ಗುಣಮಟ್ಟದ ಅನುಭವದ 3 ಸ್ತಂಭಗಳು
ವಿಶೇಷ ಆಕರ್ಷಣೆಗಳು
ಗೆಸ್ಟ್‌ಗಳಿಗೆ ತಾವಾಗಿಯೇ ಸುಲಭವಾಗಿ ಮಾಡಲು ಸಾಧ್ಯವಾಗದೇ ಇರುವಂತಹದ್ದನ್ನು ಒದಗಿಸಿ
- ನಿಮ್ಮ ಪರಿಣತಿ ಮತ್ತು ಅನನ್ಯ ದೃಷ್ಟಿಕೋನವನ್ನು ಪರಿಗಣಿಸಿ
- ಗೆಸ್ಟ್‌ಗಳಿಗೆ ಜನರೊಂದಿಗೆ ಅರ್ಥಪೂರ್ಣ ಸಂಪರ್ಕಗಳನ್ನು ಸಾಧಿಸಲು ನೆರವಾಗಿ
Airbnb ಯ ಗುಣಮಟ್ಟದ ಮಾನದಂಡಗಳು ಮತ್ತು ಅನುಭವಗಳಿಗಾಗಿ
ಇರುವ ಅವಶ್ಯಕತೆಗಳನ್ನು ತಿಳಿದುಕೊಳ್ಳಿ
ನಿಮ್ಮ ಪ್ರಪಂಚದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಪ್ರಯಾಣಿಕರ ಮತ್ತು ಸ್ಥಳೀಯರ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಸಿದ್ಧರಿದ್ದೀರಾ? ಮೊದಲ ಹಂತ: Airbnb ಯ ಗುಣಮಟ್ಟದ ಮಾನದಂಡಗಳು ಮತ್ತು ಅವಶ್ಯಕತೆಗಳನ್ನು, ಚೆನ್ನಾಗಿ ಅರ್ಥಮಾಡಿಕೊಳ್ಳಿ, ತಮ್ಮ ಅನುಭವವನ್ನು ಪ್ರಕಟಿಸಬೇಕಾದರೆ ಎಲ್ಲಾ ಗೆಸ್ಟ್‌ಗಳು ಇದನ್ನು ಕಡ್ಡಾಯ ಪಾಲಿಸಬೇಕಾಗುತ್ತದೆ. ಈಗ ನೀವು ಮೂಲಭೂತ ಅಂಶಗಳನ್ನು ನಿಭಾಯಿಸಿದ್ದೀರಿ, ಉತ್ತಮ-ಗುಣಮಟ್ಟದ ಅನುಭವಕ್ಕಾಗಿ Airbnbಯ 3 ಸ್ತಂಭಗಳ ಬಗ್ಗೆ ನೋಡೋಣ ಮತ್ತು ನಿಮ್ಮ ಅನುಭವವನ್ನು ಸಲ್ಲಿಸಲು ನಿಮ್ಮ ವಿಶಿಷ್ಟ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಮಾರ್ಗಗಳನ್ನು ಅನ್ವೇಷಿಸೋಣ.
ಗುಣಮಟ್ಟದ 3 ಸ್ತಂಭಗಳು
ಅನುಭವದ ಹೋಸ್ಟ್‌ಗಳು ಪ್ರಯಾಣಿಕರನ್ನು ತಮ್ಮ ಜಗತ್ತುಗಳೊಳಗೆ ಕರೆದೊಯ್ಯುತ್ತಾರೆ, ಕೆಲವೇ ಗಂಟೆಗಳು ಆಗಿದ್ದರೂ ಸರಿಯೇ ತಮ್ಮಲ್ಲಿ ಒಬ್ಬರು ಅನ್ನೋ ಭಾವನೆ ಅನ್ನು ಮೂಡಿಸುತ್ತಾರೆ. ಅನುಭವ ಸಲ್ಲಿಕೆ ಪ್ರದರ್ಶಿಸಬೇಕಾದ 3 ಗುಣಮಟ್ಟದ ಸ್ತಂಭಗಳು: ಪರಿಣತಿ, ಆಂತರಿಕ ಪ್ರವೇಶ, ಮತ್ತು ಸಂಪರ್ಕ. ಈ ಸ್ತಂಭಗಳು ಸಾಮಾನ್ಯ ಪ್ರಯಾಣಗಳಿಂದ ಅನುಭವಗಳನ್ನು ಪ್ರತ್ಯೇಕಿಸುತ್ತವೆ ಮತ್ತು ಮಾರುಕಟ್ಟೆಯು ಜ್ಞಾನವುಳ್ಳ, ಆತಿಥ್ಯ ಹೋಸ್ಟ್‌ಗಳ ನೇತೃತ್ವದಲ್ಲಿರುವ ಉತ್ತಮ-ಗುಣಮಟ್ಟದ ಅನುಭವ ಲಿಸ್ಟಿಂಗ್‌ಗಳನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ.
