ಗೆಸ್ಟ್‌ಗಳು ಇಷ್ಟಪಡುವಂತಹ ಚಿಂತನಾಪೂರ್ವಕ ವಿವರಗಳು

ನಿಮ್ಮ ಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ಸ್ವಲ್ಪ ಅದ್ಭುತವಾದ ಸಂಗತಿಯನ್ನು ಸಾಧಿಸಿ.
Airbnb ಅವರಿಂದ ಡಿಸೆಂ 11, 2019ರಂದು
3 ನಿಮಿಷ ಓದಲು
ಡಿಸೆಂ 11, 2019 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ನಿಮ್ಮ ಸೌಲಭ್ಯಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಮಾರ್ಗಗಳನ್ನು ಕಂಡುಕೊಳ್ಳಿ

  • ಸ್ವಾಗತಕಾರಿ ಬುಟ್ಟಿ ಅಥವಾ ಕೈಬರಹದ ಟಿಪ್ಪಣಿಯಂತಹ ಚಿಂತನಶೀಲ ಶುಭಾಶಯಗಳು ಬಹಳಷ್ಟು ಸಹಾಯ ಮಾಡುತ್ತವೆ

  • ಗೆಸ್ಟ್‌ಗಳಿಗೆ ವಿಶಿಷ್ಟ ಅನುಭವವನ್ನು ನೀಡಲು ಸ್ಥಳೀಯ ಟ್ರೀಟ್‌ಗಳನ್ನು ಹಂಚಿಕೊಳ್ಳಿ

  • ಸನ್‌ಸ್ಕ್ರೀನ್, ಕೀಟ ನಿವಾರಕ ಮತ್ತು ಛತ್ರಿಗಳಂತಹ ಪ್ರಾಯೋಗಿಕ ಸೌಲಭ್ಯಗಳು ಅನುಕೂಲ ಒದಗಿಸಬಹುದು

ನಿಮ್ಮ ಗೆಸ್ಟ್‌ಗಳಿಗೆ ಸ್ಮರಣೀಯ ಅನುಭವವನ್ನು ರಚಿಸಲು ಬಯಸುವಿರಾ? ಇದು ಸೂಪರ್ ಐಷಾರಾಮಿ ಸ್ಥಳ ಅಥವಾ ಅತ್ಯುನ್ನತ ಸೌಲಭ್ಯಗಳನ್ನು ಹೊಂದಿರಬೇಕಾಗಿಲ್ಲ. ಬದಲಿಗೆ, ನಿಮ್ಮ ನೆಚ್ಚಿನ ಸ್ಥಳೀಯ ಕಾಫಿಯನ್ನು ಅಥವಾ ಕೈಬರಹದ ಸ್ವಾಗತ ಟಿಪ್ಪಣಿಯನ್ನು ನೀಡುವಂತಹ ದೊಡ್ಡ ಪರಿಣಾಮ ಬೀರುವ ಸಣ್ಣ ನಡೆಗಳನ್ನು ಪರಿಗಣಿಸಿ. ಇಲ್ಲಿ, ಹೋಸ್ಟ್‌ಗಳು ಗೆಸ್ಟ್‌ಗಳಿಗೆ ಮರೆಯಲಾಗದ ವಾಸ್ತವ್ಯವನ್ನು ಒದಗಿಸಲು ಕೆಲವು ಸರಳ, ಬಜೆಟ್ ಸ್ನೇಹಿ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ.

ಸ್ವಾಗತಿಸಲು ಸಿಹಿಯಾದ ಮಾರ್ಗ

ಗೆಸ್ಟ್‌ಗಳು ಆಗಾಗ್ಗೆ ದಣಿದಿರುತ್ತಾರೆ ಮತ್ತು ಸ್ವಲ್ಪ ಅಸಮಾಧಾನಗೊಳ್ಳುತ್ತಾರೆ. ಅವರು ಬಾಗಿಲಿನಿಂದ ಒಳಗೆ ನಡೆದು ಬರುವ ಕ್ಷಣದಿಂದ ಅವರಿಗೆ ಸ್ವಾಗತಕಾರಿಯಾಗಿರುವಂತೆ ಮಾಡಿ.

