ಹುಡುಕಾಟ ಇನ್‌ಪುಟ್‌ನಲ್ಲಿ ಟೈಪ್ ಮಾಡಿದ ನಂತರ ಸಲಹೆಗಳು ಕಾಣಿಸಿಕೊಳ್ಳುತ್ತವೆ. ವಿಮರ್ಶಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಬಾಣಗುರುತುಗಳನ್ನು ಬಳಸಿ. ಆಯ್ಕೆ ಮಾಡಲು ಎಂಟರ್ ಬಳಸಿ. ಆಯ್ಕೆ ಒಂದು ನುಡಿಗಟ್ಟು ಆಗಿದ್ದರೆ, ಆ ನುಡಿಗಟ್ಟನ್ನು ಹುಡುಕಾಟಕ್ಕೆ ಸಲ್ಲಿಸಲಾಗುತ್ತದೆ. ಸಲಹೆಯು ಒಂದು ಲಿಂಕ್ ಆಗಿದ್ದರೆ, ಬ್ರೌಸರ್ ಆ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.
ಹುಡುಕಾಟ ಇನ್‌ಪುಟ್‌ನಲ್ಲಿ ಟೈಪ್ ಮಾಡಿದ ನಂತರ ಸಲಹೆಗಳು ಕಾಣಿಸಿಕೊಳ್ಳುತ್ತವೆ. ವಿಮರ್ಶಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಬಾಣಗುರುತುಗಳನ್ನು ಬಳಸಿ. ಆಯ್ಕೆ ಮಾಡಲು ಎಂಟರ್ ಬಳಸಿ. ಆಯ್ಕೆ ಒಂದು ನುಡಿಗಟ್ಟು ಆಗಿದ್ದರೆ, ಆ ನುಡಿಗಟ್ಟನ್ನು ಹುಡುಕಾಟಕ್ಕೆ ಸಲ್ಲಿಸಲಾಗುತ್ತದೆ. ಸಲಹೆಯು ಒಂದು ಲಿಂಕ್ ಆಗಿದ್ದರೆ, ಬ್ರೌಸರ್ ಆ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.

ಪರಿಣಾಮಕಾರಿಯಾಗಿ ಸಂವಹನ ನಡೆಸಿ

ಗೆಸ್ಟ್‌ಗಳಿಗೆ ಸ್ಪಷ್ಟ ಮತ್ತು ಸಮಯೋಚಿತ ಸಂದೇಶಗಳನ್ನು ಕಳುಹಿಸಿ.
Airbnb ಅವರಿಂದ ಜನ 10, 2024ರಂದು
ಜುಲೈ 26, 2024 ನವೀಕರಿಸಲಾಗಿದೆ

ಗೆಸ್ಟ್‌ಗಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುವುದು ಉತ್ತಮ ವಾಸ್ತವ್ಯವನ್ನು ಅದ್ಭುತವಾಗಿಸಲು ಸಹಾಯ ಮಾಡುತ್ತದೆ. ಪ್ರಮುಖ ವಿವರಗಳು ಮತ್ತು ಜ್ಞಾಪನೆಗಳನ್ನು ಹಂಚಿಕೊಳ್ಳಲು, ಪ್ರಶ್ನೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಮತ್ತು ಆತ್ಮೀಯ ಸ್ವಾಗತವನ್ನು ಕೋರಲು Airbnb ಯ ಮೆಸೇಜಿಂಗ್ ವೈಶಿಷ್ಟ್ಯಗಳನ್ನು ಬಳಸಿ.

ಮೂಲಭೂತ ವಿಷಯಗಳೊಂದಿಗೆ ಪ್ರಾರಂಭಿಸುವುದು

ನೀವು ಮಾಹಿತಿಯನ್ನು ತಲುಪಿಸುವ ವಿಧಾನವು ವಾಸ್ತವ್ಯಕ್ಕಾಗಿ ಸ್ವಾಗತಾರ್ಹ ಭಾವನೆ ಮೂಡಿಸಲು ಸಹಾಯ ಮಾಡುತ್ತದೆ. ಇದಕ್ಕೆ ಸಾಧ್ಯವಾದಷ್ಟೂ ಪ್ರಯತ್ನಿಸಿ:

  • ಲಭ್ಯವಿರಿ. ಗೆಸ್ಟ್‌ಗಳ ಸಂದೇಶಗಳನ್ನು ತ್ವರಿತವಾಗಿ ಸ್ವೀಕರಿಸಲು ಮತ್ತು ಪ್ರತಿಕ್ರಿಯಿಸಲು ಅಧಿಸೂಚನೆಗಳನ್ನು ಆನ್ ಮಾಡಿ. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಹೋಸ್ಟ್ ಆಗಿರುವ ಆನೆಟ್ ಅವರು ಸಣ್ಣ ಸಮಸ್ಯೆಗಳಿಗೂ ಸಹ, "ತಕ್ಷಣ ನಮ್ಮನ್ನು ಸಂಪರ್ಕಿಸಿ ಮತ್ತು ನಾವು ಅದನ್ನು ನೋಡಿಕೊಳ್ಳುತ್ತೇವೆ" ಎಂದು ಗೆಸ್ಟ್‌ಗಳಿಗೆ ತಿಳಿಸುತ್ತಾರೆ.

  • ಪಾರದರ್ಶಕವಾಗಿರಿ. ಗೆಸ್ಟ್‌ಗಳು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನಿಖರವಾಗಿ ಚಿತ್ರಿಸಿ. "ನಿಮ್ಮ ಗೆಸ್ಟ‌ಗಳಿಗೆ ನೀವು ಏನು ದೊರಕಲಿದೆ ಎಂದು ಹೇಳುತ್ತೀರೋ, ಅವರು ಬಂದಾಗ ಅವರಿಗೆ ಅದೇ ದೊರಕಬೇಕು" ಎಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹೋಸ್ಟ್ ಆಗಿರುವ ಡೇನಿಯಲ್ ಹೇಳುತ್ತಾರೆ.

  • ಮುಕ್ತರಾಗಿರಿ. ನೀವು ಅವರಿಗೆ ಹೇಗೆ ಆರಾಮದಾಯಕ ಮತ್ತು ಸ್ವಾಗತಾರ್ಹ ಭಾವನೆ ಮೂಡಿಸಬಹುದು ಎಂದು ಗೆಸ್ಟ್‌ಗಳನ್ನು ಕೇಳಿ. "ಹೋಸ್ಟ್ ಆಗಿ ನಾವು ನಿರೀಕ್ಷಿಸದ ವಿಷಯಗಳು ಇರುತ್ತವೆ" ಎಂದು ನ್ಯೂ ಮೆಕ್ಸಿಕೋದ ಸಾಂಟಾ ಫೆನಲ್ಲಿರುವ ಸೂಪರ್‌ಹೋಸ್ಟ್ ಸಾಡಿ ಹೇಳುತ್ತಾರೆ.

  • ಕಾಳಜಿ ವಹಿಸಿ. ಸಮಸ್ಯೆಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದು ಶಾಶ್ವತವಾದ ಅನಿಸಿಕೆಯನ್ನು ಉಂಟುಮಾಡಬಹುದು. "ನೀವು ಕಠಿಣ ಪರಿಸ್ಥಿತಿಯಲ್ಲಿ ಸಹಾನುಭೂತಿಯನ್ನು ತೋರಿಸುವ ಮೂಲಕ ಮತ್ತು ಅದನ್ನು ಪರಿಹರಿಸಲು ವೇಗವಾಗಿ ಕೆಲಸ ಮಾಡುವ ಮೂಲಕ ಅದನ್ನು ಸರಿಯಾಗಿ ನಿರ್ವಹಿಸಿದರೆ, ಕಠಿಣ ಪರಿಸ್ಥಿತಿಯನ್ನು ಮತ್ತೊಂದು ಬುಕಿಂಗ್ ಆಗಿ ನೀವು ಪರಿವರ್ತಿಸಬಹುದು" ಎಂದು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಹೋಸ್ಟ್ ಸಲಹಾ ಮಂಡಳಿಯ ಸದಸ್ಯರು ಮತ್ತು ಸೂಪರ್‌ಹೋಸ್ಟ್ ಆದ ಫೆಲಿಸಿಟಿ ಹೇಳುತ್ತಾರೆ.

