ಕೆನ್ಯಾದ ಸೂಪರ್‌ಹೋಸ್ಟ್ ಒಬ್ಬರು ಹೋಸ್ಟಿಂಗ್ ಮಾಡುವಾಗ ಅಂತರ್ಗತತೆಯನ್ನು ಹೇಗೆ ಪ್ರಚಾರ ಮಾಡುತ್ತಾರೆ
ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ, ಮತ್ತು ಈ ವರ್ಷದ ವಿಷಯವೆಂದರೆ #ChooseToChallenge, ಅಸಮಾನತೆಯನ್ನು ನಿವಾರಿಸಲು ಮತ್ತು ಎಲ್ಲರನ್ನೂ ಒಳಗೊಳ್ಳುವ ಜಗತ್ತಿನ ರಚನೆಗಾಗಿ ಕೆಲಸ ಮಾಡುವುದಕ್ಕೆ ಬದ್ಧರಾಗಲು ನಮ್ಮೆಲ್ಲರನ್ನು ಪ್ರೋತ್ಸಾಹಿಸುವುದು.
ಯುಎಸ್ ಮತ್ತು ಕೆನಡಾದಲ್ಲಿ, ಕಪ್ಪು ಇತಿಹಾಸ ತಿಂಗಳನ್ನು ಫೆಬ್ರವರಿಯಲ್ಲಿ ಮತ್ತು ಮಹಿಳಾ ಇತಿಹಾಸ ತಿಂಗಳನ್ನು ಮಾರ್ಚ್‌ನಲ್ಲಿ ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಐತಿಹಾಸಿಕವಾಗಿ ಅಸಮಾನತೆ ಮತ್ತು ತಾರತಮ್ಯವನ್ನು ಅನುಭವಿಸಿದ ಗುಂಪುಗಳನ್ನು ಗೌರವಿಸಲು ವರ್ಷದ ಮೊದಲ ತಿಂಗಳುಗಳಲ್ಲಿ ಅನೇಕ ಅವಕಾಶಗಳಿವೆ.
ಆದರೆ Airbnb ಯಲ್ಲಿ, ಮಹಿಳೆಯರ ಇತಿಹಾಸ ಮತ್ತು ಕಪ್ಪು ಇತಿಹಾಸವನ್ನು ಗೌರವಿಸುವುದು ಕೇವಲ ಒಂದು ತಿಂಗಳ ಅವಧಿಗೆ ಸೀಮಿತವಾಗಿಲ್ಲ. ಜಾಗತಿಕ ಇತಿಹಾಸವಾಗಿರುವ ಮಹಿಳಾ ಇತಿಹಾಸ ಮತ್ತು ಕಪ್ಪು ಇತಿಹಾಸವನ್ನು ಪ್ರತಿದಿನ ಆಚರಿಸುವುದು ಮುಖ್ಯವೆಂದು ನಾವು ಭಾವಿಸುತ್ತೇವೆ. ಆ ನಿಟ್ಟಿನಲ್ಲಿ, ಪ್ರಪಂಚದಾದ್ಯಂತದ ಜನರನ್ನು ಹೋಸ್ಟ್ ಮಾಡಿದ ಅನುಭವದ ಬಗ್ಗೆ ನಾವು ಕೀನ್ಯಾದ ನೈರೋಬಿ ಮೂಲದ ಕಪ್ಪು ಸೂಪರ್‌ಹೋಸ್ಟ್ ಬಳಿ ಮಾತನಾಡಿದ್ದೇವೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಅವರ ಸಲಹೆಗಳನ್ನು ಪಡೆದುಕೊಂಡಿದ್ದೇವೆ.
ಕೀನ್ಯಾದ ನೈರೋಬಿಯ ಸೂಪರ್‌ಹೋಸ್ಟ್ ಜೂಲಿಯೆಟ್ ಅವರು ಪ್ರಯಾಣಿಸುವಾಗ ನಾಲ್ಕು ವಿಭಿನ್ನ ವಿಮಾನ ನಿಲ್ದಾಣಗಳಲ್ಲಿ ತಾರತಮ್ಯವನ್ನು ಅನುಭವಿಸಿರುವುದಾಗಿ ಹಂಚಿಕೊಂಡಿದ್ದಾರೆ. "ಎಲ್ಲಾ ಅಗತ್ಯ ಪ್ರಯಾಣದ ದಾಖಲೆಗಳನ್ನು ಹೊಂದಿದ್ದರೂ ಸಹ, ನನ್ನನ್ನು ಪ್ರತ್ಯೇಕವಾಗಿರಿಸಲಾಗಿತ್ತು ಮತ್ತು ತಪಾಸಣೆಗೆ ಒಳಪಡಿಸಲಾಗಿತ್ತು" ಎಂದು ಅವರು ಹೇಳುತ್ತಾರೆ. "ಈ ಅನುಭವಗಳು ನನ್ನನ್ನು ಮುನ್ನುಗ್ಗುವಂತೆ ಮಾಡಿವೆ ಮತ್ತು ನನ್ನ ವಿಭಿನ್ನ ಸಾಂಸ್ಕೃತಿಕ ಪಯಣದಲ್ಲಿ ನಾನು ಸಹಾನುಭೂತಿ, ಸೌಹಾರ್ದತೆ, ಪರಾನುಭೂತಿ ತೋರಿಸುವುದನ್ನು ಖಚಿತಪಡಿಸುತ್ತವೆ."