  • ಸ್ವಾಗತಕಾರಿ ಬುಟ್ಟಿಯನ್ನು ಇರಿಸಿ. "ಗೆಸ್ಟ್‌ಗಳು ದೀರ್ಘ ಪ್ರಯಾಣವನ್ನು ಪೂರ್ಣಗೊಳಿಸಿದರೆ ಮತ್ತು ತಕ್ಷಣ ಶಾಪಿಂಗ್ ಮಾಡಲು ಸಾಧ್ಯವಾಗದಿದ್ದರೆ ತಿನ್ನಲು, ನಾನು ತ್ವರಿತ ಓಟ್ ಮೀಲ್, ಪವರ್‌ಬಾರ್‌ಗಳು, ನಟ್ಸ್‌ಗಳು, ಕುಕೀಸ್ ಮತ್ತು ಮೈಕ್ರೋವೇವ್ ಪಾಪ್‌ಕಾರ್ನ್‌ನೊಂದಿಗೆ ಸ್ವಾಗತ ಬುಟ್ಟಿಯನ್ನು ಹೊಂದಿದ್ದೇನೆ" -ಕ್ಯಾರಿ, ನ್ಯೂಯಾರ್ಕ್ ಸಿಟಿ
  • ವೈಯಕ್ತಿಕಗೊಳಿಸಿದ ಟಿಪ್ಪಣಿಯನ್ನು ಬರೆಯಿರಿ. "ಗೆಸ್ಟ್‌ಗಳು ಇಷ್ಟಪಡುವ ಒಂದು ವಿಷಯವೆಂದರೆ ವೈಯಕ್ತಿಕಗೊಳಿಸಿದ ಸಂದೇಶವನ್ನು ಹೊಂದಿರುವ ಕಾರ್ಡ್. ನಾನು ಯುವ ವಿನ್ಯಾಸಕರು ಮಾಡಿದ ಕಾರ್ಡ್ ಅನ್ನು ಬಳಸುತ್ತೇನೆ. ಅದರ ಥೀಮ್ ನನ್ನ ನಗರ, ಸಾವೊ ಪಾಲೊ ಆಗಿದೆ." -ಪ್ರಿಸಿಲ್ಲಾ ಮತ್ತು ಗೇಬ್ರಿಯಲ್, ಸಾವೊ ಪಾಲೊ
  • ಅವರ ಸೂಟ್‌ಕೇಸ್‌ಗೆ ಸ್ಥಳವನ್ನು ಒದಗಿಸಿ. "ನಾನು ಪ್ರತಿ ಹಾಸಿಗೆಯ ಬುಡದಲ್ಲಿ ಲಗೇಜ್ ಸ್ಟ್ಯಾಂಡ್ ಅನ್ನು ಒದಗಿಸಿದ್ದೇನೆ. ಯಾರಿಗಾದರೂ ಹೆಚ್ಚುವರಿ ಸ್ಥಳ ಬೇಕಾದರೆ ಅಥವಾ ನಾನು ಸ್ವಚ್ಛಗೊಳಿಸುತ್ತಿರುವಾಗ ಅವುಗಳನ್ನು ದೂರವಿಡಲು ಸುಲಭ ಎಂದು ನಾನು ಇದನ್ನು ಇಷ್ಟಪಡುತ್ತೇನೆ." -ಅಲಿಸನ್, ಟ್ರಾವೆರ್ಸ್ ಸಿಟಿ, ಮಿಚಿಗನ್

ನಿಮ್ಮ ಬೆಡ್‌ರೂಮ್‌ ಮತ್ತು ಬಾತ್‌ರೂಮ್‌ ಅನ್ನು ನವೀಕರಿಸಿ

ನೀವು ಅಗತ್ಯ ಸೌಲಭ್ಯಗಳನ್ನು

ಸಂಗ್ರಹಿಸಿದ ನಂತರ, ಹೆಚ್ಚು ಗಮನಾರ್ಹವಾದ ಆತಿಥ್ಯಕ್ಕಾಗಿ ಅವುಗಳನ್ನು ಸ್ಪ್ರಿಂಗ್‌ಬೋರ್ಡ್ ಆಗಿ ಬಳಸಿ.

