ದೀರ್ಘಾವಧಿಯ ವಾಸ್ತವ್ಯಗಳಿಗೆ ಹಣಪಾವತಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ
ವಿಶೇಷ ಆಕರ್ಷಣೆಗಳು
ಗೆಸ್ಟ್ 28ಕ್ಕಿಂತ ಹೆಚ್ಚು ರಾತ್ರಿಗಳ ವಾಸ್ತವ್ಯ ಹೂಡಿದಾಗ, ನಿಮಗೆ ಕಂತುಗಳಲ್ಲಿ ಹಣ ನೀಡಲಾಗುತ್ತದೆ.
ಇದು ಕಡಿಮೆ ಅವಧಿಯ ರಿಸರ್ವೇಶನ್‍ಗಳ ಹಣಪಾವತಿ ವೇಳಾಪಟ್ಟಿಯಿಂದ ಭಿನ್ನವಾಗಿದೆ
ದೀರ್ಘಾವಧಿಯ ವಾಸ್ತವ್ಯವು ಸ್ಥಿರ ಆದಾಯದ ಹರಿವನ್ನು ಒದಗಿಸುತ್ತದೆ, ವಿಶೇಷವಾಗಿ ಗೆಸ್ಟ್‌ಗಳು ಸತತವಾಗಿ ಹಲವಾರು ವಾರಗಳು ಅಥವಾ ತಿಂಗಳುಗಳವರೆಗೆ ಬುಕ್ ಮಾಡಿದಾಗ. ನಿಮಗೆ ಕಡಿಮೆ ವಾಸ್ತವ್ಯಗಳನ್ನು ಹೋಸ್ಟ್ ಮಾಡುವ ಅಭ್ಯಾಸವಿದ್ದರೆ, ದೀರ್ಘಾವಧಿಯ ವಾಸ್ತವ್ಯಗಳಿಗೆ ಪಾವತಿಗಳ ಸಮಯ-ಅಥವಾ 28ಕ್ಕಿಂತ ಹೆಚ್ಚು ರಾತ್ರಿಗಳ ಕಾಯ್ದಿರಿಸುವಿಕೆ- ಕಡಿಮೆ ಅವಧಿಯವುಗಳಿಗಿಂತ ಭಿನ್ನವಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ.
ಮಾಸಿಕ ಕಂತುಗಳು
ಕಡಿಮೆ ಅವಧಿಯ ವಾಸ್ತವ್ಯಗಳಿಗೆ, ನಾವು ನಿಮ್ಮ ಹಣಪಾವತಿಯನ್ನು ಕಳುಹಿಸುತ್ತೇವೆ, ಅದನ್ನು ನಾವು ಹಣಪಾವತಿ ಎಂದು ಉಲ್ಲೇಖಿಸುತ್ತೇವೆ, ಗೆಸ್ಟ್ ನಿಮ್ಮ ಸ್ಥಳಕ್ಕೆ ಚೆಕ್ ಇನ್ ಮಾಡಿದ ಸುಮಾರು 24 ಗಂಟೆಗಳ ನಂತರ. ದೀರ್ಘಾವಧಿಯ ವಾಸ್ತವ್ಯಗಳಿಗಾಗಿ, ನಾವು ನಿಮ್ಮ ಹಣಪಾವತಿಗಳನ್ನು ಕಂತುಗಳಲ್ಲಿ ಕಳುಹಿಸುತ್ತೇವೆ.
ಕಂತುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದುಇಲ್ಲಿದೆ:
- ಆರಂಭಿಕ ಹಣಪಾವತಿ: ನಿಮ್ಮ ಗೆಸ್ಟ್ ಅವರು ಬುಕ್ ಮಾಡಿದ ಮೊದಲ 30 ರಾತ್ರಿಗಳಿಗೆ ನಾವು ಶುಲ್ಕ ವಿಧಿಸುತ್ತೇವೆ ಮತ್ತು ಅವರ ನಿಗದಿತ ಚೆಕ್-ಇನ್ ಸಮಯದ 24 ಗಂಟೆಗಳ ನಂತರ ನಾವು ಆ ಹಣಪಾವತಿಯನ್ನು ನಿಮಗೆ ಬಿಡುಗಡೆ ಮಾಡುತ್ತೇವೆ
- ಹೆಚ್ಚುವರಿ ಹಣಪಾವತಿಗಳು: ಉಳಿದ ರಿಸರ್ವೇಶನ್‍ಗೆ, ಆಮೇಲಿನ ರಾತ್ರಿಗಳಿಗೆ ಹಣಪಾವತಿಗಳನ್ನು ಆರಂಭಿಕ ಹಣಪಾವತಿ ನಂತರ ಪ್ರತಿ ತಿಂಗಳು (28-31 ದಿನಗಳು) ಸಂಗ್ರಹಿಸಿ ನಿಮಗೆ ಬಿಡುಗಡೆ ಮಾಡಲಾಗುತ್ತದೆ
"ಉದಾಹರಣೆಗೆ,ರಿಸರ್ವೇಶನ್ 45 ದಿನಗಳವರೆಗೆ ಇದ್ದರೆ, ಗೆಸ್ಟ್ ಆಗಮಿಸಿದ ತಕ್ಷಣವೇ ನೀವು ಮೊದಲ 30 ದಿನಗಳವರೆಗಿನ ಪಾವತಿ ಮತ್ತು ಗೆಸ್ಟ್ ಚೆಕ್ ಇನ್ ಮಾಡಿದ ಒಂದು ತಿಂಗಳ ನಂತರ ಉಳಿದ 15 ದಿನಗಳವರೆಗಿನ ಹಣ ಪಾವತಿಯನ್ನು ಪಡೆಯುತ್ತೀರಿ" ಎಂದು ಕ್ಯಾಲಿಫೋರ್ನಿಯಾದ ಬರ್ಕ್ಲಿಯ ಸೂಪರ್‌ಹೋಸ್ಟ್ ಡೆಬೊರಾ ವಿವರಿಸುತ್ತಾರೆ.