ಪ್ರಯಾಣಿಸುವಾಗ ಕಪ್ಪು ಸಮುದಾಯವು ಐತಿಹಾಸಿಕವಾಗಿ ತಾರತಮ್ಯವನ್ನು ಎದುರಿಸಿದೆ, ಆದರೆ ಅದೇ ಸಮುದಾಯವು ಆ ಸವಾಲುಗಳನ್ನು ಪರಿಹರಿಸಲು ಮತ್ತು ಪ್ರಯಾಣವನ್ನು ಹೆಚ್ಚು ಸುರಕ್ಷಿತ ಮತ್ತು ಸ್ವಾಗತಾರ್ಹವನ್ನಾಗಿಸಲು ಸಹಾಯ ಮಾಡುವುದಕ್ಕೆ ಒಗ್ಗೂಡಿದೆ. Airbnb ಯಲ್ಲಿ, ಪ್ರಯಾಣ ಮತ್ತು ಅದರ ಮೂಲಕ ಮಾಡುವ ಸಂಪರ್ಕಗಳು ಪಕ್ಷಪಾತವನ್ನು ನಿವಾರಿಸಲು ಮತ್ತು ಪೂರ್ವಾಗ್ರಹಗಳನ್ನು ಮುರಿಯಲು ಕೆಲವು ಅತ್ಯುತ್ತಮ ವಿಧಾನಗಳನ್ನು ನೀಡುತ್ತವೆ ಎಂದು ನಾವು ಬಹಳ ಸಮಯದಿಂದ ಭಾವಿಸಿದ್ದೇವೆ ಮತ್ತು ಈ ಅಡೆತಡೆಗಳನ್ನು ಒಂದೊಂದಾಗಿ ಭೇದಿಸಲು ಸಹಾಯ ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ.ಹೋಸ್ಟ್‌ನ ಪ್ರಯಾಣ
ಜ್ಯೂಲಿಯೆಟ್ ಕೆನ್ಯಾದ ಹೋಸ್ಟ್ ಗುಂಪಿನ ಹೋಸ್ಟ್ ಸಮುದಾಯ ನಾಯಕಿ , ಅಂದರೆ ಅವರು ಗುಂಪನ್ನು ಸ್ವಯಂಸೇವಕಿಯಾಗಿ ಮುನ್ನಡೆಸುತ್ತಾರೆ ಮಾತ್ರವಲ್ಲದೆ ತನ್ನ ಜೊತೆಗಾರ ಹೋಸ್ಟ್‌ಗಳ ಭೇಟಿ ಏರ್ಪಡಿಸುತ್ತಾರೆ. ಅವರು ಹೋಸ್ಟ್ ಆಗುವ ಮೊದಲು, 20 ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಪೊರೇಟ್ ಸ್ಟ್ರಾಟಜಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 2014 ರಲ್ಲಿ ವಯೋಪೂರ್ವ ನಿವೃತ್ತಿ ಪಡೆದ ನಂತರ, ಅವರು ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ಗೆ ಪ್ರಯಾಣಿಸಿದರು ಮತ್ತು ಅಲ್ಲಿ Airbnb ಮೂಲಕ ಮನೆಯೊಂದನ್ನು ಬುಕ್ ಮಾಡಿದರು. ಆ ಅನುಭವದ ನಂತರ, ಅವರು ಹೋಸ್ಟ್ ಮಾಡುವ ಸಾಧ್ಯತೆಗಳ ಬಗ್ಗೆ ಉತ್ಸುಕರಾಗಿದ್ದರು.
"ನಾನು ತಕ್ಷಣ ಮನೆಗೆ ಹೋದೆ, ನನ್ನ ಮನೆಯನ್ನು ನವೀಕರಿಸಿದೆ ಮತ್ತು Airbnb ಯಲ್ಲಿ ನನ್ನ ಮನೆಯನ್ನು ಪಟ್ಟಿ ಮಾಡಲು ನಿರ್ಧರಿಸಿದೆ" ಎಂದು ಜ್ಯೂಲಿಯೆಟ್ ನಮಗೆ ಹೇಳುತ್ತಾರೆ. ಆದರೆ ಅವರು ಜನವರಿ 2015 ರಲ್ಲಿ ತಮ್ಮ ಲಿಸ್ಟಿಂಗ್ ಅನ್ನು ಅಧಿಕೃತವಾಗಿ ಪ್ರಕಟಿಸುವ ಮೊದಲು, ದೃಢ ನಿರ್ಧಾರ ಹೊಂದಿರಲಿಲ್ಲ. "ನಾನು ಹಲವು ಬಾರಿ ನನ್ನ ಮನಸ್ಸನ್ನು ಬದಲಾಯಿಸಿದೆ... ಆದರೆ ಹೋಸ್ಟ್ ರಾಯಭಾರಿಯಾಗಿರುವ ಪಮೇಲಾ, ಅದನ್ನು ಪ್ರಯತ್ನಿಸಿ ನೋಡಲು ನನಗೆ ಮನವರಿಕೆ ಮಾಡಿಕೊಟ್ಟರು."
