ಹೋಸ್ಟಿಂಗ್‌ನ ಉತ್ತಮ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳುವುದು

ತ್ವರಿತವಾಗಿ ಪ್ರತಿಕ್ರಿಯಿಸುವುದರಿಂದ ಹಿಡಿದು ರದ್ದತಿಗಳನ್ನು ತಪ್ಪಿಸುವವರೆಗೆ, ಗಮನಹರಿಸಬೇಕಾದ ಅಂಶಗಳು ಇಲ್ಲಿವೆ.
Airbnb ಅವರಿಂದ ಡಿಸೆಂ 16, 2019ರಂದು
3 ನಿಮಿಷ ಓದಲು
ಫೆಬ್ರ 4, 2025 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ಗೆಸ್ಟ್ ಸಂದೇಶಗಳಿಗೆ ಪ್ರತಿಕ್ರಿಯಿಸಿ ಮತ್ತು 24 ಗಂಟೆಗಳ ಒಳಗೆ ಯಾವುದೇ ಬುಕಿಂಗ್-ಸಂಬಂಧಿತ ಸಂದೇಶಗಳಿಗೆ ಉತ್ತರಿಸಿ

  • ರಿಸರ್ವೇಶನ್ ಅವಶ್ಯಕತೆಗಳನ್ನು ಹೊಂದಿಸಿ ಇದರಿಂದ ನೀವು ಹೆಚ್ಚು ಅತಿಥಿಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ

  • ನಿಮ್ಮ ಕ್ಯಾಲೆಂಡರ್ ಅನ್ನು ಯಾವಾಗಲೂ ಅಪ್‌ಡೇಟ್‌ ಮಾಡುವ ಮೂಲಕ ರದ್ದತಿಗಳನ್ನು ತಪ್ಪಿಸಿ

  • Airbnb ಯ ಆತಿಥ್ಯ ಮಾನದಂಡಗಳನ್ನು ಅನುಸರಿಸುವ ಮೂಲಕ ಉತ್ತಮ ವಿಮರ್ಶೆಗಳನ್ನು ಪಡೆಯಿರಿ

  • ಹೋಸ್ಟಿಂಗ್ ಜಗತ್ತಿನ ಕುರಿತು ಮತ್ತಷ್ಟು ತಿಳಿಯಲು, ನಮ್ಮ ಸಂಪೂರ್ಣ ಮಾರ್ಗದರ್ಶಿಯನ್ನು ಅನ್ವೇಷಿಸಿ

Airbnb ಹೋಸ್ಟ್ ‌ಆಗಿ, ನೀವು ಕೇವಲ ನಿಮ್ಮ ಪ್ರಾಪರ್ಟಿ ಮೇಲೆ ಆದಾಯವನ್ನು ಗಳಿಸುವುದಿಲ್ಲ, ನೀವು ಪ್ರಪಂಚದಾದ್ಯಂತದ ಆಸಕ್ತಿದಾಯಕ ಜನರನ್ನು ಸಹ ಭೇಟಿಯಾಗುತ್ತೀರಿ. "ನಮ್ಮ ಬಳಿ ಡ್ರೋನ್ ತಯಾರಕರು, ವೃತ್ತಿಪರ ಗಾಯಕ-ಗೀತರಚನಾಕಾರ ಮತ್ತು ಸರ್ಕಸ್ ಪ್ರದರ್ಶಕರು ವಾಸ್ತವ್ಯ ಹೂಡಿದ್ದರು" ಎಂದು ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್ ನ ಹೋಸ್ಟ್‌ಗಳಾದ ಬೆವರ್ಲೀ ಮತ್ತು ಸುಝೀ ಹೇಳುತ್ತಾರೆ. "ಅದು ನಿಜವಾಗಿಯೂ ನಮ್ಮಿಬ್ಬರ ಜೀವನಗಳನ್ನು ಸಂಪನ್ನಗೊಳಿಸಿದೆ." ಹಂಚಿಕೊಳ್ಳಲು ಸ್ಥಳವನ್ನು ಹೊಂದಿರುವ ಯಾರಾದರೂ Airbnb ಹೋಸ್ಟ್ ಆಗಬಹುದು. ಪ್ರತಿಯೊಂದು ಗೆಸ್ಟ್‌ ಗೂ ಒಂದು ಆರಾಮದಾಯಕ ಮತ್ತು ವಿಶ್ವಾಸಾರ್ಹ ಅನುಭವವನ್ನು ಖಚಿತಪಡಿಸಿಕೊಳ್ಳಲು Airbnb ನಿಗದಿಪಡಿಸಿದ ಮೂಲಭೂತ ಮಾನದಂಡಗಳನ್ನು ಪೂರೈಸಲು ನೀವು ಸಿದ್ಧರಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉತ್ತಮ ಹೋಸ್ಟ್‌ಗಳು ಏನು ಮಾಡುತ್ತಾರೆ ಎಂಬುದರ ಮೂಲಭೂತ ಅಂಶಗಳು ಇಲ್ಲಿವೆ:

ಪ್ರತಿ ವಿಚಾರಣೆ ಮತ್ತು ಬುಕಿಂಗ್ ವಿನಂತಿಗೆ 24 ಗಂಟೆಗಳ ಒಳಗೆ ಪ್ರತಿಕ್ರಿಯಿಸಿ

ಗೆಸ್ಟ್‌ಗಳು ನಿಮ್ಮನ್ನು ಸಂಪರ್ಕಿಸಿದಾಗ ತ್ವರಿತವಾಗಿ ಉತ್ತರ ನೀಡುವುದು ನೀವು ಗಮನ ಹರಿಸುವ, ಕಾಳಜಿ ವಹಿಸುವ ಹೋಸ್ಟ್ ಎಂದು ತೋರಿಸುತ್ತದೆ. 24 ಗಂಟೆಗಳ ಒಳಗೆ ಬುಕಿಂಗ್-ಸಂಬಂಧಿತ ಸಂದೇಶಗಳಿಗೆ ಉತ್ತರಿಸುವುದು ಮುಖ್ಯವಾಗಿದೆ. ಹೆಚ್ಚಿನ ಪ್ರತಿಕ್ರಿಯೆ ಶೇಕಡವು ಉತ್ತಮ ಆತಿಥ್ಯದ ಸಂಕೇತ ಮಾತ್ರವಲ್ಲ, ಇದು ಸೂಪರ್ ‌ ಹೋಸ್ಟ್ ಆಗಲು ಒಂದು ಮಾನದಂಡ ಕೂಡಾ ಆಗಿದೆ.

Airbnb ಆ್ಯಪ್ ಅನ್ನು ಡೌನ್‌ಲೋಡ್ ಮಾಡುವುದನ್ನು ಪರಿಗಣಿಸಿ. ಇದರಿಂದ ನೀವು ಎಲ್ಲಿಂದಲಾದರೂ ಸಂದೇಶಗಳಿಗೆ ಪ್ರತಿಕ್ರಿಯಿಸಬಹುದು. ಇದನ್ನು ಸ್ಪಷ್ಟಪಡಿಸಲು, ಪ್ರತಿಯೊಂದು ಗೆಸ್ಟ್‌ ಸಂದೇಶಕ್ಕೂ ಸ್ಪಂದಿಸುವುದು ಉತ್ತಮ ಆತಿಥ್ಯ ಪದ್ಧತಿಯಾಗಿದ್ದರೂ, ನಿಮ್ಮ ಪ್ರತಿಕ್ರಿಯೆ ಶೇಕಡವು ನಿರ್ದಿಷ್ಟವಾಗಿ ಬುಕಿಂಗ್‌ಗೆ ಸಂಬಂಧಿಸಿದ ಸಂದೇಶಗಳಿಗೆ ನಿಮ್ಮ ಉತ್ತರಗಳನ್ನು ಆಧರಿಸಿದೆ .

