ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳು: ಗೆಸ್ಟ್‌ಗಳ ಪ್ರಕಾರ ಅತ್ಯಂತ ಇಷ್ಟವಾದ ಮನೆಗಳು

ರೇಟಿಂಗ್‌ಗಳು, ವಿಮರ್ಶೆಗಳು ಮತ್ತು ವಿಶ್ವಾಸಾರ್ಹತೆಯ ಆಧಾರದ ಮೇಲೆ ಲಿಸ್ಟಿಂಗ್‌ಗಳು ಎದ್ದು ಕಾಣುವಂತೆ ಮಾಡಲು ಇದು ಹೊಸ ಮಾರ್ಗವಾಗಿದೆ.
Airbnb ಅವರಿಂದ ನವೆಂ 8, 2023ರಂದು
2 ನಿಮಿಷ ಓದಲು
ಏಪ್ರಿ 2, 2025 ನವೀಕರಿಸಲಾಗಿದೆ

ಸಂಪಾದಕರ ಟಿಪ್ಪಣಿ: ಈ ಲೇಖನವನ್ನು Airbnb 2023 ರ ಚಳಿಗಾಲದ ಬಿಡುಗಡೆಯ ಭಾಗವಾಗಿ ಪ್ರಕಟಿಸಲಾಗಿದೆ. ಮಾಹಿತಿಯು ಅದರ ಪ್ರಕಟಣೆಯ ನಂತರ ಬದಲಾಗಿರಬಹುದು. ನಮ್ಮ ಇತ್ತೀಚಿನ ಉತ್ಪನ್ನ ಬಿಡುಗಡೆಯ.

ಬಗ್ಗೆ ಇನ್ನಷ್ಟು ತಿಳಿಯಿರಿ.

Airbnb ಪ್ರಪಂಚದಾದ್ಯಂತ 7 ದಶಲಕ್ಷಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಪ್ರತಿಯೊಂದು ಮನೆಯೂ ಅನನ್ಯವಾಗಿದೆ, ಮತ್ತು ಈ ಅನನ್ಯತೆಯೇ Airbnb ಯನ್ನು ಪ್ರತ್ಯೇಕವಾಗಿಡುತ್ತದೆ. ಆದರೆ, ಇಷ್ಟೆಲ್ಲ ವೈವಿಧ್ಯತೆಯಿರುವುದರಿಂದ, ಗೆಸ್ಟ್‌ಗಳು ಏನನ್ನು ನಿರೀಕ್ಷಿಸಬೇಕೆಂದು ತಿಳಿಯುವುದು ಕಷ್ಟವಾಗಬಹುದು ಎಂದು ಅವರು ನಮಗೆ ಹೇಳಿದ್ದಾರೆ. ಅದಕ್ಕಾಗಿಯೇ ಅನೇಕರು ಹೋಟೆಲ್‍‍ಗಳಿಗೆ ಆದ್ಯತೆ ನೀಡುತ್ತಾರೆ ಮತ್ತು ಇದು Airbnb ಯಲ್ಲಿ ಬುಕಿಂಗ್ ಮಾಡುವುದನ್ನು ತಡೆಯುವ #1 ಅಡಚಣೆಯಾಗಿದೆ.

ಒಳ್ಳೆಯ ವಾಸ್ತವ್ಯ ಹೂಡಬಹುದಾದ ಸ್ಥಳವನ್ನು ಕಂಡುಕೊಳ್ಳಲು ಇರುವ ಒಂದು ಒಳ್ಳೆಯ ಮಾರ್ಗವೆಂದರೆ, ಗೆಸ್ಟ್‌ಗಳು ಯಾವ ಮನೆಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಾಗಿದೆ. ಅದಕ್ಕಾಗಿಯೇ ನಾವು ಗೆಸ್ಟ್‌ಗಳ ಅಚ್ಚುಮೆಚ್ಚಿನದ್ದನ್ನು ರಚಿಸಿದ್ದೇವೆ.

ಗೆಸ್ಟ್ ‌ ಅಚ್ಚುಮೆಚ್ಚಿನವುಗಳು ಯಾವುವು?

ಗೆಸ್ಟ್‌ಗಳ ಪ್ರಕಾರ, ಗೆಸ್ಟ್‌ಗಳ ಅಚ್ಚುಮೆಚ್ಚಿನವು Airbnb ಯಲ್ಲಿ ಹೆಚ್ಚು ಇಷ್ಟಪಟ್ಟ 2 ದಶಲಕ್ಷ ಮನೆಗಳಾಗಿವೆ.