ಈಗ ಲಭ್ಯವಿರುವ ಹೋಸ್ಟ್ ಭೇಟಿಗಳು ಮತ್ತು ಸಾಮಾಜಿಕ ಮಾಧ್ಯಮ ಗುಂಪುಗಳಂತಹ, ಶೈಕ್ಷಣಿಕ ಸಂಪನ್ಮೂಲಗಳು ಹೋಸ್ಟ್ ಮಾಡುವುದನ್ನು ಇನ್ನೂ ಸುಲಭಗೊಳಿಸಿವೆಎಂದು ಜ್ಯೂಲಿಯೆಟ್ ಹೇಳುತ್ತಾರೆ. ಹಿಂದೆಲ್ಲ, ಅವರು ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲು ಮತ್ತು ಪ್ರಕ್ರಿಯೆಗೆ ಮಾರ್ಗದರ್ಶನ ಪಡೆಯಲು ಪಮೆಲ್ಲಾ ಅವರಂತಹ ಸಹವರ್ತಿ ಹೋಸ್ಟ್‌ಗಳ ಜೊತೆ ನೇರ ಸಂಪರ್ಕ ರೂಪಿಸಿಕೊಳ್ಳುವುದನ್ನು ಅವಲಂಬಿಸಿದ್ದರು.ಕುಟುಂಬದಲ್ಲಿರುವ ಎಲ್ಲರೂ
Airbnb ಯಲ್ಲಿ ಜೂಲಿಯೆಟ್ ತನ್ನ ಕುಟುಂಬದ ಮನೆಯನ್ನು ಲಿಸ್ಟ್ ಮಾಡುತ್ತಾರೆ. "ನಾನು ನನ್ನ ಮಕ್ಕಳನ್ನು ಅದೇ ಮನೆಯಲ್ಲಿ ಬೆಳೆಸಿದೆ" ಎಂದು ಅವರು ಹೇಳುತ್ತಾರೆ. “ಆ ಮನೆಯ ಪ್ರತಿಯೊಂದು ಅನನ್ಯ ಭಾಗ ನನಗೆ ತಿಳಿದಿದೆ, ಅಲ್ಲಿ ಅದು ಬೆಚ್ಚಗಿರುತ್ತದೆ ಮತ್ತು ಸ್ವಲ್ಪ ತಂಪಾಗಿರುತ್ತದೆ.” ಈಗ, ಅವರು ತಮ್ಮ ಸ್ಥಳಕ್ಕೆ ಹೊಸ ಪೀಳಿಗೆಯ ಕುಟುಂಬಗಳನ್ನು ಸಂತೋಷದಿಂದ ಸ್ವಾಗತಿಸುತ್ತಾರೆ.
"ನವಜಾತ ಶಿಶುಗಳು ಮತ್ತು ಶಿಶುಗಳನ್ನು ಹೊಂದಿರುವ ಕುಟುಂಬಗಳನ್ನು ಮನೆಗೆ ಸ್ವಾಗತಿಸಲು ನಾನು ವಿಶೇಷವಾಗಿ ಹೆಮ್ಮೆಪಡುತ್ತೇನೆ" ಎಂದು ಜ್ಯೂಲಿಯೆಟ್ ಹೇಳುತ್ತಾರೆ. ಅದರ ಜೊತೆಗೆ, ಅವರು ತಮ್ಮ 20 ವರ್ಷದ ಮಗನಿಗೆ ಉದ್ಯಮಶೀಲತೆಯ ಬಗ್ಗೆ ತಮ್ಮ ಸಹ-ಹೋಸ್ಟ್ ಆಗಿ ಪಾಲುದಾರಿಕೆ ನೀಡುವ ಮೂಲಕ ಕಲಿಸುತ್ತಿದ್ದಾರೆ.ಒಳಗೊಳ್ಳುವಿಕೆ ನಿಮ್ಮ ಹೋಸ್ಟಿಂಗ್ ಶೈಲಿಯೊಂದಿಗೆ ಪ್ರಾರಂಭವಾಗುತ್ತದೆ
ಜೂಲಿಯೆಟ್ ಅವರು ಕಳೆದ ಹಲವು ವರ್ಷಗಳಲ್ಲಿ ಹೋಸ್ಟಿಂಗ್ ಬಗ್ಗೆ ಒಂದೆರಡು ವಿಷಯಗಳನ್ನು ಕಲಿತರು ಮತ್ತು ಅವರು ಗೆಸ್ಟ್‌ಗಳನ್ನು ಸ್ವಾಗತಿಸುವುದರ ನಡುವೆ ಶಿಕ್ಷಿತರಾಗುವ ತಮ್ಮ ಉದ್ದೇಶದ ಮೇಲೆ ಗಮನ ಕೇಂದ್ರೀಕರಿಸಲು ಸದಾ ಪ್ರಯತ್ನಿಸುತ್ತಾರೆ. ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಅವರ ಪ್ರಮುಖ ಸಲಹೆಗಳು ಇಲ್ಲಿವೆ
