ಪ್ರತೀಕಾರದ ವಿಮರ್ಶೆಯನ್ನು ಹೇಗೆ ನಿಭಾಯಿಸುವುದು

ನಮ್ಮ ವಿಮರ್ಶೆಗಳ ನೀತಿಗೆ ವಿರುದ್ಧವಾದ ವಿಮರ್ಶೆಗಳನ್ನು ತೆಗೆದುಹಾಕಲು ವಿನಂತಿಸಿ.
Airbnb ಅವರಿಂದ ನವೆಂ 16, 2022ರಂದು
1 ನಿಮಿಷ ಓದಲು
ಫೆಬ್ರ 24, 2025 ನವೀಕರಿಸಲಾಗಿದೆ

ಪ್ರತೀಕಾರದ ವಿಮರ್ಶೆಯ ಸಾಧ್ಯತೆಯ ಬಗ್ಗೆ ಚಿಂತಿಸದೆ ಹೋಸ್ಟ್‌ಗಳು ಗೆಸ್ಟ್‌ಗಳನ್ನು ಸ್ವಾಗತಿಸುವಾಗ ಆರಾಮದಾಯಕ ಭಾವನೆ ಹೊಂದಿರಬೇಕು. ನಮ್ಮ ವಿಮರ್ಶೆಗಳ ನೀತಿಗೆ ವಿರುದ್ಧವಾಗಿದೆ ಎಂದು ನೀವು ನಂಬುವ ಪ್ರತೀಕಾರದ ವಿಮರ್ಶೆಯಂತಹ ವಿಮರ್ಶೆಗಳನ್ನು ನೀವು ತೆಗೆದುಹಾಕಲು ವಿನಂತಿಸಬಹುದು.

ಪ್ರತೀಕಾರದ ವಿಮರ್ಶೆಯನ್ನು ತೆಗೆದುಹಾಕಲು ವಿನಂತಿಸುವುದು

ಪ್ರತೀಕಾರದ ವಿಮರ್ಶೆಗಳು ನೀವು ಗಂಭೀರ ನೀತಿ ಉಲ್ಲಂಘನೆಯನ್ನು ವರದಿ ಮಾಡಿದ ನಂತರ ಗೆಸ್ಟ್‌ಗಳು ನೀಡಬಹುದಾದ ಪಕ್ಷಪಾತದ ವಿಮರ್ಶೆಗಳಾಗಿವೆ, ಉದಾಹರಣೆಗೆ:

  • ನಿಮ್ಮ ಪ್ರಾಪರ್ಟಿಯನ್ನು ಹಾನಿಗೊಳಿಸುವುದು
  • ರಿಸರ್ವೇಶನ್‌ ಅವಧಿ ಮುಕ್ತಾಯದ ನಂತರವೂ ಉಳಿದುಕೊಳ್ಳುವುದು
  • ನಿಮ್ಮ ಪ್ರಮಾಣಿತ ಮನೆ ನಿಯಮಗಳನ್ನು ಉಲ್ಲಂಘಿಸುವುದು
  • ನಿಮ್ಮ ಸ್ಥಳದಲ್ಲಿ ಅನಧಿಕೃತ ಪಾರ್ಟಿ ಅಥವಾ ಈವೆಂಟ್ ಆಯೋಜಿಸುವುದು

ನಿಮ್ಮ ಮನೆಯ ನಿಯಮಗಳಿಗೆ ವಿರುದ್ಧವಾಗಿ ನಿಮ್ಮ ಮನೆಯಲ್ಲಿ ಗೆಸ್ಟ್ ಧೂಮಪಾನ ಮಾಡುತ್ತಾರೆ ಎಂದಿಟ್ಟುಕೊಳ್ಳೋಣ. ಲಿವಿಂಗ್ ರೂಮ್‌ನಲ್ಲಿ ನೀವು ಉಳಿದ ಸಿಗರೇಟ್ ತುಂಡುಗಳನ್ನು ಕಂಡುಕೊಂಡಿದ್ದೀರಿ ಎಂದು ನಿಮ್ಮ ಗೆಸ್ಟ್‌ಗೆ ತಿಳಿಸುತ್ತೀರಿ ಮತ್ತು ಹೆಚ್ಚಿನ ಶುಚಿಗೊಳಿಸುವಿಕೆಗಾಗಿ ಹಣ ಮರುಪಾವತಿ ವಿನಂತಿಯನ್ನು ಸಲ್ಲಿಸುತ್ತೀರಿ. ಇದಕ್ಕೆ ಪ್ರತಿಕ್ರಿಯೆಯಾಗಿ, ನಿಮ್ಮ ಗೆಸ್ಟ್ ಪಾವತಿಸಲು ನಿರಾಕರಿಸುತ್ತಾರೆ ಮತ್ತು ಆಕ್ರೋಶದ ವಿಮರ್ಶೆಯನ್ನು ನೀಡುತ್ತಾರೆ. ನೀವು ಈ ವಿಮರ್ಶೆಯನ್ನು ವಿವಾದಿಸಬಹುದು ಮತ್ತು ಅದು ತೆಗೆದುಹಾಕಲು ಅರ್ಹವಾಗಿದೆಯೇ ಎಂದು ನಿರ್ಧರಿಸಲು ನಾವು ತನಿಖೆ ಮಾಡುತ್ತೇವೆ.

