ಏಕಕಾಲದಲ್ಲಿ ಅನೇಕ ಲಿಸ್ಟಿಂಗ್‌ಗಳನ್ನು ನವೀಕರಿಸುವುದು ಹೇಗೆ

ಕೇವಲ ಒಂದು ಹಂತದಲ್ಲೇ ನೀವು ಶುಲ್ಕಗಳು ಮತ್ತು ಸೇವಾದರಗಳು, ಸೌಲಭ್ಯಗಳು ಮತ್ತು ಇನ್ನೂ ಹೆಚ್ಚಿನದನ್ನು ಅಪ್‌ಡೇಟ್‌ ಮಾಡಬಹುದು.
Airbnb ಅವರಿಂದ ಡಿಸೆಂ 13, 2018ರಂದು
2 ನಿಮಿಷ ಓದಲು
ಏಪ್ರಿ 3, 2025 ನವೀಕರಿಸಲಾಗಿದೆ

ವಿಶೇಷ ಆಕರ್ಷಣೆಗಳು

  • ಅದೇ ಪುಟದಿಂದ ಎಡಿಟ್ ಮಾಡಲು ಅತ್ಯಂತ ಉಪಯುಕ್ತವಾಗಬಹುದಾದ ವಿಷಯಗಳನ್ನು ಗುರುತಿಸಲು ನಮ್ಮ ಹೋಸ್ಟ್ ಸಮುದಾಯವು ಸಹಾಯ ಮಾಡಿತು

  • ಇವುಗಳಲ್ಲಿ ಲಭ್ಯತೆ, ಸೌಲಭ್ಯಗಳು, ಸ್ಥಳ, ರದ್ದತಿ ನೀತಿಗಳು ಮತ್ತು ಇನ್ನಷ್ಟು ಸೇರಿವೆ

  • ಒಂದೇ ಹಂತದಲ್ಲಿ ಅನೇಕ ಲಿಸ್ಟಿಂಗ್‌ಗಳನ್ನು ನವೀಕರಿಸುವ ಮೂಲಕ, ನೀವು ಸಮಯವನ್ನು ಉಳಿಸಬಹುದು

ಪ್ರತಿ ಟೂಲ್ ಮತ್ತು ವೈಶಿಷ್ಟ್ಯದೊಂದಿಗೆ, ಪ್ರಾಪರ್ಟಿ ವ್ಯವಸ್ಥಾಪಕರು, ಬೊಟಿಕ್ ಹೋಟೆಲ್‌ಗಳು ಮತ್ತು ಬೆಡ್ ಆ್ಯಂಡ್ ಬ್ರೇಕ್‌ಫಾಸ್ಟ್‌ಗಳ ಮಾಲೀಕರು ಮತ್ತು ವಿಶೇಷ ವ್ಯವಹಾರ ಅಗತ್ಯಗಳನ್ನು ಹೊಂದಿರುವ ಇತರ ಹೋಸ್ಟ್‌ಗಳಿಗಾಗಿ Airbnb ಪ್ಲಾಟ್‌ಫಾರ್ಮ್ ಅನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ. ಲಿಸ್ಟಿಂಗ್‌ಗಳಿಗೆ ಅಪ್‌ಡೇಟ್‌ಗಳನ್ನು ಮಾಡಲು ಹಂತಗಳನ್ನು ಕ್ರೋಢೀಕರಿಸುವ ಮೂಲಕ, ಅನೇಕ ಲಿಸ್ಟಿಂಗ್‌ಗಳನ್ನು ನಿರ್ವಹಿಸುವ ಹೋಸ್ಟ್‌ಗಳಿಗೆ ಹೆಚ್ಚಿನ ದಕ್ಷತೆಯನ್ನು ಒದಗಿಸಲು ನಮಗೆ ಸಾಧ್ಯವಾಗಿದೆ. ಸುಧಾರಿತ ಕೆಲಸದ ಹರಿವಿನೊಂದಿಗೆ, ಹೋಸ್ಟ್‌ಗಳು ತಮ್ಮ ಎಲ್ಲಾ ಪ್ರಾಪರ್ಟಿಗಳನ್ನು ಏಕಕಾಲದಲ್ಲಿ ವೀಕ್ಷಿಸಬಹುದು ಮತ್ತು ವಿವಿಧ ಬದಲಾವಣೆಗಳನ್ನು ಮಾಡಬಹುದು.

