ಉತ್ತಮ Airbnb ಪ್ರೊಫೈಲ್ ಫೋಟೋ ತೆಗೆದುಕೊಳ್ಳುವುದು ಹೇಗೆ

ನಿಮ್ಮ ಚಿತ್ರವನ್ನು ತೆಗೆದುಕೊಳ್ಳಲು, ಎಡಿಟ್ ಮಾಡಲು ಮತ್ತು ಅಪ್‌ಲೋಡ್ ಮಾಡಲು ಈ ಮಾರ್ಗಸೂಚಿಗಳು ನಿಮಗೆ ಸಹಾಯ ಮಾಡುತ್ತವೆ.
Airbnb ಅವರಿಂದ ಮೇ 3, 2023ರಂದು
2 ನಿಮಿಷ ಓದಲು
ಏಪ್ರಿ 3, 2025 ನವೀಕರಿಸಲಾಗಿದೆ

ಸಂಪೂರ್ಣ ಮನೆ ಅಥವಾ ಪ್ರೈವೇಟ್ ರೂಮ್‌‌, ನೀವು ಯಾವುದನ್ನೇ ಹೋಸ್ಟ್ ಮಾಡುತ್ತಿರಲಿ, ಗೆಸ್ಟ್‌ಗಳು ತಮ್ಮ ಹೋಸ್ಟ್ ಯಾರೆಂಬುದರ ಬಗ್ಗೆ ಸಾಮಾನ್ಯ ಕಲ್ಪನೆಯನ್ನು ಹೊಂದಿರುವಾಗ ರಿಸರ್ವೇಶನ್ ಮಾಡುವುದು ಹೆಚ್ಚು ಹಿತಕರವೆಂದು ಭಾವಿಸುತ್ತಾರೆ.

ಉತ್ತಮ ಮೊದಲ ಪ್ರಭಾವ ಬೀರಲು ನಿಮ್ಮ ಪ್ರೊಫೈಲ್ ಚಿತ್ರ ಮುಖ್ಯವಾಗಿದೆ. ನಿಮ್ಮ ಸ್ಥಳಗಳಂತಹವುಗಳಲ್ಲಿ ಆಸಕ್ತಿ ಹೊಂದಿರುವ ಗೆಸ್ಟ್‌ಗಳಿಗೆ ನಿಮ್ಮನ್ನು ಪರಿಚಯಿಸುವ ಇದು, ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಲಿಸ್ಟಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಗೆಸ್ಟ್‌ಗಳು ನಿಮ್ಮ ಫೋಟೋದ ಮೇಲೆ ಒತ್ತಿದಾಗ ಅಥವಾ ಕ್ಲಿಕ್ ಮಾಡಿದಾಗ, ನಿಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವರನ್ನು ನಿಮ್ಮ ಪ್ರೊಫೈಲ್‌ಗೆ ಕಳುಹಿಸಲಾಗುತ್ತದೆ.

ಉತ್ತಮ ಪ್ರೊಫೈಲ್ ಫೋಟೋವನ್ನು ತೆಗೆದುಕೊಳ್ಳಲು, ಎಡಿಟ್ ಮಾಡಲು ಮತ್ತು ಅಪ್‌ಲೋಡ್ ಮಾಡುವ ಕುರಿತು ನಿಮಗೆ ಸಹಾಯ ಮಾಡಲು ನಾವು ಈ ಮಾರ್ಗಸೂಚಿಗಳನ್ನು ಒಟ್ಟುಗೂಡಿಸುತ್ತೇವೆ.

ನಿಮ್ಮ ಫೋಟೋ ತೆಗೆದುಕೊಳ್ಳುವುದು

ಸೂಕ್ತ ಪ್ರೊಫೈಲ್ ಫೋಟೋ ಪ್ರಸ್ತುತವಾಗಿದೆ, ಅದು ನಿಮ್ಮನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ನಿಮ್ಮ ಮುಖಕ್ಕೆ ಪ್ರಕಾಶ ಬೀಳುತ್ತಿರುವ ಕ್ಲೋಸ್-ಅಪ್ ಫೋಟೋವನ್ನು ಬೇರೊಬ್ಬರು ತೆಗೆದರೆ ಉತ್ತಮವಾಗಿರುತ್ತದೆ.

