ಲಿಸ್ಟಿಂಗ್ ಟ್ಯಾಬ್ ಅನ್ನು ಪರಿಚಯಿಸುತ್ತಿದ್ದೇವೆ
ಸಂಪಾದಕರ ಟಿಪ್ಪಣಿ: ಈ ಲೇಖನವನ್ನು 2023 ರ ಚಳಿಗಾಲದ ಬಿಡುಗಡೆಯ ಭಾಗವಾಗಿ ಪ್ರಕಟಿಸಲಾಗಿದೆ. ಮಾಹಿತಿಯು ಅದರ ಪ್ರಕಟಣೆಯ ನಂತರ ಬದಲಾಗಿರಬಹುದು. ನಮ್ಮ ಇತ್ತೀಚಿನ ಉತ್ಪನ್ನ ಬಿಡುಗಡೆಯ ಬಗ್ಗೆ ಇನ್ನಷ್ಟು ತಿಳಿಯಿರಿ.
ನಿಮ್ಮ ಮನೆಯ ಬಗ್ಗೆ ಗೆಸ್ಟ್‌ಗಳು ಹೀಗೆ ತಿಳಿದುಕೊಳ್ಳುವುದರಿಂದ ಲಿಸ್ಟಿಂಗ್ ಅನ್ನು ನಿರ್ವಹಿಸುವುದು ಹೋಸ್ಟಿಂಗ್‍ನ ಅತ್ಯಗತ್ಯ ಭಾಗಗಳಲ್ಲಿ ಒಂದಾಗಿದೆ. ಹೆಚ್ಚಿನ ವಿವರಗಳನ್ನು ಹೊಂದಿರುವ ಲಿಸ್ಟಿಂಗ್‍ಗಳು 20% ವರೆಗೆ ಹೆಚ್ಚಿನ ಬುಕಿಂಗ್‍ಗಳನ್ನು ಪಡೆಯುವುದನ್ನು ನಾವು ನೋಡಿದ್ದೇವೆ. ಆದರೆ ಅನೇಕ ಲಿಸ್ಟಿಂಗ್‍ಗಳಲ್ಲಿ ಗೆಸ್ಟ್‌ಗಳಿಗೆ ಬೇಕಿರುವ ವಿವರಗಳು ಇರುವುದಿಲ್ಲ, ಏಕೆಂದರೆ ಅವುಗಳನ್ನು ಸೇರಿಸುವುದು ತುಂಬಾ ಕಷ್ಟಕರವಾಗಿರುತ್ತದೆ.
ಅದಕ್ಕಾಗಿಯೇ ನಾವು ಲಿಸ್ಟಿಂಗ್‍ಗಳ ಟ್ಯಾಬ್ ಅನ್ನು ಪರಿಚಯಿಸುತ್ತಿದ್ದೇವೆ-ಇದು ನಿಮ್ಮ ಲಿಸ್ಟಿಂಗ್ ಅನ್ನು ಸುಲಭವಾಗಿ ನಿರ್ವಹಿಸಲು ಮತ್ತು ನಿಮ್ಮ ಮನೆಯ ವಿವರಗಳನ್ನು ಪ್ರದರ್ಶಿಸಲು ನಿಮಗೆ ಅನುಮತಿಸುವ ಹೊಸ ಟೂಲ್ಗಳ ಒಂದು ಗುಂಪಾಗಿದೆ.
