ಪರಿಷ್ಕರಿಸಲಾಗಿದೆ ರೇಟಿಂಗ್‌ಗಳು ಮತ್ತು ವಿಮರ್ಶೆಗಳು
ಸಂಪಾದಕರ ಟಿಪ್ಪಣಿ: ಈ ಲೇಖನವನ್ನು Airbnb 2023 ರ ಚಳಿಗಾಲದ ಬಿಡುಗಡೆಯ ಭಾಗವಾಗಿ ಪ್ರಕಟಿಸಲಾಗಿದೆ. ಮಾಹಿತಿಯು ಅದರ ಪ್ರಕಟಣೆಯ ನಂತರ ಬದಲಾಗಿರಬಹುದು. ನಮ್ಮ ಇತ್ತೀಚಿನ ಉತ್ಪನ್ನ ಬಿಡುಗಡೆಯ.
ಬಗ್ಗೆ ಇನ್ನಷ್ಟು ತಿಳಿಯಿರಿ.ಬುಕ್ ಮಾಡುವ ಮೊದಲು ಮನೆಯ ಗುಣಮಟ್ಟವನ್ನು ಅರ್ಥಮಾಡಿಕೊಳ್ಳಲು ಗೆಸ್ಟ್‌ಗಳು ರೇಟಿಂಗ್‍ಗಳು ಮತ್ತು ವಿಮರ್ಶೆಗಳನ್ನು ಅವಲಂಬಿಸಿರುತ್ತಾರೆ. ಆದರೆ ತಮಗೆ ಸೂಕ್ತವಾದ ವಿಮರ್ಶೆಗಳನ್ನು ಕಂಡುಕೊಳ್ಳುವುದು ತುಂಬಾ ಕಷ್ಟಕರವಾಗಿದೆ ಎಂದು ಗೆಸ್ಟ್‌ಗಳು ನಮಗೆ ತಿಳಿಸಿದ್ದಾರೆ.
ಅದಕ್ಕಾಗಿಯೇ ನಾವು ರೇಟಿಂಗ್‍ಗಳ ಪುಟವನ್ನು ಮರುವಿನ್ಯಾಸಗೊಳಿಸಿದ್ದೇವೆ ಮತ್ತು ವಿಮರ್ಶೆಗಳನ್ನು ಓದಲು ಸುಲಭವಾಗುವಂತೆ ಮತ್ತು ಹೆಚ್ಚು ಸಹಾಯಕವಾಗುವಂತೆ ಮೂರು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದ್ದೇವೆ.
ರೇಟಿಂಗ್‌ಗಳ ವಿತರಣೆ
ನಿಮ್ಮ ಲಿಸ್ಟಿಂಗ್ ಪುಟದಲ್ಲಿನ ವಿಮರ್ಶೆಗಳ ವಿಭಾಗದಲ್ಲಿ, ಒಂದು ಹೊಸ ಚಾರ್ಟ್ ಒಂದರಿಂದ ಐದು ಸ್ಟಾರ್‌ಗಳ ವಿಮರ್ಶೆಗಳ ಹಂಚಿಕೆಯನ್ನು ತೋರಿಸುತ್ತದೆ. ಇದು ನಿಮ್ಮ ಮನೆಯ ಇತಿಹಾಸದುದ್ದಕ್ಕೂ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಮರ್ಶೆಗಳ ಸಂಖ್ಯೆಯನ್ನು ತ್ವರಿತವಾಗಿ ವೀಕ್ಷಿಸಲು ಗೆಸ್ಟ್‌ಗಳಿಗೆ ಅನುವು ಮಾಡಿಕೊಡುತ್ತದೆ.
ವಿಮರ್ಶೆಯನ್ನು ವಿಂಗಡಿಸಿ
ಗೆಸ್ಟ್‌ಗಳು ಈಗ ನಿಮ್ಮ ವಿಮರ್ಶೆಗಳನ್ನು ಅತ್ಯಧಿಕ-ರೇಟಿಂಗ್ ಹೊಂದಿರುವ ಅಥವಾ ತೀರಾ ಇತ್ತೀಚಿನ ವಿಮರ್ಶೆಗಳ ಮೂಲಕ ವಿಂಗಡಿಸಲು ಸಾಧ್ಯವಾಗುವುದರಿಂದ ಅವರು ಹೆಚ್ಚು ಕಾಳಜಿ ವಹಿಸುವ ವಿಮರ್ಶೆಗಳನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ. ಇದು ಅವರಿಗೆ ನಿಮ್ಮ ಎಲ್ಲಾ ಫೈವ್ ಸ್ಟಾರ್ ವಿಮರ್ಶೆಗಳನ್ನು ಒಂದೇ ಸ್ಥಳದಲ್ಲಿ ಓದಲು ಅಥವಾ ತೀರಾ ಇತ್ತೀಚಿನವುಗಳಿಂದ ಪ್ರಾರಂಭಿಸಿ ನಿಮ್ಮ ವಿಮರ್ಶೆಗಳನ್ನು ಬ್ರೌಸ್ ಮಾಡಲು ಸಾಧ್ಯವಾಗಿಸುತ್ತದೆ.
