ನಿರಾಶ್ರಿತ ಗೆಸ್ಟ್‌ಗಳನ್ನು Airbnb.org ನೊಂದಿಗೆ ಹೋಸ್ಟ್ ಮಾಡಲು ಸಿದ್ಧರಾಗಿರಿ
ವಿಶೇಷ ಆಕರ್ಷಣೆಗಳು
Airbnb.org ವಾಸ್ತವ್ಯಕ್ಕಾಗಿ Airbnb ತನ್ನ ಎಲ್ಲಾ ಸೇವಾ ಶುಲ್ಕಗಳನ್ನು ಮನ್ನಾ ಮಾಡುತ್ತದೆ
ನಿಮ್ಮ ಗೆಸ್ಟ್‌ಗಳು ಮತ್ತು (ಅನ್ವಯವಾಗುವಲ್ಲಿ) Airbnb.org ಯ ಪಾರ್ಟ್‌ನರ್ ಲಾಭೋದ್ದೇಶ ರಹಿತರೊಂದಿಗೆ ಸಂವಹನದಲ್ಲಿ ಇರುವುದು ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳಿಗೆ ಸುಗಮ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ
ನೀವು ಹೋಸ್ಟ್ ಮಾಡುವುದಕ್ಕೂ ಮೊದಲು Airbnb ಯ ಕೋವಿಡ್ -19 ಆರೋಗ್ಯ ಮತ್ತು ಸುರಕ್ಷತೆ ಅಗತ್ಯತೆಗಳನ್ನು ಪರಿಶೀಲಿಸಿ
ಹೊಸ ದೇಶಕ್ಕೆ ಹೋಗುವಾಗ, ನಿರಾಶ್ರಿತರು ಮತ್ತು ಆಶ್ರಯ ಬಯಸುವವರು ಕಾಗದಪತ್ರಗಳನ್ನು ಅಂತಿಮಗೊಳಿಸುವುದು ಮತ್ತು ಉದ್ಯೋಗಗಳನ್ನು ಹುಡುಕುವಂತಹ ಅನೇಕ ಸಾಗಾಣಿಕೆಯನ್ನು ನಿರ್ವಹಿಸುವುದರ ಜೊತೆಗೆ ಹೊಸ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡುತ್ತಾರೆ. ಸಾಮಾನ್ಯವಾಗಿ, Airbnb.org ಯಲ್ಲಿನ ಲಾಭೋದ್ದೇಶವಿಲ್ಲದ ಪಾಲುದಾರರು ಕ್ಲೈಂಟ್‌ಗಳು ಈ ಪ್ರಮುಖ ಕೆಲಸದಲ್ಲಿ ಸಹಾಯ ಮಾಡುತ್ತಾರೆ ಮತ್ತು ಶಾಶ್ವತ ವಸತಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಾರೆ. ಕೆಲವೊಮ್ಮೆ, ನಿರಾಶ್ರಿತರು ಮತ್ತು ಆಶ್ರಯ ಬಯಸುವವರು ಈ ಸವಾಲುಗಳನ್ನು ಸ್ವತಃ ಎದುರಿಸಬೇಕಾಗುತ್ತದೆ.
ಒಬ್ಬ ಹೋಸ್ಟ್ ಆಗಿ, ತಮ್ಮ ಭವಿಷ್ಯಕ್ಕಾಗಿ ಯೋಜನೆಯನ್ನು ಅಭಿವೃದ್ಧಿಪಡಿಸುವವರೆಗೆ ಮತ್ತು ಸಹಜ ಸ್ಥಿತಿಗೆ ಮರಳಿದೆ ಎಂಬ ಭಾವವನ್ನು ಹೊಂದುವವರೆಗೆ ತಾತ್ಕಾಲಿಕವಾಗಿ ಹೊಸ ಪರಿಸರದಲ್ಲಿ ನೆಲೆಸುವಾಗ ವಾಸಿಸಲು ಸುರಕ್ಷಿತ ಮತ್ತು ಆರಾಮದಾಯಕವಾದ ಸ್ಥಳವನ್ನು ನೀಡುವ ಮೂಲಕ ನೀವು ಒಬ್ಬ ವ್ಯಕ್ತಿಯ ಜೀವನದಲ್ಲಿ ಒಂದು ಪ್ರಮುಖ ಕ್ಷಣದ ಭಾಗವಾಗಬಹುದು.
