ನಿಮ್ಮ ದರ ನಿಗದಿ ತಂತ್ರವನ್ನು ಹೊಂದಿಸಿ
ನಿಮ್ಮ ದರವನ್ನು ವಾಡಿಕೆಯಂತೆ ಮರುಪರಿಶೀಲಿಸುವುದು ಸ್ಪರ್ಧಾತ್ಮಕವಾಗಿರಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ದರ ನಿಗದಿ ತಂತ್ರವನ್ನು ನೀವು ಅಭಿವೃದ್ಧಿಪಡಿಸುವಾಗ ಈ ಕೆಳಗಿನ ಸಲಹೆಗಳನ್ನು ಪರಿಗಣಿಸಿ.
ನಿಯಮಿತವಾಗಿ ಏನು ಮಾಡಬೇಕು
ನಿಮ್ಮ ದರವನ್ನು ಎಷ್ಟು ಬಾರಿ ಪರಿಶೀಲಿಸಲು ಮತ್ತು ಪರಿಷ್ಕರಿಸಲು ನೀವು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ. ನಿಮಗೆ ಸೂಕ್ತವಾದ ವೇಳಾಪಟ್ಟಿಯಲ್ಲಿ ಮಾಡಬೇಕಾದ ಕೆಲವು ವಿಷಯಗಳು ಇಲ್ಲಿವೆ.
- ಹೆಚ್ಚು ರಾತ್ರಿಗಳನ್ನು ತೆರೆಯಿರಿ: ನೀವು ಹೋಸ್ಟ್ ಮಾಡಬಹುದು ಎಂದು ನಿಮಗೆ ತಿಳಿದಿರುವ ಯಾವುದೇ ರಾತ್ರಿಗಳನ್ನು ನಿಮ್ಮ ಕ್ಯಾಲೆಂಡರ್ನಲ್ಲಿ ಅನ್ಬ್ಲಾಕ್ ಮಾಡಿ. ಹೆಚ್ಚಿನ ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಲಿಸ್ಟಿಂಗ್ ಕಾಣಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಮತ್ತು ನಿಮ್ಮ ಗಳಿಕೆಗಳನ್ನು ಹೆಚ್ಚಿಸಬಹುದು.
- ಟ್ರಿಪ್ ಅವಧಿಗಳ್ನು ಕಸ್ಟಮೈಸ್ ಮಾಡಿ:ಬುಕಿಂಗ್ಗಳ ನಡುವಿನ ಅಂತರಗಳನ್ನು ನೋಡಿ. ಅಂತರಗಳು ನಿಮ್ಮ ಟ್ರಿಪ್ನ ಕನಿಷ್ಠಕ್ಕಿಂತ ಕಡಿಮೆಯಿದ್ದರೆ, ಆ ರಾತ್ರಿಗಳನ್ನು ಯಾರೂ ಬುಕ್ ಮಾಡಲು ಸಾಧ್ಯವಿಲ್ಲ. ನಿರ್ದಿಷ್ಟ ದಿನಾಂಕಗಳಿಗೆ ಕಿರು ವಾಸ್ತವ್ಯ ಅವಧಿಯನ್ನು ಹೊಂದಿಸುವುದು ನಿಮ್ಮ ಕ್ಯಾಲೆಂಡರ್ ಅನ್ನು ತುಂಬಲು ನಿಮಗೆ ಸಹಾಯ ಮಾಡುತ್ತದೆ.
- ಇದೇ ರೀತಿಯ ಲಿಸ್ಟಿಂಗ್ಗಳನ್ನು ಹೋಲಿಸಿ: ನಿಮ್ಮ ಪ್ರದೇಶದಲ್ಲಿನ ಬುಕ್ ಮಾಡಿದ ಮತ್ತು ಬುಕ್ ಆಗದ ಮನೆಗಳ ದರಗಳನ್ನು ಪರಿಶೀಲಿಸುವುದು ಸ್ಪರ್ಧಾತ್ಮಕ ದರವನ್ನು ಹೊಂದಿಸಲು ನಿಮಗೆ ಸಹಾಯ ಮಾಡುತ್ತದೆ.
"ನಾನು ಇದೇ ರೀತಿಯ ಲಿಸ್ಟಿಂಗ್ಗಳನ್ನು ನೋಡಲು ಬಯಸುತ್ತೇನೆ, ಇದರಿಂದ ನನ್ನ ದರಗಳನ್ನು ಹೋಲಿಸಬಹುದು, ಅದು ತೀರಾ ಹೆಚ್ಚು ಅಥವಾ ತೀರಾ ಕಡಿಮೆ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಮತ್ತು ಅತ್ಯಂತ ಸೂಕ್ತವಾದ ದರವನ್ನು ಕಂಡುಕೊಳ್ಳಬಹುದು," ಎಂದು ಕೆನಡಾದ ನೆಲ್ಸನ್ನಲ್ಲಿರುವ ಸೂಪರ್ಹೋಸ್ಟ್ ಕಾರೆನ್ ಹೇಳುತ್ತಾರೆ.
