ಈಗ ನೀವು Airbnb ಗಿಂತ ಹೆಚ್ಚು Airbnb ಮಾಡಬಹುದು

Airbnb ಸೇವೆಗಳು, Airbnb ಅನುಭವಗಳು ಮತ್ತು ಹೊಚ್ಚ ಹೊಸ ಆ್ಯಪ್ ಅನ್ನು ಪರಿಚಯಿಸುತ್ತಿದ್ದೇವೆ.
Airbnb ಅವರಿಂದ ಮೇ 13, 2025ರಂದು
ಮೇ 13, 2025 ನವೀಕರಿಸಲಾಗಿದೆ

2007 ರಲ್ಲಿ ನಮಗೆ ಒಂದು ಕಲ್ಪನೆ ಮೂಡಿತು: ಜನರು ಹೋಟೆಲ್ ಅನ್ನು ಬುಕ್ ಮಾಡಲು ಸಾಧ್ಯವಾದಷ್ಟು ಸುಲಭವಾಗಿ ಮನೆಯನ್ನು ಬುಕ್ ಮಾಡಲು ನಾವು ಒಂದು ಮಾರ್ಗವನ್ನು ವಿನ್ಯಾಸಗೊಳಿಸಿದರೆ ಹೇಗೆ? ಅಂದಿನಿಂದ, Airbnb 2 ಶತಕೋಟಿ ಗೆಸ್ಟ್ ಆಗಮನಗಳನ್ನು ಮೀರಿದೆ ಮತ್ತು ಜನರು ಪ್ರಯಾಣ ಮಾಡುವ ವಿಧಾನಗಳನ್ನು ಬದಲಾಯಿಸಿದೆ. ಆದರೆ ಒಂದು ಅದ್ಭುತ ಪ್ರಯಾಣವು ನೀವು ತಂಗುವ ಮನೆಗಿಂತಲೂ ಹೆಚ್ಚು. ಅದಕ್ಕಾಗಿಯೇ ನಾವು ಪರಿಚಯಿಸುತ್ತಿದ್ದೇವೆ:

  • Airbnb ಸೇವೆಗಳು – ಗೆಸ್ಟ್‌ನ ವಾಸ್ತವ್ಯವನ್ನು ವಿಶೇಷವಾಗಿಸಲು ವಿಸ್ಮಯಕಾರಿ ಸೇವೆಗಳು.
  • Airbnb ಅನುಭವಗಳು - ನಗರವನ್ನು ಚೆನ್ನಾಗಿ ತಿಳಿದಿರುವ ಸ್ಥಳೀಯರೊಂದಿಗೆ ಅನ್ವೇಷಿಸಿ.
  • ಹೊಚ್ಚ ಹೊಸ Airbnb ಆ್ಯಪ್‌ - ಒಂದೇ ಸ್ಥಳದಲ್ಲಿ ಹೋಸ್ಟ್‌ಗಳಿಗೆ ತಮ್ಮ ಮನೆ, ಸೇವೆ ಅಥವಾ ಅನುಭವವನ್ನು ನಿರ್ವಹಿಸುವುದನ್ನು ಸುಲಭಗೊಳಿಸುವ ಮತ್ತು ಗೆಸ್ಟ್‌ಗಳಿಗೆ ಬುಕ್ ಮಾಡುವುದನ್ನು ಸುಲಭಗೊಳಿಸುವ ಮರುವಿನ್ಯಾಸಗೊಳಿಸಿದ ಆ್ಯಪ್‌.