ಈ ಲೇಖನದಲ್ಲಿ, ತಮ್ಮ ಜೀವನವನ್ನು ಪುನರ್ನಿರ್ಮಿಸುತ್ತಿರುವ ಗೆಸ್ಟ್‌ಗಳನ್ನು ಹೋಸ್ಟ್ ಮಾಡಲು ಹೇಗೆ ಸಿದ್ಧರಾಗಬೇಕು ಎಂಬುದರ ಕುರಿತು ನೀವು ಸಲಹೆಗಳನ್ನು ಕಾಣುತ್ತೀರಿ. ನಿರಾಶ್ರಿತರ ಗೆಸ್ಟ್‌ಗಳನ್ನು ಸ್ವಾಗತಿಸಿದ ಇತರ ಹೋಸ್ಟ್‌ಗಳು ಮತ್ತು ನಿರಾಶ್ರಿತ ಗ್ರಾಹಕರಿಗೆ ಸಹಾಯ ಮಾಡುವ ಲಾಭೋದ್ದೇಶವಿಲ್ಲದ ಕೇಸ್‌ವರ್ಕರ್‌ಗಳ ಸಲಹೆಯನ್ನು ಈ ಶಿಫಾರಸುಗಳು ಆಧರಿಸಿವೆ.
1. ನಿಮ್ಮ ಸ್ಥಳದ ಕುರಿತು ವಿವರಗಳನ್ನು ಸ್ಪಷ್ಟವಾಗಿ ಸಂವಹನ ಮಾಡಿ
ಬುಕಿಂಗ್‌ಗೆ ಮುಂಚಿತವಾಗಿ, IRC ಮತ್ತು HIAS ನಂತಹ Airbnb.org ನ ಲಾಭೋದ್ದೇಶವಿಲ್ಲದ ಪಾಲುದಾರರಿಂದ ಲಾಭೋದ್ದೇಶವಿಲ್ಲದ ಕೇಸ್‌ವರ್ಕರ್ ಅಥವಾ ಪಾವತಿಸಿದ ಬುಕಿಂಗ್ ವೋಚರ್ ಅನ್ನು ಸ್ವೀಕರಿಸಿದ ನಿರೀಕ್ಷಿತ ಗೆಸ್ಟ್ ನಿಮ್ಮ ಸ್ಥಳದ ಬಗ್ಗೆ ವಿವರಗಳನ್ನು ಖಚಿತಪಡಿಸಲು ನಿಮ್ಮನ್ನು ಸಂಪರ್ಕಿಸಬಹುದು. ಇದನ್ನು ಒದಗಿಸಲು, ದಯವಿಟ್ಟು ನಿಮ್ಮ ಲಿಸ್ಟಿಂಗ್ ವಿವರಗಳು ಪೂರ್ಣಗೊಂಡಿವೆ ಮತ್ತು ಪ್ರಸ್ತುತವಾಗಿವೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಯಾವುದೇ ವಿಚಾರಣೆಗೆ ತಕ್ಷಣ ಪ್ರತಿಕ್ರಿಯಿಸಿ.
ಪ್ರಸ್ತುತ ಉಕ್ರೇನ್‌ನ ಜನರ ಮೇಲೆ ಪರಿಣಾಮ ಬೀರುವಂತಹ ನಿರಾಶ್ರಿತರ ಬಿಕ್ಕಟ್ಟಿನ ಸಂದರ್ಭದಲ್ಲಿ, ವಸತಿಯ ಅಗತ್ಯವು ತುರ್ತಾಗಿದೆ ಮತ್ತು ತಕ್ಷಣದ್ದಾಗಿದೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ, ಗೆಸ್ಟ್‌ನ ಆರಂಭಿಕ ಸಂಪರ್ಕದ ನಂತರದಲ್ಲಿ ಕೇವಲ ಒಂದು ಅಥವಾ ಎರಡು ದಿನಗಳಿಂದ ಆರಂಭಿಸಿ 30 ದಿನಗಳು ಅಥವಾ ಹೆಚ್ಚಿನ ದಿನಗಳವರೆಗೆ ವಾಸ್ತವ್ಯಕ್ಕೆ Airbnb.org ಬುಕಿಂಗ್ ವಿನಂತಿಗಳು ಇರಬಹುದು.
