ಮಾಸಿಕ ಗೆಸ್ಟ್‌ಗಳಿಗಾಗಿ ಹೋಸ್ಟ್‌ಗಳು ಅಪ್‌ಗ್ರೇಡ್‌ಗಳಿಂದ ಹೇಗೆ ಪ್ರಯೋಜನವನ್ನು ಪಡೆಯಬಹುದು
ವಿಶ್ವಾದ್ಯಂತ ಪ್ರಯಾಣಿಕರು ದೀರ್ಘಾವಧಿಯ ಟ್ರಿಪ್‌ಗಳಿಗಾಗಿ Airbnb ಅನ್ನು ಬಳಸುತ್ತಿದ್ದಾರೆ. ಬುಕ್ ಮಾಡಲಾದ ಪ್ರತಿ ಐದು ರಾತ್ರಿಗಳಲ್ಲಿ ಒಂದು, 28 ರಾತ್ರಿ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವಾಸದ ಭಾಗವಾಗಿದೆ.* ಹೊಚ್ಚ ಹೊಸ ವೈಶಿಷ್ಟ್ಯಗಳು ಗೆಸ್ಟ್‌ಗಳಿಗೆ ಮಾಸಿಕ ವಾಸ್ತವ್ಯಗಳನ್ನು ಹುಡುಕುವುದನ್ನು ಮತ್ತು ಬುಕ್ ಮಾಡುವುದನ್ನು ಸುಲಭಗೊಳಿಸುತ್ತವೆ.
ಹುಡುಕಾಟ ಮತ್ತು ಬುಕಿಂಗ್ ವೈಶಿಷ್ಟ್ಯಗಳು
Airbnb 2023 ಸಮ್ಮರ್ ರಿಲೀಸ್ಭಾಗವಾಗಿ ಘೋಷಿಸಲಾದ ಅಪ್‌ಗ್ರೇಡ್‌ಗಳು ಇವುಗಳನ್ನು ಒಳಗೊಂಡಿವೆ:
- ಸುಧಾರಿತ ಮಾಸಿಕ ಹುಡುಕಾಟ. ದೀರ್ಘಾವಧಿಯ ವಾಸ್ತವ್ಯಕ್ಕಾಗಿ ಲಭ್ಯವಿರುವ ಲಿಸ್ಟಿಂಗ್‌ಗಳನ್ನು ಹುಡುಕುವುದನ್ನು ಮಾಸಿಕ ಟ್ಯಾಬ್ ಸುಲಭಗೊಳಿಸುತ್ತದೆ. ಗೆಸ್ಟ್‌ಗಳು ತಮ್ಮ ಪ್ರಾರಂಭ ದಿನಾಂಕವನ್ನು ಎಡಿಟ್ ಮಾಡಬಹುದು, ನಂತರ ಒಂದ ರಿಂದ 12 ತಿಂಗಳವರೆಗಿನ ಡಯಲ್‌ನಲ್ಲಿ ತಮ್ಮ ಟ್ರಿಪ್‌ನ ಅವಧಿಯನ್ನು ಆಯ್ಕೆ ಮಾಡಬಹುದು.
- ಹುಡುಕಾಟದಲ್ಲಿ ಲಿಸ್ಟಿಂಗ್ ವಿಶೇಷ ಆಕರ್ಷಣೆಗಳು. ವೇಗದ ವೈಫೈ, ಮೀಸಲಾದ ವರ್ಕ್‌ಸ್ಪೇಸ್, EV ಚಾರ್ಜರ್ ಮತ್ತು ಮಕ್ಕಳ ಸ್ನೇಹಿ ವಸ್ತುಗಳು (ತೊಟ್ಟಿಲುಗಳು, ಎತ್ತರದ ಕುರ್ಚಿಗಳು, ಆಟಿಕೆಗಳು, ಇತ್ಯಾದಿ) ಇಂತಹ ಪ್ರಮುಖ ಸೌಲಭ್ಯಗಳು ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಲಿಸ್ಟಿಂಗ್ ಶೀರ್ಷಿಕೆಯ ಕೆಳಗೆ ಗೋಚರಿಸುತ್ತವೆ.