  • ಹೆಚ್ಚುವರಿ ವಸ್ತುಗಳನ್ನು ಕೈಯಲ್ಲಿ ಇರಿಸಿ. ‌ "ಸಾಕಷ್ಟು ಟವೆಲ್‌ಗಳು, ಹೆಚ್ಚುವರಿ ಹಾಸಿಗೆ, ಸೋಪ್‌ಗಳು ಮತ್ತು ಶ್ಯಾಂಪೂಗಳು ಇವೆ ಎಂದು ನಾನು ಖಚಿತಪಡಿಸುತ್ತೇನೆ." -ಸುಸಾನ್, ಕೊವಿಂಗ್ಟನ್, ಜಾರ್ಜಿಯಾ
  • ಉತ್ತಮವಾದ ಶೌಚಾಲಯಗಳನ್ನು ಒದಗಿಸಿ. "ನಾನು ಗೆಸ್ಟ್‌ಗಳಿಗೆ ವೃತ್ತಿಪರ ಮೇಕಪ್ ವೈಪ್‌ಗಳನ್ನು ನೀಡುತ್ತೇನೆ." -ಬೆವರ್ಲೀ ಮತ್ತು ಸುಝೀ, ಓಕ್‌ಲ್ಯಾಂಡ್, ಕ್ಯಾಲಿಫೋರ್ನಿಯಾ (ಬೋನಸ್: ನಿಮ್ಮ ಶೀಟ್‌ಗಳು ಮತ್ತು ಟವೆಲ್‌ಗಳ ಮೇಲಿನ ಕಲೆಗಳನ್ನು ತೆಗೆದುಹಾಕುವುದನ್ನು ತಪ್ಪಿಸಲು ಕೂಡಾ ಅವು ನಿಮಗೆ ಸಹಾಯ ಮಾಡುತ್ತವೆ!)
  • ನಿಮ್ಮ ಶೌಚಾಲಯಕ್ಕೆ ಹೊಸ ರೂಪ ನೀಡಿ. "ನಾನು ಟಾಯ್ಲೆಟ್ ಪೇಪರ್‌ನ ಕೆಳಭಾಗವನ್ನು ಮಡಚುತ್ತೇನೆ. ಇದು ಒಂದು ಸಣ್ಣ ವಿಷಯ, ಆದರೆ ಇದು ತಾಜಾತನದ ಭಾವ ನೀಡುತ್ತದೆ ಮತ್ತು ನಿಮ್ಮ ಕಾಳಜಿಯನ್ನು ತೋರಿಸುತ್ತದೆ." -ಎಮ್ಮಾ-ಕೇಟ್, ಸ್ಯಾನ್ ಫ್ರಾನ್ಸಿಸ್ಕೋ
  • ಲಕ್ಸ್‌ನ ಸ್ಪರ್ಶವನ್ನು ಸೇರಿಸಿ. "ನಾನು ಆರಾಮದಾಯಕವಾದ ಬಿಳಿ ಟೆರ್ರಿಕ್ಲಾತ್‌ ಅನ್ನು ಒದಗಿಸುತ್ತೇನೆ. ಗೆಸ್ಟ್‌ಗಳು ಸ್ಪಾವನ್ನು ಬಳಸುವಾಗ ಅಥವಾ ವಿಶ್ರಾಂತಿ ಪಡೆಯುವಾಗ ಅವುಗಳನ್ನು ಬಳಸುತ್ತಾರೆ." -ಲಿಂಡಾ, ಲಾ ಕ್ವಿಂಟಾ, ಕ್ಯಾಲಿಫೋರ್ನಿಯಾ
ನಾನು ಇನ್‌ಸ್ಟಂಟ್‌ ಓಟ್‌ಮೀಲ್, ಪವರ್‌ಬಾರ್‌ಗಳು, ನಟ್ಸ್‌, ಕುಕೀಸ್ ಮತ್ತು ಮೈಕ್ರೊವೇವ್ ಪಾಪ್‌ಕಾರ್ನ್‌ ‌ಇರುವ ಸ್ವಾಗತಕಾರಿ ಬುಟ್ಟಿಯನ್ನು ಹೊಂದಿದ್ದೇನೆ.
Carrie,
ನ್ಯೂಯಾರ್ಕ್ ನಗರ

