Creating an inviting and comfortable space
ವಿಶೇಷ ಆಕರ್ಷಣೆಗಳು
ಗೆಸ್ಟ್‌ಗಳಿಗೆ ಅವರ ವಸ್ತುಗಳನ್ನು ಇರಿಸಲು ಸ್ಥಳಾವಕಾಶ ಒದಗಿಸುವ ಮೂಲಕ ಅವರಿಗೆ ಆರಾಮದಾಯಕ ಅನುಭವ ಒದಗಿಸಲು ಸಹಾಯ ಮಾಡಿ.
ಹೂಗಳು ಮತ್ತು ಫೋನ್ ಚಾರ್ಜರ್‌ಗಳಂತಹ ಚಿಂತನಶೀಲ ಸ್ಪರ್ಶಗಳನ್ನು ಸೇರಿಸಿ
ಹೆಚ್ಚುವರಿ ಟವೆಲ್‌ಗಳು, ಟಾಯ್ಲೆಟ್ ಪೇಪರ್ ಮತ್ತು ಕಾಫಿ ಮತ್ತು ಚಹಾದಂತಹ ಸೌಲಭ್ಯಗಳನ್ನು ಒದಗಿಸಿ
Airbnb ನಲ್ಲಿ ನೀವು ಯಾವುದೇ ರೀತಿಯ ಜಾಗವನ್ನು ಹಂಚಿಕೊಂಡರೂ, ನಿಮ್ಮ ಮೊದಲ ಗೆಸ್ಟ್‌ಗಳನ್ನು ಸ್ವಾಗತಿಸಲು ನೀವು ಸಿದ್ಧರಾಗುತ್ತಿರುವಾಗ ಅವರನ್ನು ಆಹ್ವಾನಿತ ಮತ್ತು ಆರಾಮದಾಯಕವಾಗಿಸಲು ನೀವು ಮಾಡಬಹುದಾದ ಕೆಲವು ಸರಳ ಸಂಗತಿಗಳಿವೆ.
ಚಿಂತನಶೀಲ ವಿನ್ಯಾಸವನ್ನು ಅಭ್ಯಾಸ ಮಾಡಿ
ವಿನ್ಯಾಸದ ಅಂಶಗಳನ್ನು ಪರಿಗಣಿಸುವುದರಿಂದ ನಿಮ್ಮ ಸ್ಥಳವು ಹೆಚ್ಚು ಆರಾಮದಾಯಕ ಮತ್ತು ಆಹ್ವಾನಿತವಾಗಿದೆ ಎಂದು ಭಾವಿಸಲು ಸಹಾಯ ಮಾಡುತ್ತದೆ ಮತ್ತು ಅವು ಸಂಕೀರ್ಣ ಅಥವಾ ದುಬಾರಿಯಾಗಿರಬೇಕಾಗಿಲ್ಲ.
ಚಿಂತನಶೀಲ ವಿನ್ಯಾಸಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ:
- ನಿಮ್ಮ ಪ್ರವಾಸಗಳಿಂದ ಸ್ಮರಣಿಕೆಗಳಂತಹ ನಿಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುವ ವಸ್ತುಗಳನ್ನು ಪ್ರದರ್ಶಿಸಿ
- ಹೆಚ್ಚು ಖಾಲಿ ಸ್ಥಳವನ್ನು ಬಿಡಬೇಡಿ, ಇದು ಖಾಲಿ ಭಾವವನ್ನು ಮೂಡಿಸುತ್ತದೆ ಮತ್ತು ನಿರಾಕಾರದ ಭಾವ ಮೂಡಿಸಬಹುದು
- ಬಣ್ಣದ ಪ್ಯಾಲೆಟ್ ಅನ್ನು ಆರಿಸಿ ಮತ್ತು ನಿಮ್ಮ ಕಲಾಕೃತಿ, ಬಟ್ಟೆ ಮತ್ತು ಇತರ ವಿವರಗಳನ್ನು ಸಂಯೋಜಿಸಿ
- ಬೋಲ್ಡ್ ಲೈಟ್ ಫಿಕ್ಷರ್ ಅಥವಾ ಅತಿಯಾದ ಗಾತ್ರದ ಈಸಿ ಚೇರ್‌ನಂತಹ ಸ್ಟೇಟ್‌ಮೆಂಟ್ ಪೀಸ್ ಅನ್ನು ಸೇರಿಸಿ
- ಚೈತನ್ಯವನ್ನು ಸೇರಿಸಲು ಸಸ್ಯಗಳು ಅಥವಾ ಹೂವುಗಳಿಂದ ಅಲಂಕರಿಸಿ
ಸೌಲಭ್ಯಗಳನ್ನು ಸಂಗ್ರಹಿಸಿಕೊಳ್ಳಿ
ಕನಿಷ್ಠ ಎಂದರೆ, ನೀವು ಟಾಯ್ಲೆಟ್ ಪೇಪರ್, ಸಾಬೂನು, ಒಂದು ಟವೆಲ್ ಮತ್ತು ಪ್ರತಿ ಗೆಸ್ಟ್‌ಗೆ ಒಂದು ದಿಂಬು ಮತ್ತು ಪ್ರತಿ ಗೆಸ್ಟ್ ಬೆಡ್‌ಗೆ ಲಿನೆನ್‌ಗಳನ್ನು ಒದಗಿಸಬೇಕು.
