ನಿಖರವಾದ ಸ್ಥಳದೊಂದಿಗೆ ನಿರೀಕ್ಷೆಗಳನ್ನು ಹೊಂದಿಸುವುದು
ಗೆಸ್ಟ್‌ಗಳು ರಿಸರ್ವೇಶನ್ ಮಾಡಲು ನಿರ್ಧರಿಸುತ್ತಾರೆಯೇ ಎಂಬುದರಲ್ಲಿ ಲಿಸ್ಟಿಂಗ್‌ನ ಸ್ಥಳವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಮತ್ತು ಗೆಸ್ಟ್‌ಗಳು ಬುಕ್ ಮಾಡಿದ ನಂತರ, ತಡೆರಹಿತ ಚೆಕ್-ಇನ್‌ಗಾಗಿ ಅವರಿಗೆ ನಿಮ್ಮ ನಿಖರವಾದ ಸ್ಥಳದ ಅಗತ್ಯವಿದೆ.
ನಿಖರವಾದ ಸ್ಥಳವನ್ನು ಸೇರಿಸುವುದು
ನಿಮ್ಮ Airbnb ಲಿಸ್ಟಿಂಗ್‌ನಲ್ಲಿ ನೀವು ನಿಖರವಾದ ಸ್ಥಳವನ್ನು ಪ್ರದರ್ಶಿಸುವುದು ಅತ್ಯಗತ್ಯ. ನಿಮ್ಮ ಲಿಸ್ಟಿಂಗ್ ವಿವರಣೆಯಲ್ಲಿ ಇದೇ ರೀತಿಯ ಮಾಹಿತಿಯನ್ನು ಒದಗಿಸುವುದು ಸಹ ಒಳ್ಳೆಯದು. "ಮನೆ ಎಲ್ಲಿದೆ ಎಂದು ನನ್ನ ವಿವರಣೆಯಲ್ಲಿ ನಾನು ವಿವರಿಸುತ್ತೇನೆ" ಎಂದು ಕೀನ್ಯಾದ ನೈರೋಬಿಯಲ್ಲಿರುವ ಹೋಸ್ಟ್ ಸಲಹಾ ಮಂಡಳಿಯ ಸದಸ್ಯರಾದ ಜೂಲಿಯೆಟ್ ಹೇಳುತ್ತಾರೆ.
ನಿಮ್ಮ ಮೊದಲ ಬುಕಿಂಗ್ ಅನ್ನು ನೀವು ಸ್ವೀಕರಿಸುವವರೆಗೆ ಮಾತ್ರ ನಿಮ್ಮ ವಿಳಾಸಕ್ಕೆ ನೀವು ಬದಲಾವಣೆಗಳನ್ನು ಮಾಡಬಹುದು. ಆ ಬಳಿಕ, ಸಹಾಯಕ್ಕಾಗಿ ನೀವು ಸಮುದಾಯ ಬೆಂಬಲವನ್ನು ಸಂಪರ್ಕಿಸಬೇಕಾಗುತ್ತದೆ.
ಗೆಸ್ಟ್‌ಗಳು ನಿಮ್ಮ ಸ್ಥಳವನ್ನು ಕಂಡುಕೊಳ್ಳಬಹುದು ಎಂಬುದನ್ನು ಖಚಿತಪಡಿಸಿಕೊಳ್ಳುವುದು
ಚೆಕ್-ಇನ್ ಮಾಡುವ ಮೊದಲು ಗೆಸ್ಟ್‌ಗಳನ್ನು ನಿಮ್ಮ ಸ್ಥಳಕ್ಕೆ ನಿರ್ದೇಶಿಸುವ ವಿಷಯಕ್ಕೆ ಬಂದಾಗ ತೀರಾ ನಿರ್ದಿಷ್ಟವಾದ ವಿಷಯಗಳಿಲ್ಲ. ಜೂಲಿಯೆಟ್ ತಮ್ಮ ಜಿಪಿಎಸ್ ನಿರ್ದೇಶಾಂಕಗಳನ್ನು ಗೆಸ್ಟ್‌ಗಳೊಂದಿಗೆ ಹಂಚಿಕೊಳ್ಳುತ್ತಾರೆ. ತಮ್ಮ ಗೇಟ್‌ನ ಬಣ್ಣ ಮತ್ತು ಅದರಲ್ಲಿ ಏನು ಬರೆಯಲಾಗಿದೆ ಎಂಬಂತಹ ನಿಖರವಾದ ವಿವರಗಳನ್ನು ಸಹ ಹಂಚಿಕೊಳ್ಳುವುದಾಗಿ ಆಕೆ ಹೇಳುತ್ತಾರೆ.
