳುತ್ತಿದ್ದರೆ ಲೈಟ್‌ಗಳನ್ನು ಆನ್ ಮಾಡಿ.
  • ಅಡ್ಡಲಾಗಿ ಫೋಟೋಗಳನ್ನು ತೆಗೆಯಿರಿ. ಲಂಬಗಳಿಗಿಂತ ಅಡ್ಡ ಫೋಟೋಗಳನ್ನು ತೆಗೆಯುವುದು ಉಪಯುಕ್ತ ಏಕೆಂದರೆ ಹುಡುಕಾಟ ಫಲಿತಾಂಶಗಳಲ್ಲಿ ಚಿತ್ರಗಳನ್ನು ಚೌಕಗಳಾಗಿ ಕ್ರಾಪ್ ಮಾಡಲಾಗುತ್ತದೆ ಮತ್ತು ನಿಮ್ಮ ಲಿಸ್ಟಿಂಗ್ ಪುಟವು ಲ್ಯಾಂಡ್ ‌ ಸ್ಕೇಪ್ ಮೋಡ್‌ನಲ್ಲಿ ಫೋಟೋಗಳನ್ನು ಪ್ರದರ್ಶಿಸುತ್ತದೆ.
  • ನೀವು ತೋರಿಸಲು ಬಯಸುವ ವಿಷಯವನ್ನು ಫ್ರೇಮ್‌ನೊಳಗೆ ಇರಿಸಿ. ಸಂಗತಿಗಳನ್ನು ಸರಿಪಡಿಸಲು ಸಹಾಯ ಮಾಡಲು ಗ್ರಿಡ್‌ಗಳನ್ನು ಆನ್ ಮಾಡಿ.
  • ಕ್ಯಾಮೆರಾವನ್ನು ನೇರವಾಗಿ ಮುಂದಕ್ಕೆ ಕೇಂದ್ರಿಕರಿಸಿ. ನಿಮ್ಮ ಸ್ಥಳದ ವಾಸ್ತವಿಕ ನೋಟವನ್ನು ಗೆಸ್ಟ್‌ಗಳಿಗೆ ನೀಡಲು ಲೆನ್ಸ್ ಅನ್ನು ಮೇಲಕ್ಕೆ ಅಥವಾ ಕೆಳಕ್ಕೆ ಓರೆಯಾಗಿಸದೆ ತಟಸ್ಥ ಸ್ಥಾನದಲ್ಲಿ ಇಟ್ಟು ಫೋಟೋಗಳನ್ನು ತೆಗೆಯಿರಿ.
  • ಫೋಟೋಗಳನ್ನು ಆಯ್ಕೆಮಾಡಿ. ದೊಡ್ಡ ಚಿತ್ರದಲ್ಲಿ ಸಣ್ಣ ವಿವರಗಳನ್ನು ಹಂಚಿಕೊಳ್ಳಲು ವಿಶಾಲವಾದ, ಮಧ್ಯ ಶ್ರೇಣಿ ಮತ್ತು ಕ್ಲೋಸ್-ಅಪ್ ಚಿತ್ರಗಳ ಮಿಶ್ರಣವನ್ನು ಆಯ್ಕೆಮಾಡಿ.
  • ಫೋಟೋಗಳನ್ನು ಎಡಿಟ್ ಮಾಡಿ. ನಿಮ್ಮ ಫೋನ್‌ನಲ್ಲಿ ಸ್ವಯಂ ಎಡಿಟಿಂಗ್ ಬಟನ್‌ನಂತಹ ಸಾಧನಗಳನ್ನು ಬಳಸಿಕೊಂಡು ಪ್ರತಿ ಫೋಟೋವಿನ ಹೊಳಪು, ಕಾಂಟ್ರಾಸ್ಟ್ ಮತ್ತು ಹೈಲೈಟ್‌ಗಳನ್ನು ಸರಿಹೊಂದಿಸಿ. ಅಗತ್ಯವಿರುವಂತೆ ಚಿತ್ರಗಳನ್ನು ಕೈಯಾರೆ ಕ್ರಾಪ್ ಮಾಡಿ, ನೇರಗೊಳಿಸಿ ಅಥವಾ ತಿರುಗಿಸಿ (ಆದ್ದರಿಂದ ಅವು ಬಲಭಾಗದಲ್ಲಿರುತ್ತವೆ).
  • ಹೆಚ್ಚಿನ ರೆಸಲ್ಯೂಶನ್‌ನಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡಿ. ಕನಿಷ್ಠ 1200 ಪಿಕ್ಸೆಲ್‌ ಬೈ 800 ಪಿಕ್ಸೆಲ್‌ಗಳ ಫೋಟೋಗಳನ್ನು ಬಳಸಿ. ದೊಡ್ಡ ಫೈಲ್ ಗಾತ್ರಗಳು ಅಂದರೆ ಸುಮಾರು 10 ಮೆಗಾಬೈಟ್‌ಗಳವರೆಗೆ ಉತ್ತಮವಾಗಿರುತ್ತವೆ.
ಫ್ಲ್ಯಾಶ್ ಅನ್ನು ಆಫ್ ಮಾಡಿ ಮತ್ತು ನೈಸರ್ಗಿಕ ಬೆಳಕನ್ನು ನಿಮ್ಮ ಪ್ರಾಥಮಿಕ ಬೆಳಕಿನ ಮೂಲವಾಗಿ ಬಳಸಿ.