ಹದಿನೇಳು ವರ್ಷಗಳ ಹಿಂದೆ, ನಾವು ಜನರ ಪ್ರಯಾಣ ಮಾಡುವ ವಿಧಾನವನ್ನು ಬದಲಾಯಿಸಿದೆವು. 2 ಶತಕೋಟಿಗೂ ಹೆಚ್ಚು ಗೆಸ್ಟ್‌ಗಳ ನಂತರ, Airbnb ವಾಸ್ತವ್ಯದ ಸ್ಥಳಕ್ಕೆ ಇನ್ನೊಂದು ಹೆಸರಾಗಿದೆ" ಎಂದು Airbnb ಸಹ-ಸಂಸ್ಥಾಪಕ ಮತ್ತು CEO ಬ್ರಿಯಾನ್ ಚೆಸ್ಕಿ ಹೇಳಿದ್ದಾರೆ. “ಸೇವೆಗಳು ಮತ್ತು ಅನುಭವಗಳ ಪ್ರಾರಂಭದೊಂದಿಗೆ, ನಾವು ಪುನಃ ಪ್ರಯಾಣವನ್ನು ಬದಲಾಯಿಸುತ್ತಿದ್ದೇವೆ. ಈಗ ನೀವು Airbnb ಗಿಂತ ಹೆಚ್ಚು Airbnb ಮಾಡಬಹುದು."

Airbnb ಸೇವೆಗಳು

ಹೋಟೆಲ್‌ಗಳು ನೀಡುವ ರೂಮ್ ಸರ್ವೀಸ್, ಜಿಮ್‌ಗೆ ಪ್ರವೇಶ ಅಥವಾ ಸ್ಪಾದಲ್ಲಿ ಅಪಾಯಿಂಟ್ಮೆಂಟ್‌ನಂತಹ ಸೇವೆಗಳ ಕಾರಣದಿಂದಾಗಿ ಜನರು ಅವುಗಳನ್ನು ಆಯ್ಕೆ ಮಾಡುತ್ತಾರೆ. ಇಂದಿನಿಂದ, ಗೆಸ್ಟ್‌ಗಳು ಅವರ Airbnb ಯಲ್ಲಿಯೇ ಸೇವೆಗಳನ್ನು ಪಡೆಯಬಹುದು.

ನಾವೀಗ Airbnb ಸೇವೆಗಳನ್ನು ಪರಿಚಯಿಸುತ್ತಿದ್ದೇವೆ—ವಾಸ್ತವ್ಯವನ್ನು ವಿಶೇಷವಾಗಿಸಲು ವಿಸ್ಮಯಕಾರಿ ಸೇವೆಗಳು. Airbnb ಆ್ಯಪ್‌ನಲ್ಲಿ ಹೊಸ ಕೊಡುಗೆಗಳು ಮತ್ತು ಸ್ಥಳಗಳನ್ನು ನಿಯಮಿತವಾಗಿ ನೀಡುತ್ತ ಆಯ್ದ ನಗರಗಳಲ್ಲಿ 10 ವರ್ಗಗಳೊಂದಿಗೆ ನಾವು ಪ್ರಾರಂಭಿಸುತ್ತಿದ್ದೇವೆ. ಮೊದಲ 10 ವರ್ಗಗಳು ಹೀಗಿವೆ:

  • ಬಾಣಸಿಗರು – ವೃತ್ತಿಪರ ಬಾಣಸಿಗರಿಂದ ಸಂಪೂರ್ಣವಾಗಿ ಗ್ರಾಹಕೀಯಗೊಳಿಸಬಹುದಾದ, ಮನೆಗೆ ಒದಗಿಸುವ ಊಟ.
  • ಫೋಟೋಗ್ರಫಿ – ಅನುಭವಿ ಛಾಯಾಗ್ರಾಹಕರಿಂದ ವೈಯಕ್ತೀಕರಿಸಿದ ಫೋಟೋ ಸೆಷನ್‌ಗಳು.
  • ಮಸಾಜ್ – ಅನುಭವಿ ಚಿಕಿತ್ಸಕರಿಂದ ಸ್ವೀಡಿಷ್, ಡೀಪ್ ಟಿಷ್ಯೂ ಮತ್ತು ರಿಫ್ಲೆಕ್ಸಾಲಜಿ ಸೇರಿದಂತೆ ಮರುಚೈತನ್ಯಕಾರಿ ಮಸಾಜ್‌ಗಳು.
  • ಸ್ಪಾ ಟ್ರೀಟ್‌ಮೆಂಟ್‌ಗಳು – ವೃತ್ತಿಪರ ಸೌಂದರ್ಯಶಾಸ್ತ್ರಜ್ಞರು ಒದಗಿಸುವ ಫೇಶಿಯಲ್‌ಗಳು, ಮೈಕ್ರೊಡರ್ಮಾಬ್ರೇಶನ್, ಬಾಡಿ ಸ್ಕ್ರಬ್‌ಗಳು ಮತ್ತು ಇತರ ಟ್ರೀಟ್‌ಮೆಂಟ್‌ಗಳು.
  • ಪರ್ಸನಲ್ ಟ್ರೈನಿಂಗ್ – ಖ್ಯಾತ ಫಿಟ್ನೆಸ್ ವೃತ್ತಿಪರರು ಮತ್ತು ವಿಶ್ವ ಚಾಂಪಿಯನ್ ಕ್ರೀಡಾಪಟುಗಳು ಸೇರಿದಂತೆ ಪರ್ಸನಲ್ ಟ್ರೈನರ್‌ಗಳೊಂದಿಗೆ ಯೋಗ, ಸ್ಟ್ರೆಂತ್ ಟ್ರೈನಿಂಗ್, HIIT ಮತ್ತು ಇನ್ನಷ್ಟು.
  • ಕೇಶಾಲಂಕಾರ – ಅನುಭವಿ ವಿನ್ಯಾಸಕರಿಂದ ವೃತ್ತಿಪರ ಹೇರ್‌ಕಟ್‌ಗಳು, ಬ್ಲೋಔಟ್‌ಗಳು ಮತ್ತು ಇನ್ನಷ್ಟು.
  • ಮೇಕಪ್ – ವೃತ್ತಿಪರ ಮೇಕಪ್ ಆರ್ಟಿಸ್ಟ್‌ಗಳಿಂದ ಪ್ರತಿ ದಿನ ಅಥವಾ ವಿಶೇಷ ಸಂದರ್ಭಗಳಿಗೆ ಮೇಕಪ್.
  • ಉಗುರು: ಅನುಭವಿ ನೈಲ್ ಸ್ಪೆಷಲಿಸ್ಟ್‌ಗಳಿಂದ ಮೆನಿಕ್ಯೂರ್‌ಗಳು ಮತ್ತು ಪೆಡಿಕ್ಯೂರ್‌ಗಳು.
  • ತಯಾರಿಸಿದ ಊಟ – ವೃತ್ತಿಪರ ಬಾಣಸಿಗರು ತಯಾರಿಸಿದ ರೆಡಿ-ಟು-ಈಟ್ ಊಟ.
  • ಕ್ಯಾಟರಿಂಗ್ – ಕಸ್ಟಮ್ ಮೆನುಗಳು, ಅಲಂಕಾರಿಕ ಮತ್ತು ಪರಿಕರಗಳೊಂದಿಗೆ ಪೂರ್ಣಪ್ರಮಾಣದ ಕ್ಯಾಟರಿಂಗ್ ಸೇವೆ, ಜೊತೆಗೆ ಸೆಟಪ್ ಮತ್ತು ಸ್ವಚ್ಛಗೊಳಿಸುವಿಕೆ.

Airbnb ಸೇವೆಗಳನ್ನು ಜ್ಞಾನ, ಶಿಕ್ಷಣ, ಖ್ಯಾತಿ ಮತ್ತು ಇನ್ನಿತರ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಗುಣಮಟ್ಟಕ್ಕಾಗಿ ಪರಿಶೀಲಿಸಲಾಗುತ್ತದೆ. ಸೇವೆಯ ಹೋಸ್ಟ್‌ಗಳು ಹಲವು ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು Airbnb ಯ ಗುರುತಿನ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಮಿಚೆಲಿನ್ ಸ್ಟಾರ್ ಪಡೆದಿರುವ ರೆಸ್ಟೋರೆಂಟ್‌ಗಳ ಬಾಣಸಿಗರು, ಪ್ರಶಸ್ತಿ ವಿಜೇತ ಛಾಯಾಗ್ರಾಹಕರು ಮತ್ತು ಗಣ್ಯ ಟ್ರೈನರ್‌ಗಳು ಸೇರಿದಂತೆ ಅನೇಕರು ತಮ್ಮ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿದ್ದಾರೆ.