ಒಂದೇ ಸ್ಥಳದಲ್ಲಿ ಬಹು ಲಿಸ್ಟಿಂಗ್‌ಗಳನ್ನು ನವೀಕರಿಸಿ

ಈ ಹಿಂದೆ, ಪ್ರತಿಯೊಂದು ವೈಯಕ್ತಿಕ ಲಿಸ್ಟಿಂಗ್ ಮೂಲಕ ಅಪ್‌ಡೇಟ್‌ಗಳನ್ನು ಮಾಡಬೇಕಾಗಿತ್ತು. ಲಿಸ್ಟಿಂಗ್‌ಗಳ ಪುಟದಿಂದ, ಈಗ ನೀವು ಹುಡುಕುತ್ತಿರುವ ಲಿಸ್ಟಿಂಗ್‌ಗಳನ್ನು ಕಂಡುಕೊಳ್ಳಬಹುದು, ವಿಂಗಡಿಸಬಹುದು ಮತ್ತು ಫಿಲ್ಟರ್ ಮಾಡಬಹುದು, ನಂತರ ಎಡಭಾಗದಲ್ಲಿರುವ ಬಾಕ್ಸ್‌ಗಳಲ್ಲಿ ಗುರುತು ಮಾಡುವ ಮೂಲಕ ನೀವು ಅಪ್‌ಡೇಟ್‌ ಮಾಡಲು ಬಯಸುವ ಲಿಸ್ಟಿಂಗ್‌ಗಳನ್ನು ಆಯ್ಕೆಮಾಡಿ. ಇಲ್ಲಿಂದ, ಸ್ವಚ್ಛಗೊಳಿಸುವಿಕೆಯ ಶುಲ್ಕಗಳು* ಮತ್ತು ಭದ್ರತಾ ಠೇವಣಿಗಳು ಮುಂತಾದ ಹೆಚ್ಚುವರಿ ಶುಲ್ಕಗಳಿಗೆ ಬದಲಾವಣೆಗಳನ್ನು ಮಾಡಿ, ಜೊತೆಗೆ ಸೌಲಭ್ಯಗಳು ಮತ್ತು ಚೆಕ್-ಇನ್ ವಿಧಾನಗಳಂತಹ ಲಿಸ್ಟಿಂಗ್ ವಿವರಗಳಲ್ಲೂ ಬದಲಾವಣೆಗಳನ್ನು ಮಾಡಿ. ತೀರಾ ಇತ್ತೀಚಿನ ವೈಶಿಷ್ಟ್ಯವೊಂದರಲ್ಲಿ ಅನೇಕ ಲಿಸ್ಟಿಂಗ್‌ಗಳಲ್ಲಿ ರದ್ದತಿ ನೀತಿಗಳು ಮತ್ತು ಮನೆ ನಿಯಮಗಳನ್ನು ಅಪ್‌ಡೇಟ್ ಮಾಡಲು ಹೋಸ್ಟ್‌ಗಳಿಗೆ ಅನುಕೂಲ ಕಲ್ಪಿಸಲಾಗಿದೆ.

