ಗೆಸ್ಟ್‌ಗಳು ಬಯಸುವ ಸೌಲಭ್ಯಗಳು
ನಿರ್ದಿಷ್ಟ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳನ್ನು ಹೊಂದಿರುವ ಸ್ಥಳಗಳನ್ನು ಹುಡುಕಲು ಗೆಸ್ಟ್‌ಗಳು ಆಗಾಗ್ಗೆ Airbnb ಹುಡುಕಾಟ ಫಲಿತಾಂಶಗಳನ್ನು ಫಿಲ್ಟರ್ ಮಾಡುತ್ತಾರೆ. ನಿಮ್ಮ ಸ್ಥಳವು ನೀಡುವ ಎಲ್ಲವನ್ನೂ ಸೇರಿಸುವ ಮೂಲಕ ನಿಮ್ಮ ಲಿಸ್ಟಿಂಗ್ ಸ್ಟಾಂಡ್ ಔಟ್ ಆಗಲು ನೀವು ಸಹಾಯ ಮಾಡಬಹುದು.
ಉನ್ನತ ಸೌಲಭ್ಯಗಳು
ಗೆಸ್ಟ್‌ಗಳು ಹೆಚ್ಚಾಗಿ ಹುಡುಕುವ ಸೌಕರ್ಯಗಳು ಇವು.*
ಪೂಲ್
ವೈಫೈ
ಅಡುಗೆಮನೆ
ಉಚಿತ ಪಾರ್ಕಿಂಗ್
ಹಾಟ್ ಟಬ್
ಹವಾನಿಯಂತ್ರಣ ಅಥವಾ ಹೀಟಿಂಗ್
ವಾಷರ್ ಅಥವಾ ಡ್ರೈಯರ್
ಸ್ವಯಂ ಚೆಕ್-ಇನ್
TV ಅಥವಾ ಕೇಬಲ್
ಅಗ್ಗಿಷ್ಟಿಕೆ
ನಿಮ್ಮ ಹೋಸ್ಟಿಂಗ್ ಖಾತೆಯ ಲಿಸ್ಟಿಂಗ್‌ಗಳ ಟ್ಯಾಬ್‌ನಲ್ಲಿ ಸೌಕರ್ಯಗಳನ್ನು ಸೇರಿಸುವುದು ಸುಲಭ. ನಿಮ್ಮ ಸ್ಥಳ ಮತ್ತು ಸೌಲಭ್ಯಗಳಿಗೆ ಹೋಗಿ, ನಂತರ ಪ್ಲಸ್ ಚಿಹ್ನೆಯನ್ನು ಟ್ಯಾಪ್ ಮಾಡಿ. ನಿಮ್ಮ ಮನೆ ಹೊಂದಿರುವ ಯಾವುದೇ ವೈಶಿಷ್ಟ್ಯದ ಪಕ್ಕದಲ್ಲಿ ಸೇರಿಸಿ ಆಯ್ಕೆಮಾಡಿ. ನೀವು ಫೋಟೋ ಟೂರ್ ಅನ್ನೂ ರಚಿಸಬಹುದು ಮತ್ತು ಸೌಲಭ್ಯಗಳು, ಗೌಪ್ಯತೆ ಮಾಹಿತಿ ಮತ್ತು ನಿದ್ರೆಯ ವ್ಯವಸ್ಥೆಗಳು ಸೇರಿದಂತೆ ವಿವರಗಳನ್ನು ಕೋಣೆಯ ಪ್ರಕಾರವಾಗಿ ಸೇರಿಸಬಹುದು.