ಈ ಮುಂದೆ ತಿಳಿಸಲಾಗಿರುವ ವಸ್ತುಗಳನ್ನು ಕೊಟ್ಟರೆ ಗೆಸ್ಟ್‌ಗಳು ನಿಜವಾಗಿಯೂ ಸಂತೋಷಪಡುತ್ತಾರೆ:
- ಹೆಚ್ಚುವರಿ ಟವೆಲ್‌ಗಳು, ಬ್ಲಾಂಕೆಟ್‌ಗಳು ಮತ್ತು ದಿಂಬುಗಳು
- ಶಾಂಪೂ ಮತ್ತು ಕಂಡೀಷನರ್
- ಹೇರ್ ಡ್ರೈಯರ್
- ಕಾಫಿ, ಚಹಾ ಮತ್ತು ಕೆಟಲ್ ನಂತಹ ಮೂಲ ವಸ್ತುಗಳು
- ಶುಚಿಗೊಳಿಸುವ ಮೂಲ ವಸ್ತುಗಳು
ಆರಾಮದಾಯಕ ಬೆಡ್ ರೂಮ್ ರಚಿಸಿ
ಮಲಗುವ ಕೋಣೆ ನಿಮ್ಮ ಗೆಸ್ಟ್‌ಗಳು ನಿದ್ದೆ ಮಾಡುವ ಮತ್ತು ಅವರ ವಸ್ತುಗಳನ್ನು ಇಡುವ ಸ್ಥಳವಾಗಿದೆ, ಆದ್ದರಿಂದ ಅದನ್ನು ಆರಾಮದಾಯಕವಾಗಿಸುವುದು ಮುಖ್ಯವಾಗಿದೆ. ಬೇರೊಬ್ಬರ ಸ್ಥಳದಲ್ಲಿ ನೀವು ನಿಮ್ಮ ಮನೆಯಲ್ಲಿರುವಂತೆ ಆರಾಮವಾಗಿ ಭಾವಿಸಲು ನಿಮಗೆ ಏನು ಸಹಾಯ ಮಾಡುತ್ತದೆ ಎಂಬುದನ್ನು ಪರಿಗಣಿಸಿ.
ಉದಾಹರಣೆಗೆ, ನೀವು:
- ಖಾಲಿ ಡ್ರಾಯರ್‌ಗಳೊಂದಿಗೆ ಒಂದು ಡ್ರೆಸ್ಸರ್, ಕೆಲವು ಖಾಲಿ ಹ್ಯಾಂಗರ್‌ಗಳೊಂದಿಗೆ ಒಂದು ಅಲಮಾರು ಅಥವಾ ಲಗೇಜ್ ರಾಕ್ ಅನ್ನು ಒದಗಿಸುವ ಮೂಲಕ ವೈಯಕ್ತಿಕ ವಸ್ತುಗಳನ್ನು ಇಡಲು ಅವಕಾಶ ಕಲ್ಪಿಸಿ
- ಬೆಡ್ ಪಕ್ಕದಲ್ಲಿ ಟೇಬಲ್ ಮತ್ತು ಅದರ ಮೇಲೆ ದೀಪವನ್ನು ಇಡಿ, ಇದರಿಂದ ಗೆಸ್ಟ್‌ಗಳು ತಮ್ಮ ಕನ್ನಡಕಗಳು, ಫೋನ್ ಅಥವಾ ಪುಸ್ತಕವನ್ನು ಹಾಸಿಗೆಯ ಪಕ್ಕದಲ್ಲೇ ಇಡಬಹುದು
- ವಿಭಿನ್ನ ವ್ಯಕ್ತಿಗಳ ಆರಾಮವನ್ನು ಮನಸ್ಸಿನಲ್ಲಿಟ್ಟು ಗುಣಮಟ್ಟದ ಹಾಸಿಗೆ, ಕೆಲವು ಹೆಚ್ಚುವರಿ ದಿಂಬುಗಳು ಮತ್ತು ಮೃದುವಾದ ಕಂಬಳಿಗಳನ್ನು ಒದಗಿಸಿ