ವಿಮರ್ಶೆಯೊಂದನ್ನು ತೆಗೆದುಹಾಕಲು ಹೇಗೆ ವಿನಂತಿಸುವುದು ಎಂಬುದನ್ನು ತಿಳಿಯಿರಿ

ವಿಮರ್ಶೆಯನ್ನು ತೆಗೆದುಹಾಕಲು ವಿನಂತಿಸುವುದರಿಂದ ಅದನ್ನು ತೆಗೆದುಹಾಕಲಾಗುವುದು ಎಂದು ಖಾತರಿ ನೀಡುವುದಿಲ್ಲ. ವಿಮರ್ಶೆಯು ನಮ್ಮ ವಿಮರ್ಶೆಗಳ ನೀತಿಯನ್ನು ಹೇಗೆ ಅನುಸರಿಸುವುದಿಲ್ಲ ಎಂಬುದನ್ನು ತೋರಿಸಬೇಕಾಗುತ್ತದೆ. ಫೋಟೋಗಳು ಅಥವಾ ಗೆಸ್ಟ್‌ಗಳೊಂದಿಗಿನ ಮೆಸೇಜ್ ಥ್ರೆಡ್‌ಗಳಂತಹ ನೀತಿ ಉಲ್ಲಂಘನೆಯ ಬಗ್ಗೆ ಯಾವುದೇ ವಿವರಗಳು ಮತ್ತು ದಾಖಲಾತಿಗಳನ್ನು ನೀವು ನಮಗೆ ಒದಗಿಸಬಹುದು.

ನೀತಿ ಉಲ್ಲಂಘನೆ ಸ್ಪಷ್ಟವಾಗಿ ನಡೆದಿದೆ ಎಂದು ನಿಮ್ಮ ದಾಖಲೆಗಳು ತೋರಿಸಬೇಕಾಗುತ್ತದೆ. ನೀತಿ ಉಲ್ಲಂಘನೆಯನ್ನು Airbnb ಮತ್ತು/ಅಥವಾ ಗೆಸ್ಟ್‌ಗೆ ವರದಿ ಮಾಡಿರುವುದು ಪ್ರತೀಕಾರದ ವಿಮರ್ಶೆಗೆ ಕಾರಣವಾಗಿರಬಹುದು ಎಂಬುದು ಕೂಡ ಸ್ಪಷ್ಟವಾಗಬೇಕು.

ನಿಮ್ಮ ಸಂದೇಶಗಳ ಟ್ಯಾಬ್‌ನಲ್ಲಿ ಗೆಸ್ಟ್‌ಗಳೊಂದಿಗಿನ ಎಲ್ಲಾ ಸಂವಹನವನ್ನು ಇರಿಸಿಕೊಳ್ಳುವುದು ಒಳ್ಳೆಯದು, ಹೀಗೆ ಮಾಡಿದಾಗ Airbnb ಬೆಂಬಲವು ಈ ದಾಖಲೆಗಳನ್ನು ಸುಲಭವಾಗಿ ಪರಿಶೀಲಿಸಬಹುದು.

ಪ್ರತೀಕಾರದ ವಿಮರ್ಶೆಗಳ ಕುರಿತಾದ ನಮ್ಮ ನೀತಿಯು ಆತ್ಮವಿಶ್ವಾಸದಿಂದ ಹೋಸ್ಟ್ ಮಾಡಲು ಸಹಾಯ ಮಾಡಿದೆ ಎಂದು ಹೋಸ್ಟ್‌ಗಳು ನಮಗೆ ತಿಳಿಸಿದ್ದಾರೆ. ತಮ್ಮ ಲಿಸ್ಟಿಂಗ್‌ ಬಗ್ಗೆ ಪ್ರತೀಕಾರದ ವಿಮರ್ಶೆ ಕುರಿತು ಹೋಸ್ಟ್‌ ಲಿಯಾನ್ನ್‌ ಹೀಗೆ ಹೇಳುತ್ತಾರೆ - "ನಾನು ವಿನಂತಿಸಿದಾಗ ತಕ್ಷಣ ವಿಮರ್ಶೆಯನ್ನು ಪರಾಮರ್ಶಿಸಲಾಯಿತು ಮತ್ತು ತೆಗೆದುಹಾಕಲಾಯಿತು. Airbnb ನನಗೆ ಬೆಂಬಲವಾಗಿ ನಿಂತಿದೆ ಎಂದು ನನಗೆ ನಿಜವಾಗಿಯೂ ಅನಿಸಿತು."

ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

Airbnb
ನವೆಂ 16, 2022
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