ಆ ಸ್ಥಳೀಯ ರುಚಿಯ ಬಗ್ಗೆ ಎಲ್ಲಾ ವಿಚಾರ

ಪ್ರಯಾಣದ ಆಕರ್ಷಣೆಯ ಒಂದು ಭಾಗವೆಂದರೆ ತಲುಪುವ ಸ್ಥಳದ ವಿಶಿಷ್ಟ ಸುಗಂಧ, ಪರಿಮಳ, ದೃಶ್ಯಗಳು ಮತ್ತು ರಚನೆಗಳನ್ನು ಕಂಡುಹಿಡಿಯುವುದು. ಗೆಸ್ಟ್‌ಗಳೊಂದಿಗೆ ನಿಮ್ಮ ಕೆಲವು ಮೆಚ್ಚಿನ ಸಂಗತಿಗಳನ್ನು ಹಂಚಿಕೊಳ್ಳಿ.

  • ಉಪಾಹಾರವನ್ನು ಸ್ಮರಣೀಯವಾಗಿಸಿ. "ಋತುವಿಗೆ ತಕ್ಕಂತೆ ಉಪಾಹಾರಕ್ಕೆ ಸಣ್ಣ, ಪ್ರಾದೇಶಿಕ ಉಡುಗೊರೆಯನ್ನು ನಾನು ನೀಡುತ್ತೇನೆ. ಉದಾಹರಣೆಗೆ, ಪರ್ವತ ಪ್ರದೇಶ ರೈತರಿಂದ ಖರೀದಿಸಿದ ವಿಶೇಷ ಫರ್-ಟ್ರೀ ಜೇನುತುಪ್ಪ, ಸ್ಥಳೀಯವಾಗಿ ತಯಾರಿಸಿದ ಚೀಸ್ ಅಥವಾ ಹಳ್ಳಿಗಳಲ್ಲಿನ ರೈತರು ತಯಾರಿಸಿದ ತಾಜಾ ಜ್ಯೂಸ್‌ ಮತ್ತು ಹಣ್ಣುಗಳನ್ನು ಒದಗಿಸುತ್ತೇನೆ." -ಕ್ಲಾಡಿಯಾ, ಬ್ಲ್ಯಾಕ್ ಫಾರೆಸ್ಟ್, ಜರ್ಮನಿ
  • ಸಮಗ್ರವಾಗಿ ಯೋಚಿಸಿ. "ನಾನು ಪೋರ್ಟ್‌ಲ್ಯಾಂಡ್‌ನಲ್ಲಿದ್ದೇನೆ. ಆದ್ದರಿಂದ, ಗೆಸ್ಟ್ ಅನುಭವದ ಎಲ್ಲ ಅಂಶಗಳಲ್ಲಿ ಆ ಪೋರ್ಟ್‌ಲ್ಯಾಂಡ್ ಉತ್ಸಾಹವನ್ನು ಗೆಸ್ಟ್‌ಗಳು ಹೊಂದಬೇಕೆಂದು ನಾನು ಬಯಸುತ್ತೇನೆ. Airbnb ವಿಶೇಷತೆಯೇ ಇದು! ನಾನು