ಸೂಪರ್‌ಹೋಸ್ಟ್ ಹೇಗೆ ಅನುಭವಿ ಹೋಸ್ಟ್ ಆದರು
ಲಾಸ್ ಏಂಜಲೀಸ್ ಮೂಲದ ಸೂಪರ್‌ಹೋಸ್ಟ್ ಬರ್ಟ್ ಬ್ಲ್ಯಾಕರಾಚ್ ಯಾವಾಗಲೂ ಉತ್ತಮ ಅವಕಾಶಗಳನ್ನು ಗುರುತಿಸುವಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಸಂಗೀತಗಾರರು ಮತ್ತು ಗಾಯಕರ ಕುಟುಂಬದಲ್ಲಿ ಬೆಳೆದ ಅವರು 14 ನೇ ವಯಸ್ಸಿನಲ್ಲಿ ತಮ್ಮ ಹೆತ್ತವರ ಸಂಗೀತ-ಪ್ರಕಾಶನ ಕಂಪನಿಯನ್ನು ನಿಭಾಯಿಸಲು ಪ್ರಾರಂಭಿಸಿದರು. ಅಂದಿನಿಂದ, ಬರ್ಟ್ ಅವರ ಸಂಗೀತ ವೃತ್ತಿಜೀವನವು ಗ್ರ್ಯಾಮಿ-ವಿಜೇತ ಆಲ್ಬಂಗೆ ಧ್ವನಿ ಎಂಜಿನಿಯರಿಂಗ್ ಒದಗಿಸುವುದರಿಂದ ಹಿಡಿದು ಹಿಟ್ HBO ಸರಣಿಗೆ ಸಂಗೀತ ಒದಗಿಸುವುದು ಹಾಗೂ ಸೂಪರ್ ಬೌಲ್ ಸಮಯದಲ್ಲಿ ಪ್ರಸಾರವಾದ ಜಾಹೀರಾತುಗಳಿಗೆ ಸಂಗೀತವನ್ನು ರಚಿಸುವವರೆಗೆ ವ್ಯಾಪಿಸಿದೆ. ತೀರಾ ಇತ್ತೀಚೆಗೆ Airbnb ಯಲ್ಲಿ ಸಂಗೀತ ಅನುಭವವನ್ನು ಅವರು ಹೋಸ್ಟ್ ಮಾಡಿದ್ದಾರೆ.
ಅವರು ಹೇಗೆ ಅನುಭವವನ್ನು ಹೋಸ್ಟ್ ಮಾಡಲು ಪ್ರಾರಂಭಿಸಿದರು, ಅದು ತಮ್ಮ ಹಿತ್ತಲಿನಲ್ಲಿದ್ದ ಕಾಟೇಜ್‌ಗೆ ಗೆಸ್ಟ್‌ಗಳನ್ನು ಸ್ವಾಗತಿಸುವ ರೀತಿಯ ಮೇಲೆ ಹೇಗೆ ಪ್ರಭಾವ ಬೀರಿದೆ ಮತ್ತು ಈ ಹಾದಿಯಲ್ಲಿ ಅವರು ಏನು ಕಲಿತಿದ್ದಾರೆ ಎಂಬುದನ್ನು ಕಂಡುಕೊಳ್ಳಲು ನಾವು ಬರ್ಟ್ ಅವರೊಂದಿಗೆ ಕುಳಿತು ಚರ್ಚಿಸಿದೆವು. ಅವರು ಏನು ಹೇಳಿದರು ಎಂಬುದು ಇಲ್ಲಿದೆ.
ನಿಮ್ಮ ಅನುಭವದ ಬಗ್ಗೆ ನಮಗೆ ತಿಳಿಸಿ. ಯಾವುದು ಅದನ್ನು ಅನನ್ಯವನ್ನಾಗಿಸುತ್ತದೆ?
"ನನ್ನ ಅನುಭವವು ಒಂದು ದಿನದ ಮಟ್ಟಿಗೆ DJ ಆಗುವುದು ಆಗಿದೆ. ನನ್ನ ಸ್ಟುಡಿಯೊದಲ್ಲಿ ನಾನು ಸಣ್ಣ ಗುಂಪುಗಳ ಜನರನ್ನು ಹೋಸ್ಟ್ ಮಾಡುತ್ತೇನೆ ಮತ್ತು ರೆಕಾರ್ಡಿಂಗ್ ಮತ್ತು ಮಿಕ್ಸಿಂಗ್‌ನ ಮೂಲಭೂತ ಅಂಶಗಳನ್ನು ಅವರಿಗೆ ಕಲಿಸುತ್ತೇನೆ, ಸಂಗೀತವನ್ನು ಹೇಗೆ ಆರಿಸುವುದು, ಉತ್ತಮ ಬೀಟ್ ಒದಗಿಸಲು ಏನು ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಅವರಿಗೆ ಕಲಿಸುತ್ತೇನೆ. Airbnb ಯಲ್ಲಿ ಇದು ಈ ರೀತಿಯ ಮೊದಲ ಅನುಭವವಾಗಿತ್ತು ಮತ್ತು ಇದು ಬೇರೆ ಯಾರೂ ಯೋಚಿಸದ ಪಥವನ್ನು ತಲುಪಿತು."