ಈ ಸ್ತಂಭಗಳ ಬಗ್ಗೆ ನೀವು ಇನ್ನಷ್ಟು ಓದಿದಂತೆ ಮತ್ತು ನಿಮ್ಮ ಅನುಭವದ ಕಲ್ಪನೆಯ ಬಗ್ಗೆ ಯೋಚಿಸಿದಂತೆ, ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ:
- ನಿಮ್ಮ ವಿಷಯದ ಬಗ್ಗೆ ನಿಮಗಿರುವ ಪರಿಣತಿಯನ್ನು ಮಾತ್ರವಲ್ಲ, ಈ ವಿಷಯ ಅಥವಾ ಚಟುವಟಿಕೆಯನ್ನು ನೀವು ಹೇಗೆ ವಿಶಿಷ್ಟ ದೃಷ್ಟಿಕೋನದಲ್ಲಿ ತೋರಿಸಬಹುದು ಎನ್ನುವುದನ್ನು ಪರಿಗಣಿಸಿ.
- ನಿಮ್ಮ ಕಲ್ಪನೆಯು ಮುಕ್ತವಾಗಿರಲಿ; ಅನುಭವಗಳು ಹೇಗಿರಬೇಕೆಂದರೆ ಗೆಸ್ಟ್‌ಗಳು ತಾವಾಗಿಯೇ ಇದನ್ನು ಅನುಭವಿಸಲು ಸಾಧ್ಯವಿಲ್ಲ ಅನ್ನುವ ರೀತಿಯ ವೈಶಿಷ್ಟ್ಯಗಳನ್ನು ಸೇರಿಸಿ. ಸಾಮಾನ್ಯ ಪ್ರವಾಸಿ ಚಟುವಟಿಕೆಗಳಿಂದ ನಿಮ್ಮ ಅನುಭವವನ್ನು ಪ್ರತ್ಯೇಕವಾಗಿ ತೋರಿಸಲು ಪ್ರಯತ್ನಿಸಿ.
- ಉತ್ತಮ ಅನುಭವಗಳು ಅರ್ಥಪೂರ್ಣವಾದ ಮಾನವ ಸಂಪರ್ಕಗಳನ್ನು ಸೃಷ್ಟಿಸುತ್ತವೆ—ನಿಮ್ಮ ಗೆಸ್ಟ್‌ಗಳಿಗೆ ತಾವು ಅಪರಿಚಿತರು ಅನ್ನೋ ಭಾವನೆ ಬರದೆ ತಮ್ಮಲ್ಲಿ ಒಬ್ಬರು ಅನ್ನೋ ಭಾವನೆಯನ್ನು ತರಲು ನೀವು ಏನು ಮಾಡುತ್ತೀರಿ?
ಪರಿಣಿತಿ
ನಿಮಗೆ ಕರಕುಶಲತೆ, ಚಟುವಟಿಕೆ ಮತ್ತು/ಅಥವಾ ನಿಮ್ಮ ಸಮುದಾಯದ ಬಗ್ಗೆ ತೀವ್ರಾಸಕ್ತಿ ಇದೆಯಾ? ನಿಮ್ಮ ಅನುಭವದ ಕಲ್ಪನೆಯನ್ನು ವಿನ್ಯಾಸಿಸುವಾಗ ಮತ್ತು ವಿಮರ್ಶೆಗಾಗಿ ಸಲ್ಲಿಸುವಾಗ, ಅದನ್ನು ಪ್ರಾರಂಭಿಸಲು ಇದು ಉತ್ತಮ ಸ್ಥಳವಾಗಿದೆ! ಪರಿಣಿತ ಹೋಸ್ಟ್‌ಗಳು ಉತ್ಸಾಹದ ಜೊತೆಗೆ ತಮ್ಮ ಚಟುವಟಿಕೆಯ ಮುಖ್ಯ ವಿಷಯದ ಬಗ್ಗೆ ಅವರಿಗಿರುವ ವಿಶಿಷ್ಟ ಪರಿಣತಿ, ಅರ್ಹತೆ ಅಥವಾ ದೃಷ್ಟಿಕೋನವನ್ನು ಪರಿಗಣಿಸಬೇಕು. ನಿಮ್ಮ ಅನುಭವ ಸಲ್ಲಿಕೆಯಲ್ಲಿ ಇದನ್ನು ಸ್ಪಷ್ಟವಾಗಿ ತಿಳಿಸಲು ಮರೆಯದಿರಿ.