ಸ್ಥಳೀಯ ಬೇಡಿಕೆಯ ಆಧಾರದ ಮೇಲೆ ನಿಮ್ಮ ದರವನ್ನು ಸ್ವಯಂಚಾಲಿತವಾಗಿ ಸರಿಹೊಂದಿಸಲು ನೀವು ಯಾವುದೇ ಸಮಯದಲ್ಲಿ ಸ್ಮಾರ್ಟ್ ದರವನ್ನು ಸಹ ಆನ್ ಮಾಡಬಹುದು. ನಿರಂತರವಾಗಿ ಮೇಲ್ವಿಚಾರಣೆ ಮಾಡದೆ ನಿಮ್ಮ ದರವನ್ನು ಆಪ್ಟಿಮೈಸ್ ಮಾಡಲು ನೀವು ಬಯಸಿದರೆ, ಈ ಟೂಲ್ ವಿಶೇಷವಾಗಿ ಉಪಯುಕ್ತವಾಗುತ್ತದೆ.
ಮುಂಬರುವ ಕಡಿಮೆ ಬೇಡಿಕೆಯ ಸಮಯಗಳು
ಅತ್ಯಂತ ಜನಪ್ರಿಯ ಲಿಸ್ಟಿಂಗ್ಗಳೂ ಕಡಿಮೆ ಬುಕಿಂಗ್ಗಳನ್ನು ಒಳಗೊಂಡ ಸ್ತಬ್ಧ ಅವಧಿಗಳನ್ನು ಹೊಂದಿರುತ್ತವೆ. ನೀವು ಕಡಿಮೆ ಬೇಡಿಕೆಯ ಸಮಯಗಳಿಗೆ ತಯಾರಿ ನಡೆಸುತ್ತಿರುವಾಗ ನಿಮ್ಮ ಲಿಸ್ಟಿಂಗ್ ಎದ್ದುಕಾಣುವಂತೆ ಮಾಡಲು ಸಹಾಯ ಮಾಡುವ ಕೆಲವು ವಿಧಾನಗಳು ಇಲ್ಲಿವೆ.
- ರಿಯಾಯಿತಿಗಳನ್ನು ನೀಡಿ: ಸಾಪ್ತಾಹಿಕ ಮತ್ತು ಮಾಸಿಕ ವಾಸ್ತವ್ಯಗಳಿಗೆ ರಿಯಾಯಿತಿಗಳು ನಿಮ್ಮ ಕ್ಯಾಲೆಂಡರ್ ಅನ್ನು ತುಂಬಲು ಮತ್ತು ಟರ್ನ್ಓವರ್ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಆಗಮನದ 1 ರಿಂದ 28 ದಿನಗಳ ಮೊದಲು ಬುಕ್ ಮಾಡುವ ಗೆಸ್ಟ್ಗಳನ್ನು ಕೊನೆಯ ಕ್ಷಣದ ರಿಯಾಯಿತಿ ಆಕರ್ಷಿಸಬಹುದು.
- ಮುಂಗಡ ಸೂಚನೆ ಅವಧಿಯನ್ನು ಕಡಿಮೆಗೊಳಿಸಿ: ಗೆಸ್ಟ್ಗಳಿಗೆ ಚೆಕ್-ಇನ್ಗೆ ಹತ್ತಿರದಲ್ಲಿ ಬುಕ್ ಮಾಡಲು ಅವಕಾಶ ನೀಡುವುದು ಹೆಚ್ಚು ಬುಕಿಂಗ್ಗಳನ್ನು ಆಕರ್ಷಿಸಲು ನಿಮಗೆ ಸಹಾಯ ಮಾಡುತ್ತದೆ. ಗೆಸ್ಟ್ನ ಬುಕಿಂಗ್ ಮತ್ತು ಅವರ ಆಗಮನದ ನಡುವೆ ನಿಮಗೆ ಎಷ್ಟು ಸಮಯ ಬೇಕು ಎಂಬುದರ ಆಧಾರದ ಮೇಲೆ ನೀವು ಅದೇ ದಿನದಂತಹ ಕಡಿಮೆ ಲೀಡ್ ಸಮಯವನ್ನು ಆಯ್ಕೆ ಮಾಡಬಹುದು.