ಸ್ಥಳೀಯ ಕರಕುಶಲ ಬ್ರ್ಯೂಗಳು, ನನ್ನ ಉದ್ಯಾನದಿಂದ ಹೂವುಗಳು, ನಗರದ ಕುರಿತು ತುಂಬಾ ಪುಸ್ತಕಗಳು, ಸ್ಥಳೀಯ ಸಾವಯವ ಸ್ನ್ಯಾಕ್ ಬಾರ್‌ಗಳನ್ನು ಒದಗಿಸುತ್ತೇನೆ ಮತ್ತು ಒರೆಗಾನಿಯನ್ ವೃತ್ತಪತ್ರಿಕೆ ಪ್ರತಿದಿನ ಬರುತ್ತವೆ. ನಾನು ಸ್ಥಳೀಯ ನಿಯತಕಾಲಿಕೆಗಳನ್ನು ಸಹ ಖರೀದಿಸುತ್ತೇನೆ. ಉತ್ತಮ ಪೋರ್ಟ್‌ಲ್ಯಾಂಡ್ ಕಾಫಿ ಅತ್ಯಂತ ಮಹತ್ವದ್ದು ಮತ್ತು ಹಾಫ್ ಆಂಡ್ ಹಾಫ್‌ ಸಹ ಉತ್ತಮ."-ಲಿಸಾ , ಪೋರ್ಟ್‌ಲ್ಯಾಂಡ್, ಒರೆಗಾನ್
  • ಅನುಭವವನ್ನು ವೈಯಕ್ತೀಕರಿಸಿ. "ನನ್ನ ಗೆಸ್ಟ್‌ಗಳು ಹುಟ್ಟುಹಬ್ಬದ ವಾರಾಂತ್ಯವನ್ನು ಆಚರಿಸುತ್ತಿದ್ದರೆ, ನಾನು ಸ್ಥಳೀಯವಾಗಿ ತಯಾರಿಸಿದ ಕಪ್‌ಕೇಕ್‌ಗಳನ್ನು ನೀಡುತ್ತೇನೆ.” -ಟಿಫಾನಿ, ಹಾಲಿವುಡ್ ಬೀಚ್, ಕ್ಯಾಲಿಫೋರ್ನಿಯಾ
  • ಅವರಿಗೆ ಸಣ್ಣ ಸ್ಮರಣಿಕೆಯನ್ನು ನೀಡಿ. "ಗೆಸ್ಟ್ ಇಟ್ಟುಕೊಳ್ಳಬಹುದಾದ ಅಥವಾ ಮನೆಗೆ ಕಳುಹಿಸಬಹುದಾದ ಸುಂದರ ಸ್ಥಳೀಯ ಪ್ರದೇಶ ಅಥವಾ ಲ್ಯಾಂಡ್‌ಮಾರ್ಕ್‌ ಇರುವ ಪೋಸ್ಟ್‌ಕಾರ್ಡ್ ಅನ್ನು ಇಡುತ್ತೇನೆ." -ಡೆಬಿ, ಥೌಸಂಡ್ ಓಕ್ಸ್, ಕ್ಯಾಲಿಫೋರ್ನಿಯಾ

