ನಿಮ್ಮ ಸ್ಥಳೀಯ ಹೋಸ್ಟ್ ಕ್ಲಬ್ ಅನ್ನು ಮುನ್ನಡೆಸಿರಿ

ಸಂಪರ್ಕಿಸಲು, ಸಹಯೋಗ ಮಾಡಲು ಮತ್ತು ಹಂಚಿಕೊಳ್ಳಲು ನಿಮ್ಮ ಪ್ರದೇಶದಲ್ಲಿ ಹೋಸ್ಟ್‌ಗಳನ್ನು ಒಟ್ಟುಗೂಡಿಸಿ.
Airbnb ಅವರಿಂದ ನವೆಂ 23, 2020ರಂದು
2 ನಿಮಿಷ ಓದಲು
ಆಗ 26, 2024 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ನಿಮ್ಮ ಸ್ಥಳೀಯ ಹೋಸ್ಟ್ ಸಮುದಾಯವನ್ನು ಸಶಕ್ತಗೊಳಿಸಲು ಪ್ರಪಂಚದಾದ್ಯಂತ ಇರುವ ಹೋಸ್ಟ್ ಕ್ಲಬ್‌ಗಳ ನಾಯಕರನ್ನು ಸೇರಿಕೊಳ್ಳಿ

  • Airbnb ಯ ಬೆಂಬಲದೊಂದಿಗೆ, ನಾಯಕರು ತಮ್ಮ ಪ್ರದೇಶದಲ್ಲಿನ ಹೋಸ್ಟ್‌ಗಳಿಗಾಗಿ ಸ್ಥಳೀಯ Facebook ಗುಂಪನ್ನು ಸುಗಮಗೊಳಿಸುತ್ತಾರೆ

  • ಮುಖತಃ ಮತ್ತು ಆನ್‌ಲೈನ್ ಎರಡೂ ರೀತಿಯಲ್ಲಿ, ಭೇಟಿಗಳ ಮೂಲಕ ಸಂಪರ್ಕವನ್ನು ಬೆಳೆಸಿಕೊಳ್ಳಿ

  • Airbnb ವೈಶಿಷ್ಟ್ಯಗಳು, ಕಾರ್ಯಕ್ರಮಗಳು ಮತ್ತು ನೀತಿ ಅಪ್‌ಡೇಟ್‌ಗಳಿಗೆ ಆರಂಭಿಕ ಪ್ರವೇಶ ಮತ್ತು ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಸ್ವೀಕರಿಸಿ

ನೀವು ಹೋಸ್ಟಿಂಗ್ ಬಗ್ಗೆ ಉತ್ಸಾಹಭರಿತರಾಗಿದ್ದೀರಾ ಮತ್ತು ನಿಮ್ಮ ನಗರದಲ್ಲಿ ಹೋಸ್ಟ್‌ಗಳನ್ನು ಒಟ್ಟುಗೂಡಿಸಲು ಆಸಕ್ತಿ ಹೊಂದಿದ್ದೀರಾ? ಜಗತ್ತಿನಾದ್ಯಂತ ಹೋಸ್ಟ್‌ ಕ್ಲಬ್‌ಗಳ ಪ್ರತಿನಿಧಿಗಳಾಗಿರುವ, ಆಯ್ದ ಕೆಲವು ಸಮುದಾಯ ನಾಯಕರು Airbnb ಯಲ್ಲಿನ ನಿರ್ಧಾರ ಪ್ರಕ್ರಿಯೆಗಳಲ್ಲಿಹೋಸ್ಟ್‌ಗಳ ಧ್ವನಿಯನ್ನು ಎತ್ತಿ ಹಿಡಿಯುವ ಮೂಲಕ ಮತ್ತು ಸ್ಥಳೀಯ ವಕಾಲತ್ತುಗಳ ಮೂಲಕ ಪಾಲುಗಾರಿಕೆಗಳನ್ನು ಕಟ್ಟುವ ಮೂಲಕ Airbnb ಸಮುದಾಯದ ಅವಿಭಾಜ್ಯ ಅಂಗವಾಗಿ ಕಾರ್ಯಾಚರಿಸುತ್ತಿದ್ದಾರೆ.