ಗೆಸ್ಟ್‌ಗಳಿಗೆ ಸ್ಥಳವನ್ನು ಹುಡುಕಲು ಯಾವುದೇ ತೊಂದರೆ ಇದ್ದಲ್ಲಿ, ಚೆಕ್-ಇನ್ ಬಳಿಯಲ್ಲೇ ಜೂಲಿಯೆಟ್ ಲಭ್ಯವಿರುತ್ತಾರೆ. "ಅವರು ನಮ್ಮ ಸಂಪರ್ಕಗಳನ್ನು ಹೊಂದಿರುವುದರಿಂದ, ಅವರು ಸಾಮಾನ್ಯವಾಗಿ ಯಾವುದೇ ಸಮಸ್ಯೆಗಳಿದ್ದರೆ ನಮಗೆ ಕರೆ ಮಾಡುತ್ತಾರೆ" ಎಂದು ಆಕೆ ಹೇಳುತ್ತಾರೆ.
ನಿಮ್ಮ ಲಿಸ್ಟಿಂಗ್ ವಿವರಣೆಗೆ ನೆರೆಹೊರೆ ಮತ್ತು ಪಾರ್ಕಿಂಗ್‌ನ ವಿವರಗಳಂತಹ ಹೆಚ್ಚಿನ ಮಾಹಿತಿಯನ್ನು ನೀವು ಸೇರಿಸಬಹುದು. ನಕ್ಷೆಯ ಜೊತೆಗೆ, ಗೆಸ್ಟ್‌ಗಳು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ ಮತ್ತು ಅವರ ಬುಕಿಂಗ್ ನಿರ್ಧಾರದಲ್ಲಿ ವಿಶ್ವಾಸವನ್ನು ನೀಡುತ್ತದೆ.
ಒಂದು ಸಾಮಾನ್ಯ ಅಥವಾ ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡುವುದು
Airbnb ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಸ್ಥಳವು ಹೇಗೆ ಗೋಚರಿಸುತ್ತದೆಎಂಬುದನ್ನು ನೀವು ಆಯ್ಕೆ ಮಾಡಬಹುದು:
- ಸಾಮಾನ್ಯ ಸ್ಥಳ: ನಿಮ್ಮ ಲಿಸ್ಟಿಂಗ್‌ನ ನಕ್ಷೆಯು ರಸ್ತೆ ವಿಳಾಸದ ಸುಮಾರು ಅರ್ಧ ಮೈಲಿ (1 ಕಿ .ಮೀಗಿಂತ ಕಡಿಮೆ) ತ್ರಿಜ್ಯದೊಳಗೆ ಅದರ ಸುತ್ತಲಿನ ಪ್ರದೇಶವನ್ನು ತೋರಿಸುತ್ತದೆ.
- ನಿರ್ದಿಷ್ಟ ಸ್ಥಳ: ನಕ್ಷೆಯು ಹತ್ತಿರದ ಕ್ರಾಸ್ ಸ್ಟ್ರೀಟ್‌ನಲ್ಲಿ ಪಿನ್ ಮಾಡಿರುವುದನ್ನು ತೋರಿಸುತ್ತದೆ, ಆದರೆ ನಿಖರವಾದ ಸ್ಥಳವನ್ನು ಗುರುತಿಸುವುದಿಲ್ಲ. ಪಿನ್ ಸರಿಯಾದ ಸ್ಥಳವನ್ನು ಸೂಚಿಸುವವರೆಗೆ ನೀವು ನಕ್ಷೆಯನ್ನು ಎಳೆಯಬಹುದು.
ಗೆಸ್ಟ್‌ಗಳು ತಮ್ಮ ರಿಸರ್ವೇಶನ್ ಅನ್ನು ದೃಢೀಕರಿಸುವವರೆಗೆ ನಿಮ್ಮ ರಸ್ತೆ ವಿಳಾಸವನ್ನು ಸ್ವೀಕರಿಸುವುದಿಲ್ಲ. ಡೀಫಾಲ್ಟ್ ಸೆಟ್ಟಿಂಗ್ ಸಾಮಾನ್ಯ ಸ್ಥಳಕ್ಕಾಗಿ ಆಗಿದೆ.
ಹೆಚ್ಚಿನ ಮಾಹಿತಿಯನ್ನು ಸೇರಿಸುವುದು
ಗೆಸ್ಟ್‌ಗಳು ನಿಮ್ಮ ಸ್ಥಳವನ್ನು ಹುಡುಕಲು ಸಮಸ್ಯೆ ಹೊಂದಿದ್ದರೆ, ನಿಮ್ಮ ಮುಂಭಾಗದ ಬಾಗಿಲಿಗೆ ರಸ್ತೆ ಸಂಖ್ಯೆಗಳನ್ನು ಸೇರಿಸುವುದು ಅಥವಾ ಡ್ರೈವ್ ವೇ ಉದ್ದಕ್ಕೂ ಉತ್ತಮ ಲೈಟಿಂಗ್ ವ್ಯವಸ್ಥೆ ಮಾಡುವುದನ್ನು ಪರಿಗಣಿಸಿ.