ವಿಭಿನ್ನ ಹಂತದ ಯಶಸ್ಸಿನೊಂದಿಗೆ, ವಿಷಯದ ಕುರಿತು ನಿಮ್ಮ ಪರಿಣತಿಯನ್ನು ನೀವು ಹೇಗೆ ವಿವರಿಸಬಹುದು ಎಂಬುದಕ್ಕೆ ಮೂರು ಉದಾಹರಣೆಗಳು ಇಲ್ಲಿವೆ:
ಹೀಗೆ ಹೇಳುವುದನ್ನು ತಪ್ಪಿಸಿ:"ನಾನು ಕ್ಯಾಲಿಗ್ರಫಿಯನ್ನು ಪ್ರೀತಿಸುತ್ತೇನೆ!" ಈ ಹೇಳಿಕೆಯು ನೀವು ಕ್ರಾಫ್ಟ್‌ನಲ್ಲಿ ಹೇಗೆ ಅಥವಾ ಏಕೆ ಪರಿಣಿತರಾಗಿದ್ದೀರಿ ಎಂಬುದರ ಬಗ್ಗೆ ಸಾಕಷ್ಟು ವಿವರಗಳನ್ನು ನೀಡುವುದಿಲ್ಲ.
ಉತ್ತಮ: “ನಾನು ಐದು ವರ್ಷಗಳು ಕ್ಯಾಲಿಗ್ರಫಿಯನ್ನು ಅಧ್ಯಯನ ಮಾಡಿದ್ದೇನೆ ಮತ್ತು ಇತ್ತೀಚೆಗೆ ನನ್ನ ಸ್ನೇಹಿತರಿಗೆ ಕಲಿಸಲು ಪ್ರಾರಂಭಿಸಿದ್ದೇನೆ.” ಈ ಹೇಳಿಕೆಯು, ಈ ಅನುಭವವನ್ನು ಮುನ್ನಡೆಸಲು ನಿಮಗೆ ಯಾವ ಅರ್ಹತೆ ಇದೆ ಎಂಬುದರ ಕುರಿತು ಕೆಲವು ಉಪಯುಕ್ತ ಒಳನೋಟವನ್ನು ನೀಡುತ್ತದೆ.
ಅತ್ಯುತ್ತಮ: "ನಾನು SF ಏಷ್ಯನ್ ಆರ್ಟ್ಸ್ ಸೆಂಟರ್‌ನಲ್ಲಿ ಕ್ಯಾಲಿಗ್ರಫಿ ಕಲಿಸುತ್ತೇನೆ. ನಾನು ಇತ್ತೀಚೆಗೆ ಡಿಜಿಟಲ್ ಯುಗದಲ್ಲಿ ಕ್ಯಾಲಿಗ್ರಫಿ ಕುರಿತು ಅಂತರರಾಷ್ಟ್ರೀಯ ಕ್ಯಾಲಿಗ್ರಫಿ ಸಮ್ಮೇಳನದಲ್ಲಿ ಮಾತನಾಡಿದ್ದೇನೆ." ಈ ವಿಷಯದಲ್ಲಿ ನಿಮಗಿರುವ ಗಮನಾರ್ಹ ಪರಿಣತಿಯನ್ನು ಈ ಹೇಳಿಕೆ ತೋರಿಸುತ್ತದೆ.