 ಉತ್ತಮ ಪ್ರೊಫೈಲ್ ಫೋಟೋವನ್ನು ತೆಗೆಯಲು ಈ ಶಿಫಾರಸುಗಳನ್ನು ಅನುಸರಿಸಿ: 

  • ಸರಿಯಾದ ಸೆಟ್ಟಿಂಗ್ ಅನ್ನು ಹುಡುಕಿ. ನಿಮ್ಮ ಮನೆಯ ಒಳಗೆ ಅಥವಾ ಹೊರಗೆ ನಿಮ್ಮ ಮುಖಕ್ಕೆ ನೇರವಾಗಿ ಸೂರ್ಯನ ಬೆಳಕು ಬೀಳದೆ ಅಥವಾ ನೆರಳು ಬೀಳದೆ ನೈಸರ್ಗಿಕ ಬೆಳಕು ಇರುವ ಜಾಗದಲ್ಲಿ ನಿಂತುಕೊಳ್ಳಿ ಅಥವಾ ಕುಳಿತುಕೊಳ್ಳಿ . ಬುಕ್‌ಶೆಲ್ಫ್ ಅಥವಾ ಇಟ್ಟಿಗೆ ಗೋಡೆಯಂತಹ ಸರಳ ಹಿನ್ನೆಲೆಯನ್ನು ಹೊಂದಿರುವ ಸ್ಥಳವನ್ನು ಆರಿಸಿ.
  • ಸ್ನೇಹಿತ ಅಥವಾ ಕುಟುಂಬದ ಸದಸ್ಯರ ಸಹಾಯ ಪಡೆದುಕೊಳ್ಳಿ. ನಿಮ್ಮ ಫೋನಿನ ಕ್ಯಾಮರಾದಲ್ಲಿ ಬೇರೊಬ್ಬರಿಂದ ಫೋಟೋ ತೆಗಿಸಿ ಆಗ ನಿಮಗೆ ಎಲ್ಲಾ ಫೋಟೋಗಳು ಸಿಗುತ್ತವೆ. ನಿಮ್ಮ ಛಾಯಾಗ್ರಾಹಕರನ್ನು ನಿಮ್ಮಿಂದ ಮೂರು ಅಡಿ (ಒಂದು ಮೀಟರ್) ದೂರದಲ್ಲಿ ನಿಂತು ಫೋಕಸ್ ಮಾಡಲು ಹೇಳು ಆಗ ನಿಮ್ಮ ಮುಖವು ಮಧ್ಯಭಾಗದಲ್ಲಿರುತ್ತದೆ ಮತ್ತು ನಿಮ್ಮ ತಲೆಯ ಸುತ್ತಲೂ ಸ್ಥಳವು ಇರುತ್ತದೆ. ನೀವು ಒಳಗಿದ್ದರೆ, ನಿಮ್ಮ ಛಾಯಾಗ್ರಾಹಕರ ಹಿಂದೆ ಕಿಟಕಿಗಳು ಬರುವ ಹಾಕೆ ಅವರು ನಿಂತುಕೊಳ್ಳಬೇಕು.
  • ಪೋಸ್ ಕೊಡಿ. ಕ್ಯಾಮರಾಗೆ ಮುಖ ಮಾಡುವ ಹಾಗೆ ನಿಮ್ಮ ಭುಜಗಳನ್ನು ಸ್ಕ್ವೇರ್ ಆಗಿ ಇಡಿ. ನಿಮ್ಮ ಕೈಗಳನ್ನು ನಿಮ್ಮ ಪಾಕೆಟ್‌ಗಳಲ್ಲಿ ಅಥವಾ ನಿಮ್ಮ ಬದಿಗಳಲ್ಲಿ ಇರಿಸಿ. ಸನ್‌ಗ್ಲಾಸ್‌ಗಳನ್ನು ಧರಿಸುವುದನ್ನು ತಪ್ಪಿಸಿ ಮತ್ತು ಯಾವುದರ ಮೇಲೂ ಬಾಗಬೇಡಿ ಅಥವಾ ಒರಗಿಕೊಳ್ಳಬೇಡಿ. ಆಳವಾಗಿ ಉಸಿರು ತೆಗೆದುಕೊಳ್ಳಿ. ನೀವು ಉಸಿರು ಬಿಡುವಾಗ, ನಿಮ್ಮ ಕಣ್ಣುಗಳನ್ನು ತೆರೆಯಿರಿ ಮತ್ತು ಕಿರುನಗೆ ಬೀರಿ.

