ಸಂದೇಶಗಳ ಟ್ಯಾಬ್‌ನಿಂದ ಹೆಚ್ಚಿನ ಪ್ರಯೋಜನ ಪಡೆಯುವುದು

ಸಂದೇಶಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಹುಡುಕಲು, ಕಳುಹಿಸಲು ಮತ್ತು ನಿಗದಿಪಡಿಸಲು ಈ ಸಲಹೆಗಳನ್ನು ಪ್ರಯತ್ನಿಸಿ.
Airbnb ಅವರಿಂದ ಮೇ 1, 2024ರಂದು
3 ನಿಮಿಷ ಓದಲು
ಫೆಬ್ರ 3, 2025 ನವೀಕರಿಸಲಾಗಿದೆ

ಸಂದೇಶಗಳ ಟ್ಯಾಬ್ ನಿಮ್ಮ Airbnb ಇನ್‌ಬಾಕ್ಸ್ ಆಗಿದೆ. ಇದು ನಿಮ್ಮ ಎಲ್ಲಾ ಹೋಸ್ಟಿಂಗ್, ಪ್ರಯಾಣ ಮತ್ತು ಬೆಂಬಲ ಸಂದೇಶಗಳನ್ನು ಒಂದೇ ಸ್ಥಳದಲ್ಲಿ ಇರಿಸುತ್ತದೆ. ಸಂದೇಶಗಳ ಟ್ಯಾಬ್‌ನಲ್ಲಿನ ವೈಶಿಷ್ಟ್ಯಗಳು ನಿಮಗೆ ಈ ಕೆಳಗಿನಂತೆ ಸಹಾಯ ಮಾಡುತ್ತವೆ:

  • ಸಂದೇಶಗಳನ್ನು ಫಿಲ್ಟರ್ ಮಾಡಬಹುದು ಮತ್ತು ನಿಮ್ಮ ಇನ್‌ಬಾಕ್ಸ್‌ನಾದ್ಯಂತ ಹುಡುಕಬಹುದು.
  • ತ್ವರಿತ ಪ್ರತ್ಯುತ್ತರಗಳು ಎಂದು ಕರೆಯಲ್ಪಡುವ ಪೂರ್ವ-ಲಿಖಿತ ಟೆಂ‌ಪ್ಲೇಟ್‌ಗಳನ್ನು ಒಳಗೊಂಡಂತೆ ಸಂದೇಶಗಳನ್ನು ಕಳುಹಿಸಬಹುದು ಮತ್ತು ನಿಗದಿಪಡಿಸಬಹುದು.
  • ಒಂದೇ ಸಂಭಾಷಣೆಯಲ್ಲಿ ರಿಸರ್ವೇಶನ್‌ನಲ್ಲಿರುವ ಪ್ರತಿಯೊಬ್ಬ ಗೆಸ್ಟ್‌ನೊಂದಿಗೆ ಸಂವಹನ ನಡೆಸಬಹುದು.
  • ಸಂಭಾಷಣೆಗಳನ್ನು ಆಯೋಜಿತವಾಗಿರಿಸಲು ಥ್ರೆಡ್ಡೆಡ್ ರಿಪ್ಲೈಗಳನ್ನು ಪ್ರಾರಂಭಿಸಬಹುದು.
  • ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡಬಹುದು ಮತ್ತು ಹಿಂಪಡೆಯಬಹುದು.
  • ಗೆಸ್ಟ್‌ಗಳು ನಿಮ್ಮ ಸಂದೇಶಗಳನ್ನು ಯಾವಾಗ ವೀಕ್ಷಿಸುತ್ತಾರೆ ಎಂಬುದನ್ನು ನೋಡಲು ಓದಿದ ಸ್ವೀಕೃತಿಗಳನ್ನು ಬಳಸಬಹುದು.
  • ಎಮೋಜಿ ಬಳಸಿ ಸಂದೇಶಗಳಿಗೆ ಪ್ರತಿಕ್ರಿಯಿಸಬಹುದು.