ಬುಕಿಂಗ್ ಪ್ರಕ್ರಿಯೆಯಲ್ಲಿ, ನೀವು ಗೆಸ್ಟ್ ಅಥವಾ ಕೇಸ್‌ವರ್ಕರ್ ಪ್ರಶ್ನೆಗಳನ್ನು ಕೇಳಬಹುದು ಮತ್ತು ಅಗತ್ಯವಿದ್ದಲ್ಲಿ, ನೀವು Airbnb.org ನ ವಿಶೇಷವಾಗಿ ತರಬೇತಿ ಪಡೆದ ಬೆಂಬಲ ತಂಡಕ್ಕೆ ಪ್ರವೇಶವನ್ನು ಸಹ ಹೊಂದಿರುತ್ತೀರಿ.
2. ನಿರಾಶ್ರಿತ ಗೆಸ್ಟ್‌ಗಳಿಗೆ ಹೆಚ್ಚುವರಿ ಬೆಂಬಲ ಬೇಕಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ
ಲಾಭೋದ್ದೇಶವಿಲ್ಲದ ಪಾಲುದಾರರು ಆಗಾಗ್ಗೆ ತಮ್ಮ ಗ್ರಾಹಕರಿಗೆ ಆಹಾರ ಮತ್ತು ಸಾರಿಗೆಯಂತಹ ಅಗತ್ಯ ಮೂಲಭೂತ ಅಂಶಗಳನ್ನು ಒದಗಿಸುತ್ತಾರೆ ಮತ್ತು ಆರೋಗ್ಯ ರಕ್ಷಣೆ, ಉದ್ಯೋಗ ನಿಯೋಜನೆ ಮತ್ತು ದೀರ್ಘಾವಧಿಯ ವಸತಿ ಸಹಾಯದಂತಹ ಪ್ರಮುಖ ಸೇವೆಗಳಿಗೆ ಪ್ರವೇಶವನ್ನು ಒದಗಿಸುತ್ತಾರೆ.
ಉಕ್ರೇನ್ ನಿರಾಶ್ರಿತರ ಪುನರ್ವಸತಿ ಪ್ರಯತ್ನದ ದೊಡ್ಡ ಪ್ರಮಾಣದ ಕಾರಣದಿಂದಾಗಿ, ಈ ಬೆಂಬಲ ಸೇವೆಗಳಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ. ಈ ಮೂಲಭೂತ ಅಂಶಗಳ ಕಾಳಜಿಯನ್ನು ಸ್ವಂತವಾಗಿ ನಿರ್ವಹಿಸಲು ಮೊದಲು ಪ್ರಯತ್ನಿಸುವಂತೆ ಗೆಸ್ಟ್‌ಗಳನ್ನು ಪ್ರೋತ್ಸಾಹಿಸಲಾಗುತ್ತದೆ, ಇದರಿಂದಾಗಿ ಹೆಚ್ಚಿನ ಅಗತ್ಯವಿರುವ ವ್ಯಕ್ತಿಗಳಿಗೆ ಬೆಂಬಲವನ್ನು ಒದಗಿಸಬಹುದು.
ಹೋಸ್ಟ್ ಆಗಿ, ಖಂಡಿತವಾಗಿಯೂ ಅಗತ್ಯವಿಲ್ಲದಿದ್ದರೂ, ನಿಮ್ಮ ಗೆಸ್ಟ್‌ಗಳು ತಮ್ಮ ಹೊಸ ಸಮುದಾಯಕ್ಕೆ ಹೊಂದಿಕೊಳ್ಳಲು ಸಹಾಯ ಮಾಡಲು ಸ್ಥಳೀಯ ಸಂಪನ್ಮೂಲಗಳ ಕುರಿತು ಮಾರ್ಗದರ್ಶನವನ್ನು ನೀಡಲು ನೀವು ಆಯ್ಕೆ ಮಾಡಬಹುದು.