ಪ್ರತಿಯೊಂದು ಬೆಲೆಯಲ್ಲಿ Airbnb ಸೇವೆಗಳು ಲಭ್ಯವಿವೆ ಮತ್ತು ಅನೇಕ ಸೇವೆಗಳು $50 USD ಗಿಂತ ಕಡಿಮೆಯಲ್ಲಿ ಪ್ರಾವೇಶಿಕ ಆಫರಿಂಗ್ ಅನ್ನು ಒಳಗೊಂಡಿರುತ್ತವೆ. ಯಾವುದೇ ರೀತಿಯ ಪ್ರವಾಸದ ವೇಳೆಯಲ್ಲಿ ಸೇವೆಗಳೊಂದಿಗೆ, ನೀವು ಕೈಗೆಟುಕುವ ದರಕ್ಕೆ ತಯಾರಿಸಿದ ಊಟದಿಂದ ಹಿಡಿದು ಸೆಲೆಬ್ರಿಟಿ ಟ್ರೈನರ್‌ನೊಂದಿಗೆ ದೈನಂದಿನ ವರ್ಕ್ಔಟ್‌ಗಳ ತನಕ ಎಲ್ಲವನ್ನೂ ಕಾಣಬಹುದು.

ಸೇವೆಗಳು ಮನೆಯಲ್ಲಿ, ಸೇವೆಯ ಹೋಸ್ಟ್‌ನ ವ್ಯವಹಾರದ ಸ್ಥಳದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ನಡೆಯಬಹುದು. ನೀವು ಮನೆಯನ್ನು ಹೋಸ್ಟ್ ಮಾಡುತ್ತಿದ್ದರೆ, ಸೇವೆಗಳನ್ನು ಸ್ವಯಂಚಾಲಿತವಾಗಿ ಅನುಮತಿಸಲಾಗುತ್ತದೆ. ಗೆಸ್ಟ್‌ಗಳ ವಾಸ್ತವ್ಯವನ್ನು ಇನ್ನಷ್ಟು ವಿಶೇಷವಾಗಿಸಲು ನೀವು ಆಸಕ್ತರಾಗಿರುವುದನ್ನು ತೋರಿಸಲು ಇದು ಒಂದು ವಿಧಾನ.

ನಿಮ್ಮ ಮನೆಯಲ್ಲಿ ಸೇವೆಗಳನ್ನು ಅನುಮತಿಸದಿರಲು ನೀವು ನಿರ್ಧರಿಸಬಹುದು. ನೀವು ಅನುಮತಿಸದ ಯಾವುದೇ ಸೇವೆಗಳನ್ನು ನಿರ್ದಿಷ್ಟಪಡಿಸಲು Airbnb ಬೆಂಬಲವನ್ನು ಸಂಪರ್ಕಿಸಿ ಮತ್ತು ಅವರು ನಿಮ್ಮ ಮನೆಯ ನಿಯಮಗಳನ್ನು ನವೀಕರಿಸುತ್ತಾರೆ.

ಇಂದಿನಿಂದ, ಅನುಭವಿ ವೃತ್ತಿಪರರು ಸೇವೆಯ ಹೋಸ್ಟ್ ಆಗಬಹುದು. ನಿಮ್ಮ ಪರಿಣತಿಯನ್ನು ಹಂಚಿಕೊಳ್ಳಲು ಮತ್ತು ನಿಮ್ಮ ವ್ಯವಹಾರವನ್ನು ಬೆಳೆಸಲು ಇದು ಹೊಸ ಮಾರ್ಗವಾಗಿದೆ.