ಮೂಲತಃ, ಒಮ್ಮೆಗೆ ಹೋಸ್ಟ್‌ಗಳು ಕೇವಲ ಪ್ರಾಪರ್ಟಿ ವಿಧಗಳನ್ನು ಮತ್ತು ಕೆಲವು ಸೌಲಭ್ಯಗಳನ್ನು ಮಾತ್ರ ನವೀಕರಿಸಬಹುದು. ತಕ್ಷಣದ ಸಮಯ-ಉಳಿಸುವ ಫಲಿತಾಂಶಗಳನ್ನು ಅವರು ವರದಿ ಮಾಡಿದಾಗ, ಇತರ ವಿಧದ ನವೀಕರಣಗಳನ್ನು ನಾವು ವಿಸ್ತರಿಸುವ ಅಗತ್ಯವಿದೆ ಎನ್ನುವುದು ನಮಗೆ ತಿಳಿದಿತ್ತು. ನಮ್ಮ ಹೋಸ್ಟ್ ಸಮುದಾಯದ ಸಹಾಯದೊಂದಿಗೆ, ಅದೇ ಪುಟದಿಂದ ಎಡಿಟ್ ಮಾಡಲು ಅತ್ಯಂತ ಉಪಯುಕ್ತವಾಗಬಹುದಾದ ಆದ್ಯತೆಯ ವಿಷಯಗಳನ್ನು ನಾವು ಗುರುತಿಸಿದೆವು. ಈಗ, ಸೌಲಭ್ಯಗಳಿಂದ ಹೆಚ್ಚುವರಿ ಸೇವಾ ಶುಲ್ಕಗಳು, ಮನೆಯ ನಿಯಮಗಳು ಮತ್ತು ಚೆಕ್-ಇನ್ ವಿಧಾನಗಳವರೆಗೆ ಎಲ್ಲವನ್ನೂ ಒಂದು ನೋಟದಿಂದ ನವೀಕರಿಸಬಹುದು. ಸೀಮಿತ ಸಿಂಕ್‌ಗೆ ಹೊಂದಿಸಲಾಗಿರುವ ಯಾವುದೇ ಲಿಸ್ಟಿಂಗ್ ಆದ್ಯಂತ ಯಾವುದೇ ನವೀಕರಣಗಳನ್ನು ಸಾಫ್ಟ್‌ವೇರ್-ಸಂಪರ್ಕಿತ ಹೋಸ್ಟ್‌ಗಳು ಮಾಡಬಹುದು.

ನಿಮ್ಮ ಲಿಸ್ಟಿಂಗ್‌ಗಳನ್ನು ತ್ವರಿತವಾಗಿ ಅಪ್‌ಡೇಟ್‌ ಮಾಡಿ

ಒಂದು ಹಂತದೊಂದಿಗೆ ಅಪ್‌ಡೇಟ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಕಂಡುಕೊಳ್ಳಿ. ನೀವು ನವೀಕರಿಸಬಹುದಾದ ಕ್ಷೇತ್ರಗಳಲ್ಲಿ ಇವು ಸೇರಿವೆ:

  • ದರ ನಿಗದಿ
    • ಸೇವಾಶುಲ್ಕಗಳು ಮತ್ತು ಶುಲ್ಕಗಳು
    • ವಾಸ್ತವ್ಯದ ಅವಧಿಗೆ ರಿಯಾಯಿತಿಗಳು
  • ಲಿಸ್ಟಿಂಗ್ ವಿವರಗಳು
    • ಸೌಲಭ್ಯಗಳು
    • ಉಚಿತ ಮನೆಗಳು
    • ಸ್ಥಳ
    • ಪ್ರಾಪರ್ಟಿಯ ಪ್ರಕಾರ
    • ಚೆಕ್-ಇನ್ ವಿಧಾನ
  • ಬುಕಿಂಗ್ ಸೆಟ್ಟಿಂಗ್‌ಗಳು
    • ರದ್ದತಿ ನೀತಿ
    • ಸ್ಟ್ಯಾಂಡರ್ಡ್ ಮನೆ ನಿಯಮಗಳು
    • ಟ್ರಿಪ್ ಅವಧಿ
  • ಶುಚಿಗೊಳಿಸುವಿಕೆ
    • ವರ್ಧಿತ ಶುಚಿಗೊಳಿಸುವಿಕೆ ಪ್ರೊಟೋಕಾಲ್
  • ಲಭ್ಯತೆ ಸೆಟ್ಟಿಂಗ್‌ಗಳು
    • ಬುಕಿಂಗ್ ಬಫರ್