ರಿಸರ್ವೇಶನ್ ವಿನಂತಿಗಳನ್ನು ಸ್ವೀಕರಿಸಿ

ಹೋಸ್ಟ್‌ಗಳು ಅವರ ಲಭ್ಯವಿರುವ ದಿನಾಂಕಗಳಿಗೆ ಅವರು ಪಡೆದ ಬುಕ್ಕಿಂಗ್ ಅರ್ಜಿಗಳ ಹೆಚ್ಚಿನ ಭಾಗವನ್ನು ಸ್ವೀರ್ಕರಿಸುತ್ತಾರೆ ಎಂಬುದನ್ನು Airbnb ಡೇಟಾ ತೋರಿಸುತ್ತದೆ. ನೀವು ಹೋಸ್ಟ್ ಮಾಡಬಹುದೆನ್ನುವುದರ ಬಗ್ಗೆ ಸಂಶಯವಿದ್ದಾಗ, ನಿಮ್ಮ ಕ್ಯಾಲೆಂಡರ್‌ನಲ್ಲಿನ ಲಭ್ಯತೆ ಸೆಟ್ಟಿಂಗ್‌ಗಳನ್ನು ಬಳಸಿ ಆ ದಿನಗಳನ್ನು ನಿರ್ಬಂಧಿಸಬಹುದು.

ನೀವು ಹೆಚ್ಚಿನ ಬುಕಿಂಗ್ ವಿನಂತಿಗಳನ್ನು ನಿರಾಕರಿಸುತ್ತಿರುವಂತೆ ಕಂಡುಬಂದರೆ, Airbnb ನೀವು ಹೋಸ್ಟ್ ಮಾಡಲು ಲಭ್ಯವಿಲ್ಲ ಎಂದು ಭಾವಿಸಿ, ನಿಮಗೆ ಹೆಚ್ಚಿನ ಸಮಯ ಲಭ್ಯವಿರುವವರೆಗೆ ನಿಮ್ಮ ಲಿಸ್ಟಿಂಗ್ ಅನ್ನು ಸ್ನೂಜ್ ಮಾಡಬಹುದು. ಸಾಧ್ಯವಾದಷ್ಟು ಹೆಚ್ಚು ವಿನಂತಿಗಳನ್ನು ಸ್ವೀಕರಿಸಲು ಮತ್ತು ಪ್ರತಿಯೊಂದು ರಿಸರ್ವೇಶನ್ನಿನೊಂದಿಗೂ ನಿಮಗೆ ಆರಾಮವಾಗಿರುವಂತೆ ಖಚಿತಪಡಿಸಿಕೊಳ್ಳಲು, ಈ ಆಯ್ಕೆಗಳನ್ನು ಪರಿಗಣಿಸಿ:

  • ನಿಮ್ಮ ರಿಸರ್ವೇಶನ್ ಅವಶ್ಯಕತೆಗಳಿಗೆ ID ಪರಿಶೀಲನೆಯನ್ನು ಸೇರಿಸಿ
  • ಗೆಸ್ಟ್‌ಗಳೊಂದಿಗೆ ನಿರೀಕ್ಷೆಗಳನ್ನು ಹೊಂದಿಸಲು ಮನೆ ನಿಯಮಗಳನ್ನು ಸೇರಿಸಿ
  • ನೀವು ತ್ವರಿತ ಬುಕಿಂಗ್ ಅನ್ನು ಸಕ್ರಿಯಗೊಳಿಸಿದ್ದರೆ, ಗೆಸ್ಟ್‌ಗಳು ಬುಕ್ ಮಾಡುವ ಮೊದಲು ಇತರ ಹೋಸ್ಟ್‌ಗಳಿಂದ ಇತ್ತೀಚಿನ ಸಕ್ರಿಯ ವಿಮರ್ಶೆಗಳನ್ನು ಹೊಂದಿರುವುದನ್ನು ಆವಶ್ಯಕಗೊಳಿಸಬಹುದು.

