ನಿಮ್ಮ ಸ್ಥಳವನ್ನು ಲಿಸ್ಟ್ ಮಾಡುವುದನ್ನು ಪೂರ್ಣಗೊಳಿಸುವುದು ಹೇಗೆ

ನೀವು ಈ ಹಿಂದೆ ಕೆಲಸ ಮಾಡಿದ ಲಿಸ್ಟಿಂಗ್ ಅನ್ನು ನೀವು ಪೂರ್ಣಗೊಳಿಸಬಹುದು ಅಥವಾ ಹೊಸದನ್ನು ಪ್ರಾರಂಭಿಸಬಹುದು.
Airbnb ಅವರಿಂದ ಅಕ್ಟೋ 14, 2021ರಂದು
1 ನಿಮಿಷ ಓದಲು
ಏಪ್ರಿ 3, 2025 ನವೀಕರಿಸಲಾಗಿದೆ

ಮರಳಿ ಸ್ವಾಗತ! ಈ ಹಂತದಲ್ಲಿ ನೀವು ಈಗಾಗಲೇ ಪ್ರಾರಂಭಿಸಿರುವ ಲಿಸ್ಟಿಂಗ್ ಅನ್ನು ಪೂರ್ಣಗೊಳಿಸುವುದು, ಹೊಸ ಲಿಸ್ಟಿಂಗ್ ರಚಿಸುವುದು ಮತ್ತು ಅಸ್ತಿತ್ವದಲ್ಲಿರುವ ಲಿಸ್ಟಿಂಗ್‌ನ ಕೆಲವು ಭಾಗಗಳನ್ನು ನಕಲು ಮಾಡುವುದು, ಈ ಕ್ರಿಯೆಗಳನ್ನು ನೀವು ಆಯ್ಕೆ ಮಾಡಬಹುದು.

1. ನಿಮ್ಮ ಲಿಸ್ಟಿಂಗ್ ಅನ್ನು ಪೂರ್ಣಗೊಳಿಸಿ
ನೀವು ಈಗಾಗಲೇ ಪ್ರಾರಂಭಿಸಿರುವ ಯಾವುದೇ ಲಿಸ್ಟಿಂಗ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ-ನೀವು ಕೆಲಸ ಮಾಡಿದ ಮೊದಲಿನ ಲಿಸ್ಟಿಂಗ್‌ಗಳನ್ನು ನೀವು ಮೇಲ್ಭಾಗದಲ್ಲಿ ಕಾಣಬಹುದು. ನಿಮ್ಮಲ್ಲಿ ಮೂರಕ್ಕಿಂತ ಹೆಚ್ಚು ಲಿಸ್ಟಿಂಗ್‌ಗಳು ಪ್ರಗತಿಯಲ್ಲಿದ್ದರೆ, ಪಟ್ಟಿಯನ್ನು ವಿಸ್ತರಿಸಲು ಎಲ್ಲವನ್ನೂ ತೋರಿಸಿ ಆಯ್ಕೆಯನ್ನು ಒತ್ತಿರಿ. ಒಮ್ಮೆ ನೀವು ಕೆಲಸ ಮಾಡಲು ಬಯಸುವ ಲಿಸ್ಟಿಂಗ್ ಅನ್ನು ನೀವು ಆಯ್ಕೆ ಮಾಡಿದ ನಂತರ, ನೀವು ಎಲ್ಲಿ ಬಿಟ್ಟಿದ್ದೀರಿ ಅಲ್ಲಿಂದ ನೀವು ಪ್ರಾರಂಭಿಸುತ್ತೀರಿ ಮತ್ತು ನೀವು ನಮೂದಿಸಿದ ಯಾವುದೇ ವಿವರಗಳನ್ನು ಪರಿಶೀಲಿಸಲು ಮತ್ತು ತಿದ್ದುಪಡಿ ಮಾಡಲು ನೀವು ಯಾವಾಗಲೂ ಹಿಂತಿರುಗಬಹುದು.

2. ಹೊಸ ಲಿಸ್ಟಿಂಗ್ ಅನ್ನು ರಚಿಸಿ
ಹೊಸ ಲಿಸ್ಟಿಂಗ್ ಅನ್ನು ರಚಿಸಲು +
ಒತ್ತಿರಿ ಮತ್ತು ನಾವು ಹಂತಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತೇವೆ.