- ಹೋಸ್ಟ್ ಗುಂಪಿಗೆಿಸೇರಿ. "ನೀವಾಗಿಯೇ ಅಲ್ಲಿಗೆ ಹೋಗಬೇಡಿ," ಎಂದು ಜೂಲಿಯೆಟ್ ಹೇಳುತ್ತಾರೆ. "ನಿಮ್ಮ ಪ್ರಯಾಣದಲ್ಲಿ ನಿಮಗೆ ಮಾರ್ಗದರ್ಶನ ಒದಗಿಸಲು, ಸಲಹೆಯನ್ನು ನೀಡಲು ಮತ್ತು ನಿಮ್ಮ ಹಿಂಜರಿಕೆಗಳನ್ನು ಮೀರಿ ನಿಮ್ಮನ್ನು ಮುನ್ನಡೆಸಲು ಸಹಾಯ ಮಾಡಲು ನಿಮ್ಮ ಸ್ಥಾನದಲ್ಲಿದ್ದ ಹೋಸ್ಟ್‌ಗಳ ನೆಟ್‌ವರ್ಕ್ ಇದೆ. ಬಹಳ ಹಿಂದಿನ ಸಮಯಕ್ಕೆ ಹೋಲಿಸಿದಾಗ ಈಗ ಹೋಸ್ಟ್ ಮಾಡುವುದು ತುಂಬಾ ಸುಲಭ."
- ನಿಮ್ಮ ಸಂಶೋಧನೆ ಮಾಡಿ. "ನಿಮಗೆ ಲಭ್ಯವಿರುವಸಂಪನ್ಮೂಲಗಳನ್ನು ಬಳಸಿ," ಎಂದು ಜೂಲಿಯೆಟ್ ಹೇಳುತ್ತಾರೆ. "Airbnb ನಿಮಗಾಗಿ ಈ ಮಾಹಿತಿಯನ್ನು ಒದಗಿಸುತ್ತದೆ, ಆದರೆ ಸಾಕಷ್ಟು ಇತರ ಸಂಪನ್ಮೂಲಗಳು ಸಹ ಲಭ್ಯವಿವೆ. ಹಿಂದೆಂದಿಗಿಂತಲೂ ಈಗ ಬಹಳಷ್ಟು ಲಭ್ಯವಿದೆ."
- ನಿಮ್ಮ ಹೋಸ್ಟಿಂಗ್ ಶೈಲಿಯನ್ನು ಅಭಿವೃದ್ಧಿಪಡಿಸಿ. ನೀವು ಹೋಸ್ಟ್ ಮಾಡಲು ಪ್ರಾರಂಭಿಸಿದಾಗ, ನೀವು ಎತ್ತ ಮುನ್ನಡೆಯುತ್ತಿದ್ದೀರಿ ಎಂಬ ಅರಿವಿರಲಿ. "Airbnb ಯಲ್ಲಿ ನೀವು ಏನನ್ನು ಸಾಧಿಸಲು ಬಯಸುತ್ತೀರಿ ಎಂಬುದರ ಸ್ಪಷ್ಟತೆ ನಿಮಗಿರಲಿ," ಎಂದು ಜೂಲಿಯೆಟ್ ಸಲಹೆ ನೀಡುತ್ತಾರೆ. "ನೀವು ಗೆಸ್ಟ್ ಆಗಿದ್ದರೆ ನಿಮ್ಮನ್ನು ಹೇಗೆ ನೋಡಿಕೊಳ್ಳಬೇಕೆಂದು ನೀವು ಬಯಸುತ್ತೀರಿ? ನಿಮ್ಮ ಪರಿಣತಿಯ ವಿಷಯ ಯಾವುದು? ನೀವು ವಿಭಿನ್ನವಾಗಿ ಏನನ್ನು ಮಾಡಬಲ್ಲಿರಿ? ಗೆಸ್ಟ್‌ಗಳು ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕೆಂದು ನೀವು ಬಯಸುತ್ತೀರಿ? ಯೋಜನೆಯನ್ನು ರಚಿಸಿ."