ಹೊಸ ಲಿಸ್ಟಿಂಗ್ ಟ್ಯಾಬ್‍ನ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:
- ಲಿಸ್ಟಿಂಗ್ ಎಡಿಟರ್ ಸೌಕರ್ಯಗಳು, ನಿದ್ರೆಯ ವ್ಯವಸ್ಥೆಗಳು ಮತ್ತು ಇನ್ನಷ್ಟನ್ನು ಒಳಗೊಂಡಂತೆ ನಿಮ್ಮ ಲಿಸ್ಟಿಂಗ್ ಬಗೆಗಿನ-ವಿವರಗಳನ್ನು ಸೇರಿಸುವುದನ್ನು ಸುಲಭಗೊಳಿಸುತ್ತದೆ. ಮರುವಿನ್ಯಾಸಗೊಳಿಸಲಾದ ಇಂಟರ್ ಫೇಸ್ ಚೆಕ್-ಇನ್‍ಗೆ ಮೊದಲು ಗೆಸ್ಟ್‌ಗಳಿಗೆ ಅಗತ್ಯವಿರುವ ಆಗಮನದ ಮಾಹಿತಿಗಳನ್ನು ಎಡಿಟ್ ಮಾಡುವುದನ್ನೂ ಕೂಡ ಸರಳಗೊಳಿಸುತ್ತದೆ.
- AI- ಚಾಲಿತ ಫೋಟೋ ಟೂರ್ ನಿಮ್ಮ ಲಿಸ್ಟಿಂಗ್‍ನ ಫೋಟೋ ಟೂರ್ ಅನ್ನು ತಕ್ಷಣವೇ ರಚಿಸಲು ನಿಮಗೆ ಸಹಾಯ ಮಾಡುತ್ತದೆ. ಗೆಸ್ಟ್‌ಗಳು ನಿಮ್ಮ ಮನೆಯ ವಿನ್ಯಾಸವನ್ನು ಅರ್ಥಮಾಡಿಕೊಳ್ಳಲು ಇದು ರೂಮ್‍ಗಳಿಗೆ ಅನುಗುಣವಾಗಿ ಫೋಟೋಗಳನ್ನು ಆಯೋಜಿಸುತ್ತದೆ. ನಿಮ್ಮ ಫೋಟೋ ಟೂರ್ ಅನ್ನು ನೀವು ಯಾವುದೇ ಸಮಯದಲ್ಲೂ ಎಡಿಟ್ ಮಾಡಬಹುದು ಮತ್ತು ಪ್ರತಿ ಕೋಣೆಗೂ ಸೌಲಭ್ಯಗಳನ್ನು ಸೇರಿಸಬಹುದು.
- ಸ್ಮಾರ್ಟ್ ಲಾಕ್ ಏಕೀಕರಣವು ನಿಮ್ಮ Airbnb ಖಾತೆಗೆ ಹೊಂದಾಣಿಕೆಯಾಗುವ ಸ್ಮಾರ್ಟ್ ಲಾಕ್‌ಗಳನ್ನು ಸಂಪರ್ಕಿಸಲು ಮತ್ತು ಪ್ರತಿ ರಿಸರ್ವೇಶನ್‍ಗೆ ಅನನ್ಯವಾದ ಕೋಡ್ ಅನ್ನು ಸ್ವಯಂಚಾಲಿತವಾಗಿ ರಚಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
ಲಿಸ್ಟಿಂಗ್‌ಗಳ ಟ್ಯಾಬ್‌ನೊಂದಿಗೆ ಪ್ರಾರಂಭಿಸುವುದು
ನಿಮ್ಮ ನ್ಯಾವಿಗೇಷನ್ ಬಾರ್‌ನ ಮಧ್ಯಭಾಗದಲ್ಲಿರುವ ಲಿಸ್ಟಿಂಗ್‍ಗಳ ಟ್ಯಾಬ್ ಅನ್ನು ಒತ್ತಿ. ಈಗ ನೀವು ಲಿಸ್ಟಿಂಗ್ ಎಡಿಟರ್‌ನಲ್ಲಿದ್ದೀರಿ. ಈ ಮರುವಿನ್ಯಾಸಗೊಳಿಸಲಾದ ಪರಿಕರವು ನಿಮ್ಮ ಲಿಸ್ಟಿಂಗ್‌ಗೆ ಮಾಹಿತಿಯನ್ನು ಹೇಗೆ ಸೇರಿಸಬೇಕೆಂದು ತಿಳಿಸುತ್ತದೆ ಹಾಗೂ ವಿವರಗಳನ್ನು ಪ್ರದರ್ಶಿಸುವ ಅತ್ಯುತ್ತಮ ವಿಧಾನಗಳ ಬಗ್ಗೆ ಸಲಹೆಗಳನ್ನು ನೀಡುತ್ತದೆ.