ಅನುಭವವಾಗಿ DJ ಮಾಡುವುದರ ಮೇಲೆ ನೀವು ಗಮನಹರಿಸಲು ಕಾರಣವೇನು?
“ಬಹಳಷ್ಟು ಜನರು ಸುಲಭವಾಗಿ ಕಾಣಿಸುವುದರಿಂದ DJ ಕಲಿಯಲು ಬಯಸುತ್ತಾರೆ, ಆದರೆ ಅಲ್ಲಿ ಉಪಕರಣಗಳಿವೆ ಮತ್ತು ಸಂಗೀತವನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ಅವೆಲ್ಲವೂ ಜೊತೆಯಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಸಂಗೀತ ಚೆನ್ನಾಗಿ ಕೇಳಿಸಬೇಕೆಂದು ನೀವು ಬಯಸಿದರೆ ಅದು ತೊಡಗಿಸಿಕೊಳ್ಳಬಹುದು.
"ನಾನು ಎಂಟನೇ ತರಗತಿಯಲ್ಲಿದ್ದಾಗ ನನ್ನ ಸ್ನೇಹಿತರೊಂದಿಗೆ DJ ಮಾಡುವುದನ್ನು ಕಲಿಯಲು ಪ್ರಾರಂಭಿಸಿದೆ, ಇದು ನಿಜವಾಗಿಯೂ ನನ್ನ ಸಂಗೀತದ ವೃತ್ತಿಜೀವನದ ಆರಂಭವಾಗಿತ್ತು. ನಂತರ ಸಿದ್ಧಪಡಿಸುವಿಕೆ ಮತ್ತು ಸಂಯೋಜನೆ ಮತ್ತು ಎಲ್ಲವೂ ಬಂದವು—ನಾನು ಇದನ್ನು ಬಹಳ ದೀರ್ಘ ಸಮಯದಿಂದ ಮಾಡುತ್ತಿದ್ದೇನೆ. ಹಾಗಾಗಿ ನನ್ನ ಅನುಭವಕ್ಕಾಗಿ ಸೈನ್ ಅಪ್ ಮಾಡುವ ಜನರು ಮೂರು ಗಂಟೆಗಳ ತಜ್ಞ ಮಾರ್ಗದರ್ಶನವನ್ನು ಪಡೆಯುತ್ತಿದ್ದಾರೆ, ಆದರೆ ಇದು ವಿನೋದಮಯವಾಗಿದೆ ಮತ್ತು ಅವರು ಹೆದರಿಕೊಳ್ಳಬೇಕಾಗಿಲ್ಲ. ಅವರು ನಿಜವಾಗಿಯೂ ಅದರಿಂದ ಬಹಳಷ್ಟನ್ನು ಪಡೆಯಬಹುದು.”
ಅನುಭವಗಳೊಂದಿಗೆ ನಿಮ್ಮ ಪ್ರಯಾಣ ಹೇಗೆ ಪ್ರಾರಂಭವಾಯಿತು?
“Airbnb ಯಲ್ಲಿ ನಿಮ್ಮ ಕೆಲಸವನ್ನು ಮಾಡುವುದು ನಿಜವಾಗಿಯೂ ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುವಂತಿದೆ. ಆದರೆ ಸಾಮಾನ್ಯವಾಗಿ ನೀವು ವ್ಯವಹಾರವನ್ನು ಪ್ರಾರಂಭಿಸಿದಾಗ, ನೀವು ವ್ಯವಹಾರ ಪರವಾನಗಿ ಅಥವಾ ಸಾಲವನ್ನು ಪಡೆಯಬೇಕು, ಸ್ವಲ್ಪ ಬಂಡವಾಳವನ್ನು ಹೊಂದಿರಬೇಕು ಮತ್ತು ಅದು ಬಹಳಷ್ಟು ಜನರಿಗೆ ಕಷ್ವವಾಗಬಹುದು. ಆದರೆ Airbnb ಯಲ್ಲಿ ನೀವು ಒಂದು ವಿಶಿಷ್ಟ ಆಲೋಚನೆ ಮತ್ತು $10 USD ಜೊತೆಗೆ ಫ್ರಾರಂಬಿಸಬಹುದು.