"ನಾನು ಸಮುದಾಯ ನಾಯಕನಾಗಲು ಸ್ವಯಂಪ್ರೇರಿತನಾಗಿದ್ದೇನೆ ಏಕೆಂದರೆ ಇದು ನನ್ನ ಜೀವನವನ್ನು ಬೆಳೆಸಲು ಮತ್ತು ವಿಸ್ತರಿಸಲು ವೈಯಕ್ತಿಕವಾಗಿ ನನಗೆ ಸಹಾಯ ಮಾಡುತ್ತದೆ," ಎಂದು ಕೊಲೊರಾಡೋ ಸ್ಪ್ರಿಂಗ್ಸ್ ಹೋಸ್ಟ್ ಕ್ಲಬ್‌ನ ನಾಯಕ ರಾಬಿನ್ ಹೇಳುತ್ತಾರೆ. "ನಾನು ಹೋಸ್ಟಿಂಗ್ ಬಗ್ಗೆ ಉತ್ಸಾಹಭರಿತನಾಗಿದ್ದೇನೆ ಮತ್ತು ನನ್ನ ಸಮುದಾಯದೊಳಗೆ ಹಂಚಿಕೆಯ ದೃಷ್ಟಿಕೋನವನ್ನು ಒಳಗೊಂಡಿರುವ ಉತ್ತಮ ಭವಿಷ್ಯವನ್ನು ಸೃಷ್ಟಿಸುವುದಕ್ಕೆ ಆಲೋಚನೆಗಳನ್ನು ಸಹಯೋಗಿಸಲು ಬಯಸುತ್ತೇನೆ."

ಕಾರ್ಯಕ್ರಮದ ಬಗ್ಗೆ ಮತ್ತು ನಿಮ್ಮ ಪ್ರದೇಶದಲ್ಲಿ ನಾಯಕರಾಗಲು ನೀವು ಹೇಗೆ ಅರ್ಜಿ ಸಲ್ಲಿಸಬಹುದು ಎಂಬ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಓದಿ.

ಪರಿಣಾಮ ಬೀರುವುದು

ಅಲ್ಪಾವಧಿಯ ಬಾಡಿಗೆ ನಿಯಮಗಳ ಕುರಿತು ಗುಂಪು ಚರ್ಚೆಗಳಿಂದ ಹಿಡಿದು ಸ್ಥಳೀಯ ಸೇವೆಗಳನ್ನು ಶಿಫಾರಸು ಮಾಡುವವರೆಗೆ, ಹೋಸ್ಟ್ ಕ್ಲಬ್ ಸದಸ್ಯರು ದೊಡ್ಡ ಮತ್ತು ಸಣ್ಣ ಸವಾಲುಗಳಲ್ಲಿ ಪರಸ್ಪರ ಸಹಾಯ ಮಾಡುತ್ತಾರೆ. "ಇಲ್ಲಿ ನಾವು, ಪ್ರಸ್ತುತ ಕಠಿಣವಾದ ಬಾಡಿಗೆ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದೇವೆ ಮತ್ತು ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡಲು ನಾವೆಲ್ಲರೂ ಪ್ರಯತ್ನಿಸುತ್ತಿದ್ದೇವೆ. ಅದು ಸಮುದಾಯವಾಗಿದೆ "ಎಂದು ನ್ಯಾಶ್‌ವಿಲ್‌ನ ನಾಯಕ ಬಾರ್ಬ್ ವಿವರಿಸುತ್ತಾರೆ. ಸಮುದಾಯದ ನಾಯಕರು ತಮ್ಮ ಸ್ಥಳೀಯ ಗುಂಪುಗಳಿಂದ ಪ್ರಾಮಾಣಿಕ ಮತ್ತು ಒಳನೋಟವುಳ್ಳ ಪ್ರತಿಕ್ರಿಯೆಯನ್ನು ಒದಗಿಸುತ್ತಾರೆ, ಇದು ಅವರಿಗೆ Airbnb ನೀತಿ ಮತ್ತು ಉತ್ಪನ್ನವನ್ನು ರೂಪಿಸುವಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡುತ್ತದೆ. ಅವರು ಸ್ಥಳೀಯ ಹೋಸ್ಟ್‌ಗಳನ್ನು ಇತರ ಪರಿಣಾಮಕಾರಿ ವಿಧಾನಗಳಲ್ಲಿ ಕೂಡ ಒಟ್ಟಿಗೆ ತರುತ್ತಾರೆ:

  • ಸ್ಥಳೀಯ ಫೇಸ್‌ಬುಕ್ ಗುಂಪನ್ನು ಮುನ್ನಡೆಸುವುದು: Airbnb ಬೆಂಬಲದೊಂದಿಗೆ, ನಾಯಕರು ತಮ್ಮ ಪ್ರದೇಶದಲ್ಲಿನ ಸ್ಥಳೀಯ ಹೋಸ್ಟ್‌ಗಳಿಗಾಗಿ ಫೇಸ್‌ಬುಕ್ ಗುಂಪನ್ನು ನಿಭಾಯಿಸಿ ಬೆಳೆಸುತ್ತಾರೆ. ಇದು ನಿಮ್ಮ ಹೋಸ್ಟ್ ಕ್ಲಬ್‌ನಲ್ಲಿ ತಾಜಾ ಮಾಹಿತಿಗಳನ್ನು ನೀಡಲು, ಒಳನೋಟಗಳನ್ನು ಹಂಚಿಕೊಳ್ಳಲು ಮತ್ತು ಸಂಭಾಷಣೆಯನ್ನು ರಚಿಸಲು ಒಂದು ಸ್ಥಳವಾಗಿದೆ.
    ಮೀಟ್ಅಪ್‌ಗಳ ಮೂಲಕ ಸಂಪರ್ಕವನ್ನು ಬೆಳೆಸುವುದು: ನಾಯಕರು ಮಾಸಿಕ ವರ್ಚುವಲ್ ಮೀಟ್ಅಪ್‌ಗಳನ್ನು ಆಯೋಜಿಸುವ ಮೂಲಕ ಸ್ಥಳೀಯ ಹೋಸ್ಟ್‌ಗಳನ್ನು ಒಟ್ಟಿಗೆ ತರುತ್ತಾರೆ. Airbnb ನಿಂದ ಒದಗಿಸಲಾದ ಟೂಲ್‌ಕಿಟ್‌ಗಳು ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು, ಹೋಸ್ಟ್‌ಗಳು ಪರಸ್ಪರರ ಅತ್ಯುತ್ತಮ ಅಭ್ಯಾಸಗಳಿಂದ ಕಲಿಯುತ್ತಾರೆ ಮತ್ತು ಸ್ಥಳೀಯ ಜ್ಞಾನವನ್ನು ಹಂಚಿಕೊಳ್ಳುತ್ತಾರೆ.
  • ಸ್ಥಳೀಯ ಹೋಸ್ಟ್ ಧ್ವನಿಯನ್ನು ವರ್ಧಿಸುವುದು: ನಾಯಕರು ತಮ್ಮ ಸಮುದಾಯವನ್ನು ಕಥೆಗಳು, ಆಲೋಚನೆಗಳು ಮತ್ತು ಪ್ರತಿಕ್ರಿಯೆಯನ್ನು Airbnb ಸಮುದಾಯ ತಂಡದೊಂದಿಗೆ ಹಂಚಿಕೊಳ್ಳುವ ಮೂಲಕ ಪ್ರತಿನಿಧಿಸುತ್ತಾರೆ. ಸ್ಥಳೀಯ ಪ್ರವಾಸೋದ್ಯಮವನ್ನು ಪ್ರಭಾವಿತ ಮಾಡಲು ಮತ್ತು ನಿಮ್ಮ ಸಮುದಾಯದಲ್ಲಿ ಸಮನಾದ ಬದಲಾವಣೆಯನ್ನು ಸೃಷ್ಟಿಸಲು ಸ್ಥಳೀಯ ಪಾಲುದಾರಿಕೆಗಳನ್ನು ನಿರ್ಮಿಸಿ.
ರಜಾದಿನದ ಬಾಡಿಗೆಗಳ ಸುತ್ತಲೂ ವ್ಯವಹಾರವನ್ನು ಬೆಳೆಸುವುದಕ್ಕಾಗಿ ನಾನು ನನ್ನ ಒಳ್ಳೆಯ ಸಂಬಳದ ಕಾರ್ಪೊರೇಟ್ ಕೆಲಸವನ್ನು ತೊರೆದಿದ್ದೇನೆ, ಆದ್ದರಿಂದ ಇತರರು ಕೂಡ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಸಹಾಯ ಮಾಡಲು ನನಗೆ ಹೆಮ್ಮೆ ಇದೆ.
Jeff, Host Club Leader,
ಫಿಲಡೆಲ್ಫಿಯಾ

ಸಮುದಾಯದಲ್ಲಿ ನಾಯಕರನ್ನು ಹೆಚ್ಚಿಸುವುದು

ಸಮೃದ್ಧ ಸಮುದಾಯವನ್ನು ನಿರ್ಮಿಸುವುದು ಸಾಮೂಹಿಕ ಪ್ರಯತ್ನವಾಗಿದೆ. ಸಮುದಾಯ ನಾಯಕರು ತಮ್ಮ ಹೋಸ್ಟ್ ಕ್ಲಬ್ ಅನ್ನು ಹೊಸ ಮತ್ತು ನವೀನ ರೀತಿಯಲ್ಲಿ ನಿರಂತರವಾಗಿ ಮುನ್ನಡೆಸಲು Airbnb ಮತ್ತು ಸಹ ಹೋಸ್ಟ್‌ಗಳಿಂದ ಬೆಂಬಲ ಮತ್ತು ಸಾಧನಗಳನ್ನು ಒದಗಿಸಲಾಗುತ್ತದೆ:

  • ಜಾಗತಿಕ ನೆಟ್‌ವರ್ಕ್‌ಗೆ ಸೇರಿ: ಸಹ ನಾಯಕರೊಂದಿಗೆ ಸೇರಿ, ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ನಿಮ್ಮನ್ನು ಬೆಳೆಸಲು ನೆರವಾಗುವ ವಿಶೇಷ ವೆಬಿನಾರ್‌ಗಳು ಮತ್ತು ಮಾಹಿತಿ ಅಧಿವೇಶನಗಳಲ್ಲಿ ಭಾಗವಹಿಸಿ.
    ಆಂತರಿಕ ಪ್ರವೇಶವನ್ನು ಪಡೆಯಿರಿ: ನಾಯಕರು ಕೆಲವು ಇತ್ತೀಚಿನ Airbnb ವೈಶಿಷ್ಟ್ಯಗಳು, ಕಾರ್ಯಕ್ರಮಗಳು ಮತ್ತು ನೀತಿ ನವೀಕರಣಗಳಿಗೆ ಆರಂಭಿಕ ಪ್ರವೇಶವನ್ನು ಮತ್ತು ಪ್ರಾರಂಭವಾಗುವ ಮೊದಲು ಪ್ರತಿಕ್ರಿಯೆಯನ್ನು ಒದಗಿಸುವ ಅವಕಾಶವನ್ನು ಪಡೆಯುತ್ತಾರೆ.
 ನಾಯಕರಾಗಿ, ನೀವು ನಿಮ್ಮ ಗುಂಪಿನೊಂದಿಗೆ ಹಂಚಲು ವಿಶಿಷ್ಟ ವಿಷಯಗಳನ್ನು ಸಹ ಹಂಚಲಾಗುವುದು, ಉದಾಹರಣೆಗೆ ಸ್ಥಳೀಯ ಡೇಟಾ ಒಳನೋಟಗಳು.
  • ನಿರಂತರ ಶಿಕ್ಷಣವನ್ನು ಪಡೆಯಿರಿ: ಸಮುದಾಯ ನಿರ್ಮಾಣ, ಈವೆಂಟ್ ಸಂಯೋಜನೆ ಮತ್ತು ಸಾಮಾಜಿಕ ಮಾಧ್ಯಮ ಅತ್ಯುತ್ತಮ ಅಭ್ಯಾಸಗಳ ಕುರಿತು ವಿಶೇಷ ಶೈಕ್ಷಣಿಕ ಸಾಮಗ್ರಿಗಳಿಗೆ ಪ್ರವೇಶ ಪಡೆಯಿರಿ.

ನಿಮ್ಮ ಪ್ರದೇಶದಲ್ಲಿ ಹೋಸ್ಟ್ ಕ್ಲಬ್ ಅನ್ನು ಪ್ರಾರಂಭಿಸಲು ಸಹಾಯ ಮಾಡಿ

ಅಸ್ತಿತ್ವದಲ್ಲಿರುವ ಹೋಸ್ಟ್ ಕ್ಲಬ್‌ನ ನಾಯಕರಾಗಲು ಅಥವಾ ನಿಮ್ಮ ನಗರದಲ್ಲಿ ಒಂದನ್ನು ಪ್ರಾರಂಭಿಸಲು, ಲೀಡರ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ವಿಶೇಷ ಆಕರ್ಷಣೆಗಳು

  • ನಿಮ್ಮ ಸ್ಥಳೀಯ ಹೋಸ್ಟ್ ಸಮುದಾಯವನ್ನು ಸಶಕ್ತಗೊಳಿಸಲು ಪ್ರಪಂಚದಾದ್ಯಂತ ಇರುವ ಹೋಸ್ಟ್ ಕ್ಲಬ್‌ಗಳ ನಾಯಕರನ್ನು ಸೇರಿಕೊಳ್ಳಿ

  • Airbnb ಯ ಬೆಂಬಲದೊಂದಿಗೆ, ನಾಯಕರು ತಮ್ಮ ಪ್ರದೇಶದಲ್ಲಿನ ಹೋಸ್ಟ್‌ಗಳಿಗಾಗಿ ಸ್ಥಳೀಯ Facebook ಗುಂಪನ್ನು ಸುಗಮಗೊಳಿಸುತ್ತಾರೆ

  • ಮುಖತಃ ಮತ್ತು ಆನ್‌ಲೈನ್ ಎರಡೂ ರೀತಿಯಲ್ಲಿ, ಭೇಟಿಗಳ ಮೂಲಕ ಸಂಪರ್ಕವನ್ನು ಬೆಳೆಸಿಕೊಳ್ಳಿ

  • Airbnb ವೈಶಿಷ್ಟ್ಯಗಳು, ಕಾರ್ಯಕ್ರಮಗಳು ಮತ್ತು ನೀತಿ ಅಪ್‌ಡೇಟ್‌ಗಳಿಗೆ ಆರಂಭಿಕ ಪ್ರವೇಶ ಮತ್ತು ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಸ್ವೀಕರಿಸಿ

Airbnb
ನವೆಂ 23, 2020
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