ಲಿಸ್ಟಿಂಗ್ ಎಡಿಟರ್ ಅನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ:
ನಿಮ್ಮ ಸ್ಥಳವುನಿಮ್ಮ ಲಿಸ್ಟಿಂಗ್ ಪುಟವನ್ನು ನೀವು ನಿರ್ವಹಿಸುವ ಮತ್ತು ನಿಮ್ಮ ಮನೆಯ ಬಗ್ಗೆ ವಿವರಗಳನ್ನು ಸೇರಿಸುವ ಸ್ಥಳವಾಗಿದೆ.
ಆಗಮನದ ಮಾರ್ಗದರ್ಶಿ ಎಂದರೆ ಗೆಸ್ಟ್‌ಗಳು ಚೆಕ್-ಇನ್ ಮಾಡುವ ಮೊದಲು ನೀವು ಅವರಿಗೆ ಅಗತ್ಯವಿರುವ ವಿವರಗಳನ್ನು ಸೇರಿಸುವ ಸ್ಥಳವಾಗಿದೆ.
ನಿಮ್ಮ ಸ್ಥಳ
ನಿಮ್ಮ ಲಿಸ್ಟಿಂಗ್ ಶೀರ್ಷಿಕೆ, ವಿವರಣೆ ಮತ್ತು ಸೌಕರ್ಯಗಳಂತಹ ನಿಮ್ಮ ಮನೆಯ ಬಗೆಗಿನ ವಿವರಗಳನ್ನು ನೀವು ಇಲ್ಲಿಯೇ ಸೇರಿಸುತ್ತೀರಿ.
ಸೌಲಭ್ಯಗಳನ್ನು ಸೇರಿಸುವುದು
ನಿಮ್ಮ ಲಿಸ್ಟಿಂಗ್‍ಗೆ ಸೌಲಭ್ಯಗಳನ್ನು ಸೇರಿಸುವುದು ಈಗ ಹಿಂದೆಂದಿಗಿಂತಲೂ ಸುಲಭವಾಗಿದೆ. ಸೌಲಭ್ಯಗಳಿಗೆ ಹೋಗಿ ಮತ್ತು ಸಂಕಲನ ಚಿಹ್ನೆಯನ್ನು (+) ಒತ್ತಿ. ನೀವು ಮನರಂಜನೆ, ಕುಟುಂಬ ಮತ್ತು ಹೊರಾಂಗಣಗಳೂ ಸೇರಿದಂತೆ ವರ್ಣಮಾಲೆಯ ಅಥವಾ ವರ್ಗದ ಪ್ರಕಾರ ಸುಮಾರು 150 ಸೌಲಭ್ಯಗಳನ್ನು ವೀಕ್ಷಿಸಬಹುದು. ನೀವು ಹೆಸರಿನ ಮೂಲಕವೂ ಸ್ಕ್ರೋಲಿಂಗ್ ಅಗತ್ಯವಿಲ್ಲದೇ ಸೌಕರ್ಯವನ್ನು ಹುಡುಕಬಹುದು. ನಿಮ್ಮ ಮನೆ ಹೊಂದಿರುವ ಯಾವುದೇ ವೈಶಿಷ್ಟ್ಯದ ಪಕ್ಕದಲ್ಲಿರುವ ಸಂಕಲನ ಚಿಹ್ನೆಯನ್ನು ಆಯ್ಕೆಮಾಡಿ.
