ದೀರ್ಘಾವಧಿ ವಾಸ್ತವ್ಯದ ವೇಳೆ ಗೆಸ್ಟ್‌ಗಳನ್ನು ಖುಷಿಪಡಿಸಲು ಸರಳ ಮಾರ್ಗಗಳು

ನಿಮ್ಮ ಗೆಸ್ಟ್‌ಗಳು ಮತ್ತು ವಿಮರ್ಶೆಗಳ ಮೇಲೆ ಪರಿಣಾಮ ಬೀರಲು ಈ ಸಲಹೆಗಳನ್ನು ಅನುಸರಿಸಿ.
Airbnb ಅವರಿಂದ ಫೆಬ್ರ 28, 2023ರಂದು
2 ನಿಮಿಷ ಓದಲು
ಏಪ್ರಿ 3, 2025 ನವೀಕರಿಸಲಾಗಿದೆ

ನಿಮ್ಮೊಂದಿಗೆ 28 ರಾತ್ರಿಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಉಳಿಯುವ ಗೆಸ್ಟ್‌ಗಳು ವಾರಾಂತ್ಯದ ಸಂದರ್ಶಕರಿಗಿಂತ ವಿಭಿನ್ನವಾದ ಅಗತ್ಯಗಳನ್ನು ಹೊಂದಿರುತ್ತಾರೆ. ಆ ಅಗತ್ಯಗಳನ್ನು ಪೂರೈಸುವುದು ಅವರಿಗೆ ಉತ್ತಮವಾದ ಪ್ರಯಾಣದ ಅನುಭವಗಳನ್ನು ಸೃಷ್ಟಿಸುತ್ತದೆ ಮತ್ತು ನಿಮಗೆ ಹೆಚ್ಚಿನ ಫೈವ್ ಸ್ಟಾರ್ ವಿಮರ್ಶೆಗಳು ಸಿಗಲು ಕಾರಣವಾಗಬಹುದು.

ಪ್ರತೀ ತಿಂಗಳೂ ಬರುವ ಗೆಸ್ಟ್‌ಗಳನ್ನು ತೃಪ್ತಿಪಡಿಸಲು, ಅವರು ಬಂದ ಒಂದು ವಾರದ ನಂತರ ಈ ಸರಳವಾದ ವರ್ತನೆಗಳನ್ನು ಪ್ರಯತ್ನಿಸಿ.

ಗೆಸ್ಟ್‌ಗಳಿಗೆ ಏನು ಬೇಕು ಎಂದು ಕೇಳುವುದು

ನೀವು ಮನೆಯಲ್ಲಿ ನಿಯಮಿತವಾಗಿ ಬಳಸುವ ಮತ್ತು ಪ್ಯಾಕ್ ಮಾಡಲು ಸಾಧ್ಯವಾಗದಿದ್ದ ವಸ್ತುವನ್ನು ಒಂದು ತಿಂಗಳು ಬಳಸದೇ ಬಿಡುವುದು ಬಹಳ ದೊಡ್ಡ ಸಮಯವಾಗಿದೆ. ಒಬ್ಬ ಹೋಸ್ಟ್ ಆಗಿ, ನಿಮ್ಮ ಗೆಸ್ಟ್‌ಗಳು ಯಾವುದೇ ಅಗತ್ಯ ವಸ್ತುಗಳನ್ನು ಬಿಟ್ಟು ಬಂದಿದ್ದಾರೆಯೇ ಎಂದು ನೀವು ಕೇಳಬಹುದು.

ಬಹುಶಃ ಅವರಿಗೆ ಹೆಚ್ಚುವರಿ ದಿಂಬು ಅಥವಾ ಕಂಬಳಿ, ಛತ್ರಿ ಅಥವಾ ಟೋಸ್ಟರ್ ಅಥವಾ ಬ್ಲೆಂಡರ್‌ನಂತಹ ಅಡಿಗೆ ಸಲಕರಣೆಗಳು ಬೇಕಾಗಬಹುದು. ಚಿಕ್ಕದೆಮ್ದು ಹೇಳಬಹುದಾದ ಅನುಕೂಲಗಳನ್ನು ಪೂರೈಸುವ ನಿಮ್ಮ ಬಯಕೆಯು ಅವರ ಆರಾಮದ ಮಟ್ಟದಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು ಮತ್ತು ಭವಿಷ್ಯದ ಗೆಸ್ಟ್‌ಗಳಿಗೆ ನೀವು ಅದೇ ವಸ್ತುವನ್ನು ಒದಗಿಸಬಹುದು.