- ನಿಮ್ಮ ಸಮುದಾಯಕ್ಕೆ ಮರಳಿ ನೀಡಿ. ನೀವು ಇತರರಿಗೆ ಸಹಾಯ ಮಾಡುತ್ತಿದ್ದರೆ, ನೀವು ಒಳಗೊಳ್ಳುವ ಮತ್ತು ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚು. "ನೀವು ನಿಮ್ಮನ್ನು ಹೋಸ್ಟ್ ಆಗಿ ಸ್ಥಾಪಿಸಿದ ನಂತರ ಮತ್ತು ಪರಿಣತಿ ಸಾಧಿಸಿದ ನಂತರ, ಮರಳಿ ನೀಡಲು ಮತ್ತು ಇತರ ಹೋಸ್ಟ್‌ಗಳನ್ನು ಬೆಂಬಲಿಸಲುಮಾರ್ಗಗಳನ್ನು ಕಂಡುಕೊಳ್ಳಿ," ಎಂದು ಜೂಲಿಯೆಟ್ ಹೇಳುತ್ತಾರೆ. "ನಾನು ಇದೀಗ ಹೋಸ್ಟ್ ಮಾಡಲು ಮಹಿಳೆಯರನ್ನು ಬೆಂಬಲಿಸುತ್ತಿದ್ದೇನೆ."
- ಸುರಕ್ಷತೆಗೆ ಆದ್ಯತೆ ನೀಡಿ. "ನಾನು ಕರಿಯ ವರ್ಣೀಯ ಮಹಿಳೆಯಾಗಿ ಸುರಕ್ಷಿತ ಭಾವನೆ ಹೊಂದುವುದು ನನಗೆ ಬಹಳ ಮುಖ್ಯ," ಎಂದು ಜೂಲಿಯೆಟ್ ಹೇಳುತ್ತಾರೆ. "ನಿಮ್ಮ ಗೆಸ್ಟ್‌ನೊಂದಿಗೆ ವಿಶ್ವಾಸವನ್ನು ಬೆಳೆಸಿಕೊಳ್ಳಿ, ಅವರನ್ನು ಸುರಕ್ಷಿತವಾಗಿಸುವ ನಿಮ್ಮ ಸಾಮರ್ಥ್ಯಕ್ಕೆ ಅದು ನಿರ್ಣಾಯಕವಾಗಿದೆ." ತಮ್ಮ ಪ್ರದೇಶದಲ್ಲಿ ಸಾರಿಗೆ ವ್ಯವಸ್ಥೆ ಪಡೆಯಲು ತಮ್ಮ ಗೆಸ್ಟ್‌ಗಳಿಗೆ ಜೂಲಿಯೆಟ್ ಸಹಾಯ ಮಾಡುತ್ತಾರೆ. "ಹೊಸ ಸ್ಥಳದಲ್ಲಿ ಏಕಾಂಗಿಯಾಗಿ ಅಥವಾ ಇತರರೊಂದಿಗೆ ಪ್ರಯಾಣಿಸುವುದು ಭಯ ಉಂಟುಮಾಡಬಹುದು ಎಂದು ನನಗೆ ತಿಳಿದಿದೆ," ಎಂದು ಅವರು ಹೇಳುತ್ತಾರೆ. "ಸಾಧ್ಯವಾದಷ್ಟು ಸುರಕ್ಷಿತ ಅನುಭವಕ್ಕಾಗಿ ನಾನು ನಗರ, ನನ್ನ ಮನೆ ಮತ್ತು ಗೆಸ್ಟ್‌ಗಳ ಬಗ್ಗೆ ನನ್ನ ಜ್ಞಾನವನ್ನು ಬಳಸುತ್ತೇನೆ."