ಗೆಸ್ಟ್‌ಗಳ ಅಚ್ಚುಮೆಚ್ಚಿನವು ಐವತ್ತು ಕೋಟಿಗೂ ಅಧಿಕ ಟ್ರಿಪ್‍‍ಗಳ ರೇಟಿಂಗ್‍‍ಗಳು, ವಿಮರ್ಶೆಗಳು ಮತ್ತು ವಿಶ್ವಾಸಾರ್ಹತೆಯ ಡೇಟಾವನ್ನು ಆಧರಿಸಿವೆ. ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳನ್ನು ಪ್ರತಿದಿನ ನವೀಕರಿಸಲಾಗುತ್ತದೆ, ಹಾಗಾಗಿ ನಿಮ್ಮ ಲಿಸ್ಟಿಂಗ್ ಅನ್ನು ಈಗ ಸೇರಿಸದಿದ್ದರೆ, ಅದು ಶೀಘ್ರದಲ್ಲೇ ಸೇರಿಸಲ್ಪಡಬಹುದು.

ವಿವಿಧ ಅಂಶಗಳು ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳನ್ನು ಗುರುತಿಸಲು ಸಹಾಯ ಮಾಡುತ್ತವೆ, ಅವುಗಳೆಂದರೆ:

  • ಗೆಸ್ಟ್‌ಗಳಿಂದ ಕನಿಷ್ಠ ಐದು ವಿಮರ್ಶೆಗಳು
  • ಸರಾಸರಿ 4.9 ಸ್ಟಾರ್‌ಗಳಿಗಿಂತ ಹೆಚ್ಚಿರುವ ಅತ್ಯುತ್ತಮ ವಿಮರ್ಶೆಗಳು ಮತ್ತು ರೇಟಿಂಗ್‍‍‍ಗಳು
  • ಚೆಕ್-ಇನ್, ಸ್ವಚ್ಛತೆ, ನಿಖರತೆ, ಹೋಸ್ಟ್ ಅವರ ಸಂವಹನ, ಸ್ಥಳ ಮತ್ತು ಮೌಲ್ಯಕ್ಕಾಗಿ ಗೆಸ್ಟ್‌ಗಳ ವಿಮರ್ಶೆಗಳಿಂದ ಹೆಚ್ಚಿನ ಅಂಕಗಳು
  • ವಿಶ್ವಾಸಾರ್ಹತೆಯ ಅತ್ಯುತ್ತಮ ದಾಖಲೆ, ಹೋಸ್ಟ್ ರದ್ದತಿ ಮತ್ತು ಗುಣಮಟ್ಟ-ಸಂಬಂಧಿತ ಗ್ರಾಹಕ ಸೇವಾ ಸಮಸ್ಯೆಗಳು ಸರಾಸರಿ 1% ಇರಬೇಕು

ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳನ್ನು ಹೇಗೆ ಹುಡುಕುವುದು

ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳು ಪ್ರಪಂಚದಾದ್ಯಂತ ಲಭ್ಯವಿವೆ ಮತ್ತು Airbnb ಯಲ್ಲಿ ಅವುಗಳನ್ನು ಹುಡುಕುವುದು ಸರಳವಾಗಿದೆ.

ಗೆಸ್ಟ್‌ಗಳ ಅಚ್ಚುಮೆಚ್ಚಿನ ಲಿಸ್ಟಿಂಗ್‍‍ಗಳು ಹುಡುಕಾಟ ಫಲಿತಾಂಶಗಳಲ್ಲಿ ಮತ್ತು ಲಿಸ್ಟಿಂಗ್ ಪುಟದಲ್ಲಿ ಒಂದು ಬ್ಯಾಡ್ಜ್ ಅನ್ನು ಹೊಂದಿರುತ್ತವೆ. ಪ್ರಯಾಣಿಕರಿಗೆ ನಿರ್ದಿಷ್ಟವಾಗಿ ಗೆಸ್ಟ್ ಅಚ್ಚುಮೆಚ್ಚಿನವುಗಳನ್ನು ಹುಡುಕಲು ಅನುವು ಮಾಡಿಕೊಡುವ ಒಂದು ಹೊಸ ಫಿಲ್ಟರ್ ಕೂಡ ಇದೆ. ಅರ್ಹತೆ ಪಡೆದರೆ ಒಬ್ಬ ಹೋಸ್ಟ್ ಲಿಸ್ಟಿಂಗ್‍‍ನಲ್ಲಿ ಗೆಸ್ಟ್‌ಗಳ ಅಚ್ಚುಮೆಚ್ಚಿನ ಬ್ಯಾಡ್ಜ್ ಅನ್ನು ಕಂಡುಬರುತ್ತದೆ.

ಗೆಸ್ಟ್ ‌ ಅಚ್ಚುಮೆಚ್ಚಿನವುಗಳು ಮತ್ತು ಸೂಪರ್‌ಹೋಸ್ಟ್‌ಗಳು

ಸುಮಾರು ಮೂರನೇ ಎರಡರಷ್ಟು ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳನ್ನು ಸೂಪರ್‌ಹೋಸ್ಟ್‌ಗಳು ಹೋಸ್ಟ್ ಮಾಡಿರುತ್ತಿದ್ದು, ಅವರು ತಮ್ಮ ಅತ್ಯುತ್ತಮ ಆತಿಥ್ಯಕ್ಕಾಗಿ ಗುರುತಿಸಲ್ಪಟ್ಟಿರುತ್ತಾರೆ.

