ಗೆಸ್ಟ್‌ಗಳಿಗೆ ಸಿಗುವ ಸ್ಥಳದ ಪ್ರಕಾರವನ್ನು ಹೇಗೆ ಆಯ್ಕೆ ಮಾಡುವುದು
ಎಲ್ಲಿ ಉಳಿಯಬೇಕು ಎಂದು ಆಯ್ಕೆಮಾಡುವಾಗ, ಗೆಸ್ಟ್‌ಗಳು ಸ್ಥಳವನ್ನು ಹಂಚಿಕೊಳ್ಳುತ್ತಾರೆಯೇ ಅಥವಾ ಎಲ್ಲವೂ ಅವರಿಗೇ ಮೀಸಲಿರುತ್ತದೆಯೇ ಎಂದು ತಿಳಿಯಲು ಬಯಸುತ್ತಾರೆ.
ನಿಮ್ಮ ಸ್ಥಳವನ್ನು ನೀವು ಲಿಸ್ಟ್ ಮಾಡುವಾಗ Airbnb 3 ಆಯ್ಕೆಗಳನ್ನು ಒದಗಿಸುತ್ತದೆ.
- ಸಂಪೂರ್ಣ ಸ್ಥಳ: ಗೆಸ್ಟ್‌ಗಳು ಮಾತ್ರ ಈ ಸ್ಥಳದಲ್ಲಿರುತ್ತಾರೆ, ಇದು ಮಲಗುವ ಪ್ರದೇಶದ ಜೊತೆಗೆ ಸಾಮಾನ್ಯವಾಗಿ ಬಾತ್‌ರೂಮ್, ಅಡುಗೆಮನೆ ಮತ್ತು ಪ್ರತ್ಯೇಕ ಪ್ರವೇಶದ್ವಾರವನ್ನು ಒಳಗೊಂಡಿರುತ್ತದೆ.
- ಪ್ರೈವೇಟ್ ರೂಮ್: ಗೆಸ್ಟ್‌ಗಳು ತಮಗಾಗಿ ಬೆಡ್‌ರೂಮ್ ಹೊಂದಿರುತ್ತಾರೆ, ಜೊತೆಗೆ ಪ್ರವೇಶ, ಬಾತ್‌ರೂಮ್ ಮತ್ತು ಅಡುಗೆಮನೆಯನ್ನು ಒಳಗೊಂಡಿರುವ ಹಂಚಿಕೆಯ ಪ್ರದೇಶಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ.
ಹಾಸ್ಟೆಲ್‌ನಲ್ಲಿ ಹಂಚಿಕೊಂಡ ರೂಮ್: ಗೆಸ್ಟ್‌ಗಳು 24/7 ಸ್ಥಳದಲ್ಲಿರುವ ಸಿಬ್ಬಂದಿಯೊಂದಿಗೆ ವೃತ್ತಿಪರವಾಗಿ ನಿರ್ವಹಿಸಲ್ಪಡುವ ಹಾಸ್ಟೆಲ್‌ನಲ್ಲಿ ಹಂಚಿಕೊಂಡ ರೂಮ್‌ನಲ್ಲಿ ಮಲಗುತ್ತಾರೆ.
ಮುಂಬರುವ ಹಂತದಲ್ಲಿ, ನಿಮ್ಮ ಸ್ಥಳವನ್ನು ನಿಮ್ಮ ಸ್ವಂತ ಪದಗಳಲ್ಲಿ ನೀವು ವಿವರಿಸುತ್ತೀರಿ. ಯಾವ ಸ್ಥಳಗಳು ಖಾಸಗಿಯಾಗಿವೆ ಮತ್ತು ಯಾವ ಸ್ಥಳಗಳನ್ನು ಹಂಚಿಕೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವ ವಿವರಗಳನ್ನು ನೀವು ಸೇರಿಸಬಹುದು. ಉದಾಹರಣೆಗೆ, ನೀವು ಸಂಪೂರ್ಣ ಸ್ಥಳವನ್ನು ಹೋಸ್ಟ್ ಮಾಡಿದರೆ ಮತ್ತು ಪ್ರಾಪರ್ಟಿಯಲ್ಲಿದ್ದರೆ, ನೀವು ಹೀಗೆ ಬರೆಯಬಹುದು: "ನಾವು ಗೆಸ್ಟ್‌ಹೌಸ್‌ನೊಂದಿಗೆ ಹಿತ್ತಲನ್ನು ಹಂಚಿಕೊಳ್ಳುವ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದೇವೆ."
ನಿಮ್ಮ ಪರಿಸ್ಥಿತಿ ಬದಲಾದರೆ ನೀವು ನಿಮ್ಮ ವಿವರಣೆಯನ್ನು ಯಾವಾಗ ಬೇಕಾದರೂ ಅಪ್‌ಡೇಟ್ ಮಾಡಬಹುದು.