ಸಂದೇಶಗಳನ್ನು ಫಿಲ್ಟರ್ ಮಾಡುವುದು ಮತ್ತು ಹುಡುಕುವುದು

ಡೀಫಾಲ್ಟ್ ವೀಕ್ಷಣೆಯು Airbnb ಯಲ್ಲಿರುವ ನಿಮ್ಮ ಎಲ್ಲಾ ಸಂದೇಶಗಳನ್ನು ತೋರಿಸುತ್ತದೆ. ಸಂದೇಶಗಳನ್ನು ಅವುಗಳ ಪ್ರಕಾರದ ಮೂಲಕ ಫಿಲ್ಟರ್ ಮಾಡಲು ಹೋಸ್ಟಿಂಗ್, ಪ್ರಯಾಣ, ಅಥವಾ ಬೆಂಬಲ ಆಯ್ಕೆಮಾಡಿ.

ಹೋಸ್ಟಿಂಗ್ ಒಳಗಡೆ, ಈ ಹೆಚ್ಚುವರಿ ಫಿಲ್ಟರ್‌ಗಳನ್ನು ನೀವು ಅನ್ವಯಿಸಬಹುದು:

  • ಓದದೇ ಇರುವುದು ತೆರೆಯದ ಸಂದೇಶಗಳನ್ನು ಮಾತ್ರ ಪ್ರದರ್ಶಿಸುತ್ತದೆ.
  • ಟ್ರಿಪ್ ಹಂತವು ರಿಸರ್ವೇಶನ್ ವಿನಂತಿಗಳು, ಮುಂಬರುವ ರಿಸರ್ವೇಶನ್‌ಗಳು, ಪ್ರಸ್ತುತ ಹೋಸ್ಟಿಂಗ್ ಅಥವಾ ಹಿಂದಿನ ರಿಸರ್ವೇಶನ್‌ಗಳ ಪ್ರಕಾರ ಸಂದೇಶಗಳನ್ನು ವಿಂಗಡಿಸುತ್ತದೆ.
  • ಲಿಸ್ಟಿಂಗ್‌ಗಳು‌ ಎಂಬುದು ನೀವು ಒಂದಕ್ಕಿಂತ ಹೆಚ್ಚು ಸಂದೇಶಗಳನ್ನು ಹೊಂದಿದ್ದರೆ ಲಿಸ್ಟಿಂಗ್‌ಗಳ ಪ್ರಕಾರ ಸಂದೇಶಗಳನ್ನು ವಿಂಗಡಿಸುತ್ತದೆ.
  • ಸ್ಟಾರ್‌ ಹೊಂದಿದ ಎಂಬುದು ನೀವು ಸ್ಟಾರ್‌ನೊಂದಿಗೆ ಗುರುತು ಮಾಡಿರುವ ಸಂದೇಶಗಳನ್ನು ಮಾತ್ರ ತೋರಿಸುತ್ತದೆ.

ನೀವು ಸಹ-ಹೋಸ್ಟ್ ಅನ್ನು ಹೊಂದಿದ್ದರೆ, ಸೂಪರ್‌ಹೋಸ್ಟ್ ರಾಯಭಾರಿಯಾಗಿದ್ದರೆ ಅಥವಾ Airbnb ಅನುಭವವನ್ನು ಹೋಸ್ಟ್ ಮಾಡುತ್ತಿದ್ದರೆ, ನೀವು ಈ ಫಿಲ್ಟರ್‌ಗಳನ್ನು ಸಂದೇಶಗಳ ಟ್ಯಾಬ್‌ನಲ್ಲಿ ಕಾಣಬಹುದು:

  • ಸಹ-ಹೋಸ್ಟ್‌ ಎಂಬುದು ಲಿಸ್ಟಿಂಗ್‌ನಲ್ಲಿರುವ ನಿಮ್ಮ ಮತ್ತು ಯಾವುದೇ ಸಹ-ಹೋಸ್ಟ್‌ಗಳ ನಡುವಿನ ಸಂಭಾಷಣೆಗಳನ್ನು ತೋರಿಸುತ್ತದೆ.
  • ಸೂಪರ್‌ಹೋಸ್ಟ್ ರಾಯಭಾರಿ ಎಂಬುದು ನೀವು ಮತ್ತು ನಿಮ್ಮೊಂದಿಗೆ ಮ್ಯಾಚ್‌ ಮಾಡಲಾದ ಹೋಸ್ಟ್‌ಗಳ ನಡುವಿನ ಸಂದೇಶಗಳನ್ನು ಪ್ರದರ್ಶಿಸುತ್ತದೆ.
  • ಅನುಭವಗಳು ಆ ಬುಕಿಂಗ್‌ಗಳಿಗೆ ಸಂಬಂಧಿಸಿದ ಸಂದೇಶಗಳನ್ನು ಓದಲು ನಿಮಗೆ ಅನುವು ಮಾಡಿಕೊಡುತ್ತದೆ.

ಗೆಸ್ಟ್ ಆಗಿ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಸಂದೇಶಗಳನ್ನು ವೀಕ್ಷಿಸಲು ಪ್ರಯಾಣ ಫಿಲ್ಟರ್ ಅನ್ವಯಿಸಿ. Airbnb ಬೆಂಬಲದೊಂದಿಗಿನ ನಿಮ್ಮ ಸಂಭಾಷಣೆಗಳನ್ನು ನೋಡಲು ಬೆಂಬಲ ಫಿಲ್ಟರ್ ಬಳಸಿ.

ನಿರ್ದಿಷ್ಟ ಸಂಭಾಷಣೆಯನ್ನು ಹುಡುಕುತ್ತಿರುವಿರಾ? ನೀವು ಹೆಸರುಗಳು, ಪದಗಳು ಅಥವಾ ಪದಗುಚ್ಛಗಳ ಮೂಲಕ ಸಂದೇಶಗಳನ್ನು ಹುಡುಕಬಹುದು. ಫಲಿತಾಂಶಗಳು ನೀವು ಅನ್ವಯಿಸಿದ ಯಾವುದೇ ಫಿಲ್ಟರ್‌ಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ, ಸಂಭಾಷಣೆಗಳನ್ನು ವೇಗವಾಗಿ ಹುಡುಕಲು ನಿಮಗೆ ಸಹಾಯ ಮಾಡುತ್ತದೆ.

ತ್ವರಿತ ಪ್ರತ್ಯುತ್ತರಗಳನ್ನು ಕಳುಹಿಸುವುದು ಮತ್ತು ನಿಗದಿಪಡಿಸುವುದು

ಸ್ಪಷ್ಟ, ಸಮಯೋಚಿತ ಸಂವಹನವು ಯಶಸ್ವಿ ಹೋಸ್ಟಿಂಗ್‌ನ ಪ್ರಮುಖ ಭಾಗವಾಗಿದೆ. ಸಂದೇಶಗಳ ಟ್ಯಾಬ್‌ನಲ್ಲಿ ಸಂಭಾಷಣೆಗಳನ್ನು ಪ್ರಾರಂಭಿಸಿ, ಮಾಹಿತಿಯನ್ನು ಒದಗಿಸಿ ಮತ್ತು ಗೆಸ್ಟ್‌ಗಳ ಪ್ರಶ್ನೆಗಳಿಗೆ ಉತ್ತರಿಸಿ.