- ಕಡಿಮೆ ಸೇವಾ ಶುಲ್ಕಗಳು. ದೀರ್ಘಾವಧಿಯ ಟ್ರಿಪ್‌ಗಳನ್ನು ಬುಕ್ ಮಾಡುವ ಗೆಸ್ಟ್‌ಗಳಿಗೆ, ಅವರ ವಾಸ್ತವ್ಯದ ನಾಲ್ಕನೇ ತಿಂಗಳಿನಿಂದ ಪ್ರಾರಂಭವಾಗುವಂತೆ ನಾವು ಗೆಸ್ಟ್ ಸೇವಾ ಶುಲ್ಕವನ್ನು ಕಡಿಮೆ ಮಾಡುತ್ತಿದ್ದೇವೆ
- ಮಾಸಿಕ ಹಣಪಾವತಿ ವೇಳಾಪಟ್ಟಿ. ಗೆಸ್ಟ್‌ಗಳು ಬುಕ್ ಮಾಡಿದಾಗ ದೀರ್ಘಾವಧಿಯ ವಾಸ್ತವ್ಯದ ಮೊದಲ 30 ರಾತ್ರಿಗಳಿಗೆ ಪಾವತಿಸುತ್ತಾರೆ ಮತ್ತು ಉಳಿದ ಮೊತ್ತವನ್ನು ಮಾಸಿಕ ಕಂತುಗಳಲ್ಲಿ ಪಾವತಿಸುತ್ತಾರೆ. ಚೆಕ್-ಔಟ್ ಸಮಯದಲ್ಲಿ, ಅವರಿಗೆ ಕಂತು ದಿನಾಂಕಗಳು ಮತ್ತು ಪಾವತಿಸಬೇಕಾದ ಮೊತ್ತಗಳನ್ನು ತೋರಿಸುವ ವೇಳಾಪಟ್ಟಿ ಸಿಗುತ್ತದೆ, ಇದರಿಂದ ಅವರು ತಮ್ಮ ಪ್ರವಾಸ ವೆಚ್ಚಗಳನ್ನು ಯೋಜಿಸಬಹುದು.
- ಬ್ಯಾಂಕ್ ಮೂಲಕ ಪಾವತಿಸುವಾಗ ರಿಯಾಯಿತಿಗಳು. U.S. ನಿವಾಸಿಗಳು 28 ರಾತ್ರಿಗಳು ಅಥವಾ ಹೆಚ್ಚು ಅವಧಿಯ ಜಾಗತಿಕ ವಾಸ್ತವ್ಯಗಳಿಗೆ ತಮ್ಮ ಸಂಪರ್ಕಿತ U.S. ಬ್ಯಾಂಕ್ ಖಾತೆಯಿಂದ ಪಾವತಿಸಿದಾಗ ರಿಯಾಯಿತಿ ಪಡೆಯಬಹುದು. ಚೆಕ್-ಇನ್‌ಗೆ ಕನಿಷ್ಠ ಏಳು ದಿನಗಳ ಮೊದಲು ಬುಕಿಂಗ್ ಪೂರ್ಣಗೊಳಿಸಬೇಕು.
ಹೊಸ ವೈಶಿಷ್ಟ್ಯಗಳು ಹೋಸ್ಟ್ ಗಳಿಕೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಅಥವಾ ದೀರ್ಘಾವಧಿ ವಾಸ್ತವ್ಯಕ್ಕೆ ಹೊರ ಪಾವತಿಯ ವೇಳಾಪಟ್ಟಿಯನ್ನು ಬದಲಾಯಿಸುವುದಿಲ್ಲ.
ಲಿಸ್ಟಿಂಗ್ ಪುಟಗಳ ಮುಖ್ಯಾಂಶಗಳು
ಮಾಸಿಕ ರಿಯಾಯಿತಿ ಹೊಂದಿಸಿ ಮತ್ತು ಎಲ್ಲ ನವೀನ ಸೌಕರ್ಯಗಳೊಂದಿಗೆ ನಿಮ್ಮ ಲಿಸ್ಟಿಂಗ್ ಅನ್ನು ಅಪ್‌ಡೇಟ್ ಮಾಡುವ ಮೂಲಕ ನೀವು ಬುಕ್ ಮಾಡಲು ಗೆಸ್ಟ್‌ಗಳನ್ನು ಪ್ರೋತ್ಸಾಹಿಸಬಹುದು. ದೀರ್ಘಾವಧಿ ವಾಸ್ತವ್ಯಗಳಿಗೆ ಜನಪ್ರಿಯವಾಗಿರುವ ಸೌಲಭ್ಯಗಳು ಸ್ವಯಂಚಾಲಿತವಾಗಿ ಲಿಸ್ಟಿಂಗ್ ಪುಟಗಳ ಮೇಲೆ ವಿಶೇಷ ಆಕರ್ಷಣೆ ಆಗಿರುತ್ತವೆ.