ವಾಷಿಂಗ್ಟನ್‍‍ನ ಲೀವೆನ್‍‍ವರ್ತ್‌ನಲ್ಲಿರುವ ಸೂಪರ್‌ಹೋಸ್ಟ್ ಆಗಿರುವ ಆಂಡ್ರಿಯಾ ಅವರು ದೀರ್ಘಾವಧಿಯ ವಾಸ್ತವ್ಯಗಳಿದ್ದಾಗ ತಮ್ಮ ಅಡುಗೆಮನೆಯಲ್ಲಿ ವಸ್ತುಗಳನ್ನು ಸಂಗ್ರಹಿಸಿಡಲು ಇಷ್ಟಪಡುತ್ತೇನೆ ಎಂದು ಹೇಳುತ್ತಾರೆ. "ನಾನು ಯಾವಾಗಲೂ ನನ್ನ ಗೆಸ್ಟ್‌ಗಳಿಗೆ ಸಾಕಷ್ಟು ಸಡಿಲವಾದ ಎಲೆಗಳ ಚಹಾ, ಕಾಫಿ, ಅನೇಕ ಕಾಫಿ ತಯಾರಿಸುವ ಆಯ್ಕೆಗಳು ಮತ್ತು ಅಡುಗೆ ಎಣ್ಣೆ ಮತ್ತು ಮಸಾಲೆಗಳನ್ನು ಇಟ್ಟಿರುತ್ತೇನೆ."

ವಾಸ್ತವ್ಯ-ಮಧ್ಯೆ ಶುಚಿಗೊಳಿಸಲು ಮುಂದಾಗುವುದು

ಅನೇಕ ಗೆಸ್ಟ್‌ಗಳಿಗೆ ತಮ್ಮ ವಾಸ್ತವ್ಯ ಅರ್ಧ ಮುಗಿದಿರುವಾಗ ಉಚಿತವಾದ ಶುಚಿಗೊಳಿಸುವಿಕೆಯನ್ನು ಪಡೆಯುವ ವಿಚಾರವನ್ನು ಸ್ವಾಗತಿಸುತ್ತಾರೆ. ಇದು ಅವರಿಗೆ ಬಹಳ ಒಳ್ಳೆಯ ಲಾಭವಾಗಿದೆ ಮತ್ತು ಅದು ನಿಮಗೆ ಬ್ಯಾಟರಿಗಳು, ಲೈಟ್ ಬಲ್ಬ್‌ಗಳು ಮತ್ತು ಫಿಲ್ಟರ್‌ಗಳನ್ನು ಬದಲಿಸುವಂತಹ ಚಿಕ್ಕ ಪುಟ್ಟ ಮೆಂಟೇನನ್ಸ್ ಕೆಲಸಗಳನ್ನು ಮಾಡಲು ಅವಕಾಶ ನೀಡುತ್ತದೆ.

ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸೂಪರ್‌ಹೋಸ್ಟ್ ಆಗಿರುವ ಆನೆಟ್ ಅವರು ಗೆಸ್ಟ್‌ಗಳಿಗೆ ಇದನ್ನು ಹೇಳಲು ಇಷ್ಟಪಡುತ್ತಾರೆ: "ನೀವು ಕನಿಷ್ಠ ಒಂದು ತಿಂಗಳಾದರೂ ಇಲ್ಲಿರುವುದರಿಂದ, ಯಾವುದಕ್ಕಾದರೂ ನಮ್ಮ ಗಮನ ಬೇಕಾಗುವ ಸಾಧ್ಯತೆಯಿದೆ. ದಯವಿಟ್ಟು ಯಾವುದೇ ರಿಪೇರಿಯನ್ನು ಅದು ಎಷ್ಟೇ ಚಿಕ್ಕದಾಗಿದ್ದರೂ ನೀವೇ ಮಾಡಲು ಪ್ರಯತ್ನಿಸಬೇಡಿ. ತಕ್ಷಣ ನಮ್ಮನ್ನು ಸಂಪರ್ಕಿಸಿ, ನಾವು ಅದನ್ನು ನೋಡಿಕೊಳ್ಳುತ್ತೇವೆ."