ಸಮಯವನ್ನು ಉಳಿಸಲು, ತ್ವರಿತ ಪ್ರತ್ಯುತ್ತರಗಳ ವೈಶಿಷ್ಟ್ಯವನ್ನು ಬಳಸಲು ಪ್ರಯತ್ನಿಸಿ. ತ್ವರಿತ ಪ್ರತ್ಯುತ್ತರಗಳು ವಾಡಿಕೆಯ ಮಾಹಿತಿಯನ್ನು ಹಂಚಿಕೊಳ್ಳಲು ಸಂದೇಶ ಟೆಂಪ್ಲೇಟ್‌ಗಳಾಗಿವೆ, ಆದ್ದರಿಂದ ನೀವು ಪ್ರಾರಂಭದಿಂದ ವಿವರಗಳನ್ನು ನೀಡಬೇಕಿಲ್ಲ. ಬುಕಿಂಗ್ ಮಾಡಿದ ತಕ್ಷಣದಂತಹ ಪ್ರಮುಖ ಕ್ಷಣಗಳಲ್ಲಿ ಗೆಸ್ಟ್‌ಗಳಿಗೆ ಸಹಾಯ ಮಾಡಲು ನೀವು ಸಂದೇಶಗಳ ಟ್ಯಾಬ್‌ನಲ್ಲಿ ಕೆಲವು ಪೂರ್ವ-ಲಿಖಿತ ತ್ವರಿತ ಪ್ರತ್ಯುತ್ತರಗಳನ್ನು ಕಾಣುತ್ತೀರಿ. ನೀವು ಈ ತ್ವರಿತ ಪ್ರತ್ಯುತ್ತರಗಳನ್ನು ಹಾಗೆಯೇ ಬಳಸಬಹುದು, ಅವುಗಳನ್ನು ಎಡಿಟ್‌ ಮಾಡಬಹುದು ಅಥವಾ ನಿಮ್ಮ ಸ್ವಂತ ಕಸ್ಟಮ್ ಟೆಂಪ್ಲೇಟ್‌ಗಳನ್ನು ರಚಿಸಬಹುದು.

ಸಂದೇಶಗಳ ಟ್ಯಾಬ್ ಗೆಸ್ಟ್‌ಗಳ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತದೆ ಮತ್ತು ಉತ್ತರವಾಗಿ ತ್ವರಿತ ಪ್ರತ್ಯುತ್ತರವನ್ನು ಸ್ವಯಂಚಾಲಿತವಾಗಿ ಸೂಚಿಸುತ್ತದೆ. ಸೂಚಿಸಿದ ಪ್ರತ್ಯುತ್ತರವು ಗೆಸ್ಟ್‌ನೊಂದಿಗಿನ ನಿಮ್ಮ ಸಂಭಾಷಣೆಯಲ್ಲಿ ಕಾಣಿಸುತ್ತದೆ, ಅಲ್ಲಿ ನೀವು ಮಾತ್ರ ಅದನ್ನು ನೋಡಬಹುದು.

ನೀವು ಸೂಚಿಸಿದ ತ್ವರಿತ ಪ್ರತ್ಯುತ್ತರವನ್ನು ತಕ್ಷಣವೇ ಪರಿಶೀಲಿಸಬಹುದು, ಎಡಿಟ್ ಮಾಡಬಹುದು ಮತ್ತು ಕಳುಹಿಸಬಹುದು ಅಥವಾ ನಂತರ ಕಳುಹಿಸಲು ಅದನ್ನು ನಿಗದಿಪಡಿಸಬಹುದು. ಸಂದೇಶವನ್ನು ಕಳುಹಿಸುವಾಗ, ಟೆಂಪ್ಲೇಟ್‌ಗಳಲ್ಲಿನ ಪ್ಲೇಸ್‌ಹೋಲ್ಡರ್‌ಗಳು ಸ್ಥಳ, ಗೆಸ್ಟ್‌ಗಳ ಹೆಸರು ಮತ್ತು ಚೆಕ್-ಇನ್ ಸಮಯದಂತಹ ಕೆಲವು ಬುಕಿಂಗ್ ಮತ್ತು ಲಿಸ್ಟಿಂಗ್ ವಿವರಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡುತ್ತವೆ. ನಿಮ್ಮ ಲಿಸ್ಟಿಂಗ್ ಪೂರ್ಣಗೊಂಡಿದೆ ಮತ್ತು ಅಪ್‌ ಟು ಡೇಟ್‌ ಆಗಿದೆ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ, ಖಾಲಿ ಪ್ಲೇಸ್‌ಹೋಲ್ಡರ್‌ಗಳನ್ನು ಹೊಂದಿರುವ ಸಂದೇಶಗಳು ಸರಿಯಾಗಿ ಕಳುಹಿಸಲ್ಪಡುವುದಿಲ್ಲ.

