ನಿಮ್ಮ ಕಥೆಯನ್ನು ಹೇಗೆ ರಚಿಸುವುದು
ವಿಶೇಷ ಆಕರ್ಷಣೆಗಳು
ನಿಮ್ಮ ಕಥೆಯನ್ನು ಹುಡುಕುವುದು, ರಚಿಸುವುದು ಮತ್ತು ಹಂಚಿಕೊಳ್ಳುವುದು ಗೆಸ್ಟ್‌ಗಳ ಜೊತೆ ಸಂಪರ್ಕ ಸಾಧಿಸುವ ಒಂದು ವಿಧಾನವಾಗಿದೆ
ಗೆಸ್ಟ್‌ಗಳಿಗೆ ಬೇರೆಲ್ಲಿಯೂ ಸಿಗದಂತಹ ಅನುಭವಗಳನ್ನು ನಿಮ್ಮ ಮನೆ ಅಥವಾ ಪ್ರದೇಶದಲ್ಲಿ ನೀಡುವುದರ ಬಗ್ಗೆ ಯೋಚಿಸಿ
ನಿಮ್ಮ ಮನೆಗೆ ಸಾಮಾಜಿಕ ಮಾಧ್ಯಮದಲ್ಲೊಂದು ಅಸ್ತಿತ್ವ ಬೆಳೆಸಿಕೊಳ್ಳಿ
ಪ್ರತಿಯೊಂದು ಅಡೆತಡೆಗಳಿಂದ ಕಲಿಯುವ ಹಾಗೂ ಮುಂದೆ ಸಾಗುವ ಅವಕಾಶವಾಗಿ ಪರಿಗಣಿಸಿ
- ನಿಮ್ಮ ಹೋಸ್ಟಿಂಗ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಮ್ಮ ಸಂಪೂರ್ಣ ಮಾರ್ಗದರ್ಶಿಯಲ್ಲಿ ಇನ್ನಷ್ಟು ಅನ್ವೇಷಿಸಿ
ಸೂಪರ್‌ಹೋಸ್ಟ್‌ಗಳಾದ ತೆರೇಸಾ ಮತ್ತು ಡೇವಿಡ್ ಕಥೆ ಹೇಳುವ ಸಾಮರ್ಥ್ಯದ ಬಗ್ಗೆ ಒಂದೆರಡು ವಿಷಯಗಳನ್ನು ತಿಳಿದಿದ್ದಾರೆ. ಪೋಷಕರು, ಸಂರಕ್ಷಕರು, ಸೃಜನಶೀಲ ನಿರ್ದೇಶಕರು, ಪ್ರಕಟಿತ ಲೇಖಕರು ಮತ್ತು ವಿಸ್ಕಾನ್ಸಿನ್‌ನ ಎಲ್ಖೋರ್ನ್‌ನಲ್ಲಿರುವ ಕ್ಯಾಂಪ್ ವಾಂಡೌವೆಗಾದ ಮಾಲೀಕರಾಗಿ, ಕಥೆ ಹೇಳುವಿಕೆಯು ಜನರನ್ನು ಒಟ್ಟುಗೂಡಿಸುತ್ತದೆ ಎಂದು ಅವರು ಕಲಿತಿದ್ದಾರೆ. "ನಾವು ಶಿಬಿರದ ಇತಿಹಾಸದ ವಿವರಗಳನ್ನು ಪತ್ತೆಹಚ್ಚಲು ಮತ್ತು ಪೋಸ್ಟ್ ಮಾಡಲು ಪ್ರಾರಂಭಿಸಿದಾಗ—ನಾವು ಈ ಸ್ಥಳವನ್ನು 1920 ರ ದಶಕದ ಭಾಷಣ, ಗ್ಯಾಂಗ್ ಮೀಟಿಂಗ್ ಸ್ಥಳ, ವೇಶ್ಯಾಗೃಹ, ಲಟ್ವಿಯನ್ ನಿರಾಶ್ರಿತರ ಸಮುದಾಯಕ್ಕಾಗಿ ಬೇಸಿಗೆ ಶಿಬಿರ ಮತ್ತು ನಮ್ಮ ಸ್ವಂತ ಸಂಪರ್ಕ ಎಂದು ಕಲ್ಪಿಸಿಕೊಂಡಿದ್ದೇವೆ ಹಾಗೂ ಜನರು ಅದರೊಂದಿಗೆ ನಿಜವಾಗಿಯೂ ಸಂಪರ್ಕ ಹೊಂದಿದ್ದಾರೆಂದು ನಾವು ಕಂಡುಕೊಂಡಿದ್ದೇವೆ” ಎಂದು ತೆರೆಸಾ ಅವರು ಹೇಳುತ್ತಾರೆ.