ವಾಸ್ತವ್ಯದ ಮಧ್ಯದಲ್ಲಿ ಒಂದು ಶುಚಿಗೊಳಿಸುವಿಕೆಯನ್ನು

ನಿಗದಿಪಡಿಸುವಾಗ, ಸ್ಥಳಕ್ಕೆ ಯಾರು ಪ್ರವೇಶಿಸುತ್ತಿದ್ದಾರೆ, ಅವರು ಯಾವ ಸಮಯದಲ್ಲಿ ಕೆಲಸ ಪ್ರಾರಂಭಿಸುತ್ತಾರೆ ಮತ್ತು ಅವರು ಎಷ್ಟು ಹೊತ್ತು ಅಲ್ಲಿರುತ್ತಾರೆ ಎಂಬುದನ್ನು ಗೆಸ್ಟ್‌ಗಳಿಗೆ ತಿಳಿಸುವುದು ಒಳ್ಳೆಯದು. ಸ್ಪಷ್ಟ ನಿರೀಕ್ಷೆಗಳನ್ನು ಹೊಂದಿಸುವುದು ನೀವು ಅವರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಗೌರವಿಸುತ್ತೀರಿ ಎಂದು ಸೂಚಿಸುತ್ತದೆ.

ನೀವು ಪದೇ ಪದೇ ನೀಡುವ ಸೇವೆಯನ್ನು ಶುಲ್ಕ ಪಡೆದು ನೀಡಬಹುದಾಗಿದ್ದು ಇದು ನಿಮ್ಮ ಶುಚಿಗೊಳಿಸುವ ಸಿಬ್ಬಂದಿಯನ್ನು ಬೆಂಬಲಿಸಲು ಮತ್ತು ನಿಮ್ಮ ಸ್ಥಳವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.

ಸ್ಥಳೀಯ ಸೇವೆಗಳನ್ನು ಶಿಫಾರಸು ಮಾಡುವುದು

ಗೆಸ್ಟ್‌ಗಳಿಗೆ ಸಾಮಾನ್ಯವಾಗಿ ನಿಮ್ಮ ಪ್ರದೇಶವು ನಿಮಗೆ ತಿಳಿದಿರುವಷ್ಟು ಚೆನ್ನಾಗಿ ತಿಳಿದಿರುವುದಿಲ್ಲ. ಅವರಿಗೆ ಸಂದೇಶದ ಮೂಲಕ ಅಥವಾ ಮಾರ್ಗದರ್ಶಿ ಪುಸ್ತಕದ ಮೂಲಕ ಸ್ಥಳೀಯ ಸಲಹೆಗಳನ್ನು ಕಳುಹಿಸುವುದು ಅವರ ಭೇಟಿಯಿಂದ ಹೆಚ್ಚಿನ ಲಾಭ ಪಡೆಯಲು ಸಹಾಯ ಮಾಡುತ್ತದೆ.

ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವುದು, ದಿನಸಿ ತಲುಪಿಸುವುದು ಅಥವಾ ಲ್ಯಾಪ್‍‍ಟಾಪ್ ರಿಪೇರಿಗಳಂಥ ದೀರ್ಘಾವಧಿಯ ವಾಸ್ತವ್ಯಗಳಲ್ಲಿ ಗೆಸ್ಟ್‌ಗಳಿಗೆ ಬೇಕಾಗಬಹುದಾದ ಸೇವೆಗಳ ಬಗ್ಗೆ ಯೋಚಿಸಿ, ಅದರ ಒಂದು ಸಣ್ಣ ಪಟ್ಟಿಯನ್ನು ತಯಾರಿಸಿ. ಸ್ಥಳೀಯ ವ್ಯಾಪಾರಿಗಳನ್ನು ಶಿಫಾರಸು ಮಾಡುವುದು ನಿಮ್ಮ ಸಮುದಾಯವನ್ನು ಬೆಂಬಲಿಸುವುದಲ್ಲದೇ ನಿಮ್ಮ ಗೆಸ್ಟ್‌ಗಳೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ.