ನೀವು ನಿಗದಿಪಡಿಸಿದ ಸಂದೇಶದ ಸಮಯ ಹತ್ತಿರ ಬರುತ್ತಿದ್ದರೆ, ಗೆಸ್ಟ್‌ನೊಂದಿಗಿನ ನಿಮ್ಮ ಸಂಭಾಷಣೆಯಲ್ಲಿ ನೀವು ಜ್ಞಾಪನೆಯನ್ನು ನೋಡುತ್ತೀರಿ. ನೀವು ಈಗಾಗಲೇ ಹಂಚಿಕೊಂಡಿರುವ ಮಾಹಿತಿಯನ್ನು ಸಂದೇಶವು ಪುನರಾವರ್ತಿಸಿದರೆ ಅದನ್ನು ಸರಿಹೊಂದಿಸಿ ಅಥವಾ ಕಳುಹಿಸದಿರಿ.

ಸಮಯ ಉಳಿಸಲು ತ್ವರಿತ ಪ್ರತ್ಯುತ್ತರಗಳನ್ನು ಬಳಸುವ ಬಗ್ಗೆ ಇನ್ನಷ್ಟು ತಿಳಿಯಿರಿ

ಗುಂಪಿನೊಂದಿಗೆ ಸಂವಹನ ನಡೆಸುವುದು

ಪ್ರತಿ ಬುಕಿಂಗ್ ಸಂದೇಶಗಳ ಟ್ಯಾಬ್‌ನಲ್ಲಿ ಹೊಸ ಸಂಭಾಷಣೆಯನ್ನು ಪ್ರಾರಂಭಿಸುತ್ತದೆ.

ಬುಕ್‌ ಮಾಡಿದ ಗೆಸ್ಟ್ ತಮ್ಮೊಂದಿಗೆ ಪ್ರಯಾಣಿಸುವ ಇತರ ವಯಸ್ಕರನ್ನು ರಿಸರ್ವೇಶನ್‌ಗೆ ಸೇರುವಂತೆ ಆಹ್ವಾನಿಸಬಹುದು. ಆಹ್ವಾನವನ್ನು ಸ್ವೀಕರಿಸುವ ಗೆಸ್ಟ್‌ಗಳನ್ನು ಸಂಭಾಷಣೆಗೆ ಸೇರಿಸಲಾಗುತ್ತದೆ ಮತ್ತು ನೀವು ಇಡೀ ಗುಂಪಿಗೆ ಸಂದೇಶಗಳನ್ನು ಕಳುಹಿಸುತ್ತೀರಿ. ಗೆಸ್ಟ್‌ಗಳು ತಡವಾಗಿ ಸೇರಿಕೊಂಡರೂ ಸಹ, ಎಲ್ಲಾ ಸಂದೇಶಗಳನ್ನು ಓದಬಹುದು, ಆದ್ದರಿಂದ ನೀವು ಅವುಗಳನ್ನು ಪುನರಾವರ್ತಿಸಬೇಕಾಗಿಲ್ಲ.