"ನಾನು ತಾಯಿಯಾಗಿ ಪ್ರಾಯೋಗಿಕ ವಿಧಾನಕ್ಕೆ ಹೋದೆ" ಎಂದು ಕೆನಡಾದ ವ್ಯಾಂಕೋವರ್‌ನ ಹೋಸ್ಟ್ ಸಾರಾ ಹೇಳುತ್ತಾರೆ. "ಅವರಿಗೆ ಬಟ್ಟೆಗಳ ಅಗತ್ಯವಿದೆಯೇ? ನಾವು ಆಹಾರವನ್ನು ಫ್ರಿಡ್ಜ್‌ನಲ್ಲಿ ಇಡಬೇಕೇ? ಅವರು ದಿನಸಿ ಶಾಪಿಂಗ್‌ಗೆ ಸಹಾಯವನ್ನು ಬಯಸುತ್ತಾರೆಯೇ?" ಅವಳು ಈ ಪ್ರಶ್ನೆಗಳನ್ನು ತನ್ನ ಗೆಸ್ಟ್‌ಗಳ ಲಾಭೋದ್ದೇಶವಿಲ್ಲದ ಕೇಸ್‌ವರ್ಕರ್‌ಗೆ ಕಳುಹಿಸಿದಳು. ಅವಳು ಹೋಸ್ಟಿಂಗ್ ಮಾಡುತ್ತಿರುವ ಕುಟುಂಬವು, ಮಕ್ಕಳಿಗೆ ಹೆಚ್ಚುವರಿ ಬ್ಲಾಂಕೆಟ್‌ಗಳು ಮತ್ತು ಸಣ್ಣ ಆಟಿಕೆಗಳನ್ನು ಪ್ರಶಂಸಿಸಬಹುದು ಎಂದು ಮರಳಿ ಸಂದೇಶ ಕಳುಹಿಸಿತು.
ತನ್ನ ಉಕ್ರೇನಿಯನ್ ಪರಂಪರೆ ಮತ್ತು Airbnb.org ಮೂಲಕ ನಿರಾಶ್ರಿತರನ್ನು ಹೋಸ್ಟ್ ಮಾಡುವ ಅನುಭವಗಳೊಂದಿಗೆ, ಕೆನಡಾದ ಒಂಟಾರಿಯೊದ ಹೋಸ್ಟ್ ಆಡಮ್, ಉಕ್ರೇನ್‌ನಲ್ಲಿನ ಸಂಘರ್ಷದಿಂದ ಪಲಾಯನ ಮಾಡುವ ಜನರಿಗೆ ವಸತಿ ನೀಡಲು ತ್ವರಿತವಾಗಿ ಮುಂದಾದರು. ತನ್ನ ಸ್ವಂತ ಸ್ಥಳ ಮತ್ತು ತಾನು ನಿರ್ವಹಿಸುವ ಪ್ರಾಪರ್ಟಿಗಳನ್ನು ಹೋಸ್ಟ್ ಮಾಡುವುದರ ಜೊತೆಗೆ, ಸ್ಥಳೀಯ ಉಕ್ರೇನಿಯನ್ ಸಮುದಾಯ ಕೇಂದ್ರದಲ್ಲಿ ಅಂಗಡಿಗಳು, ಚರ್ಚುಗಳು ಮತ್ತು ವೃತ್ತಿಪರ ಅಭಿವೃದ್ಧಿ ತರಗತಿಗಳಂತಹ ತನ್ನ ಪ್ರದೇಶದಲ್ಲಿರುವ ಉಕ್ರೇನಿಯನ್ ಸಂಸ್ಕೃತಿ ಮತ್ತು ಸಮುದಾಯದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಗೆಸ್ಟ್‌ಗಳು ತಮ್ಮ ಜೀವನವನ್ನು ಪುನರ್ನಿರ್ಮಿಸಲು ಸಹಾಯ ಮಾಡುವುದಕ್ಕೆ ತಾನು ಸಂತೋಷಪಡುತ್ತೇನೆ ಎಂದು ಆಡಮ್ ಹೇಳುತ್ತಾರೆ. "ನಾನು ಅವರನ್ನು ಕೇಳುತ್ತೇನೆ, ‘ನೀವು ಮನೆಯಲ್ಲಿ ಏನು ಮಾಡಿದಿರಿ?’ ಮತ್ತು ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ತೋರಿಸಲು ಪ್ರಯತ್ನಿಸಿ,"ಎಂದು ಅವರು ಹೇಳುತ್ತಾರೆ.