ಉದಾಹರಣೆಗೆ, ಸಾನ್ ಫ್ರಾನ್ಸಿಸ್ಕೊ ಬೇ ಪ್ರದೇಶದಲ್ಲಿ ಮೂರು ತಿಂಗಳ ವಾಸ್ತವ್ಯಕ್ಕಾಗಿ ಹುಡುಕುತ್ತಿರುವ ಗೆಸ್ಟ್ ಈ ಮಾಹಿತಿಯನ್ನು ಮುಖ್ಯವಾಗಿ ಪ್ರದರ್ಶಿಸುತ್ತಿರುವ ಲಿಸ್ಟಿಂಗ್ ಒಂದನ್ನು ಕಾಣಬಹುದು:
- ತಿಂಗಳಿಗೊಮ್ಮೆ ಪಾವತಿಸಿ. ನೀವು ಮಾಸಿಕ ಕಂತುಗಳಲ್ಲಿ ಪಾವತಿಸುತ್ತೀರಿ.
- ದೂರಸ್ಥ ಕೆಲಸಕ್ಕೆ ಉತ್ತಮ. 350 Mbps ವೇಗದ ವೈಫೈ, ಜೊತೆಗೆ ಮೀಸಲಾದ ಕಾರ್ಯಸ್ಥಳ.
- ದಿನನಿತ್ಯದ ಜೀವನಕ್ಕಾಗಿ ಸೌಲಭ್ಯಗಳು. ಹೋಸ್ಟ್ ಈ ಸ್ಥಳವನ್ನು ದೀರ್ಘ ವಾಸ್ತವ್ಯಗಳಿಗಾಗಿ ಸಜ್ಜುಗೊಳಿಸಿದ್ದಾರೆ—ಇದರಲ್ಲಿ ಕಿಚನ್, ವಾಷರ್, ಡ್ರೈಯರ್ ಮತ್ತು ಉಚಿತ ಪಾರ್ಕಿಂಗ್ ಸೇರಿವೆ.
ನೀವು ದೀರ್ಘಾವಧಿ ವಾಸ್ತವ್ಯಗಳಿಗೆ ಹೆಚ್ಚು ಬೆಂಬಲವನ್ನು ಬಯಸುತ್ತಿರುವ ಹೊಸ ಹೋಸ್ಟ್ ಆಗಿದ್ದರೆ, ಇಲ್ಲಿ ಒತ್ತಿ ಮತ್ತು ಸಹಾಯಕ್ಕಾಗಿ ನಿಮಗೆ ಸೂಪರ್‌ಹೋಸ್ಟ್ ರಾಯಭಾರಿಯನ್ನು ನಾವು ಹೊಂದಿಸುತ್ತೇವೆ.
*ಆಂತರಿಕ Airbnb ಜಾಗತಿಕ ಡೇಟಾದ ಪ್ರಕಾರ, 2022 ರಲ್ಲಿ ಬುಕ್ ಮಾಡಲಾದ 21% ರಾತ್ರಿಗಳು ಮತ್ತು 2023 ರ ಮೊದಲ ಮೂರು ತಿಂಗಳುಗಳಲ್ಲಿ ಬುಕ್ ಮಾಡಲಾದ 18% ರಾತ್ರಿಗಳು 28 ದಿನಗಳ ಅಥವಾ ಅದಕ್ಕಿಂತ ಹೆಚ್ಚು ವಾಸ್ತವ್ಯದವಾಗಿದ್ದವು.
ಪ್ರಕಟಣೆಯ ನಂತರ ಈ ಲೇಖನದಲ್ಲಿ ಇರುವ ಮಾಹಿತಿಯು ಬದಲಾಗಿರಬಹುದು.