ಸೇರ್ಪಡೆಗೊಂಡ ಪ್ರತಿಯೊಬ್ಬರ ಲಿಸ್ಟ್ ಒಳಗೊಂಡಂತೆ ರಿಸರ್ವೇಶನ್ ಮತ್ತು ಸಂಭಾಷಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ವಿವರಗಳು ಬಟನ್ ಅನ್ನು ಒತ್ತಿ. ಗೆಸ್ಟ್‌ನ ಪ್ರೊಫೈಲ್‌ ಪ್ರವೇಶಿಸಲು ಅವರ ಫೋಟೋವನ್ನು ಆಯ್ಕೆಮಾಡಿ ಮತ್ತು ನೀವು ಯಾರನ್ನು ಹೋಸ್ಟ್ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಇತರ ಸಂದೇಶ ವೈಶಿಷ್ಟ್ಯಗಳನ್ನು ಬಳಸುವುದು

ಥ್ರೆಡ್ಡೆಡ್ ರಿಪ್ಲೈಗಳು, ಎಡಿಟಿಂಗ್ ಟೂಲ್‌ಗಳು, ಓದಿದ ಸ್ವೀಕೃತಿಗಳು ಮತ್ತು ಎಮೋಜಿಗಳು ಸೇರಿದಂತೆ ಸಂದೇಶಗಳ ಟ್ಯಾಬ್‌ನಲ್ಲಿ ಸಂಭಾಷಣೆಗಳನ್ನು ನಿರ್ವಹಿಸಲು ನೀವು ಹೆಚ್ಚು ವೈಶಿಷ್ಟ್ಯಗಳನ್ನು ಕಾಣುತ್ತೀರಿ.

  • ಸಂದೇಶಕ್ಕೆ ಉತ್ತರಿಸುವಾಗ ಥ್ರೆಡ್ಡೆಡ್ ರಿಪ್ಲೈಗಳು ನಿಮಗೆ ಥ್ರೆಡ್ ಅನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ, ಅದು ನಿಮ್ಮ ಪ್ರತಿಕ್ರಿಯೆಯನ್ನು ಮೂಲ ಸಂದೇಶದ ಕೆಳಗೆ ಜೋಡಿಸುತ್ತದೆ.
  • ಎಡಿಟಿಂಗ್ ಟೂಲ್‌ಗಳು ಸಂದೇಶವನ್ನು ಕಳುಹಿಸಿದ 15 ನಿಮಿಷಗಳೊಳಗೆ ಅದನ್ನು ಎಡಿಟ್ ಮಾಡಲು ಮತ್ತು 24 ಗಂಟೆಗಳೊಳಗೆ ಕಳುಹಿಸಿದ್ದನ್ನು ಹಿಂಪಡೆಯಲು ನಿಮಗೆ ಅನುವು ಮಾಡಿಕೊಡುತ್ತವೆ.
  • ಗೆಸ್ಟ್‌ಗಳು ಅಥವಾ ಇತರ ಸ್ವೀಕೃತದಾರರು ತಮ್ಮ ಖಾತೆ ಸೆಟ್ಟಿಂಗ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಆಫ್ ಮಾಡದ ಹೊರತು ನಿಮ್ಮ ಸಂದೇಶಗಳನ್ನು ವೀಕ್ಷಿಸಿದ್ದಾರೆಯೇ ಎಂದು ಓದಿದ ಸ್ವೀಕೃತಿಗಳು ತೋರಿಸುತ್ತವೆ.
  • ಮುಗುಳುನಗೆಯ ಮುಖ, ಹೃದಯ, ಥಂಬ್ಸ್ ಅಪ್, ಚಪ್ಪಾಳೆ ಅಥವಾ ನಗುತ್ತಿರುವ ಮುಖದೊಂದಿಗೆ ಸಂದೇಶವನ್ನು ಅಂಗೀಕರಿಸಲು ಎಮೋಜಿಗಳು ನಿಮಗೆ ಅನುವು ಮಾಡಿಕೊಡುತ್ತವೆ.

ಸಂದೇಶಗಳ ಟ್ಯಾಬ್ ಪ್ರಶ್ನೋತ್ತರ

ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

Airbnb
ಮೇ 1, 2024
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