ನಿಮ್ಮ ಮನೆಯ ಕಥೆಯನ್ನು ಹೇಗೆ ಕಂಡುಹಿಡಿಯುವುದು ಮತ್ತು ರಚಿಸುವುದು ಎಂಬುದರ ಕುರಿತು ನಾವು ಇಲ್ಲಿ ಬುದ್ಧಿವಂತ ಪದಗಳನ್ನು ಹಂಚಿಕೊಂಡಿದ್ದೇವೆ.
1. ನಿಮ್ಮ ಹಿತಾಸಕ್ತಿಗಳನ್ನು ಕಂಡುಕೊಳ್ಳಿ
ತೆರೇಸಾ: “ನಿಮ್ಮ ಸ್ಥಳವು ಶತಮಾನದಷ್ಟು ಹಳೆಯದಾಗಿಲ್ಲವಾದರೂ ಸಹ, ಹೇಳುವುದಕ್ಕೆ ಏನಾದರೂ ಒಂದು ಕಥೆ ಇದ್ದೇ ಇರುತ್ತದೆ. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೂಲಕ, ನಿಮ್ಮ ಸ್ಥಳದ ಕುರಿತ ಕಥೆಯನ್ನು ಅನ್ವೇಷಿಸಿ:
- ನಿಮ್ಮ ಮನೆಯ ಇತಿಹಾಸವೇನು?
- ಗೆಸ್ಟ್‌ಗಳಿಗೆ ಬೇರೆಲ್ಲಿಯೂ ಸಿಗದಂತಹ ಯಾವ ಅನುಭವಗಳು ನಿಮ್ಮ ಪಟ್ಟಣದಲ್ಲಿ ವಿಶಿಷ್ಟವಾಗಿವೆ?
- ನೀವು ಕಡೆಗಣಿಸುವಂತಹ ಆಸಕ್ತಿದಾಯಕ ಸಂಗತಿಗಳು ಯಾವುವು?
ಸ್ವಲ್ಪವಾದರೂ ಸಂಶೋಧನೆ ಮಾಡಿ ಹಾಗೂ ಅದನ್ನು ನಿಮ್ಮ ಲಿಸ್ಟಿಂಗ್‌ನಲ್ಲಿ ಇರಿಸಿ.”