Airbnb ಅನುಭವಗಳು

ಸ್ಥಳೀಯರಂತೆ ಬದುಕಬಹುದು ಎಂಬುದು Airbnb ಯಲ್ಲಿ ಜನರು ಬುಕ್ ಮಾಡಲು ಒಂದು ಪ್ರಮುಖ ಕಾರಣವಾಗಿದೆ. ಆದರೆ ನೀವು ಹೊಸ ಜಾಗದಲ್ಲಿರುವಾಗ ಉತ್ತಮವಾದ ಮನೋರಂಜನೆಗಳನ್ನು ಕಂಡುಕೊಳ್ಳುವುದು ಕಷ್ಟ. ಹೆಚ್ಚಾಗಿ ನೀವು ದೊಡ್ಡ ಗುಂಪಿನ ಭಾಗವಾಗಿರುತ್ತೀರಿ, ಮೈಕ್ ಹಿಡಿದ ಟೂರಿಸ್ಟ್ ಗೈಡ್ ಹಿಂದೆಹೋಗುತ್ತಾ, ಕೇವಲ ಲಿಸ್ಟ್‌ನಿಂದ ಚಟುವಟಿಕೆಗಳನ್ನು ಟಿಕ್ ಮಾಡುವ ಕೆಲಸ ಮಾಡುತ್ತಿರುವ ಭಾವನೆಯೊಂದಿಗೆ ಪ್ರವಾಸ ಪೂರ್ಣಗೊಳಿಸುತ್ತೀರಿ. ಒಂದು ನಗರವನ್ನು ಅನುಭವಿಸಲು ನೈಜ ಮಾರ್ಗವಿದ್ದರೆ ಹೇಗೆ?

ತಮ್ಮ ನಗರವನ್ನು ಚೆನ್ನಾಗಿ ತಿಳಿದಿರುವ ಸ್ಥಳೀಯರು ಹೋಸ್ಟ್ ಮಾಡುವ, ಸಂಪೂರ್ಣ ಮರುಕಲ್ಪಿತ Airbnb ಅನುಭವಗಳನ್ನು ಇಂದು ಪರಿಚಯಿಸುತ್ತಿದ್ದೇವೆ. ನಾವು ಪ್ರಪಂಚದಾದ್ಯಂತದ ನಗರಗಳಲ್ಲಿ ಅನುಭವಗಳನ್ನು ಪ್ರಾರಂಭಿಸುತ್ತಿದ್ದೇವೆ ಮತ್ತು ಪ್ರತಿದಿನ ಹೆಚ್ಚು ಅನುಭವಗಳನ್ನು ಸೇರಿಸುತ್ತಿದ್ದೇವೆ. ಗೆಸ್ಟ್‌ಗಳು ಈ ರೀತಿಯ ಅನುಭವಗಳೊಂದಿಗೆ ನಗರದ ಅತ್ಯುತ್ತಮ ಭಾಗಗಳನ್ನು ಅನ್ವೇಷಿಸಬಹುದು:

  • ಹೆಗ್ಗುರುತು, ವಸ್ತುಸಂಗ್ರಹಾಲಯ ಮತ್ತು ಸಾಂಸ್ಕೃತಿಕ ಅನುಭವಗಳು – ನೊಟ್ರೆ-ಡೇಮ್‌ನ ಜೀರ್ಣೋದ್ಧಾರ ತಂಡದಲ್ಲಿದ್ದ ವಾಸ್ತುಶಿಲ್ಪಿಯ ಕಣ್ಣುಗಳ ಮೂಲಕ ಅದರ ಜೀರ್ಣೋದ್ಧಾರದ ಜಗತ್ತಿಗೆ ಹೆಜ್ಜೆ ಹಾಕಿ.
  • ಆಹಾರ ಪ್ರವಾಸಗಳು, ಅಡುಗೆ ತರಗತಿಗಳು ಮತ್ತು ಊಟದ ಅನುಭವಗಳು - ಮಿಚೆಲಿನ್ ಬಿಬ್ ಗೌರ್ಮಂಡ್-ಪ್ರಶಸ್ತಿ ಪಡೆದ ರೆಸ್ಟೋರೆಂಟ್‌ ಒಂದರ ಬಾಣಸಿಗರಿಂದ ರಾಮೆನ್ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಳ್ಳಿ.
  • ಹೊರಾಂಗಣ, ಜಲ ಕ್ರೀಡೆಗಳು ಮತ್ತು ವನ್ಯಜೀವಿ ಅನುಭವಗಳು - ಪವಿತ್ರ ಇಂಕಾ ತಾಣಗಳಲ್ಲಿ ಮತ್ತು ಆಂಡಿಯನ್ ಭೂದೃಶ್ಯಗಳಲ್ಲಿ, ಆಂಡಿಯನ್ ಸಂಸ್ಕೃತಿ ಮತ್ತು ಮಾನವಶಾಸ್ತ್ರದಲ್ಲಿ ಸ್ಥಳೀಯ ಪರಿಣಿತರೊಂದಿಗೆ ಬೆರಗುಗೊಳಿಸುವ ಕುದುರೆ ಸವಾರಿ ಮಾಡಿ.
  • ಗ್ಯಾಲರಿ ಪ್ರವಾಸಗಳು, ಕಲಾ ಕಾರ್ಯಾಗಾರಗಳು ಮತ್ತು ಶಾಪಿಂಗ್ ಅನುಭವಗಳು - ಹಾಲಿವುಡ್ ಫ್ಯಾಷನ್ ಸಲಹೆಗಾರರಿಂದ ವೈಯಕ್ತಿಕ ಸ್ಟೈಲಿಂಗ್ ಸೆಷನ್‌ಜೊತೆ ವಾರ್ಡ್ರೋಬ್ ರಿಫ್ರೆಶ್ ಮಾಡಿಕೊಳ್ಳಿ.
  • ವರ್ಕ್ಔಟ್, ಸ್ವಾಸ್ಥ್ಯ, ಮತ್ತು ಸೌಂದರ್ಯ ಅನುಭವಗಳು - ವೃತ್ತಿಪರ ಮೆಕ್ಸಿಕನ್ ಕುಸ್ತಿಪಟುವಿನೊಂದಿಗೆ ಅಧಿಕೃತ ಲುಚಾ ಲಿಬ್ರೆ ತರಬೇತಿ ಅನುಭವಕ್ಕಾಗಿ ರಿಂಗ್‌ನೊಳಕ್ಕೆ ಹೆಜ್ಜೆ ಇಡಿ.

ಜ್ಞಾನ, ಖ್ಯಾತಿ ಮತ್ತು ನೈಜತೆಯ ಆಧಾರದ ಮೇಲೆ Airbnb ಅನುಭವಗಳನ್ನು ಗುಣಮಟ್ಟಕ್ಕಾಗಿ ಪರಿಶೀಲಿಸಲಾಗುತ್ತದೆ ಮತ್ತು ಈ ಪ್ರಕ್ರಿಯೆ ನಿರಂತರವಾಗಿದೆ. ಅನುಭವಗಳು ನಮ್ಮ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಅವುಗಳನ್ನು ನಿಯಮಿತವಾಗಿ ಪರಿಶೀಲಿಸುತ್ತೇವೆ.

Airbnb ಅನುಭವಗಳಿಗೆ ಈಗ ಸಲ್ಲಿಕೆಗಳು ತೆರೆದಿವೆ. ನಿಮ್ಮ ನಗರವನ್ನು ನೀವು ಆಳವಾಗಿ ಅರಿತುಕೊಂಡಿದ್ದರೆ ಮತ್ತು ಬೇರೆಲ್ಲಿಯೂ ಲಭ್ಯವಿಲ್ಲದ ವಿಶಿಷ್ಟ ಚಟುವಟಿಕೆಯನ್ನು ನೀಡಬಲ್ಲಿರಾದರೆ, ಅನುಭವವನ್ನು ಹೋಸ್ಟ್ ಮಾಡಲು ನಿಮ್ಮ ಐಡಿಯಾವನ್ನು ಸಲ್ಲಿಸಿ.