- ಮಲಗುವ ಕೋಣೆಯನ್ನು ಇನ್ನೂ ಆಕರ್ಷಕವಾಗಿ ಮಾಡಲು ಗಿಡಗಳು, ಕನ್ನಡಿ, ನೀರಿಗಾಗಿ ಜಗ್ ಮತ್ತು ಲೋಟ, ಅಂತರರಾಷ್ಟ್ರೀಯ ಪವರ್ ಅಡಾಪ್ಟರ್ ಮತ್ತು ಮಲ್ಟಿ-ಫೋನ್ ಚಾರ್ಜರ್ ಅನ್ನು ಇಡಿ
ಮುಕ್ತಾಯದ ಕೆಲಸಗಳನ್ನು ಪೂರ್ತಿಗೊಳಿಸಿ
ನಿಮ್ಮ ಉತ್ತಮ ಅತಿಥಿಸತ್ಕಾರಕ್ಕೆ ಪೂರಕವಾಗಿ ಇನ್ನೂ ಕೆಲವು ವಿಷಯಗಳನ್ನು ಸೇರಿಸುವ ಮೂಲಕ ನಿಮ್ಮ ಗೆಸ್ಟ್‌ಗಳಿಗೆ ತಮ್ಮ ವಾಸ್ತವ್ಯವನ್ನು ಆನಂದಿಸಲು ನೀವು ಸಹಾಯ ಮಾಡಬಹುದು.
1. ಅನಾವಶ್ಯಕ ವಸ್ತುಗಳನ್ನು ತೆಗೆದುಹಾಕಿ. ನೀವು ಗೆಸ್ಟ್‌ಗಳೊಂದಿಗೆ ಹಂಚಿಕೊಳ್ಳುತ್ತಿರುವ ಸ್ಥಳದಲ್ಲಿ ವಾಸಿಸುತ್ತಿದ್ದರೆ, ನೀವು ಯಾವ ವಸ್ತುಗಳನ್ನು ಮೇಲೆ ಇಡಬೇಕು ಮತ್ತು ಯಾವುದನ್ನು ಒಳಗೆ ಇಡಬೇಕು ಎನ್ನುವುದನ್ನು ನಿರ್ಧರಿಸುವುದು ತುಂಬಾ ಮುಖ್ಯ. ಅನಾವಶ್ಯಕ ವಸ್ತುಗಳನ್ನು ತೆಗೆಯುವುದರಿಂದ ಮತ್ತು ನಿಮ್ಮ ವಸ್ತುಗಳನ್ನು ಆಕರ್ಷಕವಾಗಿ ಜೋಡಿಸಿ ಶೇಖರಿಸುವುದರಿಂದ ನಿಮ್ಮ ಸ್ಥಳದ ಸೊಬಗು ಹೆಚ್ಚುತ್ತದೆ ಮತ್ತು ವಿಶಾಲವಾಗಿ ಕಾಣುತ್ತದೆ.
2. ಸೂಚನೆಗಳನ್ನು ಒದಗಿಸಿ. ತಮ್ಮ ಬಳಕೆಗಾಗಿ ಲಭ್ಯವಿರುವ ಎಲ್ಲ ಉಪಕರಣಗಳು ಮತ್ತು ವೈಶಿಷ್ಟ್ಯಗಳನ್ನು (ಗ್ಯಾಸ್ ಫೈಯರ್‌ಪ್ಲೇಸ್, ಹವಾನಿಯಂತ್ರಣ ಅಥವಾ ಗ್ಯಾರೇಜ್ ಬಾಗಿಲು ಇತ್ಯಾದಿಗಳನ್ನು) ಹೇಗೆ ಉಪಯೋಗಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಗೆಸ್ಟ್‌ಗಳಿಗೆ ಸಹಾಯ ಮಾಡಿ. ಈ ಸೂಚನೆಗಳನ್ನು ನಿಮ್ಮ ಮನೆಯ ಕೈಪಿಡಿಯಲ್ಲಿ ನೀವು ಸೇರಿಸಬಹುದು.