ಡೇವಿಡ್: “ಬೆಡ್‌ರೂಮ್‌ಗಳು ಮತ್ತು ಸ್ನಾನಗೃಹಗಳ ಸಂಖ್ಯೆಯನ್ನು ಹೊರತುಪಡಿಸಿ ನಿಮ್ಮ ಲಿಸ್ಟಿಂಗ್‌ನಲ್ಲಿ ನೀವು ಬೇರೆಯ ಇನ್ನಷ್ಟು ಸಂಗತಿಗಳನ್ನು ಹಂಚಿಕೊಳ್ಳಬಹುದು. ಜನರು ಸಂಪೂರ್ಣ ತೃಪ್ತಿ ನೀಡುವಂತಹ ಸ್ಥಳ ಯಾವುದಿದೆ ಎಂಬುದನ್ನು ತಿಳಿಯಲು ಬಯಸುತ್ತಾರೆ ಮತ್ತು ಅವರು ನಿಮ್ಮ ಮೆಚ್ಚಿನ ತಾಣಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ—ಆದ್ದರಿಂದ ನೀವು ಒದಗಿಸಬಹುದಾದ ಅನನ್ಯ ಅನುಭವಗಳೆಲ್ಲವನ್ನು ಹಂಚಿಕೊಳ್ಳಿ. ಅತಿಥಿಗಳು ಭಾವನಾತ್ಮಕವಾಗಿ ತೊಡಗಿಸಿಕೊಳ್ಳಲು ಸಂಪರ್ಕ ಮತ್ತು ಕಾರಣ ಹಾಗೂ ಯಾವ ಕಥೆಗಳು ನಮ್ಮನ್ನು ಒಂದೆಡೆ ಸೇರಲು ಸಹಾಯ ಮಾಡುತ್ತವೆ ಎಂಬುದನ್ನು ಹುಡುಕುತ್ತಿದ್ದಾರೆ."
2. ಪರಿಪೂರ್ಣತೆ ಎಂದು ಒದ್ದಾಡಬೇಡಿ
ಡೇವಿಡ್: “ಬಹಳ ದಿನಗಳ ಹಿಂದೆಯೇ, ನಾವು ಜನರ ನಿರೀಕ್ಷೆಗಳನ್ನು ಸಮಯಕ್ಕಿಂತ ಮುಂಚಿತವಾಗಿಯೇ ನಿರ್ವಹಿಸಬೇಕು ಎಂದು ನಾವು ಮೊದಲೇ ಕಲಿತಿದ್ದೆವು, ಏಕೆಂದರೆ ನಾವು ಅವರನ್ನು ನಿರಾಶೆಗೊಳಿಸಲು ಬಯಸುವುದಿಲ್ಲ. ಅದಕ್ಕಾಗಿಯೇ ನಾವು ಕಡಿಮೆ ನಿರೀಕ್ಷೆಗಳ ಪ್ರಣಾಳಿಕೆಯನ್ನು ರಚಿಸಿದ್ದೇವೆ. ಹಳ್ಳಿಗಾಡಿನ ಶಿಬಿರದ ಜೀವನವನ್ನು ಪರಿಚಯಿಸಲು ಇದು ನಮಗೆ ಮೋಜಿನ ಮಾರ್ಗವಾಗಿದೆ. ಸಾಮಾನ್ಯವಾಗಿ ಕೀಟ ಬಾದೆಗಳು, ಅರಣ್ಯ ಜೀವಿಗಳ ಉಪಟಳವಿರುವ ಮತ್ತು ಹವಾನಿಯಂತ್ರಣದ ವ್ಯವಸ್ಥೆ ಹೊಂದಿರದ ಸ್ಥಳವಾಗಿದೆ, ಹಾಗಾಗಿ ಇಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಇದು ಜನರಿಗೆ ಹೇಳುತ್ತದೆ. ಆದ್ದರಿಂದ ನಿಮಗೆ ಈಜಿಪ್ಟಿನ ಭವ್ಯತೆ ಅಥವಾ ಆಧುನಿಕ ಐಷಾರಾಮಿ ಅಗತ್ಯವಿದ್ದರೆ, ಇದು ನಿಮಗೆ ವಾಸ್ತವ್ಯ ಮಾಡುವುದಕ್ಕೆ ಸೂಕ್ತ ಸ್ಥಳವಲ್ಲ.”
