ಕೆಟ್ಟ ವಿಮರ್ಶೆಯನ್ನು ಹೇಗೆ ನಿಭಾಯಿಸುವುದು
ಕೆಟ್ಟ ವಿಮರ್ಶೆಗಳು ಚುಚ್ಚಬಹುದು, ಆದರೆ ಉನ್ನತ-ರೇಟಿಂಗ್ ಹೊಂದಿರುವ ಹೋಸ್ಟ್‌ಗಳು ಸಹ ಆಗಾಗ ಅಂತಹ ವಿಮರ್ಶೆಗಳನ್ನು ಪಡೆಯುತ್ತಾರೆ. ನಕಾರಾತ್ಮಕ ಗೆಸ್ಟ್ ಪ್ರತಿಕ್ರಿಯೆಯನ್ನು ನಿಭಾಯಿಸಲು ಕೆಲವು ಸಲಹೆಗಳು ಇಲ್ಲಿವೆ.
ಕೆಟ್ಟ ವಿಮರ್ಶೆಗಳಿಗೆ ಪ್ರತಿಕ್ರಿಯಿಸುವುದು
ಸಾರ್ವಜನಿಕ ಪ್ರತಿಕ್ರಿಯೆಯನ್ನು ನೀಡುವುದರಿಂದ ನೀವು ಸಲಹೆಗಳಿಗೆ ಮುಕ್ತರಾಗಿರುವಿರಿ ಎಂದು ಗೆಸ್ಟ್‌ಗಳಿಗೆ ತಿಳಿಯಲು ಸಹಾಯ ಮಾಡುತ್ತದೆ. ಒಂದು ಚಿಕ್ಕದಾದ, ಸ್ನೇಹಪರ ಪ್ರತ್ಯುತ್ತರವು ನೀವು ಅವರ ಅನುಭವಗಳ ಬಗ್ಗೆ ಕಾಳಜಿ ಹೊಂದಿದ್ದೀರಿ ಎಂದು ಇತರ ಗೆಸ್ಟ್‌ಗಳಿಗೆ ಭರವಸೆ ನೀಡಲು ಸಹಾಯ ಮಾಡುತ್ತದೆ.
"ಯಾವುದೇ ಹೋಸ್ಟ್ 100% ಅತ್ಯುತ್ತಮ ವಿಮರ್ಶೆಗಳನ್ನು ಪಡೆಯುತ್ತಾರೆಂದು ನಾನು ನಿರೀಕ್ಷಿಸುವುದಿಲ್ಲ," ಎಂದು ಬರ್ಲಿನ್‌ನಲ್ಲಿ ಸೂಪರ್‌ಹೋಸ್ಟ್ ಕೂಡ ಆಗಿರುವ ಗೆಸ್ಟ್ ಆಂಡ್ರ್ಯೂ ಹೇಳುತ್ತಾರೆ. "ವಿಮರ್ಶಾತ್ಮಕ ಪ್ರತಿಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸುವವರಿಂದ ನಾನು ಹೆಚ್ಚು ಪ್ರಭಾವಿತನಾಗಿದ್ದೇನೆ."
ಕೆಟ್ಟ ವಿಮರ್ಶೆಗಳಿಗೆ ಪ್ರತಿಕ್ರಿಯಿಸಲು ಈ ಸಲಹೆಗಳನ್ನುಪರಿಗಣಿಸಿ:
- ಗೆಸ್ಟ್‌ಗಳಿಗೆ ಅವರ ಪ್ರತಿಕ್ರಿಯೆಗಾಗಿ ಧನ್ಯವಾದ ಹೇಳಿ. ಸರಳವಾಗಿ ನೀವು ಹೀಗೆ ಹೇಳಬಹುದು: "ನಿಮ್ಮ ವಿಮರ್ಶೆಗೆ ಧನ್ಯವಾದಗಳು. ನಿಮ್ಮ ಟ್ರಿಪ್ ಅನ್ನು ಪರಾಮರ್ಶಿಸಲು ನೀವು ಸಮಯ ಮಾಡಿಕೊಂಡಿದ್ದನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ."
- ನಿಮ್ಮ ಸ್ಥಳವನ್ನು ನೀವು ಹೇಗೆ ಸುಧಾರಿಸುತ್ತಿದ್ದೀರಿ ಎಂಬುದನ್ನು ಹಂಚಿಕೊಳ್ಳಿ. ನೀವು ಹೀಗೆ ಬರೆಯಬಹುದು: "ಬೆಡ್‌ಗಳು ಅನಾನುಕೂಲವಾಗಿದ್ದಕ್ಕಾಗಿ ನಮ್ಮನ್ನು ಕ್ಷಮಿಸಿ. ನೀವು ಚೆನ್ನಾಗಿ ನಿದ್ದೆ ಮಾಡುವುದು ಮುಖ್ಯವಾಗಿರುವುದರಿಂದ ನಾವು ಮ್ಯಾಟ್ರೆಸ್ ಟಾಪರ್‌ಗಳನ್ನು ಸೇರಿಸಿದ್ದೇವೆ."
ನಮ್ಮ ವಿಮರ್ಶೆಗಳ ನೀತಿಯನ್ನು ಅನುಸರಿಸುವುದಿಲ್ಲ ಎಂದು ನೀವು ನಂಬುವ ಪ್ರತೀಕಾರದ ವಿಮರ್ಶೆಯಂತಹ ಯಾವುದೇ ವಿಮರ್ಶೆಯನ್ನು ನೀವು ತೆಗೆದುಹಾಕಲು ವಿನಂತಿಸಬಹುದು.