ಫೋಟೋ ಎಡಿಟ್ ಮಾಡುವುದು

ನಿಮ್ಮ ಫೋಟೋವನ್ನು ನೀವು ತೆಗೆದುಕೊಂಡ ನಂತರ, ಅಗತ್ಯವಿರುವ ಯಾವುದೇ ಎಡಿಟ್ ಮಾಡಲು ನಿಮ್ಮ ಫೋನ್ ಅನ್ನು ಬಳಸಿ. ಕೆಲವು ಸಲಹೆಗಳು ಇಲ್ಲಿವೆ:

  • ನಿಮ್ಮ ಇಮೇಜ್ ಅನ್ನು ದೊಡ್ಡದಾಗಿಸಿ. ನಿಮ್ಮ ಫೋನ್‌ನ ಇಮೇಜ್ ಗ್ಯಾಲರಿಗೆ ಹೋಗಿ ಮತ್ತು ನಿಮ್ಮ ಇಮೇಜ್ ಅನ್ನು ಆಯ್ಕೆಮಾಡಿ. ಎಡಿಟ್ ಸೆಟ್ಟಿಂಗ್ ಅನ್ನು ಒತ್ತಿ. ಆಟೋ-ಎನ್‌ಹಾನ್ಸ್‌ಮೆಂಟ್‌ ಟೂಲ್‌ ಅನ್ನು ಆಯ್ಕೆ ಮಾಡಿ, ಇದು ಸಾಮಾನ್ಯವಾಗಿ ಮ್ಯಾಜಿಕ್ ವಂಡ್ ಅನ್ನು ಹೋಲುತ್ತದೆ. ಇದು ನಿಮ್ಮ ಫೋಟೋದ ಹೊಳಪು, ಬಣ್ಣ ಮತ್ತು ಕಾಂಟ್ರಾಸ್ಟ್‌ ಅನ್ನು ಸ್ವಲ್ಪ ಬದಲಾಯಿಸುತ್ತದೆ. ಯಾವುದೇ ಹೆಚ್ಚುವರಿ ರೀಟಚಿಂಗ್ ಮಾಡುವ ಪ್ರಲೋಭನೆಯನ್ನು ತಪ್ಪಿಸಿ.

  • ನಿಮ್ಮ ಇಮೇಜ್ ಅನ್ನು ಕ್ರಾಪ್ ಮಾಡಿ. ಕ್ರಾಪಿಂಗ್‌ ಟೂಲ್‌ ಅನ್ನು ಆಯ್ಕೆಮಾಡಿ, ಇದು ಸಾಮಾನ್ಯವಾಗಿ ಒಂದನ್ನೊಂದು ಛೇದಿಸುವ ಎರಡು ಲಂಬ ಕೋನಗಳಿಂದ ರೂಪುಗೊಂಡ ಚೌಕವನ್ನು ಹೋಲುತ್ತದೆ. ನಿಮ್ಮ ಮುಖವನ್ನು ಮಧ್ಯದಲ್ಲಿ ಇರಿಸಲು ಗ್ರಿಡ್ ರೇಖೆಗಳನ್ನು ಬಳಸಿಕೊಂಡು ನಿಮ್ಮ ಪ್ರೊಫೈಲ್ ಚಿತ್ರವನ್ನು ಚೌಕದಲ್ಲಿ ಕ್ರಾಪ್ ಮಾಡಿ. ಪಾಸ್‌ಪೋರ್ಟ್ ಫೋಟೋದಲ್ಲಿರುವಂತೆ, ನಿಮ್ಮ ತಲೆಯ ಸುತ್ತಲೂ ಸ್ಥಳವನ್ನು ಬಿಡಲು ಮರೆಯದಿರಿ. 