ಕೆಲವೊಮ್ಮೆ, ಪ್ರಾಯೋಗಿಕತೆಯು ಉತ್ತಮವಾಗಿದೆ

ಪ್ರಾಯೋಗಿಕ ಸೌಲಭ್ಯಗಳು ಉತ್ತಮ ಟ್ರಿಪ್ ಮತ್ತು ಅನಿರೀಕ್ಷಿತವಾಗಿ ನಿರಾಶಾದಾಯಕವಾದ ಟ್ರಿಪ್ ನಡುವೆ ಬದಲಾವಣೆಗೆ ಕಾರಣವಾಗಬಹುದು. ಸನ್‌ಸ್ಕ್ರೀನ್, ಪ್ರಥಮ ಚಿಕಿತ್ಸಾ ಕಿಟ್‌ಗಳು, ಕಂಪ್ಯೂಟರ್ ಅಡಾಪ್ಟರುಗಳು ಮತ್ತು ಹೆಚ್ಚಿನವುಗಳೊಂದಿಗೆ ನೀವು ದಿನವನ್ನು ಉಳಿಸಬಹುದು.

  • ಹೊರಗೆ ಹೋಗಲು ಅವರಿಗೆ ಸಹಾಯ ಮಾಡಿ. "ಬೀಚ್ ಕಿಟ್: ಕುರ್ಚಿ, ಛತ್ರಿಗಳು, ಸರೋಂಗ್, ಪ್ಯಾಡಲ್ ಬಾಲ್, ಐಸ್ ಚೆಸ್ಟ್‌, ಕಾರ್ಡ್‌ಗಳು, ಮಕ್ಕಳ ಆಟಿಕೆಗಳು ಮತ್ತು ಫುಟ್‌ಬಾಲ್. ಸೊಳ್ಳೆ ಕಿಟ್: ರಿಪೆಲ್ಲೆಂಟ್‌ ಮತ್ತು ಸಿಟ್ರೊನೆಲ್ಲಾ ಕ್ಯಾಂಡಲ್‌ಗಳು." -ಡೇನಿಯಲ್, ರಿಯೊ ಡಿ ಜನೈರೊ
  • ಸ್ಥಳೀಯ ವಾತಾವರಣವನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. "ನಾವು ತುಂಬಾ ತೆಳುವಾದ ಮತ್ತು ಲಘು ಪ್ಲಾಸ್ಟಿಕ್‌ನಿಂದ ತಯಾರಿಸಿದ 10 ಬಿಸಾಡಬಹುದಾದ ತುರ್ತು ರೇನ್ ‌ ಕೋಟ್‌ಗಳನ್ನು ಖರೀದಿಸಿದ್ದೇವೆ. ಗೆಸ್ಟ್‌ಗಳು ಉತ್ತಮ ಹವಾಮಾನ ಇದ್ದಾಗ ಆಗಮಿಸಿದ್ದು, ಅವರು ಹೊರಡುವ ಮೊದಲು ಭಾರಿ ಮಳೆಗೆ ಸಿಲುಕುವಂತಹ ಸನ್ನಿವೇಶ ಉಂಟಾಗಬಹುದು."-ಟಿಲ್ ಮತ್ತು ಜುಟ್ಟಾ, ಸ್ಟಟ್ಗಾರ್ಟ್, ಜರ್ಮನಿ
  • ಹೇರ್ ಡ್ರೈಯರ್ ಮತ್ತು ಇಸ್ತ್ರಿಪೆಟ್ಟಿಗೆಯನ್ನು ಒದಗಿಸಿ. "ಹೇರ್ ಡ್ರೈಯರ್ ಮತ್ತು ಇಸ್ತ್ರಿಪೆಟ್ಟಿಗೆ ವೆಚ್ಚದಾಯಕವಲ್ಲ. ಅವುಗಳನ್ನು ನಿಮ್ಮ ಪ್ರಾಪರ್ಟಿಯಲ್ಲಿ ಇಟ್ಟುಕೊಳ್ಳುವುದು ಗೆಸ್ಟ್‌ ದಿನವನ್ನು ಉಳಿಸಬಹುದಾದ ಸಣ್ಣ ವಿಷಯಗಳ ಬಗ್ಗೆಯೂ ನೀವು ಯೋಚಿಸಿದ್ದೀರಿ ಎಂಬುದನ್ನು ವಿವರಿಸುತ್ತದೆ." -ರಿಚರ್ಡ್, ಲೆನಾಕ್ಸ್, ಮಸಾಚುಸೆಟ್ಸ್
  • ಕೆಲವು ಕುಟುಂಬ ಸ್ನೇಹಿ ಸೌಲಭ್ಯಗಳನ್ನು ಸೇರಿಸಿ. "ಪ್ರಮುಖವಾದ ಅತ್ಯಂತ ಮೂಲಭೂತ ವಿಷಯ: ಶಿಶುಗಳನ್ನು ಕರೆದುಕೊಂಡು ಹೋಗಲು ಅಗತ್ಯವಿರುವ ಕುಶನ್‌ಗಳನ್ನು ಹೊಂದಿರುವ ಹಳೆಯ ವ್ಯಾಗನ್." -ಚಂತಲ್, ದಿನನ್, ಫ್ರಾನ್ಸ್