ಅವಶ್ಯಕ ವಸ್ತುಗಳು
ಆರಾಮದಾಯಕ ವಾಸ್ತವ್ಯಕ್ಕಾಗಿ ನಿಮ್ಮ ಸ್ಥಳವು ಈ ಅಗತ್ಯಗಳನ್ನು ಹೊಂದಿರುತ್ತದೆ ಎಂದು ಗೆಸ್ಟ್‌ಗಳು ನಿರೀಕ್ಷಿಸುತ್ತಾರೆ:
ಟಾಯ್ಲೆಟ್ ಪೇಪರ್
ಕೈ ಮತ್ತು ಬಾಡಿ ಸೋಪ್
ಪ್ರತಿ ಗೆಸ್ಟ್‌ಗೆ ಒಂದು ಟವೆಲ್
ಪ್ರತಿ ಗೆಸ್ಟ್‌ಗೆ ಒಂದು ದಿಂಬು
ಪ್ರತಿ ಗೆಸ್ಟ್ ಬೆಡ್‌ಗೆ ಲಿನೆನ್‌ಗಳು
ದೊಡ್ಡ ಗುಂಪುಗಳು ಮತ್ತು ದೀರ್ಘಾವಧಿಯ ವಾಸ್ತವ್ಯಕ್ಕಾಗಿ ಹೆಚ್ಚಿನ ಪ್ರಮಾಣವನ್ನು ಒದಗಿಸುವುದನ್ನು ಪರಿಗಣಿಸಿ. ನಿಮ್ಮ ಗೆಸ್ಟ್‌ಗಳಿಗೆ ಏನು ಬೇಕು ಎಂದು ಕೇಳಲು ನೀವು ಅವರಿಗೆ ಸಂದೇಶ ಕಳುಹಿಸಬಹುದು.
ಗೆಸ್ಟ್‌ಗಳ ಸುರಕ್ಷತೆ
ಕೆಲವು ಮೂಲಭೂತ ಮುನ್ನೆಚ್ಚರಿಕೆಗಳು ನಿಮ್ಮ ಮನೆಯಲ್ಲಿನ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇಂಧನ ಸುಡುವ ಉಪಕರಣಗಳನ್ನು ಬಳಸುವ ಸ್ಥಳಗಳಲ್ಲಿ ಹೊಗೆ ಮತ್ತು ಕಾರ್ಬನ್ ಮಾನಾಕ್ಸೈಡ್ ಅಲಾರಮ್‌ಗಳನ್ನು ಸ್ಥಾಪಿಸುವಂತೆ ನಾವು ಎಲ್ಲ ಹೋಸ್ಟ್‌ಗಳನ್ನು ಬಲವಾಗಿ ಒತ್ತಾಯಿಸುತ್ತೇವೆ. ನೀವು ಅಗ್ನಿಶಾಮಕ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಅನ್ನು ಸಹ ನೀಡಲು ಬಯಸಬಹುದು.
ಪ್ರವೇಶಾವಕಾಶವಿರುವ ವೈಶಿಷ್ಟ್ಯಗಳು
ಪ್ರವೇಶಾವಕಾಶ ಅಗತ್ಯಗಳನ್ನು ಹೊಂದಿರುವ ಗೆಸ್ಟ್‌ಗಳು ಸಾಮಾನ್ಯವಾಗಿ ಮೆಟ್ಟಿಲು ರಹಿತ ಪ್ರವೇಶದ್ವಾರ, ಬಾತ್‌ರೂಮ್‌ನಲ್ಲಿ ಸ್ಥಿರ ಹಿಡಿಕೆ ಪಟ್ಟಿಗಳು ಮತ್ತು ಪ್ರವೇಶಾವಕಾಶ ಇರುವ ಪಾರ್ಕಿಂಗ್‌ನಂತಹ ವೈಶಿಷ್ಟ್ಯಗಳನ್ನು ಹುಡುಕುತ್ತಾರೆ. ನಿಮ್ಮ ಲಿಸ್ಟಿಂಗ್‌ನಲ್ಲಿ ಈ ವೈಶಿಷ್ಟ್ಯಗಳನ್ನು ಸೇರಿಸಿದರೆ ನಿಮ್ಮ ಸ್ಥಳವು ಅವರಿಗೆ ಸೂಕ್ತವಾದುದಾಗಿದೆ ಎಂಬುದನ್ನು ಗೆಸ್ಟ್‌ಗಳು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