3. ಗೌಪ್ಯತೆಯನ್ನು ಗಮನದಲ್ಲಿಡಿ
ಪ್ರತಿಯೊಬ್ಬ ವ್ಯಕ್ತಿ ಅಥವಾ ಕುಟುಂಬವು ಆದ್ಯತೆ ನೀಡುವ ಗೌಪ್ಯತೆಯ ಮಟ್ಟವು, ಬೇರೆ ಯಾವುದೇ Airbnb ಗೆಸ್ಟ್‌ನಂತೆಯೇ ಬದಲಾಗುತ್ತದೆ. ಗೆಸ್ಟ್‌ಗಳು ಖಾಸಗಿಯಾಗಿ ವಿಶ್ರಾಂತಿ ಪಡೆಯಬಹುದಾದ ಅಥವಾ ಕುಟುಂಬವಾಗಿ ಸಂಪರ್ಕ ಹೊಂದಬಹುದಾದ ನಿಮ್ಮ ಮನೆಯ ಡೆನ್, ಬ್ಯಾಕ್‌ಯಾರ್ಡ್ ಅಥವಾ ಇತರ ಪ್ರದೇಶಗಳನ್ನು ಗುರುತಿಸುವಿಕೆಯು ಪರಿವರ್ತನೆಯನ್ನು ಸರಾಗಗೊಳಿಸಬಹುದು ಮತ್ತು ಅವರಿಗೆ ಸ್ವಾಗತಕಾರಿ ಭಾವವನ್ನು ಅನುಭವಿಸಲು ಸಹಾಯ ಮಾಡಬಹುದು.
"[ನಾವು ಹೋಸ್ಟ್ ಮಾಡಿದ] ಕುಟುಂಬವು ತಾವು ಬಯಸಿದ ಹಾಗೆ ಸ್ವಯಂ-ಕಟ್ಟಳೆಗಳಿಗೆ ಒಳಪಟ್ಟಿರಬಹುದು ಅಥವಾ ಸಾಮಾಜಿಕವಾಗಿರಬಹುದು" ಎಂದು ಸಾರಾ ಹೇಳುತ್ತಾರೆ. "ನಾವು ಅವರನ್ನು ಉದ್ಯಾನದಲ್ಲಿ ನೋಡಿದರೆ ಅಥವಾ ದಿನಸಿಗಳನ್ನು ಜೋಡಿಸುವುದನ್ನು ನೋಡಿದರೆ, ನಾವು ಸ್ನೇಹಪರರಾಗಿದ್ದೇವೆ. ಆದರೆ, ನಾವು ಅವರಿಗೆ ತಮ್ಮದೇ ಆದ ಕೆಲಸವನ್ನು ಮಾಡಲು ಅವಕಾಶ ನೀಡಿದ್ದೇವೆ."
4. COVID-19 ಆರೋಗ್ಯ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಗಮನಿಸಿ
ಸುರಕ್ಷಿತ ವಾಸ್ತವ್ಯವನ್ನು ಒದಗಿಸಲು ಹೋಸ್ಟ್‌ಗಳಿಗೆ ಸಹಾಯ ಮಾಡಲು Airbnb ಮಾರ್ಗಸೂಚಿಗಳು ಮತ್ತು ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
- ಸ್ಥಳೀಯ ಕಾನೂನುಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ಅಗತ್ಯವಿರುವಾಗ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ
- ಪ್ರತಿ ವಾಸ್ತವ್ಯದ ನಡುವೆ Airbnb ಯ 5-ಹಂತದ ವರ್ಧಿತ ಶುಚಿಗೊಳಿಸುವ ಪ್ರಕ್ರಿಯೆಯನ್ನು ಅನುಸರಿಸಿ
- ನೀವು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ ಅಥವಾ ಅದರ ಲಕ್ಷಣಗಳನ್ನು ಹೊಂದಿದ್ದರೆ ಪ್ರಯಾಣಿಸಬೇಡಿ ಅಥವಾ ಹೋಸ್ಟ್ ಮಾಡಬೇಡಿ
5. ಹೆಚ್ಚಿನ ಸಂಪನ್ಮೂಲಗಳನ್ನು ಪಡೆಯಿರಿ
ನಿರಾಶ್ರಿತ ಗೆಸ್ಟ್‌ಗಳು ತಮ್ಮ ಪ್ರಯಾಣದ ಭಾಗವಾಗಿ ಗಂಭೀರ ತೊಂದರೆಗಳನ್ನು ಅನುಭವಿಸಿರಬಹುದು. ನಿರಾಶ್ರಿತರ ಅನುಭವಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೀವು ಆಸಕ್ತಿ ಹೊಂದಿದ್ದರೆ, ನಮ್ಮ ಲಾಭೋದ್ದೇಶವಿಲ್ಲದ ಪಾಲುದಾರರು ಶಿಫಾರಸು ಮಾಡಿದ ಈ ಸಂಪನ್ಮೂಲಗಳನ್ನು ಪರಿಶೀಲಿಸಿ:
ನಿರಾಶ್ರಿತರೊಂದಿಗೆ ಕೆಲಸ ಮಾಡುವ ಬಗ್ಗೆಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
ಉಕ್ರೇನ್‌ನಿಂದ ಪಲಾಯನ ಮಾಡುವವರು ತಮ್ಮ ತಾತ್ಕಾಲಿಕ ವಾಸ್ತವ್ಯವನ್ನು ಹೇಗೆ ಬುಕ್ ಮಾಡುತ್ತಿದ್ದಾರೆ?