ತೆರೇಸಾ: “ನಮ್ಮದು ಯಾವುದೇ ಸೋಗುಹಾಕುವಿಕೆ ಇಲ್ಲದೇ ವಾಸ್ತವ್ಯ ಮಾಡಬಹುದಾದ ವಲಯವಾಗಿದೆ. ಆದ್ದರಿಂದ ನಾವು ನಮ್ಮ ಸ್ಥಳಗಳನ್ನು ವಿವರಿಸಲು ಬಳಸುವ ಪದಗಳಿಗೆ ನಾವು ಹೆಚ್ಚು ಒಲವು ತೋರುತ್ತೇವೆ. ನಾವು ಜನರಿಗೆ ವಾಸ್ತವಾಂಶವನ್ನು ಹೇಳಲು ನಿರ್ಧರಿಸಿದ್ದೇವೆ. ನಾವು ಹಾಸ್ಯಾಸ್ಪದವಾಗಿ ಹೇಳಿದರೂ, ಅದು ತುಂಬಾ ನೋವಿನಿಂದ ಕೂಡಿರುತ್ತದೆ. ಉತ್ಪ್ರೇಕ್ಷೆಯನ್ನು ಮನಪೂರ್ವಕವಾಗಿ ಸ್ವೀಕರಿಸಲಾಗುತ್ತದೆ, ಇದು ನಮಗೆ ಹಾಸ್ಯದ ಪ್ರಜ್ಞೆಯನ್ನು ನೀಡುತ್ತದೆ, ಹಾಗೂ ಅದು ನಮ್ಮನ್ನು ಹೆಚ್ಚು ಸಮೀಪಿಸುವಂತೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಸ್ನೇಹಪರವಾಗಿ ಕಾಣಲು ನೀವು ದೊಡ್ಡ ಕಾಪಿರೈಟರ್ ಆಗಿರಬೇಕು ಎಂಬುದೇನಿಲ್ಲ - ನಿಮ್ಮ ಸ್ಥಳವನ್ನು ನೀವು ನಿಜವಾಗಿಯೂ ವಿನಮ್ರ ರೀತಿಯಲ್ಲಿ ವಿವರಿಸಬಹುದು.”
ಡೇವಿಡ್: “ನಾನು Airbnb ಅನ್ನು ಸರ್ಫಿಂಗ್ ಮಾಡುತ್ತಿರುವಾಗ, ತಮ್ಮ ಸ್ಥಳವನ್ನು ವಿವರಿಸುವ ರೀತಿಯಲ್ಲಿ ತಮ್ಮ ವ್ಯಕ್ತಿತ್ವ ವ್ಯಕ್ತಪಡಿಸುವ ಜನರನ್ನು ನಾನು ಇಷ್ಟಪಡುತ್ತೇನೆ. ವಿಶೇಷವಾಗಿ ನಾವು ಸ್ಥಳದ ಕುರಿತು ಹಂಚಿಕೊಳ್ಳಲು ಹೋರಟಿದ್ದರೆ, ನೀವು ಉತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದೀರಾ ಮತ್ತು ನೀವು ಸಮಯ ಕಳೆಯಲು ಬಯಸುವ ವ್ಯಕ್ತಿಯೇ ಎಂದು ತಿಳಿಯಲು ನಾನು ಬಯಸುತ್ತೇವೆ. ನನಗೆ ಚಂದ್ರಲೋಕವನ್ನೇ ತೋರಿಸಲು ಪ್ರಯತ್ನಿಸಬೇಡಿ. ಜಗತ್ತಿನಲ್ಲಿ ನೀವೇ ಸರ್ವಶ್ರೇಷ್ಠರು ಎಂಬುದಾಗಿ ತೋರಿಸಿಕೊಳ್ಳಲು ಪ್ರಯತ್ನಿಸಬೇಡಿ. ಪ್ರಾಮಾಣಿಕವಾಗಿರಿ ಮತ್ತು ಸತ್ಯವಂತರಾಗಿರಿ ಹಾಗೂ ವಿನೋದದಿಂದಿರಿ, ಏಕೆಂದರೆ ಜನರು ನಿಮ್ಮ ಸ್ಥಳಕ್ಕೆ ವಾಸ್ತವ್ಯಕ್ಕಾಗಿ ಬಂದಾಗ ಅವರು ಹಾಯಾಗಿರಲು ಬಯಸುತ್ತಾರೆ.”