ಎಲಿಯೊನೊರಾ ಮತ್ತು ಅಕ್ರೆಫ್, ಅಡುಗೆ ಮಾಡುವ ಕಲಾವಿದಾ ಹೋಸ್ಟ್‌ಗಳು!, ನಿಮ್ಮ ಬಗ್ಗೆ ವಿಭಾಗವನ್ನು ರಚಿಸಿದ್ದಾರೆ ಅದು ಅವರ ಪರಿಣತಿಯನ್ನು ಅತ್ಯುತ್ತಮವಾಗಿ ಎತ್ತಿ ತೋರಿಸುತ್ತದೆ:
ಉದಾಹರಣೆ 1: ಎಲಿಯೊನೊರಾ ಅವರು 15 ವರ್ಷಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಭವವಿರುವ ಬಾಣಸಿಗರಾಗಿದ್ದಾರೆ. ಅವರು ಇಟಾಲಿಯಾ 7 ರಲ್ಲಿ ಟಿವಿ ಕಾರ್ಯಕ್ರಮದ ಬಾಣಸಿಗರಾಗಿದ್ದು, ತಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಆಸಕ್ತಿಯಿಂದ ಅವರು ತಮ್ಮ ಅಜ್ಜಿ ಮತ್ತು ತಾಯಿಯ ಹೆಜ್ಜೆಗಳನ್ನು ಅನುಸರಿಸಿದ್ದಾರೆ, ಆದರೆ ಅವರು ಅಪ್‌ಡೇಟ್ ಆಗುತ್ತಿರುತ್ತಾರೆ, ವಾಸ್ತವವಾಗಿ ಪೇಸ್ಟ್ರಿ, ವೈನ್ ಮತ್ತು ಆಹಾರ ಜೋಡಣೆಯ ಪ್ರಾವಿಣ್ಯತೆಯಲ್ಲದೆ, ಅವರು ಪಿಜ್ಜೈಯೋಲೊದಲ್ಲೂ ಪರಿಣತಿ ಹೊಂದಿದ್ದಾರೆ. ಅವರ ಮೊದಲ ಕುಕ್‌ಬುಕ್ ಅನ್ನು 2018ರಲ್ಲಿ ಬಿಡುಗಡೆ ಮಾಡಲಾಯಿತು.
ಮೆಕ್ಸಿಕೋ ನಗರದಲ್ಲಿ ಪ್ರಾಚೀನ ತಂತ್ರಗಳನ್ನು ಬಳಸಿಕೊಂಡು ನ್ಯಾಚುರಲ್ ಡೈ ಹೋಸ್ಟ್ ಆದ ಅನಾಬೆಲ್, ತಮ್ಮ ಪರಿಣತಿಯನ್ನು ಸಹ ವಿವರಿಸುತ್ತಾರೆ:
ಉದಾಹರಣೆ 2: ನಾನು ಬಾರ್ಸಿಲೋನಾದಲ್ಲಿ ಫ್ಯಾಷನ್ ಡಿಸೈನ್ ಮತ್ತು ಫೈಬರ್ ಆರ್ಟ್ಸ್ ಅಧ್ಯಯನ ಮಾಡಿದ ಮೆಕ್ಸಿಕನ್ ಜವಳಿ ಪ್ರೇಮಿ. ಕೆಲವು ವರ್ಷಗಳ ಹಿಂದೆ ನಾನು ಓಕ್ಸಾಕಾದಲ್ಲಿ ನೈಸರ್ಗಿಕ ಬಣ್ಣಗಳನ್ನು ಕಲಿಯಲು ಪ್ರಾರಂಭಿಸಿದಾಗ ನಾನು ಮೆಕ್ಸಿಕೋಗೆ ಮರಳಿದೆ, ಅಲ್ಲಿ ನಾನು ಪ್ರಾಚೀನ ಜವಳಿಗಳ ರೋಮಾಂಚಕ ಬಣ್ಣಗಳನ್ನು ಪ್ರೀತಿಸುತ್ತಿದ್ದೆ. ಅಂದಿನಿಂದ ನಾನು ಈ ವರ್ಕ್‌ಶಾಪ್‌ನಲ್ಲಿ ನಾವು ಕವರ್ ಮಾಡುವ ಕೆಲವು ವಸ್ತುಗಳು ಮತ್ತು ವಿಧಾನಗಳನ್ನು ಬಳಸಿಕೊಂಡು ಕುಶಲಕರ್ಮಿಗಳ ಬ್ಯಾಕ್‌ಪ್ಯಾಕ್ ಬ್ರಾಂಡ್ ಸೇರಿದಂತೆ ಹಲವಾರು ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದೇನೆ.