ಪ್ರಮುಖ ಕ್ಷಣಗಳಲ್ಲಿ ಮೆಸೇಜ್ ಮಾಡುವುದು

ಸುಗಮ ಅನುಭವವನ್ನು ಒದಗಿಸಲು ಮತ್ತು ಪ್ರಶ್ನೆಗಳನ್ನು ಕಡಿಮೆ ಮಾಡಲು ಗೆಸ್ಟ್‌ಗಳು ಏನನ್ನು ತಿಳಿದುಕೊಳ್ಳಬೇಕು ಎಂದು ನಿರೀಕ್ಷಿಸಿ. ಟ್ರಿಪ್ ಯೋಜನೆ ಮತ್ತು ಪ್ರಯಾಣದ ಪ್ರಮುಖ ಕ್ಷಣಗಳಲ್ಲಿ ಇವು ಸೇರಿವೆ:

  • ಬುಕಿಂಗ್ ವಿಚಾರಣೆ ಅಥವಾ ವಿನಂತಿ. ಗೆಸ್ಟ್‌ಗಳು ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ನಿಮಗೆ 24 ಗಂಟೆಗಳಿರುತ್ತದೆ, ಆದರೆ ಸಾಧ್ಯವಾದಷ್ಟು ಬೇಗ ಉತ್ತರಿಸುವುದು ಉತ್ತಮ. ಹೆಚ್ಚಿನ ಹೋಸ್ಟ್‌ಗಳು ಇದನ್ನು ಒಂದು ಗಂಟೆಯೊಳಗೆ ಮಾಡುತ್ತಾರೆ.

  • ಬುಕಿಂಗ್ ದೃಢೀಕರಣ. ಸಂಪರ್ಕಿಸಲು "ಬುಕಿಂಗ್ ಮಾಡಿದ್ದಕ್ಕೆ ಧನ್ಯವಾದಗಳು" ಎಂಬ ಸಂದೇಶವನ್ನು ಕಳುಹಿಸಿ ಮತ್ತು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನೀವು ಲಭ್ಯವಿದ್ದೀರಿ ಎಂದು ಗೆಸ್ಟ್‌ಗಳಿಗೆ ತಿಳಿಸಿ.

  • ಆಗಮನ. ಆಗಮನಕ್ಕೆ ಒಂದು ಅಥವಾ ಎರಡು ದಿನಗಳ ಮೊದಲು ಗೆಸ್ಟ್‌ಗಳಿಗೆ ಅವರು ನಿಮ್ಮ ಚೆಕ್-ಇನ್ ಸೂಚನೆಗಳನ್ನು ಆ್ಯಪ್‌ನಲ್ಲಿ ಎಲ್ಲಿ ಕಾಣಬಹುದು ಎಂಬುದನ್ನು ನೆನಪಿಸಿ ಮತ್ತು ಒಳಗೆ ಪ್ರವೇಶಿಸುವ ಬಗ್ಗೆ ಯಾವುದೇ ಪ್ರಮುಖ ಟಿಪ್ಪಣಿಗಳನ್ನು ಹಂಚಿಕೊಳ್ಳಿ.

  • ವಾಸ್ತವ್ಯದ ಸಮಯದಲ್ಲಿ. ಗೆಸ್ಟ್‌ಗಳು ಆಗಮಿಸಿದ ಸ್ವಲ್ಪ ಸಮಯದ ನಂತರ ಅವರು ತಮ್ಮ ವಾಸ್ತವ್ಯವನ್ನು ಆರಾಮದಾಯಕವಾಗಿಸಲು ಅಗತ್ಯವಿರುವ ಎಲ್ಲವನ್ನೂ ಹೊಂದಿದ್ದಾರೆಯೇ ಎಂದು ಅವರನ್ನು ಕೇಳಿ. ನಿಮ್ಮ ನೆಚ್ಚಿನ ಸ್ಥಳೀಯ ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಮನೋರಂಜನೆಗಳನ್ನು ನೀವು ಶಿಫಾರಸು ಮಾಡಬಹುದು.

  • ನಿರ್ಗಮನ. ಚೆಕ್ಔಟ್ ಮಾಡಿದ ಸ್ವಲ್ಪ ಸಮಯದ ನಂತರ ಗೆಸ್ಟ್‌ಗಳಿಗೆ ಧನ್ಯವಾದಗಳನ್ನು ತಿಳಿಸುವ ಟಿಪ್ಪಣಿ ಕಳುಹಿಸಿ ಮತ್ತು ಅದರಲ್ಲಿ ವಿಮರ್ಶೆಯನ್ನು ನೀಡುವಂತೆ ಕೇಳಿಕೊಳ್ಳಿ. ನಿಮಗೆ ಸಾಧ್ಯವಾದಷ್ಟು ಬೇಗ ಅವರಿಗೆ ವಿಮರ್ಶೆ ನೀಡಿ.