ಫೋಟೋ ಟೂರ್ ಅನ್ನು ರಚಿಸುವುದು
ಉತ್ತಮ-ಗುಣಮಟ್ಟದ ಫೋಟೋಗಳು ಉತ್ತಮ ಲಿಸ್ಟಿಂಗ್‍ನ ಪ್ರಮುಖ ಭಾಗಗಳಲ್ಲಿ ಒಂದಾಗಿವೆ. ಅವರು ಗೆಸ್ಟ್‌ಗಳ ಗಮನ ಸೆಳೆಯುತ್ತವೆ ಮತ್ತು ಹೆಚ್ಚಿನ ಬುಕಿಂಗ್‌ಗಳನ್ನು ಆಕರ್ಷಿಸಲು ಸಹಾಯ ಮಾಡಬಹುದು.
ಗೆಸ್ಟ್‌ಗಳು ನಿಮ್ಮ ಮನೆಯ ಲೇಔಟ್ ಅನ್ನು ಅರ್ಥಮಾಡಿಕೊಳ್ಳಲು ನಿಮ್ಮ ಲಿಸ್ಟಿಂಗ್ ಫೋಟೋಗಳನ್ನು ಫೋಟೋ ಟೂರ್ ಆಗಿ ತಕ್ಷಣವೇ ಆಯೋಜಿಸಲು ನೀವು ಹೊಸ AI- ಚಾಲಿತ ಫೋಟೋ ಟೂರ್ ಅನ್ನು ಬಳಸಬಹುದು. ನೀವು ಮಾಡಬೇಕಾಗಿರುವುದೇನೆಂದರೆ ನಿಮ್ಮ ಫೋಟೋ ಟೂರ್ ರಚಿಸಿ ಎನ್ನುವುದನ್ನು ಒತ್ತುವುದಾಗಿದೆ. ಅಷ್ಟೇ.
ಕಸ್ಟಮ್ AI ಎಂಜಿನ್ ಆಂತರಿಕ ಮತ್ತು ಬಾಹ್ಯ ಫೋಟೋಗಳನ್ನು ಗುರುತಿಸುತ್ತದೆ ಮತ್ತು ಪ್ರತಿ ಚಿತ್ರವನ್ನು 19 ವಿಧದ ರೂಮ್‌ಗಳು ಮತ್ತು ಬೇರೆ ಸ್ಥಳಗಳಲ್ಲಿ ಒಂದಕ್ಕೆ ಸ್ವಯಂಚಾಲಿತವಾಗಿ ನಿಯೋಜಿಸುತ್ತದೆ.
ಮುಂದೆ, ನೀವು ಪ್ರತಿ ರೂಮ್‌ಗೂ ವಿವರಗಳನ್ನು ಸೇರಿಸಬಹುದು. ಉದಾಹರಣೆಗೆ, ಮಲಗುವ ಕೋಣೆಯಲ್ಲಿ ಕಿಂಗ್-ಸೈಜ್ ಬೆಡ್ ಇದೆ ಅಥವಾ ಲಿವಿಂಗ್ ರೂಮ್‍ನಲ್ಲಿ ಟಿವಿ ಇದೆ ಎಂದು ನೀವು ಸೇರಿಸಬಹುದು. ಈ ಮಾರ್ಗಸೂಚಿಗಳನ್ನು ಅನುಸರಿಸಿ ನೀವು ಪ್ರವೇಶಾವಕಾಶವಿರುವ ವೈಶಿಷ್ಟ್ಯಗಳ ಬಗ್ಗೆಯೂ ಮಾಹಿತಿಯನ್ನು ಸಹ ಸೇರಿಸಬಹುದು.