ಅನುಭವವನ್ನು ಹೋಸ್ಟ್ ಮಾಡಲು ನೀವು ಮಾಸ್ಟರ್ ಆಗಿರಬೇಕೇ? ಇಲ್ಲ! ನಿಮ್ಮ ಅನುಭವಕ್ಕೆ ಸಂಬಂಧಿಸಿದಂತೆ ಯಾವ ವಿಶಿಷ್ಟ ಪರಿಣತಿಯನ್ನು ನೀವು ಹೊಂದಿದ್ದೀರಿ ಎಂಬುದನ್ನು ಹೈಲೈಟ್ ಮಾಡಿದರೆ ಸಾಕು.
ಆಂತರಿಕ ಪ್ರವೇಶ
ಅನುಭವಗಳು ಸಾಮಾನ್ಯ ಪ್ರವಾಸಿ ಚಟುವಟಿಕೆಗಳಿಗಿಂತ ಹೆಚ್ಚಿನದಾಗಿರುತ್ತವೆ ಮತ್ತು ಹೋಸ್ಟ್ ಸಮುದಾಯ ಅಥವಾ ಸಂಸ್ಕೃತಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಗೆಸ್ಟ್‌ಗಳನ್ನು ಆಹ್ವಾನಿಸಲಾಗುತ್ತದೆ. ಉತ್ತಮ ಅನುಭವಗಳು ಸರಾಸರಿ ಪ್ರವಾಸಿಗರು ತಾವೇ ಸ್ವತಃ ಅನ್ವೇಷಿಸಲಾಗದ ಸ್ಥಳಗಳು ಅಥವಾ ಚಟುವಟಿಕೆಗಳನ್ನು ಅನ್‌ಲಾಕ್ ಮಾಡುತ್ತವೆ.
Airbnb ಯಲ್ಲಿ ನಿಮ್ಮ ಅನುಭವವು ಪ್ರಕಟಣೆಗೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಲು ಸಾಮಾನ್ಯ ಸಂದರ್ಶಕರಿಗೆ ಪ್ರವೇಶಿಸಲಾಗದ ಯಾವುದಾದರೂ ಒಂದು ವಿಶಿಷ್ಟವಾದದ್ದಕ್ಕೆ ಪ್ರವೇಶ ನೀಡುವ ಯೋಜನೆಯನ್ನು ಪರಿಗಣಿಸಿ. ನಿಮ್ಮ ಅನುಭವವನ್ನು ಸಲ್ಲಿಸುವಾಗ, ನಿಮ್ಮ ಗೆಸ್ಟ್‌ಗಳೊಂದಿಗೆ ನೀವು ಭೇಟಿ ನೀಡುವ ಸ್ಥಳಗಳ ಬಗ್ಗೆ ವಿಶೇಷವಾದದ್ದನ್ನು ಹೈಲೈಟ್ ಮಾಡಿ.
- ಸ್ಥಳೀಯರ ಏಕೈಕ ನೀರಿನ ಕುಳಿ ಅಥವಾ ನೆರೆಹೊರೆಯ ಗುಪ್ತ ಉದ್ಯಾನದಂತಹ ವಿಶೇಷ ಸ್ಥಳವನ್ನು ಹಂಚಿಕೊಳ್ಳಿ.
- ಜನರು, ಸಮುದಾಯಗಳು ಅಥವಾ ಅವರು ತಾವಾಗಿಯೇ ಪ್ರವೇಶವನ್ನು ಹೊಂದಲು ಸಾಧ್ಯವಿಲ್ಲದ ಚಟುವಟಿಕೆಗಳನ್ನು ಗೆಸ್ಟ್‌ಗಳಿಗೆ ಪರಿಚಯಿಸಿ.
- ವಿಶಿಷ್ಟ ಅಥವಾ ಸಾಮಾನ್ಯ ಪ್ರವಾಸಿ ಚಟುವಟಿಕೆಯನ್ನು ಆಸಕ್ತಿಕರವಾಗಿ ಅಥವಾ ವಿಭಿನ್ನ ದೃಷ್ಟಿಕೋನದಲ್ಲಿ ತೋರಿಸಿ.