ರಿಮೋಟ್ ವರ್ಕ್‌ಸ್ಪೇಸ್‌ಗಳು
ಪ್ರಯಾಣಿಸುವಾಗ ರಿಮೋಟ್ ಆಗಿ ಕೆಲಸ ಮಾಡುವ ಗೆಸ್ಟ್‌ಗಳು ಈ ರೀತಿಯ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳನ್ನು ಪ್ರಶಂಸಿಸುತ್ತಾರೆ:
- ವೇಗವಾದ ಮತ್ತು ವಿಶ್ವಾಸಾರ್ಹ ವೈ-ಫೈ
- ಮೀಸಲಾದ ವರ್ಕ್‌ಸ್ಪೇಸ್
- ಲ್ಯಾಪ್‌ಟಾಪ್ ಸ್ಟ್ಯಾಂಡ್‌ನಂತಹ ದಕ್ಷತಾಶಾಸ್ತ್ರದ ಬೆಂಬಲ
- ಉತ್ತಮ ಲೈಟಿಂಗ್
- ಪೆನ್ನುಗಳು, ಕಾಗದ ಮತ್ತು ಸಾರ್ವತ್ರಿಕ ಚಾರ್ಜರ್ ಸೇರಿದಂತೆ ಕಚೇರಿ ಸರಬರಾಜುಗಳು
ಮಗು- ಮತ್ತು ಸಾಕುಪ್ರಾಣಿ-ಸ್ನೇಹಿ ವೈಶಿಷ್ಟ್ಯಗಳು
ಈ ರೀತಿಯ ಉಪಯುಕ್ತ ವಸ್ತುಗಳನ್ನು ಒದಗಿಸುವ ಮೂಲಕ ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಹೊಂದಿರುವ ಹೆಚ್ಚಿನ ಗೆಸ್ಟ್‌ಗಳನ್ನು ಸ್ವಾಗತಿಸಿ:
- ಎತ್ತರದ ಕುರ್ಚಿ
- ಟ್ರಾವೆಲ್ ಕ್ರಿಬ್
- ಮಗುವಿನ ಸುರಕ್ಷತಾ ಗೇಟ್‌ಗಳು
- ಪೀಠೋಪಕರಣದ ಕವರ್‌ಗಳು
- ಸಾಕುಪ್ರಾಣಿಗಳಿಗೆ ಆಹಾರ ಮತ್ತು ನೀರಿಗಾಗಿ ಬಟ್ಟಲುಗಳು
- ಬಾಗಿಲ ಬಳಿ ಕಾಲುಗಳನ್ನು ಒರೆಸಲು ಟವೆಲ್‌ಗಳು
- ಹೆಚ್ಚುವರಿ ಸ್ವಚ್ಛತಾ ಸರಬರಾಜುಗಳು
ನಿಮ್ಮ ಸೌಲಭ್ಯಗಳು, ಲಿಸ್ಟಿಂಗ್ ವಿವರಣೆ ಮತ್ತು ಫೋಟೋಗಳನ್ನು ಅಪ್‌ಡೇಟ್ ಮಾಡುವ ಮೂಲಕ ನೀವು ಮಾಡಿದ ಬದಲಾವಣೆಗಳನ್ನು ಪ್ರದರ್ಶಿಸಲು ಮರೆಯದಿರಿ. ಬಯಸಿದ ಕೆಲವು ಐಟಂಗಳನ್ನು ಸೇರಿಸುವುದರಿಂದ ನಿಮ್ಮ ಸ್ಥಳದಲ್ಲಿ ಗೆಸ್ಟ್‌ಗಳು ಹೆಚ್ಚು ಆರಾಮದಾಯಕವಾಗಿರುವವಂತೆ ಮಾಡುತ್ತದೆ ಮತ್ತು ಉತ್ತಮ ವಿಮರ್ಶೆಗಳಿಗೆ ಕಾರಣವಾಗಬಹುದು.
ಈ ಲೇಖನದಲ್ಲಿ ಒಳಗೊಂಡಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.