ವಿಮರ್ಶಕರು ಮತ್ತು ಟ್ರಿಪ್ ವಿವರಗಳು
ಈಗ ಸ್ಟಾರ್ ರೇಟಿಂಗ್ ಪ್ರತಿ ವಿಮರ್ಶೆಯ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದು ಗೆಸ್ಟ್‌ಗಳ ಪ್ರತಿಕ್ರಿಯೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಬ್ಬ ಗೆಸ್ಟ್ ನಿಮ್ಮ ಸ್ಥಳಕ್ಕೆ ನಾಲ್ಕು ಸ್ಟಾರ್‌ಗಳ ರೇಟಿಂಗ್ ನೀಡಿದ್ದೂ ಬಹಳವಾಗಿ ಹೊಗಳಿರುವ ವಿಮರ್ಶೆಯನ್ನು ನೀಡಿದ್ದರೆ, ಭವಿಷ್ಯದ ಗೆಸ್ಟ್‌ಗಳು ನಿಮ್ಮ ಒಟ್ಟಾರೆ ರೇಟಿಂಗ್ ಅನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅದು ಸಹಾಯ ಮಾಡುತ್ತದೆ.
ವಿಮರ್ಶೆಗಳು ವಿಮರ್ಶಕರು ಯಾರು ಮತ್ತು ಅವರು ಎಲ್ಲಿಂದ ಬಂದವರು, ಅವರು ಎಷ್ಟು ಸಮಯದವರೆಗೆ ಇದ್ದರು ಮತ್ತು ಅವರು ಕುಟುಂಬ, ಸಾಕುಪ್ರಾಣಿಗಳೊಂದಿಗೆ ಬಂದಿದ್ದರೇ ಅಥವಾ ಗುಂಪಿನಲ್ಲಿ ಪ್ರಯಾಣಿಸಿದ್ದರೇ ಎನ್ನುವುದೂ ಸೇರಿದಂತೆ ಅವರ ಟ್ರಿಪ್‍ನ ಕುರಿತು ಹೆಚ್ಚಿನ ಮಾಹಿತಿಯನ್ನೂ ಕೂಡ ಒಳಗೊಂಡಿರುತ್ತದೆ. ಇದು ಭವಿಷ್ಯದ ಗೆಸ್ಟ್‌ಗಳು ತಮ್ಮದೇ ಆದ ಟ್ರಿಪ್ ವಿವರಗಳಿಗೆ ಹೊಂದಿಕೆಯಾಗುವ ವಿಮರ್ಶೆಗಳನ್ನು ಹುಡುಕಲು ಸಹಾಯ ಮಾಡುತ್ತದೆ.
ಉದಾಹರಣೆಗೆ, ಗೆಸ್ಟ್ ಮಕ್ಕಳೊಂದಿಗೆ ಪ್ರಯಾಣಿಸಿದ್ದರೆ, ಮಕ್ಕಳೊಂದಿಗೆ ವಾಸ್ತವ್ಯ ಹೂಡಿದ್ದರು ಎಂಬ ಟ್ಯಾಗ್ ಅವರ ವಿಮರ್ಶೆಯ ಮೇಲೆ ಕಾಣಿಸುತ್ತದೆ. ಒಂದು ವೇಳೆ ಗೆಸ್ಟ್ ಏಳು ರಾತ್ರಿಗಳ ಕಾಲ ವಾಸ್ತವ್ಯ ಹೂಡಿದ್ದರೆ, ಅವರ ವಿಮರ್ಶೆಯ ಮೇಲೆ ಒಂದು ವಾರ ಉಳಿದಿದ್ದರು ಎನ್ನುವುದು ಗೋಚರಿಸುತ್ತದೆ.*
ಸುಧಾರಿತ ರೇಟಿಂಗ್‍ಗಳು ಮತ್ತು ವಿಮರ್ಶೆಗಳು, ಹೊಸ ಲಿಸ್ಟಿಂಗ್‍ಗಳ ಟ್ಯಾಬ್ ಮತ್ತು ಹೋಸ್ಟ್‌ಗಳಿಗಾಗಿ ಇನ್ನೂ ಹೆಚ್ಚಿನ ನವೀಕರಣಗಳು Airbnb 2023 ರ ಚಳಿಗಾಲದ ಬಿಡುಗಡೆಯ ಭಾಗವಾಗಿವೆ.