3. ಸಾಮಾಜಿಕವಾಗಿ ಸಕ್ರಿಯರಾಗಿ
ತೆರೇಸಾ: “ಆಸಕ್ತಿ ಮತ್ತು ಬುಕಿಂಗ್ಅನ್ನು ಹೆಚ್ಚಿಸಲು, ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಮನೆಯ ಕುರಿತು ಪ್ರಚಾರ ಮಾಡುವ ಮೂಲಕ ಅಸ್ತಿತ್ವ ಬೆಳೆಸಿಕೊಳ್ಳಿ. ಸಾಮಾನ್ಯವಾಗಿ, ಹೆಚ್ಚಿನ ಜನರು ಮೊದಲು ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಹುಡುಕುತ್ತಾರೆ. ಅವರು ನಮ್ಮ ಫೋಟೋಗಳು ಅಥವಾ Instagram ಫೀಡ್‌ಗಳ ಮೂಲಕ ನಮ್ಮ ಚಿತ್ರಗಳನ್ನು ನೋಡುತ್ತಾರೆ—ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಮತ್ತು ಶಿಬಿರದಲ್ಲಿ ದೊರಕುವ ಸೌಲಭ್ಯಗಳನ್ನು ಅನುಭವಿಸುವುದಕ್ಕೆ ಅವರನ್ನು ಆಹ್ವಾನಿಸಲು ಇದೊಂದು ಉತ್ತಮ ಮಾರ್ಗವಾಗಿದೆ. ಒಂದೆರಡು ಸಲಹೆಗಳು:
- ಜನರು ನೇರವಾಗಿ ಅನುಭವಿಸಲು ಬಯಸುವ ಜೀವನದ ಕ್ಷಣಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿ. ಪುಸ್ತಕವನ್ನು ನಿಮ್ಮ ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಳ್ಳಲು ಮತ್ತು ಕಿಟಕಿಯಿಂದ ಕಾಣುವ ಹೊರಗಿನ ಸುಂದರವಾದ ದೃಶ್ಯಾವಳಿಗಳನ್ನು ನೋಡುತ್ತಾ ಬಿಸಿಯಾದ ಕಾಫಿಯನ್ನು ಸವಿಯಲು ಬಯಸುತ್ತೀರೀ - ಇವೆಲ್ಲವೂ ಮಾಡಲು ಬಯಸುವಿರಿ.
- ಉತ್ತಮ ಶೈಲಿಯ ಮತ್ತು ಛಾಯಾಗ್ರಹಣದಿಂದ ತೆಗೆದ ಫೋಟೋಗಳು ದೃಶ್ಯದ ಮೂಲಕ ನೈಜವಾಗಿ ಕಾಣುವಂತೆ ಕಥೆ ಹೇಳುವ ಮುಖ್ಯ ವಿಧಾನವಾಗಿವೆ. ಕಥೆ ಹೇಳುವಾಗ ಕಣ್ಣಿಗೆ ಕಟ್ಟುವಂತೆ ಮತ್ತು ಸುಂದರವಾಗಿಸಿ ಕಾಣುವಂತೆ ಮಾಡೋಣ!"
ಡೇವಿಡ್: “ಜನರು ವಾಂಡೌವೇಗಾಕ್ಕೆ ಭೇಟಿ ನೀಡಿದಾಗ, ಅವರು Instagram ನಲ್ಲಿ ಫೋಟೋವನ್ನು ನೋಡಿ ಮತ್ತು ಅವರು ಅಲ್ಲಿಗೆ ಧಾವಿಸಿ ಆ ಕ್ಷಣವನ್ನು ವೈಯಕ್ತಿಕವಾಗಿ ಮರುಸೃಷ್ಟಿಸಲು ಬಯಸುತ್ತಾರೆ ಎಂದು ಅವರು ಎಷ್ಟು ಬಾರಿ ಹೇಳುತ್ತಾರೆ ಎಂದು ನಾನು ನಿಮಗೆ ಹೇಳಲಾರೆ. Instagram ನಿಮ್ಮ ಮಧುರ ಕ್ಷಣಗಳ ಸಂಗ್ರಹಣೆ ತಾಣವಾಗಿದೆ ಮತ್ತು ನಿಮ್ಮ ಪ್ರೇಕ್ಷಕರಿಗೆ ನಿಮ್ಮ ಸ್ಥಳದ ದೃಶ್ಯ ಪೂರ್ವವೀಕ್ಷಣೆಯಾಗುತ್ತದೆ. ನೀವು ಆಗಾಗ್ಗೆ ಬುಕಿಂಗ್ ಮಾಡುವುದಕ್ಕೆ ಇದು ಒಂದು ಕಾರಣವಾಗಬಹುದು."