ಹೊಸ ಆ್ಯಪ್

ನಿಮ್ಮ ಮನೆ, ಸೇವೆ ಅಥವಾ ಅನುಭವವನ್ನು ನಿರ್ವಹಿಸಲು ಅಗತ್ಯವಿರುವ ಎಲ್ಲವನ್ನೂ ಸೇರಿಸಲು ನಾವು ಹೋಸ್ಟ್‌ಗಳಿಗೆಂದು ಆ್ಯಪ್ ಅನ್ನು ಮರುನಿರ್ಮಿಸಿದ್ದೇವೆ:

  • Airbnb ಸೆಟಪ್ – Airbnb ಗೆ ಸೇವೆ ಅಥವಾ ಅನುಭವವನ್ನು ಸಲ್ಲಿಸುವುದನ್ನು ಒಂದು ಸರಳೀಕೃತ ಲಿಸ್ಟಿಂಗ್ ರಚನೆ ಟೂಲ್ ಸುಲಭಗೊಳಿಸಿದೆ.
  • ಇಂದು ಟ್ಯಾಬ್ – ಮನೆಗಳು, ಸೇವೆಗಳು ಮತ್ತು ಅನುಭವಗಳನ್ನು ಒಳಗೊಂಡ ಹೊಚ್ಚಹೊಸ ರಿಸರ್ವೇಶನ್ ನಿರ್ವಹಣೆ ಟ್ಯಾಬ್ ಅಸಾಧಾರಣ ಆತಿಥ್ಯವನ್ನು ಒದಗಿಸಲು ನಿಮಗೆ ಸಹಾಯ ಮಾಡುತ್ತದೆ.
  • ಕ್ಯಾಲೆಂಡರ್ – ಮನೆಗಳು, ಸೇವೆಗಳು ಮತ್ತು ಅನುಭವಗಳಿಗೆಂದು ಮರುವಿನ್ಯಾಸಗೊಳಿಸಲಾದ ಕ್ಯಾಲೆಂಡರ್ ಪ್ರತಿ ಗಂಟೆಯ ವೇಳಾಪಟ್ಟಿ ಮತ್ತು Google ಕ್ಯಾಲೆಂಡರ್‌ನ ಜೊತೆ ನೈಜ-ಸಮಯದ ಏಕೀಕರಣದೊಂದಿಗೆ ಹೊಸ ದೈನಂದಿನ ವೀಕ್ಷಣೆಯನ್ನು ಒಳಗೊಂಡಿದೆ.
  • ಲಿಸ್ಟಿಂಗ್‌ಗಳು ಟ್ಯಾಬ್ – ಸೇವೆಗಳು ಮತ್ತು ಅನುಭವಗಳಿಗೆಂದು ಹೊಸ ಲಿಸ್ಟಿಂಗ್ ನಿರ್ವಹಣಾ ಟೂಲ್‌ಗಳು ಸ್ಥಳದಿಂದ ಹಿಡಿದು ಬೆಲೆಯವರೆಗೆ ನಿಮ್ಮ ಲಿಸ್ಟಿಂಗ್‌ನ ಪ್ರತಿಯೊಂದು ಅಂಶವನ್ನು ಸರಿಹೊಂದಿಸುವುದನ್ನು ಸುಲಭಗೊಳಿಸುತ್ತದೆ.

ನೀವು ಮನೆಯನ್ನು ಹೋಸ್ಟ್ ಮಾಡುತ್ತಿದ್ದರೆ, ನಿಮ್ಮ ಹೊಸ ಹೋಸ್ಟಿಂಗ್ ಟೂಲ್‌ಗಳನ್ನು ಬಳಸುವುದಕ್ಕೆ ಪ್ರಾರಂಭಿಸಲು ಈಗಲೇ ಆರಂಭಿಕ ಪ್ರವೇಶವನ್ನು ಪಡೆಯಿರಿ.

ಬ್ರೆಜಿಲ್ ಮತ್ತು ಪೋರ್ಟೊ ರಿಕೊ ಸೇರಿದಂತೆ ಎಲ್ಲಾ ಭೂಭಾಗಗಳಲ್ಲಿ ಸೇವೆಗಳು ಲಭ್ಯವಿಲ್ಲ.

Airbnb
ಮೇ 13, 2025
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