ಒಬ್ಬ ವ್ಯಕ್ತಿ ಅಥವಾ ಕುಟುಂಬಕ್ಕೆ ತಾತ್ಕಾಲಿಕ ವಸತಿ ಅಗತ್ಯವಿದೆ ಎಂದು ಗುರುತಿಸಿದ ನಂತರ, ಅವರಿಗೆ ವಾಸ್ತವ್ಯವನ್ನು ಬುಕ್ ಮಾಡಲು ಲಾಭೋದ್ದೇಶವಿಲ್ಲದ ಕೇಸ್‌ವರ್ಕರ್ ಸಹಾಯ ಮಾಡಬಹುದು ಅಥವಾ ಗೆಸ್ಟ್ ಬುಕಿಂಗ್ ವೋಚರ್ ಅನ್ನು ಸ್ವೀಕರಿಸಬಹುದು., ಇದು ತಾತ್ಕಾಲಿಕ ವಸತಿಗಳನ್ನು ಸ್ವಂತವಾಗಿ ಬುಕ್ ಮಾಡಲು ಅನುವು ಮಾಡಿಕೊಡುತ್ತದೆ.
Airbnb.org ಮೂಲಕ ತುರ್ತು ವಸತಿಗಾಗಿ ರಿಸರ್ವೇಶನ್ ವಿನಂತಿಯನ್ನು ಮಾಡಿದಾಗ ಬುಕಿಂಗ್ ಪ್ರಕ್ರಿಯೆಯಲ್ಲಿ ಹೋಸ್ಟ್‌ಗಳಿಗೆ ಸೂಚಿಸಬಹುದು.
ನಿರಾಶ್ರಿತ ಗೆಸ್ಟ್‌ಗಳಿಗೆ ವಸತಿ ಒದಗಿಸಲು ನಾನು ಎಷ್ಟು ಸಮಯದವರೆಗೆ ನಿರೀಕ್ಷಿಸಬೇಕು?
Airbnb.org ವಾಸ್ತವ್ಯಗಳನ್ನು ಸಾಮಾನ್ಯವಾಗಿ ಕೆಲವು ದಿನಗಳಿಂದ ಕೆಲವು ವಾರಗಳವರೆಗೆ ಬುಕ್ ಮಾಡಲಾಗುತ್ತದೆ. ಆದಾಗ್ಯೂ, ಲಕ್ಷಾಂತರ ಜನರು ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವುದರಿಂದ, ಲಾಭೋದ್ದೇಶವಿಲ್ಲದ ಮತ್ತು ಸರ್ಕಾರಿ ಸಂಸ್ಥೆಗಳು ಹೆಚ್ಚಿನ ಪ್ರಮಾಣದ ಸಹಾಯ ವಿನಂತಿಗಳನ್ನು ನಿರ್ವಹಿಸುತ್ತಿದ್ದು, ಕೆಲವು ಗೆಸ್ಟ್‌ಗಳಿಗೆ 30 ದಿನಗಳು ಅಥವಾ ಹೆಚ್ಚಿನ ವಾಸ್ತವ್ಯದ ಅಗತ್ಯವಿದೆ.
ನಿಮ್ಮ ಪ್ರದೇಶದಲ್ಲಿ ಯಾವ ನಿಯಮಗಳು ಅನ್ವಯವಾಗುತ್ತವೆ ಎಂಬುದನ್ನು ಕಂಡುಹಿಡಿಯಲುಕೆಲವು ನಗರಗಳು ನಿರಾಶ್ರಿತ ವಸತಿಗಾಗಿ ದೀರ್ಘಾವಧಿಯ ಮಿತಿಗಳನ್ನು ಮನ್ನಾ ಮಾಡಿವೆ, ದಯವಿಟ್ಟು ಸಂಬಂಧಿತ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ.
ನಿರಾಶ್ರಿತ ಗೆಸ್ಟ್‌ಗಳ ವಾಸ್ತವ್ಯವು ಕೊನೆಗೊಂಡ ನಂತರ ಏನಾಗುತ್ತದೆ?