ಪ್ರತಿಯೊಬ್ಬರದ್ದೂ ಆಗಿರುವ ಸ್ಥಳ
ಪ್ರಪಂಚದಾದ್ಯಂತದ ಗೆಸ್ಟ್‌ಗಳನ್ನು ನಿಯಮಿತವಾಗಿ ಸ್ವಾಗತಿಸುವ ಬ್ಲ್ಯಾಕ್ ಹೋಸ್ಟ್ ಆಗಿ, ಒಳಗೊಳ್ಳುವ ಮತ್ತು ಆತ್ಮೀಯತೆಯ ಭಾವನೆಯನ್ನು ಬೆಳೆಸಿಕೊಳ್ಳುವುದು ಎಷ್ಟು ಮುಖ್ಯ ಎಂದು ಜ್ಯೂಲಿಯೆಟ್‌ಗೆ ತಿಳಿದಿದೆ. ಅವರು ಹೋಸ್ಟ್ ಮಾಡಲು ಪ್ರಾರಂಭಿಸಿದ ಕಳೆದ ಆರು ವರ್ಷಗಳಲ್ಲಿ, ತನ್ನ ಗೆಸ್ಟ್‌ಗಳಿಗೆ ತಾವಿಲ್ಲಿ ಸ್ವಾಗತಾರ್ಹರು ಎಂದು ಅನ್ನಿಸುವಂತೆ ಮಾಡುವುದು ಹೇಗೆ ಎಂಬ ಬಗ್ಗೆ ಸಾಕಷ್ಟು ಕಲಿತಿದ್ದಾರೆ. ಅವರ ಉನ್ನತ ಹೋಸ್ಟಿಂಗ್ ಸಲಹೆಗಳು ಇಲ್ಲಿವೆ:
- ನಿಮ್ಮ ಲಿಸ್ಟಿಂಗ್ ಮೂಲಕ ನಿಮ್ಮ ಕಥೆಯನ್ನುಹೇಳಿ. ನಿಮ್ಮನ್ನು ಮತ್ತು ನಿಮ್ಮ ಲಿಸ್ಟಿಂಗ್ ಅನ್ನು ಯಾವುದು ಅನನ್ಯವಾಗಿಸುತ್ತದೆಯೆಂದು ಗುರುತಿಸಿ, ಮತ್ತು ಅದನ್ನು ನಿಮ್ಮ ಹೋಸ್ಟ್ ಪ್ರೊಫೈಲ್ ಮತ್ತು ಲಿಸ್ಟಿಂಗ್‌ನಲ್ಲಿ ಹಂಚಿಕೊಳ್ಳಿ. "ನಿಮ್ಮನ್ನು ಮತ್ತು ನಿಮ್ಮ ಲಿಸ್ಟಿಂಗ್ ಅನ್ನು ವಿಶೇಷವಾಗಿಸುವ ಎಲ್ಲ ವಿವರಗಳನ್ನು ಸೇರಿಸಿ ಮತ್ತು ಅವರು ಏನನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ಸ್ಪಷ್ಟವಾಗಿರಿ" ಎಂದು ಜ್ಯೂಲಿಯೆಟ್ ಹೇಳುತ್ತಾರೆ. "ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಇದು ಮತ್ತೊಂದು ಮಾರ್ಗವಾಗಿದೆ."
- ತ್ವರಿತ ಬುಕಿಂಗ್ ಆನ್ ಮಾಡಿ. ತನ್ನ ಎಲ್ಲ ಗೆಸ್ಟ್‌ಗಳನ್ನು ಸಮಾನವಾಗಿ ಪರಿಗಣಿಸುವುದು ಜೂಲಿಯೆಟ್‌ಗೆ ಮುಖ್ಯವಾಗಿದೆ, ಇದು ತ್ವರಿತ ಬುಕಿಂಗ್ಆನ್ ಇರಿಸುವುದನ್ನು ಆಯ್ಕೆ ಮಾಡುವ ಮೂಲಕ ಪ್ರಾರಂಭವಾಗುತ್ತದೆ. ಬುಕಿಂಗ್ ಪೂರ್ಣಗೊಳ್ಳುವವರೆಗೆ ಹೋಸ್ಟ್‌ಗಳು ಪ್ರೊಫೈಲ್ ಫೋಟೋಗಳನ್ನು ಪ್ರವೇಶಿಸಲು ಸಾಧ್ಯವಾಗದಿದ್ದರೂ, ತಾರತಮ್ಯವು ಸಾಮಾನ್ಯವಾಗಿ ಗ್ರಹಿಕೆಯನ್ನು ಆಧರಿಸಿರುತ್ತದೆ—ಮತ್ತು ಜನರು ಮೊದಲ ಹೆಸರುಗಳಂತಹ ವಿಷಯಗಳಿಂದಲೂ ಮತ್ತೊಬ್ಬರ ಜನಾಂಗದ ಕುರಿತು ಗ್ರಹಿಕೆಗಳನ್ನು ರೂಢಿಸಿಕೊಳ್ಳಬಹುದು. ಬುಕಿಂಗ್ ಪ್ರಕ್ರಿಯೆಯಿಂದ ಆ ವ್ಯತ್ಯಾಸಗಳನ್ನು ತ್ವರಿತ ಬುಕಿಂಗ್ ತೆಗೆದುಹಾಕುತ್ತದೆ.
- ಮುಂಚಿತವಾಗಿ ಮತ್ತು ಆಗಾಗ ಸಂವಹನ ನಡೆಸಿ. "ನಾನು ಸಾಮಾನ್ಯವಾಗಿ ಗೆಸ್ಟ್‌ಗೆ ಏನು ಬೇಕು, ನಾನು ಏನನ್ನು ನಿರೀಕ್ಷಿಸಬಹುದು, ಅವರು ಯಾವ ಸಮಯಕ್ಕೆ ಬರುತ್ತಿದ್ದಾರೆ, ನಾನು ಅವರಿಗೆ ಏನು ಮಾಡಬಹುದು, ಮತ್ತು ಅವರ ಅನುಭವವನ್ನು ನಾನು ಹೇಗೆ ಉತ್ತಮಗೊಳಿಸಬಹುದು ಎಂದು ಕೇಳುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇನೆ" ಎಂದು ಜ್ಯೂಲಿಯೆಟ್ ಹೇಳುತ್ತಾರೆ. ಅವರ ಮನೆಯ ಕೈಪಿಡಿ ಅಂತರಗಳನ್ನು ತುಂಬುತ್ತದೆ. "ನನ್ನ ಜಾಗಕ್ಕೆ ತಲುಪಲು ಮತ್ತು ಅನಗತ್ಯ ಅಚ್ಚರಿಗಳನ್ನು ತಪ್ಪಿಸಲು ಅವರಿಗೆ ಸಹಾಯ ಮಾಡುವುದಕ್ಕೆ ನಾನು ಕೈಪಿಡಿಯನ್ನು ಸಹ ಒದಗಿಸುತ್ತೇನೆ. ಅತಿ-ಸಂವಹನ ನಡೆಸುವುದು ಸಾಕಷ್ಟು ಸಮಸ್ಯೆಗಳನ್ನು ತಡೆಯಬಹುದು."