ನೀವು ಕೆಲಸ ಪೂರ್ಣಗೊಳಿಸಿದ ಬಳಿಕ, ನಿಮ್ಮ ಎಡಿಟ್ ಮಾಡಿದ ಫೋಟೋವನ್ನು ಸೇವ್ ಮಾಡಿ.

ನಿಮ್ಮ ಫೋಟೋ ಅಪ್‌ಲೋಡ್ ಮಾಡಲಾಗುತ್ತಿದೆ...

ನಿಮ್ಮ ಪ್ರೊಫೈಲ್‌ಗೆ ನಿಮ್ಮ ಸೇವ್ ಮಾಡಿದ ಫೋಟೋವನ್ನು ಸೇರಿಸಲು, Airbnb ತೆರೆಯಿರಿ ಮತ್ತು ನಿಮ್ಮ ಖಾತೆ ಸೆಟ್ಟಿಂಗ್‌ಗಳಿಗೆ ಹೋಗಿ

  • ಫೋನ್‌ನಿಂದ ಫೋಟೋವನ್ನು ಸೇರಿಸಲು: ನಿಮ್ಮ ಪ್ರೊಫೈಲ್‌‌ಗೆ ಹೋಗಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಎಡಿಟ್ ಲಿಂಕ್ ಅನ್ನು ಒತ್ತಿ. ನಿಮ್ಮ ಫೋಟೋದ ಪಕ್ಕದಲ್ಲಿ, ಕ್ಯಾಮೆರಾ ಐಕಾನ್ ಅನ್ನು ಒತ್ತಿ ಮತ್ತು ಫೋಟೋ ಆಯ್ಕೆಮಾಡಿ. (ನಿಮ್ಮ ಫೋಟೋಗಳನ್ನು ಪ್ರವೇಶಿಸಲು ನೀವು Airbnb ಆ್ಯಪ್‌‌ಗೆ ಅನುಮತಿ ನೀಡಬೇಕಾಗಬಹುದು.) ನಿಮ್ಮ ಫೋಟೋವನ್ನು ಆಯ್ಕೆಮಾಡಿ ಮತ್ತು ಸೇವ್ ಮಾಡಿ ಎಂಬುದನ್ನು ಒತ್ತಿ.

  • ಕಂಪ್ಯೂಟರ್‌ನಿಂದ ಫೋಟೋವನ್ನು ಸೇರಿಸಲು: ನಿಮ್ಮ ಪ್ರೊಫೈಲ್‌ ಗೆ ಹೋಗಿ, ನಂತರ ನಿಮ್ಮ ಪ್ರಸ್ತುತ ಪ್ರೊಫೈಲ್ ಚಿತ್ರದ ಕೆಳಗೆ ಫೋಟೋವನ್ನು ನವೀಕರಿಸಿ ಕ್ಲಿಕ್ ಮಾಡಿ. ನಂತರ, ನಿಮ್ಮ ಫೋಟೋವನ್ನು ಹುಡುಕಲು ಮತ್ತು ಆಯ್ಕೆ ಮಾಡಲು "ನಿಮ್ಮ ಕಂಪ್ಯೂಟರ್‌ನಿಂದ ಫೈಲ್ ಅಪ್‌ಲೋಡ್ ಮಾಡಿ" ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ ಪ್ರೊಫೈಲ್ ಫೋಟೋವನ್ನು ನೀವು ಬಯಸಿದಷ್ಟು ಬಾರಿ ನವೀಕರಿಸಬಹುದು.

Airbnb
ಮೇ 3, 2023
ಇದು ಸಹಾಯಕವಾಗಿದೆಯೇ?

ನಿಮಗೆ ಇಷ್ಟವಾಗಬಹುದಾದ ಇತರ ವಿಷಯಗಳು

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