ನಿರಾಶ್ರಿತ ಗೆಸ್ಟ್ ತಾತ್ಕಾಲಿಕ ವಾಸ್ತವ್ಯದ ಸಮಯದಲ್ಲಿ, ದೀರ್ಘಾವಧಿಯ ವಸತಿ ಸೌಕರ್ಯಗಳನ್ನು ಕಂಡುಹಿಡಿಯುವುದು ಸೇರಿದಂತೆ ಹೊಸ ಸ್ಥಳದಲ್ಲಿ ತಮ್ಮ ಜೀವನವನ್ನು ಸ್ಥಾಪಿಸಲು ಮುಂದಿನ ಹಂತಗಳನ್ನು ಯೋಜಿಸುವುದಕ್ಕಾಗಿ ಅವರು ಕೆಲಸ ಮಾಡುತ್ತಿರಬಹುದು.
ಅಗತ್ಯವಿದ್ದರೆ ಹೆಚ್ಚುವರಿ ಬೆಂಬಲಕ್ಕಾಗಿ ಸ್ಥಳೀಯ ಲಾಭೋದ್ದೇಶವಿಲ್ಲದ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ Airbnb.org ನ ವಿಶೇಷ ಬೆಂಬಲ ತಂಡಕ್ಕೆ ಗೆಸ್ಟ್‌ಗಳು ನೇರ ಪ್ರವೇಶವನ್ನು ಹೊಂದಿರುತ್ತಾರೆ.
ಉಕ್ರೇನ್ ಬಿಕ್ಕಟ್ಟು ವಿಪರೀತ ಪ್ರಮಾಣದಲ್ಲಿ ನಡೆದ ಕಾರಣದಿಂದಾಗಿ, ಹೆಚ್ಚಿನ ಅಗತ್ಯವನ್ನು ಹೊಂದಿವೆ ಎಂದು ಲಾಭೋದ್ದೇಶವಿಲ್ಲದ ಸಂಸ್ಥೆಗಳು ಮೌಲ್ಯಮಾಪನ ಮಾಡುವ ವ್ಯಕ್ತಿಗಳಿಗೆ ಹೆಚ್ಚುವರಿ ಸಹಾಯವನ್ನು ನೀಡಲು ಆದ್ಯತೆ ನೀಡಬೇಕು. ಈ ಸಮಯದಲ್ಲಿ, ಪ್ರತಿಯೊಬ್ಬ ಗೆಸ್ಟ್‌ಗೆ ದೀರ್ಘಾವಧಿಯ ಬೆಂಬಲವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಖಾತರಿಪಡಿಸುವುದು ಅಸಾಧ್ಯ.
ಗೆಸ್ಟ್‌ಗೆ ತಮ್ಮ ವಾಸ್ತವ್ಯದ ಕೊನೆಯಲ್ಲಿ ಹೆಚ್ಚುವರಿ ತಾತ್ಕಾಲಿಕ ವಸತಿ ಅಗತ್ಯವಿದ್ದಲ್ಲಿ, ಅವರು ಎರಡು ವಾರಗಳವರೆಗೆ ಹೆಚ್ಚುವರಿ ವಸತಿ ಸೌಕರ್ಯಗಳನ್ನು ವಿನಂತಿಸಲು Airbnb.org ಅನ್ನು ಸಂಪರ್ಕಿಸಬಹುದು.
ತುರ್ತು ವಾಸ್ತವ್ಯಗಳಿಗೆ ಜನರು ಹೇಗೆ ಅರ್ಹರಾಗುತ್ತಾರೆ?
ಸಂಭಾವ್ಯ ಗೆಸಟ್fಗಳ ಅಗತ್ಯಗಳನ್ನು ವಿಶ್ಲೇಷಿಸುವುದು ಮತ್ತು ಅರ್ಹತೆ ಸೇರಿದಂತೆ ಸ್ಥಳದಲ್ಲಿ ಬೆಂಗಲವನ್ನು ಒದಗಿಸಲು ವಿಪತ್ತು ಪ್ರತಿಕ್ರಿಯೆ ಮತ್ತು ನಿರಾಶ್ರಿತರ ಪುನರ್ವಸತಿಯಲ್ಲಿ ಪರಿಣಿತಿ ಹೊಂದಿರುವ ಲಾಭೋದ್ದೇಶ ರಹಿತ ಸಂಸ್ಥೆಗಳು ಮತ್ತು ಪುನರ್ವಸತಿ ಏಜೆನ್ಸಿಗಳ ಜೊತೆಗೆ Airbnb.org ಆಗಾಗ್ಗೆ ಕೆಲಸ ಮಾಡುತ್ತದೆ.