ಮಾರ್ವಿನ್ ಅವರು ಹನಿ ಬೀ ಥೆರಪಿಯಹೋಸ್ಟ್ ಆಗಿದ್ದು , ಅವರು ತಮ್ಮದೇ ಆದ ಹಿತ್ತಲಿಗೆ ಮತ್ತು ಸ್ಥಳೀಯ ಉದ್ಯಾನವನಗಳಿಗೆ ವಿಶೇಷ ಪ್ರವೇಶವನ್ನು ಒದಗಿಸುತ್ತಾರೆ. ಅಲ್ಲಿ ಸಂದರ್ಶಕರು ಲಾಸ್ ಏಂಜಲೀಸ್‌ನಲ್ಲಿ ಜೇನುಗೂಡುಗಳನ್ನು ಅನ್ವೇಷಿಸಬಹುದು.
ನಿಮ್ಮ ಸಲ್ಲಿಕೆಯಲ್ಲಿ ಈ ಸ್ಥಳಗಳು ಅಥವಾ ಸಮುದಾಯಗಳಿಗಿರುವ ನಿಮ್ಮ ಸ್ವಂತ ಸಂಪರ್ಕವನ್ನು ಹೈಲೈಟ್ ಮಾಡಲು ಮರೆಯದಿರಿ. ನಿಮ್ಮನ್ನು ನೀವೇ ಕೇಳಿಕೊಳ್ಳಿ: ಅವು ನಿಮಗೆ ಏಕೆ ವಿಶೇಷವಾಗಿವೆ, ಮತ್ತು ನಿಮ್ಮ ಗೆಸ್ಟ್‌ಗಳಿಗೆ ಅವು ಏಕೆ ಆಸಕ್ತಿಕರವಾಗಿರಬಹುದು? ಈ ಸ್ಥಳಗಳಿಗೆ ಸಂಬಂಧಿಸಿದ ಅಚ್ಚಳಿಯದ ನೆನಪುಗಳನ್ನು ಹಂಚಿಕೊಳ್ಳಿ.
ಸಂಪರ್ಕ
ಅರ್ಥಪೂರ್ಣ ಮಾನವ ಸಂಪರ್ಕಗಳನ್ನು ರಚಿಸಲು ಉತ್ತಮ ಅನುಭವಿ ಹೋಸ್ಟ್ ಅನ್ನು ಮೀಸಲಾಗಿಡಲಾಗಿದೆ. ಗೆಸ್ಟ್‌ಗಳನ್ನು ಸ್ವಾಗತಿಸಲು ಮತ್ತು ಮಾನ್ಯತೆ ಪಡೆಯುವಂತೆ ಮಾಡಲು ಅವರು ತಮ್ಮಿಂದ ಆಗುವುದೆಲ್ಲವನ್ನೂ ಮಾಡುತ್ತಾರೆ. ಅವರು ಸ್ನೇಹಪರರಾಗಿರುತ್ತಾರೆ ಮತ್ತು ಚಿಂತನಶೀಲರಾಗಿರುತ್ತಾರೆ, ತಮ್ಮ ಗೆಸ್ಟ್‌ಗಳೊಂದಿಗೆ ಸಂಪರ್ಕದ ಕ್ಷಣಗಳನ್ನು ಸೃಷ್ಟಿಸುತ್ತಾರೆ ಮತ್ತು ಪ್ರಯಾಣದುದ್ದಕ್ಕೂ ಅವರಿಗೆ ವಿಶೇಷವಾದ ಅನುಭವವನ್ನು ನೀಡುತ್ತಾರೆ. ಹೋಸ್ಟ್‌ಗಳು ಉತ್ತಮ ಸಂಪರ್ಕವನ್ನು ಸೃಷ್ಟಿಸಿದರೆ, ಅನುಭವಕ್ಕೆ ಅಪರಿಚಿತರಾಗಿ ಬರುವ ಗೆಸ್ಟ್‌ಗಳು ಹೋಗುವಾಗ ಸ್ನೇಹಿತರಾಗುತ್ತಾರೆ.