Airbnb ಯ ಸೂಪರ್ ‌ ಹೋಸ್ಟ್ ಪ್ರೋಗ್ರಾಂ ಬದಲಾಗುತ್ತಿಲ್ಲ. ಸೂಪರ್ ‌ ಹೋಸ್ಟ್ ಮಾನದಂಡಗಳು ಹಾಗೇ ಇರುತ್ತವೆ ಮತ್ತು ನಾವು ಪ್ರತೀ ತ್ರೈಮಾಸಿಕದಲ್ಲಿ ಸೂಪರ್ ‌ ಹೋಸ್ಟ್ ಕಾರ್ಯಕ್ಷಮತೆಯನ್ನು ಪರಿಶೀಲಿಸುವುದನ್ನು ಮುಂದುವರಿಸುತ್ತೇವೆ.

ನೀವು ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳಲ್ಲಿ ಸೇರಿಸಲಾದ ಲಿಸ್ಟಿಂಗ್ ಅನ್ನು ಹೊಂದಿರುವ ಸೂಪರ್‌ಹೋಸ್ಟ್ ಆಗಿದ್ದರೆ, ಎರಡನ್ನೂ ನಿಮ್ಮ ಲಿಸ್ಟಿಂಗ್ ಪುಟದಲ್ಲಿ ಹೈಲೈಟ್ ಮಾಡಲಾಗುತ್ತದೆ ಮತ್ತು ನಿಮ್ಮ ಲಿಸ್ಟಿಂಗ್ ಹುಡುಕಾಟ ಫಲಿತಾಂಶಗಳಲ್ಲಿ ಗೆಸ್ಟ್‌ಗಳ ಅಚ್ಚುಮೆಚ್ಚಿನ ಬ್ಯಾಡ್ಜ್ ಅನ್ನು ಹೊಂದಿರುತ್ತದೆ. ನೀವು ಇನ್ನೂ ಗೆಸ್ಟ್ ‌ ಗಳ ಅಚ್ಚುಮೆಚ್ಚಿನದ್ದೆಂದು ಅರ್ಹತೆ ಪಡೆಯದ ಲಿಸ್ಟಿಂಗ್ ‌ ಹೊಂದಿರುವ ಸೂಪರ್‌ಹೋಸ್ಟ್ ಆಗಿದ್ದರೆ, ನಿಮ್ಮ ಲಿಸ್ಟಿಂಗ್ ಪುಟದಲ್ಲಿ ಮತ್ತು ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮನ್ನು ಈಗಲೂ ಸೂಪರ್‌ಹೋಸ್ಟ್ ಬ್ಯಾಡ್ಜ್‌ನೊಂದಿಗೆ ಗುರುತಿಸಲಾಗುತ್ತದೆ.

ಗೆಸ್ಟ್‌ಗಳ ಅಚ್ಚುಮೆಚ್ಚಿನ ಬ್ಯಾಡ್ಜ್‌ಗೆ ಅರ್ಹತೆಯನ್ನು ನಿರ್ಧರಿಸುವಾಗ ನಿಮ್ಮ ಪ್ರತಿಯೊಂದು ಲಿಸ್ಟಿಂಗ್‍‍ಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ.

ಗೆಸ್ಟ್‌ಗಳ ಅಚ್ಚುಮೆಚ್ಚಿನವುಗಳು, ಹೊಸ ಲಿಸ್ಟಿಂಗ್‍‍ಗಳ ಟ್ಯಾಬ್ ಮತ್ತು ಹೋಸ್ಟ್‌ಗಳಿಗಾಗಿ ಇನ್ನೂ ಹೆಚ್ಚಿನ ನವೀಕರಣಗಳು Airbnb 2023 ರ ಚಳಿಗಾಲದ ಬಿಡುಗಡೆಯ ಭಾಗವಾಗಿವೆ. ನೀವು ಮುಂಚಿತ ಪ್ರವೇಶವನ್ನು ಆಯ್ಕೆ ಮಾಡಿಕೊಂಡಾಗ ಇಂದೇ ಹೊಸ ವೈಶಿಷ್ಟ್ಯಗಳನ್ನು ಬಳಸಲು ಪ್ರಾರಂಭಿಸಿ.

Airbnb
ನವೆಂ 8, 2023
ಇದು ಸಹಾಯಕವಾಗಿದೆಯೇ?

ಇನ್ನಷ್ಟು ವಿಷಯಗಳನ್ನು ಅನ್ವೇಷಿಸಿ