ಗೆಸ್ಟ್‌ಗಳಿಗೆ ನಿಮ್ಮ ಮೆಚ್ಚಿನ ತಾಣಗಳ, ವಿಶೇಷವಾಗಿ ಅವರು ತಪ್ಪಿಸಿಕೊಳ್ಳಬಾರದ ಕಡಿಮೆ-ತಿಳಿದಿರುವ ಸ್ಥಳಗಳ

ಬಗ್ಗೆ ಹೇಳಿ. ಅವರ ವಾಸ್ತವ್ಯದ ಅವಧಿಯಲ್ಲಿ ನಡೆಯುತ್ತಿರುವ ಹಬ್ಬಗಳು ಅಥವಾ ಇತರ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳ ಬಗ್ಗೆ ಹೇಳಲು ಮರೆಯಬೇಡಿ.

ಅನನ್ಯತೆಯನ್ನು ಒದಗಿಸುವುದು

ವಿಶೇಷ ವರ್ತನೆಗಳು ಗೆಸ್ಟ್‌ಗಳು ನಿಮ್ಮ ಬಗ್ಗೆ ಮೆಚ್ಚುಗೆಯ ಭಾವನೆಯನ್ನು ಹೊಂದುವಂತೆ ಮಾಡುತ್ತವೆ. ನೀವು ಕೆಲವು ಕೃತಜ್ಞತೆ ವ್ಯಕ್ತಪಡಿಸುವ ("ನಮ್ಮೊಂದಿಗೆ ಉಳಿದಿದ್ದಕ್ಕಾಗಿ ಧನ್ಯವಾದಗಳು") ಕೆಲವು ಪದಗಳು ಮತ್ತು ಚಿಂತನಶೀಲ ಉಡುಗೊರೆಯಿರುವ ಒಂದು ಕಾರ್ಡ್ ಅನ್ನು ಬಾಗಿಲ ಬಳಿ ಬಿಡಬಹುದು:

  • ಒಂದು ಬಾಟಲ್ ಸ್ಥಳೀಯ ವೈನ್
  • ತಾಜಾ ಬೇಯಿಸಿದ ಬ್ರೆಡ್‍‍ನ ‌ಒಂದು ಲೋಫ್
  • ಒಂದು ಸ್ಥಳೀಯ ಸ್ಮಾರಕ

"ಚಿಕ್ಕದು ಮತ್ತು ಹಗುರ ತೂಕವಿದ್ದಷ್ಟೂ ಒಳ್ಳೆಯದು" ಎಂದು ಸ್ಯಾನ್ ಫ್ರಾನ್ಸಿಸ್ಕೋದ ಸೂಪರ್‌ಹೋಸ್ಟ್ ಆಗಿರುವ ಡೊನ್ನಾ ಹೇಳುತ್ತಾರೆ. "ನನ್ನ ವೈಯಕ್ತಿಕ ಆದ್ಯತೆಯು ಏನಾದರೂ ತಿನ್ನಬಹುದಾದ ವಸ್ತುವಾಗಿದೆ, ಏಕೆಂದರೆ ಅವರು ಬಯಸಿದರೆ ಅವರು ಅದನ್ನು ತಕ್ಷಣವೇ ಬಳಸಬಹುದಾಗಿರುತ್ತದೆ." ಸ್ಥಳೀಯವಾಗಿ ತಯಾರಿಸಿದ ವಸ್ತುಗಳು ಗೆಸ್ಟ್‌ಗಳಿಗೆ ತಕ್ಷಣ ಸಂತೋಷವನ್ನು ನೀಡಬಹುದು ಮತ್ತು ಅವರು ಚೆಕ್ ‌ ಔಟ್ ಮಾಡಿದ ನಂತರ ನಿಮ್ಮ ಸ್ಥಳವನ್ನು ಅವರು ಪ್ರೀತಿಯಿಂದ ನೆನಪಿಸಿಕೊಳ್ಳಬಹುದು.

ಈ ಲೇಖನ ಒಳಗೊಂಡಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.
Airbnb
ಫೆಬ್ರ 28, 2023
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