ನಿಮ್ಮ ಅನುಭವವನ್ನು ಸಲ್ಲಿಸುವಾಗ, ನೀವು ವಿವರಗಳನ್ನು ತಿಳಿಸಲು ಬಳಸುವ ವಿಧಾನಗಳನ್ನು ಒತ್ತಿ ಹೇಳಿ ಮತ್ತು ಸಂಪೂರ್ಣ ಅನುಭವದ ಸಮಯದಲ್ಲಿ ಗೆಸ್ಟ್‌ಗಳು ಸುರಕ್ಷಿತವಾಗಿರುತ್ತಾರೆ, ತೊಡಗಿಸಿಕೊಂಡಿರುತ್ತಾರೆ ಮತ್ತು ಸಂಪರ್ಕದಲ್ಲಿರುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇದರಲ್ಲಿ ಬಿಸಿಲಿನ ದಿನದಂದು ಸನ್‌ಸ್ಕ್ರೀನ್ ನೀಡುವಂತಹ ಸಣ್ಣ ಕಾರ್ಯದಿಂದ ಹಿಡಿದು, ನಿಮ್ಮ ಗೆಸ್ಟ್‌ಗಳು ಸಂಪರ್ಕ ಸಾಧಿಸಲು ಒಳಗೊಳ್ಳುವಿಕೆಯ ಸ್ಥಳವನ್ನು ರಚಿಸುವಂತಹ ದೊಡ್ಡ ವಿಷಯಗಳವರೆಗೆ ಇರುತ್ತದೆ.
ನಿಮ್ಮ ಅನುಭವದ ಕಲ್ಪನೆಯನ್ನು ನೀವು ರಚಿಸುವಾಗ ನಿಮ್ಮನ್ನೇ ಕೇಳಿಕೊಳ್ಳುವ ಕೆಲವು ಪ್ರಶ್ನೆಗಳು ಇಲ್ಲಿವೆ:
- ಆಹಾರದ ಪರಿಗಣನೆಗಳು, ಪ್ರವೇಶಾವಕಾಶ ಅಥವಾ ಸುರಕ್ಷತಾ ಕಾಳಜಿಗಳಂತಹ ಗೆಸ್ಟ್‌ಗಳ ಅಗತ್ಯಗಳನ್ನು ಹೇಗೆ ನೋಡಿಕೊಳ್ಳಲಾಗುತ್ತದೆ?
- ಹವಾಮಾನ ಬದಲಾವಣೆಯಂತಹ ಅನಿರೀಕ್ಷಿತ ಸಂದರ್ಭಗಳು ಎದುರಾದಲ್ಲಿ ನೀವು ಏನು ಮಾಡಬಹುದು?
- ನಿಮ್ಮ ಅನುಭವದಲ್ಲಿ ಗೆಸ್ಟ್‌ಗಳು ಪರಸ್ಪರ ಸಂಪರ್ಕ ಸಾಧಿಸಲು ಮತ್ತು ಸಂವಹನ ನಡೆಸಲು ನೀವು ಹೇಗೆ ಸಹಾಯ ಮಾಡುತ್ತೀರಿ?
- ವಿವಿಧ ಸಂಸ್ಕೃತಿಗಳಿಂದ ಬಂದಿರುವ ಗೆಸ್ಟ್‌ಗಳ ವಿಶಾಲ ವ್ಯಾಪ್ತಿಯ ಸೌಕರ್ಯಗಳ ಅಗತ್ಯಗಳನ್ನು ನೀವು ಯಾವ ರೀತಿಯಲ್ಲಿ ಪರಿಹರಿಸುತ್ತೀರಿ?