ಸ್ವಂತವಾಗಿ ತಾತ್ಕಾಲಿಕ ವಸತಿಗಳನ್ನು ಬುಕ್ ಮಾಡುವ Airbnb.org ಗೆಸ್ಟ್‌ಗಳು Airbnb ಖಾತೆಯನ್ನು ಸೆಟಪ್ ಮಾಡಬೇಕಾಗುತ್ತದೆ, ಇದು ಗುರುತಿನ ಪರಿಶೀಲನೆ ತಪಾಸಣೆಗಳನ್ನು ಒಳಗೊಂಡಿರಬಹುದು.
Airbnb.org ಹೋಸ್ಟಿಂಗ್ ನನ್ನ ಸೂಪರ್‌ಹೋಸ್ಟ್ ಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಏಪ್ರಿಲ್ 1, 2022 ಸೂಪರ್‌ಹೋಸ್ಟ್ ಮೌಲ್ಯಮಾಪನಕ್ಕಾಗಿ (ಏಪ್ರಿಲ್ 1, 2021 ರಿಂದ ಮಾರ್ಚ್ 31, 2022 ರವರೆಗಿನ ಡೇಟಾವನ್ನು ಒಳಗೊಂಡಂತೆ):
- Airbnb.org ಬುಕಿಂಗ್‌ಗಳು ನಿಮ್ಮ ಒಟ್ಟು ವಾಸ್ತವ್ಯಗಳಿಗೆ ಸೇರಿಸುತ್ತವೆ .
- ವಿಮರ್ಶೆಗಳು, ರದ್ದತಿಗಳು ಮತ್ತು ಸ್ಪಂದನೆ ಸೇರಿದಂತೆ ತ್ರೈಮಾಸಿಕ ಸೂಪರ್‌ಹೋಸ್ಟ್ ಮೌಲ್ಯಮಾಪನಗಳಲ್ಲಿ ಪರಿಗಣಿಸಲಾದ ಇತರ ಅಂಶಗಳ ಮೇಲೆ Airbnb.org ಬುಕಿಂಗ್‌ಗಳು ಪರಿಣಾಮ ಬೀರುವುದಿಲ್ಲ.
ಪ್ರಾರಂಭಿಸಲು ಸಿದ್ಧರಿದ್ದೀರಾ? ಅಗತ್ಯವಿರುವ ಸಮಯದಲ್ಲಿ ಹಂಚಿಕೊಳ್ಳುವಿಕೆ ಶಕ್ತಿಯನ್ನು Airbnb.org ಮೂಲಕ ಅನಾವರಣಗೊಳಿಸುವ ಬೆಳೆಯುತ್ತಿರುವ ಸಮುದಾಯಕ್ಕೆ ಸೇರಿಕೊಳ್ಳಿ.
ವಿಶೇಷ ಆಕರ್ಷಣೆಗಳು
Airbnb.org ವಾಸ್ತವ್ಯಕ್ಕಾಗಿ Airbnb ತನ್ನ ಎಲ್ಲಾ ಸೇವಾ ಶುಲ್ಕಗಳನ್ನು ಮನ್ನಾ ಮಾಡುತ್ತದೆ
ನಿಮ್ಮ ಗೆಸ್ಟ್‌ಗಳು ಮತ್ತು (ಅನ್ವಯವಾಗುವಲ್ಲಿ) Airbnb.org ಯ ಪಾರ್ಟ್‌ನರ್ ಲಾಭೋದ್ದೇಶ ರಹಿತರೊಂದಿಗೆ ಸಂವಹನದಲ್ಲಿ ಇರುವುದು ಹೋಸ್ಟ್‌ಗಳು ಮತ್ತು ಗೆಸ್ಟ್‌ಗಳಿಗೆ ಸುಗಮ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ
ನೀವು ಹೋಸ್ಟ್ ಮಾಡುವುದಕ್ಕೂ ಮೊದಲು Airbnb ಯ ಕೋವಿಡ್ -19 ಆರೋಗ್ಯ ಮತ್ತು ಸುರಕ್ಷತೆ ಅಗತ್ಯತೆಗಳನ್ನು ಪರಿಶೀಲಿಸಿ