3. ರಾತ್ರಿ ಉಳಿಯಿರಿ. ಆಗಾಗ್ಗೆ ನಿಮ್ಮ ಜಾಗದಲ್ಲಿ ರಾತ್ರಿಯಿಡೀ ತಂಗುವುದರಿಂದ ಏನೆಲ್ಲ ಬೇಕಾಗಬಹುದು ಅಥವಾ ಯಾವ ರೀತಿಯಲ್ಲಿ ಸ್ಥಳದ ಸೊಬಗನ್ನು ಹೆಚ್ಚಿಸಬಹುದು ಎಂಬುದನ್ನು ಕಂಡುಹಿಡಿಯಲು ನೆರವಾಗುತ್ತದೆ. ಸ್ಥಳವು ಆರಾಮದಾಯಕ ಮತ್ತು ಆಕರ್ಷಕವಾಗಿದೆಯೇ? ಸ್ವಂತ ಮನೆಯಲ್ಲಿ ಇರುವಂತೆ ಆರಾಮದಾಯಕ ಅನುಭವವನ್ನು ಪಡೆಯಲು ಅಗತ್ಯವಿರುವ ಎಲ್ಲವೂ ಇದೆಯೇ? ಈ ಎರಡೂ ಪ್ರಶ್ನೆಗಳಿಗೆ "ಹೌದು" ಎಂದು ನೀವು ಉತ್ತರಿಸುವವರೆಗೆ ಬದಲಾವಣೆಗಳನ್ನು ಮಾಡುತ್ತಾ ಇರಿ.
4. ವಸ್ತುಗಳನ್ನು ಸ್ವಚ್ಛವಾಗಿಡಿ. ನಿಮ್ಮ ಸ್ಥಳವನ್ನು ನೀವೇ ಶುಚಿಗೊಳಿಸಿದರೂ ಅಥವಾ ವೃತ್ತಿಪರರನ್ನು ನೇಮಿಸಿಕೊಂಡರೂ ಸರಿಯೇ ನಿಮ್ಮ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಮತ್ತು ಪ್ರತಿ ಗೆಸ್ಟ್ ಬರುವ ಮುಂಚೆ ಮತ್ತು ನಂತರ ಐದು-ಹಂತದ ಶುಚಿಗೊಳಿಸುವ ಪ್ರಕ್ರಿಯೆಯನ್ನು ಅನುಸರಿಸುವುದು ಮುಖ್ಯವಾಗಿದೆ. ನಿಮ್ಮ ಅಥವಾ ನಿಮ್ಮ ಕ್ಲೀನರ್‌ನ ವೆಚ್ಚವನ್ನು ಸರಿದೂಗಿಸಲು ನೀವು ಸ್ವಚ್ಛಗೊಳಿಸುವಿಕೆಯ ಶುಲ್ಕವನ್ನು ಸೇರಿಸಬಹುದು. ಗೆಸ್ಟ್‌ಗಳಿಗೆ ನಿಮ್ಮ ಸ್ಥಳವನ್ನು ಸಿದ್ಧಪಡಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ, ನೀವು ಬಳಸಬಹುದಾದ ಚೆಕ್‌ಲಿಸ್ಟ್ ಅನ್ನು ನಾವು ರಚಿಸಿದ್ದೇವೆ.
ವಿಶೇಷ ಆಕರ್ಷಣೆಗಳು
ಗೆಸ್ಟ್‌ಗಳಿಗೆ ಅವರ ವಸ್ತುಗಳನ್ನು ಇರಿಸಲು ಸ್ಥಳಾವಕಾಶ ಒದಗಿಸುವ ಮೂಲಕ ಅವರಿಗೆ ಆರಾಮದಾಯಕ ಅನುಭವ ಒದಗಿಸಲು ಸಹಾಯ ಮಾಡಿ.
ಹೂಗಳು ಮತ್ತು ಫೋನ್ ಚಾರ್ಜರ್‌ಗಳಂತಹ ಚಿಂತನಶೀಲ ಸ್ಪರ್ಶಗಳನ್ನು ಸೇರಿಸಿ
ಹೆಚ್ಚುವರಿ ಟವೆಲ್‌ಗಳು, ಟಾಯ್ಲೆಟ್ ಪೇಪರ್ ಮತ್ತು ಕಾಫಿ ಮತ್ತು ಚಹಾದಂತಹ ಸೌಲಭ್ಯಗಳನ್ನು ಒದಗಿಸಿ