ಈ ಅಂಶಗಳನ್ನು ನಿಮ್ಮ ಪುಟಕ್ಕೆ ಸೇರಿಸಲಾಗುತ್ತಿದೆ
ನೆನಪಿಡಿ, ಎಲ್ಲಾ ಅನುಭವಗಳು Airbnb ಮಾರುಕಟ್ಟೆಗೆ ಪ್ರವೇಶಿಸಲು ಈ ಗುಣಮಟ್ಟದ ಮಾನದಂಡಗಳನ್ನು ಪೂರೈಸಬೇಕು. ನಿಮ್ಮ ಅನುಭವ ಪುಟದಲ್ಲಿ ಈ ಪ್ರತಿಯೊಂದು ಗುಣಗಳನ್ನು ನೀವು ತಿಳಿಸುವ ವಿಧಾನವು ಗಮನಾರ್ಹವಾಗಿದೆ. ಈ ವಿಭಾಗಗಳಲ್ಲಿ ಅನನ್ಯ ಪರಿಣತಿ, ಆಂತರಿಕ ಪ್ರವೇಶ, ಮತ್ತು ಸಂಪರ್ಕವನ್ನು ಎಚ್ಚರಿಕೆಯಿಂದ ಹೈಲೈಟ್ ಮಾಡಿ:
ನಿಮ್ಮ ಬಗ್ಗೆ – ಈ ಅನುಭವವನ್ನು ಹೋಸ್ಟ್ ಮಾಡಲು ನೀವು ಏಕೆ ಅತ್ಯುತ್ತಮ ವ್ಯಕ್ತಿಯಾಗಿದ್ದೀರಿ, ನಿಮ್ಮ ಪರಿಣತಿಯು ಚಟುವಟಿಕೆಗೆ ಹೇಗೆ ಸಂಬಂಧಿಸಿದೆ ಮತ್ತು ನಿಮ್ಮನ್ನು ಯಾವುದು ಚಿಂತನಶೀಲ ಹೋಸ್ಟ್ ಆಗಿ ಮಾಡುತ್ತದೆ ಎಂಬುದನ್ನು ಹಂಚಿಕೊಳ್ಳಲು ಮರೆಯದಿರಿ.
ನೀವು ಏನು ಮಾಡುತ್ತೀರಿ ಮತ್ತು ನೀವು ಎಲ್ಲಿರುತ್ತೀರಿ – ನೀವು ಒದಗಿಸುವ ಸ್ಥಳಗಳಿಗೆ ಅಥವಾ ಸಮುದಾಯಗಳಿಗಿರುವ ಅನನ್ಯ ಪ್ರವೇಶವನ್ನು ವಿವರಿಸಿ—ನಿರ್ದಿಷ್ಟವಾಗಿರಿ! ಗೆಸ್ಟ್‌ಗಳಿಗೆ ಬರಬಹುದಾದ ಪ್ರಶ್ನೆಗಳ ಬಗ್ಗೆ ಯೋಚಿಸಿ ಮತ್ತು ಉತ್ತರಗಳನ್ನು ಮುಂಚಿತವಾಗಿ ಸಿದ್ಧಪಡಿಸಿ.
ನಾನು ಏನನ್ನು ಒದಗಿಸುತ್ತೇನೆ – ಪಾನೀಯಗಳು ಮತ್ತು ತಿಂಡಿಯಿಂದ ಹಿಡಿದು ಗೆಸ್ಟ್‌ಗಳಿಗೆ ಈವೆಂಟ್‌ಗೆ ಪ್ರವೇಶವನ್ನು ನೀಡುವ ಟಿಕೆಟ್‌ಗಳವರೆಗೆ ನೀವು ಅನುಭವದಲ್ಲಿ ಒದಗಿಸುವ ವಿಶೇಷವಾದದ್ದನ್ನು ಸೇರಿಸಿ.
ವಿಶೇಷ ಆಕರ್ಷಣೆಗಳು
ಗೆಸ್ಟ್‌ಗಳಿಗೆ ತಾವಾಗಿಯೇ ಸುಲಭವಾಗಿ ಮಾಡಲು ಸಾಧ್ಯವಾಗದೇ ಇರುವಂತಹದ್ದನ್ನು ಒದಗಿಸಿ
- ನಿಮ್ಮ ಪರಿಣತಿ ಮತ್ತು ಅನನ್ಯ ದೃಷ್ಟಿಕೋನವನ್ನು ಪರಿಗಣಿಸಿ
- ಗೆಸ್ಟ್‌ಗಳಿಗೆ ಜನರೊಂದಿಗೆ ಅರ್ಥಪೂರ್ಣ ಸಂಪರ್ಕಗಳನ್ನು ಸಾಧಿಸಲು ನೆರವಾಗಿ
Airbnb ಯ ಗುಣಮಟ್ಟದ ಮಾನದಂಡಗಳು ಮತ್ತು ಅನುಭವಗಳಿಗಾಗಿ
ಇರುವ ಅವಶ್ಯಕತೆಗಳನ್ನು ತಿಳಿದುಕೊಳ್ಳಿ