ಫೋಟೋಗಳನ್ನು ತೆಗೆದುಹಾಕುವ, ಚಲಿಸುವ ಅಥವಾ ಸೇರಿಸುವ ಮೂಲಕ ನಿಮ್ಮ ಫೋಟೋ ಟೂರ್ ಅನ್ನು ನೀವು ಯಾವುದೇ ಸಮಯದಲ್ಲೂ ಎಡಿಟ್ ಮಾಡಲು ಸಾಧ್ಯವಾಗುತ್ತದೆ. ನೀವು ಎಡಿಟ್ ಮಾಡುವುದನ್ನು ಪೂರ್ಣಗೊಳಿಸಿದ ನಂತರ, ವೀಕ್ಷಿಸಿ ಬಟನ್ ಅನ್ನು ಒತ್ತುವ ಮೂಲಕ ನಿಮ್ಮ ಲಿಸ್ಟಿಂಗ್ ಅನ್ನು ಪ್ರಿವ್ಯೂ ಮಾಡಿ.
ಆಗಮನ ಮಾರ್ಗದರ್ಶಿ
ಇಲ್ಲಿ ಗೆಸ್ಟ್‌ಗಳು ಬುಕ್ ಮಾಡಿದ ನಂತರ ಅವರು ಬರುವ ಮೊದಲು, ಅವರಿಗೆ ಬೇಕಾದ ಚೆಕ್-ಇನ್ ಸಮಯ ಮತ್ತು ಯಾವುದೇ ವಿಶೇಷ ನಿರ್ದೇಶನಗಳು ಅಥವಾ ಪಾರ್ಕಿಂಗ್ ಸೂಚನೆಗಳಂತಹ ವಿವರಗಳನ್ನು ನೀವು ಇಲ್ಲಿಯೇ ಸೇರಿಸುತ್ತೀರಿ. ಮೊದಲ ಬಾರಿಗೆ, ನಿಮ್ಮ ಗೆಸ್ಟ್‌ಗಳು ನೋಡುವಂತೆ ನಿಮ್ಮ ಆಗಮನದ ಮಾಹಿತಿಯನ್ನು ನಿಖರವಾಗಿ ನೋಡಲು ನಿಮಗೆ ಸಾಧ್ಯವಾಗುತ್ತದೆ. ವೀಕ್ಷಿಸಿ ಬಟನ್ ಅನ್ನು ಒತ್ತಿ.
ಆಗಮನ ಮಾರ್ಗದರ್ಶಿಯೊಂದಿಗೆಚೆಕ್-ಇನ್ ವಿವರಗಳನ್ನು ನೀಡುವುದು
, ಗೆಸ್ಟ್‌ಗಳು ಬುಕ್ ಮಾಡಿದ ನಂತರವೂ ನೀವು ಚೆಕ್-ಇನ್ ವಿವರಗಳನ್ನು ಸುಲಭವಾಗಿ ಹಂಚಿಕೊಳ್ಳುವುದನ್ನು ಸಾಧ್ಯವಾಗಿಸುತ್ತದೆ. ನಿಮ್ಮ ಚೆಕ್-ಇನ್ ವಿಧಾನ ಮತ್ತು ಸಮಯ, ನಿರ್ದೇಶನಗಳು, ಮನೆ ಕೈಪಿಡಿ, ವೈಫೈ ಪಾಸ್‍ವರ್ಡ್ ಮತ್ತು ಹೆಚ್ಚಿನವುಗಳನ್ನು ನೀವು ಒಂದೇ ಸ್ಥಳದಲ್ಲಿ ಸೆಟ್ ಮಾಡಬಹುದು ಅಥವಾ ಹೊಂದಿಸಬಹುದು.