ಎಲ್ಲಿಂದ ಪ್ರಾರಂಭಿಸಬೇಕು ಎಂದು ಇನ್ನೂ ಖಚಿತವಾಗಿಲ್ಲವೇ? ಗೆಸ್ಟ್‌ ಅನುಭವ ಪಡೆಯಲು ಒಂದು ರಾತ್ರಿ ನಿಮ್ಮ ಸ್ಥಳದಲ್ಲಿ ವಾಸಿಸಿ. ಮತ್ತು ನಿಮ್ಮ ಗೆಸ್ಟ್‌ಗಳ ಪ್ರತಿಕ್ರಿಯೆಯ ಬಗ್ಗೆ ಹೆಚ್ಚು ಗಮನ ಕೊಡಿ-ಅವರು ವಿವಿಧ ದೃಷ್ಟಿಕೋನಗಳನ್ನು ಹೊತ್ತು ಬರುತ್ತಾರೆ ಮತ್ತು ನೀವು ಸ್ವಂತವಾಗಿ ಯೋಚಿಸದಿರುವ ವಿಚಾರಗಳನ್ನು ನೀಡುತ್ತಾರೆ. ಕಾಲ ಸರಿದಂತೆ, ನಿಮ್ಮ ಲಿಸ್ಟಿಂಗ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಉತ್ತಮ ವಿಧಾನವನ್ನು ನೀವು ಕಂಡುಕೊಳ್ಳುತ್ತೀರಿ. ಉತ್ತಮ ವಿಮರ್ಶೆಗಳನ್ನು ಪಡೆಯಿರಿ!

ವಿಶೇಷ ಆಕರ್ಷಣೆಗಳು

  • ನಿಮ್ಮ ಸೌಲಭ್ಯಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಮಾರ್ಗಗಳನ್ನು ಕಂಡುಕೊಳ್ಳಿ

  • ಸ್ವಾಗತಕಾರಿ ಬುಟ್ಟಿ ಅಥವಾ ಕೈಬರಹದ ಟಿಪ್ಪಣಿಯಂತಹ ಚಿಂತನಶೀಲ ಶುಭಾಶಯಗಳು ಬಹಳಷ್ಟು ಸಹಾಯ ಮಾಡುತ್ತವೆ

  • ಗೆಸ್ಟ್‌ಗಳಿಗೆ ವಿಶಿಷ್ಟ ಅನುಭವವನ್ನು ನೀಡಲು ಸ್ಥಳೀಯ ಟ್ರೀಟ್‌ಗಳನ್ನು ಹಂಚಿಕೊಳ್ಳಿ

  • ಸನ್‌ಸ್ಕ್ರೀನ್, ಕೀಟ ನಿವಾರಕ ಮತ್ತು ಛತ್ರಿಗಳಂತಹ ಪ್ರಾಯೋಗಿಕ ಸೌಲಭ್ಯಗಳು ಅನುಕೂಲ ಒದಗಿಸಬಹುದು

Airbnb
ಡಿಸೆಂ 11, 2019
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