4. "ತಪ್ಪುಗಳಿಂದ ಕಲಿತು" ಸುಧಾರಣೆ ಮಾಡಿಕೊಳ್ಳಿ
ಡೇವಿಡ್: “ಆರಂಭದಲ್ಲಿ, ನಾವು ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ. ಆದರೆ ನಾವು ಜೀವನದಲ್ಲಿ ವೈಫಲ್ಯ ಮತ್ತು ಸಂಕಷ್ಟಗಳನ್ನು ಎದುರಿಸಿ ಮುಂದೆ ಹೋಗುವುದನ್ನು ಕಲಿತಿದ್ದೇವೆ. ಉದಾಹರಣೆಗೆ, ಕಥೆ ಹೇಳುವ ಮೂಲಕ, ಓವರ್‌ಶೇರಿಂಗ್‌ನಂತಹ ವಿಷಯವೂ ಇದೆ ಎಂಬುದನ್ನು ನಾವು ಕಲಿತಿದ್ದೇವೆ. ವೇಶ್ಯಾಗೃಹದ ಪ್ರೇಯಸಿಗಳು, ಮಾಫಿಯಾ ಮತ್ತು ಕೊಲೆಗಳ ಬಗ್ಗೆ ಕೇಳಲು ಜನರು ಇಷ್ಟಪಡುತ್ತಾರೆ, ಆದರೆ ಅವರು ಅಲ್ಲಿ ಮಲಗಬೇಕಾದರೆ ಅದು ಎಲ್ಲಿ ಸಂಭವಿಸಿತು ಎಂದು ತಿಳಿಯಲು ಅವರು ಬಯಸುವುದಿಲ್ಲ, ವಿಶೇಷವಾಗಿ ಅವರು ಅಲ್ಲಿ ಮಲಗಬೇಕಾದರೆ. ಕಾಲಾನಂತರದಲ್ಲಿ, ಯಾವುದು ಕೆಲಸ ಮಾಡುತ್ತದೆ, ಯಾವುದು ಮಾಡುವುದಿಲ್ಲ ಮತ್ತು ನಿಮ್ಮ ಪ್ರೇಕ್ಷಕರ ಮನದಲ್ಲಿ ಯಾವುದು ಪ್ರತಿಧ್ವನಿಸುತ್ತದೆ ಎಂಬುದು ನಿಮಗೆ ಗೊತ್ತಾಗುತ್ತದೆ.”
ತೆರೇಸಾ: “ನಮಗೆ, ವೈಫಲ್ಯವನ್ನು ಜಯಿಸುವುದು ಎಂದರೆ ಪ್ರತಿಯೊಂದು ಅಡೆತಡೆಗಳನ್ನು ದಾಟಿ ಮುಂದೆ ಹೋಗುವ ಅವಕಾಶವಾಗಿ ನೋಡುವುದು. ನೀವು ಹೀಗೆಯೇ ಕಲಿಯುತ್ತೀರಿ."