“Airbnb ಅನುಭವಗಳನ್ನು ಮಾಡುತ್ತಿದೆ ಎಂದು ನನಗೆ ತಿಳಿಯಿತು ಮತ್ತು ಅದು ಅದ್ಭುತ ಎಂದೆನಿಸಿತು. ನಾನು Airbnb ಯ ದೊಡ್ಡ ಅಭಿಮಾನಿ ಹಾಗಾಗಿ ಅವರು ಮಾಡುವ ಯಾವುದರಲ್ಲಾದರೂ ನಾನು 1,000% ತೊಡಗಿಸಿಕೊಳ್ಳುತ್ತೇನೆ. ಸಂಗೀತವು ನನ್ನ ಪರಿಣಿತಿಯಾಗಿರುವುದರಿಂದ, ನನ್ನ ಸಂಗೀತದ ಹಿನ್ನೆಲೆಯನ್ನು ಬಳಸಿಕೊಂಡು ಏನನ್ನಾದರೂ ರಚಿಸಲು ನಾನು ಬಯಸಿದ್ದೆ. ನನ್ನ ವಿಚಾರವನ್ನು ಸಲ್ಲಿಸಿದೆ ಮತ್ತು Airbnb ಯ ಸಿಬ್ಬಂದಿ ಜೊತೆ ಮಾತುಕತೆಗೆ ನನ್ನನ್ನು ಆಹ್ವಾನಿಸಲಾಯಿತು ಮತ್ತು ನನ್ನ ಅನುಭವವನ್ನು ರಚಿಸಲು ಅವರು ನನಗೆ ಸಹಾಯ ಮಾಡಿದರು.
“ಮೊದಲಿಗೆ, ಅನುಭವಗಳಿಗೆ ನಾವು ಎರಡು ಅಂಶಗಳನ್ನು ಹೊಂದಿದ್ದೆವು. ಮಿಕ್ಸಿಂಗ್ ಮಾಡುವುದು ಹೇಗೆ ಎಂಬುದನ್ನು ಸ್ಟುಡಿಯೊದಲ್ಲಿ ಕಲಿಯಲು ನಾವು ಸಮಯ ಕಳೆಯುತ್ತಿದ್ದೆವು ಮತ್ತು ನಂತರ ಧ್ವನಿಗಳಿಗಾಗಿ ಶಾಪಿಂಗ್ ಮಾಡಲು ಸಮೀಪದ ರೆಕಾರ್ಡ್ ಸ್ಟೋರ್‌ಗೆ ಹೋಗುತ್ತಿದ್ದೆವು. ಆದರೆ ಇದನ್ನು ನಾನು ಕೇವಲ ಸ್ಟುಡಿಯೋ ಭಾಗಕ್ಕೆ ಪರಿಷ್ಕರಿಸಿದ್ದೇನೆ, ಏಕೆಂದರೆ ಜನರು ಇದಕ್ಕಾಗಿಯೇ ಬರುತ್ತಾರೆ ಮತ್ತು ಅದರಿಂದ ಒಂದಿಷ್ಟು ಸಾಗಾಟದ ಸಮಸ್ಯೆ ಬಗೆಹರಿಯುತ್ತದೆ. ಲಿಸ್ಟಿಂಗ್ ಅನ್ನು ನಿರ್ವಹಿಸುವ ರೀತಿಯಲ್ಲೇ, ಯಾವುದು ಸೂಕ್ತವಾಗುತ್ತದೆ ಎಂದು ಕಂಡುಕೊಳ್ಳಲು ಭಿನ್ನ ಸಂಗತಿಗಳನ್ನು ಪ್ರಯತ್ನಿಸಿ ನೋಡಲು ನೀವು ಬಯಸಬಹುದು.”
ನೀವು ಸೂಪರ್‌ಹೋಸ್ಟ್ ಕೂಡ ಆಗಿದ್ದೀರಿ. ಅದು ನಿಮ್ಮ ಅನುಭವಗಳ ಹೋಸ್ಟಿಂಗ್ ಮೇಲೆ ಹೇಗೆ ಪ್ರಭಾವ ಬೀರಿದೆ?