- ವೈಯಕ್ತಿಕ ಸ್ವಾಗತ ಒದಗಿಸಿ. "ನಾನು ಪ್ರತಿಯೊಬ್ಬ ಗೆಸ್ಟ್‌ಅನ್ನು ವಿಶೇಷ ವ್ಯಕ್ತಿಯೆಂದು ಪರಿಗಣಿಸುತ್ತೇನೆ," ಎಂದು ಜ್ಯೂಲಿಯೆಟ್ ಹೇಳುತ್ತಾರೆ. "ನಾನು ಪ್ರತೀ ಗೆಸ್ಟ್‌ನ ಹೆಸರು ಟ್ಯಾಗ್‌ಗಳನ್ನು ಸೇರಿಸಿರುತ್ತೇನೆ ಮತ್ತು ಪ್ರತೀ ಗೆಸ್ಟ್‌ಗೆ ವೈಯಕ್ತೀಕರಿಸಿದ ಉಪಚಾರ ಒದಗಿಸುತ್ತೇನೆ. ನಾನು ಹತ್ತಿರದಲ್ಲಿಲ್ಲದಿರುವುದನ್ನು ಹೊರತುಪಡಿಸಿ, ನನ್ನ ಗೆಸ್ಟ್‌ಗಳನ್ನು ನಾನು ಖುದ್ದು ಹಾಜರಿದ್ದು ಸ್ವಾಗತಿಸುವುದನ್ನು ಖಚಿತಪಡಿಸಿಕೊಳ್ಳುತ್ತೇನೆ." ಎಲ್ಲ ಗೆಸ್ಟ್‌ಗಳಿಗೆ ಒಂದೇ ರೀತಿಯ ಸ್ವಾಗತೋಪಚಾರ ಒದಗಿಸುವುದು ಪಕ್ಷಪಾತವನ್ನು ಮಿತಿಗೊಳಿಸಲು, ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಮತ್ತು ಪ್ರತಿಯೊಬ್ಬರೂ ಆರಾಮದಾಯಕವಾಗುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಗೆಸ್ಟ್‌ಗಳ ಅಗತ್ಯಗಳಿಗೆ ಗಮನ ಕೊಡಿ. "ನಾನು ಎಲ್ಲ ಸಂಸ್ಕೃತಿಗಳು ಮತ್ತು ಹಿನ್ನೆಲೆಗಳ ಗೆಸ್ಟ್‌ಗಳನ್ನು ಹೋಸ್ಟ್ ಮಾಡುತ್ತೇನೆ ಮತ್ತು ಅವರೆಲ್ಲರೂ ವಿಭಿನ್ನ ಅಗತ್ಯಗಳು, ನಿರೀಕ್ಷೆಗಳು ಮತ್ತು ಅನುಭವಗಳನ್ನು ಹೊಂದಿರುತ್ತಾರೆ" ಎಂದು ಜ್ಯೂಲಿಯೆಟ್ ಹೇಳುತ್ತಾರೆ. "ಅವರು ಹೇಳುವ ಎಲ್ಲವನ್ನೂ ನಾನು ಆಲಿಸುತ್ತೇನೆ ಮತ್ತು ಏನಾದರೂ ಅಸ್ಪಷ್ಟವಾಗಿದ್ದರೆ, ಹೆಚ್ಚುವರಿ ಪ್ರಶ್ನೆಗಳನ್ನು ಕೇಳುತ್ತೇನೆ." ಉದಾಹರಣೆಗೆ, ಅವರು ಇತರ ದೇಶಗಳಲ್ಲಿ ವಾಸಿಸುವ ಮತ್ತು ತಾಯ್ನೆಲಕ್ಕೆ ಭೇಟಿ ನೀಡಲು ಮರಳಿರುವ ಕೀನ್ಯಾದ ಪ್ರಯಾಣಿಕರನ್ನು ಆಗಾಗ್ಗೆ ಹೋಸ್ಟ್ ಮಾಡುತ್ತಾರೆ. "ನೈರೋಬಿಯೊಂದಿಗೆ ಮರುಪರಿಚಿತರಾಗಲು ನಾನು ಅವರಿಗೆ ಆಗಾಗ್ಗೆ ಸಹಾಯ ಮಾಡುತ್ತೇನೆ" ಎಂದು ಅವರು ಹೇಳುತ್ತಾರೆ.
ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಇನ್ನಷ್ಟು ಸಂಪನ್ಮೂಲಗಳು
ಒಬ್ಬ ಹೋಸ್ಟ್ ಆಗಿ, ನಿಮ್ಮೊಳಗಿನ ಹುಟ್ಟು ಗುಣ ಪಕ್ಷಪಾತವನ್ನು ಎದುರಿಸುವುದು ಮತ್ತು ಕಿತ್ತುಹಾಕುವುದು ಎಷ್ಟು ಮುಖ್ಯ ಎಂದು ನಿಮಗೆ ತಿಳಿದಿದೆ, ಆದ್ದರಿಂದ ನಿಮ್ಮ ಎಲ್ಲ ಗೆಸ್ಟ್‌ಗಳಿಗೆ ಅವರು ಯಾರೆಂಬುದನ್ನು ಲೆಕ್ಕಿಸದೆ, ಅವರು ಎಲ್ಲಿಂದ ಬರುತ್ತಾರೆ ಅಥವಾ ಅವರು ಹೇಗೆ ಕಾಣುತ್ತಾರೆ ಎಂಬುದನ್ನು ಲೆಕ್ಕಿಸದೆ ಒಂದೇ ರೀತಿಯ ಆತಿಥ್ಯವನ್ನು ನೀಡುವುದನ್ನು ನೀವು ಮುಂದುವರಿಸಬಹುದು.
ಆದ್ದರಿಂದ ನಮ್ಮ ಸಮುದಾಯದಾದ್ಯಂತ ಕ್ರಿಯಾಶೀಲತೆ ಮತ್ತು ಮೈತ್ರಿ ಉತ್ತೇಜಿಸಲು ನಮ್ಮ ಮುಂದುವರಿದ ಪ್ರಯಾಣದಲ್ಲಿ ನಮಗೆ ನೆರವಾದ ಕೆಲವು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ.
- Airbnb ಯ Black@community ಸಕ್ರಿಯತೆ ಮತ್ತು ಮೈತ್ರಿ ಮಾರ್ಗದರ್ಶಿ
- ನ್ಯೂಯಾರ್ಕ್ ನಗರ, ಬೇ ಏರಿಯಾ, ಸಿಯಾಟಲ್ ,ಅಟ್ಲಾಂಟಾ ಮತ್ತು ಮಾಂಟ್ರಿಯಲ್ಗೆ ಬ್ಲ್ಯಾಕ್ ವೀಕೆಂಡರ್ಗಳ ಮಾರ್ಗದರ್ಶಿ
- ಜಿಮ್ ಕ್ರೌ ಯುಗದಲ್ಲಿ ಕಪ್ಪು ಬಣ್ಣದಲ್ಲಿ ಪ್ರಯಾಣಿಸುವುದು
- ರೇನಿ ಎಡ್ಡೋ-ಲಾಡ್ಜ್ನೊಂದಿಗೆ ವರ್ಗದ ಬಗ್ಗೆ (ಪಾಡ್ಕಾಸ್ಟ್)
- ದಿ ನೀಗ್ರೋ ಮೋಟಾರಿಸ್ಟ್ ಗ್ರೀನ್ ಬುಕ್ ಆ್ಯಂಡ್ ಬ್ಲ್ಯಾಕ್ ಅಮೆರಿಕಾಸ್ ಪರ್ಪೆಚುಯಲ್ ಸರ್ಚ್ ಫಾರ್ ಎ ಹೋಮ್
ಅಂತರ್ಗತತೆಯ ಬಗ್ಗೆ ಸಂಭಾಷಣೆಯನ್ನು ಮುಂದುವರಿಸಲು ನಾವು ಬಯಸುತ್ತೇವೆ, ಆದ್ದರಿಂದ ನಮ್ಮ ಸಮುದಾಯ ಕೇಂದ್ರದಲ್ಲಿ Airbnb ಯಲ್ಲಿ ಹೋಸ್ಟಿಂಗ್ ಮಾಡುವ ನಿಮ್ಮ ಸ್ವಂತ ಅನುಭವಗಳ ಬಗ್ಗೆ ಮತ್ತು ಪ್ರತಿಯೊಬ್ಬರೂ ಸೇರಿರುವ ಸ್ಥಳವನ್ನು ರಚಿಸಲು ನಿಮಗೆ ಹೆಚ್ಚು ಸಹಾಯ ಮಾಡಿದ ಸಂಪನ್ಮೂಲಗಳು ಮತ್ತು ಸುಳಿವುಗಳ ಬಗ್ಗೆ ನೀವು ಪೋಸ್ಟ್ ಮಾಡುತ್ತೀರಿ ಎಂದು ನಾವು ಭಾವಿಸುತ್ತೇವೆ.