ನಿಮ್ಮ ಅನುಭವ ಸಲ್ಲಿಕೆಯನ್ನು ಎದ್ದು ಕಾಣುವಂತೆ ಮಾಡುವುದು ಹೇಗೆ
ಚಟುವಟಿಕೆಯ ವಿಶಿಷ್ಟತೆ ಏನು, ಅದು ಎಲ್ಲಿ ನಡೆಯುತ್ತದೆ ಮತ್ತು ನಿಮ್ಮ ಅರ್ಹತೆಗಳ ಬಗ್ಗೆ ಹಂಚಿಕೊಳ್ಳಿ.
Airbnb ಅವರಿಂದ ಡಿಸೆಂ 9, 2024ರಂದು
ಡಿಸೆಂ 9, 2024 ನವೀಕರಿಸಲಾಗಿದೆ2 ನಿಮಿಷ ಓದಲು
ಉತ್ತಮ Airbnb ಅನುಭವಗಳು ಗೆಸ್ಟ್‌ಗಳಿಗೆ ವಿಶೇಷ ಸ್ಥಳಗಳನ್ನು ಅನ್ವೇಷಿಸಲು ಮತ್ತು ಜ್ಞಾನಪೂರ್ಣ ಹೋಸ್ಟ್‌ಗಳ ಮಾರ್ಗದರ್ಶನದೊಂದಿಗೆ ಬೇರೆಲ್ಲೂ ಸಿಗದಂತಹ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವನ್ನು ಒದಗಿಸುತ್ತವೆ. ಅನುಭವದ ಸಮಯದಲ್ಲಿ ನೀವು ಅವರ ನಿರೀಕ್ಷೆಗಳನ್ನು ಪೂರೈಸಲು ಮತ್ತು ಅವನ್ನು ಮೀರಲು ನೀವು ಹೇಗೆ ಯೋಜಿಸುತ್ತೀರಿ ಎಂಬುದನ್ನು ನಿಮ್ಮ ಸಲ್ಲಿಕೆ ಒಳಗೊಂಡಿರಬೇಕು.
ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಲು ಈ ಸಲಹೆಗಳನ್ನು ಬಳಸಿ ಮತ್ತು ನಿಮ್ಮ ಆಲೋಚನೆಗಳನ್ನು ಬಿಡಲಾಗದ ಸಲ್ಲಿಕೆಗಳಾಗಿ ಪರಿವರ್ತಿಸಿ.
ನಿಮ್ಮ ಅನುಭವವನ್ನು ಅನನ್ಯವನ್ನಾಗಿ ಮಾಡುವುದು ಯಾವುದು?
- ಗೆಸ್ಟ್‌ಗಳು ಪ್ರಾರಂಭದಿಂದ ಮುಕ್ತಾಯದವರೆಗೆ ಏನು ಮಾಡುತ್ತಾರೆ ಎಂಬುದರ ರೂಪರೇಖೆಯನ್ನು ನೀಡುವ ನಿರ್ದಿಷ್ಟ ಪ್ರಯಾಣದ ವಿವರಗಳನ್ನು ಒದಗಿಸಿ.
- ನಿಮ್ಮ ಚಟುವಟಿಕೆಯನ್ನು ಯಾವುದು ವಿಭಿನ್ನಗೊಳಿಸುತ್ತದೆ ಮತ್ತು ಅವನ್ನು ಗೆಸ್ಟ್‌ಗಳಿಗೆ ತಾವೇ ಸ್ವತಃ ಮಾಡಲು ಏಕೆ ಮಾಡಲಾಗದು ಅಥವಾ ಮಾಡಲು ಸಾಧ್ಯವಾಗದು ಎಂಬುದನ್ನು ವಿವರಿಸಿ.
- ನಿಮ್ಮೊಂದಿಗೆ ಕಳೆಯುವ ಸಮಯದಲ್ಲಿ ಗೆಸ್ಟ್‌ಗಳು ಏನು ಕಲಿಯುತ್ತಾರೆ ಅಥವಾ ಕಂಡುಕೊಳ್ಳುತ್ತಾರೆ ಎಂಬುದನ್ನು ಸೂಚಿಸಿ.
- ನಿಮ್ಮ ಗೆಸ್ಟ್‌ಗಳು ಪರಸ್ಪರ ಹೇಗೆ ಸಂಪರ್ಕ ಸಾಧಿಸುತ್ತಾರೆ ಮತ್ತು ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ನಮಗೆ ತಿಳಿಸಿ.
ಸ್ಥಳದ ವಿಶೇಷತೆ ಏನು?
- ನಿಮ್ಮ ಚಟುವಟಿಕೆಯು ನೀವು ಹೋಸ್ಟ್ ಮಾಡುತ್ತಿರುವ ಸ್ಥಳ ಅಥವಾ ಸಂಸ್ಕೃತಿಯನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದನ್ನು ಹಂಚಿಕೊಳ್ಳಿ.
- ಗೆಸ್ಟ್‌ಗಳಿಗೆ ಸ್ಥಳವೊಂದಕ್ಕೆ ನೀವು ನೀಡಬಲ್ಲ ಒಳಗಿನವರ ಪ್ರವೇಶದ ಪ್ರಕಾರವನ್ನು ನಿರ್ದಿಷ್ಟಪಡಿಸಿ, ಉದಾಹರಣೆಗೆ ನಿಗದಿತ ಅವಧಿಯ ಬಳಿಕ, ತೆರೆಮರೆಯಲ್ಲಿ ಅಥವಾ ಆಹ್ವಾನದ ಮೇರೆಗೆ ಮಾತ್ರ.