ನೀವು ಮುಂದುವರಿದಂತೆ ಸುಧಾರಿಸುವುದು
ನಿಖರತೆ ಮತ್ತು ಸ್ವಚ್ಛತೆಯಲ್ಲಿ ಸಮಸ್ಯೆಗಳು, ಗೆಸ್ಟ್‌ಗಳು ಹೋಸ್ಟ್‌ಗಳಿಗೆ ಐದು ಸ್ಟಾರ್‌ಗಳಿಗಿಂತ ಕಡಿಮೆ ರೇಟಿಂಗ್ ನೀಡಲು ಎರಡು ಅತ್ಯಂತ ಸಾಮಾನ್ಯ ಕಾರಣಗಳಾಗಿವೆ. ಗೆಸ್ಟ್‌ಗಳ ಪ್ರತಿಕ್ರಿಯೆಯನ್ನು ನಿಮ್ಮ ಹೋಸ್ಟಿಂಗ್ ಅನ್ನು ಉತ್ತಮಗೊಳಿಸುವುದಕ್ಕೆ ಅವಕಾಶವೆಂದು ಬಳಸಿಕೊಳ್ಳಿ.
ನೀವು ಯಾವಾಗಲೂ ಸುಧಾರಣೆಗಳಿಗೆ ಮುಕ್ತರಾಗಿದ್ದೀರಿ ಎಂದು ಗೆಸ್ಟ್‌ಗಳಿಗೆ ತೋರಿಸಲು ಕೆಲವು ದಾರಿಗಳು ಇಲ್ಲಿವೆ:
- ಪ್ರತಿಕ್ರಿಯೆಯನ್ನು ಒಂದು ಅವಕಾಶವೆಂದು ಪರಿಗಣಿಸಿ. ಗೆಸ್ಟ್‌ಗಳು ನಿಮ್ಮ ಪರಿಗಣನೆಗೆ ಬರದಿರುವ ದೃಷ್ಟಿಕೋನಗಳನ್ನು ಒದಗಿಸಬಹುದು, ಉದಾಹರಣೆಗೆ ನೀವು ಚೆಕ್-ಇನ್ ಅನ್ನು ಇನ್ನಷ್ಟು ಸರಳಗೊಳಿಸಬಹುದು ಅಥವಾ ಇನ್ನಷ್ಟು ಟವೆಲ್‌ಗಳನ್ನು ನೀಡಬಹುದು.
ಪಾರದರ್ಶಕವಾಗಿರಿ. ನೀವು ಪ್ರಸ್ತುತ ಏನನ್ನೆಲ್ಲ ಒದಗಿಸುತ್ತಿದ್ದೀರಿ ಎಂಬುದನ್ನು ಪ್ರತಿಬಿಂಬಿಸಲು ನಿಮ್ಮ ಫೋಟೋಗಳು ಮತ್ತು ಲಿಸ್ಟಿಂಗ್ ವಿವರಣೆಗಳನ್ನು ಅಪ್ ಟು ಡೇಟ್ ಆಗಿ ಇರಿಸಿಕೊಳ್ಳಿ. ಸಂಭಾವ್ಯ ನ್ಯೂನತೆಗಳನ್ನು ನೀವು ಹೇಗೆ ನಿರ್ವಹಿಸುತ್ತಿದ್ದೀರಿ ಎಂಬುದನ್ನು ವಿವರಿಸಿ, ಉದಾಹರಣೆಗೆ ನಿಮ್ಮ ರಸ್ತೆಯು ಗದ್ದಲಮಯವಾಗಿದ್ದರೆ ಇಯರ್‌ಪ್ಲಗ್‌ಗಳನ್ನು ಒದಗಿಸುವುದು.
- ಒಳಗೊಳ್ಳುವಿಕೆಯ ಹೋಸ್ಟಿಂಗ್ ಪದ್ಧತಿಯನ್ನು ಅನುಸರಿಸಿ. ಲಿಂಗ ತಟಸ್ಥ ಭಾಷೆಯನ್ನು ಬಳಸುವ ಮೂಲಕ ಮತ್ತು ಪ್ರವೇಶಾವಕಾಶವಿರುವ ವೈಶಿಷ್ಟ್ಯಗಳನ್ನು ವಿಶೇಷ ಆಕರ್ಷಣೆ ಆಗಿಸುವ ಮೂಲಕ ಪ್ರತಿಯೊಬ್ಬ ಗೆಸ್ಟ್‌ಗೆ ತಾವು ಇಲ್ಲಿ ಸ್ವಾಗತಾರ್ಹ ಎಂಬ ಭಾವ ಮೂಡಿಸುವತ್ತ ಗಮನ ಹರಿಸಿ.
- ಗೆಸ್ಟ್‌ಗಳ ವಾಸ್ತವ್ಯದುದ್ದಕ್ಕೂ ಅವರೊಂದಿಗೆ ಸಂವಹನ ನಡೆಸಿ. ಸಂಗತಿಗಳು ಹೇಗೆ ನಡೆಯುತ್ತಿವೆ ಎಂದು ಕೇಳಲು ಮತ್ತು ಯಾವುದೇ ಕಳವಳಗಳನ್ನು ತ್ವರಿತವಾಗಿ ಪರಿಹರಿಸಲು, ಶೆಡ್ಯೂಲ್ ಮಾಡಿರುವ ಮೆಸೇಜ್‌ಗಳನ್ನು ಬಳಸಿ.
ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.