ಕೆಲವೊಮ್ಮೆ ನೀವು ಸ್ವಲ್ಪ ಸೃಜನಶೀಲತೆಯನ್ನು ಹೊಂದಬೇಕಾಗಬಹುದು. "ನಮ್ಮ ಮಣ್ಣಿನ ಮನೆಗಳನ್ನು ಪತ್ತೆಹಚ್ಚುವುದು ಕಷ್ಟ" ಎಂದು ಭಾರತದ ನವದೆಹಲಿಯ ಹೋಸ್ಟ್ ಸಲಹಾ ಮಂಡಳಿಯ ಸದಸ್ಯರಾದ ಕೇಶವ್ ಹೇಳುತ್ತಾರೆ. "ರಸ್ತೆ ರಚನೆಯು ಸ್ವಲ್ಪ ವಿಭಿನ್ನವಾಗಿದೆ. ನಿಮ್ಮನ್ನು ಅಲ್ಲಿಗೆ ಕರೆದೊಯ್ಯಲು ನಿಮಗೆ ನಿಜವಾಗಿಯೂ ಯಾರಾದರೂ ಬೇಕು."
ಗೆಸ್ಟ್‌ಗಳಿಗೆ ಸಹಾಯವಿಲ್ಲದೆ ಚೆಕ್ ಇನ್ ಮಾಡುವುದನ್ನು ಸುಲಭಗೊಳಿಸುವುದು ಹೇಗೆ ಎಂದು ಕೇಶವ್ ಅವರು ಸಮಸ್ಯೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. "ನಾವು ಮುಖ್ಯ ಬೀದಿಯಲ್ಲಿ, ಶಾಶ್ವತವಾದ ಸಣ್ಣ ಬೋರ್ಡ್‌ನಲ್ಲಿ ಸಿಗ್ನೇಜ್ ಅನ್ನು ಹೇಗೆ ಹಾಕಬಹುದು ಎಂಬುದರ ಕುರಿತು ಯೋಚಿಸಲು ಪ್ರಾರಂಭಿಸಿದ್ದೇವೆ" ಎಂದು ಅವರು ಹೇಳುತ್ತಾರೆ.
ನಿಮ್ಮ ಆಯ್ಕೆಗಳನ್ನು ತೂಗಿ ನೋಡುವುದು
ಸ್ಥಳ ಸೇರಿದಂತೆ ನಿಮ್ಮ ಲಿಸ್ಟಿಂಗ್‌ನ ವಿವರಗಳು, ಗೆಸ್ಟ್ ನಿರೀಕ್ಷೆಗಳನ್ನು ಹೊಂದಿಸಲು ಸಹಾಯ ಮಾಡುತ್ತವೆ ಮತ್ತು ನಿಮ್ಮ ಸ್ಥಳವು ಅವರ ಅಗತ್ಯಗಳನ್ನು ಪೂರೈಸುತ್ತದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸುತ್ತವೆ. ಇದು ಬುಕಿಂಗ್‌ನಲ್ಲಿ ಗೆಸ್ಟ್‌ಗಳಿಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ ಮತ್ತು ನಕಾರಾತ್ಮಕ ವಿಮರ್ಶೆಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ.
ಉದಾಹರಣೆಗೆ, ಗೆಸ್ಟ್‌ಗಳು ಹತ್ತಿರದ ಟ್ರಾನ್ಸಿಟ್ ಸ್ಟಾಪ್‌ಗೆ ದೂರವನ್ನು ಅಂದಾಜು ಮಾಡಲು ಬಯಸಬಹುದು ಅಥವಾ ಮರಳಿನ ಪಕ್ಕದಲ್ಲಿಯೇ ನಿಮ್ಮ ಕಡಲತೀರದ ಪ್ರಾಪರ್ಟಿ ಇದೆ ಎಂದು ಖಚಿತಪಡಿಸಬಹುದು. ಹುಡುಕಾಟ ಫಲಿತಾಂಶಗಳಲ್ಲಿ ನಿರ್ದಿಷ್ಟ ಸ್ಥಳವನ್ನು ತೋರಿಸಲು ಆಯ್ಕೆ ಮಾಡುವುದು ನಿಮ್ಮ ಸ್ಥಳವನ್ನು ಹೆಚ್ಚು ಆಕರ್ಷಕವಾಗಿ ಮಾಡಬಹುದು.
ಏತನ್ಮಧ್ಯೆ, ಸಾಮಾನ್ಯ ಸ್ಥಳ ಸೆಟ್ಟಿಂಗ್ ಅನ್ನು ಇಟ್ಟುಕೊಳ್ಳುವುದು ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಸ್ಥಳದ ಸುತ್ತಲಿನ ಪ್ರದೇಶವನ್ನು ತೋರಿಸಲು ಆಯ್ಕೆ ಮಾಡುವುದು ನಿಮಗೆ ಮತ್ತು ನಿಮ್ಮ ಗೆಸ್ಟ್‌ಗಳಿಗೆ ಹೆಚ್ಚಿನ ನೆಮ್ಮದಿಯನ್ನು ನೀಡಬಹುದು.