5. ಸಾಧನೆಯ ಹಾದಿಯನ್ನು ಹಂಚಿಕೊಳ್ಳಿ
ತೆರೇಸಾ: “ನಾವು ಮೊದಲು ಈ ಹೋಸ್ಟಿಂಗ್‌ನ ಪ್ರಯಾಣವನ್ನು ಪ್ರಾರಂಭಿಸಿದಾಗ, ನಮ್ಮ ‘ಮೊದಲು‘ ಫೋಟೋಗಳನ್ನು ಹಂಚಿಕೊಳ್ಳಲು ತುಂಬಾ ಭಯವಾಗಿತ್ತು. ನಮಗೆ ಎಷ್ಟು ಭಯವಿತ್ತೆದಂರೆ, ಯಾರೂ ನಮ್ಮ ಬಳಿ ವಾಸ್ತವ್ಯಕ್ಕಾಗಿ ಬರುವುದಿಲ್ಲ ಎಂದೇ ಭಾವಿಸಿದ್ದೆವು. ಆದರೆ, "ಮೊದಲು ಮತ್ತು ನಂತರ" ಫೋಟೋಗಳು ವಾಸ್ತವವಾಗಿ ಹೆಚ್ಚು ಬುಕಿಂಗ್‌ಗಳಿಗೆ ಕಾರಣವಾದವು.
ಡೇವಿಡ್: “ಜನರು ಪ್ರಾಮಾಣಿಕತೆಗೆ ಸ್ಪಂದಿಸುತ್ತಾರೆ. ಅವರು ಈ ಪ್ರಕ್ರಿಯೆಯನ್ನು ನೋಡಲು ಬಯಸುತ್ತಾರೆ. ಮತ್ತೊಮ್ಮೆ ಹೇಳುವೆ, ಅವರು ವೈಯಕ್ತಿಕ ಸಂಪರ್ಕಕ್ಕಾಗಿ ಹುಡುಕುತ್ತಿದ್ದಾರೆ—ಆದ್ದರಿಂದ ನಿಮ್ಮ ಹೋಸ್ಟಿಂಗ್‌ಗೆ ಸಂಬಂಧಿಸಿದ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಲು ಹಿಂಜರಿಯದಿರಿ. ಪ್ರಾಮಾಣಿಕವಾಗಿರಿ ಹಾಗೂ ನಿಮ್ಮ ಅನನ್ಯ ಕಥೆಯನ್ನು ಹೇಳಿ."
ವಿಶೇಷ ಆಕರ್ಷಣೆಗಳು
ನಿಮ್ಮ ಕಥೆಯನ್ನು ಹುಡುಕುವುದು, ರಚಿಸುವುದು ಮತ್ತು ಹಂಚಿಕೊಳ್ಳುವುದು ಗೆಸ್ಟ್‌ಗಳ ಜೊತೆ ಸಂಪರ್ಕ ಸಾಧಿಸುವ ಒಂದು ವಿಧಾನವಾಗಿದೆ
ಗೆಸ್ಟ್‌ಗಳಿಗೆ ಬೇರೆಲ್ಲಿಯೂ ಸಿಗದಂತಹ ಅನುಭವಗಳನ್ನು ನಿಮ್ಮ ಮನೆ ಅಥವಾ ಪ್ರದೇಶದಲ್ಲಿ ನೀಡುವುದರ ಬಗ್ಗೆ ಯೋಚಿಸಿ
ನಿಮ್ಮ ಮನೆಗೆ ಸಾಮಾಜಿಕ ಮಾಧ್ಯಮದಲ್ಲೊಂದು ಅಸ್ತಿತ್ವ ಬೆಳೆಸಿಕೊಳ್ಳಿ
ಪ್ರತಿಯೊಂದು ಅಡೆತಡೆಗಳಿಂದ ಕಲಿಯುವ ಹಾಗೂ ಮುಂದೆ ಸಾಗುವ ಅವಕಾಶವಾಗಿ ಪರಿಗಣಿಸಿ
- ನಿಮ್ಮ ಹೋಸ್ಟಿಂಗ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಮ್ಮ ಸಂಪೂರ್ಣ ಮಾರ್ಗದರ್ಶಿಯಲ್ಲಿ ಇನ್ನಷ್ಟು ಅನ್ವೇಷಿಸಿ