ನಿಮ್ಮ ಸ್ಮಾರ್ಟ್ ಲಾಕ್ ಅನ್ನು ಸಂಪರ್ಕಿಸುವುದು
ನೀವು ಶೀಘ್ರದಲ್ಲೇ ನಿಮ್ಮ Airbnb ಖಾತೆಗೆ ಸ್ಮಾರ್ಟ್ ಲಾಕ್ ಅನ್ನು ಸಂಪರ್ಕಿಸುವುದನ್ನು ಮತ್ತು ಪ್ರತಿ ರಿಸರ್ವೇಶನ್‍ಗೆ ಅನನ್ಯವಾದ ಮನೆ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ರಚಿಸುವುದನ್ನು ಸಾಧ್ಯವಾಗಿಸುತ್ತದೆ. ಇನ್ನು ಮುಂದೆ ಬುಕಿಂಗ್‍ಗಳ ನಡುವೆ ನೀವೇ ಖುದ್ದಾಗಿ ಕೋಡ್‍ಗಳನ್ನು ಬದಲಾಯಿಸುವ ಆತ್ಯವಿಲ್ಲ.
ಗೆಸ್ಟ್‌ಗಳು Airbnb ಯಲ್ಲಿರುವ ತಮ್ಮ ರಿಸರ್ವೇಶನ್ ವಿವರಗಳಲ್ಲಿ ಈ ಕೋಡ್ ಅನ್ನು ನೋಡಬಹುದಾಗಿದ್ದು, ಅದನ್ನು ಹೇಗೆ ನಮೂದಿಸಬೇಕು ಎಂಬುದರ ವಿವರಗಳೂ ಅಲ್ಲಿಯೇ ಇರುತ್ತವೆ. ಅವರು ಬುಕ್ ಮಾಡಿದ ಕೂಡಲೇ ಅವರು ತಮ್ಮ ಮನೆ ಸಂಖ್ಯೆಯನ್ನು ಇಮೇಲ್‍ನಲ್ಲಿ ಸ್ವೀಕರಿಸುತ್ತಾರೆ ಮತ್ತು ಚೆಕ್ ಇನ್ ಮಾಡುವ ಸಮಯ ಬಂದಾಗ ಅವರು ಅಧಿಸೂಚನೆಯನ್ನು ಪಡೆಯುತ್ತಾರೆ. ಪ್ರತಿ ಕೋಡ್ ಗೆಸ್ಟ್‌ಗಳ ವಾಸ್ತವ್ಯದ ಸಮಯದಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ. ನಿಮ್ಮ ಗೆಸ್ಟ್‌ಗಳಿಗೆ ಈ ಸಮಯವನ್ನು ನೀವೇ ಖುದ್ದಾಗಿ ಸರಿಹೊಂದಿಸದ ಹೊರತು ಚೆಕ್ ಔಟ್ ಮಾಡಿದ 30 ನಿಮಿಷಗಳ ನಂತರ ಕೋಡ್‍ಗಳು ಅವಧಿ ಮೀರುತ್ತವೆ.
ಸ್ಮಾರ್ಟ್ ಲಾಕ್ ಏಕೀಕರಣವು US ಮತ್ತು ಕೆನಡಾದಲ್ಲಿ ಲಿಸ್ಟಿಂಗ್‍ಗಳು ಮತ್ತು ಶ್ಲೇಜ್‍ನಿಂದ ಕೆಲವು ಲಾಕ್‍ಗಳನ್ನು ಹೊಂದಿರುವ ಹೋಸ್ಟ್‌ಗಳಿಗೆ 2024 ರ ಆರಂಭದಲ್ಲಿ ಪ್ರಾರಂಭವಾಗುತ್ತದೆ. ಇದು ನಿಮ್ಮ ಸ್ಥಳದಲ್ಲಿ ಲಭ್ಯವಿರುವಾಗ, ನೀವು ಅದನ್ನು ಚೆಕ್-ಇನ್ ವಿಧಾನದ ಅಡಿಯಲ್ಲಿ ಕಾಣುತ್ತೀರಿ. ನಿಮ್ಮ ಮನೆಯ ಸ್ಮಾರ್ಟ್ ಲಾಕ್ ಅನ್ನು ನಿಮ್ಮ Airbnb ಲಿಸ್ಟಿಂಗ್‌ಗೆ ಸಂಪರ್ಕಿಸಲು ಸೂಚನೆಗಳನ್ನು ಅನುಸರಿಸಿ.