ನಿಮ್ಮ ವಹಿವಾಟು ಹಿನ್ನೆಲೆಯಲ್ಲಿ ನಿಮ್ಮ ಹಣಪಾವತಿಗಳ ಸ್ಥಿತಿಯನ್ನು ನೀವು ಪರಿಶೀಲಿಸಬಹುದು.
ಇತರ ಹಣಪಾವತಿಯ ವಿವರಗಳು
ಹಣವು ನಿಮ್ಮ ಖಾತೆಗೆ ಬರಲು ನಿಖರವಾಗಿ ಎಷ್ಟು ಸಮಯ ತೆಗೆದುಕೊಳ್ಳುತ್ತದೆಎಂಬುದು ನೀವು ಆಯ್ಕೆ ಮಾಡಿದ ಹಣಪಾವತಿ ವಿಧಾನ ಮತ್ತು ನೀವು ಬಳಸುವ ಬ್ಯಾಂಕ್ಅನ್ನು ಅವಲಂಬಿಸಿರುತ್ತದೆ. ತಮ್ಮ ಮೊದಲ ರಿಸರ್ವೇಶನ್ಅನ್ನು ಸ್ವೀಕರಿಸುವ ಹೊಸ ಹೋಸ್ಟ್‌ಗಳು ನಾವು ನಿಮ್ಮ ಗುರುತನ್ನು ಪರಿಶೀಲಿಸಿ ದೃಢೀಕರಿಸುವಾಗ ಹಣಪಾವತಿಯಲ್ಲಿ ವಿಳಂಬವನ್ನು ಅನುಭವಿಸಬಹುದು.
ನೀವು ಹಣಪಾವತಿಗಳಿಗೆ ಕನಿಷ್ಠ ಮೊತ್ತವನ್ನು ನಿಗದಿಪಡಿಸಿದಲ್ಲಿ, ನಿಮ್ಮ ಗಳಿಕೆಗಳು ಅದನ್ನು ತಲುಪುವವರೆಗೆ ನಾವು ನಿಮ್ಮ ಹಣವನ್ನು ಬಿಡುಗಡೆ ಮಾಡುವುದಿಲ್ಲ. ಒಂದೇ ದಿನದಲ್ಲಿ ಚೆಕ್-ಇನ್ ಇರುವ ಅನೇಕ ಲಿಸ್ಟಿಂಗ್‌ಗಳನ್ನು ನೀವು ಹೊಂದಿದ್ದರೆ, ನಾವು ಸಾಮಾನ್ಯವಾಗಿ ನಿಮ್ಮ ಹಣವನ್ನು ಒಂದೇ ಹಣಪಾವತಿಯಾಗಿ ಕಳುಹಿಸುತ್ತೇವೆ.
ನಾವು ನಿಮಗೆ ಹಣವನ್ನು ಕಳುಹಿಸಿದಾಗಲೆಲ್ಲಾ, ಆ ಹಣಪಾವತಿಗಾಗಿ ಲೈನ್ ಐಟಂ ನಿಮ್ಮ ವಹಿವಾಟು ಹಿನ್ನೆಲೆಯಲ್ಲಿ ಮುಂಬರುವ ಹಣಪಾವತಿಗಳಿಂದ ಪೂರ್ಣಗೊಂಡ ಹಣಪಾವತಿಗಳಿಗೆ ಚಲಿಸುತ್ತದೆ. ಅವು ಹೊಂದಿಕೆಯಾಗುತ್ತವೆಯೇ ಎಂದು ಖಚಿತಪಡಿಸಿಕೊಳ್ಳಲು ನೀವು ಈ ಇತಿಹಾಸವನ್ನು ನಿಮ್ಮ ಬ್ಯಾಂಕ್ ಖಾತೆ ಸ್ಟೇಟ್‍ಮೆಂಟ್‌ಗೆ ಹೋಲಿಸಬಹುದು.
ದೀರ್ಘಾವಧಿಯ ವಾಸ್ತವ್ಯಗಳಿಗಾಗಿ ಹಣಪಾವತಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ
ವಿಶೇಷ ಆಕರ್ಷಣೆಗಳು
ಗೆಸ್ಟ್ 28ಕ್ಕಿಂತ ಹೆಚ್ಚು ರಾತ್ರಿಗಳ ವಾಸ್ತವ್ಯ ಹೂಡಿದಾಗ, ನಿಮಗೆ ಕಂತುಗಳಲ್ಲಿ ಹಣ ನೀಡಲಾಗುತ್ತದೆ.
ಇದು ಕಡಿಮೆ ಅವಧಿಯ ರಿಸರ್ವೇಶನ್‍ಗಳ ಹಣಪಾವತಿ ವೇಳಾಪಟ್ಟಿಯಿಂದ ಭಿನ್ನವಾಗಿದೆ