ಪ್ಲಾಟ್‌ಫಾರ್ಮ್ ಅನ್ನು ಅರ್ಥಪೂರ್ಣ ರೀತಿಯಲ್ಲಿ ವಿಕಸನಗೊಳಿಸಲು ಮತ್ತು ವೃತ್ತಿಪರ ಪರಿಕರಗಳು ಹಾಗೂ ವೈಶಿಷ್ಟ್ಯಗಳ ಇನ್ನಷ್ಟು ದೊಡ್ಡ ಸೂಟ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಪಡೆಯಲು ನಾವು ನಮ್ಮ ಹೋಸ್ಟ್‌ಗಳೊಂದಿಗೆ ಹೇಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ ಎಂಬ ಕುರಿತು ಪ್ರತಿಕ್ರಿಯೆ ಒಂದು ನಿರ್ಣಾಯಕ ಭಾಗವಾಗಿದೆ. ಲಿಸ್ಟಿಂಗ್‌ಗಳ ಪುಟದಲ್ಲಿ ನೀವು ಯಾವ ಇತರ ಅಪ್‌ಡೇಟ್‌ಗಳನ್ನು ನೋಡಬಯಸುತ್ತೀರಿ ಎಂದು ನಮಗೆ ತಿಳಿಸಲು ಈ ಪುಟ ವನ್ನು ಬಳಸಿ.

ಪ್ರಾರಂಭಿಸಲು ಸಿದ್ಧರಿದ್ದೀರಾ?

ನಿಮ್ಮ ಲಿಸ್ಟಿಂಗ್‌‌ಗಳನ್ನು ನಿರ್ವಹಿಸಲು ಪ್ರಾರಂಭಿಸಲು ಸೈನ್ ಇನ್ ಮಾಡಿ. ಅಥವಾ ವೃತ್ತಿಪರ ಪರಿಕರಗಳ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ.

*ಮೇನ್‌ಲ್ಯಾಂಡ್ ಚೀನಾದಲ್ಲಿ ವಸತಿ ಸೌಕರ್ಯಗಳನ್ನು ಒದಗಿಸುವ ಹೋಸ್ಟ್‌ಗಳ ಹೊರತುಪಡಿಸುವಿಕೆ. ಇನ್ನಷ್ಟು ತಿಳಿಯಿರಿ

ಈ ಲೇಖನದಲ್ಲಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.

ವಿಶೇಷ ಆಕರ್ಷಣೆಗಳು

  • ಅದೇ ಪುಟದಿಂದ ಎಡಿಟ್ ಮಾಡಲು ಅತ್ಯಂತ ಉಪಯುಕ್ತವಾಗಬಹುದಾದ ವಿಷಯಗಳನ್ನು ಗುರುತಿಸಲು ನಮ್ಮ ಹೋಸ್ಟ್ ಸಮುದಾಯವು ಸಹಾಯ ಮಾಡಿತು

  • ಇವುಗಳಲ್ಲಿ ಲಭ್ಯತೆ, ಸೌಲಭ್ಯಗಳು, ಸ್ಥಳ, ರದ್ದತಿ ನೀತಿಗಳು ಮತ್ತು ಇನ್ನಷ್ಟು ಸೇರಿವೆ

  • ಒಂದೇ ಹಂತದಲ್ಲಿ ಅನೇಕ ಲಿಸ್ಟಿಂಗ್‌ಗಳನ್ನು ನವೀಕರಿಸುವ ಮೂಲಕ, ನೀವು ಸಮಯವನ್ನು ಉಳಿಸಬಹುದು

Airbnb
ಡಿಸೆಂ 13, 2018
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