- ನಿಮ್ಮ ನಗರ ಅಥವಾ ಪ್ರದೇಶಕ್ಕೆ ಚಟುವಟಿಕೆಯ ಒಟ್ಟಾರೆ ಪ್ರಸ್ತುತತೆಯ ಬಗ್ಗೆ ವಿವರಗಳನ್ನು ಸೇರಿಸಿ.
- ನೀವು ಭೇಟಿ ನೀಡಲಿರುವ ಯಾವುದೇ ಆಸಕ್ತಿಯ ಜಾಗಗಳು ಅಥವಾ ಹೆಗ್ಗುರುತುಗಳನ್ನು ಟಿಪ್ಪಣಿ ಮಾಡಿ.
ಹೋಸ್ಟ್ ಆಗಿ ನಿಮ್ಮನ್ನು ಅರ್ಹಗೊಳಿಸುವುದು ಯಾವುದು?
- ಅನುಭವವು ನಿಮ್ಮ ವ್ಯಕ್ತಿತ್ವ, ಪರಂಪರೆ ಅಥವಾ ವಿಷಯದ ಬಗೆಗಿನ ಉತ್ಸಾಹವನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದನ್ನು ವಿವರಿಸಿ.
- ಸಂಬಂಧಿತ ಕೆಲಸದ ಹಿನ್ನೆಲೆ, ಶೈಕ್ಷಣಿಕ ಪದವಿಗಳು, ರುಜುವಾತುಗಳು ಮತ್ತು ಪ್ರಮಾಣೀಕರಣಗಳಂತಹ ನಿಮ್ಮ ಪರಿಣತಿಯನ್ನು ನಮೂದಿಸಿ.
- ನೀವು ಸ್ವೀಕರಿಸಿದ ಯಾವುದೇ ಪ್ರಶಸ್ತಿಗಳು, ಗುರುತಿಸುವಿಕೆ ಅಥವಾ ಮಾಧ್ಯಮ ಕವರೇಜ್ ಅನ್ನು ಪಟ್ಟಿ ಮಾಡಿ.
ಯಾವ ಫೋಟೋಗಳು ಅನುಭವವನ್ನು ಪ್ರದರ್ಶಿಸುತ್ತವೆ?
- ಪ್ರಾರಂಭದಿಂದ ಮುಕ್ತಾಯದವರೆಗೆ ನಿಮ್ಮ ಚಟುವಟಿಕೆಯನ್ನು ವಿವರಿಸಬಲ್ಲ ಕನಿಷ್ಠ ಐದು ಮೂಲ, ವರ್ಣಮಯ ಫೋಟೋಗಳನ್ನು ಸಲ್ಲಿಸಿ.
- ಅನುಭವವನ್ನು ನೀವೇ ಹೋಸ್ಟ್ ಮಾಡುವುದನ್ನು ತೋರಿಸಿ.
- ಸ್ಥೂಲ ಚಿತ್ರವನ್ನು (ಸ್ಥಳ ಅಥವಾ ಸಂವಹನಗಳಂತಹದು) ಮತ್ತು ಸೂಕ್ಷ್ಮ ವಿವರಗಳನ್ನು (ಸಲಕರಣೆಗಳಂತಹವು) ಹಂಚಿಕೊಳ್ಳಲು ವೈಡ್, ಮಿಡ್-ರೇಂಜ್ ಮತ್ತು ಕ್ಲೋಸ್-ಅಪ್ ಫೋಟೋಗಳ ಮಿಶ್ರಣವನ್ನು ಆಯ್ಕೆಮಾಡಿ.
- ಚೆನ್ನಾದ ಬೆಳಕಿರುವ ಮತ್ತು ಫೋಕಸ್ ಸರಿ ಇರುವ, ವಿಷಯವು ಫ್ರೇಮ್‌ನ ಮಧ್ಯದಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನು ಆಯ್ಕೆಮಾಡಿ.
- ಅಧಿಕ ರೆಸಲ್ಯೂಶನ್ ಇರುವ ಲಂಬ ಚಿತ್ರಗಳನ್ನು ಆರಿಸಿ, ಕನಿಷ್ಠ 800 x 1,200 ಪಿಕ್ಸೆಲ್‌ಗಳು.
- ಸೆಲ್ಫಿಗಳು, AI- ವರ್ಧಿತ ಚಿತ್ರಗಳು ಮತ್ತು ಸ್ಟಾಕ್ ಫೋಟೋಗಳನ್ನು ಬಳಸಬೇಡಿ.
ಕನಿಷ್ಠ ಎಡಿಟಿಂಗ್‌ನೊಂದಿಗೆ ಚೆನ್ನಾಗಿ ಬೆಳಗಿದ ಮತ್ತು ಫೋಕಸ್‌ನಲ್ಲಿರುವ ಬಣ್ಣದ ಫೋಟೋಗಳನ್ನು ಸಲ್ಲಿಸಿ.
ನಿಮ್ಮ ಆಲೋಚನೆಗಳನ್ನು ಸಲ್ಲಿಸುವ ಮೊದಲು, ಅನುಭವವು ಈ ಮಾನದಂಡಗಳು ಮತ್ತು ಆವಶ್ಯಕತೆಗಳನ್ನು ಪೂರೈಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಪ್ರಕಟಣೆಯ ನಂತರ ಈ ಲೇಖನದಲ್ಲಿರುವ ಮಾಹಿತಿಯು ಬದಲಾಗಿರಬಹುದು.
Airbnb
ಡಿಸೆಂ 9, 2024
ಇದು ಸಹಾಯಕವಾಗಿದೆಯೇ?