ರದ್ದತಿಗಳನ್ನು ತಪ್ಪಿಸಿ

Airbnb ರದ್ದತಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಅವು ಗೆಸ್ಟ್‌ಗಳಿಗೆ ಭಾರಿ ಅಸಹನೀಯವಾಗಿರುವುದು ಮಾತ್ರವಲ್ಲ - ಅವರ ಪ್ರಯಾಣದ ಯೋಜನೆಗಳು ನಿಮ್ಮ ಮೇಲೆ ಅವಲಂಬಿತವಾಗಿವೆ! -ಅವು ಇಡೀ ಸಮುದಾಯದಲ್ಲಿ ವಿಶ್ವಾಸವನ್ನೂ ಕುಗ್ಗಿಸುತ್ತವೆ. ಅದಕ್ಕಾಗಿಯೇ, ಯಾವುದೇ ವಿಪರೀತ ಸಂದರ್ಭಗಳ ಹೊರತಾಗಿ, ರದ್ದತಿಗಳನ್ನು ತಪ್ಪಿಸಬೇಕು. ರದ್ದುಗೊಳಿಸುವ ನಿಮ್ಮ ಅಪಾಯವನ್ನು ಕಡಿಮೆ ಮಾಡಲು:

  • ನಿಮ್ಮ ಲಭ್ಯತೆ ಮತ್ತು ಬೆಲೆ ಯಾವಾಗಲೂ ನವೀಕೃತವಾಗಿರುವುದನ್ನು ಖಚಿತಪಡಿಸಿಕೊಳ್ಳಿ
  • ನೀವು ವೈಯಕ್ತಿಕ ಕಾರಣಗಳಿಗಾಗಿ ನಿಮ್ಮ ಸ್ಥಳವನ್ನು ಬಳಸಲು ಬಯಸಿದಾಗ ಅಥವಾ ನಿಮ್ಮ ರಾತ್ರಿಯ ದರವನ್ನು ಹೆಚ್ಚಿಸಲು ಬಯಸಿದಾಗ ವಿಶೇಷ ಸಂದರ್ಭಗಳು ಅಥವಾ ರಜಾದಿನಗಳನ್ನು ಎದುರುನೋಡಬಹುದು
  • ಯಾವುದಾದರೊಂದು ಕಾರಣದಿಂದ ನಿಮ್ಮ ಕ್ಯಾಲೆಂಡರು ಸರಿಯಾದ ಸ್ಥಿತಿಯಲ್ಲಿ ಇಲ್ಲವೆಂದರೆ, ಅಥವಾ ಬರುವ ಪ್ರತೀ ಬುಕಿಂಗ್ ವಿನಂತಿಯನ್ನು ನೀವು ಒಪ್ಪಿಕೊಳ್ಳಲು ಇಷ್ಟಪಟ್ಟರೆ, ತ್ವರಿತ ಬುಕ್ ಅನ್ನು ಆಫ್ ಮಾಡಲು
  • ಪರಿಗಣಿಸಿ
  • ನೀವು ನಿಮ್ಮ ಸ್ಥಳವನ್ನು ಬೇರೆ ವೆಬ್‌ಸೈಟ್‌ಗಳಲ್ಲಿ ಲಿಸ್ಟ್ ಮಾಡಿದರೆ, ಒಂದೇ ದಿನಾಂಕದಲ್ಲಿ ಅನೇಕ ಗೆಸ್ಟ್‌ಗಳು ಕಾದಿರಿಸುವುದನ್ನು ತಡೆಯಲು ಕ್ಯಾಲೆಂಡರ್ ಸಿಂಕ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿ

ಹೆಚ್ಚಿನ ಒಟ್ಟಾರೆ ರೇಟಿಂಗ್ ಅನ್ನು ಉಳಿಸಿಕೊಳ್ಳಿ

ಪ್ರತಿ ವಾಸ್ತವ್ಯದ ಕೊನೆಯಲ್ಲಿ, ಗೆಸ್ಟ್‌ಗಳು ನಿಮ್ಮೊಂದಿಗೆ ತಮ್ಮ ಅನುಭವವನ್ನು ವಿಮರ್ಶೆ ಮಾಡುತ್ತಾರೆ. ಸಕಾರಾತ್ಮಕ ವಿಮರ್ಶೆಗಳು ನಿಮಗೆ ಹೆಚ್ಚಿನ ಬುಕಿಂಗ್‌ಗಳನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಸೂಪರ್ ‌ ಹೋಸ್ಟ್ ಸ್ಟೇಟಸ್ಗಳಿಸಲು ಅನುಕೂಲ ಮಾಡಬಹುದು. ಉತ್ತಮ ವಿಮರ್ಶೆಗಳನ್ನು ಪಡೆಯುವ ಹೋಸ್ಟ್‌ಗಳು ಈ ಕೆಳಗಿನವುಗಳ ಮೇಲೆ ಕೇಂದ್ರೀಕರಿಸುತ್ತಾರೆ:

  • ಸ್ವಚ್ಛತೆ: ಗೆಸ್ಟ್‌ಗಳು ನಿಮ್ಮ ಲಿಸ್ಟಿಂಗ್ ಫೋಟೋಗಳಲ್ಲಿ ನೋಡಿದ ಸ್ವಚ್ಛ ಮತ್ತು ಅಚ್ಚುಕಟ್ಟಾದ ಸ್ಥಳವನ್ನು ನಿರೀಕ್ಷಿಸುತ್ತಾರೆ. ವಿವಿಧ ಗೆಸ್ಟ್‌ಗಳ ಆಗಮನ, ನಿರ್ಗಮನದ ನಡುವೆ ಸ್ವಚ್ಛತೆಗಾಗಿ ಸಾಕಷ್ಟು ಸಮಯವನ್ನು ಮೀಸಲಿಡುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ, ವಿಶೇಷವಾಗಿ ನೀವು ಒಂದರ ಹಿಂದೊಂದು ಬುಕಿಂಗ್‌ಗಳನ್ನು ಹೊಂದಿದ್ದರೆ.
  • ಅಗತ್ಯ ಸೌಲಭ್ಯಗಳು: ಕೆಲವು ಮೂಲಭೂತ ಅಂಶಗಳನ್ನು ಹೊಂದಿರುವುದನ್ನು ಗೆಸ್ಟ್‌ಗಳು ಪ್ರಶಂಸಿಸುತ್ತಾರೆ. ಟಾಯ್ಲೆಟ್ ಪೇಪರ್, ಕೈ ಮತ್ತು ಬಾಡಿ ಸೋಪ್, ಲಿನೆನ್‌ಗಳು/ಹಾಳೆಗಳು ಮತ್ತು ಪ್ರತಿ ವ್ಯಕ್ತಿಗೆ ಕನಿಷ್ಠ ಒಂದು ಟವೆಲ್ ಮತ್ತು ದಿಂಬನ್ನು ಸಂಗ್ರಹಿಸಲು Airbnb ಶಿಫಾರಸು ಮಾಡುತ್ತದೆ.
  • ನಿಖರವಾದ ಲಿಸ್ಟಿಂಗ್ ವಿವರಗಳು: ನಿಮ್ಮ ಸ್ಥಳವು ಅವರ ಅಗತ್ಯಗಳನ್ನು ಪೂರೈಸುತ್ತದೆಯೇ ಎಂಬುದನ್ನು ತೀರ್ಮಾನಿಸಲು ಪ್ರಯಾಣಿಕರಿಗೆ ಸ್ಪಷ್ಟ ಮಾಹಿತಿಯನ್ನು ಮತ್ತು ತಿಳಿದುಕೊಳ್ಳಬೇಕಾದ ವಿವರಗಳನ್ನು ನೀಡುವುದರ ಮೂಲಕ ಸಹಾಯ ಮಾಡಿ..
  • ನಯವಾದ ಚೆಕ್-ಇನ್: ಒಂದು ದಿನದ ಪ್ರಯಾಣದ ನಂತರ ನಿಮ್ಮ ಗೆಸ್ಟ್‌ಗಳನ್ನು ಆರಾಮವಾಗಿರುವಂತೆ ಮಾಡಲು, ಸ್ಪಷ್ಟ ಮತ್ತು ಸರಳವಾದ ಚೆಕ್-ಇನ್ ಪ್ರಕ್ರಿಯೆ ಸಹಾಯ ಮಾಡುತ್ತದೆ .
  • ಸಕ್ರಿಯ ಸಂವಹನ: ಗೆಸ್ಟ್‌ಗಳು ತಮ್ಮ ವಾಸ್ತವ್ಯದ ಉದ್ದಕ್ಕೂ ನೀವು ಲಭ್ಯವಿದ್ದೀರಿ ಎಂದು ತಿಳಿಯಲು ಇಷ್ಟಪಡುತ್ತಾರೆ. ಆಗಮನ ಯೋಜನೆಗಳನ್ನು ಸಂಯೋಜಿಸಲು ಮುಂಚಿತವಾಗಿಯೇ ಸಂಪರ್ಕಿಸಿ.