ಫೋಟೋ ಟೂರ್ ಮತ್ತು ಶೀರ್ಷಿಕೆಗಳನ್ನು ಸೇರಿಸುವುದು

ನಿಮ್ಮ ಫೋಟೋಗಳನ್ನುಅಪ್‌ಲೋಡ್ ಮಾಡಿದ ನಂತರ, ನಿಮ್ಮ ಸ್ಥಳವನ್ನು ಪ್ರದರ್ಶಿಸಲು ನಿಮ್ಮ ಲಿಸ್ಟಿಂಗ್‌ಗಳ ಟ್ಯಾಬ್‌ನಲ್ಲಿರುವ ಟೂಲ್‌ಗಳನ್ನು ಬಳಸಿ.

  • ಫೋಟೋ ಟೂರ್ ರಚಿಸಿ. ಗೆಸ್ಟ್‌ಗಳು ನಿಮ್ಮ ಮನೆಯ ಲೇಔಟ್ ಅನ್ನು ಅರ್ಥಮಾಡಿಕೊಳ್ಳಲು ಫೋಟೋ ಟೂರ್ ಸ್ವಯಂಚಾಲಿತವಾಗಿ ನಿಮ್ಮ ಚಿತ್ರಗಳನ್ನು ರೂಮ್ ಪ್ರಕಾರ ವಿಂಗಡಿಸುತ್ತದೆ. ನೀವು ಫೋಟೋಗಳನ್ನು ಸರಿಸಬಹುದು, ತೆಗೆದುಹಾಕಬಹುದು ಮತ್ತು ಸೇರಿಸಬಹುದು.
  • ಪ್ರತಿ ಕೋಣೆಗೆ ವಿವರಗಳನ್ನು ಸೇರಿಸಿ. ಮಲಗುವ ಕೋಣೆಯಲ್ಲಿ ಕಿಂಗ್-ಸೈಜ್ ಬೆಡ್ ಇದೆ ಅಥವಾ ಲಿವಿಂಗ್ ರೂಮ್ 55 ಇಂಚಿನ ಟಿವಿ ಹೊಂದಿದೆ ಎಂಬ ಮಾಹಿತಿಯನ್ನು ಸೇರಿಸಬಹುದು. ಕೋಣೆಯ ಪ್ರವೇಶಾವಕಾಶವಿರುವ ವೈಶಿಷ್ಟ್ಯಗಳ ಬಗ್ಗೆಯೂ ನೀವು ಮಾಹಿತಿಯನ್ನು ಸೇರಿಸಬಹುದು.
  • ಫೋಟೋ ಶೀರ್ಷಿಕೆಗಳನ್ನು ಬರೆಯಿರಿ. ಗೆಸ್ಟ್‌ಗಳಿಗೆ ಮುಖ್ಯವಾಗಿರುವ ಫೋಟೋದಲ್ಲಿ ಇಲ್ಲದಿರುವ ಮಾಹಿತಿಯನ್ನು ವಿವರಿಸಿ. ಉದಾಹರಣೆಗೆ, "ಡ್ರಾಪ್-ಲೀಫ್ ಡೈನಿಂಗ್ ಟೇಬಲ್ ಅನ್ನು ಸಂಪೂರ್ಣವಾಗಿ ತೆರೆದಾಗ 10 ಜನರವರೆಗೆ ಕುಳಿತುಕೊಳ್ಳಬಹುದು."
  • ಪ್ರತಿ ಕೊಠಡಿಯು ನೆಲದ ನಕ್ಷೆಯಲ್ಲಿ ಎಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಿ. "ಬೆಡ್ ‌ ರೂಮ್ 1 ಎರಡನೇ ಮಹಡಿಯಲ್ಲಿದೆ ಮತ್ತು ಎನ್-ಸೂಟ್ ಬಾತ್ರೂಮ್ ಹೊಂದಿದೆ" ಎಂಬಂತಹ ಮಾಹಿತಿಯನ್ನು ಒದಗಿಸಿ.
  • ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳಿಗೆ ಒತ್ತು ನೀಡಿ. ಜನಪ್ರಿಯ ಐಟಂಗಳನ್ನು ಗಮನಕ್ಕೆ ತನ್ನಿ. ಉದಾಹರಣೆಗೆ, "ಹಂಚಿಕೊಳ್ಳುವ ಅಡುಗೆಮನೆಯಲ್ಲಿ ಗೆಸ್ಟ್‌ಗಳಿಗಾಗಿ ಎಸ್‌ಪ್ರೆಸ್ಸೊ ಯಂತ್ರ, ಎಲೆಕ್ಟ್ರಿಕ್ ಕೆಟಲ್ ಮತ್ತು ಶೆಲ್ಫ್ ಜಾಗದೊಂದಿಗೆ ಫ್ರಿಜ್ ಇದೆ." ನೀವು ಎಡಿಟ್ ಮಾಡುವುದನ್ನು ಪೂರ್ಣಗೊಳಿಸಿದಾಗ, ನಿಮ್ಮ ಲಿಸ್ಟ್ ಅನ್ನು ಪೂರ್ವವೀಕ್ಷಣೆ ಮಾಡಲು ವೀಕ್ಷಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

  ನೀವು ಎಡಿಟ್ ಮಾಡುವುದನ್ನು ಪೂರ್ಣಗೊಳಿಸಿದಾಗ, ನಿಮ್ಮ ಲಿಸ್ಟಿಂಗ್ ಅನ್ನು ಪ್ರಿವ್ಯೂ ಮಾಡಲು ವೀಕ್ಷಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

ಈ ಲೇಖನದಲ್ಲಿ ಇರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

Airbnb
ಜೂನ್ 20, 2024
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