- ಅಲ್ಪಾವಧಿಯ ವಾಸ್ತವ್ಯಗಳನ್ನು ಅನುಮತಿಸಿ: ನಿಮ್ಮ ಕನಿಷ್ಠ ಟ್ರಿಪ್ ಅವಧಿಯನ್ನು ಕಡಿಮೆಗೊಳಿಸುವುದು ಅಲ್ಪಾವಧಿಯ ವಾಸ್ತವ್ಯಗಳನ್ನು ಬುಕ್ ಮಾಡುವ ಗೆಸ್ಟ್ಗಳನ್ನು ಆಕರ್ಷಿಸುತ್ತದೆ. ವಾರದ ದಿನದ ಪ್ರಕಾರ ನಿಮ್ಮ ಕನಿಷ್ಠ ಟ್ರಿಪ್ ಅವಧಿಯನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ.
"ನಾನು ಅಲ್ಪಾವಧಿಯ ಹೆಚ್ಚು ವಾಸ್ತವ್ಯಗಳನ್ನು ಖಂಡಿತವಾಗಿಯೂ ಪಡೆಯುತ್ತಿದ್ದೇನೆ," ಎಂದು ಕ್ಯಾಲಿಫೋರ್ನಿಯಾದ ಪಾಮ್ ಸ್ಪ್ರಿಂಗ್ಸ್ನಲ್ಲಿ ಸೂಪರ್ಹೋಸ್ಟ್ ಆಗಿರುವ ಜಿಮ್ಮಿ ಹೇಳುತ್ತಾರೆ. "ಜನರು ಯೋಜಿಸಿಲ್ಲದ ಕೊನೆಯ ಕ್ಷಣದ ವಾಸ್ತವ್ಯಗಳಾಗಿರುವುದರಿಂದ ಎರಡು ದಿನಗಳು ಸಹ ಉತ್ತಮ ರಜಾಕಾಲದಂತೆ ಭಾಸವಾಗುತ್ತವೆ. ಈ ಹೊಂದಿಕೊಳ್ಳುವಿಕೆ ಆಕರ್ಷಕವಾಗಿದೆ."
ಮುಂಬರುವ ಹೆಚ್ಚು ಬೇಡಿಕೆಯ ಸಮಯಗಳು
ಗೆಸ್ಟ್ ಬೇಡಿಕೆ ಹೆಚ್ಚಾಗಿರುವ ಸಮಯಗಳ ಗರಿಷ್ಠ ಪ್ರಯೋಜನ ಪಡೆಯಲು ಹಲವಾರು Airbnb ಟೂಲ್ಗಳು ನಿಮಗೆ ಸಹಾಯ ಮಾಡಬಹುದು. ಪರಿಗಣಿಸಲು ಕೆಲವು ತಂತ್ರಗಳು ಇಲ್ಲಿವೆ.
- ಅರ್ಲಿ ಬರ್ಡ್ ರಿಯಾಯಿತಿ ಸೇರಿಸಿ: ಚೆಕ್-ಇನ್ಗೆ 1 ರಿಂದ 24 ತಿಂಗಳ ಮೊದಲು ಮಾಡಿದ ಬುಕಿಂಗ್ಗಳಿಗೆ ರಿಯಾಯಿತಿಗಳು ಮುಂಚಿತವಾಗಿ ಯೋಜನೆ ಹಾಕಿಕೊಂಡು ಬರುವ ಗೆಸ್ಟ್ಗಳನ್ನು ಆಕರ್ಷಿಸಲು ನಿಮಗೆ ಸಹಾಯ ಮಾಡಬಹುದು. 3% ಅಥವಾ ಅದಕ್ಕಿಂತ ಹೆಚ್ಚಿನ ರಿಯಾಯಿತಿಗಳಿಗಾಗಿ, ಗೆಸ್ಟ್ಗಳು ಹುಡುಕಾಟ ಫಲಿತಾಂಶಗಳಲ್ಲಿ ಮತ್ತು ನಿಮ್ಮ ಲಿಸ್ಟಿಂಗ್ ಪುಟದಲ್ಲಿ ವಿಶೇಷ ಸೂಚನೆ ನೋಡುತ್ತಾರೆ. ನಿಮ್ಮ ರಿಯಾಯಿತಿ ದರವು ಕ್ರಾಸ್ ಔಟ್ ಮಾಡಲಾದ ನಿಮ್ಮ ಮೂಲ ದರದ ಪಕ್ಕದಲ್ಲಿ ಗೋಚರಿಸುತ್ತದೆ.