“ನಮ್ಮ ಲಿಸ್ಟಿಂಗ್‌ನಲ್ಲಿ ಗೆಸ್ಟ್‌ಗಳನ್ನು ಹೋಸ್ಟ್ ಮಾಡುವುದರಿಂದ ನಾನು ಸಾಕಷ್ಟು ಕಲಿತೆ. ನಾವು L.A. ಯ ಕೇಂದ್ರಭಾಗದಲ್ಲಿದ್ದು, ಇಲ್ಲಿ ಯಾವುದೇ ಸಂಚಾರದಟ್ಟಣೆಯಿಲ್ಲ ಮತ್ತು ಎಲ್ಲವೂ 15 ನಿಮಿಷಗಳ ದೂರದಲ್ಲಿದೆ, ಹಾಗಾಗಿ ನಾನು ಲಿಸ್ಟಿಂಗ್ ಮಾಡಿಬಿಟ್ಟರೆ ಅದು ಸ್ವತಃ ಬುಕ್ಕಿಂಗ್ ಆಗುತ್ತದೆ ಎಂದು ನಾನು ಯೋಚಿಸಿದೆ. ಆದರೆ ನನ್ನ ಪತ್ನಿ ಯಾವಾಗಲೂ ತುಸು ಹೆಚ್ಚು ಪರಿಶ್ರಮಪಡುತ್ತಿದ್ದಳು, ಕಾಟೇಜ್ ಸ್ವಚ್ಛವಾಗಿದೆ ಮತ್ತು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ, ಅಲ್ಲಿ ಹಿತಕರ ಸೌಲಭ್ಯಗಳಿವೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದಳು.
“ಒಟ್ಟಾರೆಯಾಗಿ, ಜನರೊಂದಿಗೆ ಕೆಟ್ಟದಾಗಿ ವ್ಯವಹರಿಸದೆ ಮತ್ತು ಅವರನ್ನು ಚೆನ್ನಾಗಿ ಉಪಚರಿಸಲಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ವಿಧಾನವನ್ನು ಅನುಸರಿಸುವ ಮೂಲಕ ನಮ್ಮ ಲಿಸ್ಟಿಂಗ್‌ನೊಂದಿಗೆ ನಾವು ಯಶಸ್ಸನ್ನು ಕಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಸೂಪರ್‌ಹೋಸ್ಟ್ ಮಟ್ಟಕ್ಕೆ ತಲುಪಲು ಅದು ಹೇಗೆ ಕಾರ್ಯನಿರ್ವಹಿಸಿತು ಎಂಬುದನ್ನು ಗಮನಿಸಿ, ಅನುಭವಿ ಹೋಸ್ಟ್ ಆಗುವತ್ತ ನಾನು ಅದೇ ವಿಷಯವನ್ನು ಅನ್ವಯಿಸಿದೆ.”
ಅನುಭವಿ ಹೋಸ್ಟ್ ಆಗುವುದರ ಉತ್ತಮ ಭಾಗ ಯಾವುದು?
“ಇದು ನಿಜಕ್ಕೂ ನನ್ನ ಸಂಗೀತದ ವೃತ್ತಿಬದುಕಿಗೆ ಹೊಸ ಜೀವ ಮತ್ತು ಶಕ್ತಿಯನ್ನು ತುಂಬಿದೆ. ನನ್ನ ಸೃಜನಶೀಲತೆಯನ್ನು ಪ್ರದರ್ಶಿಸಲು ಇದು ನನಗೆ ಅವಕಾಶವನ್ನು ಕಲ್ಪಿಸುತ್ತದೆ. ಕಲಾವಿದನಾಗಿ, ಸೃಜನಶೀಲ ಹೊರಹರಿವು ಇಲ್ಲದಿದ್ದರೆ ನೀವು ಹತಾಶೆಗೆ ಒಳಗಾಗುತ್ತೀರಿ. ಮತ್ತು ಇದು ಒಂದಿಷ್ಟು ನುಡಿಸಲು ಮತ್ತು ನನ್ನ ಕೌಶಲ್ಯಗಳನ್ನು ಜನರೊಂದಿಗೆ ಹಂಚಿಕೊಳ್ಳಲು ನನಗೆ ಅವಕಾಶ ಕಲ್ಪಿಸುತ್ತದೆ. ಜೊತೆಗೆ ಇದು ನನ್ನ ಸಂಗೀತಕ್ಕೆ ಸಾಕಷ್ಟು ಹೊಸ ತಾಣಗಳನ್ನು ಕೂಡ ತೆರೆದಿದೆ ಮತ್ತು ನಾನು ಸಾಕಷ್ಟು ಹೊಸ ಪ್ರಾಜೆಕ್ಟ್‌ಗಳನ್ನು ಪಡೆದಿದ್ದೇನೆ. DJing ಅವರನ್ನು ಒಳಗೊಂಡ ಕಾರ್ಪೊರೇಟ್ ಈವೆಂಟ್‌ಗಳನ್ನು ಕೂಡ ನಾನು ಆರಂಭಿಸುತ್ತಿದ್ದೇನೆ.”