3. ಅಸ್ತಿತ್ವದಲ್ಲಿರುವ ಲಿಸ್ಟಿಂಗ್ ನಕಲು ಮಾಡಿ
ಅಸ್ತಿತ್ವದಲ್ಲಿರುವ ಲಿಸ್ಟಿಂಗ್‌ನಿಂದ ವಿವರಗಳನ್ನು ಬಳಸಿಕೊಂಡು ಹೊಸ ಲಿಸ್ಟಿಂಗ್ ರಚಿಸುವ ಸಮಯವನ್ನುನೀವು ಉಳಿಸಬಹುದು. ಒಂದೇ ಮನೆಯಲ್ಲಿ ಅನೇಕ ಖಾಸಗಿ ರೂಮ್‌ಗಳಂತಹ ಒಂದೇ ರೀತಿಯ ಸ್ಥಳಗಳನ್ನು ಪಟ್ಟಿ ಮಾಡುವ ಹೋಸ್ಟ್‌ಗಳಿಗೆ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಅದೇ ಫೋಟೋಗಳನ್ನು ಬಳಸಲು ಅಥವಾ ಹೊಸದನ್ನು ಸೇರಿಸಲು ಆಯ್ಕೆಯನ್ನು ಹೊಂದಿರುತ್ತೀರಿ.

ಪ್ರಾರಂಭದಿಂದ ಮುಕ್ತಾಯದವರೆಗೆ, ನೀವು ನಿಮ್ಮ ಸ್ಥಳವನ್ನು 10 ಮುಖ್ಯ ಹಂತಗಳಲ್ಲಿ ಪಟ್ಟಿ ಮಾಡಬಹುದು:

  1. ನೀವು ಯಾವ ರೀತಿಯ ಸ್ಥಳವನ್ನು ಹೋಸ್ಟ್ ಮಾಡಲು ಯೋಜಿಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ
  2. ನಿಮ್ಮ ಪ್ರಾಪರ್ಟಿಯ ವಿಧವನ್ನು ಮತ್ತಷ್ಟು ವಿವರಿಸಿ
  3. ಗೆಸ್ಟ್‌ಗಳು ತಮಗೆ ಮಾತ್ರವೇ ಸ್ಥಳವನ್ನು ಹೊಂದುತ್ತಾರೆಯೇ ಎಂದು ಸ್ಪಷ್ಟಪಡಿಸಿ
  4. ನಿಮ್ಮ ಸ್ಥಳವನ್ನು ನಮೂದಿಸಿ
  5. ನೀವು ಎಷ್ಟು ಗೆಸ್ಟ್‌ಗಳನ್ನು ಸ್ವಾಗತಿಸಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ
  6. ನಿಮ್ಮ ಸ್ಥಳದ ಸೌಲಭ್ಯಗಳನ್ನು ಲಿಸ್ಟ್ ‌ಮಾಡಿ
  7. ನಿಮ್ಮ ಫೋಟೋಗಳನ್ನು ಸೇರಿಸಿ ಮತ್ತು ಆಯೋಜಿಸಿ
  8. ನಿಮ್ಮ ಸ್ಥಳವನ್ನು ಹೆಸರಿಸಿ
  9. ನಿಮ್ಮ ಸ್ಥಳವನ್ನು ವಿವರಿಸಿ
  10. ನಿಮ್ಮ ಪ್ರತಿ ರಾತ್ರಿಯ ದರವನ್ನು ಹೊಂದಿಸಿ

ನೀವು ನಿಮ್ಮ ಲಿಸ್ಟಿಂಗ್ ಅನ್ನು ಪ್ರಕಟಿಸಿದ ನಂತರ ಅದಕ್ಕೆ ನೀವು ಯಾವಾಗ ಬೇಕಾದರೂ ಬದಲಾವಣೆಗಳನ್ನು ಮಾಡಬಹುದು. ನಿಮ್ಮ ಕ್ಯಾಲೆಂಡರ್ ಅನ್ನು ನವೀಕರಿಸುವುದರಿಂದ ಮತ್ತು ನಿಮ್ಮ ರದ್ದತಿ ನೀತಿಯನ್ನು ಪರಿಶೀಲಿಸುವುದರಿಂದ ಹಿಡಿದು ನಿಮ್ಮ ಮನೆಯ ನಿಯಮಗಳನ್ನು ಸೇರಿಸುವವರೆಗೆ ನೀವು ಹೇಗೆ ಹೋಸ್ಟ್ ಮಾಡಲು ಬಯಸುತ್ತೀರಿ ಎಂಬುದನ್ನು ಪರಿಷ್ಕರಿಸಲು ನಿಮಗೆ ಸಾಧ್ಯವಾಗುತ್ತದೆ.

Airbnb
ಅಕ್ಟೋ 14, 2021
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