- ಕಸ್ಟಮ್ ಪ್ರಮೋಷನ್ ಅನ್ನು ಹೊಂದಿಸಿ: ಕೆಲವೊಂದು ಸಮಯಗಳಲ್ಲಿ ಹೆಚ್ಚು ಬುಕಿಂಗ್ಗಳನ್ನು ಪಡೆಯಲು ಪ್ರಮೋಷನ್ಗಳನ್ನು ನಡೆಸುವುದು ಉತ್ತಮ ಮಾರ್ಗವಾಗಿದೆ. ನೀವು 15% ಅಥವಾ ಅದಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ನೀಡಿದಾಗ, ಗೆಸ್ಟ್ಗಳಿಗೆ ನಿಮ್ಮ ಲಿಸ್ಟಿಂಗ್ ಪುಟದಲ್ಲಿ ಮತ್ತು ಹುಡುಕಾಟ ಫಲಿತಾಂಶಗಳಲ್ಲಿ ವಿಶೇಷ ಸೂಚನೆ ಕಾಣಿಸುತ್ತದೆ. ಪ್ರಮೋಷನ್ ನಡೆಸಲು ಕಳೆದ ವರ್ಷದಲ್ಲಿ ಕನಿಷ್ಠ ಒಂದು ಬುಕಿಂಗ್ ಪಡೆದಿರಬೇಕು ಮುಂತಾದ ಕೆಲವು ಅವಶ್ಯಕತೆಗಳಿವೆ.
- ನಿಮ್ಮ ಲಭ್ಯತೆ ವಿಂಡೋವನ್ನು ಹೆಚ್ಚಿಸಿ: ನಿಮ್ಮ ಕ್ಯಾಲೆಂಡರ್ ಅನ್ನು ನೀವು ಎರಡು ವರ್ಷಗಳವರೆಗೆ ಮುಂಚಿತವಾಗಿ ತೆರೆಯಬಹುದು. ನಿಮ್ಮ ಲಿಸ್ಟಿಂಗ್ ಹೆಚ್ಚು ಹುಡುಕಾಟ ಫಲಿತಾಂಶಗಳಲ್ಲಿ ಮತ್ತು ಆ ಸಮಯದಲ್ಲಿ ಕಡಿಮೆ ಸ್ಥಳಗಳು ಲಭ್ಯವಿದ್ದರೆ ಫಲಿತಾಂಶಗಳ ಚಿಕ್ಕ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
"ತಮ್ಮ ಬೇಸಿಗೆ ರಜಾದಿನಗಳಿಗಾಗಿ ಒಂದು ವರ್ಷ ಮುಂಚಿತವಾಗಿ ಅಥವಾ ಕ್ರಿಸ್ಮಸ್ಗೆ ಆರು ತಿಂಗಳಷ್ಟು ಮುಂಚಿತವಾಗಿ ಬುಕ್ ಮಾಡುವ ಜನರು ನನಗೆ ದೊರೆಯುತ್ತಾರೆ," ಎಂದು ಸ್ಪೇನ್ ದೇಶದ ತಾರಗೋನಾದ ಸೂಪರ್ಹೋಸ್ಟ್ ಆ್ಯನೆ ಹೇಳುತ್ತಾರೆ. "ಮುಂಚಿತವಾಗಿ ಬುಕ್ ಮಾಡುವ ಜನರು ಸಾಮಾನ್ಯವಾಗಿ ರದ್ದುಗೊಳಿಸುವುದಿಲ್ಲ. ಇದು ಕೂಡ ಮುಖ್ಯವಾಗಿದೆ ಏಕೆಂದರೆ ಮುಂದೆ ಏನಾಗಲಿದೆ ಎಂದು ನಿಮಗೆ ತಿಳಿಯುತ್ತದೆ.”
ನಿಮ್ಮ ದರ ನಿಗದಿ ಮತ್ತು ಇತರ ಸೆಟ್ಟಿಂಗ್ಗಳ ಮೇಲೆ ನೀವು ಯಾವಾಗಲೂ ನಿಯಂತ್ರಣ ಹೊಂದಿರುತ್ತೀರಿ. ನಿಮ್ಮ ಫಲಿತಾಂಶಗಳು ಭಿನ್ನವಾಗಬಹುದು.
ಸಂದರ್ಶನಗಳಲ್ಲಿ ಭಾಗವಹಿಸಿದ್ದಕ್ಕಾಗಿ ಹೋಸ್ಟ್ಗಳಿಗೆ ಹಣ ಪಾವತಿಸಲಾಯಿತು.
ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.