ಒಟ್ಟು ಉನ್ನತ ರೇಟಿಂಗ್‌ ಅನ್ನು ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಸಲಹೆಗಳಿಗಾಗಿ, ನಮ್ಮ ಆತಿಥ್ಯ ಪುಟವನ್ನು ನೋಡಿ.

ಇದು ಸಂಪೂರ್ಣ ಚಿತ್ರಣದ ಬಗ್ಗೆ ಆಗಿದೆ

Airbnb ಪ್ರತಿಯೊಂದು ಕಾಯ್ದಿರಿಸುವಿಕೆಯು ಆರಂಭದಿಂದ ಮುಕ್ತಾಯದವರೆಗೆ ಪರಿಪೂರ್ಣವಾಗಿ ನಡೆಯಬೇಕೆಂದು ನಿರೀಕ್ಷಿಸುವುದಿಲ್ಲ-ಹೆಚ್ಚು ಅನುಭವಿಗಳಾದಂತೆ ನೀವು ಬಹಳಷ್ಟು ಕಲಿಯುತ್ತೀರಿ ಮತ್ತು ನಿಮ್ಮ ಹೋಸ್ಟಿಂಗ್ ಶೈಲಿಯನ್ನು ವಿಕಸನಗೊಳಿಸುತ್ತೀರಿ. ಈ ಮಾರ್ಗಸೂಚಿಗಳನ್ನು ಅನುಸರಿಸುವುದು ಸಂತೋಷಕರ ಗೆಸ್ಟ್‌ಗಳು, ಸಕಾರಾತ್ಮಕ ವಿಮರ್ಶೆಗಳು ಮತ್ತು ಪೂರ್ಣವಾದ ಹೋಸ್ಟಿಂಗ್ ಪ್ರಯಾಣದತ್ತ ಉತ್ತಮ ಮೊದಲ ಹೆಜ್ಜೆಯಾಗಿದೆ.

ವಿಶೇಷ ಆಕರ್ಷಣೆಗಳು

  • ಗೆಸ್ಟ್ ಸಂದೇಶಗಳಿಗೆ ಪ್ರತಿಕ್ರಿಯಿಸಿ ಮತ್ತು 24 ಗಂಟೆಗಳ ಒಳಗೆ ಯಾವುದೇ ಬುಕಿಂಗ್-ಸಂಬಂಧಿತ ಸಂದೇಶಗಳಿಗೆ ಉತ್ತರಿಸಿ

  • ರಿಸರ್ವೇಶನ್ ಅವಶ್ಯಕತೆಗಳನ್ನು ಹೊಂದಿಸಿ ಇದರಿಂದ ನೀವು ಹೆಚ್ಚು ಅತಿಥಿಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ

  • ನಿಮ್ಮ ಕ್ಯಾಲೆಂಡರ್ ಅನ್ನು ಯಾವಾಗಲೂ ಅಪ್‌ಡೇಟ್‌ ಮಾಡುವ ಮೂಲಕ ರದ್ದತಿಗಳನ್ನು ತಪ್ಪಿಸಿ

  • Airbnb ಯ ಆತಿಥ್ಯ ಮಾನದಂಡಗಳನ್ನು ಅನುಸರಿಸುವ ಮೂಲಕ ಉತ್ತಮ ವಿಮರ್ಶೆಗಳನ್ನು ಪಡೆಯಿರಿ

  • ಹೋಸ್ಟಿಂಗ್ ಜಗತ್ತಿನ ಕುರಿತು ಮತ್ತಷ್ಟು ತಿಳಿಯಲು, ನಮ್ಮ ಸಂಪೂರ್ಣ ಮಾರ್ಗದರ್ಶಿಯನ್ನು ಅನ್ವೇಷಿಸಿ

Airbnb
ಡಿಸೆಂ 16, 2019
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