ಅನುಭವವನ್ನು ರಚಿಸುವ ಕುರಿತು ಯೋಚಿಸುವ ಇತರ ಹೋಸ್ಟ್‌ಗಳಿಗೆ ಯಾವುದಾದರೂ ಸಲಹೆ ಇದೆಯೇ?
"ಮೊದಲನೆಯದಾಗಿ, ನಿಮ್ಮ ಕ್ಷೇತ್ರದಲ್ಲಿ ನೀವು ಜ್ಞಾನವನ್ನು ಹೊಂದಿರಬೇಕು. ನೀವು ಐಸ್‌ಕ್ರೀಮ್ ತಯಾರಕರಾಗಿದ್ದರೆ, ಐಸ್‌ಕ್ರೀಮ್ ತಯಾರಿಸುವ ಬಗ್ಗೆ ಯಾವುದೇ ಪ್ರಶ್ನೆಗೆ ನೀವು ಉತ್ತರಿಸಬೇಕಾಗುತ್ತದೆ. ಮತ್ತು ಲಿಸ್ಟಿಂಗ್‌ನಂತೆಯೇ, ನಿಜವಾಗಿಯೂ ಯಾವುದು ಉತ್ತಮವಾಗುತ್ತದೆ ಎಂಬುದನ್ನು ಕಂಡುಹಿಡಿಯಲು ವಿಭಿನ್ನ ಅಂಶಗಳೊಂದಿಗೆ ಪ್ರಯೋಗ ನಡೆಸಲು ಸಿದ್ಧರಾಗಿರಬೇಕು. ಆದರೆ ಲಿಸ್ಟಿಂಗ್‌ಗಿಂತ ಭಿನ್ನವಾಗಿ, ನೀವು ಬೆಲೆ ಮತ್ತು ಇತರ ವಿಷಯಗಳನ್ನು ಬದಲಿಸುವಾಗ, ನೀವು ಅನುಭವಕ್ಕೆ ಸಂಬಂಧಿಸಿದಂತೆ ದೃಢವಾದ ಬೆಲೆಯನ್ನು ಹೊಂದಿಸಲು ಪ್ರಯತ್ನಿಸಬೇಕು. ಇದು ಮೌಲ್ಯವನ್ನು ಪ್ರತಿನಿಧಿಸುವ ಅಗತ್ಯವಿರುವುದರಿಂದ ಅದರ ಬೆಲೆಯನ್ನು ಸ್ವಲ್ಪ ಹೆಚ್ಚಾಗಿಯೇ ಹೊಂದಿಸುವ ಮೂಲಕ ಅದು ಮೌಲ್ಯಯುತವಾಗಿರುವ ಜೊತೆಗೆ ಜನರ ಕೈಗೆಟಕುವ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಿ. ಅವರು ಏನಾದರೂ ವಿಶೇಷವಾದುದನ್ನು ಪಡೆಯುತ್ತಿದ್ದಾರೆ ಎಂದು ಅವರು ಭಾವಿಸಬೇಕಿದೆ. ಮತ್ತು ಅವರು ಏನಾದರೂ ಉಡುಗೊರೆಯೊಂದಿಗೆ ತೆರಳುತ್ತಾರೆಂಬುದನ್ನು ಖಚಿತಪಡಿಸಿಕೊಳ್ಳಿ. ನನ್ನ ಗೆಸ್ಟ್‌ಗಳು ನನ್ನ ಸಂಗ್ರಹದಿಂದ ಕೆಲವು ರೆಕಾರ್ಡ್‌ಗಳನ್ನು ಆರಿಸುವ ಅವಕಾಶ ಹೊಂದಿರುತ್ತಾರೆ, ಆದ್ದರಿಂದ ಅವರು ಅನುಭವದಿಂದ ಏನನ್ನಾದರೂ ಪಡೆದುಕೊಂಡು ಮರಳಬಹುದು."
ಪ್ರಕಟಣೆಯ ನಂತರ ಈ ಲೇಖನದಲ್ಲಿರುವ ಮಾಹಿತಿಯು ಬದಲಾಗಿರಬಹುದು.