ನಿಮ್ಮ ಮೆಸೇಜ್‌ಗಳನ್ನು ಆಟೋಮೆಟ್‌ ಮಾಡುವುದು

ಉತ್ತಮ ಪ್ರತಿಕ್ರಿಯೆ ದರವನ್ನು ಹೊಂದಿರುವುದು Airbnb ಯಲ್ಲಿ ಗೆಸ್ಟ್‌ಗಳ ಹುಡುಕಾಟಗಳಲ್ಲಿ ನಿಮ್ಮ ಲಿಸ್ಟಿಂಗ್ ಮೊದಲು ಗೋಚರಿಸಲು ಸಹಾಯ ಮಾಡುವ ಹಲವಾರು ಅಂಶಗಳಲ್ಲಿ ಒಂದಾಗಿದೆ.

ವಿಳಂಬವಿಲ್ಲದೆ ವಾಡಿಕೆಯ ಪ್ರಶ್ನೆಗಳನ್ನು ನಿರೀಕ್ಷಿಸಲು ಮತ್ತು ಪ್ರತಿಕ್ರಿಯಿಸಲು ಸಂದೇಶಗಳ ಟ್ಯಾಬ್‌ನಲ್ಲಿ ಈ ವೈಶಿಷ್ಟ್ಯಗಳನ್ನು ಬಳಸಿ:

ತ್ವರಿತ ಪ್ರತ್ಯುತ್ತರಗಳು

  • ಮಾಹಿತಿಯನ್ನು ಸುಲಭವಾಗಿ ಹಂಚಿಕೊಳ್ಳಲು ಮೆಸೇಜ್ ಟೆಂಪ್ಲೆಟ್‌ಗಳನ್ನು ರಚಿಸಿ, ಉದಾಹರಣೆಗೆ, ಎಲ್ಲಿ ಪಾರ್ಕ್ ಮಾಡಬೇಕು ಅಥವಾ ಗೆಸ್ಟ್‌ಗಳು ಚೆಕ್-ಇನ್ ಮಾಡುವ ಮೊದಲು ಲಗೇಜ್ ಅನ್ನು ಡ್ರಾಪ್ ಆಫ್ ಮಾಡಬಹುದೇ ಎಂಬುದು.

  • ಗೆಸ್ಟ್, ರಿಸರ್ವೇಶನ್ ಮತ್ತು ಲಿಸ್ಟಿಂಗ್ ವಿವರಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡುವ ಶಾರ್ಟ್‌ಕೋಡ್‌ಗಳೊಂದಿಗೆ ನೀವು ಈ ಟೆಂಪ್ಲೆಟ್‌ಗಳನ್ನು ವೈಯಕ್ತೀಕರಿಸಬಹುದು.

  • ಒಮ್ಮೆ ನೀವು ತ್ವರಿತ ಪ್ರತ್ಯುತ್ತರಗಳನ್ನು ಹೊಂದಿಸಿದ ನಂತರ, ಸಂದೇಶಗಳ ಟ್ಯಾಬ್‌ನಲ್ಲಿನ ವೈಶಿಷ್ಟ್ಯವು ಗೆಸ್ಟ್‌ನ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು AI ಅನ್ನು ಬಳಸುತ್ತದೆ ಮತ್ತು ನಿಮ್ಮ ಹೆಚ್ಚು ಪ್ರಸ್ತುತವಾದ ಪ್ರತ್ಯುತ್ತರವನ್ನು ಸ್ವಯಂಚಾಲಿತವಾಗಿ ಸೂಚಿಸುತ್ತದೆ.

ಶೆಡ್ಯೂಲ್ ಮಾಡಿರುವ ಮೆಸೇಜ್‌ಗಳು

  • ಸ್ಟ್ಯಾಂಡರ್ಡ್ ಮೆಸೇಜ್‌ಗಳನ್ನು ರಚಿಸಿ ಮತ್ತು ಮೇಲೆ ತಿಳಿಸಿದಂತಹ ಪ್ರಮುಖ ಕ್ಷಣಗಳಲ್ಲಿ ಗೆಸ್ಟ್‌ಗಳಿಗೆ ಅವುಗಳ ಡೆಲಿವರಿಯನ್ನು ನಿಗದಿಪಡಿಸಿ.

  • ನೀವು ಶಾರ್ಟ್‌ಕೋಡ್‌ಗಳೊಂದಿಗೂ ಈ ಸಂದೇಶಗಳನ್ನು ವೈಯಕ್ತೀಕರಿಸಬಹುದು.

ಈ ಲೇಖನದ ಪ್ರಕಟಣೆಯ ನಂತರ, ಅದು ಒಳಗೊಂಡಿರುವ ಮಾಹಿತಿಯು ಬದಲಾಗಿರಬಹುದು.

Airbnb
ಜನ 10, 2024
ಇದು ಸಹಾಯಕವಾಗಿದೆಯೇ?